Monday, March 2, 2026
Home Blog Page 4

ತೋರಣಗಲ್ಲು 1ನೇ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಇಒ ಮಡಗಿನ ಬಸಪ್ಪ ಚಾಲನೆ

0

ಸಂಡೂರು ತಾಲ್ಲೂಕಿನ ತೋರಣಗಲ್ಲು ಪಟ್ಟಣದ 1ನೇ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ (ಇಒ) ಮಡಗಿನ ಬಸಪ್ಪ ಅವರು ಅಧಿಕೃತವಾಗಿ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇಒ ಮಡಗಿನ ಬಸಪ್ಪ ಅವರು, ಪಲ್ಸ್ ಪೋಲಿಯೋ ಅಭಿಯಾನವು ಮಕ್ಕಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೂ ತಪ್ಪದೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಈ ಮಾರಕ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಪೋಷಕರು ಯಾವುದೇ ತಪ್ಪು ಕಲ್ಪನೆಗಳಿಗೆ ಒಳಗಾಗದೇ, ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು. ಒಬ್ಬ ಮಗುವೂ ಲಸಿಕೆಯಿಂದ ವಂಚಿತವಾಗಬಾರದು ಎಂಬುದೇ ಈ ಕಾರ್ಯಕ್ರಮದ ಆಶಯವಾಗಿದೆ ಎಂದು ಹೇಳಿದ ಅವರು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮನ್ವಯದಿಂದ ಈ ಅಭಿಯಾನ ಯಶಸ್ವಿಯಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಡಿಪಿಓ ನಾಗರಾಜ್ ಅವರು ಮಾತನಾಡಿ, ಪಲ್ಸ್ ಪೋಲಿಯೋ ಕಾರ್ಯಕ್ರಮವು ಮಕ್ಕಳ ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ ಎಂದರು. ಗ್ರಾಮ ಮಟ್ಟದಲ್ಲಿ ಮನೆಮನೆಗೆ ತೆರಳಿ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ.100ರಷ್ಟು ಗುರಿ ಸಾಧಿಸಲು ಎಲ್ಲಾ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಹೇಳಿದರು.

ವೈದ್ಯರಾದ ಡಾ. ಗೋಪಾಲ್ ರಾವ್ ಅವರು ಪೋಲಿಯೋ ರೋಗದ ಅಪಾಯ, ಲಕ್ಷಣಗಳು ಹಾಗೂ ಲಸಿಕೆಯ ಮಹತ್ವವನ್ನು ವಿವರಿಸಿದರು. ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ತಿಳಿಸಿ, ಸಾರ್ವಜನಿಕರಲ್ಲಿ ಇರುವ ಆತಂಕ ನಿವಾರಣೆ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ನಾಗರತ್ನ, ವೈ ಕುಮಾರ್, ಮಾಬುಸಾಬ್ ಹಾಗೂ ಅಂಗನವಾಡಿ ಸಿಬ್ಬಂದಿಗಳಾದ ಸ್ವಾತಿ, ಸುಮ,ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯ ಯಾಕೂಬ್ ಉಪಸ್ಥಿತರಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಅಂತಿಮವಾಗಿ, ಸಂಡೂರು ತಾಲ್ಲೂಕಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಲಾಯಿತು.

ಸೊಂಟಕ್ಕೆ ಕಟ್ಟುವ ಉಡುದಾರದ ಮಹತ್ವ ಒಮ್ಮೆ ತಿಳಿಯೋಣ ಬನ್ನಿ

0

ಹಿಂದಿನ ಕಾಲದಲ್ಲಿ ಮಕ್ಕಳು ಜನಿಸಿದ ಮೂರು ದಿನಗಳ ನಂತರ ಸೊಂಟಕ್ಕೆ, ಕೈಗೆ, ಕಾಲಿಗೆ ಕಪ್ಪು ದಾರ ಕಟ್ಟುತ್ತಿದ್ದರು.

ಹೆಣ್ಣು ಮಗುವಾಗಲೀ, ಗಂಡು ಮಗುವಾಗಲಿ ಮಕ್ಕಳು ಬೆಳೆದಂತೆಲ್ಲಾ ಕೈಗೆ ಬೆಳ್ಳಿ ಕಪ್ಪ, ಕಾಲಿಗೆ ಬೆಳ್ಳಿ ಚೈನು, ಸೊಂಟಕ್ಕೆ ಉಡುದಾರ ಕಟ್ಟುತ್ತಿದ್ದರು.

ದೊಡ್ಡವರಾದ ಮೇಲೆ ಗಂಡು ಮಕ್ಕಳಿಗೆ ಎಡಗೈಗೆ ಗಡಿಯಾರ ಮತ್ತು ಬಲಗೈಗೆ ಬೆಳ್ಳಿ ಕಪ್ಪ ಮತ್ತು ಸೊಂಟಕ್ಕೆ ಕರಿದಾರ ಬಂತು.

ಹೆಣ್ಣು ಮಕ್ಕಳಿಗೆ ಕೈಗೆ ಗಾಜಿನ ಬಳೆ, ಕಾಲಿಗೆ ಬೆಳ್ಳಿ ಚೈನು ಮತ್ತು ಸೊಂಟಕ್ಕೆ ಬೆಳ್ಳಿ ಗೆಜ್ಜೆ ಡಾಬು ಬಂತು. ಡಾಬು ಹೆಂಗಸರ ಸೊಂಟಕ್ಕೆ ಆಧಾರ ಒದಗಿಸುತ್ತದೆ ಮತ್ತು ರಕ್ತ ಸಂಚಾರವನ್ನು ನಿಯಂತ್ರಣಕ್ಕೆ ತರುತ್ತದೆ. ಸೊಂಟಕ್ಕೆ ಡಾಬು ಹಾಕಿರುವ ಹೆಂಗಸರಿಗೆ ಯಾವುದೇ ಕಾರಣಕ್ಕೂ ಸೊಂಟ ನೋವು ಬರುವುದಿಲ್ಲ.

ಹಿಂದಿನವರು ಏನೇ ಸಂಪ್ರದಾಯ ಅನುಕರಣೆ ಮಾಡಿದರೂ ಅದು ವೈಜ್ಞಾನಿಕವಾಗಿ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುತ್ತಿತ್ತು.

ಗಂಡು ಮಕ್ಕಳಿಗೆ ದೊಡ್ಡವರಾದ ಮೇಲೂ ಉಡುದಾರ ಕಟ್ಟುಲು ಕಾರಣವೇನು ?
ಹೆಣ್ಣಾಗಲಿ, ಗಂಡಾಗಲಿ ಕುಳಿತುಕೊಳ್ಳಲು, ನಿಂತುಕೊಳ್ಳಲು , ನಡೆದಾಡಲು, ಕಷ್ಟಕರವಾದ ಕೆಲಸ ಮಾಡಲು, ಭಾರವಾದ ವಸ್ತುಗಳನ್ನು ಎತ್ತಲು, ಅದರಲ್ಲೂ
ಮುಖ್ಯವಾಗಿ ವಂಶಾಭಿವೃದ್ಧಿ ಮಾಡಲು ಸೊಂಟವೇ ಪ್ರಮುಖವಾದ ಅಂಗ. ಒಂದು ವೇಳೆ ಸೊಂಟ ಬಿದ್ದು ಹೋದರೆ ಈ ಮೇಲಿನ ಯಾವುದೇ ಕಾರ್ಯವನ್ನು ನಿರ್ವಹಿಸಲು ಸಾಧ್ಯವೇ ಇಲ್ಲ.

ಒಂದು ಗಿಡ ನೇರವಾಗಿ ಬೆಳೆಯಲು ಒಂದು ದಾರವನ್ನೋ ಅಥವಾ ಹಗ್ಗವನ್ನೋ ಕಟ್ಟಿ ಬೆಳೆಸುತ್ತಾರೆ.

ಅದೇ ರೀತಿ ಮನುಷ್ಯನೂ ಕೂಡ ಗಟ್ಟಿಯಾಗಿ ದಷ್ಟ ಪುಷ್ಟವಾಗಿ ಬೆಳೆಯಲು ಉಡುದಾರ ಸಹಕಾರಿಯಾಗುತ್ತದೆ.
ಮನುಷ್ಯನ ದೇಹದ ರಕ್ತ ಚಲನೆಯನ್ನು ನಿಯಂತ್ರಿಸುತ್ತದೆ.

ಇದೇ ರೀತಿ ಮಹಿಳೆಯರಿಗೂ ಕೂಡ ಬೆಳ್ಳಿಯ ಗೆಜ್ಜೆ ಡಾಬು ಅವರ ಸೊಂಟಕ್ಕೆ ಗಟ್ಟಿತನವನ್ನು ನೀಡುತ್ತದೆ.

ಉಡುದಾರವನ್ನು ವರ್ಷಕೊಮ್ಮೆ ಬದಲಾಯಿಸಬೇಕು ಒಮ್ಮೆ ಉಡುದಾರವನ್ನು ಕಟ್ಟಿಕೊಂಡರೆ ಅದಾಗಿ ಅದು ಕಿತ್ತು ಹೋಗುವವರೆಗೂ ನಾವು ಅದನ್ನು ಬದಲಾಯಿಸುವುದಿಲ್ಲ.
ಆದರೆ ಅದನ್ನು ವರ್ಷಕೊಮ್ಮೆ ಬದಲಾಯಿಸಬೇಕು ಎಂದು ತಿಳಿದವರು ಹೇಳುತ್ತಾರೆ.

ಯಾವಾಗ ಬದಲಿಸಬೇಕು ?
ಉಡುದಾರವನ್ನು ಪ್ರತಿ ವರ್ಷ ಜನವರಿ ತಿಂಗಳ 14 ನೇ ತಾರೀಕಿನಂದು ಉತ್ತರಾಯಣದಲ್ಲಿ ಅಥವಾ ಜುಲೈ ತಿಂಗಳ 16 ನೇ ತಾರೀಕಿನಂದು ದಕ್ಷಿಣಾಯನದಲ್ಲಿ ಬದಲಾಯಿಸಬೇಕೆಂದು ಹೇಳಲಾಗಿದೆ.

ಬದಲಿಸಿದ ಹಳೆಯ ಉಡುದಾರವನ್ನು ಏನು ಮಾಡಬೇಕು ?
ಹಳೆಯ ಉಡುದಾರವನ್ನು ಹಾಗೇ ಸುಮ್ಮನೆ ಬಿಸಾಕಬಾರದು.
ಅದನ್ನು ತೆಗೆದುಕೊಂಡು ಒಮ್ಮೆ ಮೂಸಿ ನೋಡಿ, ಎರಡೂ ಕೈಗಳಿಂದ ನಮ್ಮ ಕಣ್ಣುಗಳಿಗೆ ಒತ್ತಿಕೊಂಡು ನಮಸ್ಕಾರ ಮಾಡಿ, ಇಷ್ಟು ದಿನ ನನ್ನ ಸೊಂಟಕ್ಕೆ ಚೈತನ್ಯ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ಅದನ್ನು ಒಂದು ಹಸಿರು ಗಿಡಕ್ಕೆ ಕಟ್ಟಬೇಕು.

ಕಪ್ಪು ಉಡುದಾರವನ್ನೇ ಏಕೆ ಕಟ್ಟಬೇಕು ?
ನವ ಜಾತ ಶಿಶುಗಳಿಗೆ ಕೈಗೆ, ಕಾಲಿಗೆ ಮತ್ತು ಸೊಂಟಕ್ಕೆ ಕಪ್ಪು ದಾರ ಕಟ್ಟುತ್ತಾರೆ, ಮತ್ತು ಹಣೆಗೆ ಕಪ್ಪು ಮಸಿ ಬಳಿಯುತ್ತಾರೆ.
ಏಕೆಂದರೆ ಕಪ್ಪು ಬಣ್ಣವು ಮನುಷ್ಯನ ಕಾಕ ದೃಷ್ಟಿಯನ್ನು ಅಂದರೆ ಕೆಟ್ಟ ದೃಷ್ಟಿಯನ್ನು
ಹೋಗಲಾಡಿಸುತ್ತದೆ. ಅಂದರೆ ದೃಷ್ಟಿ ತಾಕುವುದನ್ನು ತಡೆಗಟ್ಟುತ್ತದೆ. ಈ ಕಾರಣಕ್ಕೆ ಕಪ್ಪು ದಾರವನ್ನು ಕಟ್ಟುತ್ತಾರೆ.
ಇದು ಸಂಗ್ರಹಿಸಿದ ಮಾಹಿತಿ.

ಸತತ ಏಳು ವರ್ಷಗಳ ನಂತರ ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ

0

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು ಪಟ್ಟಣ ಪಂಚಾಯಿತಿಗೆ 2018ರಲ್ಲಿ ಚುನಾವಣೆ ನಡೆದು, ಆಯ್ಕೆಯಾದ ಸದಸ್ಯರುಗಳು ಆರಂಭದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಹೋಗಿದ್ದರು. ನಂತರ ಘನ ನ್ಯಾಯಾಲಯವು ಅಧ್ಯಕ್ಷ ಉಪಾಧ್ಯಕ್ಷರ ಹಸಿರು ನಿಶಾನೆ ತೋರಿಸಿದ ಹಿನ್ನೆಲೆಯಲ್ಲಿ ದಿನಾಂಕ 06-11-2020 ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಅಧ್ಯಕ್ಷರಾಗಿ ಭಾರತೀ ಸುಧಾಕರ್ ಪಾಟೀಲ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಶಫೀ ಆಯ್ಕೆಯಾಗಿದ್ದರು.

ಎರಡೂವರೆ ವರ್ಷಗಳ ನಂತರ ದಿನಾಂಕ 18-05-2023 ರಿಂದ 30-08-2024 ರವರೆಗೆ ಮಧ್ಯದ ಅವಧಿಯಲ್ಲಿ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ದಿನಾಂಕ 30-08-2024 ರಿಂದ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಪಕ್ಷೇತರರಾಗಿ ಗೆದ್ದುಬಂದ ಬಿ.ರೇಖಾ ಅಧ್ಯಕ್ಷರಾಗಿ, ಸಿದ್ದಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದಿನಾಂಕ 06-11-2025ಕ್ಕೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು, ಅಲ್ಲಿಂದ ಮತ್ತೇ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಘನ ನ್ಯಾಯಾಲಯವು ಈ ಪ್ರಕರಣವನ್ನು ಸುದೀರ್ಘವಾಗಿ ಆಲಿಸಿ, ದಿನಾಂಕ 12-12-2025 ರಂದು ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ.

ಆಡಳಿತಾಧಿಕಾರಿಗಳಾಗಿ ಕೊಟ್ಟೂರು ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಕೆ. ಅಮರೇಶ್, ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಸದಸ್ಯರ ಅಧಿಕಾರಾವಧಿ 5 ವರ್ಷಗಳಿಗಷ್ಟೇ ಸೀಮಿತವಿದ್ದರೂ, ಚುನಾವಣೆ ನಡೆದು ಏಳು ವರ್ಷಗಳು ಕಳೆದು ಎಂಟು ವರ್ಷಗಳ ಹೊಸ್ತಿಲಿನಲ್ಲಿದ್ದರೂ ಇನ್ನೂ ಕೊಟ್ಟೂರಿಗೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗದೇ ಇರುವುದು ಸೋಜಿಗದ ವಿಷಯವಾಗಿದೆ.

ಆಧಾರದ ಎಲ್ಲಾ ಸೌಲಭ್ಯಗಳು ಅಂಚೆ ಕಛೇರಿಯಲ್ಲಿ ಲಭ್ಯ

0

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ತಾಲೂಕಿನ ಅಂಚೆ ಕಛೇರಿಯು ಗ್ರಾಹಕರಿಗೆ ನೂರಕ್ಕೂ ಹೆಚ್ಚು ಸೌಲಭ್ಯಗಳನ್ನು ಕೊಡುತ್ತಿದೆ, ಕಳೆದ ಒಂದು ದಶಕದಿಂದಲೂ ಆಧಾರದ ಎಲ್ಲಾ ಸೌಲಭ್ಯಗಳನ್ನು ಅಂಚೆ ಕಛೇರಿಯಲ್ಲಿ ಕೊಡಲಾಗುತ್ತದೆ, ಈ ನಿಟ್ಟಿನಲ್ಲಿ ಕೊಟ್ಟೂರಿನ ನೂತನ ಅಂಚೆ ಕಛೇರಿಯು ಕೊಟ್ಟೂರು ಹಾಗೂ ಸುತ್ತಮುತ್ತಲಿನ ಎಲ್ಲಾ ನಾಗರಿಕರಿಗೆ ಹೊಸ ಆಧಾರ್ ಕಾರ್ಡ್ ಮಾಡಿಸುವುದು, ಆಧಾರ್ ಕಾರ್ಡ್ ನಲ್ಲಿ ಫೋನ್ ನಂಬರ್ ತಿದ್ದುಪಡಿ ಮಾಡುವುದು, ಹೆಸರು ಮತ್ತು ವಿಳಾಸಗಳನ್ನು ತಿದ್ದುಪಡಿ ಮಾಡುವುದು, ಆಧಾರ್ ಬಯೋಮೆಟ್ರಿಕ್ ಮಾಡುವುದು, ಆಧಾರ್ ಕಾರ್ಡ್ ಪ್ರಿಂಟ್ ತೆಗೆಯುವುದು ಈ ಎಲ್ಲಾ ಸೌಲಭ್ಯಗಳು ಕೊಟ್ಟೂರಿನ ನೂತನ ಅಂಚೆ ಕಛೇರಿಯಲ್ಲಿ ಲಭ್ಯವಿವೆ, ಆಧಾರ್ ಕಾರ್ಡ್ ನಾಗರೀಕರ ಹಲವಾರು ಕೆಲಸ ಕಾರ್ಯಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ, ಈ ನಿಟ್ಟಿನಲ್ಲಿ ನಾಗರಿಕರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಅವಶ್ಯಕತೆ ತುಂಬಾ ಇದೆ, ಈ ಸೌಲಭ್ಯಗಳನ್ನು ನಾಗರಿಕರು ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಪಿ ಚಿದಾನಂದ ಅವರು ಪತ್ರಿಕೆಗೆ ತಿಳಿಸಿದರು,

■ಅಂಚೆ ಕಛೇರಿಯ ಹಳೆ ಕಟ್ಟಡದಲ್ಲಿ ನಾಗರಿಕರು ಬಂದು ನಿಲ್ಲುವ ಜಾಗದ ಅನಾನುಕೂಲ ಬಾಳ ಆಗಿದ್ದರಿಂದ ಆಧಾರ್ ಮಾಡಲು ತೊಂದರೆಯಾಗುತ್ತಿತ್ತು, ನೂತನ ಅಂಚೆ ಕಚೇರಿಯಲ್ಲಿ ಆಧಾರಿಗೋಸ್ಕರ ಬೇರೆ ವಿಭಾಗವನ್ನೇ ಮಾಡಿದ್ದಾರೆ.
ಕೊಟ್ಟೂರು ತಾಲೂಕಿನ ಎಲ್ಲಾ ನಾಗರಿಕರಿಗೂ ಈ ಸೌಲಭ್ಯ ಸಿಗಬೇಕು
——-ಅಂಚೆ ಕೊಟ್ರೇಶ್,

ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಹದಿನಾರನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ

0

ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು : ಇಂದು ಕಾಲೇಜ್ ಕೊಟ್ಟೂರಿನಲ್ಲಿ ಗವಾಯಿಗಳವರ ಹದಿನಾರನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು ಉಭಯ ಗಾನ ವಿಶಾರದರು, ತ್ರಿಭಾಷಾ ಕವಿವರ್ಯ, ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರು ಪರಮಪೂಜ್ಯ ಡಾ || ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ದಿನಾಂಕ 12-12-2024 ರ ಶುಕ್ರವಾರದಂದು ಸಂಜೆ 6 :00 ಕ್ಕೆ ಸರಿಯಾಗಿ ಕೊಟ್ಟೂರಿನ ಇಂದು ಕಾಲೇಜ್ ನಲ್ಲಿ ಆಯೋಜನೆ ಮಾಡಲಾಗಿದೆ.

ಅಂದು ಸಂಜೆ ಸೋನಿ ಹಿಂದಿ ವಾಹಿನಿಯ Indion Idol ಕಾರ್ಯಕ್ರಮ ಖ್ಯಾತಿಯ ಹಾಗೂ Zee ಕನ್ನಡ ಸರಿಗಮಪ ಕಾರ್ಯಕ್ರಮ ಖ್ಯಾತಿಯ ಗಾಯಕಿ ಸರಿಗಮಪ ಸೀಸನ್ 21 ರ ವಿನ್ನರ್ ಶಿವಾನಿ ಶಿವದಾಸ್ ತಂಡದವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ ಆತ್ಮೀಯ ಕಲಾಭಿಮಾನಿಗಳು ಕಲಾ ಪ್ರೋತ್ಸಾಹಕರು ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಮತ್ತು ಸುಧಾಕರ ಪಾಟೀಲ್ ಅಧ್ಯಕ್ಷರು ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿ ಕೊಟ್ಟೂರು ವತಿಯಿಂದ ಸರ್ವರಿಗೂ ಪ್ರೀತಿಪೂರ್ವಕ ಸುಸ್ವಾಗತ ಪತ್ರಿಕೆ ಮೂಲಕ ತಿಳಿಸಲಾಯಿತು.

ಡಿ.07 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ; ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿ ಸುತ್ತ-ಮುತ್ತ ನಿರ್ಬಂಧ

0

ಬಳ್ಳಾರಿ,ಡಿ.05: ನಗರದ 20 ಪರೀಕ್ಷಾ ಕೇಂದ್ರಗಳಲ್ಲಿ ಡಿ.07 ರಂದು ಬೆಳಿಗ್ಗೆ 09.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 02 ರಿಂದ ಸಂಜೆ 04.30 ರ ವರೆಗೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿರ್ಭಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಸುತ್ತಲೂ ಇರುವ ಜೆರಾಕ್ಸ್ ಸೆಂಟರ್ ಮತ್ತು ಇಂಟರ್‌ನೆಟ್ ಸೆಂಟರ್‌ಗಳನ್ನು ಕಾರ್ಯನಿರ್ವಹಿಸದಂತೆ ಪ್ರತಿಬಂಧಿಸಲು ಆದೇಶಿಸಿದ್ದು, ಆ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಈ ಆದೇಶವು ಪರೀಕ್ಷೆಯ ಮೇಲ್ವಿಚಾರಣೆ ಕಾರ್ಯನಿರ್ವಹಿಸುವ ಸಿಬ್ಬಂದಿಯವರಿಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಕೊಟ್ಟೂರಿನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ

0

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: 26.11.2025 ಬುಧವಾರ ಕೊಟ್ಟೂರಿನಲ್ಲಿ ಇಂದು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶ್ರೀ ಮರಿಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಗೆ ಚಾಲನೆ ನೀಡಲಾಯಿತು. ಜಿಲ್ಲಾ ಡಿಎಸ್ಎಸ್ ಮುಖಂಡರಾದ ಬದ್ದಿ ಮರಿಸ್ವಾಮಿ ಇವರು ಇಂದು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಬಂದು ಸಾಧನೆ ಮಾಡುತ್ತಿದ್ದಾರೆ ಇದಕ್ಕೆ ಕಾರಣ ಭಾರತದ ಸಂವಿದಾನ ಎಂದರು. ಇನ್ನೋರ್ವ ಡಿಎಸ್ಎಸ್ ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್ ಇವರು ಭಾರತದಲ್ಲಿ ಅನೇಕ ಭಾಷೆ, ಜನ, ಧರ್ಮ ಇದ್ದರೂ ಎಲ್ಲರೂ ಅನ್ಯೋನ್ಯತೆಯಿಂದ ಬದುಕುತ್ತಿರುವುದು ಭದ್ರಬುನಾದಿಯಾಗಿರುವ ನಮ್ಮ ಸಂವಿಧಾನವಾಗಿದೆ. ಬಾಬಾ ಸಾಹೇಬರ ನಿರಂತರ ಅಧ್ಯಯನ ಹಾಗೂ ಪರಿಶ್ರಮದಿಂದ ರಚನೆಯಾಗಿರುವ ಸಂವಿಧಾನವನ್ನು ನಾವೆಲ್ಲಾ ರಕ್ಷಿಸಿಕೊಂಡುಹೋಗಬೇಕಿದೆ ಎಂದರು. ಡಿಎಸ್ಎಸ್ ಮುಖಂಡರಾದ ಹನುಮಂತಪ್ಪ ವಕೀಲರು, ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಬಿ ದುರುಗಪ್ಪ ಸಂವಿಧಾನ ಆಶಯ ಕುರಿತು ಮಾತನಾಡಿದರು.

ತಹಶೀಲ್ದಾರರಾದ ಅಮರೇಶ್ ಜಿ ಕೆ ಇವರು ಭಾರತದ ಸಂವಿಧಾನವನ್ನು 1949 ನವಂಬರ್ ರಂದು ಅಂಗೀಕರಿಸಿಕೊಂಡು ಜಾರಿಗೆ ತಂದಿದ್ದು, ಅದರ ನೆನಪಿಗಾಗಿ ಪ್ರತಿವರ್ಷ ನವಂಬರ್-26 ರಂದು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯಗಳನ್ನು ಪ್ರತಿಯೊಬ್ಬ ಭಾರತೀಯರು ರಕ್ಷಿಸಬೇಕಿದೆ ಎನ್ನುತ್ತಾ, ಭಾರತ ಸಂವಿಧಾನ ಪ್ರಸ್ತಾವನೆಯನ್ನು ಓದಿಸಿದರು. ಕಾರ್ಯಕ್ರಮದಲ್ಲಿ ತಾ ಪಂ ಕಾರ್ಯನಿರ್ವಹಕ ಅಧಿಕಾರಿಗಳಾದ ಡಾ.ಆನಂದ್ ಕುಮಾರ್, ಪ ಪಂ ಮುಖ್ಯಾಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆಯ ಇಸಿಒ ಎಸ್ ನಿಂಗಪ್ಪ, ರವಿಕುಮಾರ್, ಶಶಿಧರ ಮೈದೂರು ದೈಹಿಕ ಶಿಕ್ಷಣ ಪರೀವೀಕ್ಷಕರು, ಸರ್ಕಾರಿ ನೌರರ ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆ, ಸಿಆರ್ಪಿ ಅಜೇಯ , ಅಣಿಜಿ ಸಿದ್ದಲಿಂಗಪ್ಪ, ಉಪನ್ಯಾಸಕರಾದ ಅಂಜಿನಪ್ಪ ಹಾಗೂ ಇತರೆ ಶಾಲಾ ಶಿಕ್ಷಕರು ಇದ್ದರು.
ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು. ಸಂವಿಧಾನ ಕುರಿತು ಭಾಷಣ ಮತ್ತು ಪ್ರಬಂಧ ಸ್ಪರ್ಧೆಯನ್ನು ನಡೆಸಿದ್ದು ಪ್ರಥಮ ಸ್ಥಾನ ಪಡೆದ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಂತರ ಪಟ್ಟಣದ ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಎನ್ಸಿಸಿ, ಸ್ಕೌಟ್ಸ್ ತಂಡ ಸೇರಿ ಸುಮಾರು 500 ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡಿದ್ದು, ಸಂವಿಧಾನದ ಆಶಯ ಮತ್ತು ರಕ್ಷಣೆಯ ಕುರಿತು ವಿವಿಧ ಶ್ಲೋಗನ್ಗಳ ಬಂಟಿಂಗ್ಸ್ ಹಾಗೂ ರಾಷ್ಟ್ರಧ್ವಜ, ಸಂವಿಧಾನ ಪುಸ್ಕಕಗಳನ್ನು ಹಿಡಿದ ಮಕ್ಕಳು ಘೋಷಣೆಯನ್ನು ಕೂಗುತ್ತಾ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಎಪಿಎಂಸಿ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣದ ಸರ್ಕಲ್, ಗಾಂಧಿ ಸರ್ಕಲ್ ಮೂಲಕ ಸಾಗಿ ಉಜ್ಜಿನಿ ಸರ್ಕಲ್ಗೆ ಸಮಾರೋಪಗೊಂಡಿತು.

ನೂತನ ಎಸ್, ಡಿ, ಎಮ್,ಸಿ ಅಧ್ಯಕ್ಷರಾಗಿ ಶ್ರೀ ಎನ್. ಜಿ. ಚನ್ನಬಸನಗೌಡ್ರು ಆಯ್ಕೆ.

0

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ತಾಲೂಕಿನ
ಸರಕಾರಿ ಪ್ರೌಢಶಾಲೆ ನಿಂಬಳಗೆರೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶ್ರೀ ಚನ್ನಬಸವನ ಗೌಡ್ರು, ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಬಸಮ್ಮ, ಇವರು ಆಯ್ಕೆಯಾಗಿದ್ದಾರೆ.

ಶ್ರೀ ಎಂ ಜಿ ಪ್ರಕಾಶ್ ಗೌಡ, ಇವರ ಅವಧಿ ಮುಗಿದಿದ್ದರಿಂದ ಹೊಸದಾಗಿ ಎಸ್ ಡಿ, ಎಮ್, ಸಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

ಸತತವಾಗಿ ಮೂರು ಬಾರಿ ಪೋಷಕರ ಸಭೆಯನ್ನು ಕರೆಯಲಾಗಿ ಇಂದು ಸರ್ವಾನು ಮತದಿಂದ 9 ನಿರ್ದೇಶಕರ ಆಯ್ಕೆಗೊಂಡು ನಂತರ ಅಧ್ಯಕ್ಷರಾಗಿ ಶ್ರೀ ಎನ್. ಜಿ. ಚನ್ನಬಸನಗೌಡ್ರು, ಇವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಜಿ.ಫಕೀರಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ್, ಮಾಜಿ ಎಸ್, ಡಿ, ಎಮ್, ಸಿ ಅಧ್ಯಕ್ಷರಾದ ಎಂ. ಜಿ. ಪ್ರಕಾಶ್ ಗೌಡ, ಮಂಗಾಪುರದ. ನಾಗೇಂದ್ರ, ಸಹ ಶಿಕ್ಷಕರು ಪೋಷಕರು ಭಾಗಿಯಾಗಿದ್ದರು.

ಮಸಣ ಕಾರ್ಮಿಕರಿಗೆ ಮೂಲಭೂತ ಸೌಕರ್ಯ–ಭದ್ರತೆ ಒದಗಿಸಿ

0

ಸಂಡೂರು ಪಟ್ಟಣದಲ್ಲಿ ಸೋಮವಾರ ಮಹತ್ವದ ಪ್ರತಿಭಟನೆ ನಡೆದು ಗಮನ ಸೆಳೆಯಿತು. ಮಸಣ ಕಾರ್ಮಿಕರು ಹಾಗೂ ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಗಳು ಸಮೂಹವಾಗಿ ತಾಲೂಕು ಪಂಚಾಯಿತಿ ಕಾರ್ಯಾಲಯ (ತಾಪಂ) ಕಚೇರಿ ಎದುರು ಧರಣಿ ನಡೆಸಿ, ತಾಪಂ ಇಒ ಮಡಗಿನ ಬಸಪ್ಪ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಮಟ್ಟದಲ್ಲಿ ಮಸಣ ಭೂಮಿಗಳ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಮಸಣ ಕಾರ್ಮಿಕರ ಹಕ್ಕು-ಸ್ವಾಭಿಮಾನ ರಕ್ಷಣೆಗೆ ಓದಿದ ಬೇಡಿಕೆಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಧರಣಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಸಂಘದ ತಾಲೂಕು ಕಾರ್ಯದರ್ಶಿ ಎಚ್.ದುರುಗಮ್ಮ ಹಾಗೂ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಮಸಣಗಳ ಕಳಪೆ ಸ್ಥಿತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿ ಅವರು ಹೇಳಿದರು:

“ತಾಲೂಕಿನ ಬಹುತೇಕ ಗ್ರಾಮಗಳ ಮಸಣಗಳು ಸಂಪೂರ್ಣ ಅವ್ಯವಸ್ಥೆಯಾಗಿದೆ.
ಶವಗಳನ್ನು ತರಲು ಸರಿಯಾದ ದಾರಿ ಇಲ್ಲದಿರುವುದು ಕುಟುಂಬಗಳಿಗೆ ದೊಡ್ಡ ಸಂಕಷ್ಟವನ್ನು ಉಂಟುಮಾಡುತ್ತಿದೆ.”

“ಸ್ಮಶಾನ ಪ್ರದೇಶಗಳಲ್ಲಿ ಕಸಕಡ್ಡಿಯ ರಾಶಿ, ಜಾಗದ ಅಸವ್ಯವಸ್ಥೆ ಹಾಗೂ ನೀರು–ಬೆಳಕು ವ್ಯವಸ್ಥೆಯ ಕೊರತೆ ಇನ್ನೂ ಮುಂದುವರಿದಿದೆ.
ಮರಣೋತ್ತರ ವಿಧಿ ಪೂರ್ಣಗೊಳಿಸುವುದಕ್ಕೆ ಅಗತ್ಯವಾದ ಅತಿ ಮೂಲಭೂತ ಸೌಲಭ್ಯಗಳೂ ಇಲ್ಲ.”

“ಸ್ಮಶಾನ ಸುತ್ತ ಕಾಂಪೌಂಡ್ ತಡೆಗೋಡೆ,
ಒಳಗೆ ವಿಶ್ರಾಂತಿ ಕೊಠಡಿ, ಶೌಚಾಲಯ,
ಕುಡಿಯುವ ನೀರು, ಬೆಳಕಿನ ವ್ಯವಸ್ಥೆ
ತಕ್ಷಣ ಒದಗಿಸಬೇಕು.”

“ಮಸಣ ಕಾರ್ಮಿಕರು ಮರಣೋತ್ತರ ವಿಧಿಗಳನ್ನು ನೆರವೇರಿಸುವ ಮೂಲಕ ಸಮಾಜದ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊರುತ್ತಿದ್ದಾರೆ. ಆದರೆ ಇಂದಿಗೂ ಅವರಿಗೆ ಮೂಲಭೂತ ಜೀವನ–ಭದ್ರತೆ, ಗೌರವ, ಹಾಗೂ ಸರಿಯಾದ ಸೌಲಭ್ಯಗಳ ಕೊರತೆ ಇದೆ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕಣ್ಣು ತೆರೆಯಬೇಕು.” ಎಂದರು

ಕಾರ್ಯಕರ್ತರು ಮತ್ತಷ್ಟು ಬೇಡಿಕೆಗಳನ್ನು ಮಂಡಿಸಿದರು:

■ಶವಕ್ಕೆ ಕುಣಿ ತೆಗೆದು ಮುಚ್ಚುವ ಕಾರ್ಯಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೌರವಧನ ನಿಗದಿ ಮಾಡಬೇಕು.
■ಮಸಣ ಕಾರ್ಮಿಕರಿಗೆ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ನೀಡಬೇಕು.
■ಕೆಲಸ ಮಾಡುವಾಗ ರಕ್ಷಿಸಿಕೊಳ್ಳಲು ಗ್ಲವ್ಸ್, ಮಾಸ್ಕ್, ಬೂಟು, ಟಾರ್ಚ್ ಸೇರಿದಂತೆ ಸುರಕ್ಷತಾ ಸಾಮಗ್ರಿಗಳನ್ನು ಕಡ್ಡಾಯವಾಗಿ ಒದಗಿಸಬೇಕು.
■ತಲೆಮಾರುಗಳಿಂದ ಅರಣ್ಯ ಹಾಗೂ ಸರ್ಕಾರಿ ಭೂಮಿಗಳಲ್ಲಿ ಬೆಳೆ ಬೆಳೆಸಿ ಬದುಕುತ್ತಿರುವ ಮಸಣ ಕಾರ್ಮಿಕರಿಗೆ ಪಟ್ಟುಪತ್ರ (ಹಕ್ಕುಪತ್ರ) ನೀಡಬೇಕು ಎಂದರು

ಈ ಸಂಧರ್ಭದಲ್ಲಿ
ಮಾರಮ್ಮ (ತಾಲೂಕು ಅಧ್ಯಕ್ಷೆ),
ಹುಲಿಗೆಮ್ಮ, ಹುಲುಗಪ್ಪ, ತಾಯಪ್ಪ, ಲಕ್ಷ್ಮಣ, ಮರಿಯಪ್ಪ, ಹನುಮಂತಪ್ಪ,
ಪಕೀರಪ್ಪ, ಶಿವಮೂರ್ತಿ, ಗಂಗಪ್ಪ, ಅಂಜಿನಪ್ಪ, ನಾಗಪ್ಪ, ಕುಮಾರಸ್ವಾಮಿ, ಹುಲುಗಪ್ಪ, ಬಸವರಾಜ ಮುಂತಾದವರು.

ಪ್ರತಿಭಟನೆ ಶಾಂತಿಪೂರ್ಣವಾಗಿ ನಡೆದಿದ್ದು, ತಾಪಂಇಒ ಬಸಪ್ಪ ಅವರಿಗೆ ಸಮಗ್ರ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳ ಸ್ಪಂದನೆಗಾಗಿ ಕಾರ್ಮಿಕರು ಈಗ ಕಾತರದಿಂದ ಕಾಯುತ್ತಿದ್ದಾರೆ.

ಕೂಲ್ ಆಗಿರ್ರೀ ಡಿಕೆ ಅಂದ್ರಾ ಖರ್ಗೆ?

0

ಕಳೆದ ವಾರ ದಿಲ್ಲಿಗೆ ಹೋಗಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ.ಹೀಗೆ ಹೊರಟವರು ರಾಜ್ಯ ಕಾಂಗ್ರೆಸ್ ನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
‘ಸಾರ್,ಕರ್ನಾಟಕದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಎರಡೂವರೆ ವರ್ಷ ಕಳೆದಿದೆ.ಈಗ ಒಪ್ಪಂದದಂತೆ ನನಗೆ ಸಿಎಂ ಹುದ್ದೆ ಸಿಗಬೇಕು ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ.ಆದರೆ ಸಿದ್ದರಾಮಯ್ಯ ಅವರು ಒಪ್ಪಂದವೇ ಆಗಿಲ್ಲ ಅಂತ ಹೇಳುತ್ತಿದ್ದಾರೆ.ವಿಚಿತ್ರ ಎಂದರೆ ಒಪ್ಪಂದ ಆಗಿದೆಯೋ ಇಲ್ಲವೋ ಅಂತ ವರಿಷ್ಟರು ಕೂಡಾ ಬಾಯಿ ಬಿಡುತ್ತಿಲ್ಲ.
ಈಗ ಎಲ್ಲರ ಅನುಮಾನ ಎಂದರೆ, ಒಪ್ಪಂದವೇ ಅಗಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್ ಯಾಕೆ ಸಿಎಂ ಹುದ್ದೆ ಬಿಟ್ಟುಕೊಡಬೇಕು ಅಂತ ಪಟ್ಟು ಹಿಡಿಯುತ್ತಾರೆ?ಅದೇ ರೀತಿ ಒಪ್ಪಂದ ಆಗಿಲ್ಲ ಎಂದಾದರೆ ಹೈಕಮಾಂಡ್ ಯಾಕೆ ಸ್ಪಷ್ಟನೆ ಕೊಡುತ್ತಿಲ್ಲ?
ಹೀಗಾಗಿ ಈ ವಿಷಯದಲ್ಲಿ ವರಿಷ್ಟರು ಸ್ಪಷ್ಟವಾಗಿ ಮಾತನಾಡಬೇಕು.ಇಲ್ಲದಿದ್ದರೆ ಅಧಿಕಾರ ಹಂಚಿಕೆಯ ಗೊಂದಲದಲ್ಲಿ ಮುಳುಗಿ ನಾವೆಲ್ಲ ಪರದಾಡಬೇಕಾಗುತ್ತದೆ ಅಂತ ಚಲುವರಾಯಸ್ವಾಮಿ ಪ್ರಶ್ನಿಸಿದಾಗ ಖರ್ಗೆಯವರು ಸ್ವಲ್ಪ ಹೊತ್ತು ಮೌನವಾಗಿದ್ದರಂತೆ.
ಆನಂತರ ಮೆಲ್ಲಗೆ,ಆದರೆ ಖಡಕ್ಕಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು:’ನೋಡಿ ಚಲುವರಾಯಸ್ವಾಮಿ,ರಾಜಕಾರಣದಲ್ಲಿ ಏನು ನಡೆಯಿತು,ಏನು ನಡೆದಿಲ್ಲ ಎಂಬುದಕ್ಕಿಂತ ತುಂಬ ತಾಳ್ಮೆಯಿಂದ ಹೆಜ್ಜೆ ಇಡುವುದು ಮುಖ್ಯ.ಇವತ್ತು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು?ಅಂತ ಶಾಸಕರ ಗುಂಪು ಬಂದಿತ್ತಲ್ಲ?ಅದರಿಂದ ತುಂಬ ಪ್ರಯೋಜನವಿಲ್ಲ.ಯಾಕೆಂದರೆ ರಾಹುಲ್ ಗಾಂಧಿಯವರು‌ ಇಂತಹ ಒತ್ತಡಗಳಿಗೆಲ್ಲ ಬಗ್ಗುವುದಿಲ್ಲ.ಈ ಹಿಂದೆ ರಾಜಸ್ತಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ ಮಧ್ಯೆ ಇದೇ ರೀತಿಯ ಬಿಕ್ಕಟ್ಟು ಉದ್ಭವಿಸಿತ್ತಲ್ಲ?ಆಗ ಸಚಿನ್ ಪೈಲಟ್ ಅವರು ಕೂಡಾ ಇದೇ ರೀತಿ ಹೈಕಮಾಂಡ್ ಮೇಲೆ‌ ಒತ್ತಡ ಹೇರುವ ತಂತ್ರ ಅನುಸರಿಸಿದ್ದರು.ಆದರೆ ಸಚಿನ್ ಪೈಲಟ್ ಅವರ ಒತ್ತಡಗಳಿಗೆ ರಾಹುಲ್ ಗಾಂಧಿ ಮಣಿಯಲಿಲ್ಲ.ಇನ್ ಫ್ಯಾಕ್ಟ್‌,ಇಂತಹ ಒತ್ತಡಗಳಿಗೆ ಮಣಿಯುವ ಜಾಯಮಾನವೇ ರಾಹುಲ್ ಗಾಂಧಿ ಅವರದಲ್ಲ‌‌.
ಇನ್ನು ಈ ಬೆಳವಣಿಗೆಗಳ ಬಗ್ಗೆ ಮೇಡಂ ಸೋನಿಯಾಗಾಂಧಿಯವರು ಮಧ್ಯ ಪ್ರವೇಶ ಮಾಡುವುದಿಲ್ಲ.ಈಗಾಗಲೇ ಇಂತಹ ಎಲ್ಲ ವ್ಯವಹಾರಗಳನ್ನು ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಟ್ಟಿರುವುದರಿಂದ ಅವರು ಹೆಚ್ಚು ಉತ್ಸುಕತೆಯನ್ನು ತೋರುವುದೂ ಇಲ್ಲ.
ಹೀಗಾಗಿ ನಾಳೆಯೇ ಸಿಎಂ ಆಗಬೇಕು ಅಂತ ಡಿ.ಕೆ.ಶಿವಕುಮಾರ್ ಅವರೇನು ಹೊರಟಿದ್ದಾರೆ?ಅದರ ಬದಲು ಸ್ವಲ್ಪ ದಿನ ಕಾಯಲಿ.ಇಂತಹ ವಿಷಯಗಳಲ್ಲಿ ಏನೇ ಹೆಜ್ಜೆ ಇಡಬೇಕೆಂದರೂ ಎಲ್ಲರ ಮನವೊಲಿಸಬೇಕು.ಇಂತಹ ಮನವೊಲಿಕೆ‌ಯ ಕಾರ್ಯ ಮುಗಿಯುವವರೆಗೆ ಕಾಯಬೇಕು.ಈ ಕಾರ್ಯ ಹೊಸ ವರ್ಷದ ಹೊತ್ತಿಗಾದರೂ ಆಗಬಹುದು.ಬಜೆಟ್ ಮುಗಿದ ನಂತರವೂ ಆಗಬಹುದು.
ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ದಿನ ತಾಳ್ಮೆಯಿಂದಿರಲಿ ಅಂತ ಚಲುವರಾಯಸ್ವಾಮಿ ಅವರಿಗೆ ವಿವರಿಸಿದ್ದಾರೆ.
ಅವರಾಡಿದ ಮಾತು ಕೇಳಿದ ಚಲುವರಾಯಸ್ವಾಮಿ ಅವರು:’ಏನೋ ಗೊತ್ತಿಲ್ಲ ಸಾರ್,ಆದರೆ ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಕೂಲಾಗಿ ಹೋದರೆ ಸಾಕು’ಅಂತ ನಿಟ್ಟುಸಿರು ಬಿಟ್ಟರಂತೆ.

ಡಿಕೆಸು ನೆತ್ತಿಗೆ ಸಿದ್ದು ಕೈ

ಕುತೂಹಲದ ಸಂಗತಿ ಎಂದರೆ ಚಲುವರಾಯಸ್ವಾಮಿ ಅವರ ಜತೆ ವಿಮಾನದಲ್ಲಿ ಮಾತನಾಡುತ್ತಾ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ,ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಬಳಿಯೂ ಇದೇ ಧಾಟಿಯಲ್ಲಿ ಮಾತನಾಡಿದ್ದರಂತೆ.
ಮೂಲಗಳ ಪ್ರಕಾರ ದಿಲ್ಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಅವರು ನ್ಯಾಯ ಪಂಚಾಯ್ತಿಯ ಮಾತನಾಡಿದರಂತೆ.
‘ಸಾರ್,ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಯ ವಿಷಯದಲ್ಲಿ ಫೈಟು ನಡೆಯಿತಲ್ಲ?
ಆಗ ನೀವು,ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಏನು ಮಾತುಕತೆ ನಡೆಯಿತು?
ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಲಿ,ಆನಂತರ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತ ಒಂದು ಅಮೈಕಬಲ್ ಸೆಟ್ಲ್ ಮೆಂಟ್ ಆಗಿರಲಿಲ್ವಾ?ಈ ಮಾತುಕತೆಯ ನಂತರ ಸಿದ್ದರಾಮಯ್ಯ ಅವರು ನನ್ನ ನೆತ್ತಿಯ ಮೇಲೆ ಕೈ ಇಟ್ಟು ಏನು ಪ್ರಾಮಿಸ್ಸು ಮಾಡಿದ್ರು?’ಯೇ,ಸುರೇಶ್ ಎರಡೂವರೆ ವರ್ಷ ಆದ ಕೂಡ್ಲೇ ಸಿಎಂ ಹುದ್ದೆ ಬಿಟ್ಟುಕೊಡ್ತೀನಿ.ಬೇಕಿದ್ರೆ ಇನ್ನೂ ಒಂದು ವಾರ ಮುಂಚೆಯೇ ಬಿಟ್ಟು ಕೊಡ್ತೀನಿ ಅಂತ ಹೇಳಿರಲಿಲ್ವಾ?ಇದಾದ ನಂತರವೇ ತಾನೇ ನೀವು ಈ ಕುರಿತು ರಾಹುಲ್ ಗಾಂಧಿವರಿಗೆ ವಿವರಿಸಿದ್ದು?ಈ ವಿಷಯವನ್ನು ಇವತ್ತು ವರಿಷ್ಟರ್ಯಾರು ಮಾತನಾಡದಿದ್ದರೆ ನಾವೇನು ಮಾಡಬೇಕು?ಸಿವಕುಮಾರ್ ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ ತಾನೇ?ಹೀಗಾಗಿ ಅವರಿಗೆ ನ್ಯಾಯ ಕೊಡಿಸಿ’ಎಂದು ಪಟ್ಟು ಹಿಡಿದಿದ್ದಾರೆ.
ಆಗೆಲ್ಲ ಸುರೇಶ್ ಅವರ ಮಾತು ಕೇಳಿದ ಮಲ್ಲಿಕಾರ್ಜುನ ಖರ್ಗೆ ಅವರು:’ರೀ ಸ್ವಲ್ಪ ದಿನ ಸುಮ್ಮನಿರ್ರೀ.ಮುಂದಿನ ತಿಂಗಳು ಸಂಸತ್ ಅಧಿವೇಶನ ಪ್ರಾರಂಭವಾಗುತ್ತದೆ.ಆಗ ಬನ್ರಿ.ಏನೇ ವಿಷಯ ಇದ್ದರೂ ರಾಹುಲ್ ಗಾಂಧಿ ಅವರ ಮುಂದೆ ಮಾತನಾಡೋಣ.ಆಗ ಸಿದ್ಧರಾಮಯ್ಯ ಅವರೂ ಬರಲಿ.ಒಟ್ಟಿನಲ್ಲಿ ಏನೇ ಇದ್ರೂ ಅಮೈಕಬಲ್ ಆಗಿ ಸೆಟ್ಲ್ ಮಾಡೋಣ’ಎಂದಿದ್ದಾರೆ.
ಆದರೆ ಅವತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನಿಂದ ಸಮಾಧಾನಗೊಳ್ಳದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಕುದಿಯುತ್ತಾ ವಾಪಸ್ಸಾಗಿದ್ದಾರೆ.
ಯಾವಾಗ ಅವರು‌ ಕುದಿಯುತ್ತಾ ವಾಪಸ್ಸಾದರೋ?ಇದಾದ ನಂತರ ಅವರ ಬಣ ನಂಬರ್ ಗೇಮ್ ಆಟಕ್ಕಿಳಿದಿದೆ.ಇದರ ಭಾಗವಾಗಿ ಶಾಸಕರ ಒಂದು ತಂಡ ಮೊನ್ನೆ ದಿಲ್ಲಿಗೆ ಹೋಗಿ ಪೆರೇಡ್ ಮಾಡಿ ಬಂದಿದೆ.

ಸಿದ್ದು ಪಾಳಯದ ಲೇಟೆಸ್ಟ್ ಸುದ್ದಿ

ಯಾವಾಗ ಡಿಕೆಶಿ ಬಣ ನಂಬರ್ ಗೇಮ್ ಆಟಕ್ಕಿಳಿಯಿತೋ?ಇದಾದ ನಂತರ ಸಿಎಂ ಸಿದ್ದರಾಮಯ್ಯ ಅವರ ಬಣ ಧಿಡೀರನೇ ಎಚ್ವೆತ್ತಿದೆ.ಅಷ್ಟೇ ಅಲ್ಲ,ಈ ನಂಬರ್ ಗೇಮ್ ಆಟದ ದ ವಿವರವನ್ನು ಗಮನಿಸುತ್ತಾ ಕುಳಿತಿದೆ.
ಅದಕ್ಕಿರುವ ಸಧ್ಯದ ಮಾಹಿತಿಯ ಪ್ರಕಾರ ‘ಡಿಕೆಶಿ ಕ್ಯಾಂಪಿನಲ್ಲಿ ಇಪ್ಪತ್ತಾರು ಶಾಸಕರಿದ್ದಾರೆ.
ನಾಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಡಿಕೆಶಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದರೆ ಇಪ್ಪತ್ತಾರು ಶಾಸಕರ ಪೈಕಿ,ಹದಿಮೂರು ಮಂದಿ ಮಾತ್ರ ಡಿಕೆಶಿಯವರ ಹಿಂದೆ ಹೋಗುತ್ತಾರೆ.
ಹೀಗಾಗಿ ಡಿಕೆಶಿ ವಿಷಯದಲ್ಲಿ ಯಾವ ಆತಂಕದ ಅಗತ್ಯವೂ ಇಲ್ಲ.ನಾಳೆ ರಾಹುಲ್ ಗಾಂಧಿಯವರು ಕರೆಸಿ ಕೇಳಿದರೆ ಅವರಿಗೆ ಈ ಕುರಿತು ಸ್ಪಷ್ಟವಾಗಿ ಹೇಳಿದರಾಯಿತು.
ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವ ಬದಲಾವಣೆಯಂತಹ ವಿಷಯ ಪ್ರಸ್ತಾಪವಾದರೆ ಈ ಕುರಿತು ವಿವರಿಸಿದರಾಯಿತು.ಅನಂತರ ಡಿಕೆಶಿ ಮುಖ್ಯವೋ?ಸರ್ಕಾರ ಮುಖ್ಯವೋ?ಅಂತ ಅವರೇ ತೀರ್ಮಾನಿಸಲಿ ಎಂಬ ತೀರ್ಮಾನಕ್ಕೆ ಬಂದಿದೆ.
ಕಳೆದ ಶನಿವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕೂಡಾ ಇದೇ ಧಾಟಿಯಲ್ಲಿ ತಮ್ಮ ಅಭಿಪ್ರಾಯ ಹೇಳಿದರಂತೆ.
ಆಗೆಲ್ಲ ಖರ್ಗೆಯವರು:’ಈ ವಿಷಯದಲ್ಲಿ ಹೆಚ್ಚು ಯೋಚಿಸಿ ಮುಂದುವರಿಯೋಣ.ನೀವು ಮಾತ್ರ ಹೈಕಮಾಂಡ್ ಗಮನಕ್ಕೆ ತರದೆ ಯಾವ ನಿರ್ಧಾರನ್ನೂ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಎಂಬುದು ಸಧ್ಯದ ಸುದ್ದಿ

ಪ್ರಧಾನಿ ಪಾಳಯಕ್ಕೆ ತಲುಪಿದ್ದೇನು?

ಹೀಗೆ ಡಿಕೆಶಿ ಕ್ಯಾಂಪಿನ ನಂಬರ್ ಗೇಮ್ ಶುರುವಾದ ನಂತರ ಸಿದ್ದರಾಮಯ್ಯ ಅವರ ಪಾಳಯಕ್ಕೆ ಒಂದು ಮೆಸೇಜ್ ಹೋಗಿದ್ದರೆ,ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಂದು ಮೆಸೇಜು ತಲುಪಿದೆ.
ಅದರ ಪ್ರಕಾರ,ಸಿಎಂ ಹುದ್ದೆಗೆ ಪಟ್ಟು ಹಿಡಿದು ಕುಳಿತಿರುವ ಡಿ.ಕೆ.ಶಿವಕುಮಾರ್ ಅವರ ಜತೆ ಸಧ್ಯಕ್ಕೆ 32 ಶಾಸಕರಿದ್ದಾರೆ.ಅದೇ ರೀತಿ ಸಿಎಂ ಸಿದ್ಧರಾಮಯ್ಯ ಅವರ ಹಿಂದೆ 60 ಶಾಸಕರಿದ್ದಾರೆ.ಹೀಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪಾಳಯದಲ್ಲಿರುವ ಶಾಸಕರನ್ನು ಹೊರತುಪಡಿಸಿಯೂ ನಲವತ್ತು ಮಂದಿ ಶಾಸಕರಿದ್ದಾರಲ್ಲ?
ಈ ಪೈಕಿ ಹತ್ತು ಮಂದಿ ಶಾಸಕರನ್ನು ಡಿಕೆಶಿ ತಮ್ಮ ಕಡೆ ಸೆಳೆದುಕೊಂಡರಾಯಿತು.
ಅಲ್ಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕತೆ ಮುಗಿಸಲು ಅಗತ್ಯವಾದ ಆಟ ಶುರುವಾಗುತ್ತದೆ.
ಅರ್ಥಾತ್,ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ವರಿಷ್ಟರು ಒಪ್ಪದಿದ್ದರೆ ಡಿ.ಕೆ.ಶಿವಕುಮಾರ್ ಪಕ್ಷ ತೊರೆಯುತ್ತಾರೆ.
ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಕೊಡಲು ಕಾಂಗ್ರೆಸ್ ವರಿಷ್ಟರು ತೀರ್ಮಾನಿಸಿದರೆ ಸಿದ್ದರಾಮಯ್ಯ ಬೆಂಬಲಿಗರ ಪಡೆ ಪಕ್ಷ ತೊರೆಯುತ್ತದೆ.
ಹೀಗೆ ಡಿಕೆಶಿ ಕ್ಯಾಂಪೇ ಆಗಲೀ,ಸಿದ್ದರಾಮಯ್ಯ ಕ್ಯಾಂಪೇ ಆಗಲಿ ಹೊರಬಂದರೆ ಆಟ ಶುರುವಾಗುತ್ತದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕತೆ ಖಲಾಸ್ ಆಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿರುವ ಸಂದೇಶ.

ಲಾಸ್ಟ್ ಸಿಪ್

ಅಂದ ಹಾಗೆ ಕಾಂಗ್ರೆಸ್ ಪಾಳಯದಲ್ಲಿ ಅದಿಕಾರ ಹಂಚಿಕೆಗಾಗಿ ಕದನ ಆರಂಭವಾಗಿದ್ದರೆ ಸಿಎಂ ಸಿದ್ದರಾಮಯ್ಯ ಅವರ ಕ್ಯಾಂಪಿನ ಕಣ್ಣು ‘ಜೀಸಿ-ಜಫ್ರು’ಜೋಡಿಯ ಮೇಲೆ ಬಿದ್ದಿದೆ.
ಅಂದ ಹಾಗೆ ಡಿಕೆಶಿ ಕ್ಯಾಂಪಿನಲ್ಲಿ ಇವತ್ತೇನು ನಡೆಯುತ್ತಿದೆ?ಇದಕ್ಕೆ ಹೈಫು ಕೊಡುತ್ತಿರುವುದೇ ದಿಲ್ಲಿಯಲ್ಲಿರುವ ‘ಜೀಸಿ-ಜಫ್ರು’ಜೋಡಿ ಎಂಬುದು ಸಿದ್ದರಾಮಯ್ತ ಕ್ಯಾಂಪಿನ ಸಿಟ್ಟು.
ದಿಲ್ಲಿಯಲ್ಲೇನೇ ನಡೆಯಲಿ,ಈ ‘ಜೀಸಿ-ಜಫ್ರು’ ಜೋಡಿ ಡಿ.ಕೆ.ಶಿವಕುಮಾರ್ ಅವರಿಗೆ ಮೆಸೇಜು ಕೊಡುತ್ತಾ:ಅಣ್ಣಾ,ಇಲ್ಲಿ ದಿಲ್ಲಿಯಲ್ಲಿ ಎಲ್ಲ ಸೆಟ್ಲಾಗಿದೆ.ಪಕ್ಷದ ವರಿಷ್ಟರು ನಿಮ್ಮ ಪರವಾಗಿದ್ದಾರೆ.ಆದರೆ ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿ ಅಧಿಕಾರ ತ್ಯಾಗಕ್ಕೆ ಸಿದ್ದರಾಗಿ ಎಂದು ಹೇಳಲು ಟೈಮು ಕಾಯುತ್ತಿದ್ದಾರೆ.
ಹಾಗಂತ ನಾವು ಸುಮ್ಮನಿರಬಾರದಲ್ಲ?ಹೀಗಾಗಿ ಈಗಿನಿಂದಲೇ ಒತ್ತಡ ಬಿಲ್ಡ್ ಮಾಡೋಣ’ಅಂತ ಕುಮ್ಮಕ್ಕು ಕೊಡುತ್ತಿರುವುದೇ ಈ ಜೋಡಿ.ಇಲ್ಲಿ ಡಿಕೆಶಿ ಕ್ಯಾಂಪಿನ ಸುದ್ದಿ ಹೈಫಾಗಲೂ ಇದೇ ಜೋಡಿ ಕಾರಣ ಎಂಬುದು ಸಿಎಂ ಸಿದ್ದರಾಮಯ್ಯ ಕ್ಯಾಂಪಿನ ಅನುಮಾನ.

ಆರ್.ಟಿ.ವಿಠ್ಠಲಮೂರ್ತಿ