HomeDistrictsBallariಅವಿರೋಧ ಆಯ್ಕೆ ಅಧ್ಯಕ್ಷ ಎಮ್ಮಿಗನೂರು ಎ. ತಾಂಡವ ಕೃಷ್ಣ

ಅವಿರೋಧ ಆಯ್ಕೆ ಅಧ್ಯಕ್ಷ ಎಮ್ಮಿಗನೂರು ಎ. ತಾಂಡವ ಕೃಷ್ಣ

ವರದಿ; ಪುಪ್ಷಾವತಿ ಜಿಎಂ ಬಸಯ್ಯ

ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ವೆಂಕಯ್ಯ ಮೆಮೋರಿಯಲ್ ಸಂಸ್ಥೆ ಶಾಲೆಯ ಕುರುಗೋಡು-ಕುಡಿತಿನಿ ಭಾಗದ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ (ಕುಸ್ಮಾ) ಅಧ್ಯಕ್ಷರಾಗಿ ಎಮ್ಮಿಗನೂರು ಎ. ತಾಂಡವ ಕೃಷ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಮ್ಮಿಗನೂರಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಸರ್ಕಾರಗಳು ಖಾಸಗಿ ಶಾಲೆಗಳ ಮೇಲೆ ದಿನಕ್ಕೊಂದು ಹೊಸ ನಿಯಮ ಹಾಗೂ ಕಾನೂನುಗಳನ್ನು ಜಾರಿಗೆ ತಂದು ಅನಗತ್ಯ ಒತ್ತಡ ಹೇರುತ್ತಿವೆ. ಸರ್ಕಾರಿ ಶಾಲೆಗಳಂತೆ ಖಾಸಗಿ ಶಾಲೆಗಳಿಗೂ ಅಗತ್ಯ ವಿನಾಯಿತಿಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ದೇಶಕ್ಕೆ ಸಮರ್ಥ ಹಾಗೂ ದಕ್ಷ ಪ್ರಜೆಗಳನ್ನು ರೂಪಿಸುವಲ್ಲಿ ಖಾಸಗಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಭಾಗಗಳಲ್ಲಿ ಅನೇಕ ಖಾಸಗಿ ಶಾಲೆಗಳು ಶಿಕ್ಷಣ ಸೇವೆ ನೀಡುತ್ತಿದ್ದು, ಅವುಗಳ ಉಳಿವಿಗಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕುರುಗೋಡು ತಾಲೂಕಿನಾದ್ಯಂತ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಶಾಲಾ ಆಡಳಿತ ಮಂಡಳಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಹಿಂದೆ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದ್ದು, ಎರಡನೇ ಬಾರಿ ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ತನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು. ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರ ಮತ್ತು ಒಡನಾಟವೇ ತನ್ನ ಶಕ್ತಿಯಾಗಿದೆ ಎಂದು ಹೇಳಿ, ತಮ್ಮನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ನಂತರ ಎಮ್ಮಿಗನೂರು ಗ್ರಾಮದ ವತಿಯಿಂದ ಎ. ತಾಂಡವ ಕೃಷ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments