ವರದಿ:ಶಿವರಾಜ್ ಕನ್ನಡಿಗ
ಕೊಟ್ಟೂರು,: ಕೊಟ್ಟೂರು. ಜಗಳೂರು ಮಾರ್ಗದಲ್ಲಿ ಸಂಚರಿಸುವ ಕೂಡ್ಲಿಗಿ ಡಿಪೋ ಕೆಕೆಆರ್ ಟಿಸಿ ಬಸ್ ನಿರ್ವಾಹಕ ಎಂ. ಬಸವರಾಜ್ ಅವರು ಮಹಿಳೆಯೊಬ್ಬರು ಪ್ರಯಾಣದ ವೇಳೆ ಬಿಟ್ಟುಹೋಗಿದ್ದ ಪರ್ಸ್ ನೊಂದಿಗೆ 10 ಗ್ರಾಂ.ಚಿನ್ನದ ಆಭರಣ,ಒಂದು ಸಾವಿರ ನಗದು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೊಟ್ಟೂರು ಮಾರ್ಗದಿಂದ ಬಸ್ ನಲ್ಲಿ ಪ್ರಯಾಣಿಸುವಾಗ ಮೈಮರೆತು ಸೀಟಿನಲ್ಲಿ ಆಕಸ್ಮಿಕವಾಗಿ ಪರ್ಸ್ ನ್ನು ಕೆಳಗಡೆ ಬಿಟ್ಟು ಉಜ್ಜಿನಿ ಗ್ರಾಮದಲ್ಲಿ ಇಳಿದಿದ್ದರು.ಕಂಡಕ್ಟರ್ ಅದನ್ನು ಕಂಡು ಅದರಲ್ಲಿನ ಚಿನ್ನದ ಆಭರಣ ಮತ್ತು 1000 ಹಣವಿರುವುದನ್ನು ಗಮನಿಸಿ ಜೋಪಾನದಿಂದ ಜಗಳೂರಿಗೆ ಆಗಮಿಸಿ ಮರಳಿ ಉಜ್ಜಿನಿ ಗ್ರಾಮಕ್ಕೆ ತೆರಳಿದ ವೇಳೆ ಪರ್ಸ್ ಕಳೆದುಕೊಂಡಿದ್ದ ಮಹಿಳೆಯನ್ನು ಗುರುತಿಸಿ ಅವರ ಆಭರಣ,ಹಣ ಒಪ್ಪಿಸಿದ್ದಾರೆ.ಇದನ್ನು ಗಮನಿಸಿದ ಸಾರ್ವಜನಿಕರು ಬಸ್ ಚಾಲಕ ಕೊಟ್ರೇಶ್,ನಿರ್ವಾಹಕ ಬವರಾಜ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
