ವರದಿ : ಜಿ ಎಂ ಬಸಯ್ಯ:
ಪೊಲೀಸರ ಎಂದರೆ ಭಯಭೀತಿಯಿಂದ ನಡುಗುತ್ತಿದ್ದರು. ಆದರೆ ಇತ್ತೀಚಿನ ವಿದ್ಯಮಾನ ಅವಲೋಕಿಸಿದರೆ ಪೊಲೀಸರು ಜನ ಸ್ನೇಹಿತಗುತ್ತಾರೆ ಎನ್ನುವುದಕ್ಕೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಿರಿಗೇರಿ ಗ್ರಾಮದ ಪೊಲೀಸ್ ಠಾಣೆಯ ಮಾನವೀಯತೆ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾದ ಪಿಎಸ್ಐ ಶಶಿಧರ್ ನಾಯಕ್ ಸಾಕ್ಷಿಯಾಗಿದ್ದಾರೆ.

ಮೂಲತಹ ಇವರು ವ್ಯವಸಾಯ ಕುಟುಂಬದಿಂದ ಜನಿಸಿದವರು. ಸಮಾಜಕ್ಕೆ ಏನಾದರೂ ಒಳ್ಳೆಯ ಸೇವೆ ಸಲ್ಲಿಸಬೇಕೆಂಬ ಹಂಬಲ ಹೊಂದಿದ ಇವರು ಪೊಲೀಸ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯು ಆದರು. ಸಿರಿಗೇರಿಗೆ ಪ್ರಪ್ರಥಮ ಬಾರಿಗೆ ಕಾಲಿಟ್ಟ ಇವರು ಸಮಾಜಕ್ಕೆ ಮಾರಕವಾದ ಇಸ್ಪೀಟ್ ಜೂಜಾಟವನ್ನು ಮಟ್ಟ ಹಾಕಬೇಕೆಂಬ ಛಲದಿಂದ ತಮ್ಮ ನಾಲ್ಕೈದು ಸಿಬ್ಬಂದಿಗಳೊಂದಿಗೆ ರಾತ್ರೋ ರಾತ್ರಿ ನಿದ್ದೆಗೆಟ್ಟು ಮಾರುವೇಷದಲ್ಲಿ ಇಸ್ಪೇಟ್ ಜೂಜಾಟದ ಅಡ್ಡ ಮೇಲೆ ದಾಳಿ ನಡೆಸಿ ತಪ್ಪಿತಸ್ಥರನ್ನು ಬಂಧಿಸಿದ್ದಾರೆ.
ತಪ್ಪಿತಸ್ಥರನ್ನು ಬಿಡಿಸುವ ಸಲುವಾಗಿ ಬಂದು ಲಂಚದ ಆಮಿಷ ತೋರಿಸಿದ ಬಡ್ಡಿ ದಂಧೆ ಕೋರರನ್ನು ಹೆಡೆ ಮುರಿಕಟ್ಟಿ ಸಾಮಾಜಿಕ ವ್ಯವಸ್ಥೆಯ ಜ್ಞಾನದ ಪಾಠ ಹೇಳಿಕೊಟ್ಟಿದ್ದಾರೆ. ಇವರ ಈ ಕಾರ್ಯದಿಂದ ಇಸ್ಪೀಟ್ ಜೂಜಾಟ ಹಾಗೂ ಬಡ್ಡಿ ದಂಧೆ ಕೋರರಲ್ಲಿ ನಡುಕ ಉಂಟಾಗಿದೆ. ಮಾತ್ರವಲ್ಲ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ನಡೆದ ಕಳ್ಳತನವನ್ನು ಕಂಡುಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ಸುಳಿವನ್ನು ಗುರುತಿಸಿ ಮೊಬೈಲ್ ವಾಪಸಾತಿ ಫಲಾನುಭವಿಗಳಿಗೆ ನೀಡಿದ್ದಾರೆ.
ಇನ್ನೂ ಪೋಕ್ಸೋ ಪ್ರಕರಣದಲ್ಲಿ ಬಾಲಕಿಯರು, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ದೌರ್ಜನ್ಯ ಪ್ರಕರಣದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿ ನ್ಯಾಯ ಕೊಡಿಸುವಲ್ಲಿ ಕರುಣಾಮಯಿ ಅನಿಸಿಕೊಂಡಿದ್ದಾರೆ. ಸಣ್ಣಪುಟ್ಟ ಗಲಾಟೆಗಳಿಗೆ ರಾಜಿ ಸಂಧಾನದ ಮೂಲಕ ಬಗೆಹರಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿ ನ್ಯಾಯಾಲಯ ಸಮಯದ ಹೊರೆ ತಗ್ಗಿಸಿದ್ದಾರೆ. ಇಂತಹ ಸೌಜನ್ಯ ಅಧಿಕಾರಿ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಸಿರಿಗೇರಿ ಸುತ್ತಮುತ್ತಲಿನ ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕಾನೂನಿನ ನಿಯಮಾನುಸಾರ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕಾದ್ದು ಪೊಲೀಸರ ಕರ್ತವ್ಯ. ತಕ್ಕಮಟ್ಟಿಗೆ ನಾನು ಅಳಿಲು ಸೇವೆ ಸಲ್ಲಿಸಿದ್ದೇನೆ. ಜನರ ಸಹಕಾರವಿದ್ದರೆ ಎಂತಹ ರೌಡಿಜಂ ವ್ಯಕ್ತಿಗಳ ಮೇಲೆ ಕೂಡ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ನಾನು ಸಿದ್ದ.
ಯಾವುದೇ ಜನಾಂಗದವರಾಗಿರಲಿ ಮಾನವೀಯತೆಯಿಂದ, ಮನುಷ್ಯರಾಗಿ ಬದುಕಬೇಕೆಂಬುದೇ ನನ್ನ ಆಶಯ. ಪಿಎಸ್ಐ ವೈ. ಶಶಿಧರ್ ನಾಯಕ್. ಶಿರಿಗೇರಿ.
