[ವರದಿ : ಜಿ ಎಂ ಬಸಯ್ಯ]
ಕುರುಗೋಡು: ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಣಜಿಗ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಗುರುವಾರ ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹೋತೂರು ಹೇಮಾದ್ರಿ ಮಾತನಾಡಿ, ಬಣಜಿಗ ಸಮಾಜವು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಸರ್ಕಾರಿ ಉದ್ಯೋಗ ಹಾಗೂ ನೇಮಕಾತಿಗಳಲ್ಲಿ ಸೂಕ್ತ ಅವಕಾಶಗಳಿಂದ ವಂಚಿತವಾಗುತ್ತಿದೆ. ಆದ್ದರಿಂದ ಸರ್ಕಾರ ಸಮಾಜದ ಸ್ಥಿತಿಗತಿಯನ್ನು ಪರಿಗಣಿಸಿ 2ಎ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ನಗರ ಘಟಕದ ಗೌರವಾಧ್ಯಕ್ಷ ನಾಡಗೌಡ ಮಾರೇಗೌಡ ಮಾತನಾಡಿ, ಸಮಾಜದ ಬಹುಕಾಲದ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಬಾದನಹಟ್ಟಿ ಸಣ್ಣರಂಗಪ್ಪ, ಎನ್. ಮರೇಗೌಡ, ಸೋಮಶೇಖರ್ ಗೌಡ, ಎಚ್. ವಾಗೀಶ್, ಎಲ್ಲಾಪುರ ವೀರಶಪ್ಪ, ಎಂ. ಮಲ್ಲನಗೌಡ, ಗುತ್ತಿಗನೂರು ಕೊಟ್ರೇಶ್ ಗೌಡ, ಚಂದ್ರಗೌಡ, ಕೋರಿ ಶರಣಪ್ಪ, ಎಸ್. ದೊಡ್ಡರಂಗಪ್ಪ, ಎಚ್. ಮಹೇಶ್ ಗೌಡ, ವೀರಾಪುರ ಆದಿಗೌಡ, ಎಮ್ಮಿಗನೂರು ರಾಜಶೇಖರ್, ಗಣೇಶ್, ಯರೆಪ್ಪಗೌಡ, ಎಸ್. ಶರಭಣ್ಣ, ಕ್ಯಾದಿಗೆಹಾಳು ಎರೆಪ್ಪ, ಎಣ್ಣೆ ರುದ್ರಪ್ಪ, ಕೊಂಚಿಗೇರಿ ವೀರೇಶ್, ದಮ್ಮೂರು ಛತ್ರಿಕಿ ವೀರೇಶ್, ವೀರಭದ್ರಗೌಡ, ಯರಂಗಳಿ ಜಗದೀಶ್ ಗೌಡ, ಗೆಣಿಕೆಹಾಳು ಕರವೇ ವೀರೇಶ್, ಮಲ್ಲಿಕಾರ್ಜುನ, ಅಂಗಡಿ ವೀರೇಶ್, ಪಂಪನಗೌಡ, ಪಾಟೀಲ್ ಶಿವಪುತ್ರ ಸೇರಿದಂತೆ ಬಣಜಿಗ ಸಮಾಜದ ಹಿರಿಯ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
