Wednesday, October 21, 2026
HomeDistrictsBallariಬರ ಸಮಿಕ್ಷೆಯಲ್ಲಿ ಮಕ್ಕಳು ಡಿಸಿಗೆ ಬಸ್ ಸೌಕರ್ಯ ಕಲ್ಪಿಸಲು ವಿದ್ಯಾರ್ಥಿಗಳ ಮನವಿ

ಬರ ಸಮಿಕ್ಷೆಯಲ್ಲಿ ಮಕ್ಕಳು ಡಿಸಿಗೆ ಬಸ್ ಸೌಕರ್ಯ ಕಲ್ಪಿಸಲು ವಿದ್ಯಾರ್ಥಿಗಳ ಮನವಿ

[ವರದಿ : ಜಿ ಎಂ ಬಸಯ್ಯ]
ಕುರುಗೋಡು ಸಮೀಪದ ಶಿರಿಗೇರಿ ವ್ಯಾಪ್ತಿಯಲ್ಲಿ ಸಿದ್ದರಾಂಪುರ ಗ್ರಾಮದಲ್ಲಿ ಬರ ಅಧ್ಯಯನ ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಆಗಮಿಸಿದ್ದ ಬಳ್ಳಾರಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರಿಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದ ಘಟನೆ ನಡೆಯಿತು.

ಕೊಂಚಗೇರಿ, ದಾಸಾಪುರ ಮಾರ್ಗವಾಗಿ ಸಿರಿಗೇರಿ ಗ್ರಾಮಕ್ಕೆ ತೆರಳುವ ಬಸ್ ಸಂಜೆ ಶಾಲೆ ಬಿಟ್ಟ ಸಮಯದಲ್ಲಿ ಸಿರಿಗೇರಿ ಗ್ರಾಮದಿಂದ ಕೊಂಚಗೇರಿ, ದಾಸಾಪುರ ಮಾರ್ಗವಾಗಿ ತೆರಳದೆ ನೇರವಾಗಿ ಸಿರಿಗೇರಿ ಕ್ರಾಸ್ ಮೂಲಕ ಒಳ್ಳಾರಿಗೆ ತೆರಳುತ್ತಿದ್ದು, ಇದರಿಂದ ಗ್ರಾಮಕ್ಕೆ ತೆರಳಲು ವಿದ್ಯಾರ್ಥಿಗಳು ನಿತ್ಯವೂ ಕಾಲ್ನಡಿಗೆಯ ಮೂಲಕ ತೆರಳಬೇಕಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.

ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ತಕ್ಷಣವೇ ಬಳ್ಳಾರಿ ವಿಭಾಗದ ಕೆಕೆ ಆರ್ ಟಿಸಿಯ ವಿಭಾಗೀಯ ಅಧಿಕಾರಿಗೆ ಕರೆಮಾಡಿ ಕಡ್ಡಾಯವಾಗಿ ಸಿರಿಗೇರಿ- ಬಳ್ಳಾರಿ ಬಸ್ ಕೊಂಚಗೇರಿ-ದಾಸಾಪುರ ಮಾರ್ಗವಾಗಿ ತೆರಳುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಹ್ಯಾರೀಸ್ ಸುಮೇರ, ತಹಶೀಲ್ದಾರ್ ಗೌಸಿಯಾ ಬೇಗಂ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments