Thursday, August 13, 2026
HomeDistrictsBallariರಾಜ್ಯದಲ್ಲಿ ಮೊದಲ ಶ್ರಮಿಕ‌ ವಸತಿ ಶಾಲೆಗೆ. ಶಾಸಕ ಜೆ.ಎನ್ ಗಣೇಶ ಭೂಮಿ ಪೂಜೆ

ರಾಜ್ಯದಲ್ಲಿ ಮೊದಲ ಶ್ರಮಿಕ‌ ವಸತಿ ಶಾಲೆಗೆ. ಶಾಸಕ ಜೆ.ಎನ್ ಗಣೇಶ ಭೂಮಿ ಪೂಜೆ

[ವರದಿ : ಜಿ ಎಂ ಬಸಯ್ಯ]
ಕುರುಗೋಡು ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಶ್ರಮಿಕ ವಸತಿ ಶಾಲೆ ‌ ಭೂಮಿಪೂಜೆ ರಾಜ್ಯದಲ್ಲೇ ಪ್ರಥಮ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆಎನ್.ಗಣೇಶ ಹೇಳಿದರು.

ಅವರು ಪಟ್ಟಣದ ದಮ್ಮೂರು ರಸ್ತೆಯಲ್ಲಿ 2025-26ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ರೂ.24 94 ಕೋಟಿ ವೆಚ್ಚದಿಂದ ನಿರ್ಮಾಣ ವಾಗುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕುರುಗೋಡು ಭಾಗದಲ್ಲಿ ಸುಮಾರು 4.5 ಎಕರೆ ಪ್ರದೇಶದಲ್ಲಿ ಶ್ರಮಿಕವಸತಿ ಶಾಲೆ ಭೂಮಿಪೂಜೆಯಿಂದ ಬಡ ಕಾರ್ಮಿಕರ ಮಕ್ಕಳು ಸೇರಿದಂತೆ, ಇತರೆ ಒಟ್ಟು 360 ಮಂದಿ ಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡಲಾಗುವುದು ಎಂದು ನುಡಿದರು.

ಇದರಲ್ಲಿ 180 ಹೆಣ್ಣ, 180‌ ಗಂಡುಮಕ್ಕಳಿಗೆ ಪ್ರವೇಶಾತಿ ನೀಡಲು ಅನುಕೂಲವಾಗಿದೆ. ಆದ್ದರಿಂದ ಶ್ರಮಿಕವಸತಿ ಶಾಲೆ ಕಟ್ಟಡ ಮುಗಿದಮೇಲೆ ಪ್ರವೇಶಾತಿ ಆರಂಭವಾಗುತ್ತಿದೆ. ಈ ಸೌಲಭ್ಯವನ್ನು ಸಕ್ರಿಯವಾಗಿ ಉಪಯೋಗಿಸಿಕೊಳ್ಳುವಂತೆ ಅರ್ಹ ಫಲಾನುಭವಿಗಳಿಗೆ ಸಲಹೆ ನೀಡಿದರು.

ಕುರುಗೋಡು ಪುರಸಭೆ ಅಧ್ಯಕ್ಷ ಜಿ.ಮಂಜುನಾಥ, ಉಪಾಧ್ಯಕ್ಷೆ ನಾಗವೇಣಿಅಂಜಿನಪ್ಪ, ಬ್ಲಾಕ್‌ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಾನಾಳುಚೆನ್ನಬಸವರಾಜ್, ಕಾರ್ಮಿಕ ಇಲಾಖೆಯ ಎಇಇ ರಾಘವೇಂದ್ರಕುಲಕರ್ಣಿ, ಕುರುಗೋಡು ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ, ಕಂದಾಯ ಇಲಾಖೆಯ ಆರ್‌ಐ.ಸುರೇಶ, ಆರ್‌ಐ.ಭದ್ರಯ್ಯಸ್ವಾಮಿ, ಎನ್‌ಸಿಸಿ ಕನ್ಸಟ್ರಕ್ಷನ್ ಮಾಲಿಕ ಶಿವಾರೆಡ್ಡಿ, ಸೈಟ್ ಇಂಜಿನಿಯರ್ ಚೆನ್ನಬಸವ, ಕುರುಗೋಡು ಪಿಎಸ್‌ಐ. ಸುಪ್ರಿತ್‌ವಿರುಪಾಕ್ಷಪ್ಪ, ಕುರುಗೋಡು ಪುರಸಭೆ ಸದಸ್ಯರು ಸೇರಿದಂತೆ ಇತರೆ ಊರಿನ ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments