Thursday, August 20, 2026
HomeDistrictsBallariಉದ್ಯೋಗ ಸಿಗದ ಹಿನ್ನೆಲೆ, ವಿದ್ಯುತ್ ತಂತಿ ಹಿಡಿದು ವ್ಯಕ್ತಿ ಆತ್ಮಹತ್ಯೆ.!?

ಉದ್ಯೋಗ ಸಿಗದ ಹಿನ್ನೆಲೆ, ವಿದ್ಯುತ್ ತಂತಿ ಹಿಡಿದು ವ್ಯಕ್ತಿ ಆತ್ಮಹತ್ಯೆ.!?

[ವರದಿ : ಜಿ ಎಂ ಬಸಯ್ಯ]

ಕುರುಗೋಡು ಸಮೀಪದ ಕುಡಿತಿನಿ ಪಟ್ಟಣದ ಇಂದಿರಾ ನಗರದ ನಿವಾಸಿ ಚಂದ್ರಶೇಖರ (44) ಎನ್ನುವ ವ್ಯಕ್ತಿ ಕುಡಿತಿನಿ ಥರ್ಮಲ್ ಪವರ್ ಪ್ಲಾಂಟ್ (ಬಿಟಿಪಿಎಸ್‌)ನಲ್ಲಿ ಉದ್ಯೋಗ ಸಿಗದ ಹಿನ್ನೆಲೆ ಮನನೊಂದು ಮನೆ ಮುಂದೆ ವಿದ್ಯುತ್ ತಂತಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ಘಟನೆ ವಿವರ:
ತಾಲೂಕಿನ ಸಮೀಪದ ಕುಡುತಿನ ಬಳಿ 2001 ಸ್ಥಾಪನೆಯಾಗಿರುವ ಬಿಟಿಪಿಎಸ್ ವಿದ್ಯುತ್ ಸ್ಥಾವರಕ್ಕೆ ಮೃತ ವ್ಯಕ್ತಿಯು ತಮ್ಮ 2.5 ಎಕರೆ ಜಮೀನು ಕಳೆದುಕೊಂಡಿದ್ದ ಅಲ್ಲದೆ ಇತ್ತಿಚಿಗೆ ಒಂದು ವರ್ಷದಿಂದ ಬಿಟಿಪಿಎಸ್‌ನಲ್ಲಿ ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಚಂದ್ರಶೇಖರ ಅವರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಿದ್ಯುತ್ ಸ್ಥಾವರದಲ್ಲಿ ತರಬೇತಿ ಸಹ ಕೊಟ್ಟಿದ್ದರು ತರಬೇತಿ ಮುಗಿಸಿ ಏಳು ತಿಂಗಳು ಕಳೆದರು ಉದ್ಯೋಗ ಕೊಟ್ಟಿರಲಿಲ್ಲ ತಿಂಗಳುಗಟ್ಟಲೆ ಅಲೆದಾಡಿ ಬೇಸತ್ತು
ಉದ್ಯೋಗ ಸಿಗದ ಹಿನ್ನೆಲೆ ಮನನೊಂದು ಚಂದ್ರಶೇಖರ ವಿದ್ಯುತ್ ತಂತಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ತಡರಾತ್ರಿ ಚಂದ್ರಶೇಖರ ಮೃತ ದೇಹವನ್ನ ಬಿಟಿಪಿಎಸ್ ಮುಂದೆ ಇರಿಸಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವ ಕುಟುಂಬಸ್ಥರು ವಿದ್ಯುತ್ ಸ್ಥಾವರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ನಂತರ ಅಧಿಕಾರಿಗಳು ಕುಟುಂಬಸ್ಥರೊಂದಿಗೆ ಮಾತನಾಡಿ ಮೃತ ವ್ಯಕ್ತಿಗೆ ಪರಿಹಾರ ಹಾಗೂ ಮನೆಯ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.ಘಟನೆ ಸಂಬಂಧ ಕುಡುತಿನಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments