Wednesday, August 26, 2026
HomeDistrictsBallariಎಮ್ಮಿಗನೂರು ಮಾಜಿ ಜಿಪಂ ಮಾಜಿ ಸದಸ್ಯ ಅಧಿಕೃತವಾಗಿ ಕಾಂಗ್ರೆಸ್‌ ತೆಕ್ಕೆಗೆ

ಎಮ್ಮಿಗನೂರು ಮಾಜಿ ಜಿಪಂ ಮಾಜಿ ಸದಸ್ಯ ಅಧಿಕೃತವಾಗಿ ಕಾಂಗ್ರೆಸ್‌ ತೆಕ್ಕೆಗೆ

[ವರದಿ : ಜಿ ಎಂ ಬಸಯ್ಯ]

ಎಮ್ಮಿಗನೂರು ಕ್ಷೇತ್ರದ ಮಾಜಿ ಜಿಪಂ ಸದಸ್ಯರು, ಭೋವಿ ಸಮಾಜದ ಪ್ರಮುಖ ಹಿರಿಯ ಮುಖಂಡ ವಿ.ಎರ್ರಿಸ್ವಾಮಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ್ ಅವರ ನೇತೃತ್ವದಲ್ಲಿ ವಿ.ಎರಿಸ್ವಾಮಿ ಕಾಂಗ್ರೆಸ್ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಸೇರ್ಪಡೆಯಾದರು

ಕುರುಗೋಡು ಪುರಸಭೆ ಅಧ್ಯಕ್ಷ ಜಿ. ಮಂಜುನಾಥ್, ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಬಸವರಾಜ್, ವಿ. ನಾಗರಾಜ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿ. ಎರ್ರಿಸ್ವಾಮಿ ಅವರ ಸೇರ್ಪಡೆಯಿಂದ ಬೆಂಗಳೂರಿನಲ್ಲಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಜೆ.ಎನ್‌. ಗಣೇಶ್ ಅವರ ನೇತೃತ್ವದಲ್ಲಿ ಜಿಪಂ ಮಾಜಿ ಸದಸ್ಯ ಎಮ್ಮಿಗನೂರು ವಿ.ಎರಿಸ್ವಾಮಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು

ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಹೆಚ್ಚುವರಿ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸ ಶಾಸಕ ಜೆ.ಎನ್. ಗಣೇಶ್ ವ್ಯಕ್ತಪಡಿಸಿದರು. ಅವರುಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸುವುದಾಗಿ ಎರಿಸ್ವಾಮಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments