Thursday, October 1, 2026
HomeDistrictsBengaluru Cityಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಎಂಬಿಬಿಎಸ್ ಪ್ರವೇಶಾತಿ ಅಂಕ ಇಳಿಸಿ ಪ್ರೋತ್ಸಾಹ ಧನ ಹೆಚ್ಚಿಸಿ

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಎಂಬಿಬಿಎಸ್ ಪ್ರವೇಶಾತಿ ಅಂಕ ಇಳಿಸಿ ಪ್ರೋತ್ಸಾಹ ಧನ ಹೆಚ್ಚಿಸಿ

ಬೆಂಗಳೂರು: ಸೆ30, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕೋಟಾದಡಿಯಲ್ಲಿ ಎಂ.ಬಿ.ಬಿ.ಎಸ್‌ಗೆ ಪ್ರವೇಶ ಪಡೆಯಲು ಪಿ.ಯು.ಸಿಯಲ್ಲಿ ನಿಗದಿಪಡಿಸಿರುವ ಶೇಕಡಾ ಅಂಕ 95 ರಿಂದ 90%ಕ್ಕೆ ಇಳಿಕೆ ಮಾಡಿ ಪ್ರೋತ್ಸಾಹಧನ ರೂ.50 ರಿಂದ 80 ಲಕ್ಷಗಳಿಗೆ ಹೆಚ್ಚಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದಾರೆ!

ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಅತ್ಯಂತ ಕಷ್ಟಕರವಾದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳ ನಡುವೆಯೂ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಪಿ.ಯು.ಸಿ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಇಂತಹ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶ ದೊರಕುವುದ್ದರಿಂದ ಅವರ ವೈಯಕ್ತಿಕ ಭವಿಷ್ಯ ಮಾತ್ರವಲ್ಲದೆ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯಲ್ಲಿಯೂ ಮಹತ್ವದ ಬದಲಾವಣೆ ಉಂಟಾಗುತ್ತದೆ,

ಪ್ರಸ್ತುತ ವೈದ್ಯಕೀಯ ಶಿಕ್ಷಣದ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಭೆ ಮತ್ತು ಅರ್ಹತೆ ಹೊಂದಿದ್ದರೂ ಸಹ ಬಡ ಕುಟುಂಬಗಳ ಅನೇಕ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಶಿಕ್ಷಣವನ್ನು ಮುಂದುವರೆಸುವುದು ಅತ್ಯಂತ ಕಷ್ಟಕರವಾಗಿರುತ್ತದೆ, ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಲ್ಲೇಖಿತ ಆದೇಶದಂತೆ ಪಿ.ಯು.ಸಿಯಲ್ಲಿ 95% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ನೀಟ್ ಮೂಲಕ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್ ಪ್ರವೇಶ ದೊರೆಯದೆ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆದಿರುವ ಪ್ರತಿಭಾವಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರಸ್ತುತ ರೂ 50/-ಲಕ್ಷಗಳ ಪ್ರೋತ್ಸಾಹ ಧನ ನೀಡುವ ಕ್ರಮ ಸ್ವಾಗತಾರ್ಹವಾಗಿದ್ದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಯೋಜನೆಯ ಅರ್ಹತಾ ಮಾನದಂಡ ಹಾಗೂ ಪ್ರೋತ್ಸಾಹ ಧನದ ಮೊತ್ತವನ್ನು ಇನ್ನಷ್ಟು ವಿದ್ಯಾರ್ಥಿ ಸ್ನೇಹಿಯಾಗಿ ಪರಿಷ್ಕರಿಸುವ ಅಗತ್ಯವಿರುವುದ್ದರಿಂದ ಪ್ರಸ್ತುತ ಪಿ.ಯು.ಸಿಯಲ್ಲಿ ಶೇ.95 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತಿದ್ದು ಶೇ.95 ಅಂಕಗಳ ಮಿತಿ ಅತ್ಯಂತ ಕಠಿಣವಾಗಿರುವುದ್ದರಿಂದ ಉತ್ತಮ ಪ್ರತಿಭೆ ಹಾಗೂ ನೀಟ್ ಅರ್ಹತೆ ಹೊಂದಿರುವ ಅನೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನೆಯಿಂದ ವಂಚಿತರಾಗುವ ಸಾಧ್ಯತೆಯಿದ್ದು ವಿದ್ಯಾರ್ಥಿಯ ಸಾಮರ್ಥ್ಯವನ್ನು ಕೇವಲ ಪಿಯುಸಿ ಅಂಕಗಳ ಆಧಾರದ ಮೇಲೆ ಮಾತ್ರ ಪರಿಗಣಿಸದೆ ನೀಟ್ ಅರ್ಹತೆ, ನೀಟ್ ಅಂಕಗಳು/ಯಾಂಕ್, ಕುಟುಂಬದ ವಾರ್ಷಿಕ ಆದಾಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುವ ಸಾಮರ್ಥ್ಯ ಸೇರಿದಂತೆ ಮುಂತಾದ ಅಂಶಗಳನ್ನು ಸಹ ಪರಿಗಣಿಸುವುದು ಸೂಕ್ತವಾಗಿರುತ್ತದೆ,

ಆಡಳಿತ ಮಂಡಳಿ ಕೋಟಾದಡಿ ಎಂ.ಬಿ.ಬಿ.ಎಸ್ ಪ್ರವೇಶ ಪಡೆಯುವ ಅರ್ಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರೂ.50 ಲಕ್ಷಗಳ ಪ್ರೋತ್ಸಾಹ ಧನ ನಿಗಡಿಪಡಿಸಲಾಗಿರುವುದ್ದರಿಂದ ವೈದ್ಯಕೀಯ ಶಿಕ್ಷಣದ ಶುಲ್ಕ ಹಾಗೂ ಸಂಬಂದಿತ ವೆಚ್ಚಗಳು ಕಾಲಾನಂತರದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದ್ದು ಎಂ.ಬಿ.ಬಿ.ಎಸ್ ಶಿಕ್ಷಣದ ಜೊತೆಗೆ ಹಾಸ್ಟೆಲ್, ಊಟ, ಪುಸ್ತಕಗಳು, ಪರೀಕ್ಷಾ ಶುಲ್ಕ, ಉಪಕರಣಗಳು, ಪ್ರಯಾಣ ಮತ್ತು ಇತರ ಶೈಕ್ಷಣಿಕ ವೆಚ್ಚಗಳನ್ನು ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ,

ಆದ್ದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಕೋಟಾದಡಿಯಲ್ಲಿ ಎಂ.ಬಿ.ಬಿ.ಎಸ್‌ಗೆ ಪ್ರವೇಶ ಪಡೆಯಲು ಪಿ.ಯು.ಸಿಯಲ್ಲಿ ನಿಗದಿಪಡಿಸಿರುವ ಶೇ.95ರ ಕನಿಷ್ಠ ಅಂಕಗಳನ್ನು ಶೇ.90ಕ್ಕೆ ಇಳಿಸಿ ಮತ್ತು ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನವನ್ನು ರೂ.50 ಲಕ್ಷಗಳಿಂದ ರೂ.80 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಬಗ್ಗೆ ಸರ್ಕಾರದ ಸೇರ್ಪಡೆ ಆದೇಶವನ್ನು ಪರಿಷ್ಕರಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments