Thursday, October 22, 2026
HomeDistrictsBallariಗುಡ್ಡದ ಮಾಳಮಲ್ಲೇಶ್ವರ ಐತಿಹಾಸಿಕ ಕಲ್ಯಾಣೋತ್ಸವ; ಕಾರಣಿಕ ನೋಡಿ ಮೂರು ಆರು-ಆರು-ವರ್ಣಾದಿತು

ಗುಡ್ಡದ ಮಾಳಮಲ್ಲೇಶ್ವರ ಐತಿಹಾಸಿಕ ಕಲ್ಯಾಣೋತ್ಸವ; ಕಾರಣಿಕ ನೋಡಿ ಮೂರು ಆರು-ಆರು-ವರ್ಣಾದಿತು

[ವರದಿ : ಜಿ ಎಂ ಬಸಯ್ಯ]
ಕುರುಗೋಡು ಸಮೀಪದ ಕರ್ನಾಟಕಕ್ಕೆ ಗಡಿಭಾಗದಲ್ಲಿ( ಸೀಮಾ ಆಂದ್ರ) ಧಾರ್ಮಿಕ ಸಂಪ್ರದಾಯ ಪದ್ದತಿ ಇಬ್ಬರ ಗಡಿಭಾಗದಲ್ಲಿ ಇರುವ (ಕರ್ನೂಲ್ ಜಿಲ್ಲೆಯ) ದೇವರಗುಡ್ಡು ಮಾಳಮಲ್ಲೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಪ್ರತಿ ವರ್ಷ ಕಲ್ಯಾಣೋತ್ಸವ ಅದ್ದೂರಿಯಾಗಿ ಜರುಗಿತು. ನಂತರ ಪ್ರತಿವರ್ಷ ದಂತೆ ಈ ವರ್ಷವು ಕಾರಣಿಕೆಯನ್ನು ಬಡಿಗೆ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಆಲೂರು ತಾಲೂಕಿನ ದೇವರಗುಡ್ಡದ ಮಲ್ಲಯ್ಯನ ಬಡಿಗೆ ಜಾತ್ರೆ ಅತ್ಯಂತ ಅದ್ಧೂರಿಯಾಗಿ ಜರುಗಿತು. ಮಧ್ಯರಾತ್ರಿ ಯಿಂದ ಬೆಳಗಿನ ಜಾವದ ವರೆಗೆ ಬಡೆಗೆ ಕಾಳಗದಲ್ಲಿ ಆಲೂರು ತಾಲೂಕಿನ ಪೋತರಾಜು(50) ಎನ್ನುವ ವ್ಯಕ್ತಿಯು ಮರಣ ಹೊಂದಿದ್ದು, ಎಂಭತ್ತು ಭಕ್ತರಿಗೆ ಗಾಯ ಗೊಂಡಿದ್ದಾರೆ.

ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಸಾವಿರಾರು ಕುಟುಂಬಗಳಿಗೆ ಆರಾಧ್ಯದೈವವಾದ ಗುಡ್ಡದ ಮಲ್ಲಯ್ಯ ಮಾಳ ಮಲ್ಲೇಶ್ವರ. ಇರುವ ಬೆಟ್ಟದ ಮೇಲೆ ಸುತ್ತಮುತ್ತಲಿನ ಹಳ್ಳಿಗಳ ನಡುವೆ ನೆಲೆಸಿರುವುದು ಮಾಳ ಮಲ್ಲೇಶ್ವರ ದೇವರ ಮೂರ್ತಿಗಾಗಿ ಬಡೆಗೆ ಕಾಳಗ ಅದ್ದೂರಿಯಾಗಿ ಜರುಗಿತು.

ವಿಜಯದಶಮಿ ದಿನ ರಾಕ್ಷಸರ ಸಂಹಾರಕ್ಕೆಂದು ಮಾಳಮ್ಮನ ಜೊತೆಯಲ್ಲಿ ಮಲ್ಲೇಶ್ವರ ಸ್ವಾಮಿಯ ಮೆರವಣಿಗೆಯೂ ತೆರಳುತ್ತದೆ. ಜತೆಗೆ ಸುತ್ತಲಿನ ಗ್ರಾಮಗಳ 18 ಸಾವಿರಕ್ಕೂ ಹೆಚ್ಚು ಯುವಕರು .ರಾತ್ರಿ 12 ಗಂಟೆ ವೇಳೆ ಕೈಯಲ್ಲಿ ಪಂಜು, ಬಡಿಗೆಗಳನ್ನು ಹಿಡಿದುಕೊಂಡು ರಕ್ತಪಡಿ ನೀಡಲು ಕಾಡಿಗೆ ತೆರಳುವುದು ಇಲ್ಲಿನ ಪದ್ಧತಿ. ಮಾಳಮಲ್ಲೇಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ಸಿಂಹಾಸನದಲ್ಲಿ ಕರೆದುಕೊಂಡು ಹೋಗುವಾಗ ಸುತ್ತಲಿನ ನೇಣಿಕಿ, ವಿರುಪಾಪುರ, ಸುಳುವಾಯಿ, ತಾಂಡಾ, ಕೊತ್ತಪೇಟೆ, ಬಿಳಿಹಾಳು, ಎಳ್ಳ ರ್ತಿ, ಆಲೂರು, ಹೊಳಗುಂದಿ ಹಾಗೂ ತಂಡ ಹಳ್ಳಿಯ ಭಕ್ತರು ತಮ್ಮ ಗ್ರಾಮಗಳಿಗೆ ಉತ್ಸವ ಮೂರ್ತಿಗಳನ್ನು ತೆಗೆದುಕೊಂಡು ಹೋದರೆ, ಆ ಗ್ರಾಮದಲ್ಲಿ ಸ್ವಾಮಿಯ ಅನುಗ್ರಹ ಉಂಟಾಗಿ ಮಳೆ ಬೆಳೆ ಸಮೃದ್ಧಿಯಾಗುವುದಲ್ಲದೇ ಗ್ರಾಮದ ಅಭಿವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯು ಸಾವಿರಾರು ವರ್ಷಗಳಿಂದ ಬಂದಿದೆ.

ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಗಳ ಕಡೆಗೆ ತೆಗೆದುಕೊಂಡು ಹೋಗಲು 11 ಗ್ರಾಮಗಳ ಭಕ್ತರ ನಡುವೆ ಹೊಡೆದಾಟ ನಡೆಯುತ್ತದೆ. ಆದರೆ ನೇರಣಿಕೆಯ ಭಕ್ತರು ಉತ್ಸವ ಮೂರ್ತಿಯನ್ನು ತಮ್ಮಲ್ಲಿಯೇ ಉಳಿಸಿ ಕೊಳ್ಳಬೇಕೆನ್ನುವ ಉದ್ದೇಶದಿಂದ ಉತ್ಸವ ಮೂರ್ತಿಗಳ ರಕ್ಷಣೆಗೆ ಬಡಿಗೆಗಳನ್ನು ಹಿಡಿದುಕೊಂಡು ಹೋರಾಡುವಾಗ ರೋಮಾಂಚನ ಉಂಟುಮಾಡುತ್ತದೆ.

ಉತ್ಸವ ಮೂರ್ತಿಗಳಿಗೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಯುವಕರು ಬಡಿಗೆಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಸಿದ್ದಪ್ಪಮಠದ ಮೂಲಕ ತೆರಳಿ ಪಾದಲಗಟ್ಟಿಗೆ ಸೇರಿಕೊಂಡು ಮುಳ್ಳಿನ ಬಂಡೆಯಲ್ಲಿ ಪಾದಗಳಿಗೆ ಚುಚ್ಚಿರುವ ಮುಳ್ಳು ತೆಗೆದು ರಾಕ್ಷಸಪಡೆಗೆ ತೆರಳಿ ಮಣಿಮ ರಾಕ್ಷಸರರಿಗೆ ಅರ್ಚಕರು ಮೂರು ಹನಿಗಳ ರಕ್ತದರ್ಪಣ ನೀಡುತ್ತಾರೆ. ಬನ್ನಿಕಟ್ಟಿಗೆ ತೆರಳಿ ಬನ್ನಿಗಿಡಕ್ಕೆ ಶಮಿ ಪೂಜೆ ನೆರವೇರಿಸಿ, ಎದುರು ಬಸವಣ್ಣ ದೇವಸ್ಥಾನದಲ್ಲಿ ಅರ್ಚಕ ಗಿರಿಮಲ್ಲಯ್ಯ ಕಾರಣಿಕ ನುಡಿಯುತ್ತಾರೆ.

ಈ ಬಡಿಗೆಗಳ ಹೊಡೆದಾಟದ ಸದ್ದಿಗೆ ಗುಡ್ಡವೆಲ್ಲಾ ಪ್ರತಿಧ್ವನಿಸುತ್ತದೆ ಪಂಜನ್ನು ಎಸೆಯುತ್ತಾ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗುವಾಗ ಅನೇಕರಿಗೆ ಗಾಯಗಳಾಗಿದ್ದು, ಗಾಯಕ್ಕೆ ಭಂಡಾರ ಲೇಪಿಸಿ ಕೊಂಡು ಮತ್ತೆ ಬಡಿದಾಟಕ್ಕೆ ಇಳಿಯುತ್ತಾರೆ. ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಬಡಿದಾಟದ ಬಡಿಗೆ ಜಾತ್ರೆಯಲ್ಲಿ ಭಾಗವಹಿಸಿದ್ದರು.

ಸಿಂಹಾಸನ ಕಟ್ಟೆಗೆ ಕರೆದುಕೊಂಡು ಬಂದು ಕುದುರೆ ಉತ್ಸವ ಮೂರ್ತಿಗ ಳನ್ನು ಕೂಡಿಸಿದ ನಂತರ, ಭಕ್ತರು ಭಜತಾರವನ್ನು ಎರಚಿ ಭಕ್ತಿ ಭಾವ ಸಮರ್ಪಿಸಿಕೊಳ್ಳುತ್ತಾರೆ.

ನೆರಣಿಕೆ: ದೇವರಗುಡ್ಡ ಮಾಳ ಮಲ್ಲೇಶ್ವರ ‘ಕಾರಣಿಕ’
‘ಬಹುಪರಾಕ್’
ದೇವರಗುಡ್ಡದಲ್ಲಿ ಆರ್ಚಕ ಗಿರಿಮಲ್ಲಯ್ಯ ನುಡಿದ ವರ್ಷದ ಕಾರಣಿಕ ನುಡಿ 9 ದಿನಗಳ ಉಪವಾಸ ವ್ರತ ಆಚರಿಸಿ ಬೆಳಗಿನ ಜಾವ ಗುಡ್ಡದ ಎದುರು ಬಸವಣ್ಣ ದೇವಸ್ಥಾನದ ಮೇಲೆ ನಿಂತು ಹೇಳುವ ಕಾರಣಿಕ ಕೇಳಲು ಲಕ್ಷಾಂತರ ಭಕ್ತರು ಕಾತುರದಿಂದ ಕಾದಿದ್ದರು. ಇಲ್ಲಿ ಹೇಳುವ ಕಾರ ಣಿಕ ಅವಲಂಬಿಸಿ ದೇಶದ ಸ್ಥಿತಿಗತಿ ಮತ್ತು ಇಲ್ಲಿನ ರೈತರು ತಮ್ಮ ಬೆಳೆಗಳಿಗೆ ಮಾರುಕಟ್ಟೆ ದರಗಳ ಬಗ್ಗೆ ಮುನ್ಸೂಚನೆ ಪಡೆಯುತ್ತಾರೆ.

ಈ ಬಾರಿ ಮಲ್ಲಿಗೆ ಹೂನಿಂದ ಗಂಗೆಮಾಳ ನಿಂತಾಳ.
7900 ನಗಹಳ್ಳಿ, 3400 ಉಕ್ಕಳ ಜ್ವಾಳ 3 – 6, 6 ವರ್ಣಾದಿತುಲೇ ಬಹುಪಾರಕ್ ಎಂದು ನುಡಿದಿದ್ದು.
ಹತ್ತಿಬೆಳೆ ಉತ್ತಮವಾಗಿ ಬರುತ್ತದೆ. ಮಳೆ ಸ್ಥಿರವಾಗಿದೆ. ನಗಳ್ಳಿ (ಹತ್ತಿ) ಗೆ ರೂ.7900 ಜೋಳಕ್ಕೆ ರೂ.3400 ಬೆಲೆ ಸಿಗುತ್ತದೆ. 3 – 6, 6 ವರ್ಣಾದೀತು ಎಂದರೆ ರಾಜಕೀಯವಾಗಿ ಕೆಳಗಿನವರು ಮೇಲೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಈ ಕಾರಣಿಕ ಅವಲಂಬಿಸಿ ಸುತ್ತಮುತ್ತಲಿನ ರೈತರು ತಮ್ಮ ಬೆಳೆಗಳಿಗೆ ಮಾರುಕಟ್ಟೆ ದರ ಕಂಡುಕೊಳ್ಳುತ್ತಾರೆ. ಈ ವರ್ಷ ಯಾವ ಬೆಳೆ ಉತ್ತಮವಾಗಿ ಬರುತ್ತದೆ ಎನ್ನುವುದನ್ನು ಲೆಕ್ಕಹಾಕಿ ಬೆಳೆಯುತ್ತಾರೆ. ದೇಶ ಮತ್ತು ರಾಜ್ಯದಲ್ಲಿ ಸಂಭವಿಸಬಹುದಾದ ಘಟನೆಗಳನ್ನಈ ಭವಿಷ್ಯವಾಣಿಯ ಮೂಲಕ ತಿಳಿದುಕೊಳ್ಳುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments