ವರದಿ : ಜಿ ಎಂ ಬಸಯ್ಯ
ಕುರುಗೋಡು ತಾಲೂಕಿನ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮದ್ಯ ಮಾರಾಟ ಮಾಡದಂತೆ ಪೋಲೀಸ್ ಇಲಾಖೆ ವತಿಯಿಂದ ಕಟ್ಟೆಚ್ಚರ ವಹಿಸಲಾಗಿತ್ತು . ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಗುರುವಾರ ದಾಳಿ ಮಾಡಿದ ಕುರುಗೋಡು ಪೊಲೀಸರು ಪಟ್ಟಣದಲ್ಲಿ ಸುಮಾರು 57,875 ರೂಪಾಯಿ ಮೌಲ್ಯದ 107 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಪಿಎಸ್ಐ ಸುಪ್ರೀತ್ ವಿರುಪಕ್ಷಪ್ಪ ಮತ್ತು ಸಿಬ್ಬಂದಿ, ಪಟ್ಟಣದಲ್ಲಿ ದಾಳಿ ಮಾಡಿದ್ದು, ಪರವಾನಿಗೆ ಇಲ್ಲದೇ, ಸಾರ್ವಜನಿಕರಿಗೆ ಮಾರಾಟ ಮಾಡಲು ಶೇಖರಿಸಿದ್ದ ವಿವಿಧ ಕಂಪನಿಯ 107ಲೀಟರ್ ಮದ್ಯವಶಪಡಿಸಿಕೊಂಡಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಸುಪ್ರೀತ್ ವಿರುಪಕ್ಷಪ್ಪ ತಿಳಿಸಿದ್ದಾರೆ.
