ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು : ಹಗರಿಬೊಮ್ಮನಹಳ್ಳಿ ಕಾರು ಚಾಲಕ ವಿಶ್ವನಾಥ್ ಹೂಗಾರ್ ಅವರ ಸುಪುತ್ರ ಬಾಲಕ ರೀತಶ್ ಕುಮಾರ್ ತನ್ನ 10ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾನೆ. ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಹಂಬಲ ಹೊಂದಿರುವ ಬಾಲಕನಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಹಾರೈಕೆಗಳು ಹರಿದುಬಂದಿವೆ.
ಶಾಸಕರ ಸರಳತೆಗೆ ಸಾಕ್ಷಿ:
ಬಾಲಕನ ಹುಟ್ಟುಹಬ್ಬದ ವಿಷಯ ತಿಳಿದು ಶಾಸಕರಾದ ಶ್ರೀ ನೇಮೀರಾಜ್ ನಾಯ್ಕ್ ರವರು ತಮ್ಮ ಸರಳತೆಯನ್ನು ಮೆರೆದು ಸಣ್ಣ ಬಾಲಕನ ಹುಟ್ಟುಹಬ್ಬಕ್ಕೆ ಖುದ್ದಾಗಿ ಶಾಲು ಓದಿಸಿ ಹಾರ ಹಾಕಿ ಸನ್ಮಾನಿಸಿ ಶುಭ ಕೋರಿದ್ದಾರೆ.
ರೀತಶ್ನ ಪೊಲೀಸ್ ಆಗುವ ಕನಸನ್ನು ಪ್ರೋತ್ಸಾಹಿಸಿದ ಶಾಸಕರು, “ಮುಂದಿನ ದಿನಗಳಲ್ಲಿ ನೀನು ಕೇವಲ ಪೊಲೀಸ್ ಮಾತ್ರವಲ್ಲದೆ, ದೊಡ್ಡ ಐಎಎಸ್ (IAS) ಆಫೀಸರ್ ಅಥವಾ ಎಸ್ಪಿ (SP) ಆಗಿ ದೇಶದ ಸೇವೆ ಮಾಡುವಂತಾಗಬೇಕು” ಎಂದು ಬೆನ್ನುತಟ್ಟಿ ಹರಸಿದರು.
ಕಡುಬಡತನದ ನಡುವೆಯೂ ಮಗನ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ತಂದೆ ವಿಶ್ವನಾಥ್ ಹೊಗರ ಅವರ ಶ್ರಮವನ್ನು ಶಾಸಕರು ಶ್ಲಾಘಿಸಿದರು. ಶಾಸಕರ ಈ ಸರಳತೆ ಮತ್ತು ಪ್ರೋತ್ಸಾಹದ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕೊಟ್ರಪ್ಪ, ಶಿವರಾಜ್, ಕೊಟ್ರೇಶ್, ಪರಶುರಾಮ್ಎಸ್ ಸೋಯಬ್ ವಲಿ ಉಪಸ್ಥಿತರಿದ್ದರು.
