ವರದಿ :ಶಿವರಾಜ್ ಕನ್ನಡಿಗ:
ಕೊಟ್ಟೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಪದವೀಧರರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿವಾಸಿ ಶ್ರೀ ಅಕ್ಷಯ್ ಸತ್ಯಪ್ಪನವರ್ ಅವರನ್ನು ನೇಮಕ ಮಾಡಲಾಗಿದೆ.
ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ, ಪದವೀಧರರ ವಿಭಾಗದ ರಾಜ್ಯ ಅಧ್ಯಕ್ಷರಾದ ಎ.ಎನ್. ನಟರಾಜ್ ಗೌಡ ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.
ಪಕ್ಷದ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಾ, ಸಂಘಟನೆಯನ್ನು ಬಲಪಡಿಸಲು ಮತ್ತು ಪದವೀಧರರ ವಿಭಾಗದ ಸಕ್ರಿಯ ಬೆಳವಣಿಗೆಗೆ ಶ್ರಮಿಸುವಂತೆ ನೂತನ ಕಾರ್ಯದರ್ಶಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಕೊಟ್ಟೂರಿನ ಎಲ್. ಬಿ. ಬಡಾವಣೆಯ ನಿವಾಸಿಯಾದ ಅಕ್ಷಯ್ (ತಂದೆ ಅಶೋಕ್ ಸತ್ಯಪ್ಪನವರ್) ಅವರ ನೇಮಕಾತಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
