【ವರದಿ:ಬಸಯ್ಯ ಜಿಎಂ】
ಕುರುಗೋಡು ವೃತ್ತ ವ್ಯಾಪ್ತಿಯಲ್ಲಿ ನಡೆದ ವಿವಿಧ ಸ್ವತ್ತಿನ ಪ್ರಕರಣಗಳನ್ನು ಪತ್ತೆಹಚ್ಚಲು ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಶ್ರೀ ಎಸ್.ಎಂ. ಬಾಳನಗೌಡ (ಸಿಪಿಐ) ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ತಂಡದಲ್ಲಿ ಕುರುಗೋಡು ಪೊಲೀಸ್ ಠಾಣೆಯ ಪಿಎಸ್ಐ ವಾಣಿ, ಎಎಸ್ಐ ಎಂ. ಶಕ್ಷಾವಲಿ ಹಾಗೂ ಸಿಬ್ಬಂದಿಗಳಾದ ರಾಜಶೇಖರ, ವಿಜಯಕುಮಾರ್, ರೇವಣಸಿದ್ದೇಶ್ವರ, ಆಂಜಿನಿ ಮತ್ತು ಪೀರಾನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು. ಮೇಲಾಧಿಕಾರಿಗಳಾದ ಪೊಲೀಸ್ ಉಪಅಧೀಕ್ಷಕರಾದ ಪ್ರಸಾದ್ ಗೋಖಲೆ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಪೊಲೀಸರು ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆಹಚ್ಚಿ, ಕಳುವಾದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಗಳ ವಿವರ ಹೀಗಿದೆ:
1) ಗುನ್ನೆ ನಂ: 25/2026 (ಕಲಂ 300(2) ಬಿ.ಎನ್.ಎಸ್.)
ಸುಮಾರು ₹1,50,000 ಮೌಲ್ಯದ ಕಾಪರ್ ವೈರ್ ಪತ್ತೆಯಾಗಿದ್ದು, ಮೂವರು ಆರೋಪಿತರಾದ ಮೌನೇಶ್ (ತಂದೆ ಗಂಗಾಧರ), ಮೌಲಾಲಿ (ತಂದೆ ಹೊನ್ನೂರಸ್ವಾಮಿ) ಮತ್ತು ಉಪ್ಪಾರ್ ರಾಜ (ತಂದೆ ಯಲ್ಲಪ್ಪ) ಬಂಧಿಸಲಾಗಿದೆ.
2) ಗುನ್ನೆ ನಂ: 75/2026 (ಕಲಂ 303(2) ಬಿ.ಎನ್.ಎಸ್.)
₹4,50,000 ಮೌಲ್ಯದ ನಾಲ್ಕು ಎಮ್ಮೆಗಳು ಪತ್ತೆಯಾಗಿದ್ದು, ಬಸವರಾಜ (ತಂದೆ ಮೂಕಪ್ಪ) ಮತ್ತು ರವಿಕುಮಾರ್ (ತಂದೆ ದೇವದಾಸ್) ಎಂಬ ಇಬ್ಬರನ್ನು ಬಂಧಿಸಲಾಗಿದೆ.
3) ಗುನ್ನೆ ನಂ: 88/2026 (ಕಲಂ 303(2) ಬಿ.ಎನ್.ಎಸ್.)
ಸುಮಾರು ₹3,80,000 ಮೌಲ್ಯದ ನಾಲ್ಕು ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡು, ಪಾರೂಕ್ ಅಲಿಯಾಸ್ ಮೆಕ್ಯಾನಿಕ್ ಫಾರೂಕ್ (ತಂದೆ ಮಹಮ್ಮದ್ ರವಿ, ಗಂಗಾವತಿ) ಬಂಧಿಸಲಾಗಿದೆ.
4) ಗುನ್ನೆ ನಂ: 42/2026 (ಕಲಂ 303(2), 316(2), 318(2) ಬಿ.ಎನ್.ಎಸ್.)
ಸುಮಾರು ₹2,20,000 ಮೌಲ್ಯದ ಲಾರಿಯ 10 ಟೈರ್ಗಳನ್ನು ವಶಪಡಿಸಿಕೊಂಡಿದ್ದು, ಓಡಿಶಾ ಮೂಲದ ಎಂ.ಡಿ. ಬಿಲಾಲ್ (ತಂದೆ ಸಾಬೀದ್ ಹುಸೇನ್) ಬಂಧಿಸಲಾಗಿದೆ.
ಒಟ್ಟು ನಾಲ್ಕು ಪ್ರಕರಣಗಳಲ್ಲಿ ಸುಮಾರು ₹12 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು 7 ಆರೋಪಿತರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮೇಲಾಧಿಕಾರಿಗಳು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
