ಬಳ್ಳಾರಿ,ಜೂ.13:ಜಾಗತಿಕ ಕ್ರೀಡಾಕೂಟವಾದ ‘ಫೀಫಾ’ ದ ಆಯೋಜನೆ, ಸಂಘಟನೆ, ನಿಯಮಗಳು ಪ್ರತಿ ಕ್ರೀಡಾಪಟುವಿಗೆ ನೈಜ ಅನುಭವ ಹಾಗೂ ಜೀವನಪಾಠ ಹೇಳಿಕೊಡುತ್ತವೆ ಎಂದು ವಿವಿಯ ಕುಲಸಚಿವ ಪ್ರೊ ವಿ ಲೋಕೇಶ್ ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ವತಿಯಿಂದ ವಿಶ್ವವಿದ್ಯಾಲಯದಲ್ಲಿ “ಫಿಫಾ ವಿಶ್ವಕಪ್ 2026’’ ರ ನಿಮಿತ್ತ ನಡೆಸಿದ ವಿಭಾಗೀಯ ಪುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಶನಿವಾರ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಗುಂತಕಲ್ ರೈಲ್ವೆ ವಿಭಾಗದ ಹಿರಿಯ ತಾಂತ್ರಿಕರು ಹಾಗೂ ಪುಟ್ಬಾಲ್ ಕ್ರೀಡಾಪಟು ಆಗಿರುವ ಚಂದ್ರಮೌಳಿ ಅವರು ಭಾಗವಹಿಸಿ ಮಾತನಾಡಿ, ಕ್ರೀಡೆಯನ್ನು ಪ್ರತಿಯೋಬ್ಬರು ಧನಾತ್ಮಕವಾಗಿ ಸ್ವೀಕರಿಸಬೇಕು ಹಾಗೂ ಕ್ರೀಡಾ ನಿಯಮಗಳನ್ನು ಪಾಲಿಸುವುದರ ಮೂಲಕ ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು ಎಂದರು.
ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸ್ಪೂರ್ತಿ ಕೆ.ಜಿ. ಅವರು ಮಾತನಾಡಿ, ನಿರಂತರವಾಗಿ ಕ್ರೀಡೆಯನ್ನು ಆಡುವುದರಿಂದ ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಕಾಣಬಹುದು ಹಾಗೂ ಉತ್ತಮ ತರಬೇತಿ ಪಡೆಯುವುದರ ಮೂಲಕ ಕ್ರೀಡಾ ಸಾಧನೆ ಮಾಡಬಹುದು ಎಂದರು.
ವಿಭಾಗದ ಮುಖ್ಯಸ್ಥ ಡಾ.ಸಂಪತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಶಶಿಧರ ಕೆಲ್ಲೂರ ಸ್ವಾಗಿತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ರಾಜೇಶ್ ವಂದಿಸಿದರು.
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಎಂ.ಪಿ.ಇಡಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಪುಟ್ಬಾಲ್ ಕ್ರೀಡಾಕೂಟದಲ್ಲಿ ಅಭಿನವ ಬಿಂದ್ರಾ ತಂಡದವರು ಚಾಂಪಿಯನ್ ಆಗಿ ಟ್ರೋಫಿ ಸ್ವೀಕರಿಸಿದರು.
