ಬಳ್ಳಾರಿ,ಜೂ.16:ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವತಿಯಿಂದ ಜೂನ್ ತಿಂಗಳಿನಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಆಲಿಕೆ ಹಾಗೂ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಲೋಕಾಯುಕ್ತ ಬಳ್ಳಾರಿಯ ಪೊಲೀಸ್ ಅಧೀಕ್ಷಕ ವಾಸುದೇವರಾಮ್ ಎನ್. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಎಸ್.ಎಸ್.ಬೀಳಗಿ, ಪೊಲೀಸ್ ನಿರೀಕ್ಷಕರುಗಳಾದ ಸುರೇಶ್ ಎಂ.ಭಾವಿಮನಿ ಮತ್ತು ಗುರಣ್ಣ ಎಸ್.ಹೆಬ್ಬಾಳ್ ಅವರ ನೇತೃತ್ವದಲ್ಲಿ ಈ ಸಭೆಗಳು ನಡೆಯಲಿವೆ.
ಸಾರ್ವಜನಿಕರು ಗೌರವಾನ್ವಿತ ಲೋಕಾಯುಕ್ತರಿಗೆ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ನಮೂನೆ/ಫಾರಂ ನಂ: 1 ಮತ್ತು 2 ಗಳನ್ನು ಸಹ ನೀಡಲಾಗುತ್ತದೆ.
ತಾಲ್ಲೂಕುವಾರು ಸಭೆ:
ಸಂಡೂರು ತಾಲ್ಲೂಕು: ಜೂ.19 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ಸಂಡೂರಿನ ತಹಶೀಲ್ದಾರರ ಕಚೇರಿ ಸಭಾಂಗಣ.
ಕಂಪ್ಲಿ ತಾಲ್ಲೂಕು: ಜೂ.19 ರಂದು ಮಧ್ಯಾಹ್ನ 03 ರಿಂದ ಸಂಜೆ 5.30 ಗಂಟೆಯ ವರೆಗೆ ಕಂಪ್ಲಿಯ ತಹಶೀಲ್ದಾರರ ಕಚೇರಿಯಲ್ಲಿರುವ ಸಭಾಂಗಣ.
ಸಿರುಗುಪ್ಪ ತಾಲ್ಲೂಕು: ಜೂ.20 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸಿರುಗುಪ್ಪದ ಸಿ.ಡಿ.ಪಿ.ಓ ಕಚೇರಿಯಲ್ಲಿರುವ ಸಭಾಂಗಣ.
ಕುರುಗೋಡು ತಾಲ್ಲೂಕು: ಜೂ.20 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕುರುಗೋಡಿನ ತಹಶೀಲ್ದಾರರ ಕಚೇರಿಯಲ್ಲಿರುವ ಸಭಾಂಗಣ.
ಬಳ್ಳಾರಿ ತಾಲ್ಲೂಕು: ಜೂ.23 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬಳ್ಳಾರಿಯ ಹೊಸ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಭಾಂಗಣ.
ಸಾರ್ವಜನಿಕರಲ್ಲಿ ವಿನಂತಿ:
ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳಿದ್ದಲ್ಲಿ, ಸಾರ್ವಜನಿಕರು ಮೇಲ್ಕಂಡ ದಿನಾಂಕ, ಸಮಯ ಹಾಗೂ ನಿಗದಿತ ಸ್ಥಳಗಳಲ್ಲಿ ಹಾಜರಿದ್ದು, ತಮ್ಮ ಅರ್ಜಿಗಳನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿಯ ಪೊಲೀಸ್ ಅಧೀಕ್ಷಕ ವಾಸುದೇವರಾಮ್ ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
