ವರದಿ :ಜಿ ಎಂ ಬಸಯ್ಯ
ಕುರುಗೋಡು: ಬೈಕ್ ನಿಯಂತ್ರಣ ತಪ್ಪಿ ಕಾಲುವೆ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕುರುಗೋಡು ತಾಲೂಕಿನ ಸೋಮಲಾಪುರ ಗ್ರಾಮ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಸೋಮಲಾಪುರ ಗ್ರಾಮದ ಎ. ಮಾರೇಶ (41) ಎಂದು ಗುರುತಿಸಲಾಗಿದೆ. ಮಾರೇಶ ಅವರು ಕುರುಗೋಡಿನಿಂದ ಸೋಮಲಾಪುರ ಗ್ರಾಮದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅತಿವೇಗದಿಂದ ವಾಹನ ಚಲಾಯಿಸುತ್ತಿದ್ದ ಕಾರಣ ನಿಯಂತ್ರಣ ಕಳೆದುಕೊಂಡು ಕಾಲುವೆ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ಅವರು ಎಲ್‌ಎಲ್‌ಸಿ ಕಾಲುವೆಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಎಸ್ಐ ಸುಪ್ರೀತ್ ವಿರುಪಾಕ್ಷಪ್ಪ ತಿಳಿಸಿದ್ದಾರೆ.
