Wednesday, August 12, 2026
HomeDistrictsBidarಕಪೀಲ ಹೂಗಾರ ಗಾದಗಿ ಪದಗ್ರಹಣ ಸಮಾರಂಭ ಆ.13ಕ್ಕೆ

ಕಪೀಲ ಹೂಗಾರ ಗಾದಗಿ ಪದಗ್ರಹಣ ಸಮಾರಂಭ ಆ.13ಕ್ಕೆ

[ವರದಿ : ಭೀಮಾಶಂಕರ್ ಹುಗಾರ್]
ಬೀದರ: ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ (ರಿ.), ಬೆಂಗಳೂರು ಜಿಲ್ಲಾ ಘಟಕ ಬೀದರ ವತಿಯಿಂದ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಪೀಲ ಹೂಗಾರ ಗಾದಗಿ ಅವರ ಪದಗ್ರಹಣ ಸಮಾರಂಭ ಆ.13ರಂದು ಬೆಳಿಗ್ಗೆ 11.15ಕ್ಕೆ ನಗರದ ಚಿದ್ರಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಪರಮ ಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ರಾಜ್ಯ ಗೌರವಾಧ್ಯಕ್ಷರು, ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ (ರಿ.), ಬೆಂಗಳೂರು ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಸಂಘದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಹೂಗಾರ ಸಮಾಜದ ಬೀದರ ಜಿಲ್ಲಾಧ್ಯಕ್ಷ ಚಂದ್ರಕಾಂತ ಹೂಗಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹೂಗಾರ ಸಮಾಜದ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಹಣಮಂತಪ್ಪ ಹೂಗಾರ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹೂಗಾರ ಸಮಾಜ ಬೆಂಗಳೂರು ರಾಜ್ಯ ಮಹಿಳಾಧ್ಯಕ್ಷೆ ಭಾರತಿ ಶ್ರೀಶೈಲ ಬುಯ್ಯಾರ, ಬೀದರದ ವಕೀಲರು ಹಾಗೂ ಸಮಾಜದ ಮುಖಂಡ ರವಿಕಾಂತ ಹೂಗಾರ ಬೆಳಕೇರಾ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಮಾರುತೆಪ್ಪ ಹೂಗಾರ ಹಾಗೂ ಶ್ರೀಮತಿ ಶ್ರೀದೇವಿ ಬಸವರಾಜ ಹೂಗಾರ ಅವರು ಭಾಗವಹಿಸಲಿದ್ದಾರೆ.

ಹೂಗಾರ ಸಮಾಜ ಬೀದರ ದಕ್ಷಿಣ ಅಧ್ಯಕ್ಷ ಶ್ರೀನಿವಾಸ ಹೂಗಾರ ಅವರು ಸ್ವಾಗತಿಸಲಿದ್ದು, ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದು ಫುಲಾರಿ ಹಾಗೂ ಮಹಿಳಾ ಸಹ ಕಾರ್ಯದರ್ಶಿ ಶ್ರೀಮತಿ ಪರಿಮಳಾ ಹೂಗಾರ ಅವರು ನಿರೂಪಣೆ ಮಾಡಲಿದ್ದಾರೆ. ಬೀದರ ನಗರಾಧ್ಯಕ್ಷ ಸತೀಶ ಹೂಗಾರ ಮೀನಕೇರಾ ಅವರು ವಂದನಾರ್ಪಣೆ ಸಲ್ಲಿಸಲಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ಹೂಗಾರ ಸಮಾಜದ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments