[ವರದಿ : ಶಿವರಾಜ್ ಕನ್ನಡಿಗ]
ಈ ಹಿಂದೆ ಹೊಸಹಳ್ಳಿ ಪೊಲೀಸ್ ಠಾಣೆಯು ಕೊಟ್ಟೂರು ಪೊಲೀಸ್ ವೃತ್ತಕ್ಕೆ ಸೇರಿತ್ತು. ಹೊಸಹಳ್ಳಿ ಮೂಲತಃ ಕೂಡ್ಲಿವಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಕೊಟ್ಟೂರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುತ್ತದೆ. ಅಲ್ಲದೇ ಹೊಸಹಳ್ಳಿಯಿಂದ ಕೊಟ್ಟೂರಿಗೆ ೫೫ ಕಿ.ಮೀ. ದೂರದಲ್ಲಿ ಮತ್ತು ಕೂಡ್ಲಿಗಿ ೨೫ ಕಿ.ಮೀ. ಅಂತರವಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಕೊಟ್ಟೂರಿಗೆ ಓಡಾಡಲು ಸಾರಿಗೆ ಸಂಪರ್ಕ ಕಡಿಮೆಯಿದ್ದು, ಕೂಡ್ಲಿಗಿಗೆ ಬಸ್ ಸೌಲಭ್ಯ ಹೆಚ್ಚಾಗಿರುತ್ತದೆ.
ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಕೊಟ್ಟೂರು ವೃತ್ತ ಕಛೇರಿಯನ್ನು ರದ್ದು ಮಾಡಿ, ಕೊಟ್ಟೂರಿನ ಪಿ.ಎಸ್.ಐ. ಹುದ್ದೆಯನ್ನು ಪಿ.ಐ. ಹುದ್ದೆಗೆ ಮೇಲ್ದರ್ಜೆಗೇರಿಸಿ, ಕೊಟ್ಟೂರು ವೃತ್ತವನ್ನು ರದ್ದು ಮಾಡಿ ಆದೇಶಿಸಿದ್ದಾರೆ.

ಕೊಟ್ಟೂರು ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದಲ್ಲದೇ ತಾಲ್ಲೂಕು ಮಟ್ಟದ ಎಲ್ಲಾ ಸರ್ಕಾರಿ ಕಛೇರಿಗಳಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಹೊಂದಿರುತ್ತದೆ.
ಅಲ್ಲದೇ ಪ್ರತಿವರ್ಷ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಲಕ್ಷಾಂತರ ಜನರು ಬಂದು ಹೋಗುತ್ತಿದ್ದು, ಪಿ.ಎಸ್.ಐ. ಹುದ್ದೆಯನ್ನು ಪಿ.ಐ. ಹುದ್ದೆಗೆ ಉನ್ನತೀಕರಿಸಿ ಆದೇಶಿಸಲಾಗಿದೆ. ಹೊಸಹಳ್ಳಿ ಪೊಲೀಸ್ ವೃತ್ತವನ್ನು ಕೂಡ್ಲಿಗಿಗೆ ಸ್ಥಳಾಂತರಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
