ಕಂಪ್ಲಿ: ಆ 5, ಬಳ್ಳಾರಿ ಜಿಲ್ಲೆ ಕಂಪ್ಲಿಯ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ, ಶ್ರೀಮತಿ ಸೌಮ್ಯಶ್ರೀ ಮೋಹನ್ ಕುಮಾರ್ ದಂಪತಿಯ ಪುತ್ರ ತನವ್ ಮೋಹನ್ ಕುಮಾರ್ ನು ತನ್ನ 3 ವರ್ಷ 10 ತಿಂಗಳ ವಯಸ್ಸಿನಲ್ಲಿ 600 ಮೀಟರ್ ಓಟವನ್ನು 5 ನಿಮಿಷ 44 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿರುವುದ್ದರಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿದೆ,



ಪ್ರಸ್ತುತ ಬೆಂಗಳೂರಿನ ನ್ಯಾಯಾಂಗ ಬಡಾವಣೆಯ ಜ್ಞಾನ ದೀಪಿಕಾ ಭಾರ್ಗವಿ ಎಜುಕೇಶನಲ್ ಟ್ರಸ್ಟ್ ಶಾಲೆಯಲ್ಲಿ ಪ್ರಿ ಕೆಜಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನವ್ ಮೋಹನ್ ಕುಮಾರ್, ಜೂಲೈ 5 ರಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಓಟ ನಡೆಸಿರುವುದನ್ನು ಪರಿಗಣಿಸಿ ಐಬಿಆರ್ ಸಂಸ್ಥೆಯ ಮಂಡಳಿಯು ಜೂಲೈ 31 ರಂದು ಪರಿಶೀಲಿಸಿ ಧೃಢೀಕರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ಸೇರಿಸಲಾಗಿದ್ದು ಶೀಘ್ರದಲ್ಲಿ ಅಧಿಕೃತ ಪ್ರಮಾಣ ಪತ್ರ, ಪದಕ, ದಾಖಲೆ ಪುಸ್ತಕವನ್ನು ಕಳಿಸಲಾಗುವುದೆಂದು ಐಬಿಆರ್ ಸಂಸ್ಥೆಯು ತಿಳಿಸಿದೆ!
