Thursday, August 6, 2026
HomeDistrictsBallariಕೈಕೊಟ್ಟ ಮುಂಗಾರು: ಐದು ಎಕರೆ ಮೆಕ್ಕೆಜೋಳ ಬೆಳೆ ಟ್ರಾಕ್ಟರ್‌ನಿಂದ ನಾಶ ಮಾಡಿದ ರೈತ

ಕೈಕೊಟ್ಟ ಮುಂಗಾರು: ಐದು ಎಕರೆ ಮೆಕ್ಕೆಜೋಳ ಬೆಳೆ ಟ್ರಾಕ್ಟರ್‌ನಿಂದ ನಾಶ ಮಾಡಿದ ರೈತ

[ವರದಿ : ಜಿ ಎಂ ಬಸಯ್ಯ ]
ಕುರುಗೋಡು, ಆ. 6: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಹಾಗೂ ನಾಟಿ ಮಾಡಿದ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಮಳೆ ಅಭಾವದಿಂದ ಕೃಷಿ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಡುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಕುರುಗೋಡು ತಾಲೂಕಿನ ಸಮೀಪದ ಎಚ್. ವೀರಾಪುರ ಗ್ರಾಮದ ರೈತ ರಾಜಾಸಾಬ್ ಅವರು ಮಳೆಯನ್ನು ನಂಬಿ ತಮ್ಮ ಐದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ನಾಟಿ ಮಾಡಿದ್ದರು. ಆದರೆ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ, ಕೊನೆಗೆ ಸಾವಿರಾರು ರೂಪಾಯಿ ವೆಚ್ಚದಲ್ಲಿ ಬೆಳೆದ ಬೆಳೆಯನ್ನು ತಾವೇ ಟ್ರಾಕ್ಟರ್‌ನ ಮೂಲಕ ಉಳುಮೆ ಮಾಡಿ ನಾಶಗೊಳಿಸುವ ದುಸ್ಥಿತಿ ಎದುರಾಗಿದೆ.

ಈ ಕುರಿತು ಮಾತನಾಡಿದ ರೈತ ರಾಜಾಸಾಬ್, “ಮೆಕ್ಕೆಜೋಳ ಬೆಳೆಗೆ ಎಕರೆಗೆ ಸುಮಾರು ₹30 ಸಾವಿರದಿಂದ ₹40 ಸಾವಿರದವರೆಗೆ ವೆಚ್ಚವಾಗಿದೆ. ಮಳೆ ಬಾರದ ಕಾರಣ ಬೆಳೆ ಸಂಪೂರ್ಣ ಹಾಳಾಗಿದ್ದು, ಅಪಾರ ನಷ್ಟ ಅನುಭವಿಸುವಂತಾಗಿದೆ. ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ಟ್ರಾಕ್ಟರ್‌ನಿಂದ ಉಳುಮೆ ಮಾಡಿ ನಾಶ ಮಾಡಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ರೈತರ ಸಂಕಷ್ಟದತ್ತ ಗಮನ ಹರಿಸಿ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕೆಂದು ಅವರು ಮನವಿ ಮಾಡಿದರು.

ಮುಂಗಾರು ವೈಫಲ್ಯದಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments