Wednesday, October 21, 2026
HomeDistrictsBallariಮುಂಗಾರು ಬೆಳೆ ಬೆಳೆಯಲು ನೀರು ಕೊಡಿ, ಇಲ್ಲವಾದಲ್ಲಿ ಆ.11ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಕಛೇರಿಗೆ...

ಮುಂಗಾರು ಬೆಳೆ ಬೆಳೆಯಲು ನೀರು ಕೊಡಿ, ಇಲ್ಲವಾದಲ್ಲಿ ಆ.11ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಕಛೇರಿಗೆ ಮುತ್ತಿಗೆ

[ವರದಿ : ಜಿ ಎಂ ಬಸಯ್ಯ]
ಕಂಪ್ಲಿ: ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ಸುಮಾರು 70 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ಕೂಡಲೇ ಜಲಾಶಯದ ಬಲಭಾಗದ ಎಲ್‌ಎಲ್‌ಸಿ, ವಿಜಯನಗರ ಕಾಲುವೆಗಳಿಗೆ ಮತ್ತು ನದಿಗೆ ನೀರು ಹರಿಸುವ ಮೂಲಕ ರೈತರು ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಆ.11ರ ಮಂಗಳವಾರದಂದು ಮುನಿರಾಬಾದ್‌ನ ನೀರಾವರಿ ಸಲಹಾ ಸಮಿತಿಯ ಮುಖ್ಯ ಕೇಂದ್ರ ಕಛೇರಿ(ಐಸಿಸಿ)ಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ತಿಳಿಸಿದರು.

ಅವರು ಶುಕ್ರವಾರ ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ರೈತರ ಸಂಘಟನಾ ಸಭೆಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯವು ರೈತರ ಜೀವನಾಡಿದೆ. ಆದರೆ, ಪ್ರಸ್ತುತವಾಗಿ ಜಲಾಶಯದಲ್ಲಿ ನೀರಿದ್ದರೂ ಸಹ ರೈತರಿಗೆ ನೀಡುತ್ತಿಲ್ಲ. ಈಗಾಗಲೇ ಸಾಕಷ್ಟು ರೈತರು ಸಸಿ ಮಡಿಗಳನ್ನು ಹಾಕಿಕೊಂಡು, ದಿವಸಗಳು ಮುಗಿಸಿ, ಮಡಿಗಳನ್ನು ನಾಶ ಮಾಡಿದ್ದಾರೆ. ರೈತರು ಗೋಳು ಕೇಳುವವರು ಇಲ್ಲದಂತಾಗಿದೆ. ಆ.7ರ ಒಳಗಾಗಿ ಐಸಿಸಿ ಸಭೆ ಕರೆದು, ಬೆಳೆ ಬೆಳೆಯಲು ರೈತರಿಗೆ ನೀರು ಒದಗಿಸಬೇಕೆಂದು ಮನವಿ ಮಾಡಿದ್ದೇವು. ಆದರೆ, ಇದುವರೆಗೂ ಸರ್ಕಾರ, ಅಧಿಕಾರಿಗಳು, ನೀರಾವರಿ ಸಲಹಾ ಸಮಿತಿಯವರಾಗಲಿ ಐಸಿಸಿ ಸಭೆ ಕರೆದಿಲ್ಲ. ಇದರಿಂದ ಗೊತ್ತಾಗುತ್ತದೆ ಇವರಿಗೆ ರೈತರ ಹಿತಬೇಕಾಗಿಲ್ಲ ಎಂಬುವುದು. ಆದ್ದರಿಂದ ಕಂಪ್ಲಿಯಲ್ಲಿ ತುರ್ತಾಗಿ ರೈತರ ಸಭೆ ಕರೆದು, ಆ.11ರಂದು ಮುತ್ತಿಗೆ ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ. ಅಂದಿನ ದಿನದಂದು ಕಂಪ್ಲಿಯ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಿಂದ ಹೋರಾಟ ಆರಂಭಿಸಿ, ಬೈಕ್ ರ‍್ಯಾಲಿ ಮೂಲಕ ಮುನಿರಾಬಾದ್‌ನ ತುಂಗಭದ್ರ ನೀರಾವರಿ ಕಛೇರಿಗೆ ತೆರಳಿ, ಮುತ್ತಿಗೆ ಹಾಕಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ, ರೈತರ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಸರ್ಕಾರಕ್ಕೆ ಎಚ್ಚರಿಕೆ ನೋಡೋಣ ಎಂದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿ.ವಿರೇಶ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ರೈತ ಮುಖಂಡರಾದ ಇಟಗಿ ಶರಣಗೌಡ, ಕೊಟ್ಟೂರು ರಮೇಶ, ಕಾಗಿ ಈರಣ್ಣ, ರವಿಚಂದ್ರ, ವೆಂಕಟರಮಣ, ಪ್ರಕಾಶ, ಶಿವಜಾತ, ನಾಗರಾಜ ಸೇರಿದಂತೆ ರೈತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments