Tuesday, October 20, 2026
HomeDistrictsKalaburagiಬಿದಿರು ಕಾಯಕದ ಶಿವಶರಣ ಮೇದಾರ ಕೇತಯ್ಯ ಕುರಿತು ಉಪನ್ಯಾಸ ಕಾರ್ಯಕ್ರಮ

ಬಿದಿರು ಕಾಯಕದ ಶಿವಶರಣ ಮೇದಾರ ಕೇತಯ್ಯ ಕುರಿತು ಉಪನ್ಯಾಸ ಕಾರ್ಯಕ್ರಮ

[ವರದಿ : ಭೀಮಾಶಂಕರ್ ಹೂಗಾರ್]
ಕಲಬುರಗಿ, ಆ. 7: ನಗರದ ಅಡ್ವೋಕೇಟ್ ಕಾಲನಿಯ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಇದೇ ಶನಿವಾರ (ಆಗಸ್ಟ್ 8) ಸಂಜೆ 6.30 ಗಂಟೆಗೆ “ಬಿದಿರು ಕಾಯಕದ ಶಿವಶರಣ ಮೇದಾರ ಕೇತಯ್ಯ” ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕರು ಹಾಗೂ ಕಲಬುರಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಶ್ರೀ ಭೀಮಣ್ಣ ಬೋನಾಳ ಅವರು ಉಪನ್ಯಾಸ ನೀಡಲಿದ್ದು, ಶಿವಶರಣ ಮೇದಾರ ಕೇತಯ್ಯ ಅವರ ಜೀವನ, ಕಾಯಕ ತತ್ವ, ಸಮಾಜಕ್ಕೆ ನೀಡಿದ ಸಂದೇಶ ಹಾಗೂ ಅವರ ಆದರ್ಶಗಳ ಕುರಿತು ಬೆಳಕು ಚೆಲ್ಲಲಿದ್ದಾರೆ.

ಈ ಉಪನ್ಯಾಸ ಕಾರ್ಯಕ್ರಮದ ಪ್ರಯೋಜನವನ್ನು ಕಲಬುರಗಿ ನಗರದ ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶ್ರೀ ಮಂಜುನಾಥ ಜೇವರ್ಗಿ, ಕಾರ್ಯದರ್ಶಿ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments