Friday, August 7, 2026
HomeDistrictsBallariಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ : ಜೆ.ಎನ್.ಗಣೇಶ

ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ : ಜೆ.ಎನ್.ಗಣೇಶ

[ವರದಿ : ಜಿ ಎಂ ಬಸಯ್ಯ ]
ಕಂಪ್ಲಿ: ಪಕ್ಷದಲ್ಲಿ ಶಿಸ್ತು ಪ್ರಮುಖ ವಾಗಿದ್ದು, ಕ್ಷೇತ್ರದ ಜನತೆಯ ಅಭಿಮಾನಿಗಳು ಕಂಪ್ಲಿಯಿಂದ ಹೈಕಮಾಂಡ್ ವರೆಗೆ ನಮಗೆ ಸಚಿವ ಸ್ಥಾನಕ್ಕಾಗಿ ಧ್ವನಿ ಮಾಡುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಮುಂದಿನ ದಿನದಲ್ಲಿ ಸಚಿವ ಸ್ಥಾನ ನೀಡಿದರೆ, ಸ್ವೀಕರಿಸುವೆ. ಪಕ್ಷದ ನಿರ್ಧಾರಕ್ಕೆ ಸದಾ ಬದ್ಧ ಎಂದು ಶಾಸಕ ಜೆ.ಎನ್.ಗಣೇಶ ಸ್ಪಷ್ಟಪಡಿಸಿದರು.

ಅವರು ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಶಾಸಕರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ನೀಡುವ ಪ್ರತಿಯೊಂದು ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸಲಾಗುವುದು. ಬಳ್ಳಾರಿ, ವಿಜಯನಗರ,‌ ಕೊಪ್ಪಳ, ರಾಯಚೂರು ಸೇರಿದಂತೆ ಕರ್ನಾಟಕ, ಆಂಧ್ರ, ತೆಲಂಗಾಣದ ಮೂರು ರಾಜ್ಯದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಮಲೆನಾಡಿನಲ್ಲಿ ಉತ್ತಮ ಮಳೆಯಾದ ಹಿನ್ನಲೆ ಪ್ರಸ್ತುತ 68 ಟಿಎಂಸಿ ನೀರು ಸಂಗ್ರಹವಾಗಿರುವುದು ಸಂತಸ ತಂದಿದೆ.

ಸಿಎಂ ಮತ್ತು ಜಿಲ್ಲಾ ಸಚಿವರ ಗಮನಕ್ಕೆ ಈ ಭಾಗದ ರೈತರ ಸಂಕಷ್ಡ ತಿಳಿಸಿದ್ದು, ಆದಷ್ಟು ಬೇಗ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ರೈತರು ಬೆಳೆ ಬೆಳೆಯಲು ನೀರು ಒದಗಿಸಬೇಕು.ಈಗಾಗಲೇ ರೈತರು ಹಾಕಿರುವ ಸಸಿ ಮಡಿಗಳು ಒಣಗುತ್ರಿದ್ದು, ಇದರಿಂದ ಸಂಕಷ್ಟ ಎದುರಾಗಿದೆ. ಆದ್ದರಿಂದ ಸರ್ಕಾರ, ನೀರಾವರಿ ಸಲಹಾ ಸಮಿತಿಯು ಜಲಾಶಯದ ಮುನಿರಾಬಾದ್ ನಲ್ಲೇ ಪ್ರತಿ ಸಲಹಾ ಸಮಿತಿ ಸಭೆ ನಡೆಸಬೇಕು. ಅಂದಾಗ ಮಾತ್ರ ಈ ಭಾಗದ ರೈತರ ಸಂಕಷ್ಟ ಆಲಿಸಲು ಸಾಧ್ಯ ಎಂದರು.

ಈವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಶ್ರೀನಿವಾಸರಾವ್, ಚನ್ನಬಸವರಾಜಗೌಡ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments