ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು : “ದೇಶದ ಸ್ವತಂತ್ರಕ್ಕಾಗಿ ಅನೇಕ ಮಹನೀಯರು ತಮ್ಮ ತ್ಯಾಗ, ಬಲಿದಾನಗಳನ್ನು ನೀಡಿದ್ದರ ಪ್ರತಿಫಲ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ ನಾಯ್ಕ್ ಹೇಳಿದರು.”
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಏರ್ಪಡಿಸಿದ್ದ ೮೦ನೇ ಸ್ವಾತಂತ್ರೋತ್ಸವದಲ್ಲಿ ಕೆ ನೇಮಿರಾಜ ನಾಯ್ಕ್ ಹಾಗೂ ತಾಲೂಕು ದಂಡಾಧಿಕಾರಿಗಳು ರಾಷ್ಟ್ರ ಧ್ವಜ ಭಾವುಟ ಹಾರಿಸಿ ರಾಷ್ಟ್ರ ಗೀತೆ ನೆರವೇರಿಸಿ ಪಥ ಸಂಚಲನದಲ್ಲಿ ಗಣ್ಯರೊಂದಿಗೆ ಪಾಲ್ಗೊಂಡರು.

ಅವರು ಅಧ್ಯಕ್ಷತೆ ವಹಿಸಿ ವೇದಿಕೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಮಾತನಾಡಿದರು, ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸ್ವಾತಂತ್ರ್ಯ ಕ್ಕೆ ವಿಶಿಷ್ಟ ಸ್ಥಾನವಿದೆ. ಅದು ನೂರು ವರ್ಷಗಳ ಕಾಲ ಲಕ್ಷಾಂತರ ಭಾರತೀಯರು ನಡೆಸಿದ ನಿರಂತರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿದೆ. ಹಾಗಾಗಿ ನಾವು ಪಡೆದ ಸ್ವಾತಂತ್ರ್ಯ ಅನನ್ಯ ಮೌಲ್ಯಗಳ ಸಂಕೇತವಾಗಿದೆ. ಆ ಮೌಲ್ಯಗಳಾದ ರಾಷ್ಟ್ರಾಭಿಮಾನ, ದೇಶಕ್ಕಾಗಿ ಸಮರ್ಪಣ ಮನೋಭಾವ, ಕಾಯಕಶೀಲತೆ,ಪ್ರಮಾಣಿಕತೆ, ಸತ್ಯ, ಶಾಂತಿ, ಅಹಿಂಸೆ ಮುಂತಾದವುಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಾದ ಅಗತ್ಯವಿದೆ.ಎಂದರು
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ ಆನಂದ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಸರುಲ್ಲಾ, ಪಿ ಐ ಡಿ.ದುರುಗಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್, ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯ ಗುರುಗಳಾದ ಕೊಟ್ರಮ್ಮ ಇ ಸಿ ಓ ನಿಂಗಪ್ಪ, ಪ.ಪಂ ಇಂಜಿನಿಯರ್ ಸಿದ್ದಯ್ಯ, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಯೋಗೇಶ್ವರ್ ದಿನ್ನೆ, ಕ.ಸಾ.ಪ ಅಧ್ಯಕ್ಷರಾದ ದೇವರ ಮನೆ ಕೊಟ್ರೇಶ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶಾಲಾ ಕಾಲೇಜು ಸಿಬ್ಬಂದಿ ವರ್ಗದವರು ಮಕ್ಕಳು ಉಪಸ್ಥಿತರಿದ್ದರು.
ಪತ್ರಿಕೋದ್ಯಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಉಪಾಧ್ಯಕ್ಷ ವಾರ್ತಾಭಾರತಿ ಹೆಚ್ ದಾದಾಪೀರ್, ಹೊಸಪೇಟೆ ಧ್ವನಿ ಎಂ ಜಿ ಪ್ರಸಾದ್, ಕಾನಿಪ ಸಂಘದ ವತಿಯಿಂದ ಉದಯವಾಣಿ ರವಿ, ವಿಜಯನಗರ ವಾಣಿ ಹೆಚ್ ನಾಗರಾಜ್ ಮತ್ತು ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೫ ಸಾಧಕರನ್ನು ಸನ್ಮಾ ನಿಸಲಾಯಿತು ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರದಿದ್ದವರನ್ನು ರೋಮಾಂಚನಗೊಳಿಸಿತು. ಕಾರ್ಯಕ್ರಮ ವನ್ನು ಜಗದೀಶ್ ಚಂದ್ರಬೋಸ್ ನಿರೂಪಿಸಿದರು.
