Tuesday, September 29, 2026
HomeDistrictsBallariಬಾದನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗಾಳಿಬಸವರಾಜ ಅವಿರೋಧ ಆಯ್ಕೆ

ಬಾದನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗಾಳಿಬಸವರಾಜ ಅವಿರೋಧ ಆಯ್ಕೆ

[ವರದಿ : ಜಿ ಎಂ ಬಸಯ್ಯ]
ಕುರುಗೋಡು: ಬಾದನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಗಾಳಿಬಸವರಾಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಗಾಳಿಬಸವರಾಜ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಗಿತ್ತು. ಆದರೆ, ಬೇರೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಸ್. ಸೌಮ್ಯ ಅವರು ಗಾಳಿಬಸವರಾಜ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಾಳಿಬಸವರಾಜ ಅವರನ್ನು ಸಂಘದ ನಿರ್ದೇಶಕರು, ಗ್ರಾಮಸ್ಥರು ಹಾಗೂ ಮುಖಂಡರು ಅಭಿನಂದಿಸಿ ಶುಭ ಹಾರೈಸಿದರು. ಸಂಘದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ರೈತರಿಗೆ ಅಗತ್ಯವಿರುವ ಸಹಕಾರ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಮೇಟಿ ಕಲ್ಗುಡೆಪ್ಪ, ದುರ್ಗಾ ಆಗಲೂರಪ್ಪ, ಎ. ಹನುಮಂತಪ್ಪ, ಮುರುಣಿ ಕಲ್ಗುಡೆಪ್ಪ, ಕೆ. ಬಸವರಾಜ, ಎಂ. ರಾಘವೇಂದ್ರ, ಜೆ. ಗಂಗಣ್ಣ, ಚಾನಾಳ್ ಶ್ರೀನಿವಾಸ, ಬೂದ್ಯಾಳ್ ಕರೆಣ್ಣ, ಎ. ನೀಲಮ್ಮ, ಬಿ. ಲಕ್ಷ್ಮಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಮೃತಾಪುರ ಗಂಗಣ್ಣ, ವಿ.ಎಸ್. ಶಿವಶಂಕರ್, ಕೇಶ ತಾಯಪ್ಪ, ಎನ್. ರಂಗಪ್ಪ, ಗಾಳಿ ಮಲ್ಲಯ್ಯ, ಎನ್. ಜಡೆಪ್ಪ, ಟಿ. ನಾಗರಾಜ, ಗಾಳಿ ವೆಂಕಟೇಶ, ಮೇಟಿ ಆಗಲೂರಪ್ಪ, ಯು. ಶಂಕ್ರಪ್ಪ, ಎನ್. ಸೋಮಪ್ಪ, ಎನ್. ಹುಲೆಪ್ಪ, ಗೊರವರ ರಾಜ, ಚಾನಾಳ್ ವೀರಣ್ಣ, ಪವಾಡಿ ಕರಿಬಸಪ್ಪ, ಮೇಟಿ ಗುರು, ಮೇಟಿ ಪೂಜಾರಿ, ಮೇಲ್ಸೀಮೆ ವೀರೇಶ, ದಾಸಾಪುರ ಮುಖಣ್ಣಪ್ಪ, ತೆಕ್ಕಲಕೋಟೆ ವೆಂಕಟೇಶ, ಬಾಸ ಸತ್ಯಪ್ಪ, ಭಾವಿಕಟ್ಟಿ ಯಂಕಪ್ಪ, ಪುರುಗೈ ದೊಡ್ಡ ಬಸಪ್ಪಯ್ಯ, ಪತ್ತಿಪಾಟಿ ಕಿಷ್ಟಯ್ಯ, ಏಳು ರೊಟ್ಟಿ ಓಬಳೇಶ್, ಎಚ್. ವಿರುಪಣ್ಣ, ಮೆಟ್ರಿ ನಿಂಗಪ್ಪ, ಎ. ವೀರೇಶ, ಶಿರಿಗೇರಿ ಆನಂದ, ಮಣೂರು ಬಸವರಾಜ, ಬಸಾಪುರ ಈರಣ್ಣ, ದಾಸರ ನಾಗರಾಜ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

ಚುನಾವಣಾಧಿಕಾರಿ ಎಸ್. ಸೌಮ್ಯ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments