Monday, November 2, 2026
HomeDistrictsBallariನೀರಿಗಾಗಿ ಆಗ್ರಹಿಸಿ ಕಂಪ್ಲಿಯಲ್ಲಿ ಬೃಹತ್ ರೈತರ ಸಭೆ

ನೀರಿಗಾಗಿ ಆಗ್ರಹಿಸಿ ಕಂಪ್ಲಿಯಲ್ಲಿ ಬೃಹತ್ ರೈತರ ಸಭೆ

[ವರದಿ : ಜೆ ಎಂ ಬಸಯ್ಯ]
ಕಂಪ್ಲಿ ;ತುಂಗಭದ್ರಾ ಜಲಾಶಯದ ನೀರನ್ನು ನಂಬಿ ನಾಟಿ ಮಾಡಿರುವ ಭತ್ತವೂ ಸೇರಿದಂತೆ ಬಿತ್ತನೆ ಮಾಡಿದ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ನೀರನ್ನು ಒದಗಿಸುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯಲು ನ.5ರಂದು ಕಂಪ್ಲಿ ಪಟ್ಟಣದಲ್ಲಿ ಕಂಪ್ಲಿ ತಾಲ್ಲೂಕಿನ ರೈತರ ಬೃಹತ್ ಸಭೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಬಿ.ವಿ‌.ಗೌಡ ತಿಳಿಸಿದರು.

ಅವರು ಇಂದು ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಆಂಜಿನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ರೈತರ ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ನಾಟಿ ಮಾಡಿದ ಭತ್ತ,ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳಗಳನ್ನು ಉಳಿಸಿಕೊಳ್ಳಲು ನಮಗೆ ಡಿ.15ರವರೆಗೆ ಕಡ್ಡಾಯವಾಗಿ ಕಾಲುವೆಗಳಿಗೆ ನೀರನ್ನು ಒದಗಿಸಬೇಕು. ಇಲ್ಲದಿದ್ದರೆ,ರೈತರು ಕೋಟ್ಯಾಂತರ ರೂಗಳ ನಷ್ಟವನ್ನು ಅನುಭಿಸಬೇಕಾಗುತ್ತದೆ. ಕಳೆದ ವರ್ಷವೂ ಸಹಿತ ಕ್ರೆಸ್ಟ್ ಗೇಟುಗಳ ಪುನರ್ ಜೋಡಣೆಗಾಗಿ ಎರಡನೇ ಬೆಳೆಗೆ ನೀರನ್ನು ಕೊಟ್ಟಿರಲಿಲ್ಲ. ಈ ವರ್ಷವೂ ಸಹಿತ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗಲಿಲ್ಲ.ಆದರೂ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯವು ಬಹುತೇಕ ಭರ್ತಿಯಾಗಿತ್ತು.ಆದರೆ ಇದೀಗ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಅವಧಿಗೂ ಮುನ್ನ ನೀರು ನಿಲುಗಡೆ ಮಾಡುವುದು ಸರಿಯಲ್ಲ. ಈಗ ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಡಿ.15 ರವರೆಗೆ ನೀರೊದಗಿಸಬೇಕೆಂದು ಆಗ್ರಹಿಸಿದರಲ್ಲದೇ, ಒಙದು ವೇಳೆ ನೀರನ್ನು ಒದಗಿಸದಿದ್ದರೆ, ಲಕ್ಷಾಙತರ ರೈತರು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ ಅವರು ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದಲ್ಲಿ ಡಿ.5ರಂದು ಸಭೆಯನ್ನು ಏರ್ಪಡಿಸಿದ್ದು,
ತಾಲ್ಲೂಕಿನ ಎಲ್ಲಾ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ವಿ.ವೀರೇಶ್, ಮುಖಂಡರಾದ ಬಿ. ಸದಾಶಿವಪ್ಪ.ಸೂಗಪ್ಪ, ಕಾಗಿ ಈರಣ್ಣ, ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments