ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಪಟ್ಟಣದಲ್ಲಿ ರೇಣುಕಾ ಬಡಾವಣೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಕೊಟ್ಟೂರು ಪೊಲೀಸ್ ಯಶಸ್ವಿಯಾಗಿದ್ದಾರೆ.
ಕೊಟ್ಟೂರಿನ ಹಿಂದಿನ ತಿಂಗಳ 21 ರಂದು ರೇಣುಕಾ ಬಡಾವಣೆಯಲ್ಲಿ ಕಳ್ಳತನ ಮಾಡಿದ್ದರೆಂಬ ದೂರಿನಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರಿಂದ ರೂ. ಆರು ಲಕ್ಷ ರೂಪಾಯಿ ಬೆಲೆಬಾಳುವ 50 ಗ್ರಾಂ ತೂಕದ ಬಂಗಾರದ ಆಭರಣ ಮತ್ತು ಇಪ್ಪತ್ತು ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರು ಎಲ್ಲರೂ ಆಂದ್ರಪ್ರದೇಶದವರಾಗಿದ್ದು 1) ಶಿಕಾರಿ ಮದ್ದಲಟ್ಟಿ. ಮದನ್ ತಂದೆ ಶಿಕಾರಿ ಸರ್ದಾರ್ 2) ಗಣೇಶ ತಂದೆ ಪದ್ದಬಾಬು, ಭಾಗ್ಯನಗರ, ಗುಂತಕಲ್ಲು ಪಟ್ಟಣ, ಅನಂತಪುರ ಜಿಲ್ಲೆ. 3) ಬಾಲಚಂದ್ರ ತಂದೆ ಸಿದ್ಧಾರ್ಥ ಭಾಗ್ಯನಗರ, ಗುಂತಕಲ್ಲು ಪಟ್ಟಣ, ಅನಂತಪುರ ಜಿಲ್ಲೆ. 4) ಪಗಲಿ. ಅಶೋಕ ತಂದೆ ಪೆದ್ದಗೋಪಾಲ, ಭಾಗ್ಯನಗರ, ಗುಂತಕಲ್ಲು ಪಟ್ಟಣ, ಅನಂತಪುರ ಜಿಲ್ಲೆ ಈ ನಾಲ್ಕು ಜನರನ್ನು ದಸ್ತಗಿರಿ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.ವೈ.ಎಸ್.ಪಿ. ಮಲ್ಲೇಶ, ದೊಡ್ಡಮನಿ, ಸಿ.ಪಿ.ಐ. ದುರುಗಪ್ಪ, ಪಿ.ಎಸ್.ಐ. ಗೀತಾಂಜಲಿ ಶಿಂಧೆ, ಮಾರ್ಗದರ್ಶನದಲ್ಲಿ ಪತ್ತೆಕಾರ್ಯ ಕಾರ್ಯನಿರತರಾಗಿದ್ದರು.
