ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಪಟ್ಟಣದಲ್ಲಿರುವ ರಸಗೊಬ್ಬರ ಮಳಿಗೆಗಳಿಗೆ ಮತ್ತು ಗೋಧಾಮಿನ ಮಾಲೀಕರೊಂದಿಗೆ ಕೊಟ್ಟೂರು ತಾಲೂಕಿನ ಸಹಾಯಕ ನಿರ್ದೇಶಕರಾದ ಅರ್.ವಿ.ತೇಜವರ್ಧನ್ ರವರು ಸಂಬಂಧಪಟ್ಟ ಮಳೆಗೆಯ ಮಾಲೀಕರೊಂದಿಗೆ ರಸಗೊಬ್ಬರ ಮಳಿಗೆಗಳಿಗೆ ಹಾಗು ಗೋದಾಮುಗಳಿಗೆ ಭೇಟಿ ನೀಡಿ ಬಿತ್ತನೆ ಬೀಜ, ರಸಗೊಬ್ಬರ, ದಾಸ್ತಾನನ್ನು ಪರಿಶೀಲಿಸಿದಾಗ DAP, complex ರಸಗೊಬ್ಬರಗಳ 20:20:0:13, 10:26:26, 15:15:15, 19:19:19 ಎಲ್ಲಾ ಸೇರಿ 2500 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದ್ದು, ಯಾವುದೇ ಅನಧಿಕೃತ ರಸಗೊಬ್ಬರ ಪರಿಶೀಲನೆಯಲ್ಲಿ ಕಂಡುಬಂದಿರುವುದಿಲ್ಲ, ಇದರಿಂದಾಗಿ ಗುಣಮಟ್ಟದ ಬಿಟ್ಟಣೆಬೀಜ ರಸಗೊಬ್ಬರ ದಾಸ್ತಾನನ್ನು ಖಾತರಿಸಿಕೊಂಡಂತಾಗಿದೆ. ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರ , ಕೀಟನಾಶಕಗಳನ್ನು ಖರೀದಿ ಮಾಡಿದಾಗ, ಕಡ್ಡಾಯವಾಗಿ ಬಿಲ್ ನೀಡಲು ನೀಡಲು ಮಾಹಿತಿ ನೀಡಿದರು. ಭೂಮಿಯಲ್ಲಿ ಸಂಪೂರ್ಣ ತೇವಾಂಶ ಇದ್ದಾಗ ಮಾತ್ರ ಬಿತ್ತನೆ ಮಾಡಲು ಸಲಹೆ ನೀಡಿದರು. ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ತಾಕೀತು ಮಾಡಿದರು. ಮಳೆ ಅಭಾವವಿರುವುದರಿಂದ ರೈತರು ರಸಗೊಬ್ಬರವನ್ನು ವೈಜ್ಞಾನಿಕ ಶಿಫಾರಸಿನಂತೆ ಬಳಸಬೇಕೆಂದು ತಿಳಿಸಿದರು. ಪೂರ್ಣ ಪ್ರಮಾಣದ ತೀವಂಶವಾದರೆ ಮಾತ್ರ ರೈತರು ಬಿತ್ತನೆ ಮಾಡಬೇಕು.
ಯಾವುದೇ ರೀತಿಯ ಕೃತಕ ಅಭಾವ ಸೃಷ್ಟಿಸದಂತೆ, ಸರಿಯಾದ ರೀತಿಯಲ್ಲಿ ರಸಗೊಬ್ಬರ ವಿತರಿಸಲು ತಾಕೀತು ಮಾಡಿದರು, ನ್ಯಾನೋ ಯೂರಿಯಾ, ನ್ಯಾನೋ DAP ಯನ್ನು ಉಪಯೋಗ ಮಾಡಲು ರೈತರಿಗೆ ಸಲಹೆ ನೀಡಿದರು.
ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ಲಭ್ಯವಿದ್ದು ಇದರ ಸದುಪಯೋಗ ಪಡೆಯಲು ತಿಳಿಸಿದರು. ರಸಗೊಬ್ಬರ ದಾಸ್ತಾನು ಪರಿಶೀಲನೆಯಲ್ಲಿ ಶ್ಯಾಮಸುಂದರ್ ಕೃಷಿ ಅಧಿಕಾರಿ, ರಸಗೊಬ್ಬರ ಮಳಿಗೆಗಳ ಮಾಲಿಕರಾದ ಶ್ರೀಧರ್ ಶೆಟ್ಟಿ, ಕೊಟ್ರೇಶ ಬಿ, ಕೊಟ್ರೇಶ ನಾಯ್ಕ, ಪಂಪಾಪತಿ, ಜಗದೀಶ್, ಪ್ರವೀಣ್ ಕುಮಾರ್, ನಾರಾಯಣ, ಶಿವುಕುಮಾರ ಹಾಗು ಇತರರು ಹಾಜರಿದ್ದರು.
