Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಕ್ರೈಂ ಸುದ್ದಿ Archives - Hai Sandur kannada fortnightly news paper https://haisandur.com/category/ಕ್ರೈಂ/ Hai Sandur News.Karnataka India Fri, 22 Jul 2022 13:51:03 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಕ್ರೈಂ ಸುದ್ದಿ Archives - Hai Sandur kannada fortnightly news paper https://haisandur.com/category/ಕ್ರೈಂ/ 32 32 ಹಣಕ್ಕಾಗಿ ವ್ಯಕ್ತಿಯ ಆಪಹರಣ, 24 ಗಂಟೆಗಳಲ್ಲಿ 7 ಜನ ಅಪಹರಣಕಾರರ ಬಂಧನ ಮತ್ತು 16.52 ಲಕ್ಷ ಹಣ ಜಪ್ತಿ https://haisandur.com/2022/07/22/%e0%b2%b9%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf%e0%b2%af-%e0%b2%86%e0%b2%aa%e0%b2%b9%e0%b2%b0%e0%b2%a3-24/ https://haisandur.com/2022/07/22/%e0%b2%b9%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf%e0%b2%af-%e0%b2%86%e0%b2%aa%e0%b2%b9%e0%b2%b0%e0%b2%a3-24/#respond Fri, 22 Jul 2022 13:51:01 +0000 https://haisandur.com/?p=28551 ಕೊಟ್ಟೂರು:ಜುಲೈ:22:- ಮೊನ್ನೆ ದಿನಾಂಕ:20/07/2022 ರಂದು ಬೆಳಿಗ್ಗೆ 11-30 ಗಂಟೆಗೆ ಕೊಟ್ಟೂರು ಪಟ್ಟಣದಲ್ಲಿ ಜೈಲರಿಂಗ್ ಮತ್ತು ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಶ್ರೀ ಹಾಲೇಶ ತಂದೆ ಹತ್ತಿರ, ವಸ್ತು 50 ವರ್ಷ, ಲಿಂಗಾಯತರು, ವಾಸ | ಕೊಟ್ಟೂರು ಆತನ ಟೈಲರಿಂಗ್ ಅಂಗಡಿಗೆ ಯಾರೋ ಅಪರಿಚಿತರು, ನಿವೇಶನಗಳನ್ನು ಖರೀದಿಸುವ ನೆಪದಲ್ಲಿ ಬಂದು ನಿವೇಶನ ಖರೀದಿಸುವುದಾಗಿ ಅವರು ತಂದಿದ್ದ ಟೊಯೋಟಾ ಏಜೋಯಿಸ್‌ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿರುವಾಗ ಅಪರಿಚಿತರ ಬಳಿಯಿದ್ದ ಮಚ್ಚು ಜಾರು, ತೋರಿಸಿ ಕೊಲೆ ಮಾಡುವದಾಗಿ ಬೆದರಿಸಿ, ಅವಹರಿಸಿದ್ದಲ್ಲದೆ, 60 […]

The post ಹಣಕ್ಕಾಗಿ ವ್ಯಕ್ತಿಯ ಆಪಹರಣ, 24 ಗಂಟೆಗಳಲ್ಲಿ 7 ಜನ ಅಪಹರಣಕಾರರ ಬಂಧನ ಮತ್ತು 16.52 ಲಕ್ಷ ಹಣ ಜಪ್ತಿ appeared first on Hai Sandur kannada fortnightly news paper.

]]>
ಕೊಟ್ಟೂರು:ಜುಲೈ:22:- ಮೊನ್ನೆ ದಿನಾಂಕ:20/07/2022 ರಂದು ಬೆಳಿಗ್ಗೆ 11-30 ಗಂಟೆಗೆ ಕೊಟ್ಟೂರು ಪಟ್ಟಣದಲ್ಲಿ ಜೈಲರಿಂಗ್ ಮತ್ತು ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಶ್ರೀ ಹಾಲೇಶ ತಂದೆ ಹತ್ತಿರ, ವಸ್ತು 50 ವರ್ಷ, ಲಿಂಗಾಯತರು, ವಾಸ | ಕೊಟ್ಟೂರು ಆತನ ಟೈಲರಿಂಗ್ ಅಂಗಡಿಗೆ ಯಾರೋ ಅಪರಿಚಿತರು, ನಿವೇಶನಗಳನ್ನು ಖರೀದಿಸುವ ನೆಪದಲ್ಲಿ ಬಂದು ನಿವೇಶನ ಖರೀದಿಸುವುದಾಗಿ ಅವರು ತಂದಿದ್ದ ಟೊಯೋಟಾ ಏಜೋಯಿಸ್‌ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿರುವಾಗ ಅಪರಿಚಿತರ ಬಳಿಯಿದ್ದ ಮಚ್ಚು ಜಾರು, ತೋರಿಸಿ ಕೊಲೆ ಮಾಡುವದಾಗಿ ಬೆದರಿಸಿ, ಅವಹರಿಸಿದ್ದಲ್ಲದೆ, 60 ಲಕ್ಷ ರೂಪಾಯಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಪಹರಣಕ್ಕೊಳಗಾದ ಹಾಲೇಶ ಈತನು ಪ್ರಾಣ ಬೆದರಿಕೆಗೆ ಹೆದರಿ 20 ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಒಪ್ಪಿಕೊಂಡು ನನ್ನ ಅಳಿಯ ಶ್ರೀ ವೀರೇಶ ಇವರಿಗೆ ಫೋನ್ ಮಾಡಿ ಹಣ ಜೋಡಿಸಿಕೊಂಡು ಕೊಟ್ಟೂರು ಪಟ್ಟಣದ ಉದ್ದ ರಸ್ತೆಯಲ್ಲಿರುವ ಕಾಲೇಜ್ ಬಳಿ ಕರೆಸಿಕೊಂಡು ಆತನಿಂದ 20 ಲಕ್ಷ ರೂಪಾಯಿಗಳನ್ನು ಪಡೆದು ರಾತ್ರಿ 7-30 ಗಂಟೆಗೆ ಅವರನ್ನು ಬಿಟ್ಟು ಹೋಗಿದ್ದರು.

ಈ ಕುರಿತು ಆಪಹರಣಕ್ಕೋಳನದ ಶ್ರೀ ಹಾಲೇಶ ರವರ ದೂರು ಆಧರಿಸಿ ಕೊಟ್ಟೂರು ಪೊಲೀಸ್ ಠಾಣೆಯ ಗುನ್ನೆ ನಂ 141/2022 ಕಲಂ 364(ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣ ದಾಖಲಾದ ತಕ್ಷಣವೇ ‘ಹರೀಶ, ಡಿವೈಎಸ್‌ಪಿ ಕೂಡ್ಲಿಗಿರವರ ಮಾರ್ಗದರ್ಶನದಲ್ಲಿ 1)ಶ್ರೀ ಸೋಮಶೇಖರ್ ಕೆಂಚರಡ್ಡಿ, ಸಿಪಿಐ, ಕೊಟ್ಟೂರ, ಹೆಚ್ : 213 ಶ್ರೀ ಎಂ.ಜ ಶ್ರೀ ನಾಗಭೂಷಣ, ಹೆಚ್. ಸಿ. 499 ಶ್ರೀ.ರಾಜೇಂದ್ರ ಶಾದ್, ಪಬ್‌ 1250, ಶ್ರೀ.ಅಂಜನಮೂರ್ತಿ ಹೆಚ್ 1223 ಕವರಿದ್ದ ಬದನೇ ತರ 2) ಶ್ರೀ.ಟಿ. ಮಯ ಸಿಪಿಐ ಹಲೋಹಳ್ಳಿ, ಶ್ರೀ ಮಾಲಿಕಸಾಬ್‌ ಕಲಾರಿ ಪಿಎಸ್ಐ ಗುಡೇಕೋಟೆ ಶ್ರೀ ಶಂಕರಗೌಡ, ಹೆಚ್.ಸಿ.66 ಶ್ರೀ ದೇವೇಂದ್ರಪ್ಪ. ಪಿಸಿ 450, ಶ್ರೀ ಗುರುಸ್ವಾಮಿ 301, ಶ್ರೀ ಚಂದ್ರಮೌಳಿ ಪಿಸಿ.477, ಶ್ರೀ ಕೆ.ತಿಪ್ರಸ್ವಾಮಿ, ಪಿಸಿ 252, ಶ್ರೀ ಹದ ಪಿ.ಸಿ.726, ಶ್ರೀ.ವಿರೇಶ, ಪಿ.ಸಿ.1042, ರವರನ್ನೊಳಗೊಂಡ 2 ನೇ ತಂಡ 3) ಸ್ತ್ರೀ ಜಯಪ್ರಕಾಶ್, ಶಿವ, ಚಿತ್ತವಾಡಗಿ, & ವಿಜಯಕೃಷ್ಣ ಶ್ರೀ.ಎನ್.ಎಂ.ಸ್ವಾಮಿ 2,1059, ಕಲ್ಲೇಶ, 241071, ಶ್ರೀ ಹಾಲೇಶ, ಪಿ.ಸಿ.827, ರವರನ್ನೊಳಗೊಂಡ 3 ನೇ ತಂಡವನ್ನು ರಚನೆ ಮಾಡಿ ಆರೋಪಿತರ ಪತ್ತೆಕಾರ್ಯ ಕೈಗೊಂಡಿದ್ದು, ಪ್ರಕರಣದ ವರದಿಯಾದ 24 ಗಂಟೆಯೊಳಗೆ ಪ್ರಕರಣದಲ್ಲಿನ ಆರೋಪಿತರಾದ

1) ಮಂಜು – ಮಂಜುನಾಥ – ಇಡ್ಲಿ ಮಂಜು ತಂದೆ ಹನುಮಂತಪ್ಪ, 2: 26 ವರ್ಷ, ಚಲುವಾದಿ ಅನಾಡ್, ಸೇವಾ ಆಸ್ಪತ್ರೆಯಲ್ಲಿ ರಿಸೆಪ್ಸನಿಸ್ಟ್ಸ ಕೆಲಸ, ವಾಸ: ರಂಗನಾಥ ಬಡಾವಣೆ, 1ನೇ ಕ್ರಾಸ್, ಶಿವ ವಾಟರ್ ಸರ್ವಿಸ್ ಹತ್ತಿರ ದಾವಣಗೆರೆ, 2) ಶಾಂತಕುಮಾರ ಶಾಂತಾತಂದೆ ರೇವಣಸಿದ್ದಪ್ಪ, 24 ವರ್ಷ, ಭೋವಿ ಜನಾಂಗ, ಕೂಲಿಕೆಲಸ, ವಾಸ ಇಂದಿರಾನಗರ ಜಯ ಪಡೆ ನಗರ) ಜಗಳೂರು, ದಾವಣಗೆರೆ ಜಿಲ್ಲೆ

3) ರಾಕೇಶ ಈ ರಾಕಿ ತಂದೆ ನೀಲಪ್ಪ 19 ವರ್ಷ ವಾಲ್ಮೀಕಿ ಜನಾಂಗ, ವಿದ್ಯಾರ್ಥಿ, ವಾಸ ಮಾಳಗೊಂಡಹಳ್ಳಿ ಗ್ರಾಮ, ದಾವಣಗೆರೆ

4) ಚಿರಾಗ್, ಚರು ತಂದೆ ರಾಮನಾಥ್ ವ:19 ವರ್ಷ, ಬೆಸ್ತರ ಜನಾಂಗ, ವಿದ್ಯಾರ್ಥಿ, ವಾಸ: ಭೈರ ಆಫೀಸ್ ಕ್ವಾಟರ್ಸ ಜಗಳೂರು

5) ಶಿವಕುಮಾರ ತಂದೆ ಹೊನ್ನಪ್ಪ ದ21 ವರ್ಷ, ಆದಿಕರ್ನಾಟಕ ಜನಾಂಗ, ವಿದ್ಯಾರ್ಥಿ, ವಾಸ ಹರಳಯ್ಯನಗರ 4ನೇ ಕ್ರಾಸ್, ರಾಣೆಬೆನ್ನೂರು

ಹಾವೇರಿ ಜಿಲ್ಲೆ

1) ರಾಹುಲ್ ತಂದೆ ವೆಂಕಟೇಶ, 21 ವರ್ಷ, ಮಾದಿಗ ಜನಾಂಗ, ವಿದ್ಯಾರ್ಥಿ ವಾಸ : ಕಂದಗಲ್ಲು ಗ್ರಾಮ, ದಾವಣಗೆರೆ: ತಾಲೂಕು 7) ಆಲ್ತಾಫ್ ತಂದೆ ಹೊನ್ನೂರಾದ, 5 23 ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ಸಾ: ಇಂದಿರಾ ಬಡಾವಣೆ, ಜಗಳೂರು,

ರವರುಗಳನ್ನು ದಾವಣಗೆರೆ ನಗರದಲ್ಲಿ ಪತ್ತೆ ಮಾಡಿ ನಿನ್ನೆ ದಿನಾಂಕ:21/07/2022 ರಂದು ರಾತ್ರಿ 9 ಗಂಟೆಗೆ ವಶಕ್ಕೆ ಪಡೆಯಲಾಗಿರುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿತರು ಕೃತ್ಯ ವನದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದು, ಅವರಿಂದ 16, 52 ಲಕ್ಷ ರೂಪಾಯಿಗಳನ್ನು ಜಪ್ತು ಪಡಿಸಿಕೊಳ್ಳಲಾಗಿರುತ್ತದೆ. ಕೃಷ್ಣ ಸಮಯದಲ್ಲಿ ಉಪಯೋಗಿಸಲಾದ ಟೊಯೋಟಾ ಎಟೋಸ್ ಕಾರ್ ನಂ. ಕೆಎ 05 ಇ-2085 ನೇದ್ದನ್ನು ಜಪ್ತು ಮಾಡಿಕೊಂಡಿದ್ದು, ಅಲ್ಲದೇ ಕೃತ್ಯವೆಸಗಲು ಉಪಯೋಗಿಸಿದ 5 ಮೊಬೈಲ್ ಫೋನ್‌ಗಳು, 2 ಮಚ್ಚು, 2 ಚಾಮಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಪತ್ತೆ ಕಾರ್ಯದಲ್ಲಿ ತೊಡಗಿ, ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಆಧೀಕ್ಷಕರು, ವಿಜಯನಗರ ಜಿಲ್ಲೆ ರವರು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ. ಶ್ರೀ ಸೋಮಶೇಖರ, ಕೆಂಚರಡ್ಡಿ, ಸಿ.ಪಿ.ಐ, ಕೊಟ್ಟೂರು ರವರಿಗೆ ಪ್ರಕರಣದ ತನಿಖೆ ವಹಿಸಿದ್ದು, ವಿವರವಾದ ತನಿಖೆ ಕೈಗೊಳ್ಳಲಾಗಿರುತ್ತದೆ.

The post ಹಣಕ್ಕಾಗಿ ವ್ಯಕ್ತಿಯ ಆಪಹರಣ, 24 ಗಂಟೆಗಳಲ್ಲಿ 7 ಜನ ಅಪಹರಣಕಾರರ ಬಂಧನ ಮತ್ತು 16.52 ಲಕ್ಷ ಹಣ ಜಪ್ತಿ appeared first on Hai Sandur kannada fortnightly news paper.

]]>
https://haisandur.com/2022/07/22/%e0%b2%b9%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf%e0%b2%af-%e0%b2%86%e0%b2%aa%e0%b2%b9%e0%b2%b0%e0%b2%a3-24/feed/ 0
ಬಾಲಕ ಕಾಣೆ: ಪ್ರಕರಣ ದಾಖಲು https://haisandur.com/2021/08/30/%e0%b2%ac%e0%b2%be%e0%b2%b2%e0%b2%95-%e0%b2%95%e0%b2%be%e0%b2%a3%e0%b3%86-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%a6%e0%b2%be%e0%b2%96%e0%b2%b2%e0%b3%81-2/ https://haisandur.com/2021/08/30/%e0%b2%ac%e0%b2%be%e0%b2%b2%e0%b2%95-%e0%b2%95%e0%b2%be%e0%b2%a3%e0%b3%86-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%a6%e0%b2%be%e0%b2%96%e0%b2%b2%e0%b3%81-2/#respond Mon, 30 Aug 2021 23:55:20 +0000 https://haisandur.com/?p=19584 ಬಳ್ಳಾರಿ,ಆ.31:ನಗರದ ಗೌತಮನಗರ ನಿವಾಸಿ 14 ವರ್ಷದ ಕೆ.ದಿನೇಶ್ ಎನ್ನುವ ಬಾಲಕ ಆ.25ರಿಂದ ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಣೆಯಾದ ಬಾಲಕನ ಚಹರೆ:-4 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈ ಬಣ್ಣ, ಕೋಲು ಮುಖ, ಬಲಭುಜದ ಮೇಲೆ ಸಣ್ಣ ಕರಿಮಚ್ಚೆ ಇರುತ್ತದೆ, ಮೂಗಿನ ಮೇಲೆ ಕರಿಮಚ್ಚೆ ಇರುತ್ತದೆ, ಹಳದಿ ಬಣ್ಣದ ಟಿ.ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ ಎಂದು […]

The post ಬಾಲಕ ಕಾಣೆ: ಪ್ರಕರಣ ದಾಖಲು appeared first on Hai Sandur kannada fortnightly news paper.

]]>
ಬಳ್ಳಾರಿ,ಆ.31:ನಗರದ ಗೌತಮನಗರ ನಿವಾಸಿ 14 ವರ್ಷದ ಕೆ.ದಿನೇಶ್ ಎನ್ನುವ ಬಾಲಕ ಆ.25ರಿಂದ ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಬಾಲಕನ ಚಹರೆ:-
4 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈ ಬಣ್ಣ, ಕೋಲು ಮುಖ, ಬಲಭುಜದ ಮೇಲೆ ಸಣ್ಣ ಕರಿಮಚ್ಚೆ ಇರುತ್ತದೆ, ಮೂಗಿನ ಮೇಲೆ ಕರಿಮಚ್ಚೆ ಇರುತ್ತದೆ, ಹಳದಿ ಬಣ್ಣದ ಟಿ.ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ ಎಂದು ಅವರು ತಿಳಿಸಿದ್ದಾರೆ.
ಕಾಣೆಯಾದವರ ಮಾಹಿತಿ ದೊರೆತಲ್ಲಿ

ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ:08392-276461, ಮೊ.ಸಂ:9480803049,ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ:08392-258100 ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

The post ಬಾಲಕ ಕಾಣೆ: ಪ್ರಕರಣ ದಾಖಲು appeared first on Hai Sandur kannada fortnightly news paper.

]]>
https://haisandur.com/2021/08/30/%e0%b2%ac%e0%b2%be%e0%b2%b2%e0%b2%95-%e0%b2%95%e0%b2%be%e0%b2%a3%e0%b3%86-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%a6%e0%b2%be%e0%b2%96%e0%b2%b2%e0%b3%81-2/feed/ 0
ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಇನ್ನೊಂದು ಪದಕ ಸಿಗುವ ನಿರೀಕ್ಷೆ .! https://haisandur.com/2021/08/06/india-to-win-medal-at-tokyo-olympics/ https://haisandur.com/2021/08/06/india-to-win-medal-at-tokyo-olympics/#respond Fri, 06 Aug 2021 13:20:25 +0000 https://haisandur.com/?p=18603 ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಇನ್ನೊಂದು ಪದಕ ಸಿಗುವ ನಿರೀಕ್ಷೆ ಇದೆ. ಹಾಕಿ ಮತ್ತು ಕುಸ್ತಿಯಲ್ಲಿ ಪದಕದ ಕನಸು ಭಗ್ನವಾಗಿದ್ದರೂ ಗಾಲ್ಫ್​​ನಲ್ಲಿ ಪದಕ ಸಿಗುವ ನಿರೀಕ್ಷೆ ದೇಶದ ಜನರದ್ದು. ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇನಲ್ಲಿ ಸ್ಪರ್ಧಿಸುತ್ತಿರುವ ಇಪ್ಪತ್ಮೂರು ವರ್ಷದ ಕನ್ನಡತಿ ಅದಿತಿ ಅಶೋಕ್ ಪದಕದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮೂರು ಸುತ್ತುಗಳನ್ನು ಮುಗಿಸಿದ ನಂತರ ಅದಿತಿ ಎರಡನೇ ಸ್ಥಾನ ಪಡೆದರು. ವಿಶ್ವದ ಅಗ್ರಸ್ಥಾನದಲ್ಲಿರುವ ಅಮೆರಿಕದ ನೆಲ್ಲಿ ಕಾರ್ಡಾ ಈಗ ಅಗ್ರಸ್ಥಾನದಲ್ಲಿದ್ದಾರೆ. ಕೇವಲ ಒಂದು ಸುತ್ತು ಬಾಕಿ ಇರುವಾಗ, ಅದಿತಿ ಪದಕದ […]

The post ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಇನ್ನೊಂದು ಪದಕ ಸಿಗುವ ನಿರೀಕ್ಷೆ .! appeared first on Hai Sandur kannada fortnightly news paper.

]]>
ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಇನ್ನೊಂದು ಪದಕ ಸಿಗುವ ನಿರೀಕ್ಷೆ ಇದೆ. ಹಾಕಿ ಮತ್ತು ಕುಸ್ತಿಯಲ್ಲಿ ಪದಕದ ಕನಸು ಭಗ್ನವಾಗಿದ್ದರೂ ಗಾಲ್ಫ್​​ನಲ್ಲಿ ಪದಕ ಸಿಗುವ ನಿರೀಕ್ಷೆ ದೇಶದ ಜನರದ್ದು. ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇನಲ್ಲಿ ಸ್ಪರ್ಧಿಸುತ್ತಿರುವ ಇಪ್ಪತ್ಮೂರು ವರ್ಷದ ಕನ್ನಡತಿ ಅದಿತಿ ಅಶೋಕ್ ಪದಕದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮೂರು ಸುತ್ತುಗಳನ್ನು ಮುಗಿಸಿದ ನಂತರ ಅದಿತಿ ಎರಡನೇ ಸ್ಥಾನ ಪಡೆದರು. ವಿಶ್ವದ ಅಗ್ರಸ್ಥಾನದಲ್ಲಿರುವ ಅಮೆರಿಕದ ನೆಲ್ಲಿ ಕಾರ್ಡಾ ಈಗ ಅಗ್ರಸ್ಥಾನದಲ್ಲಿದ್ದಾರೆ.

ಕೇವಲ ಒಂದು ಸುತ್ತು ಬಾಕಿ ಇರುವಾಗ, ಅದಿತಿ ಪದಕದ ಭರವಸೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಿರ್ಣಾಯಕ ನಾಲ್ಕನೇ ಸುತ್ತು ಶನಿವಾರ ನಡೆಯಲಿದೆ. ಇದು ಅದಿತಿಯ ಎರಡನೇ ಒಲಿಂಪಿಕ್ಸ್ ಆಗಿದೆ.

ಶನಿವಾರದ ನಾಲ್ಕನೇ ಸುತ್ತಿನ ಪಂದ್ಯಗಳು ಕೆಟ್ಟ ಹವಾಮಾನದಿಂದಾಗಿ ಒಂದು ಗಂಟೆ ತಡವಾಗಲಿದೆ ಎಂದು ಸಂಘಟಕರು ಘೋಷಿಸಿದ್ದಾರೆ. ಆದಾಗ್ಯೂ, ಕೆಟ್ಟ ಹವಾಮಾನದಿಂದಾಗಿ ನಾಲ್ಕನೇ ಸುತ್ತಿನ ಪಂದ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಶನಿವಾರ ಪಂದ್ಯಕ್ಕೆ ಈ ರೀತಿ ಹವಾಮಾನ ಅಡಚಣೆಯಾದರೆ ಭಾನುವಾರ ಕಾರ್ಯಕ್ರಮ ಆಯೋಜಿಸಲು ಸಂಘಟಕರು ಚಿಂತನೆ ನಡೆಸಿದ್ದಾರೆ.

ಭಾನುವಾರ ಹವಾಮಾನವು ಪ್ರತಿಕೂಲವಾಗಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ನಾಲ್ಕನೇ ಸುತ್ತು ನಡೆಯದಿದ್ದರೆ, ಪ್ರಸ್ತುತ ಪಾಯಿಂಟ್ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಆಗ ಅದಿತಿಗೆ ಬೆಳ್ಳಿ ಪದಕ ಸಿಗುವುದು ಖಚಿತ.

The post ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಇನ್ನೊಂದು ಪದಕ ಸಿಗುವ ನಿರೀಕ್ಷೆ .! appeared first on Hai Sandur kannada fortnightly news paper.

]]>
https://haisandur.com/2021/08/06/india-to-win-medal-at-tokyo-olympics/feed/ 0
ಚಾಮರಾಜನಗರದ ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಐವರು ಕಳ್ಳ ಬೇಟೆಗಾರರ ಬಂಧನ https://haisandur.com/2021/07/29/arrest-of-five-poachers-in-tiger-reserve/ https://haisandur.com/2021/07/29/arrest-of-five-poachers-in-tiger-reserve/#respond Thu, 29 Jul 2021 11:14:52 +0000 https://haisandur.com/?p=18336 ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ಬಂಧಿಸಿ, ಬೇಟೆಗೆ ಬಳಿಸಿದ್ದ ಬಂದೂಕು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಗೋವಿಂದರಾಜು(29) ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಪ್ರಮೋದ್ (27) ಎಂದು ಗುರುತಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಮೂವರು ಕೊಡಗು ಜಿಲ್ಲೆಯ ಸೋಮವಾರ ಪೇಟೆ ಮೂಲದವರಾಗಿದ್ದರೆ, ಒಬ್ಬರು ಚಾಮರಾಜನಗರ ತಾಲ್ಲೂಕಿನ ಬಡಗಲಪುರ ಮತ್ತು ಇಬ್ಬರು ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾಗಿದ್ದಾರೆ. ಬಂಧಿತರಿಂದ ಎರಡು ಬಂದೂಕುಗಳು(ಈ ಪೈಕಿ ಒಂದಕ್ಕೆ ಪರವಾನಿಗೆ ಇಲ್ಲ), […]

The post ಚಾಮರಾಜನಗರದ ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಐವರು ಕಳ್ಳ ಬೇಟೆಗಾರರ ಬಂಧನ appeared first on Hai Sandur kannada fortnightly news paper.

]]>
ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ಬಂಧಿಸಿ, ಬೇಟೆಗೆ ಬಳಿಸಿದ್ದ ಬಂದೂಕು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಗೋವಿಂದರಾಜು(29) ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಪ್ರಮೋದ್ (27) ಎಂದು ಗುರುತಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಲ್ಲಿ ಮೂವರು ಕೊಡಗು ಜಿಲ್ಲೆಯ ಸೋಮವಾರ ಪೇಟೆ ಮೂಲದವರಾಗಿದ್ದರೆ, ಒಬ್ಬರು ಚಾಮರಾಜನಗರ ತಾಲ್ಲೂಕಿನ ಬಡಗಲಪುರ ಮತ್ತು ಇಬ್ಬರು ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾಗಿದ್ದಾರೆ.

ಬಂಧಿತರಿಂದ ಎರಡು ಬಂದೂಕುಗಳು(ಈ ಪೈಕಿ ಒಂದಕ್ಕೆ ಪರವಾನಿಗೆ ಇಲ್ಲ), ಆರು ಜೀವಂತ ಕಾರ್ಟಿಜ್ ಗಳು, ಒಂದು ಚಾಕು, ಬ್ಯಾಟರಿ ದೀಪಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ವಡ್ಗಲಪುರ ಬಳಿಯ ಚಾಮರಾಜನಗರಕ್ಕೆ ತೆರಳುತ್ತಿದ್ದ ಕಾರನ್ನು ತಡೆದು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

The post ಚಾಮರಾಜನಗರದ ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಐವರು ಕಳ್ಳ ಬೇಟೆಗಾರರ ಬಂಧನ appeared first on Hai Sandur kannada fortnightly news paper.

]]>
https://haisandur.com/2021/07/29/arrest-of-five-poachers-in-tiger-reserve/feed/ 0
ನಕಲಿ ವೆಬ್ ಸೈಟ್ ವಂಚಕ ಜಾಲ ಪತ್ತೆ, ವಂಚಕರು ತೆಲಂಗಾಣ ಪೊಲೀಸರ ಬಲೆಗೆ https://haisandur.com/2021/07/24/fake-web-site-detects-fraudulent-network-fraudsters-trap-telangana-police/ https://haisandur.com/2021/07/24/fake-web-site-detects-fraudulent-network-fraudsters-trap-telangana-police/#respond Sat, 24 Jul 2021 12:28:09 +0000 https://haisandur.com/?p=18121 ಈಗ ಮನೆಯಿಂದ ಹೊರಗೆ ಹೋಗಿ ಶಾಪಿಂಗ್ ಮಾಡಲು ಕಷ್ಟ. ಕೊರೊನಾ ಭಯದಲ್ಲಿ ಜನರು ಮನೆ ಬಿಟ್ಟು ಆಚೆ ಹೋಗಲು ಇಷ್ಟ ಪಡಲ್ಲ. ಇದನ್ನು ಅರಿತಿದ್ದ ಎಂಬಿಎ ಪದವೀಧರ ನಕಲಿ ವೆಬ್ ತಾಣಗಳನ್ನು ಸೃಷ್ಟಿಸಿ “ಬಿಗ್ ಡೀಲ್ ಆಫರ್” ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ. ಈತನ ವಂಚಕ ಜಾಲವನ್ನು ಸೈಬರಾಬಾದ್ ಪೊಲಿಸರು ಬಯಲಿಗೆ ಎಳೆದಿದ್ದಾರೆ. ಕೇವಲ 1400 ರೂ. ವಂಚನೆ ಕೇಸಿನ ಜಾಡು ಹಿಡಿದು ದೇಶದಲ್ಲಿ ಹಬ್ಬಿದ್ದ ನಕಲಿ ವೆಬ್ ಸೈಟ್ ಜಾಲವನ್ನು ಕನ್ನಡಿಗ, ಸೈಬರಾಬಾದ್ ಪೊಲೀಸ್ […]

The post ನಕಲಿ ವೆಬ್ ಸೈಟ್ ವಂಚಕ ಜಾಲ ಪತ್ತೆ, ವಂಚಕರು ತೆಲಂಗಾಣ ಪೊಲೀಸರ ಬಲೆಗೆ appeared first on Hai Sandur kannada fortnightly news paper.

]]>
ಈಗ ಮನೆಯಿಂದ ಹೊರಗೆ ಹೋಗಿ ಶಾಪಿಂಗ್ ಮಾಡಲು ಕಷ್ಟ. ಕೊರೊನಾ ಭಯದಲ್ಲಿ ಜನರು ಮನೆ ಬಿಟ್ಟು ಆಚೆ ಹೋಗಲು ಇಷ್ಟ ಪಡಲ್ಲ. ಇದನ್ನು ಅರಿತಿದ್ದ ಎಂಬಿಎ ಪದವೀಧರ ನಕಲಿ ವೆಬ್ ತಾಣಗಳನ್ನು ಸೃಷ್ಟಿಸಿ “ಬಿಗ್ ಡೀಲ್ ಆಫರ್” ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ. ಈತನ ವಂಚಕ ಜಾಲವನ್ನು ಸೈಬರಾಬಾದ್ ಪೊಲಿಸರು ಬಯಲಿಗೆ ಎಳೆದಿದ್ದಾರೆ. ಕೇವಲ 1400 ರೂ. ವಂಚನೆ ಕೇಸಿನ ಜಾಡು ಹಿಡಿದು ದೇಶದಲ್ಲಿ ಹಬ್ಬಿದ್ದ ನಕಲಿ ವೆಬ್ ಸೈಟ್ ಜಾಲವನ್ನು ಕನ್ನಡಿಗ, ಸೈಬರಾಬಾದ್ ಪೊಲೀಸ್ ಕಮೀಷನರ್ ವಿ. ಸಜ್ಜನರ್ ಅವರು ಬಯಲಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ವೆಬ್ ತಾಣ ವಂಚಕ ಜಾಲಕ್ಕೆ ಬೀಳದಂತೆ ಕಿವಿ ಮಾತು ಹೇಳಿದ್ದಾರೆ.

ನಕಲಿ ವೆಬ್ ತಾಣಗಳು ಸಾಮಾನ್ಯವಾಗಿ ವೆಬ್ ತಾಣಗಳು ಜನಪ್ರಿಯತೆ ಹಾಗೂ ವಹಿವಾಟು ಹೆಚ್ಚಿಸಿಕೊಳ್ಳಲು ಡಿಸ್ಕೌಂಟ್ ಆಫರ್ ಗಳನ್ನು ಪ್ರಕಟಿಸುತ್ತವೆ. ಜನರು ಈ ಆಫರ್ ಆಸೆಗೆ ಬಿದ್ದು ತಮಗೆ ಇಷ್ಟವಾಗುವ ವಸ್ತುಗಳನ್ನು ಖರೀದಿಸುತ್ತಾರೆ. ಇದನ್ನು ಅರಿತ ವಂಚಕರು ಪ್ರತಿಷ್ಠಿತ ವೆಬ್ ತಾಣಗಳ ಮಾದರಿಯಲ್ಲಿಯೇ ಆಹಾರ ಉತ್ಪನ್ನ ಮಾರಾಟ, ಪೀಠೋಪಕರಣ ಮಾರಾಟ ವೆಬ್ ತಾಣ ರಚಿಸಿ ಊಹೆಗೂ ಮೀರಿದ ಡಿಸ್ಕೌಂಟ್ ನೀಡಿ ಮೋಸ ಮಾಡುತ್ತಿದ್ದಾರೆ. ಲಕ್ಷಾಂತರ ಮಂದಿ ಡಿಸ್ಕೌಂಟ್ ಆಸೆಗೆ ಬಿದ್ದು ಲಕ್ಷಾಂತರ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದು ದೇಶದಲ್ಲೆಡೆ ದೊಡ್ಡ ಜಾಲವಾಗಿ ಪರಿಗಣಿಸಿದೆ. ಕೇವಲ ಹತ್ತು – ಇಪ್ಪತ್ತು ಸಾವಿರ ವೆಚ್ಚ ಮಾಡಿ ನಕಲಿ ವೆಬ್ ತಾಣ ಸೃಷ್ಟಿಸಿ ಮೋಸ ಮಾಡುವರ ಪಾಲಿಗೆ ಬೆಂಗಳೂರು ರಾಜಧಾನಿ ಎಂಬುದನ್ನು ಯಾರೂ ಮರೆಯುವಂತಿಲ್ಲ.

ವಂಚಕರು ತೆಲಂಗಾಣ ಪೊಲೀಸರ ಬಲೆಗೆ ಆಹಾರ ಸಾಮಗ್ರಿ ಹಾಗೂ ಪೀಠೋಪಕರಣ ಮಾರಾಟದ ನಕಲಿ ವೆಬ್ ತಾಣ ಸೃಷ್ಟಿಸಿ ಲಕ್ಷಾಂತರ ಜನರಿಂದ ಕೋಟ್ಯಂತರ ಹಣ ಸಂಗ್ರಹಿಸಿ ವಂಚನೆ ಮಾಡಿದ್ದ ವಂಚಕ ಗ್ಯಾಂಗ್ ನ ಕಿಂಗ್ ಪಿನ್ ನನ್ನು ತೆಲಂಗಾಣ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬನಶಂಕರಿಯ ಖಾಸಗಿ ಪಿಜಿಯಲ್ಲಿ ನೆಲೆಸಿದ್ದ ರಿಷಬ್ ಉಪಾಧ್ಯಾಯ್ ಬಂಧಿತ ಆರೋಪಿ. ಈತನ ಸಹಚರ ಪಂಜಾಬ್ ಮೂಲದ ರಾಹುಲ್ ತಲೆಮರಿಸಿಕೊಂಡಿದ್ದಾನೆ. ಬಂಧಿತ ರಿಷಬ್ ನಿಂದ 40 ಲಕ್ಷ ರೂ. ನಗದು ಹಣ, ಮೂರು ಮೊಬೈಲ್, ಎರಡು ಲ್ಯಾಪ್‌ಟಾಪ್, 20 ಡೆಬಿಟ್ ಕಾರ್ಡ್, ಆರು ಬ್ಯಾಂಕ್ ಪಾಸ್ ಬುಕ್ ವಶಪಡಿಸಿಕೊಳ್ಳಲಾಗಿದೆ.

ಸಿಂಪಲ್ ಪ್ಲಾನ್ ನಿಂದ ವಂಚನೆ ಉತ್ತರ ಪ್ರದೇಶ ಮೂಲದ ರಿಷಬ್ ಬಿಎಸ್ ಸಿ ಪದವೀಧರ. ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆ ಟಿಂಗ್ ನಲ್ಲಿ ಎಂಬಿಎ ಮಾಡಿದ್ದ. ವೆಬ್ ಸೈಟ್ ತಯಾರಿಸಿ ಕೊಡುವ ಕಲೆ ಕರಗತ ಮಾಡಿಕೊಂಡಿದ್ದ. ಕೆಲಸ ಸಿಗದ ಕಾರಣಕ್ಕೆ ಈತ ವೆಬ್ ಸೈಟ್ ಗಳನ್ನು ಮಾಡಿಕೊಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದ. ಅಮೆರಿಕ ಮೂಲದ ಪ್ರಿನ್ಸ್ ಎಂಬಾತ ರಿಷಬ್ ಗೆ ಪರಿಚಯವಾಗಿ ಜಾಬ್ ಫೈಂಡರ್ ವೆಬ್ ತಾಣವನ್ನು ಮಾಡಿಕೊಡುವಂತೆ ಹೇಳಿದ್ದ. ಈತನಿಂದ ವೆಬ್ ತಾಣ ಮಾಡಿಸಿಕೊಂಡಿದ್ದ ಪ್ರಿನ್ಸ್ ಅದರಿಂದ ಜನರ ಬಳಿ ಲಕ್ಷಾಂತರ ಡಾಲರ್ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನು ತಿಳಿದ ರಿಷಬ್ ಸುಲಭವಾಗಿ ಹಣ ಮಾಡಲು ಇದೇ ರೀತಿ ಪ್ಲಾನ್ ಮಾಡಿದ. ಇದಕ್ಕಾಗಿ ಪಂಜಾಬ್ ಮೂಲದ ಸೋಷಿಯಲ್ ಮೀಡಿಯಾ ಮಾಸ್ಟರ್ ರಾಹುಲ್ ನ ಸಹಾಯ ಪಡೆದಿದ್ದ. ಅಮೆರಿಕಾ ವೀಸಾ, ಉದ್ಯೋಗ ಕೊಡಿಸುವ ವೆಬ್ ತಾಣ ಸೃಷ್ಟಿಸಿ ಹಲವು ಮಂದಿಗೆ ಟೋಪಿ ಹಾಕಿದ್ದರು. ಆನಂತರ ಕಡಿಮೆ ಬೆಲೆಗೆ ಮನೆ ಪೀಠೋಪಕರಣ ಆಫರ್ ಕೊಟ್ಟು www.deckup.com ವೆಬ್ ತಾಣ ರಚಿಸಿ ಹಲವರಿಗೆ ಮೋಸ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನ ಆನ್‌ಲೈನ್ ವಹಿವಾಟು ಜಾಸ್ತಿ ಮಾಡಿದ್ದನ್ನು ಅರಿತಿದ್ದ ವಂಚಕರು www.zopnow.com www.modwayoffurnute.com ವೆಬ್ ತಾಣ ಸೃಷ್ಟಿಸಿ ಜನರಿಗೆ ಬಿಗ್ ಆಫರ್ ನೀಡಿದ್ದರು. ಇವರು ನೀಡಿದ್ದ ಆಫರ್ ನೋಡಿ ಲಕ್ಷಾಂತರ ಮಂದಿ ಆನ್‌ಲೈನ್ ಶಾಪಿಂಗ್ ಮಾಡಿದ್ದು, ವಸ್ತುವೂ ಇಲ್ಲ, ಹಣವೂ ಇಲ್ಲದೇ ಮೋಸ ಹೋಗಿದ್ದಾರೆ. ಆನ್‌ಲೈನ್ ಪೇಮೆಂಟ್ ಮೂಲಕ ಲಕ್ಷಾಂತರ ಮಂದಿಯಿಂದ ಹಣ ಪಡದು ವಂಚಕರು ಮೋಸ ಮಾಡುತ್ತಿದ್ದರು.

ಜೋಪ್ ನೌ ವೆಬ್ ತಾಣದಲ್ಲಿ ಆಹಾರ ಉತ್ಪನ್ನ ಖರೀದಿ ಮಾಡಿದ್ದ ಮಹಿಳೆಯೊಬ್ಬಳಿಗೆ ಯಾವ ಡೆಲಿವರಿ ಸಿಗಲಿಲ್ಲ. ಕಸ್ಟಮರ್ ಕೇರ್ ಗೆ ಸಂಪರ್ಕಿಸಿದ್ರೂ ಪ್ರಯೋಜನ ಆಗಲಿಲ್ಲ. ಕೇವಲ 1400 ರೂ. ಮೋಸ ಹೋಗಿದ್ದ ಮಹಿಳೆ ಜಾಣ್ಮೆಯಿಂದ ರಾಯದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರಾಬಾದ್ ಪೊಲೀಸರು ತನಿಖೆ ನಡೆಸಿದಾಗ ಲಕ್ಷಾಂತರ ಮಂದಿ ಹಣ ಕಳೆದುಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸಾವಿರ, ಐದು ನೂರು ರೂ. ಕಳೆದುಕೊಂಡ ಕಾರಣಕ್ಕೆ ಯಾರೂ ದೂರು ನೀಡಲು ಮುಂದಾಗಿಲ್ಲ.ಆದರೆ ತೆಲಂಗಾಣ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ನಕಲಿ ವೆಬ್ ತಾಣಗಳನ್ನು ಸೃಷ್ಟಿಸಿ ಬಿಗ್ ಆಫರ್ ಆಸೆ ತೋರಿಸಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ದೊಡ್ಡ ಜಾಲವನ್ನು ಬೆಳಕಿಗೆ ತಂದಿದ್ದಾರೆ. ಕೇವಲ 1400 ರೂ. ವಂಚನೆ ಎಂದು ನಂಬಿ ಸುಮ್ಮನೆ ಕೂತಿದ್ದರೆ, ಈ ಜಾಲ ಆಚೆಗೆ ಬರುತ್ತಿರಲಿಲ್ಲ.

ಸಜ್ಜನರ್ ನೀಡಿರುವ ಕಿವಿಮಾತು ಹೆಚ್ಚು ಡಿಸ್ಕೌಂಟ್ ಆಫರ್ ಕೊಡುವ ವೆಬ್ ತಾಣಗಳನ್ನು ನಂಬಿ ಹಣ ಕಳೆದುಕೊಳ್ಳಬೇಡಿ. ವಂಚಕ ವೆಬ್ ತಾಣಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ನಕಲಿ ವೆಬ್ ತಾಣದಲ್ಲಿ ಶಾಪಿಂಗ್ ಮಾಡಿ ಹಣ ಕಳೆದುಕೊಂಡರೆ ಕೂಡಲೇ ದೂರನ್ನು ನೀಡಿ ಎಂದು ಕನ್ನಡಿಗರು ಆಗಿರುವ ಸೈಬರಾಬಾದ್ ಪೊಲೀಸ್ ಕಮೀಷನರ್ ವಿ. ಸಿ. ಸಜ್ಜನರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಕಲಿ ವೆಬ್ ತಾಣದಲ್ಲಿ ಶಾಪಿಂಗ್ ಮಾಡಿ ಹಣ ಕಳೆದುಕೊಂಡೆ, ಕೇವಲ ಐದು ನೂರು ರೂ. ಎಂದು ನಿರ್ಲಕ್ಷ್ಯ ಮಾಡಬಾರದು. ಪೊಲೀಸರಿಗೆ ದೂರು ನೀಡಿದರೆ, ಆಗಬಹುದಾದ ಕೋಟ್ಯಂತರ ರೂ. ವಂಚನೆ ತಪ್ಪಿಸಲು ಅವಕಾಶವಿದೆ. ಹೀಗಾಗಿ ಮೋಸ ಹೋದ ಕೂಡಲೇ ದೂರು ಕೊಡಿ ಎಂದು ಸಜ್ಜನರ್ ಮನವಿ ಮಾಡಿದ್ದಾರೆ.

The post ನಕಲಿ ವೆಬ್ ಸೈಟ್ ವಂಚಕ ಜಾಲ ಪತ್ತೆ, ವಂಚಕರು ತೆಲಂಗಾಣ ಪೊಲೀಸರ ಬಲೆಗೆ appeared first on Hai Sandur kannada fortnightly news paper.

]]>
https://haisandur.com/2021/07/24/fake-web-site-detects-fraudulent-network-fraudsters-trap-telangana-police/feed/ 0
ಡೆತ್‌ನೋಟ್‌ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ, ನನ್ನ ಸಾವಿಗೆ ಶಾಲೆಯ ಆಡಳಿತ ಮಂಡಳಿಯೇ ಕಾರಣ ಎಂದ ಶಿಕ್ಷಕ https://haisandur.com/2020/12/05/%e0%b2%a1%e0%b3%86%e0%b2%a4%e0%b3%8d%e2%80%8c%e0%b2%a8%e0%b3%8b%e0%b2%9f%e0%b3%8d%e2%80%8c-%e0%b2%ac%e0%b2%b0%e0%b3%86%e0%b2%a6%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%b6%e0%b2%bf%e0%b2%95/ https://haisandur.com/2020/12/05/%e0%b2%a1%e0%b3%86%e0%b2%a4%e0%b3%8d%e2%80%8c%e0%b2%a8%e0%b3%8b%e0%b2%9f%e0%b3%8d%e2%80%8c-%e0%b2%ac%e0%b2%b0%e0%b3%86%e0%b2%a6%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%b6%e0%b2%bf%e0%b2%95/#respond Sat, 05 Dec 2020 09:49:42 +0000 https://haisandur.com/?p=11761 ಕೊರೋನ ಹಿನ್ನೆಲೆಯಲ್ಲಿ ವೇತನ ಸಿಗದೆ ಜೀವನ ನಿರ್ವಹಣೆಗೆ ಪರದಾಡುತ್ತಿದ್ದ ಖಾಸಗಿ ಶಾಲೆ ಶಿಕ್ಷಕನೊಬ್ಬ ಕಷ್ಟ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪದ ನಿವಾಸಿ ಚಂದ್ರಶೇಖರ್(39) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕ. ಮಂಚೇನಹಳ್ಳಿಯ ಅನುದಾನಿತ ಆಚಾರ್ಯ ಪ್ರೌಢಶಾಲೆಯಲ್ಲಿ ಚಂದ್ರಶೇಖರ್‌ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಟ್ಯುಟೋರಿಯಲ್ ಕೂಡ ನಡೆಸುತ್ತಿದ್ದರು. ಆದರೆ, ಕೊರೋನ ಹಾವಳಿ ಶುರುವಾದ ಬಳಿಕ ಶೇಖರ್‌ ಅವರ ಆದಾಯದ ಮೂಲ ಸಂಪೂರ್ಣವಾಗಿ ಬಂದ್‌ ಆಗಿತ್ತು ಕೊರೋನ ಹಿನ್ನೆಲೆಯಲ್ಲಿ […]

The post ಡೆತ್‌ನೋಟ್‌ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ, ನನ್ನ ಸಾವಿಗೆ ಶಾಲೆಯ ಆಡಳಿತ ಮಂಡಳಿಯೇ ಕಾರಣ ಎಂದ ಶಿಕ್ಷಕ appeared first on Hai Sandur kannada fortnightly news paper.

]]>
ಕೊರೋನ ಹಿನ್ನೆಲೆಯಲ್ಲಿ ವೇತನ ಸಿಗದೆ ಜೀವನ ನಿರ್ವಹಣೆಗೆ ಪರದಾಡುತ್ತಿದ್ದ ಖಾಸಗಿ ಶಾಲೆ ಶಿಕ್ಷಕನೊಬ್ಬ ಕಷ್ಟ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪದ ನಿವಾಸಿ ಚಂದ್ರಶೇಖರ್(39) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕ. ಮಂಚೇನಹಳ್ಳಿಯ ಅನುದಾನಿತ ಆಚಾರ್ಯ ಪ್ರೌಢಶಾಲೆಯಲ್ಲಿ ಚಂದ್ರಶೇಖರ್‌ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಟ್ಯುಟೋರಿಯಲ್ ಕೂಡ ನಡೆಸುತ್ತಿದ್ದರು. ಆದರೆ, ಕೊರೋನ ಹಾವಳಿ ಶುರುವಾದ ಬಳಿಕ ಶೇಖರ್‌ ಅವರ ಆದಾಯದ ಮೂಲ ಸಂಪೂರ್ಣವಾಗಿ ಬಂದ್‌ ಆಗಿತ್ತು

ಕೊರೋನ ಹಿನ್ನೆಲೆಯಲ್ಲಿ ಚಂದ್ರಶೇಖರ್‌ ಕರ್ತವ್ಯ ನಿರ್ವಹಿಸುತ್ತಿದ್ದ ಆಚಾರ್ಯ ಶಿಕ್ಷಣ ಸಂಸ್ಥೆ ಬಾಗಿಲು ಮುಚ್ಚಿದೆ. ಇತ್ತ ವಿದ್ಯಾರ್ಥಿಗಳಿಲ್ಲದೆ ಸ್ವಂತದ ಟ್ಯುಟೋರಿಯಲ್‌ ಕೂಡ ಬಂದ್‌ ಆಗಿತ್ತು. ನೆಚ್ಚಿಕೊಂಡಿದ್ದ ಆದಾಯದ ಮೂಲಗಳು ಕೈಕೊಟ್ಟ ನಂತರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಶೇಖರ್‌ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಾವಿಗೆ ಆಚಾರ್ಯ ಶಿಕ್ಷಣ ಸಂಸ್ಥೆಯೇ ಕಾರಣ ಅಂತ ಡೆತ್‌ನೋಟ್‌ ಕೂಡ ಬರೆದಿಟ್ಟಿದ್ದಾರೆ.

ನಾನು ಆಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ್ದೇನೆ ಆದರೆ, ಶಾಲೆಯ ಆಡಳಿತ ಮಂಡಳಿ ಮಾತ್ರ ನನ್ನ ಸೇವೆಯನ್ನು ಪರಿಗಣಿಸಿಲ್ಲ. ಇಷ್ಟು ವರ್ಷಗಳ ಸೇವೆಯ ಬಳಿಕವೂ ಆಡಳಿತ ಮಂಡಳಿ ನನಗೆ ಅನುದಾನಿತ ಶಿಕ್ಷಕನಾಗಿ ಅನುಮೋದನೆ ನೀಡಲಿಲ್ಲ. ಹೀಗಾಗಿ ನನ್ನ ಸಾವಿಗೆ ಆಚಾರ್ಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೇ ನೇರ ಹೊಣೆ ಅಂತ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

The post ಡೆತ್‌ನೋಟ್‌ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ, ನನ್ನ ಸಾವಿಗೆ ಶಾಲೆಯ ಆಡಳಿತ ಮಂಡಳಿಯೇ ಕಾರಣ ಎಂದ ಶಿಕ್ಷಕ appeared first on Hai Sandur kannada fortnightly news paper.

]]>
https://haisandur.com/2020/12/05/%e0%b2%a1%e0%b3%86%e0%b2%a4%e0%b3%8d%e2%80%8c%e0%b2%a8%e0%b3%8b%e0%b2%9f%e0%b3%8d%e2%80%8c-%e0%b2%ac%e0%b2%b0%e0%b3%86%e0%b2%a6%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%b6%e0%b2%bf%e0%b2%95/feed/ 0