Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಬೆಳಗಾವಿ Archives - Hai Sandur kannada fortnightly news paper https://haisandur.com/category/ಬೆಳಗಾವಿ/ Hai Sandur News.Karnataka India Sat, 28 Oct 2023 15:12:34 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಬೆಳಗಾವಿ Archives - Hai Sandur kannada fortnightly news paper https://haisandur.com/category/ಬೆಳಗಾವಿ/ 32 32 ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜಿ ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗಾ https://haisandur.com/2023/10/28/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b5%e0%b2%bf%e0%b2%b5%e0%b2%bf%e0%b2%a7%e0%b3%8b/ https://haisandur.com/2023/10/28/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b5%e0%b2%bf%e0%b2%b5%e0%b2%bf%e0%b2%a7%e0%b3%8b/#respond Sat, 28 Oct 2023 15:12:32 +0000 https://haisandur.com/?p=33742 ಬೆಳಗಾವಿ ; ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಸದರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜೆ (ಬೆಳಗಾವಿ) ಮತ್ತು ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗ (ಭಟ್ಕಳ) ಅವಿರೋಧವಾಗಿ ಇಂದು ಆಯ್ಕೆಗೊಂಡಿದ್ದಾರೆಂದು ಚುನಾವಣಾ ಅಧಿಕಾರಿ ವಾರ್ತಾ ಇಲಾಖೆ ಉಪ ನಿರ್ದೇಶಕ ಶ್ರೀ ಗುರುನಾಥ ಕಡಬೂರ ಘೋಷಿಸಿದರು. ಸಂಘದ ನೂತನ ನಿರ್ದೇಶಕರುಗಳಾದ ಶ್ರವಣ್ ಕುಮಾರ್ ಯಮನಪ್ಪ ಧರನಾಯಕ್, ಶ್ರೀಮತಿ ಕೀರ್ತನಕುಮಾರಿ ಕೆ, ಶ್ರೀ ಸಿದ್ದಲಿಂಗಯ್ಯ ಹಿರೇಮಠ್, ಶ್ರೀ ಈರಪ್ಪ […]

The post ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜಿ ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗಾ appeared first on Hai Sandur kannada fortnightly news paper.

]]>
ಬೆಳಗಾವಿ ; ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಸದರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜೆ (ಬೆಳಗಾವಿ) ಮತ್ತು ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗ (ಭಟ್ಕಳ) ಅವಿರೋಧವಾಗಿ ಇಂದು ಆಯ್ಕೆಗೊಂಡಿದ್ದಾರೆಂದು ಚುನಾವಣಾ ಅಧಿಕಾರಿ ವಾರ್ತಾ ಇಲಾಖೆ ಉಪ ನಿರ್ದೇಶಕ ಶ್ರೀ ಗುರುನಾಥ ಕಡಬೂರ ಘೋಷಿಸಿದರು.

ಸಂಘದ ನೂತನ ನಿರ್ದೇಶಕರುಗಳಾದ ಶ್ರವಣ್ ಕುಮಾರ್ ಯಮನಪ್ಪ ಧರನಾಯಕ್, ಶ್ರೀಮತಿ ಕೀರ್ತನಕುಮಾರಿ ಕೆ, ಶ್ರೀ ಸಿದ್ದಲಿಂಗಯ್ಯ ಹಿರೇಮಠ್, ಶ್ರೀ ಈರಪ್ಪ ಬಸಪ್ಪ ಬುಡ್ದ್ಯಾಗೋಳ್ , ಶ್ರೀ.ಪೆದ್ರು ಫ್ರಾನ್ಸಿಸ್ ಲೋಬೋ ,ಶ್ರೀ. ಸಂಪತ್ ಕುಮಾರ್ ಕಲ್ಯಾಣರಾವ್ ಮುಚ್ಚಳಂಬಿ , ಶ್ರೀ. ಶಿವರಾಯಪ್ಪ ಜನಜೀವಾಳ ಏಳುಕೋಟಿ, ಶ್ರೀ ರಾಜಕುಮಾರ ಬುಡ್ಡಪ್ಪ ನಾಯಿಕ್, ಶ್ರೀ. ಅಕಾನಬಾಷಾ ಮಹಮ್ಮದ್ ಕರ್ನಾಚಿ, ರಾಜಶ್ರೀ ವಸಂತ ಹೊಸಮನಿ, ಶ್ರೀ. ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ , ಶ್ರೀ.ಸಲೀಂ ಬಾಬಾಸಾಹೇಬ್ ಧಾರವಾಡಕರ್, ಶ್ರೀ. ಅಪ್ಪಾಸಾಹೇಬ್ ಶ್ರೀಪತಿ ಕುರುಣೆ , ಶ್ರೀ. ಮಲ್ಲಿಕಾರ್ಜುನ ಫಕೀರಪ್ಪ ಹೆಗನಾಯಕ್, ಶ್ರೀಮತಿ ಪ್ರೇಮಾ ವೀರಭದ್ರಯ್ಯ ಸಾಲಿಮಠ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಚಿಕ್ಕಮಠ, ನಾಗರತ್ನ ಗೋಕಾಕ್ ಮುಂತಾದವರು ಭಾಗವಹಿಸಿದ್ದರು.

The post ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜಿ ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗಾ appeared first on Hai Sandur kannada fortnightly news paper.

]]>
https://haisandur.com/2023/10/28/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b5%e0%b2%bf%e0%b2%b5%e0%b2%bf%e0%b2%a7%e0%b3%8b/feed/ 0
ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ https://haisandur.com/2023/10/21/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b8%e0%b2%b9%e0%b2%95%e0%b2%be%e0%b2%b0/ https://haisandur.com/2023/10/21/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b8%e0%b2%b9%e0%b2%95%e0%b2%be%e0%b2%b0/#respond Sat, 21 Oct 2023 06:56:59 +0000 https://haisandur.com/?p=33695 ಬೆಳಗಾವಿ, ಆ.21: ಬೆಳಗಾವಿಯ ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘ,ನಿ. ಬೆಳಗಾವಿಯ ಚುನಾವಣೆಯಲ್ಲಿ ಎಲ್ಲ 19 ಸ್ಥಾನಗಳಿಗೆ ಆವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯೂ ಆಗಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರು ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಸದರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆಯಾದವರು ಮುರುಗೇಶ ಬಾಬುರಾವ್‌ ಶಿವಪೂಜೆ, ಶ್ರವಣ್ ಕುಮಾರ ಯಮನಪ್ಪ ಧರನಾಯಕ, ಕೀರ್ತನಕುಮಾರಿ ಕೆ.ಸಿದ್ದಲಿಂಗಯ್ಯ […]

The post ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ appeared first on Hai Sandur kannada fortnightly news paper.

]]>
ಬೆಳಗಾವಿ, ಆ.21: ಬೆಳಗಾವಿಯ ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘ,ನಿ. ಬೆಳಗಾವಿಯ ಚುನಾವಣೆಯಲ್ಲಿ ಎಲ್ಲ 19 ಸ್ಥಾನಗಳಿಗೆ ಆವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯೂ ಆಗಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರು ಘೋಷಿಸಿದ್ದಾರೆ.

ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಸದರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆಯಾದವರು ಮುರುಗೇಶ ಬಾಬುರಾವ್‌ ಶಿವಪೂಜೆ, ಶ್ರವಣ್ ಕುಮಾರ ಯಮನಪ್ಪ ಧರನಾಯಕ, ಕೀರ್ತನಕುಮಾರಿ ಕೆ.ಸಿದ್ದಲಿಂಗಯ್ಯ ಇಂದೂಧರಯ್ಯ ಹಿರೇಮಠ, ಈರಪ್ಪ ಬಸಪ್ಪ ಬುಡ್ಡಾಗೋಳ, ಪೆದ್ದು ಫ್ರಾನ್ಸಿಸ್ ಲೋಬೋ, ಸಂಪತ್ ಕುಮಾರ್ ಕಲ್ಯಾಣರಾವ್ ಮುಚ್ಚಳಂಬಿ – ಶಿವರಾಯಪ್ಪ ಜನಜೀವಾಳ ಏಳುಕೋಟಿ, ರಾಜಕುಮಾರ ಬುಡ್ಡಪ್ಪ ನಾಯಿಕ, ಮುಸ್ತಫಾ ಆದಮ್ ಶೇಖ, ಆಕಾನಬಾಷಾ ಮಹಮ್ಮದ್ ಕರ್ನಾಚಿ, ರಾಜಶ್ರೀ ವಸಂತ ಹೊಸಮನಿ, ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ, ವಿಷ್ಣು ಮಂಜಯ್ಯ ದೇವಾಡಿಗ, ಸಲೀಂ ಬಾಬಾಸಾಹೇಬ್‌ ಧಾರವಾಡಕರ್, ಅಪ್ಪಾಸಾಹೇಬ್ ಶ್ರೀಪತಿ ಕುರುಣೆ, ಮಲ್ಲಿಕಾರ್ಜುನ ಫಕೀರಪ್ಪ ಹೆಗನಾಯಕ್, ಪ್ರತಿಭಾ ಪ್ರಕಾಶ್ ಧೂಪದ, ಪ್ರೇಮಾ ವೀರಭದ್ರಯ್ಯ ಸಾಲಿಮಠ ಮುಂತಾದವರು ಅವಿರೋಧವಾಗಿ ಆಯ್ಕೆಗೊಂಡವರಾಗಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಅವರು ಸದರಿ ಸಂಘಕ್ಕೆ ಆ.25 20 23 ರಂದು ಚುನಾವಣೆ ನಿಗದಿಪಡಿಸಲಾಗಿತ್ತು, ಸಾಮಾನ್ಯ ಕ್ಷೇತ್ರಗಳು 13, ಹಿಂದುಳಿದ ವರ್ಗಗಳ ಕ್ಷೇತ್ರ ಎರಡು, ಪರಿಶಿಷ್ಟ ಜಾತಿ ಒಂದು, ಪರಿಶಿಷ್ಟ ಪಂಗಡ ಒಂದು ಒಟ್ಟು 19 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು, ಒಟ್ಟು 19 ಸ್ಥಾನಗಳಿಗೆ 19 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ನಾಮಪತ್ರ ಹಿಂತೆ ತೆಗೆದುಕೊಳ್ಳುವ ಕೊನೆಯ ದಿನದವರೆಗೂ ಯಾರೊಬ್ಬರು ನಾಮಪತ್ರಗಳನ್ನು ಹಿಂತೆ ತೆಗೆದುಕೊಳ್ಳಲಿಲ್ಲ, ಅಂತಿಮವಾಗಿ ಕಣದಲ್ಲಿ 19 ಸ್ಥಾನಗಳಿಗೆ 19 ಆಭ್ಯರ್ಥಿಗಳು ಉಳಿದಿದ್ದರು, ಹೀಗಾಗಿ ಎಲ್ಲ ಸ್ಥಾನಗಳಿಗೆ ಕ್ರಮಬದ್ಧವಾಗಿ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 14 ರನ್ವಯ ಅವಿರೋಧ ಆಯ್ಕೆ ನಡೆದಿದೆ. ಆ.27-10-2023 ರಂದು ಸಂಘದ ಆಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬೆಳಗಾವಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಭವನದಲ್ಲಿ ಮುಂಜಾನೆ 10 ಗಂಟೆಗೆ ಚುನಾವಣೆಯನ್ನು ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

The post ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ appeared first on Hai Sandur kannada fortnightly news paper.

]]>
https://haisandur.com/2023/10/21/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b8%e0%b2%b9%e0%b2%95%e0%b2%be%e0%b2%b0/feed/ 0
ಕುಂದಾನಗರಿ ಬೆಳಗಾವಿಯ ಹುಡುಗರ ಸಾಹಸ, “ಪರ್ಯಾಯ” ಚಲನಚಿತ್ರ ತಂಡಕ್ಕೆ ಶುಭವಾಗಲಿ https://haisandur.com/2023/09/18/%e0%b2%95%e0%b3%81%e0%b2%82%e0%b2%a6%e0%b2%be%e0%b2%a8%e0%b2%97%e0%b2%b0%e0%b2%bf-%e0%b2%ac%e0%b3%86%e0%b2%b3%e0%b2%97%e0%b2%be%e0%b2%b5%e0%b2%bf%e0%b2%af-%e0%b2%b9%e0%b3%81%e0%b2%a1%e0%b3%81%e0%b2%97/ https://haisandur.com/2023/09/18/%e0%b2%95%e0%b3%81%e0%b2%82%e0%b2%a6%e0%b2%be%e0%b2%a8%e0%b2%97%e0%b2%b0%e0%b2%bf-%e0%b2%ac%e0%b3%86%e0%b2%b3%e0%b2%97%e0%b2%be%e0%b2%b5%e0%b2%bf%e0%b2%af-%e0%b2%b9%e0%b3%81%e0%b2%a1%e0%b3%81%e0%b2%97/#respond Mon, 18 Sep 2023 04:39:48 +0000 https://haisandur.com/?p=33434 ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ರಂಗ ಅಷ್ಟೊಂದು ಬೆಳೆದಿಲ್ಲ. ಆಗಾಗ ಒಂದೊಂದು ಪ್ರಯತ್ನ ನಡೆದಿರುವುದುಂಟು. ಚಿತ್ರನಿರ್ಮಾಣಕ್ಕೆ ಅಗತ್ಯವಾದ ಸ್ಟುಡಿಯೋ ಸೌಕರ್ಯ ಈ ಭಾಗದಲ್ಲಿ ಇಲ್ಲದಿರುವುದೂ ಒಂದು ಕಾರಣ. ಬಹಳ ಹಿಂದೆ ಮದ್ರಾಸ್ ಬಿಟ್ಟರೆ ಕೊಲ್ಲಾಪುರ, ಪುಣೆ, ಮುಂಬಯಿಗಳಿಗೆ ಹೋಗಬೇಕಾಗುತ್ತಿತ್ತು. ಕನ್ನಡದ ಮೊದಲ ಚಿತ್ರ “ಸುಲೋಚನಾ” ಸಹ ೧೯೩೩-೩೪ ರಲ್ಲಿ ಕೊಲ್ಲಾಪುರದಲ್ಲಿ ಚಿತ್ರಣವಾಗಿತ್ತು. ೧೯೩೭ ರಲ್ಲಿ ಉತ್ತರ ಕರ್ನಾಟಕದ ಮೊದಲ ಚಿತ್ರ” ಚಿರಂಜೀವಿ” (ಭಕ್ತ ಮಾರ್ಕಂಡೇಯ) ಹುಬ್ಬಳ್ಳಿ ವಿಜಾಪುರದವರೆಲ್ಲ ಸೇರಿ ಮಾಡಿದ್ದರು. ನಂತರ ೧೯೪೬ ರಲ್ಲಿ ಚಂದ್ರಹಾಸ ಸಿನೆಮಾ ತಯಾರಾಯಿತು. […]

The post ಕುಂದಾನಗರಿ ಬೆಳಗಾವಿಯ ಹುಡುಗರ ಸಾಹಸ, “ಪರ್ಯಾಯ” ಚಲನಚಿತ್ರ ತಂಡಕ್ಕೆ ಶುಭವಾಗಲಿ appeared first on Hai Sandur kannada fortnightly news paper.

]]>
ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ರಂಗ ಅಷ್ಟೊಂದು ಬೆಳೆದಿಲ್ಲ. ಆಗಾಗ ಒಂದೊಂದು ಪ್ರಯತ್ನ ನಡೆದಿರುವುದುಂಟು. ಚಿತ್ರನಿರ್ಮಾಣಕ್ಕೆ ಅಗತ್ಯವಾದ ಸ್ಟುಡಿಯೋ ಸೌಕರ್ಯ ಈ ಭಾಗದಲ್ಲಿ ಇಲ್ಲದಿರುವುದೂ ಒಂದು ಕಾರಣ. ಬಹಳ ಹಿಂದೆ ಮದ್ರಾಸ್ ಬಿಟ್ಟರೆ ಕೊಲ್ಲಾಪುರ, ಪುಣೆ, ಮುಂಬಯಿಗಳಿಗೆ ಹೋಗಬೇಕಾಗುತ್ತಿತ್ತು. ಕನ್ನಡದ ಮೊದಲ ಚಿತ್ರ “ಸುಲೋಚನಾ” ಸಹ ೧೯೩೩-೩೪ ರಲ್ಲಿ ಕೊಲ್ಲಾಪುರದಲ್ಲಿ ಚಿತ್ರಣವಾಗಿತ್ತು. ೧೯೩೭ ರಲ್ಲಿ ಉತ್ತರ ಕರ್ನಾಟಕದ ಮೊದಲ ಚಿತ್ರ” ಚಿರಂಜೀವಿ” (ಭಕ್ತ ಮಾರ್ಕಂಡೇಯ) ಹುಬ್ಬಳ್ಳಿ ವಿಜಾಪುರದವರೆಲ್ಲ ಸೇರಿ ಮಾಡಿದ್ದರು. ನಂತರ ೧೯೪೬ ರಲ್ಲಿ ಚಂದ್ರಹಾಸ ಸಿನೆಮಾ ತಯಾರಾಯಿತು. ೧೯೬೬-೬೭ ರಲ್ಲಿ ಉತ್ತರ ಕರ್ನಾಟಕದವರು ನಿರ್ಮಿಸಿದ ” ಸಂಗೊಳ್ಳಿ ರಾಯಣ್ಣ” ಬಹಳ ಪ್ರಸಿದ್ಧಿ ಪಡೆಯಿತು. ಅದರಲ್ಲಿ ಲತಾ ಮಂಗೇಶಕರ್, ಆಶಾ ಭೋಸೆ, ಮನ್ನಾಡೇ ಎಲ್ಲ ಹಾಡಿದ್ದರು.” ಬೆಳ್ಳನೆ ಬೆಳಗಾಯಿತು” ಎಂಬ ಹಾಡು ಬಹಳ ಜನಪ್ರಿಯವಾಯಿತು. (೨೦೧೨ ರಲ್ಲಿ ಮತ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ” ಸಿನಿಮಾ ಬೆಳಗಾವಿಯ ಆನಂದ ಅಪ್ಪುಗೋಳರಿಂದ ತಯಾರಾಯಿತು). ಹುಬ್ಬಳ್ಳಿಯಲ್ಲೇ ಮತ್ತೆ ಕೆಲ ಪ್ರಯತ್ನಗಳು ನಡೆದವು.

ಈಚೆಗೆ ಕೆಲವು ಉತ್ಸಾಹಿ ಹೊಸ ಹುಡುಗರು ಕಿರು ಚಿತ್ರಗಳನ್ನು ತಯಾರಿಸುವ ಪ್ರಯತ್ನಕ್ಕೆ ತೊಡಗಿದ್ದು ಕಂಡುಬರುತ್ತದೆ. ಇದೀಗ ಮಮತಾ ಕ್ರಿಯೇಶನ್ ಹೆಸರಿನ ಚಿತ್ರ ಸಂಸ್ಥೆ ನಿರ್ಮಿಸಿರುವ ” ಪರ್ಯಾಯ” ದಂತಹ ಒಂದು ಸಾಹಸ. ಬೆಳಗಾವಿಯ ರಾಜಕುಮಾರ ನಾಯಕ ಎಂಬವರು ಮತ್ತು, ಪತ್ರಕರ್ತ ಮುರುಗೇಶ ಶಿವಪೂಜಿ ಗೆಳೆಯರ ಬಳಗದವರು ನಿರ್ಮಿಸಿದ ಸುಮಾರು ಎರಡೂವರೆ ತಾಸುಗಳ ಈ ಪರ್ಯಾಯ ಈಗ ರಾಜ್ಯದ ಹಲವೆಡೆ ತೆರೆ ಕಂಡಿದೆ. ಬೆಳಗಾವಿಯ ನಿರ್ಮಲ ಟಾಕೀಸಿನಲ್ಲಿ ಅದು ಎರಡನೆಯ ವಾರಕ್ಕೆ ಕಾಲಿಟ್ಟಿದೆ. ಗೋವಿಂದ(ಕಿವುಡ), ಗೋಪಾಲ(ಅಂಧ) ಮತ್ತು ಪಾಂಡು (ಮೂಕ) ಎಂಬ ಮೂವರು ಯುವಕರ ಸುತ್ತ ಹೆಣೆದ ಕತೆ ಇದು. ಹಳ್ಳಿಯೊಂದರಲ್ಲಿ ವಾಸಿಸುವ ಈ ಮೂವರಿಗೂ ಹೇಗಾದರೂ ಶ್ರೀಮಂತರಾಗಿ ಸುಖ ಜೀವನ ನಡೆಸುವ ಆಸೆ. ಹತ್ತು ಹಲವು ಕನಸು. ಕನಸು ಕಾಣುವುದೂ ತಪ್ಪಲ್ಲ, ಆಸೆಗಳಿರುವುದೂ ತಪ್ಪಲ್ಲ. ಆದರೆ ಅದಕ್ಕಾಗಿ ಸರಿಯಾದ ದಾರಿ ಹಿಡಿಯುವುದೂ ಅಷ್ಟೇ ಮುಖ್ಯ.ಈ ಯುವಕರು” ಬಂಗಾರದ ಜಿಂಕೆ ” ಬೆನ್ನು ಹತ್ತಿ ಆಸೆಯಿಂದ ಮೋಸಗಾರರ ಬಲೆಗೆ ಬಿದ್ದು ಇದ್ದ ಮನೆ ಆಸ್ತಿಗಳನ್ನೂ ಕಳೆದುಕೊಳ್ಳುವಂತಾಗುತ್ತದೆ. ಇದು ಸಿನಿಮಾದ ಥೀಮ್

ಒಳ್ಳೆಯ ಪ್ರಯತ್ನ ಎಂದು ನೋಡುಗರಿಂದ ಪ್ರಶಂಸೆ ಪಡೆದ ” ಪರ್ಯಾಯ” ದಲ್ಲಿ ಕೆಲವೊಂದು ಸಣ್ಣಪುಟ್ಟ ಲೋಪದೋಷಗಳಿದ್ದರೂ ಒಮ್ಮೆ ನೋಡಿ ಪ್ರೋತ್ಸಾಹಿಸಬೇಕಾದ ಚಿತ್ರ. ಯಾವ ಬ್ರಾಂಡೆಡ್ ನಟನಟಿಯರೂ ಇಲ್ಲದೇ ಎಲ್ಲ ಈ ಭಾಗದ ಹೊಸಬರನ್ನೇ ಒಳಗೊಂಡಿರುವ ಚಿತ್ರತಂಡದ ಉತ್ಸಾಹ ಮೆಚ್ಚತಕ್ಕದ್ದೇ. ಛಾಯಾಗ್ರಹಣ ಚೆನ್ನಾಗಿದೆ. ಸಂಗೀತ ಪರವಾಗಿಲ್ಲ. ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗೋಪಾಲನ ತಾಯಿಯ ಪಾತ್ರದಲ್ಲಿ ಜಯಂತಿ ರೇವಡಿ ಅವರ ಅಭಿನಯ ಉತ್ತಮ. ಹಿರಿಯ, ಅನುಭವಿ ನಿರ್ದೇಶಕರ ಸಲಹೆ, ಮಾರ್ಗದರ್ಶನ ಪಡೆದುಕೊಂಡಲ್ಲಿ ಈ ತಂಡ ಇನ್ನಷ್ಟು ಉತ್ತಮ ಚಿತ್ರಗಳನ್ನು ಕೊಡಬಲ್ಲುದೆಂಬ ಭರವಸೆಯಿಡಬಹುದು. ಉತ್ತರ ಕರ್ನಾಟಕದಲ್ಲಿ ಚಿತ್ರೋದ್ಯಮ ಬೆಳೆಯಬೇಕಾದ ಅಗತ್ಯವಿದೆ. ಇಂತಹ ಸಾಹಸಗಳಿಗೆ ಬಂಡವಾಳದಾರರ ನೆರವು ಮತ್ತು ಪ್ರೇಕ್ಷಕರ ಉತ್ತೇಜನ ಸಿಗಬೇಕಾಗಿದೆ. ತಪ್ಪದೇ ನೋಡಿ

The post ಕುಂದಾನಗರಿ ಬೆಳಗಾವಿಯ ಹುಡುಗರ ಸಾಹಸ, “ಪರ್ಯಾಯ” ಚಲನಚಿತ್ರ ತಂಡಕ್ಕೆ ಶುಭವಾಗಲಿ appeared first on Hai Sandur kannada fortnightly news paper.

]]>
https://haisandur.com/2023/09/18/%e0%b2%95%e0%b3%81%e0%b2%82%e0%b2%a6%e0%b2%be%e0%b2%a8%e0%b2%97%e0%b2%b0%e0%b2%bf-%e0%b2%ac%e0%b3%86%e0%b2%b3%e0%b2%97%e0%b2%be%e0%b2%b5%e0%b2%bf%e0%b2%af-%e0%b2%b9%e0%b3%81%e0%b2%a1%e0%b3%81%e0%b2%97/feed/ 0
ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಅಧಿವೇಶನ ಸಿದ್ಧತೆ ಪರಿಶೀಲನೆ, ವಸತಿ, ಊಟೋಪಾಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು: ಅಧಿಕಾರಿಗಳಿಗೆ ಸೂಚನೆ https://haisandur.com/2022/12/12/%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b2%be-%e0%b2%b8%e0%b2%ad%e0%b2%be%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7%e0%b2%b0%e0%b2%be%e0%b2%a6-%e0%b2%b5%e0%b2%bf/ https://haisandur.com/2022/12/12/%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b2%be-%e0%b2%b8%e0%b2%ad%e0%b2%be%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7%e0%b2%b0%e0%b2%be%e0%b2%a6-%e0%b2%b5%e0%b2%bf/#respond Mon, 12 Dec 2022 13:58:54 +0000 https://haisandur.com/?p=30725 ಬೆಳಗಾವಿ, ಡಿ.12: ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ 30 ರವರೆಗೆ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆಯು ಪ್ರತಿ ಬಾರಿಯಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಮಂಡಳದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ(ಡಿ.12) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಸತಿ, ಊಟ, ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿದಾಗ ಇಡೀ […]

The post ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಅಧಿವೇಶನ ಸಿದ್ಧತೆ ಪರಿಶೀಲನೆ, ವಸತಿ, ಊಟೋಪಾಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು: ಅಧಿಕಾರಿಗಳಿಗೆ ಸೂಚನೆ appeared first on Hai Sandur kannada fortnightly news paper.

]]>
ಬೆಳಗಾವಿ, ಡಿ.12: ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ 30 ರವರೆಗೆ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆಯು ಪ್ರತಿ ಬಾರಿಯಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನಮಂಡಳದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ(ಡಿ.12) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿ, ಊಟ, ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿದಾಗ ಇಡೀ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಉನ್ನತಮಟ್ಟದ ಅಧಿಕಾರಿಗಳು ಸೇರಿದಂತೆ ಇಡೀ ವ್ಯವಸ್ಥೆಯೇ ಇಲ್ಲಿ ಇರುವುದರಿಂದ ವಸತಿ, ಊಟೋಪಹಾರದ ಅತ್ಯುತ್ತಮ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ.

ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳು/ಸಿಬ್ಬಂದಿ ಆಗಮಿಸುವುದರಿಂದ ಸರಳ ರೀತಿಯ ಹಾಗೂ ಗುಣಮಟ್ಟದ ಆಹಾರವನ್ನು ಕಲ್ಪಿಸಬೇಕು.
ಸಾರಿಗೆ ವ್ಯವಸ್ಥೆಯು ಪ್ರಮುಖವಾಗಿದ್ದು, ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.

ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯರು ಮತ್ತು ಸಿಬ್ಬಂದಿ ತಂಡವನ್ನು ನಿಯೋಜಿಸಬೇಕು. ಅಗತ್ಯಬಿದ್ದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ಸಭಾಧ್ಯಕ್ಷರಾದ ಕಾಗೇರಿ ಅವರು ನಿರ್ದೇಶನ ನೀಡಿದರು.
ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸುವುದರಿಂದ ಅವರಿಗೂ ಕೂಡ ಉತ್ತಮ ಊಟೋಪಹಾರ ಕಲ್ಪಿಸಬೇಕು.

ಜನರ ಅಪೇಕ್ಷೆಯಂತೆ ಉತ್ತಮ ರೀತಿಯಲ್ಲಿ ಅಧಿವೇಶನ ನಡೆಸುವ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮನ್ನು ನಾವು ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕಿದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ಸಭಾಧ್ಯಕ್ಷರಾದ ಕಾಗೇರಿ ಹೇಳಿದರು.

ಅಧಿವೇಶನಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ಅಥವಾ ತಾಂತ್ರಿಕ ತೊಂದರೆಗಳು ಇದ್ದಲ್ಲಿ ಇಲಾಖೆಗಳ ಮುಖ್ಯಸ್ಥರಿಗೆ ವರದಿ ನೀಡಬೇಕು. ಇದರಿಂದ ಸೂಕ್ತ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿವೇಶನ ಸಿದ್ಧತೆಗಾಗಿ ವಿವಿಧ ಸಮಿತಿಗಳ ರಚನೆ ಹಾಗೂ ಅವುಗಳ ಕಾರ್ಯನಿರ್ವಹಣೆ ಮತ್ತು ಸಿದ್ಧತೆಗಳ ಕುರಿತು ಮಾಹಿತಿಯನ್ನು ನೀಡಿದರು.

ಪ್ರತಿಯೊಂದು ವಸತಿಗೃಹಗಳಿಗೆ ಹಾಗೂ ಸಚಿವರುಗಳಿಗೆ ಸಂಪರ್ಕಾಧಿಕಾರಿಗಳನ್ನು ನಿಯೋಜಿಸಲಾಗಿದೆ.
ವೈದ್ಯಕೀಯ ತಪಾಸಣೆ ಹಾಗೂ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು 16 ಕಡೆಗಳಲ್ಲಿ ಪ್ರತ್ಯೇಕ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭದ್ರತೆ ಹಾಗೂ ಪಾರ್ಕಿಂಗ್ ಮತ್ತಿತರ ವಿಷಯಗಳ ಕುರಿತು ಪೊಲೀಸ್ ಆಯುಕ್ತರಾದ ಎಂ.ಬಿ.ಬೋರಲಿಂಗಯ್ಯ ಅವರು ಮಾಹಿತಿಯನ್ನು ನೀಡಿದರು.

ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

The post ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಅಧಿವೇಶನ ಸಿದ್ಧತೆ ಪರಿಶೀಲನೆ, ವಸತಿ, ಊಟೋಪಾಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು: ಅಧಿಕಾರಿಗಳಿಗೆ ಸೂಚನೆ appeared first on Hai Sandur kannada fortnightly news paper.

]]>
https://haisandur.com/2022/12/12/%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b2%be-%e0%b2%b8%e0%b2%ad%e0%b2%be%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7%e0%b2%b0%e0%b2%be%e0%b2%a6-%e0%b2%b5%e0%b2%bf/feed/ 0
ಕಿತ್ತೂರು ಉತ್ಸವ-2022: ವೀರಜ್ಯೋತಿ ಯಾತ್ರೆ, ವೀರಜ್ಯೋತಿ ಅ. 15 ರಂದು ಬೆಳಗಾವಿ ಜಿಲ್ಲೆಗೆ ಪ್ರವೇಶ https://haisandur.com/2022/10/13/%e0%b2%95%e0%b2%bf%e0%b2%a4%e0%b3%8d%e0%b2%a4%e0%b3%82%e0%b2%b0%e0%b3%81-%e0%b2%89%e0%b2%a4%e0%b3%8d%e0%b2%b8%e0%b2%b5-2022-%e0%b2%b5%e0%b3%80%e0%b2%b0%e0%b2%9c%e0%b3%8d%e0%b2%af%e0%b3%8b%e0%b2%a4/ https://haisandur.com/2022/10/13/%e0%b2%95%e0%b2%bf%e0%b2%a4%e0%b3%8d%e0%b2%a4%e0%b3%82%e0%b2%b0%e0%b3%81-%e0%b2%89%e0%b2%a4%e0%b3%8d%e0%b2%b8%e0%b2%b5-2022-%e0%b2%b5%e0%b3%80%e0%b2%b0%e0%b2%9c%e0%b3%8d%e0%b2%af%e0%b3%8b%e0%b2%a4/#respond Thu, 13 Oct 2022 13:50:25 +0000 https://haisandur.com/?p=29862 ಬೆಳಗಾವಿ, ಅ.13 : ಕಿತ್ತೂರು ಉತ್ಸವದ ಅಂಗವಾಗಿ ಪ್ರಥಮಬಾರಿ ವೀರಜ್ಯೋತಿಯಾತ್ರೆ ರಾಜ್ಯದಾದ್ಯಂತ ಸಂಚರಿಸಿ, ಶನಿವಾರ (ಅ.15) ಬಾಗಲಕೋಟೆಯಿಂದ ರಾಮದುರ್ಗ ಮೂಲಕ ಬೆಳಗಾವಿ ಜಿಲ್ಲೆ ಪ್ರವೇಶಿಸಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2 ರಂದು ಬೆಂಗಳೂರಿನಲ್ಲಿ ಜ್ಯೋತಿಯಾತ್ರೆಗೆ ಚಾಲನೆ ನೀಡಿದ್ದರು. ಹೊಸಕೋಟೆ, ಕೋಲಾರ, ಬೆಂಗಳೂರು ದಕ್ಷಿಣ, ರಾಮನಗರ, ಚನ್ನಪಟ್ಟಣ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, […]

The post ಕಿತ್ತೂರು ಉತ್ಸವ-2022: ವೀರಜ್ಯೋತಿ ಯಾತ್ರೆ, ವೀರಜ್ಯೋತಿ ಅ. 15 ರಂದು ಬೆಳಗಾವಿ ಜಿಲ್ಲೆಗೆ ಪ್ರವೇಶ appeared first on Hai Sandur kannada fortnightly news paper.

]]>
ಬೆಳಗಾವಿ, ಅ.13 : ಕಿತ್ತೂರು ಉತ್ಸವದ ಅಂಗವಾಗಿ ಪ್ರಥಮಬಾರಿ ವೀರಜ್ಯೋತಿಯಾತ್ರೆ ರಾಜ್ಯದಾದ್ಯಂತ ಸಂಚರಿಸಿ, ಶನಿವಾರ (ಅ.15) ಬಾಗಲಕೋಟೆಯಿಂದ ರಾಮದುರ್ಗ ಮೂಲಕ ಬೆಳಗಾವಿ ಜಿಲ್ಲೆ ಪ್ರವೇಶಿಸಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2 ರಂದು ಬೆಂಗಳೂರಿನಲ್ಲಿ ಜ್ಯೋತಿಯಾತ್ರೆಗೆ ಚಾಲನೆ ನೀಡಿದ್ದರು.

ಹೊಸಕೋಟೆ, ಕೋಲಾರ, ಬೆಂಗಳೂರು ದಕ್ಷಿಣ, ರಾಮನಗರ, ಚನ್ನಪಟ್ಟಣ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ, ವಿಜಯಪುರ ಹಾಗೂ ಬಾಗಲಕೋಟೆ ಬೆಳಗಾವಿ, ಧಾರವಾಡ, ಮೂಲಕ ಅ.16 ರಂದು ಬೆಳಗಾವಿ ನಗರಕ್ಕೆ ಆಗಮಿಸಿ, ಜಿಲ್ಲೆಯಾದ್ಯಂತ ಸಂಚರಿಸಲಿದೆ.

ಅ.15 ರಂದು ರಾಮದುರ್ಗಕ್ಕೆ ವೀರಜ್ಯೋತಿ ಆಗಮಿಸಿ, ಸವದತ್ತಿಯಲ್ಲಿ ವಾಸ್ತವ್ಯ ಮಾಡಲಿದೆ. ಅ.16 ರಂದು ಇನಾಂಹೊಂಗಲ ಮಾರ್ಗವಾಗಿ ಧಾರವಾಡಗೆ ತೆರಳಲಿರುವ ವೀರಜ್ಯೋತಿ, ಅಳ್ನಾವರ- ಬೀಡಿ- ನಂದಗಡ ಮಾರ್ಗವಾಗಿ ಖಾನಾಪೂರಗೆ ತಲುಪಲಿದೆ. ಅದೇ ದಿನ ಖಾನಾಪೂರದಿಂದ ಸಂಜೆ 6 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ.

ವೀರಜ್ಯೋತಿ ಜಿಲ್ಲೆಯಾದ್ಯಂತ ಸಂಚಾರ:

ಅ.17 ರಂದು ಬೆಳಗಾವಿಯಿಂದ ಕಾಕತಿಗೆ ತೆರಳಲಿರುವ ವೀರಜ್ಯೋತಿ, ಪೂಜೆಯ ನಂತರ ಹುಕ್ಕೇರಿ, ಸಂಕೇಶ್ವರ ಮೂಲಕ ನಿಪ್ಪಾಣಿಗೆ ತಲುಪಿ ವಾಸ್ತವ್ಯ ಮಾಡಲಿದೆ. ಅದೇ ರೀತಿಯಲ್ಲಿ ಅ.18 ರಂದು ನಿಪ್ಪಾಣಿಯಿಂದ ಚಿಕ್ಕೋಡಿ, ಕಾಗವಾಡ ಮೂಲಕ ಸಂಚರಿಸಿ ಅಥಣಿಯಲ್ಲಿ ವಾಸ್ತವ್ಯ ಮಾಡಲಿದೆ.

ಅಕ್ಟೋಬರ್ 19 ರಂದು ಅಥಣಿಯಿಂದ ವೀರಜ್ಯೋತಿ ಬೀಳ್ಕೊಡಲಿದ್ದು, ರಾಯಬಾಗ, ಮೂಡಲಗಿ,(ಕಂಕಣವಾಡಿ- ಗುರ್ಲಾಪೂರ ಕ್ರಾಸ್ ಮಾರ್ಗ) ಸಂಚರಿಸಿ, ಗೋಕಾಕ್ ಗೆ ಆಗಮಿಸಿ ವಾಸ್ತವ್ಯ ಮಾಡಲಿದೆ. ಅ.20 ರಂದು ಗೋಕಾಕ್ ನಿಂದ ಯರಗಟ್ಟಿ, ಮುರಗೋಡ ತಲುಪಿ, ಅ.20 ಹಾಗೂ 21 ರಂದು ಬೈಲಹೊಂಗಲನಲ್ಲಿ ವಾಸ್ತವ್ಯ ಇರಲಿದೆ.

ಬೈಲಹೊಂಗಲನಿಂದ ವೀರಜ್ಯೋತಿಯನ್ನು ಅಕ್ಟೋಬರ್ 22 ರಂದು ಬೀಳ್ಕೊಡಲಿದ್ದು, ಅಮಟೂರು- ಆನಿಗೋಳ, ಸಂಗೋಳ್ಳಿ, ಇಟಗಿ ಕ್ರಾಸ್, ಸಕ್ಕರೆ ಕಾರ್ಖಾನೆ ಮೂಲಕ ಕಿತ್ತೂರು ರಾಣಿ ಚನ್ನಮ್ಮ ಸೈನಿಕ ಶಾಲೆಗೆ ಆಗಮಿಸಿ, ವಾಸ್ತವ್ಯ ಮಾಡಲಿದೆ.

ಅ.23 ರಂದು ಬೆಳಿಗ್ಗೆ 9 ಘಂಟೆಗೆ ಕಿತ್ತೂರು ರಾಣಿ ಚನ್ನಮ್ಮ ಸೈನಿಕ ಶಾಲೆಯಿಂದ ನಿರ್ಗಮಿಸಿ, ಚನ್ನಮ್ಮನ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜ್ಯೋತಿಯನ್ನು ಬರಮಾಡಿಕೊಂಡ ಬಳಿಕ ಪೂಜೆ, ಅದ್ದೂರಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಕಿತ್ತೂರು ಉತ್ಸವ ಸಮಿತಿ ಅಧ್ಯಕ್ಷರಾದ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಕಿತ್ತೂರು ಉತ್ಸವ-2022: ವೀರಜ್ಯೋತಿ ಯಾತ್ರೆ, ವೀರಜ್ಯೋತಿ ಅ. 15 ರಂದು ಬೆಳಗಾವಿ ಜಿಲ್ಲೆಗೆ ಪ್ರವೇಶ appeared first on Hai Sandur kannada fortnightly news paper.

]]>
https://haisandur.com/2022/10/13/%e0%b2%95%e0%b2%bf%e0%b2%a4%e0%b3%8d%e0%b2%a4%e0%b3%82%e0%b2%b0%e0%b3%81-%e0%b2%89%e0%b2%a4%e0%b3%8d%e0%b2%b8%e0%b2%b5-2022-%e0%b2%b5%e0%b3%80%e0%b2%b0%e0%b2%9c%e0%b3%8d%e0%b2%af%e0%b3%8b%e0%b2%a4/feed/ 0
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ-2022 https://haisandur.com/2022/10/10/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf-%e0%b2%b5%e0%b2%be%e0%b2%b2%e0%b3%8d%e0%b2%ae%e0%b3%80%e0%b2%95%e0%b2%bf-%e0%b2%9c%e0%b2%af%e0%b2%82-3/ https://haisandur.com/2022/10/10/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf-%e0%b2%b5%e0%b2%be%e0%b2%b2%e0%b3%8d%e0%b2%ae%e0%b3%80%e0%b2%95%e0%b2%bf-%e0%b2%9c%e0%b2%af%e0%b2%82-3/#respond Mon, 10 Oct 2022 02:50:13 +0000 https://haisandur.com/?p=29724 ವಿಶ್ವಕ್ಕೆ ರಾಮಾಯಣ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ: ಶಾಸಕ ಅನಿಲ ಬೆನಕೆ ಬೆಳಗಾವಿ, ಅ.9 : ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ […]

The post ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ-2022 appeared first on Hai Sandur kannada fortnightly news paper.

]]>
ವಿಶ್ವಕ್ಕೆ ರಾಮಾಯಣ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ: ಶಾಸಕ ಅನಿಲ ಬೆನಕೆ

ಬೆಳಗಾವಿ, ಅ.9 : ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ (ಅ.9) ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವಿಯತೆಯೇ ಧರ್ಮ ಎಂಬದನ್ನು ಪ್ರತಿಪಾದಿಸಿದ್ದರು. ವಾಲ್ಮೀಕಿ ರಾಮಾಯಣ ಪ್ರತಿನಿತ್ಯ ನಡೆಯುವ ಘಟನೆಗಳಾಗಿದ್ದು, ಶಾಂತಿ, ಸಹಬಾಳ್ವೆ, ಅಹಿಂಸೆಯನ್ನು ತೋರಿಸಿಕೊಟ್ಟಿದೆ. ಅದೇ ರೀತಿಯಲ್ಲಿ ಬುಧ, ಬಸವ, ಅಂಬೇಡ್ಕರ್ ಅವರು ಕೂಡು ಮನವಿತೆಯ ಮೌಲ್ಯಗಳನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮಾನವ ಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ, ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಾಯಣದಿಂದ ತಿಳಿದು ಬರುತ್ತದೆ ಎಂದು ತಿಳಿಸಿದರು.

ಮೀಸಲಾತಿ ಸದುಪಯೋಗ ಪಡೆದುಕೊಳ್ಳಿ:

ಈಗಾಗಲೇ ಸರ್ಕಾರ ಘೋಷಣೆ ಮಾಡಿದ ಪ್ರಕಾರ ವಾಲ್ಮೀಕಿ ಸಮುದಾಯಕ್ಕೆ 3% ಮೀಸಲಾತಿಯನ್ನು ಶೇ.4ರಷ್ಟು ಹೆಚ್ಚಿಸಿ ಶೇ.7 ಮೀಸಲಾತಿ ನೀಡಲು ನಿರ್ಧರಿಸಲಾಗಿದೆ.
ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾಜವನ್ನು ಮುಂದೆ ತರುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಜಯ ಸಿಕ್ಕಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಳೆದ 2 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಲು ಆಗಿಲ್ಲ. ಆದರೆ ಈ ವರ್ಷ ವಿಶೇಷವಾಗಿ ಆಚರಿಸುತ್ತಿರುವುದು ಸಂತಸ ತಂದಿದೆ. ಸರ್ಕಾರ ನಿಯೋಜಿಸಿದ ಸಮಿತಿಯ ವರದಿಯ ಪ್ರಕಾರ ಕರ್ನಾಟಕ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿ ಈಗಾಗಲೇ ಘೋಷಣೆ ಮಾಡಿರುವುದರಿಂದ ವಿಶೇಷ ಜಯಂತಿ ಆಚರಣೆಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಯೋಜನೆಗಳ ಮೂಲಕ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಅನುಕೂಲ ಮಾಡಿ ಕೊಟ್ಟಿದೆ. 3% ಮೀಸಲಾತಿಯಿಂದ 7% ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಸರ್ಕಾರ ಘೋಷಣೆ ಮಾಡಿದೆ. ಎಲ್ಲರೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕ ವಾಗಿ ಬೆಳವಣಿಗೆ ಆಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆ, ಜೀವನದಲ್ಲಿ ಬದಲಾವಣೆಯ ಸನ್ನಿವೇಶಗಳು ಹಾಗೂ ರಾಮಾಯಣದಲ್ಲಿ ಅವರು ಬರೆದ ಮಾನವೀಯ ಮೌಲ್ಯಗಳ ಕುರಿತು ಪೋ. ದೊಡ್ಡನಗೌಡ ಎನ್. ಪಾಟೀಲ ಅವರು ಉಪನ್ಯಾಸ ನೀಡಿದರು.

ಫಲಾನುಭವಿಗಳಿಗೆ ಚೆಕ್ ವಿತರಣೆ:

ವೇದಿಕೆ ಕಾರ್ಯಕ್ರಮದಲ್ಲಿ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಅದೇ ರೀತಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳು ಚೆಕ್ ಗಳನ್ನು ವಿತರಿಸಲಾಯಿತು.

ಪೊಲೀಸ್ ಆಯುಕ್ತರಾದ ಡಾ.ಎಂ. ಬಿ ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್. ಹೆಚ್.ವಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಕ್ಷ್ಮಣ ಬಬಲಿ, ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ತಳವಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಅವರು ಸ್ವಾಗತ ಕೋರಿದರು. ಸೋಮು ಮಾಳಗಿ ನಿರೂಪಿಸಿ, ವಂದಿಸಿದರು.

ವಾಲ್ಮೀಕಿ ಭಾವಚಿತ್ರದ ಮೆರವಣಿಗೆ:

ಇದಕ್ಕೂ ಮುಂಚೆ ನಗರದ ಕೋಟೆ ಕೆರೆ ಆವರಣದಿಂದ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್. ಹೆಚ್.ವಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ತಳವಾರ ಹಾಜರಿದ್ದರು.

The post ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ-2022 appeared first on Hai Sandur kannada fortnightly news paper.

]]>
https://haisandur.com/2022/10/10/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf-%e0%b2%b5%e0%b2%be%e0%b2%b2%e0%b3%8d%e0%b2%ae%e0%b3%80%e0%b2%95%e0%b2%bf-%e0%b2%9c%e0%b2%af%e0%b2%82-3/feed/ 0
ರೈತರ ವಿವಿಧ ಸಮಸ್ಯೆಗಳ ಕುರಿತ ಸಭೆ: ನಿಯಮ ಪಾಲಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ https://haisandur.com/2022/10/07/%e0%b2%b0%e0%b3%88%e0%b2%a4%e0%b2%b0-%e0%b2%b5%e0%b2%bf%e0%b2%b5%e0%b2%bf%e0%b2%a7-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%95%e0%b3%81%e0%b2%b0%e0%b2%bf/ https://haisandur.com/2022/10/07/%e0%b2%b0%e0%b3%88%e0%b2%a4%e0%b2%b0-%e0%b2%b5%e0%b2%bf%e0%b2%b5%e0%b2%bf%e0%b2%a7-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%95%e0%b3%81%e0%b2%b0%e0%b2%bf/#respond Fri, 07 Oct 2022 14:58:53 +0000 https://haisandur.com/?p=29709 ಬೆಳಗಾವಿ, ಅ.7 : ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಮೋಸ ಆಗದಂತೆ ನಿರ್ದೇಶನ ನೀಡಲಾಗುವುದು. ಆಡಿಟ್ ವರದಿಯಲ್ಲಿ ಯಾವುದೇ ಅವ್ಯವಹಾರಗಳು ಪತ್ತೆಯಾದಲ್ಲಿ, ಅಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಕ್ಕರೆ ಕಾರ್ಖಾನೆಗಳು ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಅ.7) ನಡೆದ ಬೆಳಗಾವಿ ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳ ಕುರಿತು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಸಕ್ಕರೆ ಕಾರ್ಖಾನೆಗಳ […]

The post ರೈತರ ವಿವಿಧ ಸಮಸ್ಯೆಗಳ ಕುರಿತ ಸಭೆ: ನಿಯಮ ಪಾಲಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ appeared first on Hai Sandur kannada fortnightly news paper.

]]>
ಬೆಳಗಾವಿ, ಅ.7 : ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಮೋಸ ಆಗದಂತೆ ನಿರ್ದೇಶನ ನೀಡಲಾಗುವುದು. ಆಡಿಟ್ ವರದಿಯಲ್ಲಿ ಯಾವುದೇ ಅವ್ಯವಹಾರಗಳು ಪತ್ತೆಯಾದಲ್ಲಿ, ಅಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಕ್ಕರೆ ಕಾರ್ಖಾನೆಗಳು ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಅ.7) ನಡೆದ ಬೆಳಗಾವಿ ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳ ಕುರಿತು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಬಿಲ್ ಗಳನ್ನು ತಕ್ಷಣ ಪಾವತಿಸಲು ಸಂಬಂಧಿಸಿದ ಕಾರ್ಖಾನೆಗಳಿಗೆ ಸೂಚನೆ ನೀಡಲಾಗುವುದು. ಅದೇ ರೀತಿಯಲ್ಲಿ ಸದರಿ ಸಭೆಯಲ್ಲಿ ಭಾಗವಹಿಸದ ಸಕ್ಕರೆ ಕಾರ್ಖಾನೆಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡಿ, ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ರೈತರ ಕಬ್ಬಿಗೆ ಎಫ್.ಆರ್.ಪಿ ಅನುಗುಣವಾಗಿ ಬೆಲೆ ನೀಡಲು ಸಭೆ ಕರೆಯಲಾಗಿದೆ. ಎಫ್.ಆರ್.ಪಿ ಬೆಲೆಯನ್ನು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಲಾಗಿದೆ. ಬೆಲೆ ವಿವರಗಳನ್ನು ಪ್ರಕಟಣೆ ಮೂಲಕ ಪತ್ರಿಕೆಗಳಲ್ಲಿ ನೀಡಲಾಗಿದೆ.

ಜಿಲ್ಲಾಡಳಿತದಿಂದ ಕಾರ್ಖಾನೆಗಳಿಗೆ ಸೂಚನೆ:

ರೈತರಿಗೆ ಮೋಸ, ಅನ್ಯಾಯ ಆಗದಂತೆ ಸರ್ಕಾರ ನಿಗದಿ ಮಾಡಿದ ಬೆಲೆ ಸಿಗುವಂತೆ ಜಿಲ್ಲಾಡಳಿತ ಈಗಾಗಲೇ ನಿರಂತರವಾಗಿ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರು ಕಾರ್ಖಾನೆಗಳು ಎಫ್.ಆರ್.ಪಿ ಪ್ರಕಾರ ಯಾವುದೇ ಬೆಲೆ ನೀಡಿಲ್ಲ. ಜಿಲ್ಲೆಯಲ್ಲಿರುವ ಯಾವುದೇ ಕಾರ್ಖಾನೆಗಳು ಈವರೆಗೆ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ ಎಂದು ದೂರಿದರು.

ಬಿಲ್ ಕಡಿತದ ವಿವರ ನೋಟಿಸ್ ಬೋರ್ಡ್ ನಲ್ಲಿ ಅಳವಡಿಸಿ:

ರೈತರ ನೀಡುವ ಕಬ್ಬಿನ ಬಿಲ್ ನಲ್ಲಿ ಟ್ರಾನ್ಸ್ಪೋರ್ಟ್ ಮೊತ್ತವನ್ನು ಕಡಿತ ಮಾಡುವ ಕಾರ್ಖಾನೆಗಳು ಬಿಲ್ ನಲ್ಲಿ ಕಡಿತ ಮಾಡಿದ ವಿವರಗಳನ್ನು ಕಾರ್ಖಾನೆಗಳ ನೋಟಿಸ್ ಬೋರ್ಡ್ ನಲ್ಲಿ ಅಳವಡಿಸಬೇಕು. ಕಳೆದ ವರ್ಷದಿಂದ ಯಾವುದೇ ಕಾರ್ಖಾನೆಗಳು ಬಿಲ್ ನಲ್ಲಿ ಕಡಿತ ಮಾಡಿದ ಮೊತ್ತದ ವಿವರಗಳನ್ನು ರೈತರಿಗೆ ತಿಳಿಸಿಲ್ಲ. ಇದೇ ರೀತಿಯಲ್ಲಿ ಮುಂದುವರೆದರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಎಚ್ಚರಿಕೆ ನೀಡಿದರು.

ಸೆಪ್ಟಂಬರ್ 21 ರಂದು 4 ಕಾರ್ಖಾನೆಗಳು ಪ್ರಾರಂಭ ವಾಗಿವೆ. ಈಗಾಗಲೇ ರೈತರ ಕಬ್ಬಿನ ಬಿಲ್ ನಲ್ಲಿ ಕಡಿತ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ರೀತಿಯಲ್ಲಿ ಬೇಕಾಬಿಟ್ಟಿ ಮುಂದುವರಿಯಬಾರದು. ಕಾರ್ಖಾನೆ ಪ್ರಾರಂಭಿಸುವ ಮುನ್ನ ಸಕ್ಕರೆ ಆಯುಕ್ತರ ಅನುಮತಿ ಪಡೆಯಬೇಕು ಹಾಗೂ ಕಾರ್ಖಾನೆ ಪ್ರಾರಂಭಿಸುವ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಸೂಚಿಸಿದರು.

ಕಾರ್ಖಾನೆಗಳು ನಿರ್ದೇಶನ ಪಾಲಿಸಬೇಕು:

ಯಾವುದೇ ಗೊಂದಲ ಸೃಷ್ಟಿಸದೆ, ರೈತರಿಗೆ ಅನುಕೂಲವಾಗುವಂತೆ ಸದರಿ ಸಭೆಯಲ್ಲಿ ಚರ್ಚೆಯಾದ ವಿಷಯದ ನಿರ್ದೇಶನಗಳನ್ನು ಎಲ್ಲಾ ಸಕ್ಕರೆ ಕಾರ್ಖಾನೆಗಳು ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಟ್ರಾನ್ಸ್ಪೋರ್ಟ್ ಹಣವನ್ನು ಕಡಿತಗೊಳಿಸಿ ರೈತರಿಗೆ ಎಫ್.ಆರ್.ಪಿ ಯಂತೆ ನಿಗದಿತ ಬೆಲೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಬರವಣಿಗೆ ಮೂಲಕ ಮಾಹಿತಿ ನೀಡಿ:

ಕಾರ್ಖಾನೆಗಳನ್ನು ಪ್ರಾರಂಭಿಸುವ ಮುನ್ನ ಬರವಣಿಗೆಯ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅದೇ ರೀತಿಯಲ್ಲಿ ರೈತರ ಕಬ್ಬಿನ ಬಿಲ್ ನಲ್ಲಿ ಟ್ರಾನ್ಸ್ಪೋರ್ಟ್ ಮೊತ್ತವನ್ನು ಕಡಿತದ ಕುರಿತು ಸಕ್ಕರೆ ಆಯುಕ್ತರಿಗೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಬಳಿಕ ಜಿಲ್ಲಾಡಳಿತದಿಂದ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ ನೀಡಲಾಗುವದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಕಳೆದ 10 ವರ್ಷಗಳಿಂದ ರೈತರು 2500 ರೂಪಾಯಿ ಕಬ್ಬಿನ ಬೆಲೆ ಪಡೆಯುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಪೆಟ್ರೋಲ್, ಡೀಸೆಲ್, ಟ್ರ್ಯಾಕ್ಟರ್, ಟ್ರಕ್ ಬಾಡಿಗೆ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಬೆಲೆ ಕೂಡ ಏರಿಕೆಯಾಗಿದೆ ಇದರಿಂದ ರೈತರು ಜೀವನ ಮಾಡಲು ಆಗುತ್ತಿಲ್ಲ. ಅದರಂತೆ ಕನಿಷ್ಠ ಬೆಲೆ 5 ಸಾವಿರ ವರೆಗೆ ನೀಡಿದರೆ ರೈತರು ನೆಮ್ಮದಿಯಿಂದ ಜೀವನ ಮಾಡಬಹುದು ಎಂದು ರೈತ ಮುಖಂಡರು ಮನವಿ ಮಾಡಿಕೊಂಡರು.

ನಿಯಮ ಪಾಲಿಸದ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ:

ಎಫ್.ಆರ್.ಪಿ ಕೇಂದ್ರ ಸರ್ಕಾರ ನಿಗದಿ ಮಾಡಿದ ಬೆಲಯಂತೆ ಕಬ್ಬಿನ ಬೆಲೆ ನೀಡಲಾಗುತ್ತಿದೆ ಎಂದು ಸಕ್ಕರೆ ಆಯುಕ್ತರಾದ ಶಿವಾನಂದ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರು, ಕಾರ್ಖಾನೆಗಳು ಸರಿಯಾದ ಮಾಹಿತಿ ಸಕ್ಕರೆ ಆಯುಕ್ತರಿಗೆ ನೀಡುತ್ತಿಲ್ಲ. ನಿಯಮಗಳನ್ನು ಪಾಲಿಸದ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಮೋಸ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲಾಡಳಿತ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ರೈತ ಮುಖಂಡರು ವಿನಂತಿಸಿದರು.

ರೈತರು ಖಾಸಗಿ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಬಹುದು:

ರೈತರು ಖಾಸಗಿ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಿಸಿ ಬಳಿಕ ಕಾರ್ಖಾನೆಗಳ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಿ ವ್ಯತ್ಯಾಸ ಪರೀಕ್ಷಿಸಬಹುದು. ಕೆಲವು ಕಾರ್ಖಾನೆಗಳ ವಿರುದ್ಧ ದೂರುಗಳು ಕೇಳಿ ಬರುತ್ತಿವೆ ಖಾಸಗಿ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಿಸಿದ ಕಬ್ಬು ತೆಗೆದುಕೊಳ್ಳುತ್ತಿಲ್ಲ. ಕಾರ್ಖಾನೆಗಳು ಈ ರೀತಿಯಲ್ಲಿ ವರ್ತಿಸುವುದು ಸೂಕ್ತವಲ್ಲ. ಕಾರ್ಖಾನೆಗಳ ವೆಟ್ ಬ್ರಿಡ್ಜ್ ಗಳಲ್ಲಿ ಅವ್ಯವಹಾರಗಳು ಕಂಡು ಬಂದರೆ 24 ಗಂಟೆಗಳಲ್ಲಿ ಕಾರ್ಖಾನೆ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ರೈತರಿಗೆ ಭರವಸೆ ನೀಡಿದರು.

ರೈತರು ಕಟಾವು ಮಾಡಿಕೊಂಡು ತಮ್ಮ ವಾಹನಗಳ ಮೂಲಕ ಕಾರ್ಖಾನೆಗಳಿಗೆ ಕಬ್ಬು ತಂದರೆ ಎಫ್.ಆರ್.ಸಿ ನಿಗದಿ ಬೆಲೆಯಂತೆ ಯಾವುದೇ ರೀತಿಯ ಕಡಿತ ಮಾಡದೇ ರೈತರಿಗೆ 100 ಪ್ರತಿಶತ ಬಿಲ್ ಪಾವತಿಸಬೇಕು.
ಕಾರ್ಖಾನೆಯು ಟ್ರಾನ್ಸ್ಪೋರ್ಟ್ ಮಾಡಿದರೆ ಮಾತ್ರ ಬಿಲ್ ನಲ್ಲಿ ಹಣ ಕಡಿತ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್. ವಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಚಿಂದ್ರ ಕುಲಕರ್ಣಿ, ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು, ರೈತ ಸಂಘಟನೆಗಳ ಅಧ್ಯಕ್ಷರು, ರೈತ ಮುಖಂಡರು ಸಭೆಯಲ್ಲಿ ಉಪಸ್ಥಿರಿದ್ದರು.

The post ರೈತರ ವಿವಿಧ ಸಮಸ್ಯೆಗಳ ಕುರಿತ ಸಭೆ: ನಿಯಮ ಪಾಲಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ appeared first on Hai Sandur kannada fortnightly news paper.

]]>
https://haisandur.com/2022/10/07/%e0%b2%b0%e0%b3%88%e0%b2%a4%e0%b2%b0-%e0%b2%b5%e0%b2%bf%e0%b2%b5%e0%b2%bf%e0%b2%a7-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%95%e0%b3%81%e0%b2%b0%e0%b2%bf/feed/ 0
ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಪತ್ರಿಕೋದ್ಯಮ ಕಾರಣ;ಎಸ್.ಪಿ.ಸಂಜೀವ್ ಪಾಟೀಲ https://haisandur.com/2022/09/24/%e0%b2%ac%e0%b2%b2%e0%b2%bf%e0%b2%b7%e0%b3%8d%e0%b2%a0-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%aa%e0%b3%8d%e0%b2%b0%e0%b2%ad%e0%b3%81%e0%b2%a4%e0%b3%8d%e0%b2%b5%e0%b2%95%e0%b3%8d%e0%b2%95/ https://haisandur.com/2022/09/24/%e0%b2%ac%e0%b2%b2%e0%b2%bf%e0%b2%b7%e0%b3%8d%e0%b2%a0-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%aa%e0%b3%8d%e0%b2%b0%e0%b2%ad%e0%b3%81%e0%b2%a4%e0%b3%8d%e0%b2%b5%e0%b2%95%e0%b3%8d%e0%b2%95/#respond Sat, 24 Sep 2022 02:28:49 +0000 https://haisandur.com/?p=29545 ಬೆಳಗಾವಿ:ಸೆ:24:- ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟೊಂದು ಬಲಿಷ್ಠವಾಗಿ ಉಳಿಯಲು ದೇಶದಲ್ಲಿರುವ ಬಲಿಷ್ಠ ಪತ್ರಿಕೋದ್ಯಮವೇ ಕಾರಣ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸಂಜೀವ್ ಪಾಟೀಲ್ ಹೇಳಿದರು. ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅವರಿಂದು ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘದ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸಾಮಾನ್ಯ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು .ಜಗತ್ತಿನ ಬಹಳಷ್ಟು ದೇಶಗಳನ್ನು ನೋಡಿದಾಗ ,ಭಾರತದ ಅಕ್ಕಪಕ್ಕದ ದೇಶಗಳನ್ನು ನೋಡಿದಾಗ ,ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಭಾರತದಲ್ಲಿನ […]

The post ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಪತ್ರಿಕೋದ್ಯಮ ಕಾರಣ;ಎಸ್.ಪಿ.ಸಂಜೀವ್ ಪಾಟೀಲ appeared first on Hai Sandur kannada fortnightly news paper.

]]>
ಬೆಳಗಾವಿ:ಸೆ:24:- ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟೊಂದು ಬಲಿಷ್ಠವಾಗಿ ಉಳಿಯಲು ದೇಶದಲ್ಲಿರುವ ಬಲಿಷ್ಠ ಪತ್ರಿಕೋದ್ಯಮವೇ ಕಾರಣ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸಂಜೀವ್ ಪಾಟೀಲ್ ಹೇಳಿದರು.

ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅವರಿಂದು ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘದ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸಾಮಾನ್ಯ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು .
ಜಗತ್ತಿನ ಬಹಳಷ್ಟು ದೇಶಗಳನ್ನು ನೋಡಿದಾಗ ,ಭಾರತದ ಅಕ್ಕಪಕ್ಕದ ದೇಶಗಳನ್ನು ನೋಡಿದಾಗ ,ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದೆ, ದೇಶದಲ್ಲಿರುವ ನೂರಾರು ಭಾಷೆ , ನೂರಾರು ಧರ್ಮ ,ವಿವಿಧ ಸಂಸ್ಕೃತಿಗಳೊಂದಿಗೆ ಪ್ರಜಾಪ್ರಭುತ್ವವು ಇಷ್ಟೊಂದು ಬಲಿಷ್ಠವಾಗಿ ತನ್ನತನವನ್ನು ಉಳಿಸಿಕೊಂಡಿದೆ ಅದಕ್ಕೆ ದೇಶದಲ್ಲಿರುವ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಳ್ಳುತ್ತಿರುವ ಪತ್ರಿಕೋದ್ಯಮವೇ ಕಾರಣ ಎಂದರು.

ಜವಾಬ್ದಾರಿಯುತ ಪತ್ರಿಕೋದ್ಯಮವು ಸಮಾಜಕ್ಕೆ ಬೇಕಾಗಿರುವುದನ್ನು ಕೊಡುತ್ತಿರುವುದರಿಂದ ಆರೋಗ್ಯಪೂರ್ಣವಾದ ಸಮಾಜ ನಿರ್ಮಾಣವಾಗಿದೆ ,ಹಿರಿಯರ ಮಾರ್ಗದರ್ಶನದಲ್ಲಿ ಯುವ ಪತ್ರಕರ್ತರು ಅತ್ಯಂತ ಜವಾಬ್ದಾರಿಯುತವಾಗಿ ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ ಎಂದವರು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ಮೇಲ್ ಪತ್ರಕರ್ತರ ಹಾವಳಿ ಕುರಿತು ಪ್ರಸ್ತಾಪಿಸಿದ ಅವರು ಬ್ಲ್ಯಾಕ್ ಮೇಲ್ ಗೆ ಒಳಗಾದವರು ಧೈರ್ಯದಿಂದ ಮುಂದೆ ಬಂದು ದೂರು ಸಲ್ಲಿಸಬೇಕು ಆಗ ಖಂಡಿತವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ,ಇತ್ತೀಚಿನ ಹಲವು ಪ್ರಕರಣಗಳಲ್ಲಿ ಕ್ರಮ ಆಗಿದೆ ಬ್ಲ್ಯಾಕ್ ಮೇಲ್ ತಡೆಯುವ ನಿಟ್ಟಿನಲ್ಲಿ ತಮ್ಮಿಂದಾದ ಕ್ರಮಗಳನ್ನು ಕೈಗೊಳ್ಳಲು ತಾವು ಸಿದ್ಧ ಎಂದವರು ಹೇಳಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಬೆಳಗಾವಿ ಕಾರಂಜಿಮಠದ ಉತ್ತರಾದಿಕಾರಿಗಳಾದ ಡಾ. ಶಿವಯೋಗಿ ದೇವರು ಆಶೀರ್ವಚನ ನೀಡಿ ಸ್ವಸ್ಥ ಸಮಾಜಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕು, ಜನಸಾಮಾನ್ಯರು ಕಾಣದ್ದನ್ನೂ ಪತ್ರಕರ್ತರು ಕಾಣುತ್ತಾರೆ ,ವಕೀಲರು ಪೊಲೀಸರು ಪತ್ರಕರ್ತರು ಸ್ವಾಮಿಗಳು ಮತ್ತು ಇತರ ಅಧಿಕಾರಿಗಳು ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಇರುತ್ತಾರೆ.ಇವರೆಲ್ಲ ಎಷ್ಟೇ ಒಳ್ಳೆಯ ಕೆಲಸ ಮಾಡಿದರು ಒಂದೇ 1 ಸಣ್ಣ ತಪ್ಪಿಗಾಗಿ ಸಾರ್ವಜನಿಕರಿಂದ ಅತಿ ಹೆಚ್ಚು ಟೀಕೆಗೆ ಒಳಗಾಗುತ್ತಾರೆ ,ಅತಿ ಹೆಚ್ಚು ನಿಂದನೆಗೆ ಒಳಗಾಗುತ್ತಾರೆ ಹೀಗಾಗಿ ಅತಿ ಹೆಚ್ಚು ಕಾಳಜಿಯಿಂದ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು .

ಎಲ್ಲರಿಗಿಂತ ಮುಂದೆ ಅತಿ ಬೇಗ ಸುದ್ದಿ ಕೊಡುವ ಗಡಿಬಿಡಿಯಲ್ಲಿ ಕೆಲವು ಅವಾಂತರಗಳು ಘಟಿಸುತ್ತದೆ ಹಾಗಾಗಬಾರದು ಮುದ್ರಕರು ಮುದ್ರಣ ಮಾಧ್ಯಮದಿಂದ ಅತ್ಯುತ್ತಮ ಮತ್ತು ವ್ಯವಸ್ಥಿತ ಕಾರ್ಯ ನಡೆಯುತ್ತಿರುವುದು ಗಮನಾರ್ಹ ಎಂದವರು ಹೇಳಿದರು.
ನಂತರ ನಡೆದ ಚರ್ಚೆಯಲ್ಲೂ ಸಾಕ್ಷಿಯ ಶ್ರೀಗಳು ಸಂಘದ ಚಟುವಟಿಕೆಗಳ ಕುರಿತು ಅತ್ಯಂತ ತೃಪ್ತಿಯನ್ನು ವ್ಯಕ್ತಪಡಿಸಿ ಆರೋಗ್ಯಪೂರ್ಣವಾದ ಚರ್ಚೆ ನಡೆಯಿತು ಇದೇ ರೀತಿ ಅತ್ಯುತ್ತಮ ಕಾರ್ಯ ಈ ಸಂಘಟನೆಯಿಂದಾಗಲಿ ಎಂದು ಹರಿಸಿದರು.
ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಮಾತನಾಡಿ ಸಂಘದ ಸದಸ್ಯರಿಗಾಗಿ ಈವರೆಗೆ ಇದ್ದ ರೂ 2ಲಕ್ಷ ಅಪಘಾತ ವಿಮಾ ಯೋಜನೆಯನ್ನು ರೂ 4ಲಕ್ಷ ಗಳಿಗೆ ಏರಿಸಲಾಗಿದ್ದು ಆಯೋಜನೆ ಇಂದಿನಿಂದಲೇ ಜಾರಿಯಾಗುತ್ತದೆ ಎಂದರು .
ಕರ್ನಾಟಕ ರಾಜ್ಯ ವಿತರಕರ ಸಂಘವು ಕರ್ನಾಟಕ ಪತ್ರಕರ್ತರ ಸಂಘ ದೊಂದಿಗೆ ಅಫಿಲಿಯೇಷನ್ ಹೊಂದಿದ್ದು ಈ ಸಂಘದ ಸದಸ್ಯರಿಗಿರುವ ಎಲ್ಲ ಸವಲತ್ತುಗಳು ಆ ಸಂಘದ ಸದಸ್ಯರಿಗೂ ಅನ್ವಯವಾಗುತ್ತವೆ ಎಂದರು.

ನಾಗನೂರು ಮಠದ ಪೀಠಾಧ್ಯಕ್ಷರಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಟ್ರಸ್ಟ್ ನ ಗೌರವ ಅಧ್ಯಕ್ಷ ರಾಗಿರುವುದಾಗಿ ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಎಲ್ ಎಸ್ ಶಾಸ್ತ್ರಿ ಮಾತನಾಡಿ ಹಿಂದಿನಂತೆ ಆದರ್ಶಪ್ರಾಯರಾದ ಪತ್ರಕರ್ತರು ಇಂದಿಲ್ಲ ,ಹಿಂದೆ ಸಮಾಜಕ್ಕೆ ಶಿಕ್ಷಣ ನೀತಿ ಧರ್ಮ ಬೋಧನೆಗಾಗಿ ಪತ್ರಿಕೆಗಳಿದ್ದವು ಇಂದು ಅದಾವುದೂ ಇಲ್ಲ , ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಯನ್ನು ಮರೆತು, ಸಾರ್ವಜನಿಕ ಹಿತಾಸಕ್ತಿಯನ್ನು ಮರೆತು ಸ್ವಹಿತಾ ಸಕ್ತಿ ಯಲ್ಲಿ ತೊಡಗಿರುವ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು .
ಸಾಮಾಜಿಕ ಜಾಲತಾಣಗಳು ಆ ಸೌಕರ್ಯವನ್ನು ದುರುಪಯೋಗ ಮಾಡಿಕೊಳ್ಳದೆ ಸಮಾಜಕ್ಕೆ ಶಿಕ್ಷಣ ಮತ್ತು ಒಳ್ಳೆಯ ಸಂದೇಶ ನೀಡಲು ಬಳಸಬೇಕು ಸುಂದರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದವರು ಹೇಳಿದರು .
ಕಳೆದ 3 ದಶಕಕ್ಕೂ ಅಧಿಕ ಕಾಲದಿಂದ ಪತ್ರಕರ್ತರಿಗಾಗಿ ಕಾರ್ಯ ಮಾಡುತ್ತಿರುವ ಸಂಘದ ಚಟುವಟಿಕೆಯನ್ನು ಅವರು ಪ್ರಶಂಶಿಸಿದರು .

ದೇಶದಲ್ಲಿನ ಶೇಕಡಾ ತೊಂಬತ್ತರಷ್ಟು ಸ್ಥಳೀಯ ಪತ್ರಿಕೆಗಳ ಸ್ಥಿತಿ ಇಂದಿಗೂ ಸುಧಾರಿಸಿಲ್ಅವನ್ನು ಬಲಾಢ್ಯಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
ಓರಿಯೆಂಟಲ್ ಇನ್ಶೂರೆನ್ಸ್ ಕಂಪೆನಿಯ ಕೇಶವ್ ರೇವಣಕರ್ ಮಾತನಾಡಿ ವಿಮಾ ಯೋಜನೆಯನ್ನು ವಿವರಿಸಿದರು.
ಕರ್ನಾಟಕ ರಾಜ್ಯ ವಿತರಕರ ಸಂಘದ ಅಧ್ಯಕ್ಷ ಶಂಕರ್ ಕುದುರಿಮೋತಿ , ಸಂಘದ ಕಾನೂನು ಸಲಹೆಗಾರ ಮಂಜುನಾಥ್ ತೋರಗಲ,ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿಯ ಗಜಾನನ ಬಾಂದೇಕರ ,ಸಂಘದ ಉಪಾಧ್ಯಕ್ಷರಾದ ಸುದೇಶ್ ಕುಮಾರ್ , ಗೌರೀಶ ಶಾಸ್ತ್ತ್ರಿ ,ಪ್ರಧಾನ ಕಾರ್ಯದರ್ಶಿ ಸಂಪತ್ಕುಮಾರ ಮುಚಳಂಬಿ ,ರಾಜ್ಯ ಕಾರ್ಯದರ್ಶಿಗಳಾದ ಕೆ ಗೋಪಾಲ್ ಮತ್ತು ಶರಣಪ್ಪ ಗುಮಗೇರಾ , ಡಿ.ಬಿ. ವಿಜಯ್ ಶಂಕರ್,ಅರುಣ್ ಭೂಪಾಲ್ ,ಶರಣು ಕಾಟಕರ , ಕರ್ನಾಟಕ ಪತ್ರಕರ್ತರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಚಿಕ್ಕಮಠ ಮತ್ತಿತರರು ಉಪಸ್ಥಿತರಿದ್ದರು.ಟ್ರಸ್ಟಿಗಳಾದ ಸುದೇಶ್ ಕುಮಾರ್ ಸ್ವಾಗತಿಸಿದರು , ಇಪ್ಪತ್ತು ಜಿಲ್ಲೆಗಳ 170 ಪದಾಧಿಕಾರಿಗಳ ಭಾಗವಹಿಸಿದ್ದ ಕಾರ್ಯಕ್ರಮವನ್ನು ವಸಂತ ಹೊಸಮನಿ ನಿರೂಪಿಸಿ ವಂದಿಸಿದರು.

The post ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಪತ್ರಿಕೋದ್ಯಮ ಕಾರಣ;ಎಸ್.ಪಿ.ಸಂಜೀವ್ ಪಾಟೀಲ appeared first on Hai Sandur kannada fortnightly news paper.

]]>
https://haisandur.com/2022/09/24/%e0%b2%ac%e0%b2%b2%e0%b2%bf%e0%b2%b7%e0%b3%8d%e0%b2%a0-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%aa%e0%b3%8d%e0%b2%b0%e0%b2%ad%e0%b3%81%e0%b2%a4%e0%b3%8d%e0%b2%b5%e0%b2%95%e0%b3%8d%e0%b2%95/feed/ 0
ಅರ್ಜಿ ಹಾಕಿದ್ದ ರಮೇಶ ಅರವಿಂದಗೆ ಆರ್.ಸಿ.ಯು.ಗೌರವ ಡಾಕ್ಟರೇಟ್ ಕುಲಪತಿ ಪ್ರೋ.ಎಂ. ರಾಮಚಂದ್ರಗೌಡ ಗೊಂದಲದ ಹೇಳಿಕೆ https://haisandur.com/2022/09/12/%e0%b2%85%e0%b2%b0%e0%b3%8d%e0%b2%9c%e0%b2%bf-%e0%b2%b9%e0%b2%be%e0%b2%95%e0%b2%bf%e0%b2%a6%e0%b3%8d%e0%b2%a6-%e0%b2%b0%e0%b2%ae%e0%b3%87%e0%b2%b6-%e0%b2%85%e0%b2%b0%e0%b2%b5%e0%b2%bf%e0%b2%82/ https://haisandur.com/2022/09/12/%e0%b2%85%e0%b2%b0%e0%b3%8d%e0%b2%9c%e0%b2%bf-%e0%b2%b9%e0%b2%be%e0%b2%95%e0%b2%bf%e0%b2%a6%e0%b3%8d%e0%b2%a6-%e0%b2%b0%e0%b2%ae%e0%b3%87%e0%b2%b6-%e0%b2%85%e0%b2%b0%e0%b2%b5%e0%b2%bf%e0%b2%82/#respond Mon, 12 Sep 2022 23:38:42 +0000 https://haisandur.com/?p=29428 ಬೆಳಗಾವಿ ಸೆ., ೧೩- ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್ಗೆ ಚಿತ್ರನಟ ರಮೇಶ ಅರವಿಂದ ಅರ್ಜಿ ಹಾಕಿದ್ದರು, ಅವರಿಗೆ ಗೌರವ ಡಾಕ್ಟರೇಟ ನೀಡಲಾಗಿದೆ ಎಂದು ಕುಲಪತಿ ಪ್ರೊ. ರಾಮಚಂದ್ರ ಗೌಡ ಅವರು ಹೇಳಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ನಟ ರಮೇಶ ಅರವಿಂದ ಅವರು ನಾನು ಯಾವುದೇ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿದ್ದಾರೆ. ರಾ.ಚ.ವಿ. ೧೦ ನೇ ಘಟಿಕೋತ್ಸವದ ನಿಮಿತ್ಯ ಇಂದು ಪತ್ರಿಕಾಗೋಷ್ಟಿ ನಡೆಸಿದ ಕುಲಪತಿ ಪ್ರೊ. ರಾಮಚಂದ್ರ ಗೌಡ ಅವರು, ಗೌರವ ಡಾಕ್ಟರೇಟಗೆ ಅರ್ಜಿ ಆಹ್ವಾನಿಸಿದ್ದೇವು, […]

The post ಅರ್ಜಿ ಹಾಕಿದ್ದ ರಮೇಶ ಅರವಿಂದಗೆ ಆರ್.ಸಿ.ಯು.ಗೌರವ ಡಾಕ್ಟರೇಟ್ ಕುಲಪತಿ ಪ್ರೋ.ಎಂ. ರಾಮಚಂದ್ರಗೌಡ ಗೊಂದಲದ ಹೇಳಿಕೆ appeared first on Hai Sandur kannada fortnightly news paper.

]]>
ಬೆಳಗಾವಿ ಸೆ., ೧೩- ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್ಗೆ ಚಿತ್ರನಟ ರಮೇಶ ಅರವಿಂದ ಅರ್ಜಿ ಹಾಕಿದ್ದರು, ಅವರಿಗೆ ಗೌರವ ಡಾಕ್ಟರೇಟ ನೀಡಲಾಗಿದೆ ಎಂದು ಕುಲಪತಿ ಪ್ರೊ. ರಾಮಚಂದ್ರ ಗೌಡ ಅವರು ಹೇಳಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ನಟ ರಮೇಶ ಅರವಿಂದ ಅವರು ನಾನು ಯಾವುದೇ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿದ್ದಾರೆ.

ರಾ.ಚ.ವಿ. ೧೦ ನೇ ಘಟಿಕೋತ್ಸವದ ನಿಮಿತ್ಯ ಇಂದು ಪತ್ರಿಕಾಗೋಷ್ಟಿ ನಡೆಸಿದ ಕುಲಪತಿ ಪ್ರೊ. ರಾಮಚಂದ್ರ ಗೌಡ ಅವರು, ಗೌರವ ಡಾಕ್ಟರೇಟಗೆ ಅರ್ಜಿ ಆಹ್ವಾನಿಸಿದ್ದೇವು, ಅದಕ್ಕೆ ೧೫-೧೬ ಅರ್ಜಿಗಳು ಬಂದಿದ್ದವು, ಅದರಲ್ಲಿ ಈ ಮೂವರಿಗೆ ಗೌರವ ಡಾಕ್ಟರೇಟ ನೀಡಲು ಸಮಿತಿ ತಿರ್ಮಾನಿಸಿದೆ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ ಅರವಿಂದ ಅವರು ಅನೇಕ ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತಹ ಹಿರಿಯ ವ್ಯಕ್ತಿ ಗೌರವ ಡಾಕ್ಟರೇಟ್ ಪದವಿಗೆ ಅರ್ಜಿ ಹಾಕಿದ್ದಾರೆ ಎನ್ನುವುದು ಅವರ ಗೌರಕ್ಕೆ ಕುಂದು ತರುವ ಕೆಲಸವಲ್ಲವೇ?
ನಮ್ಮ ಪ್ರತಿನಿಧಿ ರಮೇಶ ಅರವಿಂದ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ಅವರು, ನಾನು ಯಾವುದೇ ರೀತಿಯಲ್ಲಿ ಗೌರವ ಡಾಕ್ಟರೇಟ್ಗೆ ಅರ್ಜಿ ಹಾಕಿಲ್ಲ, ಅವರು ನಿನ್ನೆ ಬಂದು ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಮಾತ್ರ ನೀಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಈಗ ರಮೇಶ ಅರವಿಂದ ಅವರು ಗೌರವ ಡಾಕ್ಟರೇಟ್ಗೆ ಅರ್ಜಿ ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದ್ದರಿಂದ ಕುಲಪತಿ ಪ್ರೊ. ರಾಮಚಂದ್ರಗೌಡ ಅವರು, ಉಳಿದ ಇಬ್ಬರು ಅಂದರೆ ವಿ.ರವಿಚಂದರ್ ಮತ್ತು ಅಕ್ಕ ಅನ್ನಪೂರ್ಣಾ ತಾಯಿ ಅವರು ಗೌರವ ಡಾಕ್ಟರೇಟ್ಗೆ ಅರ್ಜಿ ಸಲ್ಲಿಸಿದ್ದರೋ , ಇಲ್ಲವೂ ಎಂಬುದನ್ನು ಸ್ಪಷ್ಟಪಡಿಸಬೇಕು.

The post ಅರ್ಜಿ ಹಾಕಿದ್ದ ರಮೇಶ ಅರವಿಂದಗೆ ಆರ್.ಸಿ.ಯು.ಗೌರವ ಡಾಕ್ಟರೇಟ್ ಕುಲಪತಿ ಪ್ರೋ.ಎಂ. ರಾಮಚಂದ್ರಗೌಡ ಗೊಂದಲದ ಹೇಳಿಕೆ appeared first on Hai Sandur kannada fortnightly news paper.

]]>
https://haisandur.com/2022/09/12/%e0%b2%85%e0%b2%b0%e0%b3%8d%e0%b2%9c%e0%b2%bf-%e0%b2%b9%e0%b2%be%e0%b2%95%e0%b2%bf%e0%b2%a6%e0%b3%8d%e0%b2%a6-%e0%b2%b0%e0%b2%ae%e0%b3%87%e0%b2%b6-%e0%b2%85%e0%b2%b0%e0%b2%b5%e0%b2%bf%e0%b2%82/feed/ 0
ಘನತ್ಯಾಜ್ಯ ನಿರ್ವಹಣೆ: ಜಿಲ್ಲಾ ಮಟ್ಟದ ಸಭೆ https://haisandur.com/2022/09/01/%e0%b2%98%e0%b2%a8%e0%b2%a4%e0%b3%8d%e0%b2%af%e0%b2%be%e0%b2%9c%e0%b3%8d%e0%b2%af-%e0%b2%a8%e0%b2%bf%e0%b2%b0%e0%b3%8d%e0%b2%b5%e0%b2%b9%e0%b2%a3%e0%b3%86-%e0%b2%9c%e0%b2%bf%e0%b2%b2%e0%b3%8d/ https://haisandur.com/2022/09/01/%e0%b2%98%e0%b2%a8%e0%b2%a4%e0%b3%8d%e0%b2%af%e0%b2%be%e0%b2%9c%e0%b3%8d%e0%b2%af-%e0%b2%a8%e0%b2%bf%e0%b2%b0%e0%b3%8d%e0%b2%b5%e0%b2%b9%e0%b2%a3%e0%b3%86-%e0%b2%9c%e0%b2%bf%e0%b2%b2%e0%b3%8d/#respond Thu, 01 Sep 2022 15:25:26 +0000 https://haisandur.com/?p=29283 ಘನತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿ: ಸುಭಾಷ್ ಅಡಿ ಬೆಳಗಾವಿ, ಸೆ.1: ದಿನನಿತ್ಯ ಹಸಿ ಕಸ, ಒಣ ಕಸ, ಇ-ಕಸ, ಹಾನಿಕಾರಕ ಕಸ ಸೇರಿದಂತೆ ಹಲವಾರು ರೀತಿಯ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದೇವೆ. ಪ್ರಸ್ತುತ ಕಸ ವಿಲೇವಾರಿ ಒಂದು ಸವಾಲಿನ ಕೆಲಸವಾಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸವ ನಿಟ್ಟಿನಲ್ಲಿ ಎಲ್ಲ ಬಗೆಯ ಕಸಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕೆಲಸಕ್ಕೆ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷರಾದ ಸುಭಾಷ್ ಆಡಿ ಅವರು ತಿಳಿಸಿದರು. […]

The post ಘನತ್ಯಾಜ್ಯ ನಿರ್ವಹಣೆ: ಜಿಲ್ಲಾ ಮಟ್ಟದ ಸಭೆ appeared first on Hai Sandur kannada fortnightly news paper.

]]>
ಘನತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿ: ಸುಭಾಷ್ ಅಡಿ

ಬೆಳಗಾವಿ, ಸೆ.1: ದಿನನಿತ್ಯ ಹಸಿ ಕಸ, ಒಣ ಕಸ, ಇ-ಕಸ, ಹಾನಿಕಾರಕ ಕಸ ಸೇರಿದಂತೆ ಹಲವಾರು ರೀತಿಯ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದೇವೆ. ಪ್ರಸ್ತುತ ಕಸ ವಿಲೇವಾರಿ ಒಂದು ಸವಾಲಿನ ಕೆಲಸವಾಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸವ ನಿಟ್ಟಿನಲ್ಲಿ ಎಲ್ಲ ಬಗೆಯ ಕಸಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕೆಲಸಕ್ಕೆ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷರಾದ ಸುಭಾಷ್ ಆಡಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಸೆ.1) ನಡೆದ ಘನತ್ಯಾಜ್ಯ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ನಗರದ ನಂತರ ಬೆಳಗಾವಿ ಕೂಡ ಒಂದು ದೊಡ್ಡ ಜಿಲ್ಲೆಯಾಗಿದೆ. ಘನತ್ಯಾಜ್ಯ ವಿಲೇವಾರಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತದ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಅಡಿಯಲ್ಲಿ ನಗರದಲ್ಲಿ ಈಗಾಗಲೇ ಎಲ್ಲ ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳು ಮುಕ್ತಾಯಗೊಂಡಿವೆ. ಸ್ವಚ್ಛತೆ ಕಾಪಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಶೌಚಾಲಯ ಸೇರಿದಂತೆ ನಗರದ ಎಲ್ಲ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಸಂಭಂದಿಸಿದ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಗೋಡೆಗಳ ಮೇಲೆ ಪೋಸ್ಟರ್ ಅಳವಡಿಕೆ ನಿಷೇಧ:

ಸಾರ್ವಜನಿಕ ವಲಯಗಳಲ್ಲಿ ಜಾಗೃತಿ ಮೂಡಿಸಬೇಕು. ಮನೆ, ಅಂಗಡಿ, ಹೋಟೆಲ್, ಸೂಪರ್ ಮಾಲ್ ಸೇರಿದಂತೆ ಯಾರೂ ಕಸ ಎಸೆಯದಂತೆ ದಿನನಿತ್ಯ ಮೈಕ್ ಮೂಲಕ ತಿಳಿಸಬೇಕು. ಮಹಾನಗರ ಪಾಲಿಕೆ ಸೂಚನಾ ಫಲಕಗಳನ್ನು ಹೊರತುಪಡಿಸಿ, ನಗರದ ಯಾವುದೇ ಸ್ಥಳಗಳಲ್ಲಿ ಗೋಡೆಗಳ ಮೇಲೆ ಎಲ್.ಇ.ಡಿ ಹಾಗೂ ಇನ್ನಿತರ ಪೋಸ್ಟರ್ ಅಳವಡಿಸಲು ಅವಕಾಶ ಕೊಡಬಾರದು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಬೀದಿ ಬದಿಯಲ್ಲಿ ಅನಧಿಕೃತವಾಗಿ ವಾಹನಗಳ ನಿಲುಗಡೆ ನಿಷೇಧಿಸಬೇಕು. ಅದೇ ರೀತಿಯಲ್ಲಿ ಯಾವುದೇ ಮಾದರಿಯ ಪೋಸ್ಟರ್ ಗಳನ್ನು ಗೋಡೆಗಳ ಮೇಲೆ ಅಳವಡಿಸಿದ್ದು ಕಂಡು ಬಂದಲ್ಲಿ, ತಕ್ಷಣ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತ್ಯಾಜ್ಯ ವಿಂಗಡಣೆ, ವಿಲೇವಾರಿ ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸುಭಾಷ್ ಆಡಿ ಹೇಳಿದರು.

ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಎಸೆಯುವ ಸ್ಥಳಗಳನ್ನು ಈಗಾಗಲೇ ತೆರವು ಗೊಳಿಲಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ತ್ಯಾಜ್ಯ ವಿಲೇವಾರಿ ನಮ್ಮೆಲ್ಲರ ಜವಾಬ್ದಾರಿ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನಾಗರೀಕರೆಲ್ಲರೂ ಕೈಜೋಡಿಸಿ ಈ ಕೆಲಸವನ್ನು ಸಮರ್ಪಕವಾಗಿ ಮಾಡಿದಲ್ಲಿ ತಮ್ಮ ಪರಿಸರವನ್ನು ಸ್ವಚ್ಚ ಮತ್ತು ಸುಂದರವಾಗಿ ಇಟ್ಟುಕೊಳ್ಳಬಹುದು ಎಂದು ಸುಭಾಷ್ ಆಡಿ ಅವರು ತಿಳಿಸಿದರು.

ಪ್ರತಿ ಶಾಲಾ, ಕಾಲೇಜುಗಳಲ್ಲಿ ಭೇಟಿ ನೀಡಿ, ಸಾಮಾಜಿಕ ಕಾರ್ಯಕರ್ತರ ಸಹಯೋಗದೊಂದಿಗೆ ಜಾಗೃತಿ ಮೂಡಿಸಬೇಕು. ಜಿಲ್ಲಾಧಿಕಾರಿಗಳು ಸೇರಿದಂತೆ ಪ್ರತಿ ಇಲಾಖೆಯ ಅಧಿಕಾರಿಗಳು ಅವರ ಸ್ಥಳೀಯ ಪ್ರದೇಶದ ಸ್ವಚ್ಛತೆ ಬಗ್ಗೆ ಖುದ್ದಾಗಿ ನಿರಂತರ ಪರಿಶೀಲನೆ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಆಡಿ ಅವರು ತಿಳಿಸಿದರು.

ಪ್ಲಾಸ್ಟಿಕ್ ನಿಷೇಧ ಜಾರಿ:

ಜಿಲ್ಲೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ . ನಿಯಮಾವಳಿ ಪ್ರಕಾರ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಗ್ರಾಮ ಪಂಚಾಯತಿಯಿಂದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೂಡ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಯೋಜನಾ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪರಿಸರ ಅಧಿಕಾರಿ ಜಗದೀಶ್, ಪುರಸಭೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಕಂಪನಿಯ ಮಾಲೀಕರು ಸಭೆಯಲ್ಲಿ ಉಪಸ್ಥಿತರಿದ್ದರು.

The post ಘನತ್ಯಾಜ್ಯ ನಿರ್ವಹಣೆ: ಜಿಲ್ಲಾ ಮಟ್ಟದ ಸಭೆ appeared first on Hai Sandur kannada fortnightly news paper.

]]>
https://haisandur.com/2022/09/01/%e0%b2%98%e0%b2%a8%e0%b2%a4%e0%b3%8d%e0%b2%af%e0%b2%be%e0%b2%9c%e0%b3%8d%e0%b2%af-%e0%b2%a8%e0%b2%bf%e0%b2%b0%e0%b3%8d%e0%b2%b5%e0%b2%b9%e0%b2%a3%e0%b3%86-%e0%b2%9c%e0%b2%bf%e0%b2%b2%e0%b3%8d/feed/ 0