Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಹಾಸನ Archives - Hai Sandur kannada fortnightly news paper https://haisandur.com/category/ಹಾಸನ/ Hai Sandur News.Karnataka India Mon, 29 Apr 2024 09:40:21 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಹಾಸನ Archives - Hai Sandur kannada fortnightly news paper https://haisandur.com/category/ಹಾಸನ/ 32 32 ಪೆನ್‌ ಡ್ರೈವ್‌ ಪ್ರಕರಣ : ಪ್ರಜ್ವಲ್ ರೇವಣ್ಣ ಉಚ್ಛಾಟನೆ ಸಾಧ್ಯತೆ? https://haisandur.com/2024/04/29/%e0%b2%aa%e0%b3%86%e0%b2%a8%e0%b3%8d-%e0%b2%a1%e0%b3%8d%e0%b2%b0%e0%b3%88%e0%b2%b5%e0%b3%8d-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%aa%e0%b3%8d%e0%b2%b0/ https://haisandur.com/2024/04/29/%e0%b2%aa%e0%b3%86%e0%b2%a8%e0%b3%8d-%e0%b2%a1%e0%b3%8d%e0%b2%b0%e0%b3%88%e0%b2%b5%e0%b3%8d-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%aa%e0%b3%8d%e0%b2%b0/#respond Mon, 29 Apr 2024 09:40:20 +0000 https://haisandur.com/?p=35012 ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಸಂಚಲನ ಸೃಷ್ಟಿಸಿರುವ ಹಾಸನ ಪೆನ್‌ಡ್ರೈವ್‌ ವಿಚಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅತ್ತ ವಿದೇಶಕ್ಕೆ ಹಾರಿದ್ದು, ಇತ್ತ ಆತನನ್ನು ಸಂಸದ ಸ್ಥಾನ ಹಾಗೂ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಬೇಕು, ಅಮಾನತುಗೊಳಿಸಬೇಕೆಂಬ ಕೂಗುಗಳು ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಇನ್ನೂ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಿಜೆಪಿಯೂ ಇದರಿಂದ ಇಕ್ಕಟ್ಟಿಗೆ ಸಿಲುಕುವಂತಾಗಿದ್ದು, ಮೈತ್ರಿಯೇ […]

The post ಪೆನ್‌ ಡ್ರೈವ್‌ ಪ್ರಕರಣ : ಪ್ರಜ್ವಲ್ ರೇವಣ್ಣ ಉಚ್ಛಾಟನೆ ಸಾಧ್ಯತೆ? appeared first on Hai Sandur kannada fortnightly news paper.

]]>
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.

ಸಂಚಲನ ಸೃಷ್ಟಿಸಿರುವ ಹಾಸನ ಪೆನ್‌ಡ್ರೈವ್‌ ವಿಚಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅತ್ತ ವಿದೇಶಕ್ಕೆ ಹಾರಿದ್ದು, ಇತ್ತ ಆತನನ್ನು ಸಂಸದ ಸ್ಥಾನ ಹಾಗೂ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಬೇಕು, ಅಮಾನತುಗೊಳಿಸಬೇಕೆಂಬ ಕೂಗುಗಳು ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಇನ್ನೂ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಿಜೆಪಿಯೂ ಇದರಿಂದ ಇಕ್ಕಟ್ಟಿಗೆ ಸಿಲುಕುವಂತಾಗಿದ್ದು, ಮೈತ್ರಿಯೇ ಈ ಮುಜುಗರಕ್ಕೆ ಕಾರಣವಾಗಿದೆ ಎನ್ನುವುದಂತೂ ಬಹಿರಂಗ ಸತ್ಯ.

ಹಾಸನದಿಂದ ಎಂಪಿ ಆಗಿ ಈಗ ಎನ್ಡಿಎ ಒಕ್ಕೂಟದ ಅಭ್ಯರ್ಥಿಯಾಗಿರುವ ಪ್ರಜ್ವಲ್‌ ರೇವಣ್ಣನ ಉಚ್ಛಾಟನೆಯಾಗಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆಯಾದರೂ ಇದಕ್ಕಿನ್ನೂ ಪುರಾವೆಯಾಗಿ ಆದೇಶ ಪ್ರತಿ ಸಿಕ್ಕಿಲ್ಲ. ಅಲ್ಲದೇ ಅಷ್ಟು ಸುಲಭವಾಗಿ ಪ್ರಜ್ವಲ್‌ ರೇವಣ್ಣನ ಉಚ್ಛಾಟನೆಯೂ ಸಾಧ್ಯವಲ್ಲದ ಮಾತು ಎಂದು ಜೆಡಿಎಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಪ್ರಜ್ವಲ್‌ ರೇವಣ್ಣನನ್ನು ಉಚ್ಛಾಟಿಸುವ ಬಗ್ಗೆ ಎನ್ಡಿಎ ಒಕ್ಕೂಟಕ್ಕೆ ಯಾವುದೇ ತೀರ್ಮಾನವನ್ನೂ ಸದ್ಯಕ್ಕೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಜ್ವಲ್‌ ರೇವಣ್ಣನ ಈ ಇಶ್ಯೂ ದೇಶ ವಿದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಒಂದು ಕಡೆ ಬಿಜೆಪಿಯನ್ನೂ ಸೇರಿದಂತೆ ತೆನೆಹೊತ್ತ ಮಹಿಳೆಯನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಈಗಾಗಲೇ ಬಿಜೆಪಿ ಈ ವಿಚಾರದಲ್ಲಿ ಅಂತರಕಾಯ್ದುಕೊಳ್ಳುತ್ತಿದ್ದು, ಅತ್ತ ಸಮರ್ಥನೆಯನ್ನಾಗಲೀ, ನೇಹಾ ಹತ್ಯೆ ಪ್ರಕರಣದಲ್ಲಿ ತೋರಿಸಿದ್ದಷ್ಟೂ ಇಚ್ಛಾಶಕ್ತಿಯೂ ಇತ್ತ ತೋರಿಸುತ್ತಿಲ್ಲ ಏಕೆ? ಎಂಬುದಿಲ್ಲಿ ಗಮನಾರ್ಹ ಪ್ರಶ್ನೆ. ಪ್ರಜ್ವಲ್‌ ರೇವಣ್ಣರನ್ನು ಉಚ್ಛಾಟನೆ ಮಾಡಿದಲ್ಲಿ ಒಂದು ಸ್ಥಾನವನ್ನೂ ಕಳೆದುಕೊಳ್ಳುವ ಭೀತಿ ಬಿಜೆಪಿಗೆ ಇದೆ. ಅಲ್ಲದೇ ಈ ಬಾರಿ ಚುನಾವಣೆಗೆ ಹಳೆಮೈಸೂರನ್ನು ಗುರಿಯಾಗಿಸಿಕೊಂಡು ಒಕ್ಕಲಿಗ ಸಮುದಾಯದತ್ತ ಕಮಲ ಬಲೆ ಬೀಸಿದೆ. ಈ ಎಲ್ಲಾ ಲೆಕ್ಕಾಚಾರವನ್ನು ಅಳೆದು ತೂಗಿ ಪ್ರಜ್ವಲ್‌ ರೇವಣ್ಣನ ವಿಚಾರ ಮೇಲ್ಮಟ್ಟದಲ್ಲಿ ಚರ್ಚೆಯಾಗುವ ಸಾಧ್ಯತೆಯನ್ನು ತಳ್ಳಹಾಕುವಂತಿಲ್ಲ.

ಏಪ್ರಿಲ್‌ 30ರಂದು ಹುಬ್ಬಳ್ಳಿಯಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಸಭೆ ನಡೆಸುತ್ತಿದ್ದು, ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈಗಾಗಲೇ ಜೆಡಿಎಸ್‌ನ ಶಾಸಕ ಶರಣಗೌಡ ಕಂದ್ಕೂರು ಜಿಟಿಡಿಗೆ ಪತ್ರಬರೆದಿದ್ದು, ಪ್ರಜ್ವಲ್‌ ರೇವಣ್ಣನಿಂದಾಗಿ ಪಕ್ಷಕ್ಕೂ ಹಾಗೂ ಜೆಡಿಎಸ್‌ನ ಎಲ್ಲಾ ಕಾರ್ಯಕರ್ತರಿಗೂ ಮುಜುಗರವಾಗಿದೆ ಎಂದು ಪತ್ರ ಬರೆದಿದ್ದಾರೆ.ಈ ಕೋರ್‌ ಕಮಿಟಿ ಸಭೆಗೆ ಹೆಚ್.ಡಿ.ದೇವೇಗೌಡರು ಹೋಗುತ್ತಿಲ್ಲ. ಇತ್ತ ಹೆಚ್.ಡಿ.ಕುಮಾರಸ್ವಾಮಿ ಹೋಗುತ್ತಾರೆಯೋ ಏನೂ ಗೊತ್ತಾಗಿಲ್ಲ. ತಂದೆ ಮಕ್ಕಳು ಎಲ್ಲಾ ಸೇರಿ ಆಂತರಿಕವಾಗಿ ಚರ್ಚಿಸಿ ಅದನ್ನು ನಾಳೆಯ ಕೋರ್‌ ಕಮಿಟಿ ಸಭೆಯ ಮುಂದೆ ಇಡುವ ಸಾಧ್ಯತೆ ಇದೆ ಎಂದು ಜೆಡಿಎಸ್‌ನ ಮೂಲಗಳು ಜನಶಕ್ತಿ ಮೀಡಿಯಾಕ್ಕೆ ಸ್ಪಷ್ಟಪಡಿಸಿವೆ. ಎಲ್ಲರ ಚಿತ್ತ ನಾಳೆಯ ಜೆಡಿಎಸ್‌ನ ಕೋರ್‌ ಕಮಿಟಿ ಸಭೆಯತ್ತ ನೆಟ್ಟಿದ್ದು, ಪಕ್ಷದ ಆಂತರಿಕ ವಿಚಾರಗಳು, ಚುನಾವಣೆಯ ವಿಚಾರಗಳು ಸೇರಿದಂತೆ ಮಹತ್ತರವಾಗಿ ಪ್ರಜ್ವಲ್‌ ರೇವಣ್ಣ ವಿಚಾರ ಚರ್ಚೆಯಾಗಿ ನಂತರ ನಿರ್ಧಾರಗಳು ಹೊರಬೀಳಲಿವೆ.

The post ಪೆನ್‌ ಡ್ರೈವ್‌ ಪ್ರಕರಣ : ಪ್ರಜ್ವಲ್ ರೇವಣ್ಣ ಉಚ್ಛಾಟನೆ ಸಾಧ್ಯತೆ? appeared first on Hai Sandur kannada fortnightly news paper.

]]>
https://haisandur.com/2024/04/29/%e0%b2%aa%e0%b3%86%e0%b2%a8%e0%b3%8d-%e0%b2%a1%e0%b3%8d%e0%b2%b0%e0%b3%88%e0%b2%b5%e0%b3%8d-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%aa%e0%b3%8d%e0%b2%b0/feed/ 0
ಬ್ಯಾಂಕ್ ಉದ್ಯಮಿಗಳು ಕನ್ನಡ ಭಾಷೆ ಮಾತನಾಡಲು ಪೋತ್ಸಾಹಿಸಿ: ಜಿಲ್ಲಾಧಿಕಾರಿ https://haisandur.com/2021/11/25/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%89%e0%b2%a6%e0%b3%8d%e0%b2%af%e0%b2%ae%e0%b2%bf%e0%b2%97%e0%b2%b3%e0%b3%81-%e0%b2%95%e0%b2%a8%e0%b3%8d%e0%b2%a8%e0%b2%a1/ https://haisandur.com/2021/11/25/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%89%e0%b2%a6%e0%b3%8d%e0%b2%af%e0%b2%ae%e0%b2%bf%e0%b2%97%e0%b2%b3%e0%b3%81-%e0%b2%95%e0%b2%a8%e0%b3%8d%e0%b2%a8%e0%b2%a1/#respond Thu, 25 Nov 2021 14:45:15 +0000 https://haisandur.com/?p=22524 ಹಾಸನ, ನ.25 :- ಬ್ಯಾಂಕ್ ಉದ್ಯೋಗಿಗಳು ಹೆಚ್ಚಾಗಿ ಹೊರ ರಾಜ್ಯಗಳಿಂದ ಬಂದಿದ್ದು, ಅವರು ಕನ್ನಡವನ್ನು ಪ್ರೀತಿ ಪೂರ್ವಕವಾಗಿ ಮಾತನಾಡಲು ಪ್ರೊತ್ಸಾಹಿಸಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸದರನ್ ಸ್ಟಾರ್ ಹೊಟೇಲ್‍ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಸನ ವತಿಯಿಂದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣವಾದ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದು, ಕೇವಲ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸದೆ ವರ್ಷವಿಡಿ ಆಚರಿಸಿ ಎಂದರು. ಕನ್ನಡ […]

The post ಬ್ಯಾಂಕ್ ಉದ್ಯಮಿಗಳು ಕನ್ನಡ ಭಾಷೆ ಮಾತನಾಡಲು ಪೋತ್ಸಾಹಿಸಿ: ಜಿಲ್ಲಾಧಿಕಾರಿ appeared first on Hai Sandur kannada fortnightly news paper.

]]>
ಹಾಸನ, ನ.25 :- ಬ್ಯಾಂಕ್ ಉದ್ಯೋಗಿಗಳು ಹೆಚ್ಚಾಗಿ ಹೊರ ರಾಜ್ಯಗಳಿಂದ ಬಂದಿದ್ದು, ಅವರು ಕನ್ನಡವನ್ನು ಪ್ರೀತಿ ಪೂರ್ವಕವಾಗಿ ಮಾತನಾಡಲು ಪ್ರೊತ್ಸಾಹಿಸಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸದರನ್ ಸ್ಟಾರ್ ಹೊಟೇಲ್‍ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಸನ ವತಿಯಿಂದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣವಾದ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದು, ಕೇವಲ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸದೆ ವರ್ಷವಿಡಿ ಆಚರಿಸಿ ಎಂದರು.

ಕನ್ನಡ ಅದ್ಭುತವಾದಂತಹ ಅತ್ಯಂತ ಸಿರಿವಂತ ಭಾಷೆ 2000 ಕ್ಕಿಂತ ಹೆಚ್ಚು ಇತಿಹಾಸ ಹೊಂದಿರುವ ಭಾಷೆ ಕನ್ನಡ ಹಾಗೂ 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಭಾಷೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದರಲ್ಲದೆ ಎಲ್ಲಾ ಭಾಷೆಗಳನ್ನು ಗೌರವಿಸಿ ಸ್ಥಳೀಯ ಭಾಷೆ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದು ಜಿಲ್ಲಾಧಿಕಾರಿ ಹೇಳಿದರು.

ನಾವು ಮಾತನಾಡುವ ಕನ್ನಡ ಭಾಷೆ ಹಿಂದಿ, ಸಂಸ್ಕೃತದಿಂದ ಪ್ರೆರೇಪಿತವಾಗಿದ್ದು, ಅತ್ಯಂತ ಸುಂದರ ಭಾಷೆ ಎಲ್ಲರು ಇದನ್ನೂ ಕಲಿಯಬೇಕು, ಭಾಷೆ ಪ್ರೌಢಿಮೆ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚಾಗಿ ಕನ್ನಡ ಭಾಷೆ ಪರಿಚಯ ಮಾಡಿಸುವುದು ಉತ್ತಮ ಎಂದು ಕರೆ ನೀಡಿದರು.

ಹಿಮ್ಸ್‍ನ ನಿರ್ದೇಶಕರಾದ ಡಾ|| ಬಿ.ಸಿ ರವಿಕುಮಾರ್ ಹಾಗೂ ಎಂ.ಸಿ.ಫ್‍ನ ನಿರ್ದೇಶಕರಾದ ಪ್ರೇಮಾನಂದ ಶಣೈ ಅವರಿಗೆ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಸಿ ರವಿಕುಮಾರ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಹಿಮ್ಸ್ ಸಂಸ್ಥೆಯು ಬೆಳೆಯಲು ಹಲವಾರು ತಂಡದ ಪರಿಶ್ರಮದಿಂದ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಇಂಪು ಗಾಯನ ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಎಂ.ಸಿ.ಎಫ್‍ನ ನಿರ್ದೇಶಕರಾದ ಪ್ರೇಮಾನಂದ ಶಣೈ, ಭಾರತೀಯ ಸ್ಟೇಟ್ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀಪತಿ, ಎಸ್.ಬಿ.ಐ ಬ್ಯಾಂಕ್ ನ ಸಿಬ್ಬಂದಿಗಳು ಮತ್ತಿತರರು ಪಾಲ್ಗೊಂಡಿದ್ದರು.

The post ಬ್ಯಾಂಕ್ ಉದ್ಯಮಿಗಳು ಕನ್ನಡ ಭಾಷೆ ಮಾತನಾಡಲು ಪೋತ್ಸಾಹಿಸಿ: ಜಿಲ್ಲಾಧಿಕಾರಿ appeared first on Hai Sandur kannada fortnightly news paper.

]]>
https://haisandur.com/2021/11/25/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%89%e0%b2%a6%e0%b3%8d%e0%b2%af%e0%b2%ae%e0%b2%bf%e0%b2%97%e0%b2%b3%e0%b3%81-%e0%b2%95%e0%b2%a8%e0%b3%8d%e0%b2%a8%e0%b2%a1/feed/ 0
ಬೆಳೆ ಹಾನಿ ರೈತರಿಗೆ ನೇರ ಪರಿಹಾರ ವರ್ಗಾವಣೆ https://haisandur.com/2021/11/24/%e0%b2%ac%e0%b3%86%e0%b2%b3%e0%b3%86-%e0%b2%b9%e0%b2%be%e0%b2%a8%e0%b2%bf-%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%a8%e0%b3%87%e0%b2%b0-%e0%b2%aa%e0%b2%b0%e0%b2%bf/ https://haisandur.com/2021/11/24/%e0%b2%ac%e0%b3%86%e0%b2%b3%e0%b3%86-%e0%b2%b9%e0%b2%be%e0%b2%a8%e0%b2%bf-%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%a8%e0%b3%87%e0%b2%b0-%e0%b2%aa%e0%b2%b0%e0%b2%bf/#respond Wed, 24 Nov 2021 14:26:25 +0000 https://haisandur.com/?p=22475 ಹಾಸನ, ನ.24 ;- ಬೆಳೆಹಾನಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಂದ ಪರಿಹಾರ ಪೋರ್ಟಲ್‍ನಲ್ಲಿ ಅರ್ಜಿ ಪಡೆದು ರೈತರಿಗೆ ನೇರವಾಗಿ ಹಣ ವರ್ಗಾಹಿಸಲಾಗುವುದು. ಎಂದು ಕಂದಾಯ ಸಚಿವರು ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್.ಅಶೋಕ್ ಅವರು ತಿಳಿಸಿದ್ದಾರೆ. ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಮಳೆಹಾನಿ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕಳೆದ ಎರಡು ತಿಂಗಳಿಂದ ರಾಜ್ಯದ ಹಲವೆಡೆ ತೀವ್ರ ಮಳೆಗೆ ಬೆಳೆಗಳು ನೆಲಕಚ್ಚಿದೆ ಆದ್ದರಿಂದ ಸಮೀಕ್ಷೆ ನಡೆಸುತ್ತಿದ್ದು, ಹಾಳಾಗಿರುವ ಬೆಳೆಯ […]

The post ಬೆಳೆ ಹಾನಿ ರೈತರಿಗೆ ನೇರ ಪರಿಹಾರ ವರ್ಗಾವಣೆ appeared first on Hai Sandur kannada fortnightly news paper.

]]>
ಹಾಸನ, ನ.24 ;- ಬೆಳೆಹಾನಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಂದ ಪರಿಹಾರ ಪೋರ್ಟಲ್‍ನಲ್ಲಿ ಅರ್ಜಿ ಪಡೆದು ರೈತರಿಗೆ ನೇರವಾಗಿ ಹಣ ವರ್ಗಾಹಿಸಲಾಗುವುದು. ಎಂದು ಕಂದಾಯ ಸಚಿವರು ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್.ಅಶೋಕ್ ಅವರು ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಮಳೆಹಾನಿ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕಳೆದ ಎರಡು ತಿಂಗಳಿಂದ ರಾಜ್ಯದ ಹಲವೆಡೆ ತೀವ್ರ ಮಳೆಗೆ ಬೆಳೆಗಳು ನೆಲಕಚ್ಚಿದೆ ಆದ್ದರಿಂದ ಸಮೀಕ್ಷೆ ನಡೆಸುತ್ತಿದ್ದು, ಹಾಳಾಗಿರುವ ಬೆಳೆಯ ಪ್ರಮಾಣವನ್ನು ತಿಳಿದು ಶೀಘ್ರ ಕ್ರಮ ಕೈಗೊಳ್ಳುವ ಸಲುವಾಗಿ ಹಾಸನ ಜಿಲ್ಲೆಯ ಹಲವೆಡೆ ತಾವೇ ಪರೀಕ್ಷೆ ನಡೆಸುತ್ತಿರುವುದಾಗಿ ಹೇಳಿದರು.

ಕಳೆದ ಎರಡು ತಿಂಗಳಿಂದ ರಾಜ್ಯದ ಹಲವೆಡೆ ತೀವ್ರ ಮಳೆಗೆ ಬೆಳೆಗಳು ಹಾನಿಯಾಗಿರುವ ಕಂದಾಯ, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸುತ್ತಿದ್ದು, ನಷ್ಟದ ಅಂದಾಜು ವರದಿ ಪಡೆಯಲಾಗುತ್ತಿದೆ ಎಂದರು.

ರೈತರಿಗೆ ಅಧಿಕ ಪ್ರಮಾಣದಲ್ಲಿ ನಷ್ಟವಾಗಿದ್ದು, ಹೆಚ್ಚಿನ ಪ್ರಮಾಣದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸ್ಥಳೀಯ ಅಗತ್ಯಗಳಿಗನಿಗುಣವಾಗಿ ಅಧಿಕಾರಿಗಳು ತಕ್ಷಣವೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರಕಲಗೂಡು ತಾಲ್ಲೂಕಿನ ಶಿರದನಹಳ್ಳಿ, ರಾಮನಾಥಪುರ ಬಳಿಯ ಕಾಟ್ಯಾಳುಬಾರೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಬ್ಯಾಗತ್ತವಳ್ಳಿ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಕೋಶದ ಆಯುಕ್ತರಾದ ಡಾ ಮನೋಹ್ ರಾಜನ್ ,ಜಿಲ್ಲಾಧಿಕಾರಿ ಆರ್ .ಗಿರೀಶ್, ಉಪ ವಿಭಾಗಾಧಿಕಾರಿಗಳಾದ ಪ್ರತೀಕ್ ಬಾಯಲ್, ಬಿ.ಎ.ಜಗದೀಶ್, ಜಂಟಿ ಕೃಷಿ ನಿರ್ದೇಶಕರಾದ ರವಿ, ತೋಟಗಾರಿಕೆ ಉಪ ನಿರ್ದೇಶಕರಾದ ಯೋಗೇಶ್, ತಹಶೀಲ್ದಾರರಾದ ರೇಣುಕುಮಾರ್, ಕೃಷ್ಣ ಮೂರ್ತಿ, ಮಾರುತಿ ಮತ್ತಿತರರು ಹಾಜರಿದ್ದರು

The post ಬೆಳೆ ಹಾನಿ ರೈತರಿಗೆ ನೇರ ಪರಿಹಾರ ವರ್ಗಾವಣೆ appeared first on Hai Sandur kannada fortnightly news paper.

]]>
https://haisandur.com/2021/11/24/%e0%b2%ac%e0%b3%86%e0%b2%b3%e0%b3%86-%e0%b2%b9%e0%b2%be%e0%b2%a8%e0%b2%bf-%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%a8%e0%b3%87%e0%b2%b0-%e0%b2%aa%e0%b2%b0%e0%b2%bf/feed/ 0
ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮರು ಸಮೀಕ್ಷೆಗೆ ಸೂಚನೆ https://haisandur.com/2021/11/24/%e0%b2%ae%e0%b3%8d%e0%b2%af%e0%b2%be%e0%b2%a8%e0%b3%8d%e0%b2%af%e0%b3%81%e0%b2%b5%e0%b3%86%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8d%e0%b2%af%e0%b2%be%e0%b2%b5%e0%b3%86%e0%b2%82%e0%b2%9c/ https://haisandur.com/2021/11/24/%e0%b2%ae%e0%b3%8d%e0%b2%af%e0%b2%be%e0%b2%a8%e0%b3%8d%e0%b2%af%e0%b3%81%e0%b2%b5%e0%b3%86%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8d%e0%b2%af%e0%b2%be%e0%b2%b5%e0%b3%86%e0%b2%82%e0%b2%9c/#respond Wed, 24 Nov 2021 14:24:03 +0000 https://haisandur.com/?p=22471 ಹಾಸನ,ನ.24 :- ನಗರ/ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೈರ್ಮಲ್ಯ ಶೌಚಾಲಯ/ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಪದ್ದತಿ ಅನುಸರಿಸುತ್ತಿರುವವರ ಸಮೀಕ್ಷೆಯನ್ನು ಮರು ಸಮೀಕ್ಷೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಮ್ಯಾನುವಲ್ ಸ್ಕ್ಯಾವೆಂಜರ್ ಪದ್ಧತಿ ಅನುಸರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಅಲ್ಲದೆ ಈ ರೀತಿಯಲ್ಲಿ ತೊಡಗಿರುವವರಿಗೆ ಪ್ರತ್ಯೇಕ ವಸತಿ ಕಲ್ಪಿಸಿಸ ಬೇಕಾಗಿದೆ ಈ ಬಗ್ಗೆ ನಿಖರ ಅಂಕಿ ಅಂಶಗಳ ಕ್ರೋಡೀಕರಣವಾಗ ಬೇಕಾಗಿರುವುದರಿಂದ ಮತ್ತೊಮ್ಮೆ ಸಮೀಕ್ಷೆ ನಡೆಸಿ […]

The post ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮರು ಸಮೀಕ್ಷೆಗೆ ಸೂಚನೆ appeared first on Hai Sandur kannada fortnightly news paper.

]]>
ಹಾಸನ,ನ.24 :- ನಗರ/ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೈರ್ಮಲ್ಯ ಶೌಚಾಲಯ/ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಪದ್ದತಿ ಅನುಸರಿಸುತ್ತಿರುವವರ ಸಮೀಕ್ಷೆಯನ್ನು ಮರು ಸಮೀಕ್ಷೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಮ್ಯಾನುವಲ್ ಸ್ಕ್ಯಾವೆಂಜರ್ ಪದ್ಧತಿ ಅನುಸರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಅಲ್ಲದೆ ಈ ರೀತಿಯಲ್ಲಿ ತೊಡಗಿರುವವರಿಗೆ ಪ್ರತ್ಯೇಕ ವಸತಿ ಕಲ್ಪಿಸಿಸ ಬೇಕಾಗಿದೆ ಈ ಬಗ್ಗೆ ನಿಖರ ಅಂಕಿ ಅಂಶಗಳ ಕ್ರೋಡೀಕರಣವಾಗ ಬೇಕಾಗಿರುವುದರಿಂದ ಮತ್ತೊಮ್ಮೆ ಸಮೀಕ್ಷೆ ನಡೆಸಿ ಕೈಯಲ್ಲಿ ಶೌಚಗುಂಡಿ ಸ್ವಚ್ಛತೆ ನಡೆಸದೇ ಇರುವವರ ಬಗ್ಗೆ ಖಾತರಿಪಡಿಸಿಕೊಳ್ಳಿ ಎಂದರು.
ಸಕಲೇಶಪುರ ಪಟ್ಟಣದಲ್ಲಿ ಪೌರಕಾರ್ಮಿಕ ಕಾಲೋನಿ ಕೊಳಚೆ ಪ್ರದೇಶದಲ್ಲಿ ಪಿ.ಎಂ.ಎ.ವೈ-ಹೆಚ್.ಎಫ್.ಎ ಯೋಜನೆಯಡಿಯಲ್ಲಿ 65 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಹಾಸನ ನಗರಸಭೆ ವ್ಯಾಪ್ತಿಯ ನಿರ್ಮಲ ನಗರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತೆ ಅವರು ಹೇಳಿದರು.
ಚನ್ನರಾಯಪಟ್ಟಣ ಪುರಸಭೆ ಮಾಲೀಕತ್ವದ ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರ್ವೇ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸದರಿ ನಿವಾಸಿಗಳಿಗೆ ಹೆಸರು ನೋಂದಣಿ ಮಾಡಿಸುವಂತೆ ಕವಿತಾ ರಾಜಾರಾಮ್ ಅವರು ತಿಳಿಸಿದರು.
ಹಾಸನ ನಗರಸಭೆ ಹಾಗೂ ತಾಲೂಕಿನ ಪುರಸಭಾ/ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಾಯಂ ಹಾಗೂ ನೇರಪಾವತಿ ಪೌರಕಾರ್ಮಿಕರಿಗೆ ಶೂ ಹ್ಯಾಂಡ್ ಗ್ಲೌಸ್, ಮಾಸ್ಕ್, ರಿಪ್ಲೆಕ್ಟೀವ್ ಜಾಕೆಟ್ ಇತರೆ ಕಿಟ್ ವಿತರಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪುನೀತ್ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್ ನಿರ್ದೇಶಕರಾದ ಮಂಜುನಾಥ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

The post ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮರು ಸಮೀಕ್ಷೆಗೆ ಸೂಚನೆ appeared first on Hai Sandur kannada fortnightly news paper.

]]>
https://haisandur.com/2021/11/24/%e0%b2%ae%e0%b3%8d%e0%b2%af%e0%b2%be%e0%b2%a8%e0%b3%8d%e0%b2%af%e0%b3%81%e0%b2%b5%e0%b3%86%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%8d%e0%b2%af%e0%b2%be%e0%b2%b5%e0%b3%86%e0%b2%82%e0%b2%9c/feed/ 0
ಮಹನೀಯರ ಜೀವನದ ಆದರ್ಶ ಅನುಕರಣೀಯ:ಅಪರ ಜಿಲ್ಲಾಧಿಕಾರಿ https://haisandur.com/2021/11/22/%e0%b2%ae%e0%b2%b9%e0%b2%a8%e0%b3%80%e0%b2%af%e0%b2%b0-%e0%b2%9c%e0%b3%80%e0%b2%b5%e0%b2%a8%e0%b2%a6-%e0%b2%86%e0%b2%a6%e0%b2%b0%e0%b3%8d%e0%b2%b6-%e0%b2%85%e0%b2%a8%e0%b3%81%e0%b2%95%e0%b2%b0/ https://haisandur.com/2021/11/22/%e0%b2%ae%e0%b2%b9%e0%b2%a8%e0%b3%80%e0%b2%af%e0%b2%b0-%e0%b2%9c%e0%b3%80%e0%b2%b5%e0%b2%a8%e0%b2%a6-%e0%b2%86%e0%b2%a6%e0%b2%b0%e0%b3%8d%e0%b2%b6-%e0%b2%85%e0%b2%a8%e0%b3%81%e0%b2%95%e0%b2%b0/#respond Mon, 22 Nov 2021 10:03:59 +0000 https://haisandur.com/?p=22409 ಹಾಸನ ನ.22:- ಕನಕದಾಸರ ಹಾಗೂ ಒನಕೆ ಓಬವ್ವ ಅವರ ಜೀವನದ ಆದರ್ಶಗಳು ಎಲ್ಲರಿಗೂ ಅನುಕರಣೀ ಯ ಎಂದು ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಒನಕೆ ಓಬವ್ವ ಜಯಂತಿ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಅವರು ಮಹನೀ ಯರ ಜೀವನ ಶೈಲಿ, ಅವರ ಧೈರ್ಯ, ನಂಬಿಕೆ, ಸ್ಫೂರ್ತಿ ಇವುಗಳಲ್ಲಿ ಒಂದು ಅಂಶವನ್ನಾದರೂ ಜೀವನದಲ್ಲಿ ಅಳವಡಿಸಿ […]

The post ಮಹನೀಯರ ಜೀವನದ ಆದರ್ಶ ಅನುಕರಣೀಯ:ಅಪರ ಜಿಲ್ಲಾಧಿಕಾರಿ appeared first on Hai Sandur kannada fortnightly news paper.

]]>
ಹಾಸನ ನ.22:- ಕನಕದಾಸರ ಹಾಗೂ ಒನಕೆ ಓಬವ್ವ ಅವರ ಜೀವನದ ಆದರ್ಶಗಳು ಎಲ್ಲರಿಗೂ ಅನುಕರಣೀ ಯ ಎಂದು ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಒನಕೆ ಓಬವ್ವ ಜಯಂತಿ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಅವರು ಮಹನೀ ಯರ ಜೀವನ ಶೈಲಿ, ಅವರ ಧೈರ್ಯ, ನಂಬಿಕೆ, ಸ್ಫೂರ್ತಿ ಇವುಗಳಲ್ಲಿ ಒಂದು ಅಂಶವನ್ನಾದರೂ ಜೀವನದಲ್ಲಿ ಅಳವಡಿಸಿ ಕೊಂಡು ಸಾರ್ಥಕತೆ ಯತ್ತ ಸಾಗಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಡಾ. ಎಚ್. ಎಂ. ನಾಗರಾಜ್ ಕಲಕಟ್ಟೆ ಅವರು ಮಾತನಾಡಿ ಕುಲ ಕುಲವೆಂದು ಬಡಿದಾಡದಿರಿ.. ಎಂದು ಕನಕದಾಸರು ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ಸಂವಿಧಾನ ದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ಆದರೆ ನಮ್ಮ ಮನಸ್ಥಿತಿ ಗಳು ಬದಲಾವಣೆ ಯಾಗಬೇಕು, ಕನಕದಾಸರು ದೇವರು ಭಕ್ತಿಗೆ ಮಾತ್ರ ಒಲಿಯುತ್ತಾನೆ ಹೊರತು ಜಾತಿಗಲ್ಲ ಎಂಬುದನ್ನು ತೋರಿಸಿದ್ದಾರೆ. ಅದೇ ರೀತಿ ಓಬವ್ವ ಸ್ತ್ರೀ ಶಕ್ತಿ ಹಾಗೂ ಧೈರ್ಯಕ್ಕೆ ಪ್ರತಿರೂಪವಾಗಿದ್ದಾರೆ ಅವರ ಆದರ್ಶಗಳು ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು.

ಕನಕದಾಸರು 16 ನೇ ಶತಮಾನದಲ್ಲಿ ಸಾಮಾ ಜಿಕ ಕ್ರಾಂತಿಯ ಹಾದಿ ತೋರಿದವರು. ಹುಟ್ಟಿನ ಲ್ಲಿ ಕೆಳ ವರ್ಗದಲ್ಲಿದ್ದರೂ, ನಂತರ ಜ್ಞಾನ ಸಂಪಾದಿ ಸಿ ಮನ ಪರಿವರ್ತನೆ ಗೊಂಡು ಭಕ್ತಿ ಮಾರ್ಗದ ಲ್ಲಿ ಸಾಗಿ ಸಮಾಜ ಸುಧಾರಣೆಗೆ ಪ್ರೇರಣೆ ಯಾದರು ಕನಕದಾಸರು ಎಲ್ಲಾ ಜನ ಸಮುದಾಯ ಗಳಿಗೂ ಸೇರಿದ ಮಹಾ ನ್ ಪುರುಷರಾಗಿದ್ದಾರೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಈ. ಕೃಷ್ಣೇಗೌಡ, ಅವರು ಮಾತನಾಡಿ ಸಮಾಜದ ಲ್ಲಿನ ಮೇಲು ಕೀಳು ವ್ಯವಸ್ಥೆ ವಿರುದ್ದ ಶತ ಮಾನಗಳ ಹಿಂದೆಯೇ ಕನಕದಾಸರು ಧ್ವನಿ ಎತ್ತಿದವರು ಬಸವಣ್ಣ ನವರ ತತ್ವ ಸಿದ್ದಾಂತ ಗಳಂತೆ ಕನಕದಾಸರೂ ಸಹ ಸಾಮಾಜಿಕ ಅಸಮಾನತೆಗಳ ವಿರುದ್ದ ಅರಿವು ಮೂಡಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷ ತ್ತಿನ ನೂತನ ಜಿಲ್ಲಾ ಅಧ್ಯಕ್ಷರಾದ ಮಲ್ಲೇಶ್ ಗೌಡ ಅವರು ಮಾತನಾಡಿ ಎಲ್ಲಾ ಮಹಾನಾಯಕರ ನ್ನು ಕೇವಲ ಒಂದೊಂದು ಜಾತಿಗೆ ಸೀಮಿತಗೊಳಿ ಸದೆ ಎಲ್ಲಾ ಸಮುದಾ ಯಗಳೂ ಅವರ ಮೌಲ್ಯಗಳನ್ನು ಅರಿತು ಪಾಲನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸುದರ್ಶನ್ ಅವರು ಕನಕದಾಸರ ಜೀವನ, ಸಾಹಿತ್ಯ ಶ್ರೇಷ್ಠತೆ ,ಆದರ್ಶ, ಭಕ್ತಿ ಮಾರ್ಗ ದಲ್ಲಿ ಕಂಡ ಸತ್ಯಗಳು, ಸಾಮಾಜಿಕ ಪರಿವರ್ತನೆಗೆ ಮಾಡಿದ ಪ್ರಯತ್ನಗಳು ಮತ್ತು ಅವರ ಕೊಡುಗೆಗಳ ಬಗ್ಗೆ ವಿವರಿಸಿದರಲ್ಲದೆ, ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ ವಿರುದ್ದ ಧ್ವನಿ ಎತ್ತಿ ಸಮಾಜ ಸುಧಾರಣೆಗೆ ಕನಕದಾಸರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಾಗರಾಜ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಟೇಲ್ ಶಿವಪ್ಪ, ತಾಲ್ಲೂಕು ಸಂಘದ ಅಧ್ಯಕ್ಷರಾದ ಸಿದ್ದೇಗೌಡ, ಸ್ವಾತಂತ್ರ್ಯ ಹೋರಾಟಗಾರಾದ ಹೆಚ್.ಎಂ ಶಿವಣ್ಣ, ಸಮಾಜ ಸೇವಕರಾದ ಮಹಂತಪ್ಪ ಮತ್ತಿತರು ಹಾಜರಿದ್ದರು.

The post ಮಹನೀಯರ ಜೀವನದ ಆದರ್ಶ ಅನುಕರಣೀಯ:ಅಪರ ಜಿಲ್ಲಾಧಿಕಾರಿ appeared first on Hai Sandur kannada fortnightly news paper.

]]>
https://haisandur.com/2021/11/22/%e0%b2%ae%e0%b2%b9%e0%b2%a8%e0%b3%80%e0%b2%af%e0%b2%b0-%e0%b2%9c%e0%b3%80%e0%b2%b5%e0%b2%a8%e0%b2%a6-%e0%b2%86%e0%b2%a6%e0%b2%b0%e0%b3%8d%e0%b2%b6-%e0%b2%85%e0%b2%a8%e0%b3%81%e0%b2%95%e0%b2%b0/feed/ 0
ಕೇವಲ ಕಾನೂನು ಬದ್ಧ ದತ್ತು ಪ್ರಕ್ರಿಯೆ ಪ್ರೋತ್ಸಾಹಿಸಿ: ಉಷಾ ಜೆ. https://haisandur.com/2021/11/18/%e0%b2%95%e0%b3%87%e0%b2%b5%e0%b2%b2-%e0%b2%95%e0%b2%be%e0%b2%a8%e0%b3%82%e0%b2%a8%e0%b3%81-%e0%b2%ac%e0%b2%a6%e0%b3%8d%e0%b2%a7-%e0%b2%a6%e0%b2%a4%e0%b3%8d%e0%b2%a4%e0%b3%81-%e0%b2%aa%e0%b3%8d/ https://haisandur.com/2021/11/18/%e0%b2%95%e0%b3%87%e0%b2%b5%e0%b2%b2-%e0%b2%95%e0%b2%be%e0%b2%a8%e0%b3%82%e0%b2%a8%e0%b3%81-%e0%b2%ac%e0%b2%a6%e0%b3%8d%e0%b2%a7-%e0%b2%a6%e0%b2%a4%e0%b3%8d%e0%b2%a4%e0%b3%81-%e0%b2%aa%e0%b3%8d/#respond Thu, 18 Nov 2021 12:52:08 +0000 https://haisandur.com/?p=22298 ಹಾಸನ ನ.18 :- ಮಕ್ಕಳನ್ನು ಅನಧೀಕೃತ ದತ್ತು ನೀಡುವುದು ಅಪರಾಧ, ಕಾನೂನು ಬದ್ಧ ದತ್ತು ಪ್ರೋತ್ಸಾಹಿಸಿ, ಕಾನುನು ಬಾಹಿರ ದತ್ತು ನಿಷೇದಕ್ಕೆ ಸಹಕರಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಷಾ ಜೆ. ಕರೆ ನೀಡಿದ್ದಾರೆ. ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ನಮ್ಮ ಸಮಾಜದ ಆಸ್ತಿ, ನಮ್ಮ ದೇಶದಲ್ಲಿ ಒಟ್ಟು ಶೇ.40 ರಷ್ಟು ಮಕ್ಕಳಿದ್ದಾರೆ. ಈ ಮಕ್ಕಳಲ್ಲಿ ಕೆಲವು ಮಕ್ಕಳು ಅನಾಥರಾಗುವುದು, ನಿರ್ಲಕ್ಷತೆಗೆ ಒಳಗಾಗುವುದು […]

The post ಕೇವಲ ಕಾನೂನು ಬದ್ಧ ದತ್ತು ಪ್ರಕ್ರಿಯೆ ಪ್ರೋತ್ಸಾಹಿಸಿ: ಉಷಾ ಜೆ. appeared first on Hai Sandur kannada fortnightly news paper.

]]>
ಹಾಸನ ನ.18 :- ಮಕ್ಕಳನ್ನು ಅನಧೀಕೃತ ದತ್ತು ನೀಡುವುದು ಅಪರಾಧ, ಕಾನೂನು ಬದ್ಧ ದತ್ತು ಪ್ರೋತ್ಸಾಹಿಸಿ, ಕಾನುನು ಬಾಹಿರ ದತ್ತು ನಿಷೇದಕ್ಕೆ ಸಹಕರಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಷಾ ಜೆ. ಕರೆ ನೀಡಿದ್ದಾರೆ.

ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ನಮ್ಮ ಸಮಾಜದ ಆಸ್ತಿ, ನಮ್ಮ ದೇಶದಲ್ಲಿ ಒಟ್ಟು ಶೇ.40 ರಷ್ಟು ಮಕ್ಕಳಿದ್ದಾರೆ. ಈ ಮಕ್ಕಳಲ್ಲಿ ಕೆಲವು ಮಕ್ಕಳು ಅನಾಥರಾಗುವುದು, ನಿರ್ಲಕ್ಷತೆಗೆ ಒಳಗಾಗುವುದು ಕಂಡು ಬರುತ್ತಿದೆ ಎಂದರು.

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, 1098 ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದೆ. ಅನಾಥ, ಪರಿತ್ಯಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಮಗುವಿನ ಘನತೆಯುತ ಜೀವನ ರೂಪಿಸಲು ಈ ಮಕ್ಕಳ ರಕ್ಷಣಾ ವ್ಯವಸ್ಥೆ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಆದರೆ ಕೆಲವು ಕಡೆ ಅನಾಥ ಮಕ್ಕಳನ್ನು ರಕ್ಷಿಸುವ ನೆಪದಲ್ಲಿ ಅನಧೀಕೃತವಾಗಿ ಸಾಗಿಸುವುದು, ಮಾರಾಟ ಮಾಡುವುದು ಕಂಡು ಬರುತ್ತಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಎಲ್ಲರೂ ಇದನ್ನು ತಡೆಯಬೇಕಿದೆ ಎಂದು

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾಂತರಾಜು ಅವರು ಮಾತನಾಡಿ ಬೇಡವಾದ ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಡದೇ, ಮಮತೆಯ ತೊಟ್ಟಿಲಲ್ಲಿ ಹಾಕಿ, ಮಗುವಿನ ಜೀವ ಉಳಿಸಲು ಸಹಕರಿಸಿ ಎಂದರು.

ಯಾವುದೇ ಮಗುವನ್ನು ಅನಧೀಕೃತವಾಗಿ ಪಡೆಯುವಂತಿಲ್ಲ ಹಾಗೂ ಮಾರಾಟ ಮಾಡುವಂತಿಲ್ಲ ಮಕ್ಕಳ ನ್ಯಾಯ ಕಾಯ್ದೆ-2015 ರನ್ವಯ ಮಕ್ಕಳ ಮಾರಾಟ ಮಾಡಿದವರಿಗೆ ಹಾಗೂ ಕೊಂಡುಕೊಂಡವರಿಗೆ 5 ವರ್ಷ ಕಠಿಣ ಸಜೆ ವಿಧಿಸಲಾಗುತ್ತದೆ. ಆಸ್ಪತ್ರೆ ಸಿಬ್ಬಂದಿ ಅಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ 7 ವರ್ಷಗಳವರೆಗೆ ಸಜೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಮಕ್ಕಳನ್ನು ದತ್ತು ಪಡೆಯಲು ಆಸಕ್ತಿ ಇರುವ ದಂಪತಿಗಳು ಹತ್ತಿರದ ಮಕ್ಕಳ ಕಲ್ಯಾಣ ಸಮಿತಿ, ದತ್ತು ಕೇಂದ್ರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದಾಗಿದೆ ಅಥವಾ ಅಂತರರ್ಜಾಲ ತಾಣ WWW.cara.nic.in ಗೆ ಸಂಪರ್ಕಿಸಬಹುದಾಗಿದೆ ಎಂದು ಕಾಂತರಾಜ್ ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ಸಿ.ಟಿ ರತ್ನಮ್ಮ , ಸಮಾಜ ಕಾರ್ಯಕರ್ತರಾದ ಸವಿತಾ ಬಿ.ಜೆ, ಸಂತೋಷ್ ಲೋಹಿತ್ ಆರ್.ಡಿ ಮತ್ತಿತರರು ಪಾಲ್ಗೊಂಡಿದ್ದರು.

The post ಕೇವಲ ಕಾನೂನು ಬದ್ಧ ದತ್ತು ಪ್ರಕ್ರಿಯೆ ಪ್ರೋತ್ಸಾಹಿಸಿ: ಉಷಾ ಜೆ. appeared first on Hai Sandur kannada fortnightly news paper.

]]>
https://haisandur.com/2021/11/18/%e0%b2%95%e0%b3%87%e0%b2%b5%e0%b2%b2-%e0%b2%95%e0%b2%be%e0%b2%a8%e0%b3%82%e0%b2%a8%e0%b3%81-%e0%b2%ac%e0%b2%a6%e0%b3%8d%e0%b2%a7-%e0%b2%a6%e0%b2%a4%e0%b3%8d%e0%b2%a4%e0%b3%81-%e0%b2%aa%e0%b3%8d/feed/ 0
ಮಳೆಯಿಂದ ಹಾಳಾದ ಕಾಫಿ ಬೆಳೆ ಸಮೀಕ್ಷೆಗೆ ಸೂಚನೆ https://haisandur.com/2021/11/18/%e0%b2%ae%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%b9%e0%b2%be%e0%b2%b3%e0%b2%be%e0%b2%a6-%e0%b2%95%e0%b2%be%e0%b2%ab%e0%b2%bf-%e0%b2%ac%e0%b3%86%e0%b2%b3%e0%b3%86-%e0%b2%b8/ https://haisandur.com/2021/11/18/%e0%b2%ae%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%b9%e0%b2%be%e0%b2%b3%e0%b2%be%e0%b2%a6-%e0%b2%95%e0%b2%be%e0%b2%ab%e0%b2%bf-%e0%b2%ac%e0%b3%86%e0%b2%b3%e0%b3%86-%e0%b2%b8/#respond Thu, 18 Nov 2021 12:47:05 +0000 https://haisandur.com/?p=22294 ಹಾಸನ,ನ.18 :- ಮಳೆಯಿಂದ ಹಾಳಾದ ಕಾಫಿ ಬೆಳಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಳೆಹಾನಿ ಸಮೀಕ್ಷೆಗೆ ಕ್ರಮ ಕೈಗೊಳ್ಳುವಂತೆ ರೈತರಿಗೆ ಪರಿಹಾರ ಒದಗಿಸುವಂತೆ ಕಾಫಿ ಮಂಡಳಿಯ ಕಾರ್ಯದರ್ಶಿ ಜಗದೀಶ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಯ ಗುಣಮಟ್ಟ ಕಡಿಮೆಯಾಗಿದ್ದು, ಶೇಕಡ 33 ಕ್ಕಿಂತ ಅಧಿಕ ಪ್ರಮಾಣದಲ್ಲಿ ಹಾಳಾಗಿರುವ ಪ್ರದೇಶದಲ್ಲಿ ಕಾಫಿ ಬೋರ್ಡಿನ ಸಿಬ್ಬಂದಿಯ ಜೊತೆಗೆ ಜಿಲ್ಲಾಡಳಿತವು ವಿಶೇಷ ತಂಡವನ್ನು ರಚಿಸಿ ಸಮೀಕ್ಷೆ ನಡೆಸಿ ರೈತರಿಂದ ಅರ್ಜಿಯೊಂದಿಗೆ ಹಾಳಾಗಿರುವ ಬೆಳೆಯ […]

The post ಮಳೆಯಿಂದ ಹಾಳಾದ ಕಾಫಿ ಬೆಳೆ ಸಮೀಕ್ಷೆಗೆ ಸೂಚನೆ appeared first on Hai Sandur kannada fortnightly news paper.

]]>
ಹಾಸನ,ನ.18 :- ಮಳೆಯಿಂದ ಹಾಳಾದ ಕಾಫಿ ಬೆಳಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಳೆಹಾನಿ ಸಮೀಕ್ಷೆಗೆ ಕ್ರಮ ಕೈಗೊಳ್ಳುವಂತೆ ರೈತರಿಗೆ ಪರಿಹಾರ ಒದಗಿಸುವಂತೆ ಕಾಫಿ ಮಂಡಳಿಯ ಕಾರ್ಯದರ್ಶಿ ಜಗದೀಶ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಯ ಗುಣಮಟ್ಟ ಕಡಿಮೆಯಾಗಿದ್ದು, ಶೇಕಡ 33 ಕ್ಕಿಂತ ಅಧಿಕ ಪ್ರಮಾಣದಲ್ಲಿ ಹಾಳಾಗಿರುವ ಪ್ರದೇಶದಲ್ಲಿ ಕಾಫಿ ಬೋರ್ಡಿನ ಸಿಬ್ಬಂದಿಯ ಜೊತೆಗೆ ಜಿಲ್ಲಾಡಳಿತವು ವಿಶೇಷ ತಂಡವನ್ನು ರಚಿಸಿ ಸಮೀಕ್ಷೆ ನಡೆಸಿ ರೈತರಿಂದ ಅರ್ಜಿಯೊಂದಿಗೆ ಹಾಳಾಗಿರುವ ಬೆಳೆಯ ಫೋಟೋಗಳನ್ನು ಪರಿಹಾರ ಪೋರ್ಟಲ್‍ನಲ್ಲಿ ಸಲ್ಲಿಸುವಂತೆ ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕಾಫಿ ಬೆಳೆ ಸಮೀಕ್ಷೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್, ಕಾಫಿ ಮಂಡಳಿ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಮತ್ತಿತರರು ಹಾಜರಿದ್ದರು.

The post ಮಳೆಯಿಂದ ಹಾಳಾದ ಕಾಫಿ ಬೆಳೆ ಸಮೀಕ್ಷೆಗೆ ಸೂಚನೆ appeared first on Hai Sandur kannada fortnightly news paper.

]]>
https://haisandur.com/2021/11/18/%e0%b2%ae%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%b9%e0%b2%be%e0%b2%b3%e0%b2%be%e0%b2%a6-%e0%b2%95%e0%b2%be%e0%b2%ab%e0%b2%bf-%e0%b2%ac%e0%b3%86%e0%b2%b3%e0%b3%86-%e0%b2%b8/feed/ 0
ಅಂಗಾಂಶ ಆಲೂಗಡ್ಡೆ ಕೃಷಿ ತಂತ್ರಜ್ಞಾನ ಮಾಹಿತಿ ಪ್ರಚಾರ ವಾಹನಕ್ಕೆ ಚಾಲನೆ https://haisandur.com/2021/11/17/%e0%b2%85%e0%b2%82%e0%b2%97%e0%b2%be%e0%b2%82%e0%b2%b6-%e0%b2%86%e0%b2%b2%e0%b3%82%e0%b2%97%e0%b2%a1%e0%b3%8d%e0%b2%a1%e0%b3%86-%e0%b2%95%e0%b3%83%e0%b2%b7%e0%b2%bf-%e0%b2%a4%e0%b2%82%e0%b2%a4/ https://haisandur.com/2021/11/17/%e0%b2%85%e0%b2%82%e0%b2%97%e0%b2%be%e0%b2%82%e0%b2%b6-%e0%b2%86%e0%b2%b2%e0%b3%82%e0%b2%97%e0%b2%a1%e0%b3%8d%e0%b2%a1%e0%b3%86-%e0%b2%95%e0%b3%83%e0%b2%b7%e0%b2%bf-%e0%b2%a4%e0%b2%82%e0%b2%a4/#respond Wed, 17 Nov 2021 14:07:39 +0000 https://haisandur.com/?p=22272 ಹಾಸನ, ನ.17 :- ತೋಟಗಾರಿಕಾ ಇಲಾಖೆ ವತಿಯಿಂದ ಸ್ಥಳೀಯವಾಗಿ ಆಲೂಗಡ್ಡೆ ಬೀಜಗಳನ್ನು ಉತ್ಪಾದಿಸುವ ನವೀನ ತಾಂತ್ರಿಕತೆಯನ್ನು ಅಂಗಾಂಶ ಬಿತ್ತನೆ ಬೀಜ ಉತ್ಪಾದನೆ ಕುರಿತಂತೆ ಅರಿವು ಮೂಡಿಸುವ ಹಾಗೂ ಮಾಹಿತಿ ನೀಡುವ ವಿಶೇಷ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರು ಬಿತ್ತನೆಗೆ ಬಳಸುತ್ತಿರುವ ಆಲೂಗೆಡ್ಡೆ ಬೀಜಗಳು ಅಷ್ಟು ಗುಣಮಟ್ಟವನ್ನು ಹೊಂದಿರುವುದಿಲ್ಲ. ಆದ್ದರಿಂದ ಹೊಸ ಅಂಗಾಂಶ ಸಸಿಗಳಿಂದ ಉತ್ತಮ ಮಟ್ಟದ ಆಲೂಗೆಡ್ಡೆ ಬೀಜ ಉತ್ಪಾದನೆ ಮಾಡುವುದರಿಂದ ಒಳ್ಳೆಯ […]

The post ಅಂಗಾಂಶ ಆಲೂಗಡ್ಡೆ ಕೃಷಿ ತಂತ್ರಜ್ಞಾನ ಮಾಹಿತಿ ಪ್ರಚಾರ ವಾಹನಕ್ಕೆ ಚಾಲನೆ appeared first on Hai Sandur kannada fortnightly news paper.

]]>
ಹಾಸನ, ನ.17 :- ತೋಟಗಾರಿಕಾ ಇಲಾಖೆ ವತಿಯಿಂದ ಸ್ಥಳೀಯವಾಗಿ ಆಲೂಗಡ್ಡೆ ಬೀಜಗಳನ್ನು ಉತ್ಪಾದಿಸುವ ನವೀನ ತಾಂತ್ರಿಕತೆಯನ್ನು ಅಂಗಾಂಶ ಬಿತ್ತನೆ ಬೀಜ ಉತ್ಪಾದನೆ ಕುರಿತಂತೆ ಅರಿವು ಮೂಡಿಸುವ ಹಾಗೂ ಮಾಹಿತಿ ನೀಡುವ ವಿಶೇಷ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರು ಬಿತ್ತನೆಗೆ ಬಳಸುತ್ತಿರುವ ಆಲೂಗೆಡ್ಡೆ ಬೀಜಗಳು ಅಷ್ಟು ಗುಣಮಟ್ಟವನ್ನು ಹೊಂದಿರುವುದಿಲ್ಲ. ಆದ್ದರಿಂದ ಹೊಸ ಅಂಗಾಂಶ ಸಸಿಗಳಿಂದ ಉತ್ತಮ ಮಟ್ಟದ ಆಲೂಗೆಡ್ಡೆ ಬೀಜ ಉತ್ಪಾದನೆ ಮಾಡುವುದರಿಂದ ಒಳ್ಳೆಯ ಬೆಳೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಇದಕ್ಕೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಕೂಡ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಅವರು ಮಾತನಾಡಿ ಆಲೂಗಡ್ಡೆ ಕುಡಿಗಳಿಂದ ಸಸಿಗಳನ್ನು ಉತ್ಪಾದನೆ ಮಾಡಿ ಆ ಸಸಿಗಳನ್ನು ನರ್ಸರಿಗಳಲ್ಲಿ ಬೆಳಸಿ ರೈತರೇ ತಮ್ಮ ಜಮೀನಿನಲ್ಲಿ ಸ್ವಾವಲಂಬಿಯಾಗಿ ಆಲೂಗೆಡ್ಡೆ ಬೀಜಗಳನ್ನು ಪಡೆಯಬಹುದು. ಇವು ಉತ್ಕೃಷ್ಟ ಗುಣಮಟ್ಟವನ್ನೂ ಹೊಂದಿದ್ದು, 30ರಿಂದ ಶೇ 40 ರಷ್ಟು ಇಳುವರಿ ಪಡೆಯಬಹುದಾಗಿದೆ ಈ ರೀತಿಯ ಕೃಷಿ ಮಾಡುವುದರಿಂದ ರೋಗಬಾಧೆ ಇನ್ನಿತರ ಸಮಸ್ಯೆಗಳು ದೂರವಾಗುತ್ತದೆ ಆದ್ದರಿಂದ ಜಿಲ್ಲಾದ್ಯಂತ ಎಲ್ಲ ರೈತರು ಇದರ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು ಇದಕ್ಕಾಗಿ ಈ ದಿನ ಪ್ರಚಾರ ವಾಹನ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದರು.
ಆಲೂಗಡ್ಡೆ ಕೃಷಿಯು ಹಾಸನದ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು ರೈತರು ಆಲೂಗಡ್ಡೆ ಬಿತ್ತನೆ ಗಡ್ಡೆಗಳನ್ನು ಬೇರೆಡೆಯಿಂದ ತರಿಸಿಕೊಳ್ಳುವುದು ತುಂಬಾ ಕಷ್ಟ ಕರ ಸಂಗತಿಯಾಗಿದ್ದು ಸಾಗಾಣಿಕಾ ಸಮಸ್ಯೆ ಸದರಿ ಗಡ್ಡೆಗಳ ಗುಣಮಟ್ಟ ಇನ್ನಿತರ ಸಮಸ್ಯೆಗಳನ್ನೂ ತಡೆಯುವ ಸಲುವಾಗಿ ದೇಶದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯ ತೋಟಗಾರಿಕಾ ಇಲಾಖೆ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅಂತರಾಷ್ಟ್ರೀಯ ಆಲೂಗಡ್ಡೆ ಸಂಸ್ಥೆ ಹಾಗೂ ಉIZ ಸಂಸ್ಥೆ ಬೆಂಗಳೂರು ಇವರುಗಳ ಸಹಭಾಗಿತ್ವದಲ್ಲಿ ಹಲವಾರು ತಾಂತ್ರಿಕ ಪ್ರಯೋಗಗಳ ಮೂಲಕ ರೈತರಿಗೆ ಉಪಯೋಗವಾಗುವಂತೆ ಅಂಗಾಂಶ ಆಲೂಗಡ್ಡೆ ಸಸಿಗಳಿಂದ ಸ್ವಾವಲಂಬಿಯಾಗಿ ರೈತರು ಬಿತ್ತನೆಗಾಗಿ ಆಲೂಗಡ್ಡೆ ಉತ್ಪಾದನೆ ಮಾಡುವ ಬಗ್ಗೆ ಹಾಗೂ ಈ ಒಂದು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಜಂಟಿ ಕೃಷಿ ನಿರ್ದೇಶಕರಾದ, ಎಚ್.ರವಿ, ಆಲೂಗಡ್ಡೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಹೆಚ್.ಅಮರ ನಂಜುಂಡೇಶ್ವರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಉIZ ಸಂಸ್ಥೆಯ ಅಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರವಿ ಮತ್ತಿತರರು ಭಾಗವಹಿಸಿದ್ದರು.

The post ಅಂಗಾಂಶ ಆಲೂಗಡ್ಡೆ ಕೃಷಿ ತಂತ್ರಜ್ಞಾನ ಮಾಹಿತಿ ಪ್ರಚಾರ ವಾಹನಕ್ಕೆ ಚಾಲನೆ appeared first on Hai Sandur kannada fortnightly news paper.

]]>
https://haisandur.com/2021/11/17/%e0%b2%85%e0%b2%82%e0%b2%97%e0%b2%be%e0%b2%82%e0%b2%b6-%e0%b2%86%e0%b2%b2%e0%b3%82%e0%b2%97%e0%b2%a1%e0%b3%8d%e0%b2%a1%e0%b3%86-%e0%b2%95%e0%b3%83%e0%b2%b7%e0%b2%bf-%e0%b2%a4%e0%b2%82%e0%b2%a4/feed/ 0
ತೋಟಗಾರಿಕಾ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಿಇಓ ಸೂಚನೆ https://haisandur.com/2021/11/17/%e0%b2%a4%e0%b3%8b%e0%b2%9f%e0%b2%97%e0%b2%be%e0%b2%b0%e0%b2%bf%e0%b2%95%e0%b2%be-%e0%b2%af%e0%b3%8b%e0%b2%9c%e0%b2%a8%e0%b3%86%e0%b2%97%e0%b2%b3-%e0%b2%a4%e0%b3%8d%e0%b2%b5%e0%b2%b0%e0%b2%bf%e0%b2%a4/ https://haisandur.com/2021/11/17/%e0%b2%a4%e0%b3%8b%e0%b2%9f%e0%b2%97%e0%b2%be%e0%b2%b0%e0%b2%bf%e0%b2%95%e0%b2%be-%e0%b2%af%e0%b3%8b%e0%b2%9c%e0%b2%a8%e0%b3%86%e0%b2%97%e0%b2%b3-%e0%b2%a4%e0%b3%8d%e0%b2%b5%e0%b2%b0%e0%b2%bf%e0%b2%a4/#respond Wed, 17 Nov 2021 14:04:59 +0000 https://haisandur.com/?p=22268 ಹಾಸನ, ನ.17 – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸಮಗ್ರ ತೋಟಗಾರಿಕೆ ಶೀಘ್ರವಾಗಿ ಅಭಿವೃದ್ಧಿ ಮಿಷನ್ ಯೋಜನೆಗಳ ಅಡಿಯಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಗೊಳಿಸುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಎಲ್ಲಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಿಗೆ ಸೂಚಿಸಿದ್ದಾರೆ. ತೋಟಗಾರಿಕೆ ಇಲಾಖೆ (ಜಿ.ಪಂ) ಹಾಸನ ಉಪ ನಿರ್ದೇಶಕರ ಕಚೇರಿಯಲ್ಲಿ ಇಂದು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ತಾಲ್ಲೂಕುವಾರು ಅಭಿವೃದ್ಧಿ ಮಾಹಿತಿಯನ್ನು […]

The post ತೋಟಗಾರಿಕಾ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಿಇಓ ಸೂಚನೆ appeared first on Hai Sandur kannada fortnightly news paper.

]]>
ಹಾಸನ, ನ.17 – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸಮಗ್ರ ತೋಟಗಾರಿಕೆ ಶೀಘ್ರವಾಗಿ ಅಭಿವೃದ್ಧಿ ಮಿಷನ್ ಯೋಜನೆಗಳ ಅಡಿಯಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಗೊಳಿಸುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಎಲ್ಲಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಿಗೆ ಸೂಚಿಸಿದ್ದಾರೆ.

ತೋಟಗಾರಿಕೆ ಇಲಾಖೆ (ಜಿ.ಪಂ) ಹಾಸನ ಉಪ ನಿರ್ದೇಶಕರ ಕಚೇರಿಯಲ್ಲಿ ಇಂದು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ತಾಲ್ಲೂಕುವಾರು ಅಭಿವೃದ್ಧಿ ಮಾಹಿತಿಯನ್ನು ಪರಿಶೀಲಿಸಿ, ಪ್ರಗತಿ ಸಾಧಿಸುವಲ್ಲಿ ಹಿಂದುಳಿದಿರುವತಾಲ್ಲೂಕು ವಾರುಅಧಿಕಾರಿಗಳಿಗೆ ಯೋಜನೆಗಳನ್ನು ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದರು.
ಹಾಗೂ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ತಾಲ್ಲೂಕುಗಳ ಅಧಿಕಾರಿಗೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೆ ಸಂಧರ್ಭದಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ, ಇದೇ ಮಾಹೆಯಲ್ಲಿ ನಿವೃತ್ತರಾಗುತ್ತಿರುವ ಕಾರಣ ತೋಟಗಾರಿಕೆ ಇಲಾಖೆ ವೃಂದದ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್ ಹಾಗೂ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಯೋಗೇಶ್ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

The post ತೋಟಗಾರಿಕಾ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಿಇಓ ಸೂಚನೆ appeared first on Hai Sandur kannada fortnightly news paper.

]]>
https://haisandur.com/2021/11/17/%e0%b2%a4%e0%b3%8b%e0%b2%9f%e0%b2%97%e0%b2%be%e0%b2%b0%e0%b2%bf%e0%b2%95%e0%b2%be-%e0%b2%af%e0%b3%8b%e0%b2%9c%e0%b2%a8%e0%b3%86%e0%b2%97%e0%b2%b3-%e0%b2%a4%e0%b3%8d%e0%b2%b5%e0%b2%b0%e0%b2%bf%e0%b2%a4/feed/ 0
ಸೂತ್ರಧಾರ ನಾಟಕ ಯಶಸ್ವಿ ಪ್ರದರ್ಶನ https://haisandur.com/2021/11/16/%e0%b2%b8%e0%b3%82%e0%b2%a4%e0%b3%8d%e0%b2%b0%e0%b2%a7%e0%b2%be%e0%b2%b0-%e0%b2%a8%e0%b2%be%e0%b2%9f%e0%b2%95-%e0%b2%af%e0%b2%b6%e0%b2%b8%e0%b3%8d%e0%b2%b5%e0%b2%bf-%e0%b2%aa%e0%b3%8d%e0%b2%b0/ https://haisandur.com/2021/11/16/%e0%b2%b8%e0%b3%82%e0%b2%a4%e0%b3%8d%e0%b2%b0%e0%b2%a7%e0%b2%be%e0%b2%b0-%e0%b2%a8%e0%b2%be%e0%b2%9f%e0%b2%95-%e0%b2%af%e0%b2%b6%e0%b2%b8%e0%b3%8d%e0%b2%b5%e0%b2%bf-%e0%b2%aa%e0%b3%8d%e0%b2%b0/#respond Tue, 16 Nov 2021 15:16:47 +0000 https://haisandur.com/?p=22202 ಹಾಸನ ನ.16 :- ಏಕತಾರಿ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ಮೈಸೂರಿನ ರಂಗಾಯಣದ ಕಲಾವಿದರು ಅಭಿನಯಿಸಿದ ಸಂವಿಧಾನದ ಆಶಯವುಳ್ಳ ‘ಸೂತ್ರಧಾರ’ ನಾಟಕ ನ. 15 ರಂದು ಸಂಜೆ ನಗರದ ಎ.ವಿ.ಕೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಹಂಪನಹಳ್ಳಿ ತಿಮ್ಮೇಗೌಡ ಅವರು ನಾಟಕ ಪ್ರದರ್ಶನ ಉದ್ಘಾಟಿಸಿದರು.ಎ.ವಿ.ಕೆ ಕಾಲೇಜು ಪ್ರಾಂಶುಪಾಲರಾದ ಸುರೇಶ್ ಗೌಡ, ಕಲಾವಿದರಾದ ಗ್ಯಾರಂಟಿ ರಾಮಣ್ಣ, ದೇವನಂದ್ ವರಪ್ರಸಾದ್ , ರಂಗಾಯಣದ ಪ್ರತಿನಿಧಿ ಹಾಗೂ ಸೂತ್ರಧಾರ ನಾಟಕದ ಸಂಚಾಕರಾದ ಯೋಗಾನಂದ್, ಎ.ವಿ.ಕೆ ಕಾಲೇಜಿನ […]

The post ಸೂತ್ರಧಾರ ನಾಟಕ ಯಶಸ್ವಿ ಪ್ರದರ್ಶನ appeared first on Hai Sandur kannada fortnightly news paper.

]]>
ಹಾಸನ ನ.16 :- ಏಕತಾರಿ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ಮೈಸೂರಿನ ರಂಗಾಯಣದ ಕಲಾವಿದರು ಅಭಿನಯಿಸಿದ ಸಂವಿಧಾನದ ಆಶಯವುಳ್ಳ ‘ಸೂತ್ರಧಾರ’ ನಾಟಕ ನ. 15 ರಂದು ಸಂಜೆ ನಗರದ ಎ.ವಿ.ಕೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಹಂಪನಹಳ್ಳಿ ತಿಮ್ಮೇಗೌಡ ಅವರು ನಾಟಕ ಪ್ರದರ್ಶನ ಉದ್ಘಾಟಿಸಿದರು.ಎ.ವಿ.ಕೆ ಕಾಲೇಜು ಪ್ರಾಂಶುಪಾಲರಾದ ಸುರೇಶ್ ಗೌಡ, ಕಲಾವಿದರಾದ ಗ್ಯಾರಂಟಿ ರಾಮಣ್ಣ, ದೇವನಂದ್ ವರಪ್ರಸಾದ್ , ರಂಗಾಯಣದ ಪ್ರತಿನಿಧಿ ಹಾಗೂ ಸೂತ್ರಧಾರ ನಾಟಕದ ಸಂಚಾಕರಾದ ಯೋಗಾನಂದ್, ಎ.ವಿ.ಕೆ ಕಾಲೇಜಿನ ಪ್ರಾಧ್ಯಾಪಕರಾದ ಚ.ನಾ ಯತೀಶ್ಚರ್,ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ್ ಮತ್ತಿತರರು ಹಾಜರಿದ್ದರು.

ಸಂವಿಧಾನ ರಚನೆಯ ಉದ್ದೇಶ, ಅದರ ನಿರ್ವಹಣೆ ಹೇಗಿರಬೇಕು, ಹೇಗಿದೆ, ಜನ ಪ್ರತಿನಿಧಿಗಳು, ಪ್ರಜೆಗಳ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಈ ನಾಟಕ ಒಳ್ಳೆಯ ಸಂದೇಶ ಹೊಂದಿದ್ದು, ರಂಗಾಯಣ ಮತ್ತು ಏಕತಾರಿ ಸಂಸ್ಥೆಯ ಪ್ರಯತ್ನ ಪ್ರಶಂಸೆ ಗಳಿಸಿತು. ಸಂವಿಧಾನದ ಪ್ರಾಮುಖ್ಯತೆ ಅದರ ಮೌಲ್ಯ, ಮಹತ್ವದ ಬಗ್ಗೆ ನವಿರು ನಿರೂಪಣೆಯ ನಾಟಕ ಎಲ್ಲರ ಗಮನ ಸೆಳೆಯಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದು, ಜಾತೀಯತೆ, ಸಾಮಾಜಿಕ ಮೌಢ್ಯಗಳು, ಬಾಲ್ಯವಿವಾಹ, ಅನಕ್ಷರತೆ, ನಿರುದ್ಯೋಗ, ಬ್ರಿಟಿಷ್ ಆಡಳಿತ ಹಾಗೂ ಅನಂತರ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚನೆಯ ವೇಳೆ ಅವುಗಳ ಪರಿಹಾರಕ್ಕೆ ಕಂಡುಕೊಂಡ ಮಾರ್ಗಗಳ ಬಗೆಗಿನ ವಿವರಗಳನ್ನು ನಾಟಕದಲ್ಲಿ ಸಂಕ್ಷಿಪ್ತವಾಗಿ ಚಿತ್ರಿಸಲಾಗಿದೆ.
ಸಂವಿಧಾನದಲ್ಲಿ ಕೇವಲ ಹಕ್ಕು ಮಾತ್ರವಲ್ಲ ಕರ್ತವ್ಯಗಳನ್ನು ಗುರುತಿಸಲಾಗಿದೆ. ಪ್ರತಿಯೊಬ್ಬರೂ ಪರಸ್ಪರ ಗೌರವಿಸುತ್ತಾ ಎಲ್ಲರೂ ಸಮಾನರು ಎಂದು ಬದುಕುತ್ತ ದೇಶದ ಏಳಿಗೆಗೆ ಶ್ರಮಿಸಬೇಕಾಗಿದೆ ಎಂಬುದನ್ನು ನಾಟಕವು ತಿಳಿಸುತ್ತದೆ.

ನಾಟಕವು ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ಒಂದೂವರೆ ಶತಮಾನಗಳ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಧಾರ್ಮಿಕ ಪರಿಸ್ಥಿತಿಗಳನ್ನು ಅತ್ಯುತ್ತಮವಾಗಿ ಚಿತ್ರಿಸಿದ್ದು, ವಿಶೇಷವಾಗಿತ್ತು.

The post ಸೂತ್ರಧಾರ ನಾಟಕ ಯಶಸ್ವಿ ಪ್ರದರ್ಶನ appeared first on Hai Sandur kannada fortnightly news paper.

]]>
https://haisandur.com/2021/11/16/%e0%b2%b8%e0%b3%82%e0%b2%a4%e0%b3%8d%e0%b2%b0%e0%b2%a7%e0%b2%be%e0%b2%b0-%e0%b2%a8%e0%b2%be%e0%b2%9f%e0%b2%95-%e0%b2%af%e0%b2%b6%e0%b2%b8%e0%b3%8d%e0%b2%b5%e0%b2%bf-%e0%b2%aa%e0%b3%8d%e0%b2%b0/feed/ 0