ಅಂಗಾಂಶ ಆಲೂಗಡ್ಡೆ ಕೃಷಿ ತಂತ್ರಜ್ಞಾನ ಮಾಹಿತಿ ಪ್ರಚಾರ ವಾಹನಕ್ಕೆ ಚಾಲನೆ

0
52

ಹಾಸನ, ನ.17 :- ತೋಟಗಾರಿಕಾ ಇಲಾಖೆ ವತಿಯಿಂದ ಸ್ಥಳೀಯವಾಗಿ ಆಲೂಗಡ್ಡೆ ಬೀಜಗಳನ್ನು ಉತ್ಪಾದಿಸುವ ನವೀನ ತಾಂತ್ರಿಕತೆಯನ್ನು ಅಂಗಾಂಶ ಬಿತ್ತನೆ ಬೀಜ ಉತ್ಪಾದನೆ ಕುರಿತಂತೆ ಅರಿವು ಮೂಡಿಸುವ ಹಾಗೂ ಮಾಹಿತಿ ನೀಡುವ ವಿಶೇಷ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರು ಬಿತ್ತನೆಗೆ ಬಳಸುತ್ತಿರುವ ಆಲೂಗೆಡ್ಡೆ ಬೀಜಗಳು ಅಷ್ಟು ಗುಣಮಟ್ಟವನ್ನು ಹೊಂದಿರುವುದಿಲ್ಲ. ಆದ್ದರಿಂದ ಹೊಸ ಅಂಗಾಂಶ ಸಸಿಗಳಿಂದ ಉತ್ತಮ ಮಟ್ಟದ ಆಲೂಗೆಡ್ಡೆ ಬೀಜ ಉತ್ಪಾದನೆ ಮಾಡುವುದರಿಂದ ಒಳ್ಳೆಯ ಬೆಳೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಇದಕ್ಕೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಕೂಡ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಅವರು ಮಾತನಾಡಿ ಆಲೂಗಡ್ಡೆ ಕುಡಿಗಳಿಂದ ಸಸಿಗಳನ್ನು ಉತ್ಪಾದನೆ ಮಾಡಿ ಆ ಸಸಿಗಳನ್ನು ನರ್ಸರಿಗಳಲ್ಲಿ ಬೆಳಸಿ ರೈತರೇ ತಮ್ಮ ಜಮೀನಿನಲ್ಲಿ ಸ್ವಾವಲಂಬಿಯಾಗಿ ಆಲೂಗೆಡ್ಡೆ ಬೀಜಗಳನ್ನು ಪಡೆಯಬಹುದು. ಇವು ಉತ್ಕೃಷ್ಟ ಗುಣಮಟ್ಟವನ್ನೂ ಹೊಂದಿದ್ದು, 30ರಿಂದ ಶೇ 40 ರಷ್ಟು ಇಳುವರಿ ಪಡೆಯಬಹುದಾಗಿದೆ ಈ ರೀತಿಯ ಕೃಷಿ ಮಾಡುವುದರಿಂದ ರೋಗಬಾಧೆ ಇನ್ನಿತರ ಸಮಸ್ಯೆಗಳು ದೂರವಾಗುತ್ತದೆ ಆದ್ದರಿಂದ ಜಿಲ್ಲಾದ್ಯಂತ ಎಲ್ಲ ರೈತರು ಇದರ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು ಇದಕ್ಕಾಗಿ ಈ ದಿನ ಪ್ರಚಾರ ವಾಹನ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದರು.
ಆಲೂಗಡ್ಡೆ ಕೃಷಿಯು ಹಾಸನದ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು ರೈತರು ಆಲೂಗಡ್ಡೆ ಬಿತ್ತನೆ ಗಡ್ಡೆಗಳನ್ನು ಬೇರೆಡೆಯಿಂದ ತರಿಸಿಕೊಳ್ಳುವುದು ತುಂಬಾ ಕಷ್ಟ ಕರ ಸಂಗತಿಯಾಗಿದ್ದು ಸಾಗಾಣಿಕಾ ಸಮಸ್ಯೆ ಸದರಿ ಗಡ್ಡೆಗಳ ಗುಣಮಟ್ಟ ಇನ್ನಿತರ ಸಮಸ್ಯೆಗಳನ್ನೂ ತಡೆಯುವ ಸಲುವಾಗಿ ದೇಶದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯ ತೋಟಗಾರಿಕಾ ಇಲಾಖೆ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅಂತರಾಷ್ಟ್ರೀಯ ಆಲೂಗಡ್ಡೆ ಸಂಸ್ಥೆ ಹಾಗೂ ಉIZ ಸಂಸ್ಥೆ ಬೆಂಗಳೂರು ಇವರುಗಳ ಸಹಭಾಗಿತ್ವದಲ್ಲಿ ಹಲವಾರು ತಾಂತ್ರಿಕ ಪ್ರಯೋಗಗಳ ಮೂಲಕ ರೈತರಿಗೆ ಉಪಯೋಗವಾಗುವಂತೆ ಅಂಗಾಂಶ ಆಲೂಗಡ್ಡೆ ಸಸಿಗಳಿಂದ ಸ್ವಾವಲಂಬಿಯಾಗಿ ರೈತರು ಬಿತ್ತನೆಗಾಗಿ ಆಲೂಗಡ್ಡೆ ಉತ್ಪಾದನೆ ಮಾಡುವ ಬಗ್ಗೆ ಹಾಗೂ ಈ ಒಂದು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಜಂಟಿ ಕೃಷಿ ನಿರ್ದೇಶಕರಾದ, ಎಚ್.ರವಿ, ಆಲೂಗಡ್ಡೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಹೆಚ್.ಅಮರ ನಂಜುಂಡೇಶ್ವರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಉIZ ಸಂಸ್ಥೆಯ ಅಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರವಿ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here