Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಕೃಷಿ ದರ್ಶನ Archives - Hai Sandur kannada fortnightly news paper https://haisandur.com/category/krushi/ Hai Sandur News.Karnataka India Fri, 09 Jul 2021 05:46:00 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಕೃಷಿ ದರ್ಶನ Archives - Hai Sandur kannada fortnightly news paper https://haisandur.com/category/krushi/ 32 32 ಮಣ್ಣೆತ್ತಿನ ಅಮಾವಾಸ್ಯೆ :ಮಣ್ಣು,ಎತ್ತು,ರೈತನ ಅವಿನಾಭಾವ ಸಂಬoಧದ ಹಬ್ಬ! https://haisandur.com/2021/07/09/mannettina-amavasye/ https://haisandur.com/2021/07/09/mannettina-amavasye/#respond Fri, 09 Jul 2021 05:45:10 +0000 https://haisandur.com/?p=17576 ಮುಂಗಾರು ಹಂಗಾಮಿನ ಬಿತ್ತನೆಯ ಕೆಲಸ ಮುಗಿದ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆ ಭೂತಾಯಿ ಮಕ್ಕಳ ಹಬ್ಬವಾಗಿದೆ. ಸಂಪ್ರದಾಯಕ್ಕೆ ಸೀಮಿತವಾಗುತ್ತಿರುವ ಈ ಹಬ್ಬ ಸಕಾಲಿಕವಾಗಿ ಮಳೆಯಾಗದಿರುವುದಕ್ಕೆ ಕೊಂಚ ಕಳೆಗುಂದುತ್ತಿದೆ. ಪುನರ್ವಸು ಮಳೆಯ ಹೊತ್ತಿಗೆ ಬಿತ್ತನೆ ಕೆಲಸ ಮುಗಿದು, ರೈತಾಪಿ ವರ್ಗ ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಈ ವರ್ಷ ಕೊರೊನಾ ಸೋಂಕು 2ನೇ ಅಲೆ ಹಾವಳಿಯಿಂದಾಗಿ ಹಬ್ಬದ ಸಂಭ್ರಮ ಮಾಯವಾಗಿದೆ. ಆದರೂ ಹೊನ್ನಾಳಿ, ನ್ಯಾಮತಿ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದ ರೈತರು ಸಂಪ್ರದಾಯದಂತೆ […]

The post ಮಣ್ಣೆತ್ತಿನ ಅಮಾವಾಸ್ಯೆ :ಮಣ್ಣು,ಎತ್ತು,ರೈತನ ಅವಿನಾಭಾವ ಸಂಬoಧದ ಹಬ್ಬ! appeared first on Hai Sandur kannada fortnightly news paper.

]]>
ಮುಂಗಾರು ಹಂಗಾಮಿನ ಬಿತ್ತನೆಯ ಕೆಲಸ ಮುಗಿದ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆ ಭೂತಾಯಿ ಮಕ್ಕಳ ಹಬ್ಬವಾಗಿದೆ. ಸಂಪ್ರದಾಯಕ್ಕೆ ಸೀಮಿತವಾಗುತ್ತಿರುವ ಈ ಹಬ್ಬ ಸಕಾಲಿಕವಾಗಿ ಮಳೆಯಾಗದಿರುವುದಕ್ಕೆ ಕೊಂಚ ಕಳೆಗುಂದುತ್ತಿದೆ.

ಪುನರ್ವಸು ಮಳೆಯ ಹೊತ್ತಿಗೆ ಬಿತ್ತನೆ ಕೆಲಸ ಮುಗಿದು, ರೈತಾಪಿ ವರ್ಗ ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಈ ವರ್ಷ ಕೊರೊನಾ ಸೋಂಕು 2ನೇ ಅಲೆ ಹಾವಳಿಯಿಂದಾಗಿ ಹಬ್ಬದ ಸಂಭ್ರಮ ಮಾಯವಾಗಿದೆ. ಆದರೂ ಹೊನ್ನಾಳಿ, ನ್ಯಾಮತಿ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದ ರೈತರು ಸಂಪ್ರದಾಯದಂತೆ ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಆಚರಣೆಗೆ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸಂಬಂಧದ ಸಂಕೇತ:
ಈ ಹಬ್ಬ ರೈತ, ಮಣ್ಣು (ಭೂಮಿ) ಮತ್ತು ಎತ್ತುಗಳ ನಡುವೆ ಇರುವ ಅನನ್ಯ ಅವಿನಾಭಾವ ಸಂಬಂಧದ ಸಂಕೇತ. ಎತ್ತು, ಭೂಮಿ ಇಲ್ಲದೆ ರೈತನ ಬದುಕು ಇಲ್ಲ. ರೈತನಿಗೆ ಭೂಮಿ ಎಷ್ಟು ಮುಖ್ಯವೋ, ಎತ್ತುಗಳು ಸಹ ಅಷ್ಟೇ ಅವಶ್ಯ. ಹೀಗಾಗಿಯೇ ಎತ್ತುಗಳು ನಮ್ಮ ಮನೆಯ ಮುತ್ತುಗಳು ಎಂದು ರೈತರು ಅಭಿಮಾನದಿಂದ ಕರೆಯುವುದು ಉಂಟು. ವರ್ಷ ಪೂರ್ತಿ ರೈತನ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಿನ್ನೆಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಈ ಅಮವಾಸ್ಯೆಯ ದಿನ ಮಣ್ಣಿ ಎತ್ತುಗಳ ತಯಾರಿಸಿ ಪೂಜಿಸುವ ಪರಂಪರೆ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಹಿರಿಯ ಪುರೋಹಿತರಾದ ಕೋಟೆಮಲ್ಲೂರು ವಿರಕ್ತಮಠದ ಶಿವಲಿಂಗರಾಧ್ಯ ಶಾಸ್ತ್ರೀ.

ಅವಿನಾಭಾವ ಸಂಬಂಧ:
ಮಣ್ಣು ಮತ್ತು ಮಾನವನಿಗೆ ಅವಿನಾಭಾವ ಸಂಬಂಧ. ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡಾ ದೇವ ಸ್ವರೂಪಿ. ಎತ್ತುಗಳು ಜಮೀನಿನಲ್ಲಿ ರೈತನಿಗೆ ಹಗಲಿರುಳು ದುಡಿಯುವಲ್ಲಿ ನೆರವಾಗುತ್ತವೆ. ಮತ್ತೊಂದೆಡೆ ಭೂತಾಯಿ ರೈತನಿಗೆ ಅನ್ನ ನೀಡ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣುತ್ತಾರೆ. ಹೀಗಾಗಿ ರೈತರು ಎತ್ತು ಮತ್ತು ಮಣ್ಣನ್ನು ಪೂಜೆ ಮಾಡ್ತಾರೆ.

ಮಣ್ಣಿನ ಹಬ್ಬಕ್ಕೆ ಚಾಲನೆ:
ಹಬ್ಬಗಳಿಗೂ ಮತ್ತು ಮಣ್ಣಿಗೂ ಸಂಬಂಧವಿದೆ. ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನ ಎತ್ತು, ನಾಗರ ಪಂಚಮಿಗೆ ಮಣ್ಣಿನ ನಾಗರ ಹಾವು, ಗೌರಿ ಹುಣ್ಣಿಮೆಗೆ ಮಣ್ಣಿನ ಗೌರಿ. ಗಣೇಶ ಚತುರ್ಥಿಗೆ ಮಣ್ಣಿನ ಗಣೇಶ, ಜೋಕುಮಾರನ ಹಬ್ಬಕ್ಕೆ ಮಣ್ಣಿನ ಜೋಕುಮಾರ ಮಣ್ಣಿನ ಮೂರ್ತಿ ಮಾಡಿಸಿ ಭಕ್ತರು ಪೂಜೆ ಸಲ್ಲಿಸುವುದು ಹಳ್ಳಿಗಳಲ್ಲಿಈಗಲೂ ಚಾಲ್ತಿಯಲ್ಲಿದೆ.

ಗ್ರಾಮೀಣ ಭಾಗದಲ್ಲಿನ ರೈತರು ಇಂದಿಗೂ ಕೂಡಾ ಜಮೀನಿನಿಂದ ತಂದ ಮಣ್ಣಿನಲ್ಲಿಎತ್ತುಗಳನ್ನು ಮಾಡಿ ಪೂಜೆಸುತ್ತಾರೆ. ಅನೇಕ ಕುಂಬಾರರು ಈ ಸಮಯದಲ್ಲಿ ಮಣ್ಣಿನ ಎತ್ತುಗಳನ್ನು ಸಿದ್ಧ ಮಾಡಿ ಮಾರಾಟ ಮಾಡ್ತಾರೆ. ಅನೇಕರು ಮಣ್ಣಿನ ಸುಂದರ ಎತ್ತುಗಳನ್ನು ತಗೆದುಕೊಂಡು ಹೋಗಿ ಪೂಜೆ ಮಾಡುತ್ತಿದ್ದಾರೆ.

The post ಮಣ್ಣೆತ್ತಿನ ಅಮಾವಾಸ್ಯೆ :ಮಣ್ಣು,ಎತ್ತು,ರೈತನ ಅವಿನಾಭಾವ ಸಂಬoಧದ ಹಬ್ಬ! appeared first on Hai Sandur kannada fortnightly news paper.

]]>
https://haisandur.com/2021/07/09/mannettina-amavasye/feed/ 0
ಜಾನುವಾರು ಹತ್ಯೆ ನಿಶೇಧ ಕಾಯಿದೆಯನ್ನು ರೈತರು ಏಕೆ ವಿರೋಧಿಸಬೇಕು ? ರೈತ ಮುಖಂಡ ವೀರಸಂಗಯ್ಯ ಅವರ ತರ್ಕ. https://haisandur.com/2021/01/10/%e0%b2%9c%e0%b2%be%e0%b2%a8%e0%b3%81%e0%b2%b5%e0%b2%be%e0%b2%b0%e0%b3%81-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%a8%e0%b2%bf%e0%b2%b6%e0%b3%87%e0%b2%a7-%e0%b2%95%e0%b2%be%e0%b2%af/ https://haisandur.com/2021/01/10/%e0%b2%9c%e0%b2%be%e0%b2%a8%e0%b3%81%e0%b2%b5%e0%b2%be%e0%b2%b0%e0%b3%81-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%a8%e0%b2%bf%e0%b2%b6%e0%b3%87%e0%b2%a7-%e0%b2%95%e0%b2%be%e0%b2%af/#respond Sun, 10 Jan 2021 07:04:16 +0000 https://haisandur.com/?p=12896 ಮೊದಲನೆಯದಾಗಿ ಇದರಲ್ಲಿ ಕೆಲವು ವಿಷಯಗಳು ಅವೈಜ್ಞಾನಿಕವಾಗಿವೆ. ಕೃಷಿ ಜೊತೆಗೆ ಜಾನುವಾರು ಸಾಕಾಣೆ ಕೂಡಾ ಒಂದು. ರಾಜ್ಯದ ೨೭,೫೦೦ ಗ್ರಾಮಗಳಲ್ಲಿ ಜಾನುವಾರು ಇಲ್ಲದ ಗ್ರಾಮ ಇಲ್ಲವೇ ಇಲ್ಲ. ಇದೊಂದು ಉಪಕಸುಬು. ರೈತರ ಮನೆಗಳಲ್ಲಿ ಆಕಳು ಎಮ್ಮೆ ಎತ್ತು ಸಾಕಾಣೆ ಸಾಮಾನ್ಯ. ಕೃಷಿಯಲ್ಲಿ ಟ್ರಾಕ್ಟರ್ ಬಳಕೆ ಹೆಚ್ಚಾದಾಗಿನಿಂದ ರಂಟೆ ಕುಂಟೆ ಹೊಡೆಯಲು ಎತ್ತುಗಳ ಬಳಕೆ ಕಡಿಮೆ ಆಗಿದೆ. ಹಾಗಾಗಿ ಮನೆಯಲ್ಲಿ ಗಂಡು ಕರ ಜನಿಸಿದರೆ ಅವುಗಳ ಬಗ್ಗೆ ರೈತರಿಗೆ ಸಹಜವಾಗಿ ನಿರ್ಲಕ್ಷ್ಯ ಬಂದಿದೆ. ಹೆಣ್ಣು ಕರು ಹಾಕಿದರೆ ಮುಂದೆ ಹಾಲು […]

The post ಜಾನುವಾರು ಹತ್ಯೆ ನಿಶೇಧ ಕಾಯಿದೆಯನ್ನು ರೈತರು ಏಕೆ ವಿರೋಧಿಸಬೇಕು ? ರೈತ ಮುಖಂಡ ವೀರಸಂಗಯ್ಯ ಅವರ ತರ್ಕ. appeared first on Hai Sandur kannada fortnightly news paper.

]]>
ಮೊದಲನೆಯದಾಗಿ ಇದರಲ್ಲಿ ಕೆಲವು ವಿಷಯಗಳು ಅವೈಜ್ಞಾನಿಕವಾಗಿವೆ. ಕೃಷಿ ಜೊತೆಗೆ ಜಾನುವಾರು ಸಾಕಾಣೆ ಕೂಡಾ ಒಂದು. ರಾಜ್ಯದ ೨೭,೫೦೦ ಗ್ರಾಮಗಳಲ್ಲಿ ಜಾನುವಾರು ಇಲ್ಲದ ಗ್ರಾಮ ಇಲ್ಲವೇ ಇಲ್ಲ. ಇದೊಂದು ಉಪಕಸುಬು. ರೈತರ ಮನೆಗಳಲ್ಲಿ ಆಕಳು ಎಮ್ಮೆ ಎತ್ತು ಸಾಕಾಣೆ ಸಾಮಾನ್ಯ.

ಕೃಷಿಯಲ್ಲಿ ಟ್ರಾಕ್ಟರ್ ಬಳಕೆ ಹೆಚ್ಚಾದಾಗಿನಿಂದ ರಂಟೆ ಕುಂಟೆ ಹೊಡೆಯಲು ಎತ್ತುಗಳ ಬಳಕೆ ಕಡಿಮೆ ಆಗಿದೆ. ಹಾಗಾಗಿ ಮನೆಯಲ್ಲಿ ಗಂಡು ಕರ ಜನಿಸಿದರೆ ಅವುಗಳ ಬಗ್ಗೆ ರೈತರಿಗೆ ಸಹಜವಾಗಿ ನಿರ್ಲಕ್ಷ್ಯ ಬಂದಿದೆ. ಹೆಣ್ಣು ಕರು ಹಾಕಿದರೆ ಮುಂದೆ ಹಾಲು ಉತ್ಪಾದನೆ ಆಗುತ್ತೆ ಎಂದು ಎಲ್ಲರೂ ಕಾಳಜಿವಹಿಸುತ್ತಾರೆ.

ಗಂಡು ಕರುಗಳನ್ನು ಅಥವಾ ಕೋಣಗಳನ್ನು ನಾವು ರೈತರು ಮಾರ್ತಿದ್ವಿ. ಅಲ್ಲಿಂದ ಅವು ಸಹಜವಾಗಿ ಮಾಂಸೋಧ್ಯಮಕ್ಕೆ ಹೋಗ್ತಿದ್ವು. ಈಗ ಹೊಸ ಕಾನೂನಿನ ಪ್ರಕಾರ ೧೩ ವರ್ಷಗಳ ಕಾಲ ಸಾಕಾಣೆ ಮಾಡುವುದು ಕಡ್ಡಾಯ. ಇದರಿಂದ ಉತ್ಪಾದನೆ ಏನೂ ಇಲ್ಲವೆಂದ ಮೇಲೆ ರೈತರಿಗೆ ಆರ್ಥಿಕ ಹೊರೆಯಾಗಲ್ಲವೇ?

ಗಂಡು ಕರುಗಳನ್ನು ಮಾರಿ ಬರುತ್ತಿದ್ದ ನಾಲಕ್ಕು ಕಾಸಿಗೂ ಈ ಕಾನೂನು ಕುತ್ತು ತಂದಿದೆ. ಜೊತೆಗೆ ೧೩ ವರ್ಷಗಳ ಕಾಲ ಸಾಕಾಣೆ ಮಾಡುವ ಹೊರೆಯೂ ರೈತನ ಮೇಲೆ ಬಿದ್ದಂತಾಯ್ತು. ಇನ್ನು ಗೋಶಾಲೆಗಳಿಗೆ ಕಳಿಸೋಕೆ ಗೋಶಾಲೆಗಳೇ ಇಲ್ಲ.
ಇದೀಗ ಇವರದ್ದೇ ಕಾನೂನಿನ ಪ್ರಕಾರ ೧೩ ವರ್ಷ ದಾಟಿದ ರಾಸುಗಳು ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿವೆ. ಈಗ ಅವುಗಳನ್ನು ಏನು ಮಾಡಬೇಕೆಂಬ ಪ್ರಸ್ತಾವ ಈ ಕಾಯಿದೆಯಲ್ಲಿಲ್ಲ.

ರೈತರ ಮನೆಗಳಲ್ಲಿ ಆಕಳು ಗೊಡ್ಡ ಬಿದ್ದಗ್ಲೂ ಮಾರಾಟ ಮಾಡುವುದು ರೂಢಿ. ಅವುಗಳನ್ನು ಮಾರಿದ ನಂತರ ಹಾಲು ಕೊಡುವ ಅಥವಾ ಗಬ್ಬ ಆಗಿರುವ ರಾಸುಗಳನ್ನು ಕೊಳ್ಳುತ್ತೇವೆ. ಈಗಿನ ಕಾನೂನಿನ ಪ್ರಕಾರ ಮಾರುವವ ಮತ್ತು ಕೊಳ್ಳುವವ ಪಶುಸಂಗೋಪನೆ ಇಲಾಖೆಯ ಅನುಮತಿ ಪಡೆಯಬೇಕು. ಆ ಕೆಲಸ ಮಾಡಲು ರೈತರು ಊರಿಂದೂರಿಗೆ ಅಲೆಯಬೇಕಾಗುತ್ತೆ. ಇದು ಪ್ರಾಕ್ಟಿಕಲ್ ಪ್ರಾಬ್ಲಮ್ ಅಲ್ಲವೇ? ಎಂದು ಪ್ರಶ್ನಿಸುತ್ತಾರೆ ಜಿ.ಎಂ.ವೀರಸಂಗಯ್ಯ.

ರೈತರ ಆರ್ಥಿಕ ಸ್ಥಿತಿ ಮೊದಲೇ ಕುಸಿದು ಬಿದ್ದಿರುವಾಗ ಈ ಕಾನೂನು ರೈತರನ್ನು ಇನ್ನಷ್ಟು ಸಮಸ್ಯೆಗಳಿಗೆ ದೂಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಕರ್ನಾಟಕದಲ್ಲಿ ೮,೨೦,೦೦೦ ರೈತರು ಹಾಲು ಉತ್ಪಾದಕರ ಸಂಘಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಒಟ್ಟು ೧೪ ಕೇಂದ್ರಗಳ ಮೂಲಕ ಪ್ರತಿ ದಿನ ೭೯ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗ್ತಿದೆ. ಕೆ.ಎಂ.ಎಫ್ ನ ಒಂದು ವರ್ಷದ ವಹಿವಾಟು ೨೦ ಸಾವಿರ ಕೋಟಿ ರೂಗಳಿದೆ. ಇಷ್ಟೆಲ್ಲಾ ವಹಿವಾಟು ನಡೆಯುತ್ತಿರುವುದು ಸಣ್ಣ ರೈತರಿಂದಲೇ ಎಂಬುದು ತಿಳಿಯಬೇಕಿದೆ. ಈಗ ಇಷ್ಟೂ ರೈತ ಕುಟುಂಬಗಳ ಮೇಲೆ ಅನುತ್ಪಾದಕವಾದ ರಾಸುಗಳನ್ನು ಸಾಕುವ ಹೊರೆ ಬೀಳುತ್ತದೆ.
ಈ ಕಾನೂನಿನಲ್ಲಿ ೧೩ ವರ್ಷ ಮೇಲ್ಪಟ್ಟ ಹಸುಗಳನ್ನು ಏನು ಮಾಡಬೇಕೆಂಬ ಸ್ಪಷ್ಟ ಸೂಚನೆ ಇಲ್ಲ. ಗೋಶಾಲೆ ಕೊಡಿ ಎನ್ನುತ್ತೀರಿ. ಎಲ್ಲಿವೆ ಗೋಶಾಲೆ. ? ಗೋಶಾಲೆಗೆ ಕೊಡುವುದಾದರೆ ಉಚಿತವಾಗಿ ಕೊಡಬೇಕೆ? ಮುದಿ ದನವಾದರೂ ಅದು ಅರ್ಧ ಬೆಲೆಗಾದರೂ ಮಾರಾಟವಾಗುತ್ತವೆ. ಆ ಹಣ ನಮಗೆ ಕೊಡುವವರಾರು? ಸರ್ಕಾರ ಆ ಬಗ್ಗೆ ಚಿಂತನೆ ನಡೆಸಿದೆಯೇ?

ಹಸು, ರಾಸು, ಆಕಳು, ಗೋವು ನಿಮಗೆ ಆಪ್ಯಾಯಮಾನವಾದ ಯಾವುದೇ ಹೆಸರಿನಿಂದ ಭಾವನಾತ್ಮಕವಾಗಿ ಸಂಬೋಧಿಸಿ, ಅವುಗಳನ್ನು ಪೂಜಿಸಿ ನಿಮಗೆ ಬೇಕಾದ್ದು ಮಾಡಿ. ಭಾವನೆಗಳೊಂದಿಗೆ ಆಟವಾಡಬೇಡಿ. ರೈತ ಸಮುದಾಯವನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ತಂದೊಡ್ಡುವ ಈ ಕಾನೂನನ್ನು ಹಿಂಪಡೆಯಿರಿ. ಮರುಪರಿಶೀಲಿಸಿ. ಇಲ್ಲವೇ ಮುಂಬರುವ ದಿನಗಳಲ್ಲಿ ಜಾನುವಾರು ಸಾಕಾಣೆ ಮಾಡುವವರ ಹೋರಾಟವೂ ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಕಾಯಿದೆಯನ್ನು ಪುನರ್ ಪರಿಶೀಲಿಸಿ. ನ್ಯಾಯಸಮ್ಮತವಾದ ಕಾನೂನು ರಚಿಸಿ.

The post ಜಾನುವಾರು ಹತ್ಯೆ ನಿಶೇಧ ಕಾಯಿದೆಯನ್ನು ರೈತರು ಏಕೆ ವಿರೋಧಿಸಬೇಕು ? ರೈತ ಮುಖಂಡ ವೀರಸಂಗಯ್ಯ ಅವರ ತರ್ಕ. appeared first on Hai Sandur kannada fortnightly news paper.

]]>
https://haisandur.com/2021/01/10/%e0%b2%9c%e0%b2%be%e0%b2%a8%e0%b3%81%e0%b2%b5%e0%b2%be%e0%b2%b0%e0%b3%81-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%a8%e0%b2%bf%e0%b2%b6%e0%b3%87%e0%b2%a7-%e0%b2%95%e0%b2%be%e0%b2%af/feed/ 0
ಇದು ಬದುಕು ಕಟ್ಟಿಕೊಂಡವರ ಯಶೋಗಾಥೆ..!! “ಶಶಿಕುಮಾರ್ ಎಂಬ ಸ್ವಾವಲಂಬಿ ಯುವಕನ ಬದುಕು ನಿಮಗೆ ಪ್ರೇರಣೆಯಾಗಲಿ “ https://haisandur.com/2020/08/10/%e0%b2%87%e0%b2%a6%e0%b3%81-%e0%b2%ac%e0%b2%a6%e0%b3%81%e0%b2%95%e0%b3%81-%e0%b2%95%e0%b2%9f%e0%b3%8d%e0%b2%9f%e0%b2%bf%e0%b2%95%e0%b3%8a%e0%b2%82%e0%b2%a1%e0%b2%b5%e0%b2%b0-%e0%b2%af%e0%b2%b6/ https://haisandur.com/2020/08/10/%e0%b2%87%e0%b2%a6%e0%b3%81-%e0%b2%ac%e0%b2%a6%e0%b3%81%e0%b2%95%e0%b3%81-%e0%b2%95%e0%b2%9f%e0%b3%8d%e0%b2%9f%e0%b2%bf%e0%b2%95%e0%b3%8a%e0%b2%82%e0%b2%a1%e0%b2%b5%e0%b2%b0-%e0%b2%af%e0%b2%b6/#respond Mon, 10 Aug 2020 12:49:39 +0000 https://haisandur.com/?p=8484 ಈ ಸ್ಟೋರಿ ತಪ್ಪದೆ ಓದಿ… ಆತ ಶಶಿಕುಮಾರ್ , ಬಿಎಸ್ಸಿ ಬಯೋಟೆಕ್ನಾಲಜಿ ಪದವಿದರ , ತಂದೆ ಪೊಲೀಸ್ ಇಲಾಖೆಯ ಅಧಿಕಾರಿಯಾಗಿದ್ದವರು . ಎಲ್ಲರಿಗೂ ಆಸೆಗಳಿರುವಂತೆ ಈತನಿಗೂ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಜೀವನ ಕಟ್ಟಿಕೊಳ್ಳಬೇಕೆಂಬ ಕನಸು. ಕನಸಿನ ಬೆನ್ನುಹತ್ತಿದ ಶಶಿಕುಮಾರ್ ಬಿಎಸ್ಸಿಯಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದ . ಅಬ್ದುಲ್ ಕಲಾಂ ಹೇಳಿದ್ದರಲ್ಲ ಕಾಣುವುದಾದರೆ ದೊಡ್ಡ ಕನಸುಗಳನ್ನೇ ಕಾಣು ಅಂತಾ. ಹಾಗಾಗಿ ತಾನು ಐಎಎಸ್ ಆಗಬೇಕು ಅಂತಾ ಕನಸಿನ ಬೆನ್ನುಬಿದ್ದ . ಒಮ್ಮೆ ಯುಪಿಎಸ್ಸಿ ಪರೀಕ್ಷೆಯ ಪ್ರಿಲಿಮ್ಸ್ ಬರೆದು ಯಾಕೋ […]

The post ಇದು ಬದುಕು ಕಟ್ಟಿಕೊಂಡವರ ಯಶೋಗಾಥೆ..!! “ಶಶಿಕುಮಾರ್ ಎಂಬ ಸ್ವಾವಲಂಬಿ ಯುವಕನ ಬದುಕು ನಿಮಗೆ ಪ್ರೇರಣೆಯಾಗಲಿ “ appeared first on Hai Sandur kannada fortnightly news paper.

]]>
ಈ ಸ್ಟೋರಿ ತಪ್ಪದೆ ಓದಿ…

ಆತ ಶಶಿಕುಮಾರ್ , ಬಿಎಸ್ಸಿ ಬಯೋಟೆಕ್ನಾಲಜಿ ಪದವಿದರ , ತಂದೆ ಪೊಲೀಸ್ ಇಲಾಖೆಯ ಅಧಿಕಾರಿಯಾಗಿದ್ದವರು . ಎಲ್ಲರಿಗೂ ಆಸೆಗಳಿರುವಂತೆ ಈತನಿಗೂ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಜೀವನ ಕಟ್ಟಿಕೊಳ್ಳಬೇಕೆಂಬ ಕನಸು. ಕನಸಿನ ಬೆನ್ನುಹತ್ತಿದ ಶಶಿಕುಮಾರ್ ಬಿಎಸ್ಸಿಯಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದ . ಅಬ್ದುಲ್ ಕಲಾಂ ಹೇಳಿದ್ದರಲ್ಲ ಕಾಣುವುದಾದರೆ ದೊಡ್ಡ ಕನಸುಗಳನ್ನೇ ಕಾಣು ಅಂತಾ. ಹಾಗಾಗಿ ತಾನು ಐಎಎಸ್ ಆಗಬೇಕು ಅಂತಾ ಕನಸಿನ ಬೆನ್ನುಬಿದ್ದ . ಒಮ್ಮೆ ಯುಪಿಎಸ್ಸಿ ಪರೀಕ್ಷೆಯ ಪ್ರಿಲಿಮ್ಸ್ ಬರೆದು ಯಾಕೋ ಇದು ಬೇಡ ಅನ್ನಿಸಿತು. ಆದರೇನಂತೆ ಕರ್ನಾಟಕ ಸರ್ಕಾರದಲ್ಲಿ ಸಾಕಷ್ಟು ಅವಕಾಶಗಳಿವೆಯಲ್ಲ. ಅದಕ್ಕಾಗಿ ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರೆ ತಹಸಿಲ್ದಾರ್ ಗ್ರೇಡ್ ನ ಹುದ್ದೆಗಳನ್ನಾದರೂ ಅಲಂಕರಿಸಬಹುದಲ್ವಾ.. ಆ ಪ್ರಯತ್ನವೂ ಜಾರಿಯಲ್ಲಿಟ್ಟು ಶ್ರಮಪಟ್ಟು ಓದಿದ್ದು ಆಯ್ತು . ನಾಲ್ಕೈದು ವರ್ಷಕ್ಕೊಮ್ಮೆ ಕೆಪಿಎಸ್ಸಿ ಪರೀಕ್ಷೆ . ಅರ್ಜಿ ಆಹ್ವಾನಿಸುವುದು ಒಮ್ಮೆ ಮತ್ತೆ ಯಾವಾಗಲೋ ಪರೀಕ್ಷೆ , ಅದಾದ ನಂತರ ಮತ್ರಿನ್ಯಾವಗಲೋ ಮುಖ್ಯ ಪರೀಕ್ಷೆ . ಆಯಾ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ನಿರ್ಧರಿಸಿದಾಗಲೇ ಸಂದರ್ಶನ , ಹುದ್ದೆಗಳ ಭರ್ತಿ ಇತ್ಯಾದಿ.. ಊಹೂಂ ..ಇದೂ ನಮಗೊಗ್ಗದ ವಿಷಯ ಅಂದುಕೊಂಡ.

ಬೇಸರ ತರಿಸಿತ್ತು ಹೋರಾಟ..

ಈ ಮಧ್ಯೆ ಶಶಿಕುಮಾರ್ ಗೆ ಇದೆಲ್ಲ ಬೇಸರ ತರಿಸಿತ್ತು. ಗೆಲುವು ಅಂದ್ರೆ ಕನಸಿನ ಬೆನ್ನು ಹತ್ತಿ ಸಾಕಾರಗೊಳಿಸಿಕೊಳ್ಳಲು ಹೋರಾಡುವುದು. ಹೋರಾಟ ಮಾಡಿಯಾಗಿತ್ತು. ಸರ್ಕಾರಿ ವಲಯದಲ್ಲಿ ಬದುಕು ಕಟ್ಟಿಕೊಳ್ಳಲು ನಡೆಸಿದ ಶ್ರಮಗಳು ಅಂದುಕೊಂಡಂತೆ ಯಶ ದೊರಕಿಸಿಕೊಡಲಿಲ್ಲ. ಪಡೆದ ಡಿಗ್ರಿಯನ್ನ ಹಿಡಿದು ಎಲ್ಲಾದರೂ ಕೆಲಸ ಹಿಡಿಯೋಣ ಅಂದ್ರೆ ಸ್ನೇಹಿತರ ಕಿವಿಮಾತು ಕಿವಿಯಲ್ಲೇ ಗುಯ್ ಗುಡುತ್ತಿತ್ತು. ಇಲ್ಲಿ ಒತ್ತಡ ಜಾಸ್ತಿ , ಸಂಬಳ ಕಡಿಮೆ ಸ್ವತಃ ಏನಾದ್ರೂ ವ್ಯವಹಾರ ಮಾಡು ಎಂಬ ಮಾತುಗಳು ಪದೇ ಪದೇ ಕಿವಿಯಲ್ಲೇ ಓಡಾಡಿದಂತೆ ಭಾಸವಾಗುತ್ತಿತ್ತು. ಎಷ್ಟು ಪ್ರಯತ್ನ ಮಾಡಿದ್ರೂ ಇಷ್ಟೇ ಬಿಡು ಬದುಕು. ಮುಂದೇನು ಮಾಡುವುದು ಎಂದು ಯೋಚಿಸುತ್ತಾ ಕುಳಿತಿರುವಾಗಲೇ ಮನಸು ವಾಲಿದ್ದು ಹೈನುಗಾರಿಕೆಯ ಕಡೆಗೆ.

ಹೈನುಗಾರಿಕೆಯಲ್ಲಿ ಅಂಬೆಗಾಲು ..

ತಂದೆ ಕೊಂಡಿದ್ದ ಜಮೀನಿತ್ತು. ಮನೆಯಲ್ಲೊಂದಷ್ಟು ಹಸುಗಳಿದ್ದವು. ಆದರೆ ಇದನ್ನೇ ಉದ್ಯಮವಾಗಿ ನಡೆಸಬಲ್ಲೆನಾ ಎಂಬ ಅನುಮಾನಗಳು. ಈಗೀಗ ರೈತರು ಏನೆಲ್ಲಾ ಪ್ರಯೋಗ ಮಾಡಿದರೂ ಕೊನೆಗೆ ತಮ್ಮ ಯಾವುದೇ ಉತ್ಪಾದನೆಯಲ್ಲಿ ಬೆಲೆ ಇಲ್ಲದೆ‌ ಸೋಲುತ್ತಾರೆ. ಆದರೇನಂತೆ ಮನಸಿದ್ದರೆ ಮಾರ್ಗ ಅಂತಾ ಗಟ್ಟಿ ಮನಸು ಮಾಡಿ ತಂದೆ ಮಾಡಿದ್ದ ಫಾರ್ಮ್ ನಲ್ಲಿ ತಮ್ಮ ಭವಿಷ್ಯ ಹುಡುಕಲು ಆರಂಭಿಸಿಯೇ ಬಿಟ್ಟರು. ಮೇವು ಕತ್ತರಿಸುವುದು, ಹಾಲು ಕರೆಯುವುದು, ಸಗಣಿ ಬಾಚುವುದು ಇದೆಲ್ಲವೂ ಕೂಡಾ ಆರಂಭದಲ್ಲಿ ಸವಾಲಿನ ಕೆಲಸಗಳೇ ..!!

ಮುಂದಿಟ್ಟ ಹೆಜ್ಜೆ ಹಿಂದಿಡುವಂತಿಲ್ಲ. ಇದೇ ಬದುಕು ಅಂತಾ ನಿರ್ಧರಿಸಿಯಾಗಿದೆ. ಇನ್ನು ಹಿಂದೆ ಸರಿಯುವ ಮಾತೇ ಇಲ್ಲ. ಈ ಮಧ್ಯೆ ಸಾಕಷ್ಟು ಸಮಸ್ಯೆಗಳು ಶಶಿಕುಮಾರ್ ಅವರನ್ನ ಕಾಡುತ್ತವೆ. ಅಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ದಣಿವಾರಿಸಿಕೊಳ್ಳುವಂತಿಲ್ಲ. ಹಾಲಿನ ಇಳುವರಿಯೂ ಅಂದು ಕೊಂಡಂತೆ ಸಿಗುತ್ತಿಲ್ಲ. ಸರ್ಕಾರಿ , ಖಾಸಗಿ ಯಾವುದೇ ಡೈರಿಗೆ ಹಾಲು ಕೊಟ್ಟರೂ ನಿರೀಕ್ಷಿತ ಬೆಲೆಯೂ ಇಲ್ಲ. ಹೀಗಾದರೆ ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದಷ್ಟೇ ಬಾಕಿ ಇತ್ತು..

ಶಶಿಕುಮಾರ್ ಗೆ ಎನರ್ಜಿ ಕೊಟ್ಟಿದ್ದು ಅಕ್ಷಯಕಲ್ಪ..

ತೀರ ತಳಹಂತದಿಂದ ಶ್ರಮವಹಿಸಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಬೇಕು. This is my final Destination ಅಂತಾ ನಿರ್ಧರಿಸಿದ್ದ ಶಶಿಕುಮಾರ್ ಗೆ ಸರಿಯಾದ ವೇದಿಕೆ ದೊರಕಿರಲಿಲ್ಲ. ಅಷ್ಟೋ ಇಷ್ಟು ವಿದ್ಯಾಭ್ಯಾಸ ಮಾಡಿಕೊಂಡು ಹೈನೋದ್ಯಮದ ಕನಸು ಹೊತ್ತು ಬಂದಿದ್ದು ಇವರಿಗೆ ಸೂಕ್ತ ಬೆಲೆ , ನಿರ್ವಹಣೆಯ ತಂತ್ರಗಳು , ಹಾಲಿನ ಇಳುವರಿ, ಹಸುಗಳ ವೈಜ್ಞಾನಿಕ ಸಾಕಾಣಿಕೆ ಇತ್ಯಾದಿಗಳ ಕುರಿತು ಸೂಕ್ತ ಮಾರ್ಗದರ್ಶನದ ಕೊರತೆ ಇತ್ತು. ಈ ಹಂತದಲ್ಲಿ ಶಕ್ತಿ ನೀಡಿ ಮುನ್ನಡೆಸಿದ್ದೇ ಅಕ್ಷಯಕಲ್ಪ ಎಂಬ ರೈತರ ಪಾಲಿನ ಎನರ್ಜಿ ಬೂಸ್ಟರ್ …

ಅಕ್ಷಯ ಕಲ್ಪನೆಂಬ ರೈತರ ಪಾಲಿನ ಸೇವಕ , ಮಾರ್ಗದರ್ಶಕ..

ಒಂದಲ್ಲಾ ಒಂದು ಕನಸುಗಳ ಬೆನ್ನು ಬಿದ್ದು ಅಂತಿಮವಾಗಿ ಹೈನುಗಾರಿಕೆಯಲ್ಲಿ ಜೀವನ ಕಂಡುಕೊಳ್ಳುವ ಉದ್ದೇಶದಿಂದ ಹಸುಗಳ ನಿರ್ವಹಣೆಯಲ್ಲಿ ತೊಡಗಿಕೊಂಡ ಶಶಿಕುಮಾರ್ ಗೆ ಸಾಕಷ್ಟು ಅಡೆತಡೆ , ಗೊಂದಲಗಳು ಅಲ್ಲೊಬ್ಬ ಇಲ್ಲೊಬ್ಬ ಸಂಬಂಧಿಕರು ಸ್ನೇಹಿತರ ಹೀಯಾಳಿಕೆಗಳು ಅಧೀರರನ್ನಾಗಿಸಿಬಿಟ್ಟಿದ್ದವು. ಈ ಮಧ್ಯೆ ಅಕ್ಷಯ ಕಲ್ಪ ಆರ್ಗ್ಯಾನಿಕ್ ಮಿಲ್ಕ್ ನ ಪ್ರತಿನಿಧಿಗಳು ಶಶಿಕುಮಾರ್ ಅವರನ್ನ ಸಂಪರ್ಕಿಸುತ್ತಾರೆ. ಅಲ್ಲಿಂದ ನಡೆದದ್ದೆಲ್ಲಾ ಪವಾಡ.. ಸಂಸ್ಥೆಯ ಪ್ರತಿನಿಧಿಗಳು ಹಸುಗಳ ಬಾಡಿ ಸ್ಕೋರ್ ನೋಡುವುದರಿಂದ ಆರಂಭಿಸಿ , ಉತ್ಪಾದನೆ , ಉತ್ಪಾದನೆ ವೆಚ್ಚ, ಹಾಲಿನ ಗುಣಮಟ್ಟ, ಇಳುವರಿ ಹೆಚ್ಚಿಸಲು ಇರುವ ಕ್ರಮಗಳು , ಕರು ಸಾಕಾಣಿಕೆ , ಕಡಿಮೆ ಅವಧಿಯಲ್ಲಿ ಪಡ್ಡೆಗಳ ಗರ್ಭ ಧರಿಸುವಿಕೆ. ಕೆಲಸದ ಶ್ರಮವನ್ನ ತಗ್ಗಿಸುವ ತಂತ್ರಗಳು , ಮೇವಿನ ಪ್ರಾಮುಖ್ಯತೆ , ನಿರಂತರ ಮೇವು ಮತ್ತು ನೀರು ಒದಗಿಸುವಿಕೆಯಿಂದಾಗುವ ಪ್ರಯೋಜನಗಳು. ಒಬ್ಬ ವ್ಯಕ್ತಿಯ ನಿರ್ವಹಣೆಯಲ್ಲೇ ಎಷ್ಟೊಂದು ಹಸು ಸಾಕಲು ಇರುವ ಕ್ರಮಗಳು ಅಲ್ಲದೆ ತಮ್ಮ ಸಂಸ್ಥೆಯಲ್ಲಿ ಕೈ ಗೊಳ್ಳುವ ಅಷ್ಟೂ ಆಧುನಿಕ ವಿಧಾನಗಳನ್ನ ರೈತರಿಗೆ ಮನವರಿಕೆ ಮಾಡಿ ಅವುಗಳನ್ನ ಪ್ರಾಯೋಗಿಕವಾಗಿ ರೈತರ ಹಸುಗಳ ಮೇಲೆ ಪ್ರಯೋಗಿಸಿ ಉತ್ತಮ ಇಳುವರಿಗೆ ಉತ್ತೇಜಿಸುವುದು. ಸಮಯ ಬಂದಾಗ ಪ್ರತಿನಿಧಿಗಳೇ ಮುಂದೆ ನಿಂತು ಮಾರ್ಗದರ್ಶನ ಮಾತ್ರವಲ್ಲದೆ ಸೇವೆಯನ್ನೂ ನೀಡುವ ಮೂಲಕ ರೈತರ ಸಬಲೀಕರಣಕ್ಕೆ ಪ್ರಯತ್ನಿಸುತ್ತಾರೆ.

ಅಕ್ಷಯ ಕಲ್ಪ ನಿರ್ವಹಿಸುವ ಮೇಲಿನ‌ ಎಲ್ಲಾ ಮಾರ್ಗದರ್ಶನ , ಪ್ರಯೋಗ, ಸೇವೆಗಳು ಅವರಿಗೆ ದೊರೆತಿದೆ. ಬೇರೆಲ್ಲಾ ಡೈರಿಗಳಿಗಿಂತ ಒಳ್ಳೆಯ ಬೆಲೆ ಸಿಗ್ತಿದೆ.‌ಹಸುಗಳ‌ ಆರೋಗ್ಯವೂ ಸುಧಾರಿಸಿದೆ. ಜೊತೆಗೆ ಆದಾಯವೂ ಹೆಚ್ಚಿದೆ. ಇಂದು ತಿಂಗಳಿಗೆ ಸಾವಿರಾರು ರೂಪಾಯಿಗಳ ಆದಾಯವನ್ನ ಗಳಿಸಿಕೊಂಡು ಆರಾಮವಾಗಿ ಜೀವನ ನಡೆಸುತ್ತಿದ್ದಾರೆ ಶಶಿಕುಮಾರ್. ಈಗೀಗ ಯಾವ ಸರ್ಕಾರಿ ನೌಕರಿಯೂ ಬೇಡ. ಯಾವ ಖಾಸಗಿ ವಲಯದ ಒತ್ತಡವೂ ಬೇಡ ಅನ್ನುತ್ತಿದ್ದಾರೆ ಶಶಿಕುಮಾರ್..

ಶಶಿಕುಮಾರ್ ಈಗ ಬಿಎಂಸಿ‌ ಮಾಲಿಕ..

ಒಂದೆಡೆ ಅಕ್ಷಯಕಲ್ಪ ಸಂಸ್ಥೆಯ ಮಾರ್ಗದರ್ಶನ. ಆಗಿಂದಾಗ್ಗೆ ವಿಸ್ತರಣಾಧಿಕಾರಿಗಳ ಭೇಟಿ ಪ್ರೋತ್ಸಾಹ. ಉತ್ಪಾದಿಸುವ ಉತ್ಕೃಷ್ಟ ಗುಣಮಟ್ಟದ ಹಾಲಿಗೆ ಉತ್ತಮ ಬೆಲೆ. ಫಾರ್ಮ್ ನಲ್ಲಿ‌ಸಂಸ್ಥೆ ಸೂಚಿಸುವಂತೆ , ಹಸುಗಳ ಇಳುವರಿ ಹೆಚ್ಚಿಸು , ಶುದ್ಧತೆ , ಆಹಾರ ಕ್ರಮ ಪ್ರತಿಯೊಂದು ಕ್ರಮಗಳಿಗೂ ಪ್ರೇತ್ಯೇಕ ಪ್ರೋತ್ಸಾಹ ಧನ. ಬಿಎಸ್ಸಿ ಬಯೋ ಟೆಕ್ನಾಲಜಿ ಮುಗಿಸಿ ಹೊಸ ಪ್ರಯೋಗಗಳಿಗೆ ತನ್ನನ್ನ ತಾನು ತೊಡಗಿಸಿಕೊಳ್ಳಲು ಗುರುವಾಗಿ ಬಂತು ಅಕ್ಷಯಕಲ್ಪ. ಅಂದಹಾಗೆ ಶಶಿಕುಮಾರ್ ಅವರಿಗೆ ಅದಾಗಲೇ ಆತ್ಮವಿಶ್ವಾಸ ವೃದ್ಧಿಸಿದೆ. ತನ್ನಂತೆ ಈ ಹೈನೋಧ್ಯಮದತ್ತ ಆಕರ್ಷಿತರಾದ ಪ್ರತಿಯೊಬ್ಬರಿಗೂ ತಾನು ನಡೆದು ಬಂದ ಹೆಜ್ಜೆಗಳ ಬಗ್ಗೆ . ಅಕ್ಷಯ ಕಲ್ಪ‌ಸಂಸ್ಥೆಯ ಬೆಂಬಲದ ಬಗ್ಗೆ ಮುಕ್ತ ಮನಸಿನಿಂದ ಹೇಳಿಕೊಳ್ಳುತ್ತಾರೆ. ಸುತ್ತ ಮುತ್ತ ಇರುವ ರೈತರಿಗೂ ಸಹಕಾರಿಯಾಗಲಿ‌ ಎಂಬ ಉದ್ದೇಶದಿಂದ ಶಶಿಕುಮಾರ್ ಈಗ ಬಿಎಂಸಿ ಪಾಯಿಂಟ್ ಮಾಡಿಕೊಂಡಿದ್ದಾರೆ. ಶೀಘ್ರವೇ ಅದು ಉದ್ಘಾಟನೆಗೆ ಕಾದು ಕುಳಿತಿದೆ.

ಶಶಿಕುಮಾರ್ ಅವರಿಗೆ ಶುಭ ಹಾರೈಸಲು ಈ ಸಂಖ್ಯೆಗೆ ಕರೆ ಮಾಡಿ..
9035288997

ಶಶಿ ಕುಮಾರ್ ತಂದೆ ಪೊಲೀಸ್ ಚಂದ್ರಣ್ಣ, ಗಾಯಿತ್ರಿಪುರ (ಪೋ) , ಜವನಗೊಂಡನಹಳ್ಳಿ (ಹೋಬಳಿ)
ಹಿರಿಯೂರು ( ತಾಲೂಕು). ಚಿತ್ರದುರ್ಗ( ಜಿಲ್ಲೆ)

.📋🖋ರಾಮು ಅರಕೇರಿ

The post ಇದು ಬದುಕು ಕಟ್ಟಿಕೊಂಡವರ ಯಶೋಗಾಥೆ..!! “ಶಶಿಕುಮಾರ್ ಎಂಬ ಸ್ವಾವಲಂಬಿ ಯುವಕನ ಬದುಕು ನಿಮಗೆ ಪ್ರೇರಣೆಯಾಗಲಿ “ appeared first on Hai Sandur kannada fortnightly news paper.

]]>
https://haisandur.com/2020/08/10/%e0%b2%87%e0%b2%a6%e0%b3%81-%e0%b2%ac%e0%b2%a6%e0%b3%81%e0%b2%95%e0%b3%81-%e0%b2%95%e0%b2%9f%e0%b3%8d%e0%b2%9f%e0%b2%bf%e0%b2%95%e0%b3%8a%e0%b2%82%e0%b2%a1%e0%b2%b5%e0%b2%b0-%e0%b2%af%e0%b2%b6/feed/ 0