ಇದು ಬದುಕು ಕಟ್ಟಿಕೊಂಡವರ ಯಶೋಗಾಥೆ..!! “ಶಶಿಕುಮಾರ್ ಎಂಬ ಸ್ವಾವಲಂಬಿ ಯುವಕನ ಬದುಕು ನಿಮಗೆ ಪ್ರೇರಣೆಯಾಗಲಿ “

0
179

ಈ ಸ್ಟೋರಿ ತಪ್ಪದೆ ಓದಿ…

ಆತ ಶಶಿಕುಮಾರ್ , ಬಿಎಸ್ಸಿ ಬಯೋಟೆಕ್ನಾಲಜಿ ಪದವಿದರ , ತಂದೆ ಪೊಲೀಸ್ ಇಲಾಖೆಯ ಅಧಿಕಾರಿಯಾಗಿದ್ದವರು . ಎಲ್ಲರಿಗೂ ಆಸೆಗಳಿರುವಂತೆ ಈತನಿಗೂ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಜೀವನ ಕಟ್ಟಿಕೊಳ್ಳಬೇಕೆಂಬ ಕನಸು. ಕನಸಿನ ಬೆನ್ನುಹತ್ತಿದ ಶಶಿಕುಮಾರ್ ಬಿಎಸ್ಸಿಯಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದ . ಅಬ್ದುಲ್ ಕಲಾಂ ಹೇಳಿದ್ದರಲ್ಲ ಕಾಣುವುದಾದರೆ ದೊಡ್ಡ ಕನಸುಗಳನ್ನೇ ಕಾಣು ಅಂತಾ. ಹಾಗಾಗಿ ತಾನು ಐಎಎಸ್ ಆಗಬೇಕು ಅಂತಾ ಕನಸಿನ ಬೆನ್ನುಬಿದ್ದ . ಒಮ್ಮೆ ಯುಪಿಎಸ್ಸಿ ಪರೀಕ್ಷೆಯ ಪ್ರಿಲಿಮ್ಸ್ ಬರೆದು ಯಾಕೋ ಇದು ಬೇಡ ಅನ್ನಿಸಿತು. ಆದರೇನಂತೆ ಕರ್ನಾಟಕ ಸರ್ಕಾರದಲ್ಲಿ ಸಾಕಷ್ಟು ಅವಕಾಶಗಳಿವೆಯಲ್ಲ. ಅದಕ್ಕಾಗಿ ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರೆ ತಹಸಿಲ್ದಾರ್ ಗ್ರೇಡ್ ನ ಹುದ್ದೆಗಳನ್ನಾದರೂ ಅಲಂಕರಿಸಬಹುದಲ್ವಾ.. ಆ ಪ್ರಯತ್ನವೂ ಜಾರಿಯಲ್ಲಿಟ್ಟು ಶ್ರಮಪಟ್ಟು ಓದಿದ್ದು ಆಯ್ತು . ನಾಲ್ಕೈದು ವರ್ಷಕ್ಕೊಮ್ಮೆ ಕೆಪಿಎಸ್ಸಿ ಪರೀಕ್ಷೆ . ಅರ್ಜಿ ಆಹ್ವಾನಿಸುವುದು ಒಮ್ಮೆ ಮತ್ತೆ ಯಾವಾಗಲೋ ಪರೀಕ್ಷೆ , ಅದಾದ ನಂತರ ಮತ್ರಿನ್ಯಾವಗಲೋ ಮುಖ್ಯ ಪರೀಕ್ಷೆ . ಆಯಾ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ನಿರ್ಧರಿಸಿದಾಗಲೇ ಸಂದರ್ಶನ , ಹುದ್ದೆಗಳ ಭರ್ತಿ ಇತ್ಯಾದಿ.. ಊಹೂಂ ..ಇದೂ ನಮಗೊಗ್ಗದ ವಿಷಯ ಅಂದುಕೊಂಡ.

ಬೇಸರ ತರಿಸಿತ್ತು ಹೋರಾಟ..

ಈ ಮಧ್ಯೆ ಶಶಿಕುಮಾರ್ ಗೆ ಇದೆಲ್ಲ ಬೇಸರ ತರಿಸಿತ್ತು. ಗೆಲುವು ಅಂದ್ರೆ ಕನಸಿನ ಬೆನ್ನು ಹತ್ತಿ ಸಾಕಾರಗೊಳಿಸಿಕೊಳ್ಳಲು ಹೋರಾಡುವುದು. ಹೋರಾಟ ಮಾಡಿಯಾಗಿತ್ತು. ಸರ್ಕಾರಿ ವಲಯದಲ್ಲಿ ಬದುಕು ಕಟ್ಟಿಕೊಳ್ಳಲು ನಡೆಸಿದ ಶ್ರಮಗಳು ಅಂದುಕೊಂಡಂತೆ ಯಶ ದೊರಕಿಸಿಕೊಡಲಿಲ್ಲ. ಪಡೆದ ಡಿಗ್ರಿಯನ್ನ ಹಿಡಿದು ಎಲ್ಲಾದರೂ ಕೆಲಸ ಹಿಡಿಯೋಣ ಅಂದ್ರೆ ಸ್ನೇಹಿತರ ಕಿವಿಮಾತು ಕಿವಿಯಲ್ಲೇ ಗುಯ್ ಗುಡುತ್ತಿತ್ತು. ಇಲ್ಲಿ ಒತ್ತಡ ಜಾಸ್ತಿ , ಸಂಬಳ ಕಡಿಮೆ ಸ್ವತಃ ಏನಾದ್ರೂ ವ್ಯವಹಾರ ಮಾಡು ಎಂಬ ಮಾತುಗಳು ಪದೇ ಪದೇ ಕಿವಿಯಲ್ಲೇ ಓಡಾಡಿದಂತೆ ಭಾಸವಾಗುತ್ತಿತ್ತು. ಎಷ್ಟು ಪ್ರಯತ್ನ ಮಾಡಿದ್ರೂ ಇಷ್ಟೇ ಬಿಡು ಬದುಕು. ಮುಂದೇನು ಮಾಡುವುದು ಎಂದು ಯೋಚಿಸುತ್ತಾ ಕುಳಿತಿರುವಾಗಲೇ ಮನಸು ವಾಲಿದ್ದು ಹೈನುಗಾರಿಕೆಯ ಕಡೆಗೆ.

ಹೈನುಗಾರಿಕೆಯಲ್ಲಿ ಅಂಬೆಗಾಲು ..

ತಂದೆ ಕೊಂಡಿದ್ದ ಜಮೀನಿತ್ತು. ಮನೆಯಲ್ಲೊಂದಷ್ಟು ಹಸುಗಳಿದ್ದವು. ಆದರೆ ಇದನ್ನೇ ಉದ್ಯಮವಾಗಿ ನಡೆಸಬಲ್ಲೆನಾ ಎಂಬ ಅನುಮಾನಗಳು. ಈಗೀಗ ರೈತರು ಏನೆಲ್ಲಾ ಪ್ರಯೋಗ ಮಾಡಿದರೂ ಕೊನೆಗೆ ತಮ್ಮ ಯಾವುದೇ ಉತ್ಪಾದನೆಯಲ್ಲಿ ಬೆಲೆ ಇಲ್ಲದೆ‌ ಸೋಲುತ್ತಾರೆ. ಆದರೇನಂತೆ ಮನಸಿದ್ದರೆ ಮಾರ್ಗ ಅಂತಾ ಗಟ್ಟಿ ಮನಸು ಮಾಡಿ ತಂದೆ ಮಾಡಿದ್ದ ಫಾರ್ಮ್ ನಲ್ಲಿ ತಮ್ಮ ಭವಿಷ್ಯ ಹುಡುಕಲು ಆರಂಭಿಸಿಯೇ ಬಿಟ್ಟರು. ಮೇವು ಕತ್ತರಿಸುವುದು, ಹಾಲು ಕರೆಯುವುದು, ಸಗಣಿ ಬಾಚುವುದು ಇದೆಲ್ಲವೂ ಕೂಡಾ ಆರಂಭದಲ್ಲಿ ಸವಾಲಿನ ಕೆಲಸಗಳೇ ..!!

ಮುಂದಿಟ್ಟ ಹೆಜ್ಜೆ ಹಿಂದಿಡುವಂತಿಲ್ಲ. ಇದೇ ಬದುಕು ಅಂತಾ ನಿರ್ಧರಿಸಿಯಾಗಿದೆ. ಇನ್ನು ಹಿಂದೆ ಸರಿಯುವ ಮಾತೇ ಇಲ್ಲ. ಈ ಮಧ್ಯೆ ಸಾಕಷ್ಟು ಸಮಸ್ಯೆಗಳು ಶಶಿಕುಮಾರ್ ಅವರನ್ನ ಕಾಡುತ್ತವೆ. ಅಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ದಣಿವಾರಿಸಿಕೊಳ್ಳುವಂತಿಲ್ಲ. ಹಾಲಿನ ಇಳುವರಿಯೂ ಅಂದು ಕೊಂಡಂತೆ ಸಿಗುತ್ತಿಲ್ಲ. ಸರ್ಕಾರಿ , ಖಾಸಗಿ ಯಾವುದೇ ಡೈರಿಗೆ ಹಾಲು ಕೊಟ್ಟರೂ ನಿರೀಕ್ಷಿತ ಬೆಲೆಯೂ ಇಲ್ಲ. ಹೀಗಾದರೆ ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದಷ್ಟೇ ಬಾಕಿ ಇತ್ತು..

ಶಶಿಕುಮಾರ್ ಗೆ ಎನರ್ಜಿ ಕೊಟ್ಟಿದ್ದು ಅಕ್ಷಯಕಲ್ಪ..

ತೀರ ತಳಹಂತದಿಂದ ಶ್ರಮವಹಿಸಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಬೇಕು. This is my final Destination ಅಂತಾ ನಿರ್ಧರಿಸಿದ್ದ ಶಶಿಕುಮಾರ್ ಗೆ ಸರಿಯಾದ ವೇದಿಕೆ ದೊರಕಿರಲಿಲ್ಲ. ಅಷ್ಟೋ ಇಷ್ಟು ವಿದ್ಯಾಭ್ಯಾಸ ಮಾಡಿಕೊಂಡು ಹೈನೋದ್ಯಮದ ಕನಸು ಹೊತ್ತು ಬಂದಿದ್ದು ಇವರಿಗೆ ಸೂಕ್ತ ಬೆಲೆ , ನಿರ್ವಹಣೆಯ ತಂತ್ರಗಳು , ಹಾಲಿನ ಇಳುವರಿ, ಹಸುಗಳ ವೈಜ್ಞಾನಿಕ ಸಾಕಾಣಿಕೆ ಇತ್ಯಾದಿಗಳ ಕುರಿತು ಸೂಕ್ತ ಮಾರ್ಗದರ್ಶನದ ಕೊರತೆ ಇತ್ತು. ಈ ಹಂತದಲ್ಲಿ ಶಕ್ತಿ ನೀಡಿ ಮುನ್ನಡೆಸಿದ್ದೇ ಅಕ್ಷಯಕಲ್ಪ ಎಂಬ ರೈತರ ಪಾಲಿನ ಎನರ್ಜಿ ಬೂಸ್ಟರ್ …

ಅಕ್ಷಯ ಕಲ್ಪನೆಂಬ ರೈತರ ಪಾಲಿನ ಸೇವಕ , ಮಾರ್ಗದರ್ಶಕ..

ಒಂದಲ್ಲಾ ಒಂದು ಕನಸುಗಳ ಬೆನ್ನು ಬಿದ್ದು ಅಂತಿಮವಾಗಿ ಹೈನುಗಾರಿಕೆಯಲ್ಲಿ ಜೀವನ ಕಂಡುಕೊಳ್ಳುವ ಉದ್ದೇಶದಿಂದ ಹಸುಗಳ ನಿರ್ವಹಣೆಯಲ್ಲಿ ತೊಡಗಿಕೊಂಡ ಶಶಿಕುಮಾರ್ ಗೆ ಸಾಕಷ್ಟು ಅಡೆತಡೆ , ಗೊಂದಲಗಳು ಅಲ್ಲೊಬ್ಬ ಇಲ್ಲೊಬ್ಬ ಸಂಬಂಧಿಕರು ಸ್ನೇಹಿತರ ಹೀಯಾಳಿಕೆಗಳು ಅಧೀರರನ್ನಾಗಿಸಿಬಿಟ್ಟಿದ್ದವು. ಈ ಮಧ್ಯೆ ಅಕ್ಷಯ ಕಲ್ಪ ಆರ್ಗ್ಯಾನಿಕ್ ಮಿಲ್ಕ್ ನ ಪ್ರತಿನಿಧಿಗಳು ಶಶಿಕುಮಾರ್ ಅವರನ್ನ ಸಂಪರ್ಕಿಸುತ್ತಾರೆ. ಅಲ್ಲಿಂದ ನಡೆದದ್ದೆಲ್ಲಾ ಪವಾಡ.. ಸಂಸ್ಥೆಯ ಪ್ರತಿನಿಧಿಗಳು ಹಸುಗಳ ಬಾಡಿ ಸ್ಕೋರ್ ನೋಡುವುದರಿಂದ ಆರಂಭಿಸಿ , ಉತ್ಪಾದನೆ , ಉತ್ಪಾದನೆ ವೆಚ್ಚ, ಹಾಲಿನ ಗುಣಮಟ್ಟ, ಇಳುವರಿ ಹೆಚ್ಚಿಸಲು ಇರುವ ಕ್ರಮಗಳು , ಕರು ಸಾಕಾಣಿಕೆ , ಕಡಿಮೆ ಅವಧಿಯಲ್ಲಿ ಪಡ್ಡೆಗಳ ಗರ್ಭ ಧರಿಸುವಿಕೆ. ಕೆಲಸದ ಶ್ರಮವನ್ನ ತಗ್ಗಿಸುವ ತಂತ್ರಗಳು , ಮೇವಿನ ಪ್ರಾಮುಖ್ಯತೆ , ನಿರಂತರ ಮೇವು ಮತ್ತು ನೀರು ಒದಗಿಸುವಿಕೆಯಿಂದಾಗುವ ಪ್ರಯೋಜನಗಳು. ಒಬ್ಬ ವ್ಯಕ್ತಿಯ ನಿರ್ವಹಣೆಯಲ್ಲೇ ಎಷ್ಟೊಂದು ಹಸು ಸಾಕಲು ಇರುವ ಕ್ರಮಗಳು ಅಲ್ಲದೆ ತಮ್ಮ ಸಂಸ್ಥೆಯಲ್ಲಿ ಕೈ ಗೊಳ್ಳುವ ಅಷ್ಟೂ ಆಧುನಿಕ ವಿಧಾನಗಳನ್ನ ರೈತರಿಗೆ ಮನವರಿಕೆ ಮಾಡಿ ಅವುಗಳನ್ನ ಪ್ರಾಯೋಗಿಕವಾಗಿ ರೈತರ ಹಸುಗಳ ಮೇಲೆ ಪ್ರಯೋಗಿಸಿ ಉತ್ತಮ ಇಳುವರಿಗೆ ಉತ್ತೇಜಿಸುವುದು. ಸಮಯ ಬಂದಾಗ ಪ್ರತಿನಿಧಿಗಳೇ ಮುಂದೆ ನಿಂತು ಮಾರ್ಗದರ್ಶನ ಮಾತ್ರವಲ್ಲದೆ ಸೇವೆಯನ್ನೂ ನೀಡುವ ಮೂಲಕ ರೈತರ ಸಬಲೀಕರಣಕ್ಕೆ ಪ್ರಯತ್ನಿಸುತ್ತಾರೆ.

ಅಕ್ಷಯ ಕಲ್ಪ ನಿರ್ವಹಿಸುವ ಮೇಲಿನ‌ ಎಲ್ಲಾ ಮಾರ್ಗದರ್ಶನ , ಪ್ರಯೋಗ, ಸೇವೆಗಳು ಅವರಿಗೆ ದೊರೆತಿದೆ. ಬೇರೆಲ್ಲಾ ಡೈರಿಗಳಿಗಿಂತ ಒಳ್ಳೆಯ ಬೆಲೆ ಸಿಗ್ತಿದೆ.‌ಹಸುಗಳ‌ ಆರೋಗ್ಯವೂ ಸುಧಾರಿಸಿದೆ. ಜೊತೆಗೆ ಆದಾಯವೂ ಹೆಚ್ಚಿದೆ. ಇಂದು ತಿಂಗಳಿಗೆ ಸಾವಿರಾರು ರೂಪಾಯಿಗಳ ಆದಾಯವನ್ನ ಗಳಿಸಿಕೊಂಡು ಆರಾಮವಾಗಿ ಜೀವನ ನಡೆಸುತ್ತಿದ್ದಾರೆ ಶಶಿಕುಮಾರ್. ಈಗೀಗ ಯಾವ ಸರ್ಕಾರಿ ನೌಕರಿಯೂ ಬೇಡ. ಯಾವ ಖಾಸಗಿ ವಲಯದ ಒತ್ತಡವೂ ಬೇಡ ಅನ್ನುತ್ತಿದ್ದಾರೆ ಶಶಿಕುಮಾರ್..

ಶಶಿಕುಮಾರ್ ಈಗ ಬಿಎಂಸಿ‌ ಮಾಲಿಕ..

ಒಂದೆಡೆ ಅಕ್ಷಯಕಲ್ಪ ಸಂಸ್ಥೆಯ ಮಾರ್ಗದರ್ಶನ. ಆಗಿಂದಾಗ್ಗೆ ವಿಸ್ತರಣಾಧಿಕಾರಿಗಳ ಭೇಟಿ ಪ್ರೋತ್ಸಾಹ. ಉತ್ಪಾದಿಸುವ ಉತ್ಕೃಷ್ಟ ಗುಣಮಟ್ಟದ ಹಾಲಿಗೆ ಉತ್ತಮ ಬೆಲೆ. ಫಾರ್ಮ್ ನಲ್ಲಿ‌ಸಂಸ್ಥೆ ಸೂಚಿಸುವಂತೆ , ಹಸುಗಳ ಇಳುವರಿ ಹೆಚ್ಚಿಸು , ಶುದ್ಧತೆ , ಆಹಾರ ಕ್ರಮ ಪ್ರತಿಯೊಂದು ಕ್ರಮಗಳಿಗೂ ಪ್ರೇತ್ಯೇಕ ಪ್ರೋತ್ಸಾಹ ಧನ. ಬಿಎಸ್ಸಿ ಬಯೋ ಟೆಕ್ನಾಲಜಿ ಮುಗಿಸಿ ಹೊಸ ಪ್ರಯೋಗಗಳಿಗೆ ತನ್ನನ್ನ ತಾನು ತೊಡಗಿಸಿಕೊಳ್ಳಲು ಗುರುವಾಗಿ ಬಂತು ಅಕ್ಷಯಕಲ್ಪ. ಅಂದಹಾಗೆ ಶಶಿಕುಮಾರ್ ಅವರಿಗೆ ಅದಾಗಲೇ ಆತ್ಮವಿಶ್ವಾಸ ವೃದ್ಧಿಸಿದೆ. ತನ್ನಂತೆ ಈ ಹೈನೋಧ್ಯಮದತ್ತ ಆಕರ್ಷಿತರಾದ ಪ್ರತಿಯೊಬ್ಬರಿಗೂ ತಾನು ನಡೆದು ಬಂದ ಹೆಜ್ಜೆಗಳ ಬಗ್ಗೆ . ಅಕ್ಷಯ ಕಲ್ಪ‌ಸಂಸ್ಥೆಯ ಬೆಂಬಲದ ಬಗ್ಗೆ ಮುಕ್ತ ಮನಸಿನಿಂದ ಹೇಳಿಕೊಳ್ಳುತ್ತಾರೆ. ಸುತ್ತ ಮುತ್ತ ಇರುವ ರೈತರಿಗೂ ಸಹಕಾರಿಯಾಗಲಿ‌ ಎಂಬ ಉದ್ದೇಶದಿಂದ ಶಶಿಕುಮಾರ್ ಈಗ ಬಿಎಂಸಿ ಪಾಯಿಂಟ್ ಮಾಡಿಕೊಂಡಿದ್ದಾರೆ. ಶೀಘ್ರವೇ ಅದು ಉದ್ಘಾಟನೆಗೆ ಕಾದು ಕುಳಿತಿದೆ.

ಶಶಿಕುಮಾರ್ ಅವರಿಗೆ ಶುಭ ಹಾರೈಸಲು ಈ ಸಂಖ್ಯೆಗೆ ಕರೆ ಮಾಡಿ..
9035288997

ಶಶಿ ಕುಮಾರ್ ತಂದೆ ಪೊಲೀಸ್ ಚಂದ್ರಣ್ಣ, ಗಾಯಿತ್ರಿಪುರ (ಪೋ) , ಜವನಗೊಂಡನಹಳ್ಳಿ (ಹೋಬಳಿ)
ಹಿರಿಯೂರು ( ತಾಲೂಕು). ಚಿತ್ರದುರ್ಗ( ಜಿಲ್ಲೆ)

.📋🖋ರಾಮು ಅರಕೇರಿ

LEAVE A REPLY

Please enter your comment!
Please enter your name here