ಇತಿಹಾಸ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಮೈಗೂಡಬೇಕು.: ಡಾ.ಜೆ.ಎಂ.ನಾಗಯ್ಯ

0
131

ಕೊಟ್ಟೂರು:ನ:17:- ಇತಿಹಾಸದ ಪ್ರಜ್ಞೆ ಮೈಗೂಡಿಸಿಕೊಂಡಷ್ಟು ವ್ಯಾಪಕ ಜ್ಞಾನಾರ್ಜನೆ ಪ್ರತಿಯೊಬ್ಬರಲ್ಲಿ ಒಡಮೂಡುತ್ತದೆ. ಇತಿಹಾಸ ಶಿಕ್ಷಕರು ಜ್ಞಾನದ ಕ್ಷಿತಿಜವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ನಿರಂತರ ಅಧ್ಯಯನ, ಅಧ್ಯಾಪನ, ಸಂಶೋಧನೆ ಮತ್ತು ಪ್ರಕಟಣೆಯಂತಹ ಕಾರ್ಯದಲ್ಲಿ ತೊಡಗಿಸಿಕೊಂಡರೇ ಅವರು ಸಹ ಇತಿಹಾಸದಷ್ಟೆ ಗಟ್ಟಿಯಾಗಿ ಉಳಿಯುತ್ತಾರೆ ಎಂದು ಧಾರವಾಡದ ಡಾ.ಆರ್.ಸಿ.ಹಿರೇಮಠ್ ಅಧ್ಯಯನ ಪೀಠದ ವಿಶ್ರಾಂತ ಮುಖ್ಯಸ್ಥ ಡಾ.ಜೆ.ಎಂ.ನಾಗಯ್ಯ ಹೇಳಿದರು.
ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯ ಇತಿಹಾಸ ವಿಭಾಗ ಡಾ.ಹೆಚ್.ಜಿ.ರಾಜ್ ಸಭಾ ಭವನದಲ್ಲಿ ರಾಜ್ಯ ಪತ್ರಗಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನದ ರಾಜ್ಯ ಮಟ್ಟದ ಇತಿಹಾಸ ಕಾರ್ಯಾಗಾರವನ್ನು ಉದ್ದೇಶಿಸಿ ಅಶಯ ಭಾಷಣ ಮಾಡಿದರು.


ಇತಿಹಾಸವನ್ನು ವಾಸ್ತವ ನೆಲಗಟ್ಟನ್ನು ಹೆಚ್ಚಾಗಿ ಪ್ರತಿಬಿಂಬಿಸುವ ಜೊತೆಗೆ ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡಲು ಗತಕಾಲದ ಘಟನಾವಳಿಗಳನ್ನು ಮೆಲಕು ಹಾಕಿಕೊಂಡು ಹೊಸ ಬಗೆಯ ಇತಿಹಾಸವನ್ನು ಸೃಷ್ಠಿಸಲು ಸಾಧ್ಯ ಎಂದ ಅವರು ಇತಿಹಾಸದ ಬಗ್ಗೆ ತಾತ್ಸರ ಮನೋಭಾವನೆ ಮೂಡಿಸಿಕೊಂಡಷ್ಟು ಅಜ್ಞಾನವನ್ನು ಅಹ್ವಾನ ಮಾಡಿಕೊಳ್ಳಲು ದಾರಿಯಾಗುತ್ತದೆ ಎಂದು ಅವರು ಹೇಳಿದರು.
ಸ್ವಾತಂತ್ರ ಪೂರ್ವದ ಘಟನಾವಳಿಗಳು ಪ್ರತಿಯೊಬ್ಬರಲ್ಲಿ ಇತಿಹಾಸದ ಬಗ್ಗೆ ಕುತೂಹಲವನ್ನು ಹುಟ್ಟಿಸಿದವು. ಇತಿಹಾಸದ ಬಗ್ಗೆ ಅಳವಾದ ಅಧ್ಯಾಯನ ಮಾಡಿಕೊಂಡಷ್ಟು ಹೊಸ ಬಗೆಯ ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಇತಿಹಾಸ ಕಾರ್ಯಗಾರವನ್ನು ಉದ್ಘಾಟಿಸಿದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದರಾಮ ಕಲ್ಮಠ್ ಸಂಶೋಧನಕಾರರ ಕೊರತೆ ನಮ್ಮಲ್ಲಿ ಹೆಚ್ಚಾಗಿ ಬಾಧಿಸುತ್ತಿದ್ದರೂ ಇತಿಹಾಸದ ದಾಖಲೆ ಖಂಡಿತ ಕಡಿಮೆಯಾಗಿಲ್ಲ. ಇತಿಹಾಸ ಪ್ರಜ್ಞೆ ಕಡಿಮೆಯಾಗದಂತೆ ಉದ್ದೀಪನಗೊಳಿಸಿಕೊಳ್ಳುವ ಕೆಲಸ ತುರ್ತಾಗಿ ಆಗಬೇಕಿದೆ ಎಂದರು.
ಇತಿಹಾಸ ಬರೀ ಗತಕಾಲಗ್ಗದೆ ವಾಸ್ತವತೆಯ ನೆಲಗಟ್ಟನ್ನು ಹೊಂದಿದ್ದರೆ ಹೆಚ್ಚು ಬಗೆಯ ಪ್ರಕರತೆ ಬರುತ್ತದೆ. ಇತಿಹಾಸವಿಲ್ಲದ ದೇಶ ಸಮಾಜ ಯಾರೊಬ್ಬರಿಂದಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು ವಿದ್ಯಾರ್ಥಿಗಳು ಇತಿಹಾಸ ಪ್ರಜ್ಞೆ ಮೈಗೂಡಿಸಿಕೊಂಡಷ್ಟು ಉನ್ನತ ಮಟ್ಟದ ಸಾಧನೆ ತೋರಲು ದಾರಿ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ರಾಜ್ಯ ಪತ್ರಗಾರ ಇಲಾಖೆ ಉಪನಿರ್ದೇಶಕ ಡಾ.ಸದಾನಂದ ನೆಲ್ಕುದ್ರಿ ಮಾತನಾಡಿ ದಾಖಲೆಗಳನ್ನು ಅದರಲ್ಲೂ ರಾಷ್ಟçದ, ರಾಜ್ಯದ ಪ್ರತಿ ಘಟನಾವಳಿಗಳನ್ನು ಕೈತಪ್ಪಿ ಹೋಗದಂತೆ ದಾಖಲಿಸಿಕೊಳ್ಳುವ ಮಹತ್ತರ ಕಾರ್ಯವನ್ನು ಇಲಾಖೆ ಮಾಡುತ್ತಿದೆ. ರಾಜ್ಯದ ಸ್ವಾತಂತ್ರ ಹೋರಾಟಗಾರರ 60ಕ್ಕೂ ಹೆಚ್ಚು ಧ್ವನಿಗಳನ್ನು ದಾಖಲಿಸಿಕೊಂಡು ಜನತೆಗೆ ಪ್ರಚುರಪಡಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ನಮ್ಮ ಇತಿಹಾಸಕ್ಕೆ ಮೆರಗು ತರುವ ಕೆಲಸ ತಪ್ಪದೇ ನಡೆಯಲು ಸಾಧ್ಯವಿದೆ ಎಂದರು.
ಪ್ರಾಚಾರ್ಯ ಶಾಂತಮೂರ್ತಿ ಬಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿ ಕಾಲೇಜ್ ಪ್ರಾಚಾರ್ಯ ಎಂ.ಎಚ್.ಪ್ರಶಾAತ್ ಕುಮಾರ, ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿತ ಸದಸ್ಯರಾದ ಬಿ.ಎಸ್.ಕೊಟ್ರೇಶ, ಎಸ್.ಎಂ.ಗುರುಪ್ರಸಾದ್, ಅವಂತಿ ಬಸವರಾಜ, ಅಡಿಕೆ ಮಂಜುನಾಥ, ಕೆ.ಬಿ.ಮಲ್ಲಿಕಾರ್ಜುನ, ಮಂಜುನಾಥ ಮಠಪತಿ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು.
ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಜೆ.ಬಿ.ಸಿದ್ದನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಸಕ ಸಂತೋಷ ಕಾರ್ಯಕ್ರಮ ನಿರೂಪಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here