ಕೋವಿಡ್ ಲಸಿಕೆ ಬಗ್ಗೆ ಜನರ ಸ್ಪಂದನೆ ಉತ್ತಮವಾಗಿದೆ, ಮೆಗಾ ಮೇಳ ಯಶಸ್ವಿಯಾಗಿದೆ: ಡಾ ಪೂರ್ಣಿಮಾ ಎಸ್.ಕಟ್ಟಿಮನಿ,

0
2814

ಸಂಡೂರು,ತೋರಣಗಲ್ಲು:ಸೆ:17:- ತೋರಣಗಲ್ಲು ಗ್ರಾಮದ ಲಸಿಕಾ ಮೇಳ ಮೇಲ್ವಿಚಾರಣೆ ಮಾಡಿದ ಡಾ. ಪೂರ್ಣಿಮಾ ಕೋವಿಡ್ ಲಸಿಕೆ ಬಗ್ಗೆ ಜನರ ಸ್ಪಂದನೆ ಉತ್ತಮವಾಗಿದೆ,ಹಾಗೂ ಮೆಗಾ ಮೇಳ ಯಶಸ್ವಿಯಾಗಿದೆ. ಸಂಡೂರು ತಾಲೂಕಿನ ಜಿಂದಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತಿದೆ ಲಸಿಕೆ ಪಡೆಯಲು ಜನರು ಏಳು ಗಂಟೆಗೆ ಸರತಿ ನಿಂತಿರುವುದು ಉತ್ತಮ ಬೆಳವಣಿಗೆ ಸರ್ಕಾರ ಅಂದು ಕೊಂಡ ಗುರಿ ಮುಟ್ಟಲಿದ್ದೇವೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸರ್ವರ್ ನಿಧಾನವಾಗಿ ಕಾರ್ಯನಿರ್ವಹಣೆ ಇದ್ದು ಆನ್ ಎಂಟ್ರಿ ಕಷ್ಟವಾಗಿತ್ತು ಕೆಲ ಕಾಲ ಜನರಿಗೆ ನಿರಾಶೆ ಯಾಗದಂತೆ ಆಫ್ ಲೈನ್ ನಲ್ಲಿ ಎಂಟ್ರಿ ಮಾಡಿ ಲಸಿಕೆ ನೀಡಲಾಯಿತು ಯಾರನ್ನು ವಾಪಸ್ಸು ಕಳಿಸಿಲ್ಲ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಸಂಡೂರು ತಾಲೂಕು ಮೆಗಾ ಮೇಳ ನೋಡಲ್ ಅಧಿಕಾರಿ ಡಾ.ಪೂರ್ಣಿಮಾ ಎಸ್ ಕಟ್ಟಿಮನಿ, ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ಶೋಭಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗ್ರಾಮದ ಮುಖಂಡರಾದ ಕೆಟ್ಟೆಪ್ಪ, ಪಿ.ಡಿ.ಓ ಹನುಮಂತಪ್ಪ, ಸದಸ್ಯರಾದ ಲೋಕೇಶ್,ಶಂಕರ್, ಎಸ್.ಡಿ.ಎ ಸಿದ್ದರಾಮ,ಡಿ.ಇ.ಓ ಅಭಿಷೇಕ್,ಎಮ್.ಎಮ್.ಯು ಟೀಮ್ ನ ಈರಣ್ಣ, ಮಂಗಳಾ,ಅರ್ಪಿತಾ,ಸ್ವಪ್ನಾ, ರಮೇಶ್, ಆಶಾ ಕಾರ್ಯಕರ್ತೆ ಮೇಘನಾ,ಹನುಮಂತಮ್ಮ,ಲಕ್ಷ್ಮಿ,ರಾಜೇಶ್ವರಿ, ವಿಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ತಿಮ್ಮಕ್ಕ, ಮಲ್ಲಮ್ಮ, ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here