ಸಂಡೂರು ಸಾರ್ವರ್ತಿಕ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಯಾರಿಗೆ ಟಿಕೆಟ್ ಗೊತ್ತಾ..!?

0
483

ಆತ್ಮೀಯ ಓದುಗರೇ,
ಈ ಪರಿಚಿತ ಹೆಸರು ಇತ್ತೀಚಿನ ದಿನಗಳಲ್ಲಿ ಸಂಡೂರು ತಾಲೂಕಿನಾದ್ಯಂತ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವಂಥದ್ದು, ತಮ್ಮ ವಿಶಿಷ್ಟ ನಡೆ ನುಡಿ ಮತ್ತು ರಾಜಕೀಯ ಶೈಲಿಯಿಂದಾಗಿ ಸಂಡೂರು ತಾಲೂಕಿನ ಜನರ ಗಮನ ಸೆಳೆದಿರುವ ಇವರು ಕೇವಲ ರಾಕಾರಣಿಯಲ್ಲ, ಅವರೊಬ್ಬ ಸಂಘಟಕ, ಸಮಾಜಸುಧಾರಕ ಸಮಾಜಸೇವಕ.

ಅವರದ್ದು ಬಹುಮುಖ ಪ್ರತಿಭೆ, ಅವರೊಬ್ಬ ಸವ್ಯಸಾಚಿ, ಒಬ್ಬ ಕನಸುಗಾರ, ನಾಯಕತ್ವದ ಗುಣವುಳ್ಳ ಮತ್ಸದ್ದಿ ದೂರದರ್ಶಿತ್ವದ ನಾಯಕ ಎದುರಾಳಿಗಳಿಗೆ ಸಿಂಹಸ್ವಪ್ನ, ಅವರು ಒಂದರ್ಥದಲ್ಲಿ ಛಲದಂಕಮಲ್ಲ ಅಂದುಕೊಂಡಿದ್ದನ್ನು ಈಡೇರಿಸಿಯೇ ತಿರುವ ಸಾಧಿಸಿ ತೋರಿಸುವ ಇವರ ದೂರಾಲೋಚನೆಯ ಲಹರಿಯೇ ವಿಶಿಷ್ಟ ಮತ್ತು ವಿಶೇಷ. ಎಂತಹವುದೇ ಸಂದರ್ಭವೇ ಬಂದರೂ ಸಾಮಾಜಿಕ ಕಳಕಳಿಯಲ್ಲಿ ಜನರ ಸೇವೆಯಲ್ಲಿ ದಾರಿ ತಪ್ಪದೇ ಮುಂದೆ ಇಟ್ಟಿರಿವ ಹೆಜ್ಜೆಯನ್ನು ಹಿಂದಕ್ಕೆ ಇಡದೆ ಮುನ್ನುಗ್ಗುವ ಗುಣ ಹಾಗೂ ಅಂದುಕೊಂಡಿದ್ದನ್ನು ತಾನು ಸಾಧಿಸಿ ತೋರಿಸುವವರೆಗೂ ವಿರಮಿಸುವ ಜಾಯಮಾನದವರೆ ಅಲ್ಲ.

ಎದುರಾಳಿಗಳ ಎದೆ ಝಲ್ಲೆನ್ನಿಸುವುದು ಇವರ ವಿಶಿಷ್ಟವೈಖರಿ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಅವರ ಒಳಿತಿಗಾಗಿ ತುಡಿಯುವ ಅವರ ಮನಸ್ಸು ಎಂತಹ ಸಂದರ್ಭದಲ್ಲಿ ಯಾರ ಒತ್ತಡಕ್ಕೂ ಜಗ್ಗದೆ ಸಾರ್ವಜನಿಕರ ಅಭಿವೃದ್ಧಿಗಾಗಿ ರಾಜಿ ಮಾಡಿಕೊಳ್ಳಲಾಗದ ಹಠಮಾರಿ ಧೋರಣೆ ಮೆಚ್ಚುವಂತಹವುದು ಯಾವ ತಾಲೂಕಿನಲ್ಲೂ ಸರಿಸಾಟಿಹಿಲ್ಲದಂತೆಯೇ ಸಂಡೂರು ತಾಲೂಕನ್ನು ಹಾಗೂ ತಾಲೂಕಿನ ಪ್ರತಿ ಹಳ್ಳಿಯ ಜನರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂದು ಸದಾ ಕನವರಿಸುತ್ತಾ ಸಂಡೂರು ಅಭಿವೃದ್ಧಿಯಾಗಿಲ್ಲ ಅಭಿವೃದ್ಧಿ ಮಾಡಬೇಕು ಎಂದು ಅಭಿವೃದ್ಧಿಯ ಮಂತ್ರ. ಮುಂದಿನ 50 ವರ್ಷಗಳಲ್ಲಿ ಸಂಡೂರು ತಾಲೂಕನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳ ನೀಲ ನಕ್ಷೆಯನ್ನು ಬಾಯಲ್ಲೇ ಹೇಳುವ ಅವರ ದೂರದರ್ಶಿತ್ವ ಸೋಜಿಗ ಮೂಡಿಸುವಂಥದ್ದು.

ಬಡಜನರ ಬೆಳವಣಿಗೆ ಹಳ್ಳಿಗಳ ಬೆಳವಣಿಗೆ ಬಿಟ್ಟರೆ ಬೆಳವಣಿಗೆ ಎಂದರೆ ಇವರಿಗೆ ಎಲ್ಲಿಲ್ಲದ ಖುಷಿ, ಸಂತಸ, ಹಿಂದಕ್ಕೆ ನೋಡುವುದು ಅದು ಹೇಡಿಗಳ ಲಕ್ಷಣ ನಮ್ಮದೇನಿದ್ದರು ಮುಂದಕ್ಕೆ ದಾಂಗುಡಿ ಇಡುವುದೇ ಎಂದು ಶತಾಯಗತಾಯ ನಂಬಿದವರು ಇವರು.
ಅವರು ಯಾರು..? ಆ ವ್ಯಕ್ತಿಗೆ ಹಮ್ಮು ಯಾವತ್ತೂ ಇಲ್ಲ. ಕೋಟ್ಯಾಧಿಶ್ಯರು ಅಲ್ಲ ಸರಳ ಮನುಷ್ಯರ ಹಾಗೆ ಜೀವನ ನಡೆಸುತ್ತಿದ್ದಾರೆ, ಬಡವರ ಬಗ್ಗೆ ಕನಿಕರ ಹೊಂದಿರಿವ ಅವರು ಸದಾ ಕಾಲ ಸಹಾಯ ಹಸ್ತ ಚಾಚಲು ಮುಂದಾಗುತ್ತಾರೆ, ಕೊಡುಗೈ ದಾನಿಯಾಗಿರಿವ ಅವರು ತಮ್ಮ ಅಂತರಂಗದಲ್ಲಿ ಮೂಡಿದ ವಿಚಾರವನ್ನು ಹೊರ ಹಾಕುತ್ತಾರೆ ನೇರ ನಿಷ್ಟುರ ಪ್ರಾಮಾಣಿಕ ರಾಜಕಾರಣಿ ಹಿಡಿದ ಕೆಲಸವನ್ನು ಯಾರ ಮುಲಾಜಿಗೂ ಒಳಗಾಗದೆ ಯಾರಿಗೂ ಹೆದರದೆ ಎಂತಹ ಸಂದರ್ಭದಲ್ಲೂ ಯಾವತ್ತೂ ಯಾವುದನ್ನು ಅರ್ಧಕ್ಕೆ ಕೈ ಬಿಡುವುದಿಲ್ಲ.ಪರಿಶ್ರಮದಿಂದ ಕೆಲಸಮಾಡುತ್ತಲಿದ್ದಾರೆ ಸಮಾಜಸೇವೆ ಹಾಗೂ ರಾಜಕೀಯ ಸೇವೆಯಿಂದ ಗುರುತಿಸಿಕೊಂಡಿರಿವ ಅವರ ಹೆಸರೇ ಚಲನಚಿತ್ರ ನಟ ಬಂಗಾರು ಹನುಮಂತು.

ಚೈತನ್ಯದ ಚಿಲುಮೆ;

ಬಂಗಾರು ಹನುಮಂತು ಎಂದರೆ ಒಂದು ಚೈತನ್ಯ, ಇದನ್ನು ಮೈಗೂಡಿಸಿಕೊಂಡಿರುವ ಇವರ ಹಿಂದೆ ದೊಡ್ಡದೊಂದು ಅಭಿಮಾನಿ ಸಮೂಹವೇ ಇದೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಇವರು ಮೇಲು, ಕೀಳು ಎನ್ನದೆ ಎಲ್ಲರನ್ನೂ ಸಮವಾಗಿ ಕಂಡವರು.
ಬಂಗಾರು ಹನುಮಂತು ಅವರ ಮನಸ್ಸು ಸದಾ ಶ್ರೀಸಾಮಾನ್ಯನನ್ನೇ ಸ್ಮರಿಸುತ್ತದೆ. ಏಕೆಂದರೆ, ಒಬ್ಬ ರೈತನ ಮಗನಾಗಿ ಶ್ರೀಸಾಮಾನ್ಯನ ಬದುಕು,ಬವಣೆಗಳೆಲ್ಲವನ್ನೂ ಅವರು ಬಲ್ಲರು, ಹೀಗಾಗಿ ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ಅ ಕ್ಷೇತ್ರದ ಜನರಲ್ಲಿ ರೋಮಾಂಚನಗೊಳ್ಳುವಂತಹ ವ್ಯಕ್ತಿತ್ವ ಅವರಲ್ಲಿ ಕಂಡು ಬರುತ್ತದೆ. ಹಾಗಾಗಿ ರಾಜಕೀಯವಾಗಿ ಅವರಲ್ಲಿ ಗೆಲುವಿನ ಚೈತನ್ಯವಿದೆ.

ಜನರ ಮನಸ್ಸಿನಲ್ಲಿ ಗಟ್ಟಿನೆಲೆ;

ಬಂಗಾರು ಹನುಮಂತು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಲು ಇವರೇನೂ ಹೋರಗಿನವರೇನು ಅಲ್ಲ, ತಾಲೂಕಿನ ಸುಬ್ಬರಾಯನಹಳ್ಳಿಯವರು, ಸಂಡೂರು ಕ್ಷೇತ್ರದ ಪರಿಚಯವೇ ಇವರಿಗೆ ಇಲ್ಲ ಅಂತಾ ಕೇಳುವವರಿಗೆ ಹೇಳುವವರಿಗೆ ಗೊತ್ತಿರಲಿ. ಬಂಗಾರು ಹನುಮಂತು ಅವರು ಹಿಂದುಳಿದ ವರ್ಗದವರ, ದೀನದಲಿತರ, ಅಲ್ಪಸಂಖ್ಯಾತರ,ಬಡವರ ಬಗ್ಗೆ ಅಪಾರ ಕಾಳಜಿ ಇರುವ ವ್ಯಕ್ತಿ ಎನ್ನುವುದನ್ನು ಕ್ಷೇತ್ರದ ಜನರು ಈ ಹಿಂದೆ ಸ್ವಲ್ಪ ದಿನದಲ್ಲಿಯೇ ಅರಿತರು. ಹಿಂದುಳಿದ ತಾಲೂಕಿನಲ್ಲಿ ಅಗಬೇಕಿದ್ದ ಪ್ರಮುಖ ಕೆಲಸಗಳು ಇಂಥ ವ್ಯಕ್ತಿ ಮಾಡಬಲ್ಲ ಎನ್ನುವುದನ್ನು ಜನರು ಅರಿತು ಅವರನ್ನು ಬಾರಿ ಬಹುಮತದಿಂದ ಆರಿಸಿ ತರಲು ಬೆಂಬಲಿಸಿದರು.ಅದೃಷ್ಟ ಒಲಿಯಲಿಲ್ಲ.ಈ ಸಂಧರ್ಭದಲ್ಲಿ ಸಂಡೂರು ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಮಾತುಕೊಟ್ಟಂತೆ ಎಲ್ಲ ಮಾತುಗಳನ್ನು ಹಾಗೆ ಉಳಿಸಿಕೊಳ್ಳುವ ಮೂಲಕ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಗೊಂಡಿದ್ದಾರೆ.

ಕರುಣಾಮಯಿ, ವಾತ್ಸಲ್ಯಮಯಿ ;

ಜನಮೆಚ್ಚಿದ ನಾಯಕ, ಯುವಕರ ಕಣ್ಮಣಿ, ಬಂಗಾರು ಹನುಮಂತು ಅವರು ಜನಸಾಮಾನ್ಯರಿಗಾಗಿ ವಿಶೇಷ ಕಾಳಜಿ, ಸದಾಶಯ ಸಹೃದಯತೆ,ನೇರನುಡಿ ಹಾಗೂ ಸಾಮರಸ್ಯದೊಂದಿಗೆ ಹಳ್ಳಿ ಬಾಷೆಯಲ್ಲಿಯೇ ಜನರ ಮನಸ್ಸನ್ನು ಗೆದ್ದಿದ್ದಾರೆ. ಶಾಂತ ಹಾಗೂ ಸಹೃದಯತೆ ಗುಣದಿಂದಾಗಿ ಬಂಗಾರು ಹನುಮಂತು ಅವರನ್ನು ನಾಯಕರಾಗಿ ಗುರುತಿಸುವುದಕ್ಕಿಂತ ಹೆಚ್ಚಾಗಿ ವಾತ್ಸಲ್ಯಮಯಿಯಾಗಿ ನೋಡುತ್ತಾರೆ. ಯಾರೇ ಆಗಿರಲಿ ಯಾವುದೇ ಹೊತ್ತಿನಲ್ಲಿ ಫೋನ್ ಮಾಡಿದರೂ,ತಾಳ್ಮೆಯಿಂದಲೇ ಸಮಸ್ಯೆಯನ್ನು ಆಲಿಸಿ ಪರಿಹಾರ ಸೂಚಿಸುತ್ತಾರೆ. ಮಾನವೀಯ ಮೌಲ್ಯಗಳನ್ನೇ ಸಾರ್ವಕಾಲಿಕ ಅರ್ಹತೆಗಳೆಂದು ನಂಬಿರುವ ಬಂಗಾರು ಹನುಮಂತು ಚಾಚೂ ತಪ್ಪದೇ ಪಾಲಿಸುತ್ತಾ ಸೌಜನ್ಯದ ನಡವಳಿಕೆಯಿಂದ ಸಂಡೂರು ಕ್ಷೇತ್ರದ ಯುವಕರ, ಜನರ ಮನ ಗೆದ್ದಿದ್ದಾರೆ. ಇದು ಕ್ಷೇತ್ರದ ಜನರಲ್ಲಿ ಇರುವ ವಿಶ್ವಾಸವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.

ಇತ್ತೀಚಿನ ಬದಲಾದ ರಾಜಕೀಯ ವಿದ್ಯಾಮಾನಗಳಲ್ಲಿ ಬಳ್ಳಾರಿ,ಕೂಡ್ಲಿಗಿ ಹಾಗೂ ಸಂಡೂರು ರಾಜಕೀಯ ಬಹಳಷ್ಟು ಚರ್ಚೆಗೆ ಬರುತ್ತಿವೆ.ಮುಂಬರುವ ಸಾರ್ವರ್ತಿಕ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಬಂಗಾರು ಹನುಮಂತು ಸ್ಪರ್ಧೆ ಮಾಡುವುದು ಖಚಿತ. ಹಾಗಂತ ಬಿಜೆಪಿ ಪಕ್ಷದ ಬಲ್ಲ ಮೂಲಗಳಿಂದ ಹಾಗೂ ಆಪ್ತ ವಲಯದಿಂದ ಸುದ್ದಿಯೊಂದು ಹರಿದಾಡುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಸ್ಪರ್ದಿಯಾಗಿದ್ದು ಕೊನೆಘಳಿಗೆಯಲ್ಲಿ ಪಕ್ಷದ ಟಿಕೆಟ್ ಕೈ ತಪ್ಪಿತ್ತು. ಇದರಿಂದ ಅವರ ಅಭಿಮಾನಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಬಹಳ ನಿರಾಸೆಯನ್ನುಂಟುಮಾಡಿತ್ತು.
ಹಾಗಾಗಿ ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಈ ಬಾರಿ ಟಿಕೆಟ್ ಕೊಟ್ಟರು ಅಚ್ಚರಿಯಾಗೋದ್ರಲ್ಲಿ ಎರಡು ಮಾತಿಲ್ಲ ಏನಂತೀರಾ..

LEAVE A REPLY

Please enter your comment!
Please enter your name here