ವೀರಭದ್ರೇಶ್ವರ ರಥೋತ್ಸವ ಭಕ್ತರಿಂದ ವೀರಭದ್ರ ಸ್ವಾಮಿಗೆ ಹರಕೆ ಅರ್ಪಣೆ

0
15

ಕೊಟ್ಟೂರು: ಪಟ್ಟಣದ ಪುರದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಜರುಗುವ ಶುಕ್ರವಾರ ದಂದು ಮುನ್ನದಿನವಾದ ಗುರುವಾರ ದಂದು ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಗಂಗೆಯನ್ನು ಪೂಜೆಗೈದು ದೇವಸ್ಥಾನದ ಬಳಿ ಮಹಿಳೆಯರು ಮತ್ತು ಪುರುಷರು ಹೊತ್ತು ತರುತ್ತಿದ್ದಂತೆ ಅಗ್ನಿಗುಂಡ ಹಾಯುವ ಕಾರ್ಯಕ್ರಮ ಚಾಲನೆ ಪಡೆಯಿತು.

ದೇವರಿಗೆ ಹರಕೆಹೊತ್ತು ವೀರಭದ್ರೇಶ್ವರ ಸ್ವಾಮಿಯ ಭಕ್ತರು ಮಹಿಳೆಯರು ಎನ್ನದೆ ಒಬ್ಬರಾದ ಮೇಲೆ ಒಬ್ಬರಂತೆ ಸಣ್ಣ ಹೊಂಡದಲ್ಲಿ ಹಾಕಲಾಗಿದ್ದ ಅಗ್ನಿಯನ್ನು ತುಳಿದು ಭಕ್ತಿ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಸಹ ಉತ್ಸಾಹದಿಂದ ಪಾಲ್ಗೊಂಡು ನಮಿಸಿದರು.

ಅಗ್ನಿ ಹಾಯುವ ಕಾರ್ಯಕ್ರಮದ ನಂತರ ವೀರಭದ್ರ ಸ್ವಾಮಿಯ ಹಲಗೆ ಮತ್ತು ಗುಗ್ಗಳದ ಮೆರವಣಿಗೆ ಪಟ್ಟಣದ ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ ಸೇರಿದಂತೆ ಇತರೆಡೆ ಸಾಗಿತು.

ಈ ಸಂದರ್ಭದಲ್ಲಿ ವೀರಭದ್ರ ದೇವರನ್ನು ಮನೆದೇವರನ್ನಾಗಿಸಿಕೊಂಡ ಯುವಕರು ಮತ್ತು ಮಹಿಳೆಯರು ಚೂಪಾದ ದೊಡ್ಡ ಶಸ್ತ್ರ (ತಾಮ್ರದ ಸೂಜಿ)ಯನ್ನು ಯುವಕರು ಕಪಾಳಕ್ಕೆ ಚುಚ್ಚಿಸಿಕೊಂಡರೆ ಮಹಿಳೆಯರು ತಮ್ಮ ಕೈ ಮೇಲ್ಬಾಗದಲ್ಲಿ ಚುಚ್ಚಿಸಿಕೊಂಡು ಭಕ್ತಿ ಸಮರ್ಪಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here