Saturday, October 17, 2026
HomeDistrictsBengaluru Cityಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದಿರುವ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಡಿಜಿಪಿಗೆ ಪತ್ರ

ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದಿರುವ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಡಿಜಿಪಿಗೆ ಪತ್ರ

ಬೆಂಗಳೂರು: ಅ17, ಪೊಲೀಸ್ ಇಲಾಖೆಯ ಕೆಲವು ಅಧಿಕಾರಿ ಸಿಬ್ಬಂದಿಗಳು ತಮ್ಮ ನೈಜ್ಯ ಗುರುತನ್ನು ಮರೆಮಾಚಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಮತ್ತು ಇತರೆ ನಕಲಿ ಹೆಸರುಗಳಲ್ಲಿ ಅನಾಮಧೇಯ ಖಾತೆಗಳ ಮೂಲಕ ದುರುದ್ದೇಶದಿಂದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರ ಮೇಲೆ ನಿಗಾವಹಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅತ್ಯಂತ ಪ್ರಮುಖ ಹಾಗೂ ಶಿಸ್ತಿನ ಇಲಾಖೆಯಾಗಿದ್ದು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಸಂದರ್ಭದಲ್ಲಿ ಮಾತ್ರವಲ್ಲದೆ ಸಾರ್ವಜನಿಕವಾಗಿ ಮತ್ತು ಡಿಜಿಟಲ್/ಸಾಮಾಜಿಕ ಜಾಲತಾಣಗಳಲ್ಲಿಯೂ ಇಲಾಖೆಯ ಘನತೆ, ಶಿಸ್ತು, ಗೌಪ್ಯತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿ ಸಿಬ್ಬಂದಿಗಳು ತಮ್ಮ ನೈಜ್ಯ ಗುರುತನ್ನು ಮರೆಮಾಚಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಮತ್ತು ಇತರೆ ನಕಲಿ ಹೆಸರುಗಳಲ್ಲಿ ಕೃತಕ ಗುರುತುಗಳು ಮತ್ತು ಅನಾಮಧೇಯ ಖಾತೆಗಳ ಮೂಲಕ ದುರುದ್ದೇಶದಿಂದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳು, ಇಲಾಖಾ ಆದೇಶಗಳು, ಸುತ್ತೋಲೆಗಳು ಹಾಗೂ ಹಿರಿಯ ಅಧಿಕಾರಿಗಳ ಅಧಿಕೃತ ನಿರ್ದೇಶನಗಳ ಕುರಿತು ಟೀಕೆ, ಆಕ್ಷೇಪಾರ್ಹ ಮತ್ತು ನಕಾರಾತ್ಮಕ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದನೆ ರೀತಿಯ ಬರಹಗಳು ಬರೆಯುವುದು ಅಲ್ಲದೆ ಕೆಲವು ನಕಲಿ ಮತ್ತು ಅನಾಮಧೇಯ ಖಾತೆಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿನ ಪೋಸ್ಟ್ಗಳಿಗೆ ಕಾಮೆಂಟ್ ಗಳನ್ನು ಮಾಡುವುದು, ಇಲಾಖೆಯ ಆಂತರಿಕ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಹಾಗೂ ಇಲಾಖೆಯ ಆಡಳಿತಾತ್ಮಕ ನಿರ್ಧಾರಗಳ ಕುರಿತು ಟೀಕೆ, ಆಕ್ಷೇಪ ವ್ಯಕ್ತಪಡಿಸುವುದು, ಅವಹೇಳನಕಾರಿ ಮತ್ತು ತೇಜೋವಧೆ ಮಾಡುವಂತಹ ಬರಹಗಳನ್ನು ಬರೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದ್ದು ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಸೇವಾ ನಿಯಮಗಳಿಗೆ ಒಳಪಟ್ಟವರಾಗಿದ್ದು ಅಧಿಕೃತ ಖಾತೆಗಳಿಂದ ಬರಹಗಳು, ಟೀಕೆಗಳು ಮಾಡುವುದ್ದರಿಂದ ಇಲಾಖೆಯ ಕ್ರಮ ಎದುರಿಸಬೇಕಾದ ಜಾಗೃತೆ ಹೊಂದಿದ್ದರಿಂದ ತಮ್ಮ ಇಲಾಖಾ ಗುರುತನ್ನು ಮಾರೆಮಾಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನಧಿಕೃತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಾನೂನು ಬಾಹಿರ ಮತ್ತು ಇಲಾಖೆಯ ಸೇವಾ ನಡತೆ ನಿಯಮಗಳ ವಿರುದ್ಧವಾಗಿದ್ದರಿಂದ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಅನಧಿಕೃತ ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಅಗತ್ಯವಾಗಿರುವುದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಇಲಾಖೆ ನಿಯಮಗಳ ಉಲ್ಲಂಘನೆ ಮಾಡಿ ಅನಧಿಕೃತವಾಗಿ ನಕಲಿ ಹೆಸರಿನಲ್ಲಿ ಅನಾಮಧೇಯ ಖಾತೆ ತೆರೆಯದಂತೆ ರಾಜ್ಯದ ಎಲ್ಲಾ ಘಟಕ/ವಿಭಾಗಗಳಲ್ಲಿನ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಮತ್ತು ಇಲಾಖೆಯ ಸರ್ಕಾರದ ಆದೇಶ, ಸುತ್ತೋಲೆ, ಆಡಳಿತಾತ್ಮಕ ನಿರ್ಧಾರಗಳ ಹಾಗೂ ಹಿರಿಯ ಅಧಿಕಾರಿಗಳ ಅಧಿಕೃತ ನಿರ್ದೇಶನಗಳ, ಸಕ್ಷಮ ಪ್ರಾಧಿಕಾರ, ಆಯೋಗಗಳ ಕ್ರಮಗಳ ವಿರುದ್ಧ ಮತ್ತು ಗಣ್ಯ ಅತಿಗಣ್ಯರ ಹಾಗೂ ರಾಜಕೀಯ ಪೋಸ್ಟ್ಗಳಿಗೆ ಟೀಕೆ, ಆಕ್ಷೇಪಾರ್ಹ ಮತ್ತು ನಕಾರಾತ್ಮಕ ಅಭಿಪ್ರಾಯ, ಅವಹೇಳನಕಾರಿ, ತೇಜೋವಧೆ ಮಾಡುವಂತಹ ಬರಹಗಳನ್ನು (ಕಾಮೆಂಟ್ಸ್) ಬರೆಯುತ್ತಿರುವವರ ಮೇಲೆ ಎಸ್.ಎಂ.ಎಂ.ಸೆಲ್ ಮೂಲಕ ನಿಗಾವಹಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಹಾಗೂ ಅಂತಹ ಖಾತೆಗಳ ವಿರುದ್ದ ದೂರುಗಳು ಬಂದಲ್ಲಿ ಅನಧಿಕೃತ ಚಟುವಟಿಕೆಯಲ್ಲಿ ತೊಡಗಿದ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಅನ್ವಯಿಸುವ ಕಾನೂನಡಿಯಲ್ಲಿ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಕ್ತ ಆದೇಶ ಹೊರಡಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments