Wednesday, August 12, 2026
HomeDistrictsBengaluru Cityಕಲ್ಯಾಣ ಕರ್ನಾಟಕ ಭದ್ರತೆ,ಅಭಿವೃದ್ಧಿ, ಉದ್ಯೋಗಕ್ಕಾಗಿ ನೂತನ ಕೈಗಾರಿಕಾ ಭದ್ರತೆ ಪಡೆ ಸೃಜನೆಗೆ ಪತ್ರ

ಕಲ್ಯಾಣ ಕರ್ನಾಟಕ ಭದ್ರತೆ,ಅಭಿವೃದ್ಧಿ, ಉದ್ಯೋಗಕ್ಕಾಗಿ ನೂತನ ಕೈಗಾರಿಕಾ ಭದ್ರತೆ ಪಡೆ ಸೃಜನೆಗೆ ಪತ್ರ

ಬೆಂಗಳೂರು: ಆಗಸ್ಟ್ 12, ಕಲ್ಯಾಣ ಕರ್ನಾಟಕ ಪ್ರದೇಶದ ಭದ್ರತೆ ದೃಷ್ಟಿಯಿಂದ ಕಲ್ಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕವಾದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 5ನೇ ಪಡೆಯನ್ನು ಸೃಜಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ!

ಕರ್ನಾಟಕ ರಾಜ್ಯದಲ್ಲಿ ಪ್ರಮುಖ ಸೂಕ್ಷ್ಮ ಸ್ಥಾವರಗಳ ಭದ್ರತೆಗಾಗಿಯೇ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಸೃಜಿಸಿದ್ದು ಪ್ರಸ್ತುತವಾಗಿ 4 ಪಡೆಗಳು ಕರ್ತವ್ಯ ನಿರ್ವಹಿಸುತ್ತಿದ್ದು 1ನೇ ಪಡೆ ಬೆಂಗಳೂರು, 2ನೇ ಪಡೆ ಶಿವಮೊಗ್ಗ, 3ನೇ ಪಡೆ ಧಾರವಾಡ ಮತ್ತು 4ನೇ ಪಡೆ ಮೈಸೂರಿನಲ್ಲಿದ್ದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಯಾವುದೇ ಕೇಂದ್ರಸ್ಥಾನವಿರುವುದಿಲ್ಲಾ, ಬೀದರ್ ವಿಮಾನ ನಿಲ್ದಾಣ,ಕಲಬುರಗಿ ವಿಮಾನ ನಿಲ್ದಾಣ, ಕಲ್ಬುರ್ಗಿ ಹೈಕೋರ್ಟ್ ಪೀಠ,ಕಲಬುರಗಿ ಕೇಂದ್ರ ಕಾರಾಗೃಹ,ಬಳ್ಳಾರಿ ಕೇಂದ್ರ ಕಾರಾಗೃಹ,ಜಿಂದಾಲ್ ವಿಮಾನ ನಿಲ್ದಾಣ,ಬಿಟಿಪಿಎಸ್ ಕುಡಿತಿನಿ, ಬಳ್ಳಾರಿ ಹಾಗೂ ತುಂಗಭದ್ರಾ ಜಲಾಶಯ ವಿಜಯನಗರ ಜಿಲ್ಲೆ ಈ 8 ಘಟಕಗಳಿಗೆ ಸರಿಸುಮಾರು 600ಕ್ಕಿಂತ ಹೆಚ್ಚು ಹುದ್ದೆಗಳು ಮಂಜೂರಾಗಿದ್ದು ಸದರಿ ಘಟಕಗಳಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯು ಭದ್ರತೆ ಒದಗಿಸುತ್ತಿರುವುದರೊಂದಿಗೆ ಹಟ್ಟಿ ಚಿನ್ನದ ಗಣಿ, ಯರಮರಸ್ ಶಾಖೋತ್ಪನ್ನ ಸ್ಥಾವರ. ನಾರಾಯಣಪುರ, ಕಾರಂಜಾ ಜಲಾಶಯಗಳು ಹಾಗೂ ಇನ್ನಿತರೆ ಸೂಕ್ಷ್ಮ ಸ್ಥಾವರಗಳ ಸೆಕ್ಯೂರಿಟಿ ಆಡಿಟ್ ಕಾರ್ಯ ಮುಗಿದಿದ್ದು ಸಿಬ್ಬಂದಿಗಳ ಕೊರೆತೆಯಿಂದಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತೆ ಪಡೆಯ ಸಿಬ್ಬಂದಿಗಳನ್ನು ನಿಯೋಜಿಸಿರುವುದಿಲ್ಲಾ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 8 ಸೂಕ್ಷ್ಮ ಸ್ಥಾವರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 400 ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಸರಿಯಾದ ರೀತಿಯಲ್ಲಿ ಪ್ರಾದೇಶಿಕ ಸ್ಥಳೀಯ ವೃಂದ ರಚಿಸದಿರುವುದ್ದರಿಂದ ಸೇವಾ ಜೇಷ್ಠತೆಯಿದ್ದರೂ ಸಹ ಅವರು ಮುಂಬಡ್ತಿಯಿಂದ ವಂಚಿತರಾಗಿರುತ್ತಾರೆ. ಪ್ರಸ್ತುತ ಕೆ.ಎಸ್.ಐ.ಎಸ್.ಎಫ್‌ ನ 4ನೇ ಪಡೆ ಮೈಸೂರಿನಲ್ಲಿ ಸೃಜಿಸಿದಂತೆ ಈಗಾಗಲೇ ಈ ಭಾಗದಲ್ಲಿ ಕರ್ತವ್ಯನಿರ್ವಹಿಸುತ್ತಿರುವ 8 ಸೂಕ್ಷ್ಮ ಸ್ಥಾವರಗಳ ಎಲ್ಲಾ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗದ ಬೆಟಾಲಿಯನ್‌ಗೆ ವರ್ಗಾಯಿಸಿ ಇನ್ನುಳಿದ ಹುದ್ದೆಗಳನ್ನು ಪ್ರಸ್ತುತವಾಗಿ ಖಾಲಿಯಿರಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನೇಮಿಸಿಕೊಳ್ಳುವುದರ ಮೂಲಕ ಭರ್ತಿ ಮಾಡಿಕೊಳ್ಳಬಹುದಾಗಿದ್ದು ಮತ್ತು ಈಗಿರುವ ಕಲಬುರ್ಗಿಯ ಹಳೇ ಐಜಿಪಿ ಕಛೇರಿಯನ್ನು ಕೆ.ಎಸ್.ಐ.ಎಸ್.ಎಫ್‌ನ 5ನೇ ಪಡೆ ಕಮಾಂಡೆಂಟ್ ರವರ ಕಾರ್ಯಲಯವಾಗಿ ತಾತ್ಕಾಲಿಕವಾಗಿ ಬಳಸಿಕೊಂಡು ಒಂದು ಬೆಟಾಲಿಯನ್ ಸೃಜನೆ ಮಾಡುವುದ್ದರಿಂದ ಒಂದು ಪೂರ್ಣ ಪ್ರಮಾಣದ ಬೆಟಾಲಿಯನ್‌ ಗೆ ಬೇಕಾಗುವಷ್ಟು ಮತ್ತು ಅದಕ್ಕಿಂತ ಹೆಚ್ಚು ಸೂಕ್ಷ್ಮ ಸ್ಥಾವರಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿದ್ದು ಈ ಎಲ್ಲಾ ಸೂಕ್ಷ್ಮ ಸ್ಥಾವರಗಳ ಸಂಪೂರ್ಣ ಭದ್ರತೆಯ ವೆಚ್ಚವನ್ನು ಆಯಾ ಸ್ಥಾವರಗಳೇ ಭರಿಸಲು ಸಿದ್ದವಿರುವುದ್ದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲವಾದ್ದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕವಾದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸೃಜನೆ ಮಾಡುವುದ್ದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಸೂಕ್ಷ್ಮ ಸ್ಥಾವರಗಳ ಭದ್ರತೆ ಮತ್ತು ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವ ಹಾಗೂ 371ಜೆ ಸಮರ್ಪಕವಾಗಿ ಜಾರಿಮಾಡುವ ಅತ್ಯವಶ್ಯಕವಿರುವುದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ನೀಡಲು ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳ ಸೇವಾ ಹಿರಿತನದ ಮುಂಬಡ್ತಿಯನ್ನು ಸರಿಪಡಿಸಲು ಹಾಗೂ ಅಭಿವೃದ್ದಿಗಾಗಿ ಕಲಬುರಗಿಯನ್ನು ಕೇಂದ್ರ ಸ್ಥಾನವನ್ನಾಗಿಸಿ ಈಗಿರುವ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪೂರ್ಣ ಪ್ರಮಾಣದ ಪ್ರತ್ಯೇಕವಾದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments