Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಕ್ರೀಡಾ ಜಗತ್ತು Archives - Hai Sandur kannada fortnightly news paper https://haisandur.com/category/ಕ್ರೀಡೆ/ Hai Sandur News.Karnataka India Sun, 10 Jul 2022 01:47:52 +0000 en-US hourly 1 https://wordpress.org/?v=6.5.3 https://haisandur.com/wp-content/uploads/2022/01/cropped-IMG_20211107_051359-32x32.jpg ಕ್ರೀಡಾ ಜಗತ್ತು Archives - Hai Sandur kannada fortnightly news paper https://haisandur.com/category/ಕ್ರೀಡೆ/ 32 32 ಸುನಿಲ್ ಗವಾಸ್ಕರ್ ಒಬ್ಬ ಮಹಾನ್ ಆಟಗಾರ. https://haisandur.com/2022/07/10/%e0%b2%b8%e0%b3%81%e0%b2%a8%e0%b2%bf%e0%b2%b2%e0%b3%8d-%e0%b2%97%e0%b2%b5%e0%b2%be%e0%b2%b8%e0%b3%8d%e0%b2%95%e0%b2%b0%e0%b3%8d-%e0%b2%92%e0%b2%ac%e0%b3%8d%e0%b2%ac-%e0%b2%ae%e0%b2%b9%e0%b2%be/ https://haisandur.com/2022/07/10/%e0%b2%b8%e0%b3%81%e0%b2%a8%e0%b2%bf%e0%b2%b2%e0%b3%8d-%e0%b2%97%e0%b2%b5%e0%b2%be%e0%b2%b8%e0%b3%8d%e0%b2%95%e0%b2%b0%e0%b3%8d-%e0%b2%92%e0%b2%ac%e0%b3%8d%e0%b2%ac-%e0%b2%ae%e0%b2%b9%e0%b2%be/#respond Sun, 10 Jul 2022 01:47:51 +0000 http://haisandur.com/?p=28307 ಗವಾಸ್ಕರ್ ಹುಟ್ಟಿದ್ದು 1949ರ ಜುಲೈ 10ರಂದು. ಕ್ರಿಕೆಟ್ ಕ್ರೀಡೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕ್ರಿಕೆಟ್ ಶ್ರೇಷ್ಠರ ಸಾಲಿಗೆ ಸೇರಿದವರೀತ. ಬ್ಯಾಟಿಂಗ್ ಮಾಡುವಾಗ ಅವರು ಚೆಂಡನ್ನು ಆಚೆ ಈಚೆ ಅಟ್ಟುವುದಿರಲಿ, ಬ್ಯಾಟಿಂಗ್ ಕ್ರೀಸ್ ಸುತ್ತ ಮುತ್ತಲಿನ ನಾಲ್ಕೈದು ಅಡಿ ಪರಿಧಿಯಲ್ಲಿ ಇರುವ ಪುಟ್ಟು ಪುಟಾಣಿ ಕಲ್ಲುಗಳನ್ನೆಲ್ಲಾ ಬಿಡಿ ಬಿಡಿಯಾಗಿ ಒಂದೊದಾಗಿ ಪೂರ್ತಿಯಾಗಿ ಭೂಮಿಯ ಒಳಗೆ ತಳ್ಳುವವರೆಗೆ ಔಟೇ ಆಗುತ್ತಿರಲಿಲ್ಲ!”. ಒಮ್ಮೆ ಅವರು ಆಸ್ಟ್ರೇಲಿಯಾದಲ್ಲಿ ಸೆಂಚುರಿ ಬಾರಿಸಿದಾಗ ಅದರ ವರದಿ ಹೆಚ್ಚು ಕಡಿಮೆ ಈ ಸಾರಾಂಶದಲ್ಲಿತ್ತು. “ಇಂದು ಮೈದಾನದಲ್ಲಿ ಇದ್ದದ್ದು […]

The post ಸುನಿಲ್ ಗವಾಸ್ಕರ್ ಒಬ್ಬ ಮಹಾನ್ ಆಟಗಾರ. appeared first on Hai Sandur kannada fortnightly news paper.

]]>
ಗವಾಸ್ಕರ್ ಹುಟ್ಟಿದ್ದು 1949ರ ಜುಲೈ 10ರಂದು. ಕ್ರಿಕೆಟ್ ಕ್ರೀಡೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕ್ರಿಕೆಟ್ ಶ್ರೇಷ್ಠರ ಸಾಲಿಗೆ ಸೇರಿದವರೀತ. ಬ್ಯಾಟಿಂಗ್ ಮಾಡುವಾಗ ಅವರು ಚೆಂಡನ್ನು ಆಚೆ ಈಚೆ ಅಟ್ಟುವುದಿರಲಿ, ಬ್ಯಾಟಿಂಗ್ ಕ್ರೀಸ್ ಸುತ್ತ ಮುತ್ತಲಿನ ನಾಲ್ಕೈದು ಅಡಿ ಪರಿಧಿಯಲ್ಲಿ ಇರುವ ಪುಟ್ಟು ಪುಟಾಣಿ ಕಲ್ಲುಗಳನ್ನೆಲ್ಲಾ ಬಿಡಿ ಬಿಡಿಯಾಗಿ ಒಂದೊದಾಗಿ ಪೂರ್ತಿಯಾಗಿ ಭೂಮಿಯ ಒಳಗೆ ತಳ್ಳುವವರೆಗೆ ಔಟೇ ಆಗುತ್ತಿರಲಿಲ್ಲ!”. ಒಮ್ಮೆ ಅವರು ಆಸ್ಟ್ರೇಲಿಯಾದಲ್ಲಿ ಸೆಂಚುರಿ ಬಾರಿಸಿದಾಗ ಅದರ ವರದಿ ಹೆಚ್ಚು ಕಡಿಮೆ ಈ ಸಾರಾಂಶದಲ್ಲಿತ್ತು. “ಇಂದು ಮೈದಾನದಲ್ಲಿ ಇದ್ದದ್ದು ಮುನ್ನೂರಿಪ್ಪತ್ತು ಜನ, ಪಕ್ಷಿಗಳು ನೂರ ಎಂಟು, ಗವಾಸ್ಕರ್ ಗಳಿಸಿದ ರನ್ನುಗಳು 121. ಯಾರು ಇದ್ದಾರೆ, ಯಾರು ಇಲ್ಲ ಎಂಬಂತಹ ಯಾವುದೇ ಅಂಶಗಳಿಗೂ ಮಹತ್ವ ಕೊಡದೆ, ತಮ್ಮ ಆಟವನ್ನು ಗಂಭೀರವಾಗಿ ಆಡಿದ ಈತನ ತಾಳ್ಮೆ ಸಾಮರ್ಥ್ಯಗಳೇ ಒಂದು ಅಚ್ಚರಿ!”.

ಒಮ್ಮೆ ಗವಾಸ್ಕರ್ ಅವರನ್ನು ಕೇಳಲಾಯಿತು, “ತಮ್ಮ ಮೂರು ಪ್ರಮುಖ ಸಾಮರ್ಥ್ಯಗಳೇನು?”. ಆತ ತಕ್ಷಣವೇ ಉತ್ತರಿಸಿದರು, “concentration, concentration, concentration”. ಇಡೀ ವಿಶ್ವದಲ್ಲಿ ಎಲ್ಲ ಬಗೆಯ ಆಟಗಾರರೂ ವೇಗದ ಬೌಲಿಂಗಿಗೆ ಸುಲಭದಲ್ಲಿ ತುತ್ತಾಗುತ್ತಿದ್ದ ಸಂದರ್ಭದಲ್ಲಿ ಸುದೃಢವಾಗಿ ನಿಂತು ಆ ಬೌಲಿಂಗ್ ನಿಭಾಯಿಸುತ್ತಿದ್ದ ಆತನ ಶಕ್ತಿ ಅಚಲವಾದದ್ದು”. ಮೊದಲ ಟೆಸ್ಟ್ ಸರಣಿಯಲ್ಲೇ ಬಲಿಷ್ಟ ಬೌಲಿಂಗ್ ತಂಡವಾಗಿದ್ದ ವೆಸ್ಟ್ ಇಂಡೀಜ್ ವಿರುದ್ಧ ಅದ್ಭುತವಾಗಿ ಆಡಿ ಭಾರತಕ್ಕೆ ವಿದೇಶೀ ನೆಲದಲ್ಲಿ ಪ್ರಪ್ರಥಮ ಜಯ ತಂದುಕೊಟ್ಟಿದ್ದು, ಡಾನ್ ಬ್ರಾಡ್ ಮನ್ ಗಳಿಸಿದ ಶತಕಗಳ ದಾಖಲೆ ಮುರಿದು 34 ಶತಕ ಗಳಿಸಿದ್ದು, ಹತ್ತು ಸಾವಿರ ರನ್ನುಗಳ ಗಡಿ ದಾಟಿದ ವಿಶ್ವದ ಪ್ರಥಮ ಬ್ಯಾಟ್ಸ್ ಮನ್ ಆಗಿದ್ದು, 1985ರ ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಅಂಡ್ ಹೆಡ್ಜಸ್ ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಉತ್ತಮ ನಾಯಕತ್ವ ತೋರಿ ಭಾರತ ತಂಡವನ್ನು ಅಜೇಯವಾಗಿ ಟೂರ್ನಿ ಗೆಲ್ಲುವಂತೆ ಮಾಡಿದ್ದು, ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಪ್ರಾರಂಭಿಕ ಟೆಸ್ಟ್ ಆಟಗಾರನಾಗಿದ್ದು ಇವೆಲ್ಲಾ ಖಂಡಿತವಾಗಿ ಭಾರತಕ್ಕೆ ಕ್ರಿಕೆಟ್ಟಿನಲ್ಲಿ ಸಂದ ಹಿರಿಮೆಯ ಅಂಶಗಳು.

ವಿಶ್ವದ ಶ್ರೇಷ್ಠ ಆಟಗಾರರೆಲ್ಲಾ ಕೆರ್ರೀ ಪ್ಯಾಕರ್ ಸೀರೀಸ್ ಕ್ರಿಕೆಟ್ಟಿನಲ್ಲಿ ಆಡಿದಾಗ ಎಷ್ಟೇ ಪ್ರಲೋಭನೆಯಿದ್ದರೂ ಅದರಲ್ಲಿ ಪಾಲ್ಗೊಳ್ಳದೆ ಇದ್ದದ್ದು ಆತನ ನಿಷ್ಠೆಯೇ ಹೌದು. ಆ ಸಮಯದಲ್ಲಿ ಆಡಿದ ತಂಡಗಳ ವಿರುದ್ಧವೆಲ್ಲಾ ಸೆಂಚುರಿ ಭಾರಿಸಿ ತಮ್ಮ ಶತಕಗಳ ಸಂಖ್ಯೆಯನ್ನು ಕೂಡಾ ಹೆಚ್ಚು ಮಾಡಿಕೊಂಡರು ಗವಾಸ್ಕರ್.

ಗವಾಸ್ಕರ್ ಅವರ ಅಂದಿನ ತಾಂತ್ರಿಕ ಶ್ರೇಷ್ಠತೆ, ಅವರಿಗಿದ್ದ ಬ್ಯಾಟಿಂಗ್ ಸಾಮರ್ಥ್ಯ ಏನೇ ಇದ್ದರೂ ಕ್ರಿಕೆಟ್ ಆಟದಲ್ಲಿ ಟೆಸ್ಟ್ ಕ್ರೀಡೆ ಎಂಬುದು ಐದು ದಿನಗಳ ನೀರಸ ಪಂದ್ಯಗಳು ಎಂದು ಭಾವ ಮೂಡಿಸಿದ್ದರಲ್ಲಿ ಅವರ ನಾಯಕತ್ವದ ದಿನಗಳು ಪ್ರಮುಖವಾದದ್ದು. ಮುಂದೆ ಕ್ರಿಕೆಟ್ ಆಟ ತ್ವರಿತ ಗತಿ ಪಡೆದುಕೊಂಡಾಗ ಗವಾಸ್ಕರ್ ಕೂಡ ತಮ್ಮ ಶೈಲಿಯನ್ನು ಬದಲಿಸಿಕೊಂಡರಾದರೂ 1975ರ ವಿಶ್ವಕಪ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡ 60 ಓವರುಗಳಲ್ಲಿ 334 ರನ್ನು ಗಳಿಸಿದರೆ, ವೆಂಕಟ ರಾಘವನ್ ಅವರನ್ನು ನಾಯಕನನ್ನಾಗಿ ಮಾಡಿದರು ಎಂಬ ಕೋಪಕ್ಕೆ 174 ಬಾಲುಗಳನ್ನಾಡಿ 36ರನ್ನುಗಳನ್ನು ಗಳಿಸಿ ಔಟಾಗದೆ ಉಳಿದ ಅವರ ರೀತಿ ನೀತಿಗಳು ಅವರ ವೃತ್ತಿ ಜೀವನದಲ್ಲಿ ಖಂಡಿತವಾಗಿ ಒಂದು ಕಪ್ಪು ಚುಕ್ಕೆ. ಜೊತೆಗೆ ಭಾರತದ ಯುವ ನಾಯಕ ಕಪಿಲ್ ಜೊತೆ ಆಡುವಾಗ ಗವಾಸ್ಕರ್ ತೋರುತ್ತಿದ್ದ ಕಿರಿ ಕಿರಿ ಕೂಡಾ ಜಗಜ್ಜಾಹೀರು.

ಈ ಎಲ್ಲಾ ಪರಿಧಿಗಳ ಆಚೆಯಲ್ಲಿ ಕೂಡಾ ವಿಶ್ವದ ಉತ್ತಮ ಬೌಲರುಗಳಾದ ಆಂಡಿ ರಾಬರ್ಟ್ಸ್, ಇಮ್ರಾನ್ ಖಾನ್, ಮೈಕೇಲ್ ಹೋಲ್ಡಿಂಗ್, ಅಂತಹ ಬೌಲರುಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಕಲಾತ್ಮಕವಾಗಿ ಆಟವಾಡಿದ ಅವರ ಶಕ್ತಿ ಸಾಮರ್ಥ್ಯಗಳು ಮತ್ತು ತಾಂತ್ರಿಕ ಕೌಶಲ್ಯಗಳು ಪ್ರಶ್ನಾತೀತ. ಆತ ಬರೆದ ಪುಸ್ತಕಗಳು, ಪತ್ರಿಕೆಗೆ ಬರೆದ ಅಂಕಣಗಳು, ದೂರದರ್ಶನಗಳಲ್ಲಿ ಕಾರ್ಯಕ್ರಮ ನಡೆಸುವುದು ಮತ್ತು ವೀಕ್ಷಕ ವಿವರಣೆ ನೀಡುವ ಪರಿ ಇವುಗಳೆಲ್ಲಾ ಆತನ ಸಾಮರ್ಥ್ಯಗಳನ್ನು ಎತ್ತಿ ಹೇಳುತ್ತವೆ.

ಹೀಗೆ ವಿವಿಧ ಪರಿಧಿಗಳ ವಿಶಿಷ್ಟತೆಯ ಭಾರತದಲ್ಲಿನ ಸಾರ್ವಕಾಲಿಕ ಕ್ರೀಡಾ ಶ್ರೇಷ್ಠರಲ್ಲಿ ಒಬ್ಬರಾಗಿರುವ ಸುನಿಲ್ ಗವಾಸ್ಕರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

ಕೃಪೆ:- ‘ಕನ್ನಡ ಸಂಪದ’

The post ಸುನಿಲ್ ಗವಾಸ್ಕರ್ ಒಬ್ಬ ಮಹಾನ್ ಆಟಗಾರ. appeared first on Hai Sandur kannada fortnightly news paper.

]]>
https://haisandur.com/2022/07/10/%e0%b2%b8%e0%b3%81%e0%b2%a8%e0%b2%bf%e0%b2%b2%e0%b3%8d-%e0%b2%97%e0%b2%b5%e0%b2%be%e0%b2%b8%e0%b3%8d%e0%b2%95%e0%b2%b0%e0%b3%8d-%e0%b2%92%e0%b2%ac%e0%b3%8d%e0%b2%ac-%e0%b2%ae%e0%b2%b9%e0%b2%be/feed/ 0
ಬಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ,ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ https://haisandur.com/2022/01/05/%e0%b2%ac%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d%e0%b2%9f%e0%b2%bf%e0%b2%a8%e0%b2%b2%e0%b3%8d%e0%b2%b2/ https://haisandur.com/2022/01/05/%e0%b2%ac%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d%e0%b2%9f%e0%b2%bf%e0%b2%a8%e0%b2%b2%e0%b3%8d%e0%b2%b2/#respond Wed, 05 Jan 2022 10:35:39 +0000 http://haisandur.com/?p=23752 ಕ್ರಿಕೆಟ್ ನವಾಬರೆಂದೆನಿಸಿದ್ದ, ಎಪ್ಪತ್ತು-ಎಂಭತ್ತರ ದಶಕದ ಶ್ರೇಷ್ಠ ಕ್ರಿಕೆಟ್ಟಿಗರಲ್ಲಿ ಒಬ್ಬರಾದ, ಭಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ, ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ. ಪಟೌಡಿ ಜನಿಸಿದ ದಿನ 1941ರ ಜನವರಿ 5. ರಾಜಮನೆತನಕ್ಕೆ ಸೇರಿದ ಪಟೌಡಿ ಅವರ ತಂದೆ ಇಫ್ತಿಕರ್ ಆಲಿ ಪಟೌಡಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳನ್ನು ಪ್ರತಿನಿಧಿಸಿದ ಏಕೈಕ ಕ್ರಿಕೆಟಿಗರೆಂದು ಪ್ರಖ್ಯಾತರಾದವರು. ಅಂದಿನ ದಿನಗಳಲ್ಲಿ ಪಟೌಡಿ ಅವರು ಬ್ಯಾಟ್ ಮಾಡುತ್ತಿದ್ದ ರೀತಿ, ಕ್ಷೇತ್ರರಕ್ಷಣೆ ಮಾಡುತ್ತಿದ್ದ ರೀತಿ ಪಡ್ಡೆ ಹುಡುಗರ ನಡುವೆ ಏಕಮಾತ್ರ ಪ್ರೊಫೆಷನಲ್ […]

The post ಬಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ,ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ appeared first on Hai Sandur kannada fortnightly news paper.

]]>
ಕ್ರಿಕೆಟ್ ನವಾಬರೆಂದೆನಿಸಿದ್ದ, ಎಪ್ಪತ್ತು-ಎಂಭತ್ತರ ದಶಕದ ಶ್ರೇಷ್ಠ ಕ್ರಿಕೆಟ್ಟಿಗರಲ್ಲಿ ಒಬ್ಬರಾದ, ಭಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ, ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ.

ಪಟೌಡಿ ಜನಿಸಿದ ದಿನ 1941ರ ಜನವರಿ 5. ರಾಜಮನೆತನಕ್ಕೆ ಸೇರಿದ ಪಟೌಡಿ ಅವರ ತಂದೆ ಇಫ್ತಿಕರ್ ಆಲಿ ಪಟೌಡಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳನ್ನು ಪ್ರತಿನಿಧಿಸಿದ ಏಕೈಕ ಕ್ರಿಕೆಟಿಗರೆಂದು ಪ್ರಖ್ಯಾತರಾದವರು.

ಅಂದಿನ ದಿನಗಳಲ್ಲಿ ಪಟೌಡಿ ಅವರು ಬ್ಯಾಟ್ ಮಾಡುತ್ತಿದ್ದ ರೀತಿ, ಕ್ಷೇತ್ರರಕ್ಷಣೆ ಮಾಡುತ್ತಿದ್ದ ರೀತಿ ಪಡ್ಡೆ ಹುಡುಗರ ನಡುವೆ ಏಕಮಾತ್ರ ಪ್ರೊಫೆಷನಲ್ ಸಂಚರಿಸುತ್ತಿದ್ದ ಚಿತ್ರಣ ನೀಡುತ್ತಿದ್ದವು. ಅತೀ ಚಿಕ್ಕವಯಸ್ಸಿನಲ್ಲಿ ಕ್ರಿಕೆಟ್ ತಂಡದ ನಾಯಕರಾಗಿ, ವೈಯಕ್ತಿಕ ಪ್ರತಿಷ್ಠೆಗೆ ಮಾತ್ರ ಆಡುತ್ತಿದ್ದಾರೇನೋ ಎಂದು ಭಾವ ಹುಟ್ಟಿಸುತ್ತಿದ್ದ ಭಾರತೀಯ ಆಟಗಾರರನ್ನೆಲ್ಲಾ ಒಂದು ತಂಡವಾಗಿಸಿ, ಕ್ರಿಕೆಟ್ ಎಂಬುದು ಒಂದು ‘ಟೀಮ್ ಗೇಮ್’ ಎಂದು ಭಾವನೆ ಮೂಡಿಸಿದ ಕೀರ್ತಿ ಪಟೌಡಿ ಅವರಿಗೆ ಸಲ್ಲುತ್ತದೆ. ಭಾರತೀಯ ಸ್ಪಿನ್ ಬೌಲರುಗಳಾದ ಪ್ರಸನ್ನ, ಚಂದ್ರು, ಬೇಡಿ, ವೆಂಕಟ್ ಅವರುಗಳ ಶಕ್ತಿಯನ್ನು ಪಟೌಡಿ ಸುಂದರವಾಗಿ ಬಳಸಿದ್ದರು. ನಾಡಿನಲ್ಲೆಲ್ಲಾ ಸಂಚರಿಸಿ ಗ್ರಾಮಗಳಲ್ಲಿ ಆಡುತ್ತಿದ್ದ ಪ್ರತಿಭೆಗಳನ್ನೂ ನಾಡಿನ ಮಟ್ಟದಲ್ಲಿ ಆಡಲು ತಂದ ಕೀರ್ತಿ ಕೂಡ ಪಟೌಡಿ ಅವರಿಗೆ ಸಲ್ಲುತ್ತದೆ. ಅವರ ಬೆಳೆಸಿದ ಮಹಾನ್ ಪ್ರತಿಭೆಗಳಲ್ಲಿ ನಮ್ಮ ಜಿ. ಆರ್. ವಿಶ್ವನಾಥ್ ಕೂಡಾ ಒಬ್ಬರು. ಅಂದಿನ ದಿನಗಳಲ್ಲಿ ಭಾರತ ಸೋತರೂ, ಗೆದ್ದರೂ ಅತ್ಯಂತ ಶ್ರೇಷ್ಠ ಕ್ರಿಕೆಟ್ ಕ್ಯಾಪ್ಟನ್ ಎನಿಸಿದ್ದವರು ಪಟೌಡಿ ಮಾತ್ರ. 1976ರ ಸರಣಿಯಲ್ಲಿ ಅತ್ಯಂತ ಸಾಮಾನ್ಯ ತಂಡದ ನಾಯಕರಾಗಿದ್ದ ಪಟೌಡಿ, ಅಂದು ಮಹಾನ್ ತಂಡವಾಗಿ ಭಾರತಕ್ಕೆ ಬಂದಿದ್ದ ಕ್ಲೈವ್ ಲಾಯ್ಡ್ ತಂಡಕ್ಕೆ ಸಮ ಸಮ ಪೈಪೋಟಿ ನೀಡುವಂತೆ ತಂಡವನ್ನು ನಡೆಸಿದ ರೀತಿ ಭಾರತೀಯ ಕ್ರಿಕೆಟ್ ಇತಿಹಾಸದ ಸ್ಮರಣೀಯ ಘಟನೆಯಾಗಿ ದಾಖಲಿಸುವಂತದ್ದಾಗಿದೆ.

ಇಂಗ್ಲೆಂಡಿನ ವಿಂಚೆಸ್ಟರ್ ಕಾಲೇಜಿನಲ್ಲಿ ಓದುವ ದಿನಗಳಲ್ಲಿ ಪಟೌಡಿ ಒಂದು ಸೀಸನ್ನಿನಲ್ಲಿ ಅತ್ಯಧಿಕ 1069 ರನ್ ಗಳಿಸಿ 40 ವರ್ಷಗಳ ಕಾಲ ಇಂಗ್ಲೆಂಡಿನ ಪ್ರಖ್ಯಾತ ಕ್ಯಾಪ್ಟನ್ ಡೌಗ್ಲಸ್ ಜಾರ್ಡನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು. 1960ರ ವರ್ಷದಲ್ಲಿ ಅಪಘಾತವೊಂದರಲ್ಲಿ ಅವರು ತಮ್ಮ ಬಲಗಣ್ಣನ್ನು ಪೂರ್ಣವಾಗಿ ಕಳೆದುಕೊಂಡರು. ಅದಕ್ಕೆ ಸ್ವಲ್ಪ ದಿನ ಮುಂಚಿತವಾಗಿ ಯಾರ್ಕ್ ಷೈರ್ ಪರ ಆಡುತ್ತಿದ್ದ ಅವರು ಎರಡೂ ಇನ್ನಿಂಗ್ಸ್ಗಳಲ್ಲೂ ಭರ್ಜರಿ ಶತಕ ಬಾರಿಸಿದ್ದರು. ಅದೂ ಯಾರ ಎದುರು! ಆ ಕಾಲದ ಶ್ರೇಷ್ಠ ವೇಗದ ಬೌಲರ್ ಎನಿಸಿದ್ದ ಫ್ರೆಡ್ ಟ್ರೂಮನ್ ಬೌಲಿಂಗ್ ಎದುರಿಸಿ. ಅಪಘಾತವಾದ ನಂತರದಲ್ಲಿ ಅವರಿಂದ ಹೂಜಿಯಲ್ಲಿನ ನೀರು ಕೂಡ ತೆಗಯಲು ಸಾಧ್ಯವಿರಲಿಲ್ಲವಂತೆ. ಆದರೆ ಮುಂದಿನ ಹದಿನಾರು ವರ್ಷಗಳಲ್ಲಿ ಆತ ಭಾರತೀಯ ಕ್ರಿಕೆಟ್ ಅನ್ನು ತೆಗೆದುಕೊಂಡು ಹೋದ ಎತ್ತರ ಅತ್ಯಂತ ಮಹತ್ವವಾದದ್ದು. 1967ರ ವರ್ಷದಲ್ಲಿ ತನ್ನ ಇಡೀ ತಂಡ ಕುಸಿಯುತ್ತಿದ್ದ ಸಮಯದಲ್ಲಿ ಲೀಡ್ಸ್ ಪಂದ್ಯದಲ್ಲಿ ಅವರು 64 ಮತ್ತು 148 ರನ್ ಗಳಿಸಿದಾಗ ಬ್ರಿಟಿಷ್ ಸಾಮ್ರಾಜ್ಯ ಆತನನ್ನು ‘ಹೆಡಿಂಗ್ಲೆ ನವಾಬ’ ಎಂದು ಪ್ರಶಂಸಿಸಿತು. ಪಟೌಡಿ ನಾಯಕರಾದ ಮೇಲೆ ಭಾರತ ತಂಡವನ್ನು ಪ್ರಾಂತೀಯವಾಗಿ, ಜಾತಿ, ಧರ್ಮಗಳ ಆಧಾರದ ಮೇಲೆ ಆಯುವ ಪದ್ಧತಿಗೆ ಮಂಗಳ ಬಿದ್ದು, ಉತ್ತಮ ಆಟಗಾರರು ದೇಶದೆಲ್ಲೆಡೆಯಿಂದ ಸ್ಥಾನ ಪಡೆಯುವಂತಾಯಿತು. ಭಾರತೀಯ ಕ್ರಿಕೆಟ್ ಆಟದಲ್ಲಿ ಕೆಲವೊಂದು ಆಟಗಾರರು ಸಾಧನೆ ಮಾಡಿ ಪೊಗರು ತೋರಿದ ಸಾಕಷ್ಟು ಉದಾಹರಣೆಗಳಿವೆ. ಆದರೆ ನಿಜವಾಗಿಯೂ ರಾಜನಾಗಿದ್ದ, ವಿದೇಶಗಳಲ್ಲಿ ಓದಿ ಬೆಳೆದಿದ್ದ ಪಟೌಡಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಎಲ್ಲ ರೀತಿಯ ಆಟಗಾರರನ್ನು ಬೆಳೆಸಿ, ಪ್ರೋತ್ಸಾಹಿಸಿ, ಎಲ್ಲರೊಡನೆ ಒಬ್ಬನಂತೆ ಆಡಿ ನಲಿದದ್ದು ಆತನ ಶ್ರೇಷ್ಠತೆ ಎಂತದ್ದು ಎಂಬುದನ್ನು ತೋರುತ್ತದೆ. ಆತ ನಾಯಕನಾಗಿ ತೋರುತ್ತಿದ್ದ ಧೈರ್ಯ ಅಪ್ರತಿಮವೆನಿಸಿದ್ದು ಅದಕ್ಕಾಗಿಯೇ ಅವರು ‘ಟೈಗರ್ ಪಟೌಡಿ’ ಎಂದೇ ಪ್ರಖ್ಯಾತರು.

ಅವರು ಅಷ್ಟೊಂದು ವರ್ಷ ಕ್ರಿಕೆಟ್ ಆವರಣದಲ್ಲಿದ್ದರೂ ಆಡಿದ್ದು 46 ಟೆಸ್ಟ್ ಪಂದ್ಯ ಮಾತ್ರ. ಅದರಲ್ಲಿ ಒಂದು ದ್ವಿಶತಕ ಸೇರಿದಂತೆ ಆರು ಬಾರಿ ಶತಕ ಹದಿನಾರು ಬಾರಿ ಅರ್ಧಶತಕಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿದ್ದರು.

ಪಟೌಡಿ ಅವರು ವೀಕ್ಷಕ ವಿವರಣೆ ನೀಡುತ್ತಿದ್ದುದು, ಅಧಿಕಾರಯುತವಾಗಿ ಕ್ರಿಕೆಟ್ ಬಗ್ಗೆ ಸುಂದರವಾಗಿ ಮಾತನಾಡುತ್ತಿದ್ದುದನ್ನು ಕೂಡಾ ನಾವು ಮರೆಯುವಂತಿಲ್ಲ. ಅವರು ಅತ್ಯಂತ ಸುರದ್ರೂಪಿ. ಅಂದಿನ ಪ್ರಸಿದ್ಧ ತಾರೆ ಶರ್ಮಿಳಾ ಠಾಕೂರ್ ಅವರ ಪತ್ನಿ. ಅಂದಿನ ದಿನದಲ್ಲಿ ಪ್ರಖ್ಯಾತ ತಾರೆ ಜಯಾ ಬಚ್ಚನ್ ಅವರು ‘ಅತ್ಯಂತ ಸುರದ್ರೂಪಿ ವ್ಯಕ್ತಿ ಯಾರು?’ ಎಂಬ ಪ್ರಶ್ನೆಗೆ ಪಟೌಡಿ ಅವರ ಹೆಸರನ್ನು ಒಂದು ಸಂದರ್ಶನದಲ್ಲಿ ಹೇಳಿದ್ದು ಇನ್ನೂ ನೆನಪಿದೆ.

ಕಪಿಲ್ ದೇವ್ ಅವರ ಬರಹವನ್ನು ಓದುತ್ತಿದ್ದೆ. ಕಪಿಲ್ ಹೇಳುತ್ತಾರೆ, “ಪಟೌಡಿ ಅಂತಹ ಶ್ರೇಷ್ಠ ಕ್ರಿಕೆಟ್ಟಿಗ ಭಾರತ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದಿದ್ದರೆ ಎಷ್ಟು ಚೆನ್ನಿತ್ತು ಅಂತ. ಅಧಿಕಾರ ಎನ್ನುವುದು ಯೋಗ್ಯರಿಗೆ ದಕ್ಕುವುದು ಅಪರೂಪ. ಆದರೆ ಪಟೌಡಿ ಅವರಿಗೆ ತಂಡದ ನಾಯಕತ್ವ ದೊರೆತಾಗ ಆಟದಲ್ಲಿನ ಸೋಲು ಗೆಲುವುಗಳ ಆಚೆಯಲ್ಲಿ ಅವರು ಮೆರೆದ ಶ್ರೇಷ್ಠತೆ ಮತ್ತು ಉಳಿಸಿಕೊಂಡ ಉತ್ತಮ ಹೆಸರು ವಿಶ್ವದಲ್ಲಿ ಅಪರೂಪವಾದದ್ದು”.

ನಮ್ಮ ಕ್ರಿಕೆಟ್ ತಿಳುವಳಿಕೆಯ ಪ್ರಾರಂಭದ ದಿನಗಳಲ್ಲಿ ಎಲ್ಲ ರೀತಿಯಲ್ಲಿ ಸರ್ವ ಮಾನ್ಯರಾಗಿದ್ದ, ಕ್ರಿಕೆಟ್ಟಿನ ನವಾಬರೆನಿಸಿದ್ದ, ನಮ್ಮ ಹಿರಿಯರು ದಂತಕತೆಯಂತೆ ವರ್ಣಿಸುತ್ತಿದ್ದ ನವಾಬ್ ಪಟೌಡಿ ಅವರು ಸೆಪ್ಟೆಂಬರ್ 22, 2011ರಂದು ಈ ಲೋಕವನ್ನಗಲಿದರು. ಕ್ರಿಕೆಟ್ ಪ್ರಿಯದೇಶವಾದ ಭಾರತದಲ್ಲಿ ಎಲ್ಲ ಸೋಲು ಗೆಲುವುಗಳಾಚೆಗೆ ಪಟೌಡಿ ಅವರ ಪ್ರಖ್ಯಾತಿ ಚಿರಶಾಶ್ವತ.

ಕೃಪೆ:- ‘ಕನ್ನಡ ಸಂಪದ’

The post ಬಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ,ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ appeared first on Hai Sandur kannada fortnightly news paper.

]]>
https://haisandur.com/2022/01/05/%e0%b2%ac%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d%e0%b2%9f%e0%b2%bf%e0%b2%a8%e0%b2%b2%e0%b3%8d%e0%b2%b2/feed/ 0
ಕ್ರಿಕೆಟ್ ಗೆ ಅಮೋಘ ಮಿಂಚಿನ ಕ್ಷಣಗಳ ಬದಲಾವಣೆ ತಂದ ಕೃಷ್ಣಮಾಚಾರಿ ಶ್ರೀಕಾಂತ್.. https://haisandur.com/2021/12/21/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%97%e0%b3%86-%e0%b2%85%e0%b2%ae%e0%b3%8b%e0%b2%98-%e0%b2%ae%e0%b2%bf%e0%b2%82%e0%b2%9a%e0%b2%bf%e0%b2%a8-%e0%b2%95/ https://haisandur.com/2021/12/21/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%97%e0%b3%86-%e0%b2%85%e0%b2%ae%e0%b3%8b%e0%b2%98-%e0%b2%ae%e0%b2%bf%e0%b2%82%e0%b2%9a%e0%b2%bf%e0%b2%a8-%e0%b2%95/#respond Tue, 21 Dec 2021 02:28:31 +0000 http://haisandur.com/?p=23219 ಕ್ರಿಕೆಟ್ ಹುಚ್ಚಿನ ಭಾರತೀಯರಾದ ನಮಗೆ ಭಾರತೀಯ ಕ್ರಿಕೆಟ್ ಹೊಸ ಪರಂಪರೆಯಲ್ಲಿ ನೆನಪಾಗುವ ಹೆಸರುಗಳಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಪ್ರಮುಖರು. ಇಂದು ಅವರ ಹುಟ್ಟಿದ ಹಬ್ಬ. ಅವರು ಹುಟ್ಟಿದ್ದು ಡಿಸೆಂಬರ್ 21, 1959ರಲ್ಲಿ ಸುನಿಲ್ ಗಾವಾಸ್ಕರ್ ಯುಗದ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ಅಪೂರ್ವ ರೀತಿಯಲ್ಲಿ ರೂಪುಗೊಂಡು ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗು ತಂದವರು ಶ್ರೀಕಾಂತ್. ಒಂದು ಕಡೆ ಗಾವಾಸ್ಕರ್ ಅವರು, ಬ್ಯಾಟ್ ಮಾಡುವಾಗ ಅವರ ಸುತ್ತಲು ಇರುವ ಒಂದೊಂದು […]

The post ಕ್ರಿಕೆಟ್ ಗೆ ಅಮೋಘ ಮಿಂಚಿನ ಕ್ಷಣಗಳ ಬದಲಾವಣೆ ತಂದ ಕೃಷ್ಣಮಾಚಾರಿ ಶ್ರೀಕಾಂತ್.. appeared first on Hai Sandur kannada fortnightly news paper.

]]>
ಕ್ರಿಕೆಟ್ ಹುಚ್ಚಿನ ಭಾರತೀಯರಾದ ನಮಗೆ ಭಾರತೀಯ ಕ್ರಿಕೆಟ್ ಹೊಸ ಪರಂಪರೆಯಲ್ಲಿ ನೆನಪಾಗುವ ಹೆಸರುಗಳಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಪ್ರಮುಖರು. ಇಂದು ಅವರ ಹುಟ್ಟಿದ ಹಬ್ಬ. ಅವರು ಹುಟ್ಟಿದ್ದು ಡಿಸೆಂಬರ್ 21, 1959ರಲ್ಲಿ

ಸುನಿಲ್ ಗಾವಾಸ್ಕರ್ ಯುಗದ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ಅಪೂರ್ವ ರೀತಿಯಲ್ಲಿ ರೂಪುಗೊಂಡು ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗು ತಂದವರು ಶ್ರೀಕಾಂತ್. ಒಂದು ಕಡೆ ಗಾವಾಸ್ಕರ್ ಅವರು, ಬ್ಯಾಟ್ ಮಾಡುವಾಗ ಅವರ ಸುತ್ತಲು ಇರುವ ಒಂದೊಂದು ಕಲ್ಲನ್ನೂ ನೆಲಕ್ಕೆ ಅದುಮಿ ನಿಧಾನವಾಗಿ ಹೇಗೆ ಒಂದೊಂದೂ ಚೆಂಡನ್ನು ಆಡಲಿ ಎಂದು ನಿರ್ಧರಿಸುವಷ್ಟರಲ್ಲಿ ಶ್ರೀಕಾಂತ್ ಒಂದಷ್ಟು ಬೌಂಡರಿ, ಸಿಕ್ಸರ್ ಬಾರಿಸಿಯೋ ಇಲ್ಲ ಔಟ್ ಆಗಿಯೋ ಪಾದರಸದಂತೆ ಚಲಿಸುತ್ತಿದ್ದವರು.

ಭಾರತ 1983ರಲ್ಲಿ ವಿಶ್ವಕಪ್ ಗೆದ್ದಾಗ ಮತ್ತು ನಂತರದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಾಗಿನ ದಿನಗಳ ಆಸುಪಾಸಿನಲ್ಲಿ ಭಾರತದ ಆಸೆ ಆಕಾಂಕ್ಷೆಗಳು ಮತ್ತು ಆಟದ ಮನಮೊಹತೆಗಳೆಲ್ಲಾ ಶ್ರೀಕಾಂತ್ ಸುತ್ತ ಸುತ್ತುತ್ತಿದ್ದವು. ಆತ ಬಹಳಷ್ಟು ವೇಳೆ ತನ್ನ ವಿಕೆಟ್ ಅನ್ನು ಬೇಜವಾಬ್ದಾರಿಯಿಂದ ಕಳೆದು ಕೊಳ್ಳುತ್ತಿದ್ದಾನೆ ಎಂದು ನೋವಾಗುವುದಿತ್ತಾದರೂ ಆತ ಭಾರತೀಯ ಕ್ರಿಕೆಟ್ಟಿಗೆ ಅಮೋಘ ಮಿಂಚಿನ ಕ್ಷಣಗಳನ್ನೂ ಬದಲಾವಣೆಯನ್ನು ತಂದ ಕ್ರಿಕೆಟ್ಟಿಗರಲ್ಲಿ ಪ್ರಮುಖರು.

1983ರ ವಿಶ್ವ ಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದವರಿಗೆ ಶ್ರೀಕಾಂತ್ ಆಂಡಿ ರಾಬರ್ಟ್ಸ್ ಅಂತಹ ಬಿರುಸಿನ ಬೌಲರಿಗೆ ಕುಳಿತು ಬಾರಿಸಿದ ಮನಮೋಹಕ ಹೊಡೆತ ಜೀವನ ಪರ್ಯಂತ ನೆನಪಿನಲ್ಲಿರುತ್ತದೆ. ಯಾರಿಗೂ, ಯಾವ ಬಿರುಸಿಗೂ, ಯಾವ ಬೌಲರಿಗೂ, ಗಾವಾಸ್ಕರ್ ಅಂತಹ ಎದುರಿನಲ್ಲಿದ್ದವ ತಾಳ್ಮೆ ತಾಳ್ಮೆ ಎಂದು ಹೇಳುತ್ತಿದ್ದ ಮಾತು ಯಾವುದಕ್ಕೂ ಕೇರ್ ಮಾಡದೆ ತನ್ನ ಸಾಮರ್ಥ್ಯದಲ್ಲಿ ಅಪಾರ ಆತ್ಮ ವಿಶ್ವಾಸ ಇಟ್ಟು ಆಡುತ್ತಿದ್ದ ಆಟಗಾರ ಶ್ರೀಕಾಂತ್.

ಒಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲು 260 ರನ್ ಗಳಿಸಬೇಕಿತ್ತು. ಭಾರತ ಬೇಗ ಎರಡು ವಿಕೆಟ್ ಕಳೆದುಕೊಂಡು ದುಸ್ತಿತಿಯಲ್ಲಿತ್ತು. ಆ ಸಮಯದಲ್ಲಿ ಚೇತನ್ ಶರ್ಮನನ್ನು ನಾಲ್ಕನೇ ಆಟಗಾರನನ್ನಾಗಿ ಕಳುಹಿಸಿದ ನಾಯಕ ಶ್ರೀಕಾಂತ್. ಆ ಆಟದಲ್ಲಿ ಚೇತನ್ ಶರ್ಮ ಶತಕದ ಮೂಲಕ ಭಾರತ ಗೆದ್ದಿತು. ಇದು ಶ್ರೀಕಾಂತ್ ಹೇಗೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೆದರದವ ಎಂಬುದಕ್ಕೆ ನಿದರ್ಶನ. ಒಂದು ದಿನದ ಪಂದ್ಯವೊಂದರಲ್ಲಿ 50 ರನ್ ಮತ್ತು 5 ವಿಕೆಟ್ ಪಡೆದ ಏಕೈಕ ಆಟಗಾರ ಆತ. ಟೆಸ್ಟ್ನಲ್ಲಿ 2000 ಮತ್ತು ಒಂದು ದಿನದ ಪಂದ್ಯದಲ್ಲಿ 4000 ರನ್ ಗಡಿ ದಾಟಿದ ಆಟಗಾರನಾತ.

ಹಲವು ವರ್ಷಗಳ ಕಾಲ ಶ್ರೀಕಾಂತ್ ಅವರು ಭಾರತ ಕ್ರಿಕೆಟ್ಟಿನ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದರು.

The post ಕ್ರಿಕೆಟ್ ಗೆ ಅಮೋಘ ಮಿಂಚಿನ ಕ್ಷಣಗಳ ಬದಲಾವಣೆ ತಂದ ಕೃಷ್ಣಮಾಚಾರಿ ಶ್ರೀಕಾಂತ್.. appeared first on Hai Sandur kannada fortnightly news paper.

]]>
https://haisandur.com/2021/12/21/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%97%e0%b3%86-%e0%b2%85%e0%b2%ae%e0%b3%8b%e0%b2%98-%e0%b2%ae%e0%b2%bf%e0%b2%82%e0%b2%9a%e0%b2%bf%e0%b2%a8-%e0%b2%95/feed/ 0
ಕ್ರಿಕೆಟ್ ಲೋಕದ ಮಹಾನ್ ಚೇತನ ರಣಜಿತ್ಸಿನ್ಹಜಿ ಹೆಸರು ಅಜರಾಮರವಾದದ್ದು https://haisandur.com/2021/09/11/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%b2%e0%b3%8b%e0%b2%95%e0%b2%a6-%e0%b2%ae%e0%b2%b9%e0%b2%be%e0%b2%a8%e0%b3%8d-%e0%b2%9a%e0%b3%87%e0%b2%a4%e0%b2%a8/ https://haisandur.com/2021/09/11/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%b2%e0%b3%8b%e0%b2%95%e0%b2%a6-%e0%b2%ae%e0%b2%b9%e0%b2%be%e0%b2%a8%e0%b3%8d-%e0%b2%9a%e0%b3%87%e0%b2%a4%e0%b2%a8/#respond Sat, 11 Sep 2021 10:38:45 +0000 http://haisandur.com/?p=20102 ಕ್ರಿಕೆಟ್ ಬಗೆಗೆ ಅಪಾರ ಆಸಕ್ತಿ ಹೊಂದಿರುವ ಭಾರತ ದೇಶದಲ್ಲಿ ಕುಮಾರ್ ಶ್ರೀ ರಣಜಿತಸಿನ್ಹಜಿ ಅವರ ಹೆಸರು ಅಜರಾಮರವಾದದ್ದು. ಕೆ.ಎಸ್. ರಣಜಿತ್ಸಿನ್ಹಜಿ ಅಥವ ರಣಜಿ ಎಂದು ಪ್ರಖ್ಯಾತರಾದ ಇವರ ಹೆಸರಿನಲ್ಲೇ ಭಾರತದಾದ್ಯಂತ ನಡೆಯುವ ರಣಜಿ ಟ್ರೋಫಿ ಪಂದ್ಯಗಳು ನಡೆಯುತ್ತಿರುವುದು. ಭಾರತೀಯ ರಾಜಮನೆತನಕ್ಕೆ ಸೇರಿದವರಾದ ರಣಜಿತ್ಸಿನ್ಹಜಿ ಅವರು ಇಂಗ್ಲಿಷ್ ಟೆಸ್ಟ್ ಕ್ರಿಕೆಟ್ ತಂಡದ ಸದಸ್ಯರಾಗಿ ಆಡಿ, ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟುದಾರರಲ್ಲೊಬ್ಬರೆಂಬ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ.ರಣಜಿತ್ಸಿನ್ಹಜಿ ಅವರು ತಮ್ಮ ಆಟದಲ್ಲಿ ಹೆಚ್ಚಿನ ರನ್ನುಗಳನ್ನು ಪೇರಿಸಿರುವುದಕ್ಕೆ ಮಾತ್ರವಲ್ಲದೆ ತಮ್ಮದೇ ರೀತಿಯ ವೈಶಿಷ್ಟ್ಯಮಯ ಕ್ರಿಕೆಟ್ […]

The post ಕ್ರಿಕೆಟ್ ಲೋಕದ ಮಹಾನ್ ಚೇತನ ರಣಜಿತ್ಸಿನ್ಹಜಿ ಹೆಸರು ಅಜರಾಮರವಾದದ್ದು appeared first on Hai Sandur kannada fortnightly news paper.

]]>
ಕ್ರಿಕೆಟ್ ಬಗೆಗೆ ಅಪಾರ ಆಸಕ್ತಿ ಹೊಂದಿರುವ ಭಾರತ ದೇಶದಲ್ಲಿ ಕುಮಾರ್ ಶ್ರೀ ರಣಜಿತಸಿನ್ಹಜಿ ಅವರ ಹೆಸರು ಅಜರಾಮರವಾದದ್ದು.

ಕೆ.ಎಸ್. ರಣಜಿತ್ಸಿನ್ಹಜಿ ಅಥವ ರಣಜಿ ಎಂದು ಪ್ರಖ್ಯಾತರಾದ ಇವರ ಹೆಸರಿನಲ್ಲೇ ಭಾರತದಾದ್ಯಂತ ನಡೆಯುವ ರಣಜಿ ಟ್ರೋಫಿ ಪಂದ್ಯಗಳು ನಡೆಯುತ್ತಿರುವುದು.

ಭಾರತೀಯ ರಾಜಮನೆತನಕ್ಕೆ ಸೇರಿದವರಾದ ರಣಜಿತ್ಸಿನ್ಹಜಿ ಅವರು ಇಂಗ್ಲಿಷ್ ಟೆಸ್ಟ್ ಕ್ರಿಕೆಟ್ ತಂಡದ ಸದಸ್ಯರಾಗಿ ಆಡಿ, ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟುದಾರರಲ್ಲೊಬ್ಬರೆಂಬ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ.ರಣಜಿತ್ಸಿನ್ಹಜಿ ಅವರು ತಮ್ಮ ಆಟದಲ್ಲಿ ಹೆಚ್ಚಿನ ರನ್ನುಗಳನ್ನು ಪೇರಿಸಿರುವುದಕ್ಕೆ ಮಾತ್ರವಲ್ಲದೆ ತಮ್ಮದೇ ರೀತಿಯ ವೈಶಿಷ್ಟ್ಯಮಯ ಕ್ರಿಕೆಟ್ ಹೊಡೆತಗಳಿಗೂ ಪ್ರಖ್ಯಾತಿ ಪಡೆದಿದ್ದರು.

‘ಬ್ಲ್ಯಾಕ್ ಪ್ರಿನ್ಸ್ ಆಫ್ ದಿ ಕ್ರಿಕೆಟರ್ಸ್’ ಎಂಬ ಪ್ರಖ್ಯಾತಿಗೆ ಪಾತ್ರರಾದ ರಣಜಿತ್ಸಿನ್ಹಜಿ 1872ರ ಸೆಪ್ಟೆಂಬರ್ 10ರಂದು ಗುಜರಾತಿನ ಕಥಿಯಾವರ್ ಜಿಲ್ಲೆಯ ಸರೋದಾರ್ ಎಂಬಲ್ಲಿ,ನವಾನಗರ್ ರಾಜಮನೆತನದಲ್ಲಿ ಜನಿಸಿದರು.ರಾಜಕೋಟಿನ ರಾಜ್‍ಕುಮಾರ್ ಕಾಲೇಜಿನಲ್ಲಿ ವ್ಯಾಸಂಗ ಪೂರೈಸಿದ ನಂತರದಲ್ಲಿ ರಣಜಿತ್ಸಿನ್ಹಜಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಹ್ಯಾರೋ ಅಂಡ್ ಟ್ರಿನಿಟಿ ಕಾಲೇಜಿನಲ್ಲಿ ತಮ್ಮ ವ್ಯಾಸಂಗವನ್ನು ಕೈಗೊಂಡರು.

ತಮ್ಮ ಕೇಂಬ್ರಿಡ್ಜ್ ವಿದಾರ್ಥಿ ದೆಸೆಯಲ್ಲಿ ವ್ಯವಸ್ಥಿತ ಕ್ರಿಕೆಟ್ ಆಟಗಾರಿಕೆಯನ್ನು ಪ್ರಾರಂಭಿಸಿದ ರಣಜಿತ್ಸಿನ್ಹಜಿ, ತಮ್ಮ ಓದಿನ ನಂತರದಲ್ಲಿ ಸಸ್ಸೆಕ್ಸ್ ತಂಡದ ಪ್ರಮುಖ ಆಟಗಾರರಾದರು. ಮೇ 1895ರಲ್ಲಿ ಸಸ್ಸೆಕ್ಸ್ ಪರವಾಗಿ ಆಡಿದ ಪ್ರಥಮ ಪಂದ್ಯದಲ್ಲೇ ಅವರು ಎಂ. ಸಿ. ಸಿ ತಂಡದ ವಿರುದ್ಧ 77 ಮತ್ತು 150 ರನ್ನುಗಳನ್ನು ಪೇರಿಸಿದರು. ಈ ದಿನಗಳಲ್ಲಿ ಕ್ರೀಡೆ, ರಾಜಕೀಯ, ಬೋಧನೆ, ಬರಹಗಳಿಗೆ ಪ್ರಸಿದ್ಧರಾದ ಚಾರ್ಲ್ಸ್ ಬರ್ಗೆಸ್ ಫ್ರೈ ಅವರು ರಣಜಿತ್ಸಿನ್ಹಜಿ ಅವರ ಆಪ್ತ ಗೆಳೆಯರಾಗಿದ್ದರು.

ರಣಜಿತ್ಸಿನ್ಹಜಿ ಅವರು 1896ರ ವರ್ಷದ ಜುಲೈ 16ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಪಾದಾರ್ಪಣೆ ಮಾಡುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಆಡಿದ ಪ್ರಥಮ ಭಾರತೀಯರೆನಿಸಿದರು.ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಮೊದಲ ಇನ್ನಿಂಗ್ಸಿನಲ್ಲಿ 62 ರನ್ನುಗಳನ್ನೂ, ಎರಡನೇ ಇನ್ನಿಂಗ್ಸಿನಲ್ಲಿ ಔಟಾಗದೆ 154 ರನ್ನುಗಳನ್ನೂ ಗಳಿಸಿ ಪ್ರಖ್ಯಾತರಾದರು. ಅವರ ಬ್ಯಾಟಿಂಗಿನಲ್ಲಿದ್ದ ಕ್ಷಿಪ್ರತೆ ಮತ್ತು ಅಸಾಂಪ್ರದಾಯಿಕ ಕ್ರಿಕೆಟ್ ಹೊಡೆತಗಳು ಎಲ್ಲ ಕ್ರಿಕೆಟ್ ಪ್ರೇಮಿಗಳ ಮನೆಮಾತಾಗಿಬಿಟ್ಟವು.

1897-98ರ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ ರಣಜಿತ್ಸಿನ್ಹಜಿ ಅವರು ತಾವಾಡಿದ ಒಟ್ಟಾರೆ ಪಂದ್ಯಗಳಲ್ಲಿ ಒಟ್ಟು 1157ರನ್ನುಗಳನ್ನು 60.89 ಸರಾಸರಿಯಲ್ಲಿ ಕಲೆಹಾಕಿದ್ದರು.1899-1903ರ ಅವಧಿಯಲ್ಲಿ ಸಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿದ್ದ ಅವರು 1904ರ ವರ್ಷದಲ್ಲಿ ತಮ್ಮ ರಾಜಮನೆತನದ ಕೆಲವೊಂದು ಜವಾಬ್ಧಾರಿಗಳನ್ನು ನಿರ್ವಹಿಸಲು ಭಾರತಕ್ಕೆ ಹಿಂದಿರುಗಬೇಕಾಯಿತು. ಮುಂದೆ ಅವರು ಸುಮಾರು 5 ವರ್ಷಗಳ ಕಾಲ ಕ್ರಿಕೆಟ್ ಆಟದಿಂದ ಹೊರಗಿದ್ದರಾದರೂ 1908ರಿಂದ 1912ರ ಅವಧಿಯಲ್ಲಿ ಪುನಃ ಹಲವು ಪ್ರಥಮ ದರ್ಜೆ ಪಂದ್ಯಗಳನ್ನಾಡಿದರು. ಆದರೆ ರಣಜಿತ್ಸಿನ್ಹಜಿ ಅವರು ಕೊನೆಯ ಟೆಸ್ಟ್ ಪಂದ್ಯ ಆಡಿದ್ದು ಮಾತ್ರ ಜುಲೈ 24, 1902ರಂದು. ಆ ಪಂದ್ಯದಲ್ಲಿ ಅವರು ಕೇವಲ 6 ರನ್ನುಗಳನ್ನು ಮಾತ್ರ ಗಳಿಸಿದ್ದರು.

ಒಟ್ಟಾರೆ ಹದಿನೈದು ಟೆಸ್ಟ್ ಪಂದ್ಯಗಳನ್ನು ಆಡಿದ ರಣಜಿತ್ಸಿನ್ಹಜಿ ಅವರು ಒಟ್ಟು 989 ರನ್ನುಗಳನ್ನು ಗಳಿಸಿದ್ದು, ಅವುಗಳಲ್ಲಿ 2 ಶತಕಗಳು ಹಾಗೂ 6 ಅರ್ಧ ಶತಕಗಳಿದ್ದವು. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 44.95 ಹಾಗೂ ಇನ್ನಿಂಗ್ಸ್ ಒಂದರಲ್ಲಿ ಗಳಿಸಿದ ಅತಿ ಹೆಚ್ಚಿನ ರನ್ನುಗಳು 175 ಆಗಿತ್ತು.ಒಂದು ಟೆಸ್ಟ್ ಪಂದ್ಯದಲ್ಲಿ 39ರನ್ನುಗಳನ್ನಿತ್ತು ಒಂದು ವಿಕೆಟ್ ಉರುಳಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ಟಿನಲ್ಲಿ ಒಟ್ಟು 307 ಪಂದ್ಯಗಳನ್ನಾಡಿದ್ದ ರಣಜಿತ್ಸಿನ್ಹಜಿ ಅವರು 24,692 ರನ್ನುಗಳ ಬೃಹತ್ ಸಾಧನೆ ಮಾಡಿದ್ದು ಅದರಲ್ಲಿ 72 ಶತಕಗಳು, 109 ಅರ್ಧಶತಕಗಳೂ ಇದ್ದು, ಸರಾಸರಿ 56.37 ಹಾಗೂ ಅತಿ ಗರಿಷ್ಟ ಔಟಾಗದ 285 ರನ್ನುಗಳ ಗಳಿಕೆಯೂ ಸೇರಿತ್ತು.

1907ರ ವರ್ಷದಲ್ಲಿ ‘ಮಹಾರಾಜಾ ಜಾಮ್ ಸಾಹಿಬ್ ಆಫ್ ನವಾನಗರ್’ ಎಂದು ಘೋಷಿಸಲ್ಪಟ್ಟ ರಣಜಿತ್ಸಿನ್ಹಜಿ ಅವರು ತಮ್ಮ ಪ್ರಜೆಗಳಿಂದ ಕರುಣಾಳು ರಾಜರೆಂದು ಹೆಸರು ಪಡೆದಿದ್ದರು.ಭಾರತವನ್ನು ಲೀಗ್ ಆಫ್ ನೇಷನ್ಸ್ ಸಂಘಟನೆಯಲ್ಲಿ ಪ್ರತಿನಿಧಿಸಿದ್ದ ಅವರನ್ನು ಅಧಿಕೃತವಾಗಿ ಹಿಸ್ ಹೈನೆಸ್ ಶ್ರೀ ಸರ್ ರಣಜಿತ್ಸಿನ್ಹಜಿ ವಿಭಾಜಿ, ಜಾಮ್ ಸಾಹಿಬ್ ಆಫ್ ನವಾನಗರ್ ಎಂದು ಕರೆಯಲಾಗುತ್ತಿತ್ತು.ಇವರ ಸಹೋದರ ಪುತ್ರರಾದ ದುಲೀಪ್ ಸಿನ್ಹಜಿ ಅವರು ಕೂಡಾ ಇಂಗ್ಲೆಂಡಿನ ಪರವಾಗಿ ಭಾರತೀಯ ಕ್ರಿಕೆಟ್ ಆಟಗಾರರಾಗಿದ್ದರು,ತಮ್ಮ ಜೀವನ ಪರ್ಯಂತ ವಿವಾಹ ಬಂಧನದಿಂದ ಮುಕ್ತರಾಗಿದ್ದ ರಣಜಿತ್ಸಿನ್ಹಜಿ ಅವರು 1933ರ ಏಪ್ರಿಲ್ 2ರಂದು
ಈ ಲೋಕವನ್ನಗಲಿದರು.

1935ರ ವರ್ಷದಲ್ಲಿ ಪಾಟಿಯಾಲದ ದೊರೆ ಭೂಪಿಂದರ್ ಸಿಂಗ್ ಅವರು ರಣಜಿತ್ಸಿನ್ಹಜಿ ಅವರ ಹೆಸರಿನಲ್ಲಿ ರಣಜಿ ಟ್ರೋಫಿ ಪಂದ್ಯಗಳನ್ನು ಆರಂಭಿಸುವುದರ ಮೂಲಕ ದೇಶದ ಪ್ರತಿಷ್ಟಿತ ರಣಜಿ ಪಂದ್ಯಾವಳಿಗಳಿಗೆ ಪ್ರಾರಂಭಿಕ ಸ್ವರೂಪವನ್ನು ಕೊಟ್ಟರು. ಇಂದು ಇದು ದೇಶಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಆಟಗಾರರನ್ನು ತಯಾರು ಮಾಡುವ ಪ್ರತಿಷ್ಟಿತ ವೇದಿಕೆಯಾಗಿ ಹೊರಹೊಮ್ಮಿದೆ.ಹೀಗಾಗಿ ರಣಜಿತಸಿನ್ಹಜಿ ಅವರು ಭಾರತೀಯ ಕ್ರಿಕೆಟ್ಟಿನೊಂದಿಗೆ ಅಜರಾಮರರಾಗಿದ್ದಾರೆ.

ಈ ಮಹಾನ್ ಚೇತನಕ್ಕೆ ನಮ್ಮ ನಮನ.

The post ಕ್ರಿಕೆಟ್ ಲೋಕದ ಮಹಾನ್ ಚೇತನ ರಣಜಿತ್ಸಿನ್ಹಜಿ ಹೆಸರು ಅಜರಾಮರವಾದದ್ದು appeared first on Hai Sandur kannada fortnightly news paper.

]]>
https://haisandur.com/2021/09/11/%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%b2%e0%b3%8b%e0%b2%95%e0%b2%a6-%e0%b2%ae%e0%b2%b9%e0%b2%be%e0%b2%a8%e0%b3%8d-%e0%b2%9a%e0%b3%87%e0%b2%a4%e0%b2%a8/feed/ 0
ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಪ್ರಥಮ ಬಾರತೀಯ ಆಟಗಾರ..!! https://haisandur.com/2021/09/11/%e0%b2%b2%e0%b2%be%e0%b2%b2%e0%b2%be-%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5%e0%b3%8d-%e0%b2%9f%e0%b3%86%e0%b2%b8%e0%b3%8d%e0%b2%9f%e0%b3%8d-%e0%b2%95%e0%b3%8d%e0%b2%b0%e0%b2%bf/ https://haisandur.com/2021/09/11/%e0%b2%b2%e0%b2%be%e0%b2%b2%e0%b2%be-%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5%e0%b3%8d-%e0%b2%9f%e0%b3%86%e0%b2%b8%e0%b3%8d%e0%b2%9f%e0%b3%8d-%e0%b2%95%e0%b3%8d%e0%b2%b0%e0%b2%bf/#respond Sat, 11 Sep 2021 10:30:47 +0000 http://haisandur.com/?p=20098 ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಪ್ರಥಮ ಭಾರತೀಯ ಆಟಗಾರರು. ಸ್ವತಂತ್ರ ಭಾರತದ ಕ್ರಿಕೆಟ್ ತಂಡದ ಪ್ರಥಮ ನಾಯಕರಾದ ಅವರು 1952 ವರ್ಷದಲ್ಲಿ ಪಾಕಿಸ್ಥಾನದ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತೀಯ ತಂಡದ ನಾಯಕರಾಗಿ ಭಾರತಕ್ಕೆ ಪ್ರಪ್ರಥಮ ಸರಣಿ ಜಯ ತಂದುಕೊಟ್ಟರು. ಲಾಲಾ ಅಮರನಾಥ್ 1911ರ ಸೆಪ್ಟೆಂಬರ್ 11ರಂದು ಪಂಜಾಬಿನ ಕಪುರ್ಥಲದಲ್ಲಿ ಜನಿಸಿದರು. ಮುಂದೆ ಅವರು ಬೆಳೆದದ್ದು ಲಾಹೋರಿನಲ್ಲಿ. 1933ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮುಂಬೈನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.ಉತ್ತಮ ಬೌಲರ್ ಕೂಡಾ ಆಗಿದ್ದ […]

The post ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಪ್ರಥಮ ಬಾರತೀಯ ಆಟಗಾರ..!! appeared first on Hai Sandur kannada fortnightly news paper.

]]>
ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಪ್ರಥಮ ಭಾರತೀಯ ಆಟಗಾರರು. ಸ್ವತಂತ್ರ ಭಾರತದ ಕ್ರಿಕೆಟ್ ತಂಡದ ಪ್ರಥಮ ನಾಯಕರಾದ ಅವರು 1952 ವರ್ಷದಲ್ಲಿ ಪಾಕಿಸ್ಥಾನದ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತೀಯ ತಂಡದ ನಾಯಕರಾಗಿ ಭಾರತಕ್ಕೆ ಪ್ರಪ್ರಥಮ ಸರಣಿ ಜಯ ತಂದುಕೊಟ್ಟರು.

ಲಾಲಾ ಅಮರನಾಥ್ 1911ರ ಸೆಪ್ಟೆಂಬರ್ 11ರಂದು ಪಂಜಾಬಿನ ಕಪುರ್ಥಲದಲ್ಲಿ ಜನಿಸಿದರು. ಮುಂದೆ ಅವರು ಬೆಳೆದದ್ದು ಲಾಹೋರಿನಲ್ಲಿ. 1933ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮುಂಬೈನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.ಉತ್ತಮ ಬೌಲರ್ ಕೂಡಾ ಆಗಿದ್ದ ಲಾಲಾ ಡಾನ್ ಬ್ರಾಡ್ಮನ್ ಅವರನ್ನು ಹಿಟ್ ವಿಕೆಟ್ ಔಟ್ ಮಾಡಿದ ವಿಶ್ವದ ಏಕೈಕ ಬೌಲರ್ ಎನಿಸಿದ್ದಾರೆ.

ವಿಶ್ವಮಹಾಯುದ್ದಕ್ಕೆ ಮುಂಚೆ ಲಾಲಾ ಅಮರನಾಥ್ ಅವರು ಆಡಿದ್ದು ಕೇವಲ 3 ಟೆಸ್ಟ್. ಮಹಾಯುದ್ಧದ ಕಾರಣ ಅಧಿಕೃತ ಟೆಸ್ಟ್ ಪಂದ್ಯಗಳೇ ನಡೆಯದ ಕಾರಣ ಲಾಲಾ ಅಮರನಾಥ್ ಅವರ ಮಹತ್ವದ ಕ್ರಿಕೆಟ್ ವರ್ಷಗಳು ವ್ಯರ್ಥಗೊಂಡವು. ಈ ಸಮಯದಲ್ಲಿ ಅವರು ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ಭಾರತದ ಉತ್ತಮ ಶ್ರೇಷ್ಠ. ಆಟಗರರನ್ನೊಳಗೊಂಡಿದ್ದ ಪ್ರಥಮ ದರ್ಜೆ ಪಂದ್ಯಗಳಲ್ಲಿ 30 ಶತಕಗಳನ್ನೊಳಗೊಂಡ 10,000 ರನ್ನುಗಳನ್ನು ಗಳಿಸಿದರು. ಎರಡನೇ ವಿಶ್ವಮಹಾಯುದ್ಧದ ನಂತರ ಅವರು 21 ಟೆಸ್ಟ್ ಪಂದ್ಯಗಳನ್ನು ಆಡಿದರು.

ಅಪ್ರತಿಮ ಆಟಗಾರ ಬ್ರಾಡ್ಮನ್ ಕೂಡ ಲಾಲಾ ಅವರನ್ನು ಕೊಂಡಾಡುತ್ತಿದ್ದರು. ಅದರಲ್ಲೂ ಕವರ್ ಡ್ರೈವ್ ಬಾರಿಸುವುದರಲ್ಲಿ ಲಾಲಾ ಬಿಟ್ಟರೆ ಇನ್ನೊಬ್ಬರಿಲ್ಲ ಎನ್ನುವುದು ಬ್ರಾಡ್ಮನ್ ತೀರ್ಮಾನವಾಗಿತ್ತು.

ಲಾಲಾ ಅಮರನಾಥರ ಪ್ರಥಮ ದರ್ಜೆ ಕ್ರಿಕೆಟ್‌ನ ಕೆಲವು ಅಮೋಘ ಆಟಗಳೆಂದರೆ- ವಿಕ್ಟೋರಿಯಾ ಎದುರು 228, ಟಾಸ್ಮೇನಿಯಾ ಎದುರು 171, ಕ್ವೀನ್ಸ್‌ಲ್ಯಾಂಡ್ ವಿರುದ್ಧ ಅಜೇಯ 172, ಸ್ವತಃ ಬ್ರಾಡ್ಮನ್ ಅವರೇ ತಂಡದಲ್ಲಿದ್ದ ದಕ್ಷಿಣ ಆಸ್ಟ್ರೇಲಿಯಾ ಎದುರು 144 ರನ್ನುಗಳು.

ಲಾಲಾ ಅಮರನಾಥ್ ಭಾರತದ ಕ್ರಿಕೆಟ್ ಮಂಡಳಿಯಲ್ಲಿ ಹಿರಿಯ ಆಯ್ಕೆದಾರರಾಗಿ, ವೀಕ್ಷಕ ವಿವರಣಕಾರರಾಗಿ ಮತ್ತು ತಜ್ಞ ವಿಶ್ಲೇಷಣಾರರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ತಮ್ಮ ಕಾಲದಲ್ಲಿ ಚಂದೂ ಬೋರ್ಡೆ, ಜಸ್ಸು ಪಟೇಲ್, ಎಂ. ಎಲ್.ಜಯಸಿಂಹ ಮುಂತಾದ ಪ್ರತಿಭೆಗಳನ್ನು ಬೆಳೆಸಿದರು. ಲಾಲಾ ಅಮರನಾಥ್ ಪುತ್ರರಾದ ಸುರೆಂದರ್ ಅಮರನಾಥ್ ಮತ್ತು ಮೊಹಿಂದರ್ ಅಮರನಾಥ್ ರಾಷ್ಟ್ರವನ್ನು ಪ್ರತಿನಿಧಿಸಿದ ಪ್ರಸಿದ್ಧ ಆಟಗಾರರಾಗಿದ್ದರು. ಅವರ ಮೊಮ್ಮಗ ದಿಗ್ವಿಜಯ್ ಪ್ರಥಮ ದರ್ಜೆ ಕ್ರಿಕೆಟ್ ಅಟಗಾರ.

ಲಾಲಾ ಅಮರನಾಥ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

ಲಾಲಾ ಅಮರನಾಥ್ 2000 ವರ್ಷದ ಆಗಸ್ಟ್ 5ರಂದು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

The post ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಪ್ರಥಮ ಬಾರತೀಯ ಆಟಗಾರ..!! appeared first on Hai Sandur kannada fortnightly news paper.

]]>
https://haisandur.com/2021/09/11/%e0%b2%b2%e0%b2%be%e0%b2%b2%e0%b2%be-%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5%e0%b3%8d-%e0%b2%9f%e0%b3%86%e0%b2%b8%e0%b3%8d%e0%b2%9f%e0%b3%8d-%e0%b2%95%e0%b3%8d%e0%b2%b0%e0%b2%bf/feed/ 0
ಭಾರತದ ಕ್ರಿಕೆಟ್ ಆಟದಲ್ಲಿ ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು ಜಾವಗಲ್ ಶ್ರೀನಾಥ್ https://haisandur.com/2021/08/31/%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%86%e0%b2%9f%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac/ https://haisandur.com/2021/08/31/%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%86%e0%b2%9f%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac/#respond Tue, 31 Aug 2021 14:28:16 +0000 http://haisandur.com/?p=19626 ನಮ್ಮ ಜಾವಗಲ್ ಶ್ರೀನಾಥ್ ಭಾರತದ ಕ್ರಿಕೆಟ್ ಆಟದಲ್ಲಿ, ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು. ಮೈಸೂರು ಎಕ್ಸ್ಪ್ರೆಸ್, ಜಾವಗಲ್ ಎಕ್ಸ್ಪ್ರೆಸ್ ಎಂದು ಪ್ರಖ್ಯಾತರಾದ ಜಾವಗಲ್ ಶ್ರೀನಾಥ್ 1969ರ ಆಗಸ್ಟ್ 31ರಂದು ಜನಿಸಿದರು. ಮೈಸೂರಿನಲ್ಲಿ ಜನಿಸಿದ ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಅವರು ಎಂಜಿನಿಯರಿಂಗ್ ಪದವೀಧರರೂ ಹೌದು. ಭಾರತದ ಕ್ರಿಕೆಟ್ಟಿನಲ್ಲಿ ಕಪಿಲ್ ದೇವ್ ಮಧ್ಯಮ ವೇಗದ ಬೌಲಿಂಗ್ನಲ್ಲಿ ಪ್ರಖ್ಯಾತಿ ಗಳಿಸುವವರೆಗೆ ವೇಗದ ಬೌಲರುಗಳ ಉಪಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾದರಿಯಲ್ಲಿತ್ತು. ಅಬಿದ್ ಆಲಿ, ಏಕನಾಥ ಸೋಲ್ಕರ್ […]

The post ಭಾರತದ ಕ್ರಿಕೆಟ್ ಆಟದಲ್ಲಿ ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು ಜಾವಗಲ್ ಶ್ರೀನಾಥ್ appeared first on Hai Sandur kannada fortnightly news paper.

]]>
ನಮ್ಮ ಜಾವಗಲ್ ಶ್ರೀನಾಥ್ ಭಾರತದ ಕ್ರಿಕೆಟ್ ಆಟದಲ್ಲಿ, ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು.

ಮೈಸೂರು ಎಕ್ಸ್ಪ್ರೆಸ್, ಜಾವಗಲ್ ಎಕ್ಸ್ಪ್ರೆಸ್ ಎಂದು ಪ್ರಖ್ಯಾತರಾದ ಜಾವಗಲ್ ಶ್ರೀನಾಥ್ 1969ರ ಆಗಸ್ಟ್ 31ರಂದು ಜನಿಸಿದರು. ಮೈಸೂರಿನಲ್ಲಿ ಜನಿಸಿದ ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಅವರು ಎಂಜಿನಿಯರಿಂಗ್ ಪದವೀಧರರೂ ಹೌದು.

ಭಾರತದ ಕ್ರಿಕೆಟ್ಟಿನಲ್ಲಿ ಕಪಿಲ್ ದೇವ್ ಮಧ್ಯಮ ವೇಗದ ಬೌಲಿಂಗ್ನಲ್ಲಿ ಪ್ರಖ್ಯಾತಿ ಗಳಿಸುವವರೆಗೆ ವೇಗದ ಬೌಲರುಗಳ ಉಪಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾದರಿಯಲ್ಲಿತ್ತು. ಅಬಿದ್ ಆಲಿ, ಏಕನಾಥ ಸೋಲ್ಕರ್ ಅಂತಹವರು ಪ್ರಾರಂಭಿಕ ಬೌಲಿಂಗ್ ಮಾಡುವ ದಿನಗಳಲ್ಲಿ ಮೂರು ನಾಲ್ಕು ಓವರುಗಳ ನಂತರದಲ್ಲಿ ಚಂದ್ರಶೇಖರ್, ಪ್ರಸನ್ನ ಅಂತಹ ಸ್ಪಿನ್ನರುಗಳ ಬಳಿ ಚೆಂಡು ಸೇರುತ್ತಿತ್ತು. ಅಂದಿನ ದಿನದಲ್ಲಿ ಪ್ರಾರಂಭಿಕ ಬೌಲರ್ ಆದ ಅಬಿದ್ ಆಲಿ ಅವರಿಗಿಂತ ಸ್ಪಿನ್ನರ್ ಚಂದ್ರು ಹೆಚ್ಚು ವೇಗವಾಗಿ ಬೌಲ್ ಮಾಡುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ಜಾವಗಲ್ ಶ್ರೀನಾಥರು 1991ರಲ್ಲಿ ಪ್ರಥಮ ಟೆಸ್ಟ್ ಪಂದ್ಯ ಮತ್ತು ಏಕದಿನ ಪಂದ್ಯಗಳನ್ನು ಆಡುವುದರೊಂದಿಗೆ ಭಾರತಕ್ಕೆ ದೊರೆತ ಅತ್ಯಂತ ವೇಗದ ಬೌಲರ್ ಎನಿಸಿದರು.

ಭಾರತದಲ್ಲಿ ವೇಗದ ಬೌಲಿಂಗ್ ಮಾಡುವುದೆಂದರೆ ಅದೊಂದು ದಿಟ್ಟ ಸಾಹಸವೇ ಸರಿ. ವೇಗದ ಬೌಲರುಗಳಿಗೆ ಅಗತ್ಯವಾದ ಸ್ವಿಂಗ್ ಎಂಬುದು ಇಲ್ಲಿ ಕಾಣುವುದಕ್ಕೆ ಹೆಣಗಾಡಬೇಕಾದದ್ದು ಅಷ್ಟಿಷ್ಟಲ್ಲ. ಹಾಗಾಗಿ ನಮ್ಮ ವೇಗದ ಬೌಲರುಗಳಾದ ಶ್ರೀನಾಥ್, ವೆಂಕಿ, ಜಹೀರ್ ಇವರೆಲ್ಲಾ ವಿದೇಶೀ ನೆಲದಲ್ಲಿ ಆಡಿದಾಗಲೇ ಉತ್ತಮ ಬೌಲರುಗಳಾಗಿ ನಮಗೆ ಕಂಡಿದ್ದಾರೆ. ಈ ಮಾತನ್ನು ಯಾಕೆ ಹೇಳಬೇಕಾಗಿದೆ ಎಂದರೆ ಇಲ್ಲಿನ ಪಿಚ್ಚುಗಳನ್ನು ಬ್ಯಾಟುದಾರನಿಗೆ ಅಥವಾ ಹೆಚ್ಚೆಂದರೆ ಸ್ಪಿನ್ ಬೌಲರನಿಗೆ ಅನುಕೂಲವಾಗುವಂತೆ ರೂಪಿಸಲಾಗುತ್ತದೆ. ವೇಗದ ಬೌಲರನ್ನು ದೂಷಿಸಲಾಗುತ್ತದೆ. ಒಮ್ಮೆ ಶ್ರೀನಾಥರೇ ಇರಬೇಕು ಹೀಗೆ ಹೇಳಿದ್ದು “ಭಾರತದ ಪಿಚ್ಚುಗಳನ್ನು ನೋಡಿದರೆ ಅಳು ಬರುತ್ತದೆ!”. ಇಲ್ಲಿನ ಹವಾಮಾನ ಕೂಡಾ ಗಾಳಿಯಲ್ಲಿ ಸ್ವಿಂಗ್ ಮೂಡುವುದನ್ನು ಬೆಂಬಲಿಸುವುದಿಲ್ಲ ಎಂಬುದು ಕೂಡಾ ನಿಜ.

ಶ್ರೀನಾಥರದು ಅಸಾಮಾನ್ಯ ಸಾಮರ್ಥ್ಯ. 1996ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರು ಮಾಡಿದ ಬೌಲಿಂಗಿನ ವೇಗ ಗಂಟೆಗೆ 156 ಕಿ.ಮೀಟರಿನದ್ದು ಎಂದು ದಾಖಾಲಾತಿ ಇದೆ. ವಿಶ್ವಕಪ್ ಪಂದ್ಯದಲ್ಲಿ ಕೂಡಾ ಅವರು 154.5 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರ ದಾಖಲಾತಿ ಇದೆ. ಆದರೆ ಅವರ ಈ ಸಾಮರ್ಥ್ಯ ನಿರಂತರವಾಗಿ ಅವರಿಂದ ಹೊರಹೊಮ್ಮುತ್ತಿರಲಿಲ್ಲ ಎಂಬುದು ಕೂಡಾ ಅಷ್ಟೇ ನಿಜ. ಶ್ರೀನಾಥರಿಗೆ ಸೀಮಿತತೆ ಇದ್ದದ್ದು ಬಹುಶಃ ಅವರ ದೈಹಿಕ ಬಲದಲ್ಲಿ. ಸಾಮಾನ್ಯವಾಗಿ ನಾವು ವೇಗದ ಬೌಲರುಗಳಲ್ಲಿ ಕಾಣುವ ಮೈಕಟ್ಟು ಅವರದ್ದಾಗಿರಲಿಲ್ಲ.

ಭಾರತದಲ್ಲಿನ ಪಿಚ್ಚುಗಳು ಮತ್ತು ವಾತಾವರಣಗಳು ವೇಗದ ಬೌಲಿಂಗಿಗೆ ನೀಡುವ ಸೀಮಿತ ಅವಕಾಶಗಳ ದೆಸೆಯಿಂದಾಗಿ, ಗಾಳಿಯಲ್ಲಿನ ಬೆಂಬಲವನ್ನು ಹೆಚ್ಚು ಅವಲಂಬಿಸದೆ, ಹಳೆಯ ಚೆಂಡನ್ನು ವೇಗ ವೈವಿಧ್ಯಗಳ ಮೂಲಕ ಉತ್ತಮವಾಗಿ ಬಳಸುವುದನ್ನು ಸಮರ್ಥವಾಗಿ ತೋರಿಸಿಕೊಟ್ಟವರು ಜಾವಗಲ್ ಶ್ರೀನಾಥ್. 1996-97ರ ವರ್ಷದಲ್ಲಿ ಅಹಮದಾಬಾದಿನಲ್ಲಿ ನಡೆದ ಟೆಸ್ಟ್ ಪಂದ್ಯದ ನಾಲ್ಕನೆಯ ಇನ್ನಿಂಗ್ಸ್ ನಲ್ಲಿ ಶ್ರೀನಾಥ್ ಅವರು ದಕ್ಷಿಣ ಆಫ್ರಿಕಾ ತಂಡದ 6 ವಿಕೆಟ್ಟುಗಳನ್ನು ಉರುಳಿಸಿದ್ದು ಇಂಥಹ ಶ್ರೇಷ್ಠ ಬೌಲಿಂಗಿಗೊಂದು ನಿದರ್ಶನವಾಗಿದೆ.

ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿಂಗ್, ಲೆಗ್ ಕಟರ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡ ಶ್ರೀನಾಥ್, ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ 500 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತದ ವೇಗದ ಬೌಲರುಗಳಲ್ಲಿ ಕಪಿಲ್ ದೇವ್ ಅವರನ್ನು ಹೊರತು ಪಡಿಸಿದರೆ ಅತೀ ಹೆಚ್ಚು ವಿಕೆಟ್ ಗಳಿಸಿರುವವರು ಶ್ರೀನಾಥ್. ಭಾರತದಲ್ಲಿ ಮುಂದೆ ಬಂದ ವೇಗದ ಬೌಲಿಂಗ್ ಪೀಳಿಗೆಗೆ ಮಾರ್ಗದರ್ಶಕರಾಗಿ ಮತ್ತು ಸ್ಫೂರ್ತಿ ತಂದವರಾಗಿ ಸಹಾ ಶ್ರೀನಾಥರು ನೀಡಿದ ಕೊಡುಗೆಯನ್ನು ನಾವು ಮರೆಯುವಂತಿಲ್ಲ.

ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿಂದ ರಣಜಿ ಕ್ರಿಕೆಟ್ ಮತ್ತು ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್ಷೈರ್ ಮತ್ತು ಲೀಸೆಸ್ಟರ್ಷೈರ್ ತಂಡಗಳ ಪರವಾಗಿ ಸಹಾ ಶ್ರೀನಾಥ್ ಆಡಿದ್ದಾರೆ.

ಕೆಲವೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ “ಪಿಂಚ್ ಹಿಟರ್” ಕೆಲಸವನ್ನು ನಿರ್ವಹಿಸಿರುವುದೂ ಉಂಟು!

ಇತ್ತೀಚಿನ ಹಲವು ವರ್ಷಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ರೆಫರಿ ಉದ್ಯೋಗದಿಂದ ವಿಶ್ವದೆಲ್ಲೆಡೆ ಸಂಚಾರ ಮಾಡಿರುವ ಶ್ರೀನಾಥ್ ತಾವು ಮೂಡಿದ ಕ್ಷೇತ್ರಗಳಲ್ಲೆಲ್ಲಾ ಭಾರತಕ್ಕೆ ಗೌರವ ತಂದವರು. ಅವರು ನಮ್ಮ ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಶ್ರೀನಾಥರನ್ನು ಅರ್ಥೈಸಬೇಕಾದರೆ, ವಿದೇಶದ ವೇಗದ ಬೌಲರುಗಳನ್ನು ಒಂದು ಕ್ಷಣ ಹೋಲಿಸಿ ನೋಡಬೇಕಾಗುತ್ತದೆ. ಆ ವೇಗದ ಬೌಲರುಗಳು ಅವಾಚ್ಯ ಶಬ್ದಗಳಿಂದ ಬ್ಯಾಟುದಾರನನ್ನು ನಿಂದಿಸುವುದು, ಕೆಟ್ಟ ಕೆಟ್ಟ ರೀತಿಯಲ್ಲಿ ಮೈದಾನದಲ್ಲಿ ಮತ್ತು ಹೊರವಲಯಗಳಲ್ಲಿ ವರ್ತಿಸುವುದು ಇವೆಲ್ಲಾ ನೋಡಿದರೆ ನಮ್ಮ ಮೈಸೂರಿನ ಶ್ರೀನಾಥರು ತಮ್ಮ ಶ್ರೇಷ್ಠತೆಯನ್ನೆಲ್ಲಾ ತಮ್ಮ ಬೌಲಿಂಗಿನ ಬಿರುಸಿನಲ್ಲಿ ಮಾತ್ರ ತೋರ್ಪಡಿಸಿದ್ದು ನಮಗೆಲ್ಲಾ ಹೆಮ್ಮೆಯ ವಿಷಯ..

ಜಾವಗಲ್ ಶ್ರೀನಾಥರೆ, ನಿಮ್ಮನ್ನು ನಾವು ಇಷ್ಟಪಡುತ್ತೇವೆ. ನಿಮ್ಮನ್ನು ಗೌರವಿಸುತ್ತೇವೆ. ನಿಮ್ಮ ಹೆಸರಲ್ಲಿ ಮೈಸೂರಿನಲ್ಲಿ ಒಂದು ವೃತ್ತವನ್ನೂ ಸ್ಥಾಪಿಸಿದ್ದೇವೆ. ಇವೆಲ್ಲಕ್ಕೂ ಮಿಗಿಲಾಗಿ ನಿಮಗೆ ನಿರಂತರ ಶುಭ ಹಾರೈಸುತ್ತೇವೆ. ನಿಮ್ಮ ಬದುಕು ಸುಂದರವಾಗಿರಲಿ. ನಿಮ್ಮ ಉತ್ತಮ ಬೌಲಿಂಗ್, ಉತ್ತಮ ಮಾರ್ಗದರ್ಶನ, ಉತ್ತಮ ನಡತೆ ಮುಂದಿನ ಕ್ರೀಡಾ ತಲೆಮಾರಿಗೆ ಮಾದರಿಯಾಗಿರಲಿ.

ಜಾವಗಲ್ ಶ್ರೀನಾಥರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.

ಕೃಪೆ:- ‘ಕನ್ನಡ ಸಂಪದ’

The post ಭಾರತದ ಕ್ರಿಕೆಟ್ ಆಟದಲ್ಲಿ ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು ಜಾವಗಲ್ ಶ್ರೀನಾಥ್ appeared first on Hai Sandur kannada fortnightly news paper.

]]>
https://haisandur.com/2021/08/31/%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%86%e0%b2%9f%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac/feed/ 0
ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್‌ ಚೋಪ್ರಾ! https://haisandur.com/2021/08/07/neeraj-chopra-wins-gold-medal/ https://haisandur.com/2021/08/07/neeraj-chopra-wins-gold-medal/#respond Sat, 07 Aug 2021 12:59:32 +0000 http://haisandur.com/?p=18672 ಭಾರತದ ನೀರಜ್‌ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲಿಟ್‌ ಎಂಬ ಕೀರ್ತಿಗೆ ನೀರಜ್‌ ಪಾತ್ರರಾದರು.

The post ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್‌ ಚೋಪ್ರಾ! appeared first on Hai Sandur kannada fortnightly news paper.

]]>
ಭಾರತದ ನೀರಜ್‌ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲಿಟ್‌ ಎಂಬ ಕೀರ್ತಿಗೆ ನೀರಜ್‌ ಪಾತ್ರರಾದರು.

The post ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್‌ ಚೋಪ್ರಾ! appeared first on Hai Sandur kannada fortnightly news paper.

]]>
https://haisandur.com/2021/08/07/neeraj-chopra-wins-gold-medal/feed/ 0
ಕ್ರೀಡಾಕ್ಷೇತ್ರದ ಸಾಧಕರಿಗೆ ನೀಡುವ ಖೇಲ್​ ರತ್ನ ಪ್ರಶಸ್ತಿಗೆ ಭಾರತದ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​ ರವರ ಹೆಸರಿಟ್ಟ ಪ್ರಧಾನಿ ಮೋದಿ.. https://haisandur.com/2021/08/06/pm-modi-named-after-indian-hockey-wizard-dhyan-chand/ https://haisandur.com/2021/08/06/pm-modi-named-after-indian-hockey-wizard-dhyan-chand/#respond Fri, 06 Aug 2021 08:08:37 +0000 http://haisandur.com/?p=18578 ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಇನ್ನು ಮುಂದೆ ಮೇಜರ್​ ಧ್ಯಾನ್ ಚಂದ್​ ಖೇಲ್​ರತ್ನ ಪ್ರಶಸ್ತಿ ಯಾಗಿ ಕೊಡಲ್ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು. ಟ್ವೀಟ್ ಮಾಡಿರುವ ಅವರು, ಖೇಲ್ ರತ್ನ ಪ್ರಶಸ್ತಿಗೆ, ಭಾರತೀಯ ಹಾಕಿ ದಿಗ್ಗಜ ಮೇಜರ್​ ಧ್ಯಾನ್​ ಚಂದ್ ಹೆಸರಿಡುವಂತೆ ಅನೇಕ ನಾಗರಿಕರಿಂದ ನನಗೆ ಮನವಿ ಬಂದಿತ್ತು. ಆ ಕೋರಿಕೆಗಳನ್ನು ಪುರಸ್ಕರಿಸಲಾಗುವುದು. ಖೇಲ್​ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್​ ಹೆಸರಿಡಲಾಗುವುದು. ಇನ್ನು ಮುಂದೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಎಂಬ […]

The post ಕ್ರೀಡಾಕ್ಷೇತ್ರದ ಸಾಧಕರಿಗೆ ನೀಡುವ ಖೇಲ್​ ರತ್ನ ಪ್ರಶಸ್ತಿಗೆ ಭಾರತದ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​ ರವರ ಹೆಸರಿಟ್ಟ ಪ್ರಧಾನಿ ಮೋದಿ.. appeared first on Hai Sandur kannada fortnightly news paper.

]]>
ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಇನ್ನು ಮುಂದೆ ಮೇಜರ್​ ಧ್ಯಾನ್ ಚಂದ್​ ಖೇಲ್​ರತ್ನ ಪ್ರಶಸ್ತಿ ಯಾಗಿ ಕೊಡಲ್ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು. ಟ್ವೀಟ್ ಮಾಡಿರುವ ಅವರು, ಖೇಲ್ ರತ್ನ ಪ್ರಶಸ್ತಿಗೆ, ಭಾರತೀಯ ಹಾಕಿ ದಿಗ್ಗಜ ಮೇಜರ್​ ಧ್ಯಾನ್​ ಚಂದ್ ಹೆಸರಿಡುವಂತೆ ಅನೇಕ ನಾಗರಿಕರಿಂದ ನನಗೆ ಮನವಿ ಬಂದಿತ್ತು. ಆ ಕೋರಿಕೆಗಳನ್ನು ಪುರಸ್ಕರಿಸಲಾಗುವುದು. ಖೇಲ್​ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್​ ಹೆಸರಿಡಲಾಗುವುದು. ಇನ್ನು ಮುಂದೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಎಂಬ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಹಾಗೇ ಇಂಥದ್ದೊಂದು ವಿಚಾರವನ್ನು ಹಂಚಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ರಾಜೀವ್​ ಗಾಂಧಿ ಖೇಲ್​ರತ್ನ ಪ್ರಶಸ್ತಿ ಕ್ರೀಡಾಕ್ಷೇತ್ರದ ಅತ್ಯುನ್ನತ ಗೌರವವಾಗಿದೆ. ಇಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ. ಹಾಕಿ ದಿಗ್ಗಜ ಸರ್ದಾರ್​ ಸಿಂಗ್​, ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ, ಕ್ರಿಕೆಟರ್ಸ್​ಗಳಾದ ಮಹೇಂದ್ರ ಸಿಂಗ್​ ಧೋನಿ, ಸಚಿನ್​ ತೆಂಡೂಲ್ಕರ್​, ವಿರಾಟ್ ಕೊಹ್ಲಿ ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಷ್ಟು ದಿನಗಳಿಂದ ಇದು ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಎಂದು ಕೊಡಲ್ಪಡುತ್ತಿತ್ತು. ಆದರೀಗ ರಾಜೀವ್​ ಗಾಂಧಿ ಹೆಸರನ್ನು ತೆಗೆದು, ಹಾಕಿ ದಿಗ್ಗಜ ಧ್ಯಾನ್​ ಚಂದ್​ ನಾಮಕರಣ ಮಾಡಲಾಗಿದೆ.

ಧ್ಯಾನ್​ಚಂದ್​ ಅವರು ಭಾರತದ ಅಗ್ರಗಣ್ಯ ಕ್ರೀಡಾಪಟುಗಳಲ್ಲಿಒಬ್ಬರು. ಅವರು ಭಾರತಕ್ಕೆ ಗೌರವ, ಹೆಮ್ಮೆಯನ್ನು ತಂದಿದ್ದಾರೆ. ನಮ್ಮ ರಾಷ್ಟ್ರದ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್​ ರತ್ನಕ್ಕೆ ಅವರ ಹೆಸರನ್ನಿಡುವುದು ತುಂಬ ಸರಿಯಾದ ಕೆಲಸ. ಹೀಗೊಂದು ದೃಷ್ಟಿಕೋನವನ್ನು ನನಗೆ ತಿಳಿಸಿದವರಿಗೆ ಕೃತಜ್ಞತೆಗಳು ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

The post ಕ್ರೀಡಾಕ್ಷೇತ್ರದ ಸಾಧಕರಿಗೆ ನೀಡುವ ಖೇಲ್​ ರತ್ನ ಪ್ರಶಸ್ತಿಗೆ ಭಾರತದ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​ ರವರ ಹೆಸರಿಟ್ಟ ಪ್ರಧಾನಿ ಮೋದಿ.. appeared first on Hai Sandur kannada fortnightly news paper.

]]>
https://haisandur.com/2021/08/06/pm-modi-named-after-indian-hockey-wizard-dhyan-chand/feed/ 0
ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೋಮ್ ಹೋರಾಟ ಅಂತ್ಯ. https://haisandur.com/2021/07/29/the-end-of-the-kome-fight-at-the-tokyo-olympics/ https://haisandur.com/2021/07/29/the-end-of-the-kome-fight-at-the-tokyo-olympics/#respond Thu, 29 Jul 2021 12:54:35 +0000 http://haisandur.com/?p=18347 ಒಟ್ಟು ಮೂರು ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ಎರಡು ಸುತ್ತುಗಳನ್ನು ಗೆದ್ದಿದ್ದರು. ಆದರೆ, ಒಟ್ಟು ಅಂಕಗಳ ಅಂತರದಲ್ಲಿ ಎದುರಾದ ಅಲ್ಪ ಹಿನ್ನಡೆ ಪರಿಣಾಮ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. ಗುರುವಾರ ನಡೆದ ಪ್ರಿಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ ಕೋಮ್‌, ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಕೊಲಂಬಿಯಾದ ಬಾಕ್ಸರ್‌ ಇಂಗ್ರಿಟ್‌ ಲೊರಿನಾ ವೆಲೆನ್ಸಿಯಾ ಎದುರು ಸೋಲನುಭವಿಸಿದರು. “ನನಗೆ ಗೊತ್ತಿಲ್ಲ ಏನಾಯಿತು ಎಂದು. ಮೊದಲ […]

The post ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೋಮ್ ಹೋರಾಟ ಅಂತ್ಯ. appeared first on Hai Sandur kannada fortnightly news paper.

]]>
ಒಟ್ಟು ಮೂರು ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ಎರಡು ಸುತ್ತುಗಳನ್ನು ಗೆದ್ದಿದ್ದರು. ಆದರೆ, ಒಟ್ಟು ಅಂಕಗಳ ಅಂತರದಲ್ಲಿ ಎದುರಾದ ಅಲ್ಪ ಹಿನ್ನಡೆ ಪರಿಣಾಮ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.

ಗುರುವಾರ ನಡೆದ ಪ್ರಿಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ ಕೋಮ್‌, ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಕೊಲಂಬಿಯಾದ ಬಾಕ್ಸರ್‌ ಇಂಗ್ರಿಟ್‌ ಲೊರಿನಾ ವೆಲೆನ್ಸಿಯಾ ಎದುರು ಸೋಲನುಭವಿಸಿದರು.

“ನನಗೆ ಗೊತ್ತಿಲ್ಲ ಏನಾಯಿತು ಎಂದು. ಮೊದಲ ಸುತ್ತಿನಲ್ಲಿ ಇಬ್ಬರೂ ಕೂಡ ತಂತ್ರಗಾರಿಕೆಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. ನಂತರದ ಎರಡೂ ಸುತ್ತುಗಳನ್ನು ನಾನು ಗೆದ್ದಿದ್ದೇನೆ,” ಎಂದು 38 ವರ್ಷದ ಅನುಭವಿ ಹಾಗೂ ವಿಶ್ವ ದಾಖಲೆಯ 6 ಬಾರಿಯ ವಿಶ್ವ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್ ಹೇಳಿಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ ಭಾರತೀಯ ಬಾಕ್ಸರ್‌ 1-4 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದರು. ಐದು ತೀರ್ಪುಗಾರರಲ್ಲಿ 4 ಮಂದಿ 10-9 ಅಂಕಗಳನ್ನು ವೆಲೆನ್ಸಿಯಾ ಅವರ ಪರವಾಗಿ ಘೋಷಿಸಿದ್ದರು. ನಂತರದ ಎರಡೂ ಸುತ್ತುಗಳಲ್ಲಿ ಭಾರತೀಯ ಬಾಕ್ಸರ್‌ಗೆ 3-2ರ ಮೇಲುಗೈ ಲಭ್ಯವಾಯಿತು. ಆದರೆ, ಒಟ್ಟು ಅಂಕಗಳಲ್ಲಿ ಕೊಮ್‌ಗೆ ಹಿನ್ನಡೆ ಇದ್ದ ಕಾರಣಕ್ಕೆ ಕೊಲಂಬಿಯಾದ ಬಾಕ್ಸರ್‌ ಗೆದ್ದಿರುವುದಾಗಿ ಘೋಷಿಸಲಾಯಿತು. ಕೊನೇ ಸುತ್ತಿನಲ್ಲಿ ಕೋಮ್‌ಗೆ 4-1 ಅಂತರದ ಗೆಲುವು ಸಿಕ್ಕಿದ್ದರೆ ಜಯ ತಮ್ಮದಾಗಿಸಿಕೊಳ್ಳುತ್ತಿದ್ದರು.

ಬಹು ಬಾರಿಯ ಏಷ್ಯನ್ ಚಾಂಪಿಯನ್‌ ಆಗಿರುವ ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದೀಗ ಕೊಲಂಬಿಯಾ ಬಾಕ್ಸರ್‌ ವಿರುದ್ಧ 2-3 ಅಂತರದ ಸೋಲಿನೊಂದಿಗೆ ಅವರ ಒಲಿಂಪಿಕ್ಸ್‌ ಅಭಿಯಾನವನ್ನೂ ಅಂತ್ಯಗೊಳಿಸಿದ್ದಾರೆ. ಅವರ ವೃತ್ತಿಬದುಕಿನ ಅಂತಿಮ ಒಲಿಂಪಿಕ್ಸ್‌ ಇದಾಗಿದೆ.

ಜಿದ್ದಾಜಿದ್ದಿನ ಹೋರಾಟ ನಡೆಸಿ ದಣಿದಿದ್ದ ಕೋಮ್‌ ತಾವು ಪಂದ್ಯ ಗೆದ್ದುಕೊಂಡಿರುವುದಾಗಿ ಭಾವಿಸಿದ್ದರು. ಆದರೆ, ಅಂತ್ಯದಲ್ಲಿ ರೆಫ್ರಿ ಕೆಂಪು ಸಮವಸ್ತ್ರ ತೊಟ್ಟ ವೆಲೆನ್ಸಿಯಾ ಅವರ ಕೈ ಮೇಲೆತ್ತಿದಾಗ ಕೋಮ್‌ ಕಣ್ಣಲ್ಲಿ ನೀರು ಹರಿಯಲಾರಂಭಿಸಿತ್ತು. ಆದರೂ ನಗುತ್ತಲೇ ಎಲ್ಲರಿಗೂ ಧನ್ಯವಾದ ಹೇಳಿ ಎದುರಾಳಿಗೆ ಅಪ್ಪುಗೆಯನ್ನೂ ನೀಡಿ ಹೊರನಡೆದರು.

ಕಳೆದ ಎರಡು ಮುಖಾಮುಖಿಗಳಲ್ಲಿ ಕೋಮ್‌ ಎದುರು ಸೋತಿದ್ದ ವೆಲೆನ್ಸಿಯಾ, ಈ ಬಾರಿ ತಮ್ಮ ತಂತ್ರಗಾರಿಕೆ ಕೊಂಚ ಬದಲಾವಣೆ ಮಾಡಿಕೊಂಡಂತೆ ಕಂಡುಬಂದರು. ತಮ್ಮ ಎತ್ತರದ ಲಾಭ ಪಡೆದು ಕೋಮ್‌ ಅವರ ಬಲಿಷ್ಠ ಪಂಚ್‌ಗಳ ಹೊಡೆತದಿಂದ ಪಾರಾದರಲ್ಲದೆ, ಎಡ ಮತ್ತು ಬಲ ಹುಕ್‌ ಹೊಡೆತಗಳ ಮೂಲಕ ಅಂಕ ಕಲೆಹಾಕುವಲ್ಲಿ ಸಫಲರಾದರು.

“ನನಗೆ ಈ ಸ್ಕೋರಿಂಗ್‌ ವ್ಯವಸ್ಥೆ ಅರ್ಥವಾಗುತ್ತಿಲ್ಲ. ಮೊದಲ ಸುತ್ತಿನಲ್ಲಿ ಮೇರಿ 1-4ರಲ್ಲಿ ಹಿನ್ನಡೆ ಅನುಭವಿಸಿದ್ದಾರೂ ಎಲ್ಲಿ ಎಂಬುದು ಅರ್ಥವಾಗುತ್ತಿಲ್ಲ. ಆ ಸುತ್ತಿನಲ್ಲಿ ಎಲ್ಲಿಯೂ ಅಂತಹ ಅಧಿಕಾರಯುತ ಆಟ ವೆಲೆನ್ಸಿಯಾ ಅವರಿಂದ ಬರಲೇ ಇಲ್ಲ,” ಎಂದು ರಾಷ್ಟ್ರೀಯ ಸಹಾಯಕ ಕೋಚ್ ಹಾಗೂ ಮೇರಿ ಕೋಮ್‌ ಅವರ ಆಪ್ತ ತರಬೇತುದಾರ ಛೋಟೇ ಲಾಲ್‌ ಯಾದವ್‌ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ 2019ರ ವಿಶ್ವ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಮೇರಿ ಕೋಮ್‌ ಸುಲಭವಾಗಿ 32 ವರ್ಷದ ವೆಲೆನ್ಸಿಯಾ ಎದುರು ಗೆದ್ದಿದ್ದರು. ಅಂದಹಾಗೆ ಕೊಲಂಬಿಯಾದಿಂದ ಒಲಿಂಪಿಕ್ಸ್‌ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುತ್ತಿರುವ ಮೊದಲ ಬಾಕ್ಸರ್‌ ಎಂಬ ಹೆಗ್ಗಳಿಕೆ ವೆಲೆನ್ಸಿಯಾ ಅವರದ್ದು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ.

The post ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೋಮ್ ಹೋರಾಟ ಅಂತ್ಯ. appeared first on Hai Sandur kannada fortnightly news paper.

]]>
https://haisandur.com/2021/07/29/the-end-of-the-kome-fight-at-the-tokyo-olympics/feed/ 0
ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ ದೇವದತ್ ಪಡಿಕ್ಕಲ್ https://haisandur.com/2021/07/29/team-india-devadat-padikkal/ https://haisandur.com/2021/07/29/team-india-devadat-padikkal/#respond Thu, 29 Jul 2021 12:17:31 +0000 http://haisandur.com/?p=18343 ಅಂತು ಇಂತು ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದ ಮೂಲಕ ಪಡಿಕ್ಕಲ್ ಭಾರತದ ಪರ ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 3 ಪಂದ್ಯಗಳ ಸರಣಿಯಲ್ಲಿ 20 ಮಂದಿ ಸದಸ್ಯರ ಟೀಮ್ ಇಂಡಿಯಾದಿಂದ 18 ಮಂದಿ ಕಣಕ್ಕಿಳಿದರೂ ಕನ್ನಡಿಗನಿಗೆ ಅವಕಾಶ ಸಿಕ್ಕಿರಲಿಲ್ಲ. ಇದರ ಬಳಿಕ ಟಿ20 ಸರಣಿಯಲ್ಲಿ ಚೊಚ್ಚಲ ಅವಕಾಶವನ್ನು ಎದುರು ನೋಡಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಪಡಿಕ್ಕಲ್​ಗೆ ಅವಕಾಶ ಲಭಿಸಿರಲಿಲ್ಲ. ಇದೀಗ 2ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಹೊರಗುಳಿದ […]

The post ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ ದೇವದತ್ ಪಡಿಕ್ಕಲ್ appeared first on Hai Sandur kannada fortnightly news paper.

]]>
ಅಂತು ಇಂತು ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದ ಮೂಲಕ ಪಡಿಕ್ಕಲ್ ಭಾರತದ ಪರ ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 3 ಪಂದ್ಯಗಳ ಸರಣಿಯಲ್ಲಿ 20 ಮಂದಿ ಸದಸ್ಯರ ಟೀಮ್ ಇಂಡಿಯಾದಿಂದ 18 ಮಂದಿ ಕಣಕ್ಕಿಳಿದರೂ ಕನ್ನಡಿಗನಿಗೆ ಅವಕಾಶ ಸಿಕ್ಕಿರಲಿಲ್ಲ. ಇದರ ಬಳಿಕ ಟಿ20 ಸರಣಿಯಲ್ಲಿ ಚೊಚ್ಚಲ ಅವಕಾಶವನ್ನು ಎದುರು ನೋಡಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಪಡಿಕ್ಕಲ್​ಗೆ ಅವಕಾಶ ಲಭಿಸಿರಲಿಲ್ಲ. ಇದೀಗ 2ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಹೊರಗುಳಿದ ಕಾರಣ ದೇವದತ್ ಪಡಿಕ್ಕಲ್​ಗೆ ಅವಕಾಶ ಲಭಿಸಿದೆ. ಚೊಚ್ಚಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಎಡಗೈ ದಾಂಡಿಗ 23 ಎಸೆತಗಳಲ್ಲಿ 29 ರನ್​ ಬಾರಿಸಿ ಗಮನ ಸೆಳೆದರು.

ಈ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ದೇವದತ್ ಪಡಿಕ್ಕಲ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದರು. ಹೌದು, 21ನೇ ಶತಮಾನದಲ್ಲಿ ಜನಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕಾಲಿಟ್ಟ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರಾಗಿದ್ದಾರೆ. ಅಂದರೆ 2000 ಇಸವಿ ಹಾಗೂ ಅದರ ಬಳಿಕ ಜನಿಸಿದ ಕ್ರಿಕೆಟಿಗನೊಬ್ಬ ಇದೇ ಮೊದಲ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಪಡಿಕ್ಕಲ್ ಜುಲೈ 7, 2000 ರಂದು ಜನಿಸಿದ್ದು, ಇದೀಗ 21 ವರ್ಷ. ಇನ್ನು ಈ ಪಂದ್ಯದ ಮೂಲಕ ಟಿ20ಯಲ್ಲಿ ಟೀಮ್ ಇಂಡಿಯಾ ಪರ ಆಡಿದ 10ನೇ ಕಿರಿಯ ಆಟಗಾರ ಎಂಬ ಕೀರ್ತಿಗೂ ಪಡಿಕ್ಕಲ್ ಪಾತ್ರರಾಗಿದ್ದಾರೆ. ಮೂರನೇ ಟಿ20 ಪಂದ್ಯದಲ್ಲೂ ದೇವದತ್ ಪಡಿಕ್ಕಲ್ ಅವಕಾಶ ಸಿಗಲಿದ್ದು, ಈ ಪಂದ್ಯದಲ್ಲಿ ಮಿಂಚಿದರೆ ಟಿ20 ವಿಶ್ವಕಪ್ ತಂಡದ​ ಆಯ್ಕೆಗೆ ಪಡಿಕ್ಕಲ್ ಹೆಸರು ಪರಿಗಣಿಸಬಹುದು. ಹೀಗಾಗಿ ಶ್ರೀಲಂಕಾ ವಿರುದ್ದದ ಅಂತಿಮ ಟಿ20 ಹಾಗೂ ಐಪಿಎಲ್​ನ ಉಳಿದ ಪಂದ್ಯಗಳು ಟೀಮ್ ಇಂಡಿಯಾ ಆಟಗಾರರಿಗೆ ಪ್ರಮುಖವಾಗಿದೆ.

ಪಡಿಕ್ಕಲ್ ಸಾಧನೆ:
ಕಳೆದ ಎರಡು ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶ ನೀಡಿದ್ದ ಪಡಿಕ್ಕಲ್ ಕೊನೆಗೂ ಟೀಮ್ ಇಂಡಿಯಾ ಪರ ಅವಕಾಶ ಪಡೆದಿದ್ದಾರೆ. ಈ ಹಿಂದೆ ವಿಜಯ್ ಹಜಾರೆ ಟ್ರೋಫಿ 2021 ರಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 737 ರನ್ ಬಾರಿಸಿದ್ದರು. ಇದರಲ್ಲಿ 4 ಶತಕಗಳು ಮತ್ತು 3 ಅರ್ಧಶತಕಗಳು ಮೂಡಿಬಂದಿದ್ದವು. 2020ರ ಸೀಸನ್​ನಲ್ಲೂ ಎಡಗೈ ದಾಂಡಿಗ ಕರ್ನಾಟಕದ ಪರ 700 ರನ್ ಕಲೆಹಾಕಿದ್ದರು. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡು ಸೀಸನ್​ನಲ್ಲಿ 700 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಟೀಮ್ ಇಂಡಿಯಾ ಸಂಪೂರ್ಣ ತಂಡ:
ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಚೇತನ್ ಸಕಾರಿಯಾ, ರಾಹುಲ್ ಚಹರ್, ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಸಾಯಿ ಕಿಶೋರ್, ಅರ್ಷ್‌ದೀಪ್ ಸಿಂಗ್ ಮತ್ತು ಸಿಮಾರ್ಜಿತ್ ಸಿಂಗ್

The post ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ ದೇವದತ್ ಪಡಿಕ್ಕಲ್ appeared first on Hai Sandur kannada fortnightly news paper.

]]>
https://haisandur.com/2021/07/29/team-india-devadat-padikkal/feed/ 0