Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಸಂಡೂರು Archives - Hai Sandur kannada fortnightly news paper https://haisandur.com/category/ಸಂಡೂರು/ Hai Sandur News.Karnataka India Sun, 05 May 2024 14:03:40 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಸಂಡೂರು Archives - Hai Sandur kannada fortnightly news paper https://haisandur.com/category/ಸಂಡೂರು/ 32 32 ಮತದಾನ ಜಾಗೃತಿಗೆ ‘ಸಾಂಸ್ಕøತಿಕ ಕಾರ್ಯಕ್ರಮ’ ಪ್ರತಿ ಮತ ಅಮೂಲ್ಯ, ತಪ್ಪದೇ ಚಲಾಯಿಸಿ: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf%e0%b2%97%e0%b3%86-%e0%b2%b8%e0%b2%be%e0%b2%82%e0%b2%b8%e0%b3%8d%e0%b2%95o%e0%b2%a4/ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf%e0%b2%97%e0%b3%86-%e0%b2%b8%e0%b2%be%e0%b2%82%e0%b2%b8%e0%b3%8d%e0%b2%95o%e0%b2%a4/#respond Sun, 05 May 2024 14:03:39 +0000 https://haisandur.com/?p=35060 ಬಳ್ಳಾರಿ,ಮೇ 05:ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಮೇ 07 ರಂದು ಮತದಾನ ನಡೆಯಲಿದ್ದು, ಪ್ರತಿ ಮತವು ಅಮೂಲ್ಯವಾಗಿದ್ದು, ತಪ್ಪದೇ ಮತ ಚಲಾಯಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಜಾಗೃತಿ ಅಂಗವಾಗಿ ನಗರದ ಹೆಚ್.ಆರ್.ಗವಿಯಪ್ಪ (ಮೋತಿ) ವೃತ್ತದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮತದಾನದ ಮೌಲ್ಯ ಅರಿತುಕೊಂಡು, ಪ್ರತಿಯೊಬ್ಬರೂ ನಿಷ್ಠೆಯಿಂದ ಮತ ಚಲಾಯಿಸಬೇಕು. ಜಿಲ್ಲೆಯ ಶೇಕಡವಾರು […]

The post ಮತದಾನ ಜಾಗೃತಿಗೆ ‘ಸಾಂಸ್ಕøತಿಕ ಕಾರ್ಯಕ್ರಮ’ ಪ್ರತಿ ಮತ ಅಮೂಲ್ಯ, ತಪ್ಪದೇ ಚಲಾಯಿಸಿ: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ appeared first on Hai Sandur kannada fortnightly news paper.

]]>
ಬಳ್ಳಾರಿ,ಮೇ 05:ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಮೇ 07 ರಂದು ಮತದಾನ ನಡೆಯಲಿದ್ದು, ಪ್ರತಿ ಮತವು ಅಮೂಲ್ಯವಾಗಿದ್ದು, ತಪ್ಪದೇ ಮತ ಚಲಾಯಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಜಾಗೃತಿ ಅಂಗವಾಗಿ ನಗರದ ಹೆಚ್.ಆರ್.ಗವಿಯಪ್ಪ (ಮೋತಿ) ವೃತ್ತದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ಮೌಲ್ಯ ಅರಿತುಕೊಂಡು, ಪ್ರತಿಯೊಬ್ಬರೂ ನಿಷ್ಠೆಯಿಂದ ಮತ ಚಲಾಯಿಸಬೇಕು. ಜಿಲ್ಲೆಯ ಶೇಕಡವಾರು ಮತದಾನ ಪ್ರಮಾಣ ಹೆಚ್ಚಾಗಲು ತಾವು ಮಾತ್ರವಲ್ಲದೆ, ತಮ್ಮ ನೆರೆಹೊರೆಯವರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಬೇಕು ಎಂದರು.
ಈ ಬಾರಿ ಬಿಸಿಲಿನ ಬೇಗೆ ಜಾಸ್ತಿಯಿರುವುದರಿಂದ ನಾಗರಿಕರು ಆದಷ್ಟು ಬೇಗನೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು ಎಂದು ಸಲಹೆ ಮಾಡಿದರು.
ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ನಿರ್ಭೀತರಾಗಿ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಬೇಕು ಎಂದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವಾರು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ತಪ್ಪದೇ ಮತ ಚಲಾಯಿಸಿ ಮತದಾನ ಪ್ರಮಾಣ ಹೆಚ್ಚಳಕ್ಕೆನ ಸಹಕರಿಸಬೇಕು ಎಂದು ಕೋರಿದರು.
ಮತಗಟ್ಟೆಗಳಿಗೆ ಬರುವ ಮತದಾರರಿಗೆ ಉತ್ತಮ ಅನುಭವ ಹೊಂದಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅದೇರೀತಿಯಾಗಿ ನೆರಳಿಗೆ ಶ್ಯಾಮಿಯಾನ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿಕಲಚೇತನರಿಗೆ, ಹಿರಿಯನಾಗರಿಕರಿಗೆ ರ್ಯಾಂಪ್, ವೀಲ್‍ಚೇರ್ ಹಾಗೂ ವಿಶೇಷ ಸಾಲಿನಲ್ಲಿ ಬಂದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮತದಾನ ಜಾಗೃತಿಗೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯವರನ್ನೊಳಗೊಂಡಂತೆ ಸ್ವೀಪ್ ಚಟುವಟಿಕೆಗಳಲ್ಲಿ ಉತ್ಸುಕರಾಗಿ ಭಾಗವಹಿಸಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಸ್ವೀಪ್ ಐಕಾನ್ ಆದ ಎಸ್.ಕೆ.ಆರ್.ಜಿಲಾನ್ ಭಾಷಾ ಅವರು ಮಾತನಾಡಿ, ಮತದಾನ ದಿನದಂದು ರಜೆ ಇದೆ ಎಂದು ಮೊಬೈಲ್ ಗೀಳಿಗೆ ಅವಲಂಬಿತರಾಗದೇ ಪ್ರತಿಯೊಬ್ಬರೂ ತಪ್ಪದೇ ಮತಗಟ್ಟೆಗಳಿಗೆ ತೆರಳಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ, ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.
ಇದೇ ವೇಳೆ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಕಣ್ಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮಗಳು:
ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬಯಲಾಟ ಸನ್ನಿವೇಷಗಳು, ಜಾನಪದ ಗೀತೆಗಳು, ಗಾಯನ, ಭರತನಾಟ್ಯ ಸೇರಿದಂತೆ ಸಮೂಹ ನೃತ್ಯಗಳು ನೋಡುಗರ ಮೈಮನ ಸೆಳೆಯಿತು.
ಮುದ್ದಟನೂರಿನ ಹೆಜ್ಜೆ-ಗೆಜ್ಜೆ ಕಲಾತಂಡದವರಿಂದ ಬಯಲಾಟ ಸನ್ನಿವೇಶ, ಚಿಗುರು ಕಲಾತಂಡದಿಂದ ಜಾನಪದ ಗೀತೆಗಳು, ಜಡೇಶ್ ಎಮ್ಮಿಗನೂರು ಅವರಿಂದ ಗಾಯನ ರಸಮಂಜರಿ ಮತ್ತು ಜಿಲಾನ್ ಭಾಷಾ ಅವರ ತಂಡ, ಇಂದ್ರಾಣಿಯವರ ತಂಡ ಹಾಗೂ ಬಲಕುಂದಿ ಬಸವರಾಜ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸೆಲ್ಪಿ ಬೂತ್ ತೆರೆಯಲಾಗಿದ್ದು, ಸಾರ್ವಜನಿಕರು ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಪ್ರಾದೇಶಿಕ ಉಪವಿಭಾಗದ ಉಪ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್.ಸೂರ್ಯವಂಶಿ, ಮಹಾನಗರ ಪಾಲಿಕೆ ಆಯುಕ್ತ ಜಿ,ಖಲೀಲ್ ಸಾಬ್, ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ವಾಗೇಶ್ ಶಿವಾಚಾರ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು ಸೇರಿದಂತೆ ಕಲಾವಿದರು, ಸಾರ್ವಜನಿಕರು ಉಪಸ್ಥಿತರಿದ್ದರು.

The post ಮತದಾನ ಜಾಗೃತಿಗೆ ‘ಸಾಂಸ್ಕøತಿಕ ಕಾರ್ಯಕ್ರಮ’ ಪ್ರತಿ ಮತ ಅಮೂಲ್ಯ, ತಪ್ಪದೇ ಚಲಾಯಿಸಿ: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ appeared first on Hai Sandur kannada fortnightly news paper.

]]>
https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf%e0%b2%97%e0%b3%86-%e0%b2%b8%e0%b2%be%e0%b2%82%e0%b2%b8%e0%b3%8d%e0%b2%95o%e0%b2%a4/feed/ 0
“ಮತದಾನ ಮಾಡಿದವನೇ ಮಹಾಶೂರ “ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b5%e0%b2%a8%e0%b3%87-%e0%b2%ae%e0%b2%b9%e0%b2%be%e0%b2%b6%e0%b3%82%e0%b2%b0/ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b5%e0%b2%a8%e0%b3%87-%e0%b2%ae%e0%b2%b9%e0%b2%be%e0%b2%b6%e0%b3%82%e0%b2%b0/#respond Sun, 05 May 2024 13:55:39 +0000 https://haisandur.com/?p=35056 ಇಂದು ದಿನಾಂಕ 05 05 2024 ರಂದು ಭಾನುವಾರ ತಾಲೂಕು ಆಡಳಿತ ಹಾಗೂ ಸಂಡೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಮತದಾನ ಜಾಗೃತಿ ಜಾತ ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಓಟ ಹಾಗೂ ಭಾನುವಾರದ ಸಂತೆಯ ದಿವಸ ಎಲ್ಲಾ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಮತದಾನ ಜಾಗೃತಿ ಅಭಿಯಾನವನ್ನು ಕರಪತ್ರ ಹಂಚುವ ಮೂಲಕ ಹಮ್ಮಿಕೊಳ್ಳಲಾಯಿತು. ಸದರಿ ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಮಾನ್ಯ ಸಹಾಯಕ ಚುನಾವಣಾ ಅಧಿಕಾರಿಗಳಾದ ಸತೀಶ್ ರವರು ಉದ್ಘಾಟಿಸಿದರು. ಮ್ಯಾರಥಾನ್ ಓಟ ತಾಲೂಕು […]

The post “ಮತದಾನ ಮಾಡಿದವನೇ ಮಹಾಶೂರ “ appeared first on Hai Sandur kannada fortnightly news paper.

]]>
ಇಂದು ದಿನಾಂಕ 05 05 2024 ರಂದು ಭಾನುವಾರ ತಾಲೂಕು ಆಡಳಿತ ಹಾಗೂ ಸಂಡೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಮತದಾನ ಜಾಗೃತಿ ಜಾತ ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಓಟ ಹಾಗೂ ಭಾನುವಾರದ ಸಂತೆಯ ದಿವಸ ಎಲ್ಲಾ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಮತದಾನ ಜಾಗೃತಿ ಅಭಿಯಾನವನ್ನು ಕರಪತ್ರ ಹಂಚುವ ಮೂಲಕ ಹಮ್ಮಿಕೊಳ್ಳಲಾಯಿತು. ಸದರಿ ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಮಾನ್ಯ ಸಹಾಯಕ ಚುನಾವಣಾ ಅಧಿಕಾರಿಗಳಾದ ಸತೀಶ್ ರವರು ಉದ್ಘಾಟಿಸಿದರು.

ಮ್ಯಾರಥಾನ್ ಓಟ ತಾಲೂಕು ಪಂಚಾಯತಿಯಿಂದ ಪ್ರಾರಂಭವಾಗಿ ವಿಜಯ ಸರ್ಕಲ್, ಪುರಸಭೆ ಬಸ್ ನಿಲ್ದಾಣ, ಉಡುಸಲಮ್ಮದೇವಿಯ ದೇವಸ್ಥಾನದ ಮಾರ್ಗವಾಗಿ ಎಪಿಎಂಸಿ ಮಾರ್ಕೆಟ್ ನಲ್ಲಿ ಅಂತ್ಯಗೊಂಡಿತು. ನಂತರ ಎಪಿಎಂಸಿ ಮಾರ್ಕೆಟ್ ನಲ್ಲಿ ಭಾನುವಾರ ಸಂತೆಯ ದಿನವಾದುದರಿಂದ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಇದ್ದ ಪ್ರಯುಕ್ತ ಸಾರ್ವಜನಿಕರಲ್ಲಿ ಹಾಗೂ ಮಳಿಗೆಯ ವ್ಯಾಪಾರಸ್ಥರಲ್ಲಿ ಮತದಾನ ಜಾಗೃತಿಯನ್ನು ಕರಪತ್ರವನ್ನ ಪ್ರತಿಯೊಬ್ಬರಿಗೂ ಹಂಚುವ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು. ನಂತರ ತಾಲೂಕು ಪಂಚಾಯತಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಜಾಗೃತಿ ಅಭಿಯಾನ ಅಂತ್ಯಗೊಂಡಿತು.

ಈ ಸಂಧರ್ಭದಲ್ಲಿ ತಾಲೂಕು ಸ್ವಿಫ್ ಸಮಿತಿ ಅಧ್ಯಕ್ಷರಾದ ಹೆಚ್. ಷಡಕ್ಷರಯ್ಯ, ತಹಶೀಲ್ದಾರರಾದ ಅನಿಲ್ ಕುಮಾರ್, ಪುರಸಭೆ ಮುಖ್ಯ ಅಧಿಕಾರಿಗಳಾದ ಜಯಣ್ಣ, ನಂದಿಹಳ್ಳಿ ಪಿಜಿ ಸೆಂಟರ್ ನ ವಿದ್ಯಾರ್ಥಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.

The post “ಮತದಾನ ಮಾಡಿದವನೇ ಮಹಾಶೂರ “ appeared first on Hai Sandur kannada fortnightly news paper.

]]>
https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b5%e0%b2%a8%e0%b3%87-%e0%b2%ae%e0%b2%b9%e0%b2%be%e0%b2%b6%e0%b3%82%e0%b2%b0/feed/ 0
ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಜ್ಜು: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ https://haisandur.com/2024/05/04/%e0%b2%aa%e0%b2%be%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%95-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2/ https://haisandur.com/2024/05/04/%e0%b2%aa%e0%b2%be%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%95-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2/#respond Sat, 04 May 2024 15:45:23 +0000 https://haisandur.com/?p=35038 ಬಳ್ಳಾರಿ,ಮೇ 04:ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 07 ರಂದು ಮತದಾನ ಜರುಗಲಿದ್ದು, ಮೇ 05 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18,84,040 ಮತದಾರರು ಇದ್ದು, 1972 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 5952 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕುರಿತು […]

The post ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಜ್ಜು: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ appeared first on Hai Sandur kannada fortnightly news paper.

]]>
ಬಳ್ಳಾರಿ,ಮೇ 04:ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 07 ರಂದು ಮತದಾನ ಜರುಗಲಿದ್ದು, ಮೇ 05 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18,84,040 ಮತದಾರರು ಇದ್ದು, 1972 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 5952 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ನಿಮಿತ್ಯ ಮೇ. 07 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಅಂತ್ಯದ 48 ಗಂಟೆಗೂ ಮುನ್ನ ಅಂದರೆ ಮೇ. 05 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಂದರ್ಭದಲ್ಲಿ ವಾಹನಗಳ ಮೂಲಕ ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು. ಮೇ 05 ರ ಸಂಜೆ 06 ರಿಂದ ಮೇ 08 ರ ಸಂಜೆ 06 ರ ವರೆಗೆ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಲಂ 144 ಅಡಿ ಪ್ರತಿಬಂಧಕಾಜ್ಞೆ ಜಾರಿಯಾಗಲಿದ್ದು, 05 ಕ್ಕಿಂತ ಹೆಚ್ಚು ಜನರು ಒಟ್ಟಾಗಿ ಓಡಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚನೆ ನೀಡಲಾಗಿದೆ. ಮತದಾನದ ದಿನ ಸಾರ್ವತ್ರಿಕ ರಜೆ, ಮೇ. 08 ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯದ್ಯಂತ ಮದ್ಯ ಮಾರಾಟ ನಿಷೇಧಿಸಿದ್ದು ಡ್ರೈ ಡೇ ಆಚರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ರ್ಯಾಂಡಮೈಜೇಶನ್ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಡಿಸಿ ಮಿಶ್ರಾ ಅವರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ, ಅಂಗವಿಕಲರಿಗೆ ರ್ಯಾಂಪ್, ವೀಲ್‍ಚೇರ್ ವ್ಯವಸ್ಥೆ ಹಾಗೂ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ತೀವ್ರ ಬಿಸಿಲಿನ ಬೇಗೆ ಇರುವುದರಿಂದ ಮತಗಟ್ಟೆಗಳಲ್ಲಿ ಸ್ಟ್ಯಾಂಡಿಂಗ್ ಫ್ಯಾನ್ ಅಥವಾ ಕೂಲರ್ ವ್ಯವಸ್ಥೆಗೊಳಿಸಲು ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಆದಷ್ಟು ಬೇಗನೇ ಬಂದು ಮತ ಚಲಾಯಿಸಿ:
ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಎಲ್ಲಾ ಮತದಾರರು ಬೆಳಗಿನ ಅವಧಿಯಲ್ಲಿಯೇ ಆದಷ್ಟು ಬೇಗನೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೋರಿದರು.

ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ:
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆಯ ಸಿಬ್ಬಂದಿಗಳಿಗೆ ಈಗಾಗಲೆ ತರಬೇತಿ ನೀಡಿದ್ದು, ಮೇ 07 ರಂದು ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 05.30 ಗಂಟೆಗೆ ಮತಗಟ್ಟೆ ಏಜೆಂಟರುಗಳ ಸಮ್ಮುಖದಲ್ಲಿ ಕನಿಷ್ಟ 50 ಮತಗಳ ಅಣುಕು ಮತದಾನ ನಡೆಯಲಿದ್ದು, ನಂತರ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು ಬೆಳಿಗ್ಗೆ 07 ಗಂಟೆಗೆ ಮತದಾನ ಪ್ರಾರಂಭವಾಗಲಿದೆ. ಈ ಎಲ್ಲ ಪ್ರಕ್ರಿಯೆಗಳ ಕುರಿತು ಮತಗಟ್ಟೆ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಿ ತರಬೇತಿ ನೀಡಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್:
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಒಟ್ಟು 1219 ಮತಗಟ್ಟೆಗಳ ಪೈಕಿ 299 ಸೂಕ್ಷ್ಮ ಹಾಗೂ 69 ವಲ್ನರೆಬಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 610 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಸಿಸಿ ಟಿವಿ ಕ್ಯಾಮೆರಾ ಮೂಲಕ ನೇರವಾಗಿ ಮತಗಟ್ಟೆಗಳ ಲೈವ್ ವಿಡಿಯೋ ನೋಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯದ ಮೇಲುಸ್ತುವಾರಿಗೆ ಒಟ್ಟು 330 ಮೈಕ್ರೋ ಆಬ್ಸರ್ವರ್‍ಗಳನ್ನು ಮತಗಟ್ಟೆಗಳಿಗೆ ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗುತ್ತದೆ ಎಂದರು.

ಮತಗಟ್ಟೆಗಳಿಗೆ 5,815 ಸಿಬ್ಬಂದಿ ನೇಮಕ:
ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ಮತದಾನ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1,395 ಮತಗಟ್ಟೆ ಅಧಿಕಾರಿಗಳು, 1,395 ಸಹಾಯಕ ಅಧಿಕಾರಿಗಳು, 2,790 ಮತದಾನ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 5,952 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಮತಗಟ್ಟೆ ಸಿಬ್ಬಂದಿಗಳಿಗೆ ವಿಶೇಷ ಮೆಡಿಕಲ್ ಕಿಟ್:
ಬಿಸಿಲಿನ ತಾಪಮಾನ ಹಾಗೂ ಶಾಖಾಘಾತದ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್, ಓಆರ್‍ಎಸ್ ಕಿಟ್‍ಗಳನ್ನು ಮಸ್ಟರಿಂಗ್ ಸಂದರ್ಭದಲ್ಲಿಯೇ ವಿತರಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು, ನರ್ಸ್‍ಗಳು, ಆಂಬುಲೆನ್ಸ್ ಗಳನ್ನು ಯಾವುದೇ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ನೆರವಿಗಾಗಿ ಸಜ್ಜಾಗಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

85 ವರ್ಷ ಮೇಲ್ಪಟ್ಟ, ವಿಕಲಚೇತನರು ಮತದಾನ:
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷ ದಾಟಿದ 662 ಹಿರಿಯ ನಾಗರಿಕರು ಹಾಗೂ 452 ವಿಕಲಚೇತನ ಮತದಾರರು ಮನೆಯಿಂದ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿದ್ದರು, ಈ ಪೈಕಿ 85 ವರ್ಷ ಮೇಲ್ಪಟ್ಟ 630 ಮತದಾರರು ಹಾಗೂ 444 ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ.
ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ ಹಾಗೂ ಕ್ಷೇತ್ರಗಳ 863 ಮತದಾರರು ಮತ ಚಲಾಯಿಸಲು ಫಾರಂ 12 ಡಿ ಅಂಚೆ ಮತ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರ ಮತದಾನಕ್ಕೆ ಅನುಕೂಲವಾಗುವಂತೆ ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಗಾಂಧಿ ಭವನದಲ್ಲಿ ಅಂಚೆ ಮತದಾನ ಕೇಂದ್ರ ತೆರೆಯಲಾಗಿತ್ತು. ಮೇ. 01 ರಿಂದ 03 ರವರೆಗೆ ಮತದಾನ ಜರುಗಿದ್ದು, 460 ಜನರು ಮತ ಚಲಾಯಿಸಿದ್ದಾರೆ. ಉಳಿದಂತೆ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಇದೇ ಗಾಂಧಿ ಭವನದಲ್ಲಿ ಫೆಸಿಲಿಟೇಶನ್ ಸೆಂಟರ್ ತೆರೆಯಲಾಗಿದ್ದು, ಮೇ. 06 ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚುನಾವಣಾ ಅಕ್ರಮ ಚಟುವಟಿಕೆ ತಡೆಗೆ ಸಹಾಯವಾಣಿ ಬಳಸಿ:
ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಯಾವುದೇ ಆಸೆ-ಆಮೀಷ ಒಡ್ಡುವ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950 ಕೆ ಕರೆ ಮಾಡಿ ತಿಳಿಸಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ದಾಖಲಿಸಬಹುದು ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಗಾ ವಹಿಸಲು ಹಾಗೂ ಭದ್ರತೆಗೆ ಒಟ್ಟು 2,048 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೊರ ಜಿಲ್ಲೆಯಿಂದ ಸುಮಾರು 850 ಪೊಲೀಸ್ ಸಿಬ್ಬಂದಿಗಳು ಭದ್ರತಾ ಕಾರ್ಯಕ್ಕೆ ಜಿಲ್ಲೆಗೆ ಆಗಮಿಲಿವೆ. ಜಿಲ್ಲೆಗೆ ಸಿಆರ್‍ಪಿಎಫ್ ಪಡೆಯ ಮೂರು ತಂಡಗಳು ಜಿಲ್ಲೆಗೆ ಆಗಮಿಸಿವೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಚುನಾವಣಾ ಅಕ್ರಮ ನಡೆಯದಂತೆ 24 ಚೆಕ್‍ಪೋಸ್ಟ್‍ಗಳಲ್ಲಿ ನಿರಂತರ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮತದಾನ ಸಮಯದಲ್ಲಿ ಅಹಿತಕರ ಘಟನೆ ಸೃಷ್ಟಿಸುವಂತಹ 11 ರೌಡಿಶೀಟರ್ ಪ್ರಕರಣಗಳಲ್ಲಿ 09 ರೌಡಿಶೀಟರ್‍ಗಳನ್ನು ಗಡಿಪಾರು ಮಾಡಲಾಗಿದೆ. ಗೂಂಡ ಆಕ್ಟ್ ಅಡಿ 1 ಪ್ರಕರಣ ದಾಖಲಾಗಿದೆ. ಚುನಾವಣೆ ನೀತಿ ಸಂಹಿತೆ ಘೊಷಣೆಯ ಬಳಿಕ ಈವರೆಗೆ ಜಿಲ್ಲೆಯಲ್ಲಿ ರೂ.8.41 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

The post ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಜ್ಜು: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ appeared first on Hai Sandur kannada fortnightly news paper.

]]>
https://haisandur.com/2024/05/04/%e0%b2%aa%e0%b2%be%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%95-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2/feed/ 0
“ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕ ” ; ರಾಹುಲ್ ಶರಣಪ್ಪ ಸಂಕನೂರ್ https://haisandur.com/2024/05/02/%e0%b2%ae%e0%b2%a4%e0%b2%a6%e0%b2%be%e0%b2%a8%e0%b2%b5%e0%b3%86%e0%b2%a8%e0%b3%8d%e0%b2%a8%e0%b3%81%e0%b2%b5%e0%b3%81%e0%b2%a6%e0%b3%81-%e0%b2%a8%e0%b2%ae%e0%b3%8d%e0%b2%ae-%e0%b2%aa%e0%b3%8d%e0%b2%b0/ https://haisandur.com/2024/05/02/%e0%b2%ae%e0%b2%a4%e0%b2%a6%e0%b2%be%e0%b2%a8%e0%b2%b5%e0%b3%86%e0%b2%a8%e0%b3%8d%e0%b2%a8%e0%b3%81%e0%b2%b5%e0%b3%81%e0%b2%a6%e0%b3%81-%e0%b2%a8%e0%b2%ae%e0%b3%8d%e0%b2%ae-%e0%b2%aa%e0%b3%8d%e0%b2%b0/#respond Thu, 02 May 2024 12:04:37 +0000 https://haisandur.com/?p=35029 ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕವಾಗಿದ್ದು ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಶಕ್ತಿಯೂ ಹೌದು. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತಚಲಾವಣೆ ಮಾಡಬೇಕು ಎಂದು ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬಳ್ಳಾರಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರ್ ಅವರು ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಬಳ್ಳಾರಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ಹಾಗೂ ಜೆ ಎಸ್ ಡಬ್ಲ್ಯೂ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ವಿದ್ಯಾನಗರದ ಜೆ-ಮ್ಯಾಕ್ಸ್ […]

The post “ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕ ” ; ರಾಹುಲ್ ಶರಣಪ್ಪ ಸಂಕನೂರ್ appeared first on Hai Sandur kannada fortnightly news paper.

]]>
ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕವಾಗಿದ್ದು ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಶಕ್ತಿಯೂ ಹೌದು. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತಚಲಾವಣೆ ಮಾಡಬೇಕು ಎಂದು ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬಳ್ಳಾರಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರ್ ಅವರು ಅಭಿಪ್ರಾಯ ಪಟ್ಟರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಬಳ್ಳಾರಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ಹಾಗೂ ಜೆ ಎಸ್ ಡಬ್ಲ್ಯೂ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ವಿದ್ಯಾನಗರದ ಜೆ-ಮ್ಯಾಕ್ಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯಾನಗರ ಹಾಗೂ ದೋಣಿಮಲೈನಲ್ಲಿ ಅತಿ ಕಡಿಮೆ ಮತದಾನವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಮತದಾನ ಪ್ರಮಾಣದಲ್ಲಿ ವಿದ್ಯಾನಗರಕ್ಕೆ ಅಂಟಿರುವ ಕಪ್ಪುಚುಕ್ಕೆಯನ್ನು ಅಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಂಡೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಎಚ್ ಷಡಕ್ಷರಯ್ಯ ಅವರು ಪ್ರತಿಯೊಂದು ಮತವು ಕೂಡ ಅತ್ಯಮೂಲ್ಯ ಒಂದೊಂದು ಮತಕ್ಕೆ ದೇಶದ ಗತಿಯನ್ನೇ ಬದಲಾಯಿಸುವ ಶಕ್ತಿ ಇದೆ. ಸಂಡೂರು ತಾಲೂಕಿನಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಂತೆ ಜಾಗೃತಿ ಮೂಡಿಸುತ್ತಿದ್ದು ವಿದ್ಯಾನಗರದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಲ್ಲಿ ಜೆ ಎಸ್ ಡಬ್ಲ್ಯೂ ನೌಕರರರು ಹಾಗೂ ಕುಟುಂಬದ ಸದಸ್ಯರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜೆ ಎಸ್ ಡಬ್ಲ್ಯೂ ಫೌಂಡೇಶನ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ( ಅಡ್ಮಿನ್ ) ಸುನಿಲ್ ರಾಲ್ಫ್ ಇವರು ಮಾತನಾಡಿ ನಮ್ಮ ಮತ ನಮ್ಮ ಹಕ್ಕು. ಆದ ಕಾರಣ ಯಾವುದೇ ನಿರ್ಲಕ್ಷ್ಯ ಮಾಡದೆ ನಮ್ಮ ಫೌಂಡೇಶನ್ನಿನ ಸಿಬ್ಬಂದಿಯವರು ಕುಟುಂಬದವರೊಂದಿಗೆ ಮತದಾನ ಮಾಡುವ ಮೂಲಕ ಮತದಾನ ಪ್ರಮಾಣ ಹಿನ್ನಡೆಯಲ್ಲಿ ನಮಗೆ ಅಂಟಿರುವ ಕಪ್ಪು ಚುಕ್ಕೆಯನ್ನು ಅಳಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಿಗುರು ಕಲಾ ತಂಡದ ಹುಲುಗಪ್ಪ ಮತ್ತು ತಂಡದವರು ಜಾಗೃತಿ ನಾಟಕವನ್ನು ಹಾಗೂ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ಅತಿಥಿಗಳಾಗಿ ಸಂಡೂರಿನ ಲೋಕಸಭಾ ಚುನಾವಣೆ 2024ರ ಸಹಾಯಕ ಚುನಾವಣಾ ಅಧಿಕಾರಿ ಸತೀಶ್ , ತಹಶೀಲ್ದಾರ್ ಅನಿಲ್ ಕುಮಾರ್ ಭಾಗವಹಿಸಿದ್ದರು. ವಡ್ಡು ಗ್ರಾಮ ಪಂಚಾಯಿತಿ ಪಿಡಿಒ ರಂಗಸ್ವಾಮಿ, ಕಾರ್ಯದರ್ಶಿ ಜುಬೇರ್ ಅಹಮದ್, ತಾಲೂಕು ಪಂಚಾಯತಿ ಸಿಬ್ಬಂದಿ ವೆಂಕಪ್ಪ ಉಪಸ್ಥಿತರಿದ್ದರು. ಚಿಗುರು ಕಲಾತಂಡದ ಹುಲುಗಪ್ಪ ಪ್ರಾರ್ಥಿಸಿದರು. ಜೆ ಎಸ್ ಡಬ್ಲ್ಯೂ ಸಿಬ್ಬಂದಿ ಪದ್ಮನಾಭ ಸ್ವಾಗತಿಸಿದರು. ಶಿಕ್ಷಕ ಜಿ.ಎಮ್. ಪ್ರದೀಪ್ ಕುಮಾರ್ ಮತದಾರ ಪ್ರತಿಜ್ಞಾವಿಧಿ ಬೋಧಿಸಿ ಕಾರ್ಯಕ್ರಮ ನಿರ್ವಹಿಸಿದರು.

ತಾಲೂಕು ಸ್ವೀಪ್ ಸಮಿತಿ ಸಂಡೂರು ವತಿಯಿಂದ ನಿರ್ಮಿಸಲಾಗಿದ್ದ ಮತದಾನ ಸೆಲ್ಫಿ ಬೂತ್ ನಲ್ಲಿ ಜೆ ಎಸ್ ಡಬ್ಲ್ಯೂ ನೌಕರರು ಸಂಭ್ರಮದಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು.

The post “ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕ ” ; ರಾಹುಲ್ ಶರಣಪ್ಪ ಸಂಕನೂರ್ appeared first on Hai Sandur kannada fortnightly news paper.

]]>
https://haisandur.com/2024/05/02/%e0%b2%ae%e0%b2%a4%e0%b2%a6%e0%b2%be%e0%b2%a8%e0%b2%b5%e0%b3%86%e0%b2%a8%e0%b3%8d%e0%b2%a8%e0%b3%81%e0%b2%b5%e0%b3%81%e0%b2%a6%e0%b3%81-%e0%b2%a8%e0%b2%ae%e0%b3%8d%e0%b2%ae-%e0%b2%aa%e0%b3%8d%e0%b2%b0/feed/ 0
ಮತ ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ; ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್ ಕರೆ https://haisandur.com/2024/04/29/%e0%b2%ae%e0%b2%a4-%e0%b2%9a%e0%b2%b2%e0%b2%be%e0%b2%af%e0%b2%bf%e0%b2%b8%e0%b2%bf-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%a4%e0%b2%82%e0%b2%a4%e0%b3%8d%e0%b2%b0%e0%b2%a6-%e0%b2%86/ https://haisandur.com/2024/04/29/%e0%b2%ae%e0%b2%a4-%e0%b2%9a%e0%b2%b2%e0%b2%be%e0%b2%af%e0%b2%bf%e0%b2%b8%e0%b2%bf-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%a4%e0%b2%82%e0%b2%a4%e0%b3%8d%e0%b2%b0%e0%b2%a6-%e0%b2%86/#respond Mon, 29 Apr 2024 16:09:53 +0000 https://haisandur.com/?p=35018 ಸಂಡೂರು:- ಪ್ರಜಾಪ್ರಭುತ್ವ ಮತದಾನ ಅತ್ಯಂತ ಪವಿತ್ರವಾದದ್ದು ಅದನ್ನು ಪ್ರತಿಯೊಬ್ಬರು ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್ ಕರೆ ನೀಡಿದರು. ನಗರದ ಬಸ್ ನಿಲ್ದಾಣದ ಆವರಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ನೆರವೆರಿಸಿ ಮಾತನಾಡಿದರು. ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆ ಅಂಗವಾಗಿ ಉತ್ತಮ ಭವಿಷ್ಯಕ್ಕಾಗಿ ಮತದಾನ ನಮಗಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ನಡೆ […]

The post ಮತ ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ; ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್ ಕರೆ appeared first on Hai Sandur kannada fortnightly news paper.

]]>
ಸಂಡೂರು:- ಪ್ರಜಾಪ್ರಭುತ್ವ ಮತದಾನ ಅತ್ಯಂತ ಪವಿತ್ರವಾದದ್ದು ಅದನ್ನು ಪ್ರತಿಯೊಬ್ಬರು ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್ ಕರೆ ನೀಡಿದರು.

ನಗರದ ಬಸ್ ನಿಲ್ದಾಣದ ಆವರಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ನೆರವೆರಿಸಿ ಮಾತನಾಡಿದರು. ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆ ಅಂಗವಾಗಿ ಉತ್ತಮ ಭವಿಷ್ಯಕ್ಕಾಗಿ ಮತದಾನ ನಮಗಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ಸಂಡೂರು ತಾಲೂಕಿನ ವಿವಿಧ ವಾರ್ಡ್ ಗಳಲ್ಲಿ ಅಭಿಯಾನವನ್ನು ಆಚರಿಸಿ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿ,ಗಟ್ಟಿಗೊಳಿಸಲು ಪ್ರಜೆಗಳು ಪ್ರತ್ಯಕ್ಷ ಪಾಲ್ಗೊಳ್ಳುವಿಕೆ ನಿರಂತರವಾಗಿ ಇರಬೇಕು ಎಂದರು.

ಪ್ರತಿಜ್ಞಾ ವಿಧಿ ಸ್ವೀಕಾರ :
ಕಾರ್ಯಕ್ರಮ ಅಂಗವಾಗಿ ಷಡಕ್ಷರಯ್ಯ ಎಚ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು ಇದೆ ವೇಳೆ ನಂದಿಹಳ್ಳಿ ಸ್ನಾತಕೋತ್ತರ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳಿಂದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ವಿಶೇಷತೆ :
ಸಂಡೂರು ತಾಲೂಕಿನ ಸ್ನಾತಕೋತ್ತರ ಕೇಂದ್ರ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳು ಹಾಗೂ ಎಲ್ಲಾ ಅಧಿಕಾರಿಗಳು ಬಸ್ ನಿಲ್ದಾಣದಿಂದ ಜಾತಾ ಆರಂಭಗೊಂಡು ಜೆಸ್ಕಾಂ ಕಚೇರಿ, ವಾಲ್ಮೀಕಿ ಭವನ, ತಾಲೂಕು ಪಂಚಾಯತ್, ತಹಸಿಲ್ದಾರ್ ಕಛೇರಿ ಮುಖಾಂತರ ಮತದಾರರಿಗೆ ಜಾಗೃತಿ ಮೂಡಿಸಿದರು.
ನಂತರ ವಿದ್ಯಾರ್ಥಿಗಳು ಮತದಾನದ ಜಾಗೃತಿ ಬಗ್ಗೆ ಮಾತನಾಡಿ ಬಳಿಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಮೂಲ್ಯವಾಗಿದ್ದು, ಸಂವಿಧಾನ ಬದ್ಧವಾಗಿ ಲಭಿಸಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ತಪ್ಪದೇ ಚಲಾಯಿಸಬೇಕು’ ಎಂದು ವಾಣಿಜ್ಯ ಅದ್ಯಾಯನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ರೇಖಾ ಎನ್ ಅವರು ಮಾತನಾಡಿದರು

ಮತದಾನದಲ್ಲಿ ಭಾಗವಹಿಸುವುದು ಎಲ್ಲ ಮತದಾರರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪ್ರತಿ ಮತದಾರನು ತನ್ನ ಮತದ ಮೌಲ್ಯವನ್ನು ಅರಿತು ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ಹಾಗೂ ಬಲಿಷ್ಠ ದೇಶ ಕಟ್ಟುವಂತಾಗಲಿ ಎಂಬುದೇ ಚುನಾವಣಾ ಆಯೋಗದ ಆಶಯವಾಗಿದೆ’ ಎಂದು ಸಾಗರ ರಾಠೋಡ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮಾತನಾಡಿ ನಂತರ ಎಚ್ ಅನಿಲ್ ಕುಮಾರ್ ಅವರು ಮಾತನಾಡಿ ದೇಶದ ಪ್ರಗತಿಗಾಗಿ ನಮ್ಮ ಮತದಾನ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು. ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಸೌಜನ್ಯ ಮಾತನಾಡಿ ಮತದಾನವನ್ನು ತಪ್ಪದೇ ಮಾಡಬೇಕು ದೇಶದ ಉನ್ನತಿಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದರು.ಈ ವೇಳೆ ವಾಣಿಜ್ಯ ಅದ್ಯಾಯನ ವಿಭಾಗದ ಸಂಯೋಜಕರಾದ ಡಾ.ಮುಬಾರಕ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ.ರವಿ ಬಿ. ಹಾಗೂ ಪುರಸಭೆ ಅಧಿಕಾರಿಗಳು ಹಾಗೂ ಚುನಾವಣೆ ಸಿಬ್ಬಂದಿ ವರ್ಗ ಜನಪ್ರತಿನಿಧಿಗಳು ಹಾಗೂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

The post ಮತ ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ; ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್ ಕರೆ appeared first on Hai Sandur kannada fortnightly news paper.

]]>
https://haisandur.com/2024/04/29/%e0%b2%ae%e0%b2%a4-%e0%b2%9a%e0%b2%b2%e0%b2%be%e0%b2%af%e0%b2%bf%e0%b2%b8%e0%b2%bf-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%a4%e0%b2%82%e0%b2%a4%e0%b3%8d%e0%b2%b0%e0%b2%a6-%e0%b2%86/feed/ 0
ದಾನಿಗಳು ರಕ್ತ ಕೊಡುವುದರ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ https://haisandur.com/2024/04/29/%e0%b2%a6%e0%b2%be%e0%b2%a8%e0%b2%bf%e0%b2%97%e0%b2%b3%e0%b3%81-%e0%b2%b0%e0%b2%95%e0%b3%8d%e0%b2%a4-%e0%b2%95%e0%b3%8a%e0%b2%a1%e0%b3%81%e0%b2%b5%e0%b3%81%e0%b2%a6%e0%b2%b0-%e0%b2%ae%e0%b3%82/ https://haisandur.com/2024/04/29/%e0%b2%a6%e0%b2%be%e0%b2%a8%e0%b2%bf%e0%b2%97%e0%b2%b3%e0%b3%81-%e0%b2%b0%e0%b2%95%e0%b3%8d%e0%b2%a4-%e0%b2%95%e0%b3%8a%e0%b2%a1%e0%b3%81%e0%b2%b5%e0%b3%81%e0%b2%a6%e0%b2%b0-%e0%b2%ae%e0%b3%82/#respond Mon, 29 Apr 2024 09:05:48 +0000 https://haisandur.com/?p=34997 ಸಂಡೂರು: ಏ: 29: ಕನ್ಯಾದಾನ, ರಕ್ತದಾನ ಈ ಎರಡು ದಾನಗಳು ಒಂದೇ ನಾಣ್ಯದ ಎರಡು ಮುಖಗಳು, ಕನ್ಯಾದಾನ ಮಾಡುವ ಮೂಲಕ ಇನ್ನೋಬ್ಬರ ಮನೆತನದ ವಂಶವನ್ನು ಬೆಳೆಸಿದ ಹಾಗೆ ರಕ್ತದಾನ ಸಹ ಅಷ್ಠೆ ಪ್ರಾಮುಖ್ಯತೆಯಿಂದ ಕೂಡಿದ್ದು ಬೇರೋಬ್ಬರಿಗೋಸ್ಕರ ಪ್ರಾಣ ಉಳಿಸಲು ರಕ್ತದಾನ ಮಾಡುವುದು ಸಂತೋಷದ ವಿಚಾರ ನಿಮ್ಮ ರಕ್ತಕೊಡುವುದರ ಮೂಲಕ ಜೀವ ಹಂಚಿಕೊಂಡು ನೆಮ್ಮದಿಯ ಬದುಕು ಸಾಗಿಸಿದರೆ ಅದುವೆ ಸುಕೃತ ಫಲ. ದಾನಿಗಳು ಸ್ವಯಂ ಪ್ರೇರಣೆಯಿಂದ ಆಸಕ್ತಿಯಿಂದ ರಕ್ತದಾನ ಮಾಡುವುದು ಒಳ್ಳೆಯ ಕ್ರಮ ಹರುಷದಿಂದ ಹೊರಬಂದು ರಕ್ತವನ್ನು ಇನ್ನೊಬ್ಬರಿಗೆ […]

The post ದಾನಿಗಳು ರಕ್ತ ಕೊಡುವುದರ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ appeared first on Hai Sandur kannada fortnightly news paper.

]]>
ಸಂಡೂರು: ಏ: 29: ಕನ್ಯಾದಾನ, ರಕ್ತದಾನ ಈ ಎರಡು ದಾನಗಳು ಒಂದೇ ನಾಣ್ಯದ ಎರಡು ಮುಖಗಳು, ಕನ್ಯಾದಾನ ಮಾಡುವ ಮೂಲಕ ಇನ್ನೋಬ್ಬರ ಮನೆತನದ ವಂಶವನ್ನು ಬೆಳೆಸಿದ ಹಾಗೆ ರಕ್ತದಾನ ಸಹ ಅಷ್ಠೆ ಪ್ರಾಮುಖ್ಯತೆಯಿಂದ ಕೂಡಿದ್ದು ಬೇರೋಬ್ಬರಿಗೋಸ್ಕರ ಪ್ರಾಣ ಉಳಿಸಲು ರಕ್ತದಾನ ಮಾಡುವುದು ಸಂತೋಷದ ವಿಚಾರ ನಿಮ್ಮ ರಕ್ತಕೊಡುವುದರ ಮೂಲಕ ಜೀವ ಹಂಚಿಕೊಂಡು ನೆಮ್ಮದಿಯ ಬದುಕು ಸಾಗಿಸಿದರೆ ಅದುವೆ ಸುಕೃತ ಫಲ. ದಾನಿಗಳು ಸ್ವಯಂ ಪ್ರೇರಣೆಯಿಂದ ಆಸಕ್ತಿಯಿಂದ ರಕ್ತದಾನ ಮಾಡುವುದು ಒಳ್ಳೆಯ ಕ್ರಮ ಹರುಷದಿಂದ ಹೊರಬಂದು ರಕ್ತವನ್ನು ಇನ್ನೊಬ್ಬರಿಗೆ ದಾನವಾಗಿ ನೀಡಿದರೆ ಇನ್ನೊಬ್ಬರ ಜೀವ ಉಳಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ಅಂಕಮನಾಳ್ ಗಿರಿಜಮ್ಮನವರು ಮನದಾಳದ ಮಾತುಗಳನ್ನಾಡಿದರು.

ಅವರು ಇಂದು ಪಟ್ಟಣದ ಎಲ್.ಬಿ. ಕಾಲೋನಿಯ11ನೇ ವಾರ್ಡ ಕೃಷಿ ಇಲಾಖೆಯ ಹತ್ತಿರ ಇರುವ ಬಸವೇಶ್ವರ ಸೇವಾ ಸಮಿತಿ(ರಿ) ಅಂಗಸಂಸ್ಥೆಯಾದ ಶ್ರೀ ಸಿದ್ದರಾಮೇಶ್ವರ ಭಾರತೀಯ ಕಂಪ್ಯೂಟರ್ ತಂತ್ರಜ್ಞಾನ ಕೇಂದ್ರ ಸಂಡೂರು ಇವರ 17ನೇ ವಾರ್ಷಿಕೋತ್ಸವದ ಪ್ರಯುಕ್ತ 14ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಜಿಲ್ಲಾ ಟಾಸ್ಕ ಪೋರ್ಸ ಸಮಿತಿ ಬಳ್ಳಾರಿ, ಶ್ರೀ ಸ್ವಾಮಿ ವಿವೇಕಾನಂದ ರಕ್ತಕೇಂದ್ರ ಬಳ್ಳಾರಿ, ಶ್ರೀ ಸಿದ್ದರಾಮೇಶ್ವರ ಭಾರತೀಯ ಕಂಪ್ಯೂಟರ್ ತಂತ್ರಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉಪನ್ಯಾಸಕಿ ಪಾರ್ವತಿ ಅಂಕಮನಾಲ್ ಕೊಟ್ರೇಶಿ ಮಾತನಾಡಿ ಪುರುಷ ಮಹಿಳೆ ಎನ್ನುವ ಭೇದ ಭಾವವಿಲ್ಲದೆ 18 ರಿಂದ 60 ವರ್ಷದ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪುರುಷ ಮೂರು ತಿಂಗಳಿಗೆ ಒಮ್ಮೆ ರಕ್ತದಾನ, ಮಹಿಳೆ 4 ತಿಂಗಳಿಗೆ ಒಮ್ಮೇ ಮಾಡಬಹುದು, ದಾನಿಯ ದೇಹದ ತೂಕ 45 ಕೆ.ಜಿಗಿಂತ ಹೆಚ್ಚಿರಬೇಕು ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು ಸಿಸ್ಟೋಲಿಕ ರಕ್ತದೊತ್ತಡವು 100 ರಿಂದ 140 ಡಯಸ್ಟೋಲಿಕ್ ಒತ್ತಡವು 70 ರಿಂದ 100 ಇರುವವರು ರಕ್ತದಾನವನ್ನು ಮಾಡಬಹುದು ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಯ ಮುಖ್ಯ ಗುರುಗಳು ವ್ಯವಸ್ಥಾಪಕ ನಿರ್ದೇಶಕರು 3 ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವ ಸಿದ್ದರಾಮೆಶ್ವರ ಬಸವರಾಜಪ್ಪನವರು ಅಂಕಮನಾಳ್ ಮಾತನಾಡಿ ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ, ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿ, ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯ ಹೃದಯಘಾತವನ್ನು ಶೆ. 80 ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ. ರಕ್ತದ ಒತ್ತಡ ಇತೆರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುವುದು ಇವು ರಕ್ತದಾನ ಮಾಡುವುದರಿಂದ ದಾನಿಗಳಿಗೆ ಅಗುವ ಪ್ರಯೋಜನ ಎಂದು ತಿಳಿಸಿದರು.

ಅಕ್ಕನಬಳಗದ ಗೌರವಾಧ್ಯಕ್ಷೆ ಅಂಕಮನಾಳ್ ಶಾಂತಲಾ ಪ್ರಭುರಾಜ ಮಾತನಾಡಿ ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ ರಕ್ತದಾನ ಎನ್ನುವರು ಶಿಬಿರದ ಕಾರ್ಯಕ್ರಮವನ್ನು ಪ್ರತಿಯೊರ್ವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಂಕಮನಾಳ್ ಕೊಟ್ರೇಶ್, ಶಾಂತಲಾ ಪ್ರಭುರಾಜ್, ಅರಳಿಕುಮರಸ್ವಾಮಿ, ಬಳ್ಳಾರಿಯ ಮಂಜುನಾಥ, ರವಿ, ಸೃಜನ್, ಮನೋಜ್, ಸುವರ್ಣ ಅಂಕಮನಾಳ್ ಮಯೂರ್, ಷಣ್ಮುಖ, ಸಿದ್ದಪ್ಪ, ರುದ್ರಪ್ಪ ಶೋಭಾ ವಿಜಯಲಕ್ಷ್ಮೀ ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು, ಶಿಬಿರದಲ್ಲಿ 30 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.

The post ದಾನಿಗಳು ರಕ್ತ ಕೊಡುವುದರ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ appeared first on Hai Sandur kannada fortnightly news paper.

]]>
https://haisandur.com/2024/04/29/%e0%b2%a6%e0%b2%be%e0%b2%a8%e0%b2%bf%e0%b2%97%e0%b2%b3%e0%b3%81-%e0%b2%b0%e0%b2%95%e0%b3%8d%e0%b2%a4-%e0%b2%95%e0%b3%8a%e0%b2%a1%e0%b3%81%e0%b2%b5%e0%b3%81%e0%b2%a6%e0%b2%b0-%e0%b2%ae%e0%b3%82/feed/ 0
ಮತಗಟ್ಟೆಗೆ ಮೊದಲೇ ಬಂದು ನೋಡಿ ಮತದಾನ ಮಾಡಿ- ಸತೀಶ್ https://haisandur.com/2024/04/29/%e0%b2%ae%e0%b2%a4%e0%b2%97%e0%b2%9f%e0%b3%8d%e0%b2%9f%e0%b3%86%e0%b2%97%e0%b3%86-%e0%b2%ae%e0%b3%8a%e0%b2%a6%e0%b2%b2%e0%b3%87-%e0%b2%ac%e0%b2%82%e0%b2%a6%e0%b3%81-%e0%b2%a8%e0%b3%8b%e0%b2%a1/ https://haisandur.com/2024/04/29/%e0%b2%ae%e0%b2%a4%e0%b2%97%e0%b2%9f%e0%b3%8d%e0%b2%9f%e0%b3%86%e0%b2%97%e0%b3%86-%e0%b2%ae%e0%b3%8a%e0%b2%a6%e0%b2%b2%e0%b3%87-%e0%b2%ac%e0%b2%82%e0%b2%a6%e0%b3%81-%e0%b2%a8%e0%b3%8b%e0%b2%a1/#respond Mon, 29 Apr 2024 09:00:50 +0000 https://haisandur.com/?p=34993 ಸಂಡೂರು: ಏ: 29: ಮತಗಟ್ಟೆಯನ್ನು ಮೊದಲೇ ನೋಡಿ ನಿಮಗೆ ಬೇಕಾದ ಸೌಲಭ್ಯ ಒದಗಿಸಿದೆ ಚುನಾವಣಾ ಆಯೋಗ ಎಂಬ ಅಂಶವನ್ನು ಇಟ್ಟುಕೊಂಡು ಇಂದು ನಮ್ಮ ನಡೆ ಮತಗಟ್ಟೆ ಕಡೆ ಎನ್ನುವ ಕಾರ್ಯಕ್ರಮವನ್ನು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದೇವೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಸತೀಶ್ ತಿಳಿಸಿದರು. ಅವರು ಇಂದು ಮಾನ್ಯ ಚುನಾವಣೆ ಆಯೋಗದ ಆದೇಶದಂತೆ ಸಂಡೂರು ತಾಲೂಕಿನ ತಾಲ್ಲೂಕು ಪಂಚಾಯಿತಿ ಅವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಡೆದ “ನಮ್ಮ ನಡೆ ಮತಗಟ್ಟೆ […]

The post ಮತಗಟ್ಟೆಗೆ ಮೊದಲೇ ಬಂದು ನೋಡಿ ಮತದಾನ ಮಾಡಿ- ಸತೀಶ್ appeared first on Hai Sandur kannada fortnightly news paper.

]]>
ಸಂಡೂರು: ಏ: 29: ಮತಗಟ್ಟೆಯನ್ನು ಮೊದಲೇ ನೋಡಿ ನಿಮಗೆ ಬೇಕಾದ ಸೌಲಭ್ಯ ಒದಗಿಸಿದೆ ಚುನಾವಣಾ ಆಯೋಗ ಎಂಬ ಅಂಶವನ್ನು ಇಟ್ಟುಕೊಂಡು ಇಂದು ನಮ್ಮ ನಡೆ ಮತಗಟ್ಟೆ ಕಡೆ ಎನ್ನುವ ಕಾರ್ಯಕ್ರಮವನ್ನು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದೇವೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಸತೀಶ್ ತಿಳಿಸಿದರು.

ಅವರು ಇಂದು ಮಾನ್ಯ ಚುನಾವಣೆ ಆಯೋಗದ ಆದೇಶದಂತೆ ಸಂಡೂರು ತಾಲೂಕಿನ ತಾಲ್ಲೂಕು ಪಂಚಾಯಿತಿ ಅವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಡೆದ “ನಮ್ಮ ನಡೆ ಮತಗಟ್ಟೆ ಕಡೆ ಜಾಗೃತಿ ಹಾಗೂ ಧ್ವಜಾರೋಹಣ ಕಾರ್ಯಕ್ರಮ” ದ್ವಜಾರೋಹಣ ಮಾಡುವುದರ ಮೂಲಕ ನೆರವೇರಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಮತದಾರರು ತಮ್ಮ ಮತ ಚಲಾಯಿಸುವ ಮತಗಟ್ಟೆಯನ್ನು ಮುಂಚಿತವಾಗಿ ಬಂದು ನೋಡಿ, ಮತಗಟ್ಟೆಯಲ್ಲಿ ಮತದಾನ ಮಾಡಲು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮತದಾನದ ದಿನದಂದು ತಪ್ಪದೆ ಮತದಾನ ಮಾಡಿ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸಹಕರಿಸಿ ಎಂದರು. ಯಾವುದೇ ಆಮಿಷಗಳಿಗೆ ಒಳಗಾಗದೆ ವಿವೇಚನೆಯಿಂದ ಮತ ಚಲಾಯಿಸಿ ಹಾಗೂ ಯಾವುದೇ ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ತಕ್ಷಣ ಸಿ-ವಿಜಿಲ್ ಆಪ್ ನಲ್ಲಿ ದಾಖಲಿಸಲು ವಿನಂತಿಸಿದರು.ಸದರಿ ಕಾರ್ಯಕ್ರಮದಲ್ಲಿ ತಾಲ್ಲೂಕಿನ ತಹಶೀಲ್ದಾರರಾದ ಅನಿಲಕುಮಾರ್, ಸ್ವೀಪ್ ಸಮಿತಿ ಅಧ್ಯಕ್ಷರಾದ ಷಡಾಕ್ಷರಯ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾದಿಕಾರಿಯವರು , ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ, ತಾಲ್ಲೂಕು ಪಂಚಾಯತಿ ಸಿಬಂದ್ದಿ, ಸ್ವಸಹಾಯ ಸಂಘದ ಸದಸ್ಯರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಮತದಾನ ಜಾಗೃತಿ ಜಾಥಾ ಕೈಗೊಂಡು ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಮತದಾರರನ್ನು ಮತಗಟ್ಟೆ ಗೆ ಸೆಳೆದರು. ಎಲ್ಲ ಮತಗಟ್ಟೆ ಗಳಲ್ಲಿ ಹಬ್ಬದ ರೀತಿಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ವನ್ನು ಧ್ವಜರೋಹಣ ನೆರವೇರಿಸುವುದರ ಮೂಲಕ ಮತದಾರರಲ್ಲಿ ದಿನಾಂಕ 07.05.2024 ರಂದು ತಪ್ಪದೆ ಮತಗಟ್ಟೆ ಗೆ ಬಂದು ತಮ್ಮ ಹಕ್ಕು ಚಲಾಯಿಸಿ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಲಾಯಿತು.

The post ಮತಗಟ್ಟೆಗೆ ಮೊದಲೇ ಬಂದು ನೋಡಿ ಮತದಾನ ಮಾಡಿ- ಸತೀಶ್ appeared first on Hai Sandur kannada fortnightly news paper.

]]>
https://haisandur.com/2024/04/29/%e0%b2%ae%e0%b2%a4%e0%b2%97%e0%b2%9f%e0%b3%8d%e0%b2%9f%e0%b3%86%e0%b2%97%e0%b3%86-%e0%b2%ae%e0%b3%8a%e0%b2%a6%e0%b2%b2%e0%b3%87-%e0%b2%ac%e0%b2%82%e0%b2%a6%e0%b3%81-%e0%b2%a8%e0%b3%8b%e0%b2%a1/feed/ 0
ದೇಶದ ರಕ್ಷಣೆ ಎಂದರೆ ಮೋದಿ, ಮೋದಿ ಎಂದರೇ ದೇಶವಾಗಿದೆ ಅವರನ್ನು ಮತ್ತೋಮ್ಮೆ ಪ್ರಧಾನಿ ಮಾಡೋಣ- ಜಿ.ಟಿ.ಪಂಪಾಪತಿ https://haisandur.com/2024/04/27/%e0%b2%a6%e0%b3%87%e0%b2%b6%e0%b2%a6-%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86-%e0%b2%8e%e0%b2%82%e0%b2%a6%e0%b2%b0%e0%b3%86-%e0%b2%ae%e0%b3%8b%e0%b2%a6%e0%b2%bf-%e0%b2%ae%e0%b3%8b/ https://haisandur.com/2024/04/27/%e0%b2%a6%e0%b3%87%e0%b2%b6%e0%b2%a6-%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86-%e0%b2%8e%e0%b2%82%e0%b2%a6%e0%b2%b0%e0%b3%86-%e0%b2%ae%e0%b3%8b%e0%b2%a6%e0%b2%bf-%e0%b2%ae%e0%b3%8b/#respond Sat, 27 Apr 2024 06:04:06 +0000 https://haisandur.com/?p=34973 ಸಂಡೂರು: ಏ:27: ಪ್ರತಿಯೊಂದು ಕುಟುಂಬಕ್ಕೂ ಆರೋಗ್ಯ ರಕ್ಷಣೆ ಮಾಡಿದಂತಹ ಮೋದಿಯವರು, ಪ್ರತಿ ಮನೆಗೆ ನೀರನ್ನು, ಅಕ್ಕಿಯನ್ನು , ಬೇಟಿ ಪಡವೋ, ಬೇಟಿ ಬಚಾವೋ ದಂತಹ ಮಹತ್ತರ ಯೋಜನೆಗಳನ್ನು ತಂದು ಮತ್ತೋಮ್ಮೆ ಮೋದಿ ಪ್ರಧಾನಿಯಾಗಲು 28 ರಂದು ಹೊಸಪೇಟೆಗೆ ಬೃಹತ್ ಬಹಿರಂಗ ವಿಜಯಸಂಕಲ್ಪ ಯಾತ್ರೆಗೆ ಅಗಮಿಸುತ್ತಿರುವುದರಿಂದ ಸ್ವಯಂ ಪ್ರೇರಿತರಾಗಿ ಸಭೆಗೆ ಹಾಜರಾಗಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಕರೆನೀಡಿದರು. ಅವರು ಹೊಸಪೇಟೆಯಲ್ಲಿ 28 ರಂದು ಮೋದಿಯವರ ವಿಜಯಯಾತ್ರೆಯ ಬಹಿರಂಗ ಸಭೆಯ ಅಂಗವಾಗಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ […]

The post ದೇಶದ ರಕ್ಷಣೆ ಎಂದರೆ ಮೋದಿ, ಮೋದಿ ಎಂದರೇ ದೇಶವಾಗಿದೆ ಅವರನ್ನು ಮತ್ತೋಮ್ಮೆ ಪ್ರಧಾನಿ ಮಾಡೋಣ- ಜಿ.ಟಿ.ಪಂಪಾಪತಿ appeared first on Hai Sandur kannada fortnightly news paper.

]]>
ಸಂಡೂರು: ಏ:27: ಪ್ರತಿಯೊಂದು ಕುಟುಂಬಕ್ಕೂ ಆರೋಗ್ಯ ರಕ್ಷಣೆ ಮಾಡಿದಂತಹ ಮೋದಿಯವರು, ಪ್ರತಿ ಮನೆಗೆ ನೀರನ್ನು, ಅಕ್ಕಿಯನ್ನು , ಬೇಟಿ ಪಡವೋ, ಬೇಟಿ ಬಚಾವೋ ದಂತಹ ಮಹತ್ತರ ಯೋಜನೆಗಳನ್ನು ತಂದು ಮತ್ತೋಮ್ಮೆ ಮೋದಿ ಪ್ರಧಾನಿಯಾಗಲು 28 ರಂದು ಹೊಸಪೇಟೆಗೆ ಬೃಹತ್ ಬಹಿರಂಗ ವಿಜಯಸಂಕಲ್ಪ ಯಾತ್ರೆಗೆ ಅಗಮಿಸುತ್ತಿರುವುದರಿಂದ ಸ್ವಯಂ ಪ್ರೇರಿತರಾಗಿ ಸಭೆಗೆ ಹಾಜರಾಗಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಕರೆನೀಡಿದರು.

ಅವರು ಹೊಸಪೇಟೆಯಲ್ಲಿ 28 ರಂದು ಮೋದಿಯವರ ವಿಜಯಯಾತ್ರೆಯ ಬಹಿರಂಗ ಸಭೆಯ ಅಂಗವಾಗಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಭಾರತ ಇಂದು 3ನೇ ಸ್ಥಾನಕ್ಕೆ ಹೇರಿದೆ, ಮುಂದೆ ಪ್ರಥಮಸ್ಥಾನಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಅದ್ದರಿಂದ ಮೊತ್ತೋಮ್ಮೆ ಮೋದಿ ಪ್ರಧಾನಿಯಾಗಿಸುವ ಗುರಿಯನ್ನು ಹೊಂದಿದ್ದು, ಕೊಪ್ಪಳ ಮತ್ತು ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಮೋದಿಯವರ ಬಹಿರಂಗ ಸಭೆಯನ್ನು ಹೊಸಪೇಟೆಯ ಪುನೀತ್ ರಾಜಕುಮಾರ್ (ಅಪ್ಪು) ಅವರಣದಲ್ಲಿ ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಸಹ ಸ್ವಯಂ ಪ್ರೇರಿತರಾಗಿ ಭಾಗಿಯಾಗಬೇಕು, ಅಲ್ಲದೆ ಮೋದಿಯವರ ಯೋಜನೆಗಳನ್ನು ಪ್ರತಿ ಮನೆಗೆ ಮುಟ್ಟಿಸಿದ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಜಿಲ್ಲಾ ಎಸ್ಟಿ. ವಿಭಾಗದ ಮುಖಂಡ ಕೆ.ಎಸ್. ದಿವಾಕರ್ ಅವರು ಮಾತನಾಡಿ ಇಂದು ಕಾಂಗ್ರೇಸ್‍ ಅಡಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅವರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ, ಡ್ಯಾಂ ಇದ್ದರೂ ನೀರಿಲ್ಲ, ಕಾರ್ಖಾನೆಗಳಿದ್ದರೂ ಉದ್ಯೋಗವಿಲ್ಲ ಅಂತಹ ಕಾಂಗ್ರೇಸ್ ಪಕ್ಷವನ್ನು ದೂರವಿಡಬೇಕು, ಮೋದಿಯವರ ಬೃಹತ್ ಯೋಜನೆ, ವಿಶ್ವವೇ ಮೆಚ್ಚಿಕೊಂಡ ಅವರನ್ನು ಮತ್ತೋಮ್ಮೆ ಪ್ರಧಾನಿಯಾಗಿಸಲು ಅವಳಿ ಕ್ಷೇತ್ರಗಳ ಬೃಹತ್ ವಿಜಯಯಾತ್ರೆಯ ಅಂಗವಾಗಿ ಹಮ್ಮಿಕೊಂಡ ಈ ಸಭೆಯಲ್ಲಿ ಕ್ಷೇತ್ರದ ಪ್ರತಿಯೊಬ್ಬರೂ ಸಹ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ತಾಲೂಕು ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ ಅವರು ಮಾತನಾಡಿ ಬಳ್ಳಾರಿ ಮತ್ತು ಕೊಪ್ಪಳದ ಕೇಂದ್ರಸ್ಥಾನ ಹೊಸಪೇಟೆಯಾಗಿದ್ದು ಅಲ್ಲಿ ವಿಜಯಯಾತ್ರೆಗೆ ಮೋದಿಯವರು ಅಗಮಿಸುತ್ತಿದ್ದು ಸಂಡೂರು ಕ್ಷೇತ್ರದಿಂದ ಅತಿ ಹೆಚ್ಚು ಜನರು ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಬೇಕು, ಗ್ಯಾರಂಟಿಗಳನ್ನು ಮತದಾರ ತಿರಸ್ಕರಿಸಿದ್ದಾನೆ, ಅಲ್ಲದೆ ಕೇವಲ ಒಂದು ವರ್ಗವನ್ನು ಓಲೈಸುವ ಮಂತ್ರಿ ಬೇಡ ಎಂದು ಸಿದ್ದರಾಮಯ್ಯನವರನ್ನು ತಿರಸ್ಕರಿಸುವ ಮೂಲಕ ಮತ್ತೋಮ್ಮೆ ಮೋದಿಯ ಗುರುತು ಬಿಜೆಪಿಗೆ ಮತ ಹಾಕುವ ಮೂಲಕ ಗೆಲ್ಲಿಸೋಣ ಸಭೆಗೆ ಎಲ್ಲರೂ ಭಾಗಿಯಾಗೋಣ ಎಂದರು.

ಪುಷ್ಪಾ ಅವರು ಮಾತನಾಡಿ ಕ್ಷೇತ್ರವನ್ನು ಕಳೆದ 18 ವರ್ಷಗಳಿಂದ ಅಡಳಿತ ನಡೆಸಿದ ಕಾಂಗ್ರೇಸ್ ನ ತುಕರಾಂ ಅವರು ಸರ್ಕಾರಿ ಅಸ್ಪತ್ರೆಯಲ್ಲಿ ಬಾಣಂತಿಯರಿಗೆ ಸರಿಯಾದ ನೀರಿನ ವ್ಯವಸ್ಥೆಯೂ ಸಹ ಇಲ್ಲವಾಗಿದೆ, ಆಶ್ರಯ ಕಾಲೋನಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ, 5 ಗ್ಯಾರಂಟಿಗಳ ಅನುಷ್ಠಾನವೇ ಇಲ್ಲ ಅಭಿವೃದ್ದಿ ಶೂನ್ಯವಾಗಿದೆ, 100 ಹಾಸಿಗೆ ಆಸ್ಪತ್ರೆ ಹೆಸರಿಗೆ ಮಾತ್ರವಿದೆ, ಪ್ರತಿಯೊಂದಕ್ಕೂ ಬಳ್ಳಾರಿ ವಿಮ್ಸ್ ಎನ್ನುತ್ತಾರೆ, ಇಲ್ಲ ಸಂಜೀವಿನಿಗೆ ಕಳುಹಿಸುತ್ತಾರೆ ಇದು ಎಷ್ಟು ಸರಿ, ಅದ್ದರಿಂದ ಮತ್ತೋಮ್ಮೆ ಮೋದಿಗೆ ಮತ ಹಾಕಬೇಕು ದೇಶದ ಪ್ರಗತಿಗೆ ನಾಂದಿಹಡಬೇಕು ಎಂದರು.

ಸಮಾರಂಭದಲ್ಲಿ ವಿ.ಕೆ. ಬಸಪ್ಪ, ಮಹಿಳಾ ಉಪಾಧ್ಯಕ್ಷೆ ಪುಷ್ಪಾ, ಜಿಸಿಬಿ ರಾಮಕೃಷ್ಣ, ಇತರರು ಮಾತನಾಡಿದರು, ಸಭೆಯಲ್ಲಿ ತಾಲೂಕಿನ ಎಲ್ಲಾ ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು, ರಘು ನಿರೂಪಿಸಿದರು, ದರೋಜಿ ರಮೇಶ್ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಮುಖಂಡರಾದ ಪ್ರಭುಗೌಡ, ವಿಶ್ವನಾಥಗೌಡ, ಕೆ.ಎಸ್. ದಿವಾಕರ್, ಗೀತಾ ಕೊಂಚಗೇರಿ ಹರೀಶ್, ವಿಜಯಕುಮಾರ.ಕೆ. ಮಂಜುನಾಥ ದೀಪಾಗೋಡ್ಕೆ, ಯರ್ರಮ್ಮ, ಅಂತಾಪುರದ ರೈತ ಮುಖಂಡ ವಿ.ಎಸ್. ಶಂಕರ್, ದರೋಜಿ ರಮೇಶ್, ಚಿರಂಜೀವಿ ಹಲವಾರು ಗಣ್ಯರು ಇದ್ದರು.

The post ದೇಶದ ರಕ್ಷಣೆ ಎಂದರೆ ಮೋದಿ, ಮೋದಿ ಎಂದರೇ ದೇಶವಾಗಿದೆ ಅವರನ್ನು ಮತ್ತೋಮ್ಮೆ ಪ್ರಧಾನಿ ಮಾಡೋಣ- ಜಿ.ಟಿ.ಪಂಪಾಪತಿ appeared first on Hai Sandur kannada fortnightly news paper.

]]>
https://haisandur.com/2024/04/27/%e0%b2%a6%e0%b3%87%e0%b2%b6%e0%b2%a6-%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86-%e0%b2%8e%e0%b2%82%e0%b2%a6%e0%b2%b0%e0%b3%86-%e0%b2%ae%e0%b3%8b%e0%b2%a6%e0%b2%bf-%e0%b2%ae%e0%b3%8b/feed/ 0
ನೇಹಾ ಹತ್ಯೆ: ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ https://haisandur.com/2024/04/25/%e0%b2%a8%e0%b3%87%e0%b2%b9%e0%b2%be-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%97%e0%b3%86-%e0%b2%97%e0%b2%b2%e0%b3%8d%e0%b2%b2%e0%b3%81/ https://haisandur.com/2024/04/25/%e0%b2%a8%e0%b3%87%e0%b2%b9%e0%b2%be-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%97%e0%b3%86-%e0%b2%97%e0%b2%b2%e0%b3%8d%e0%b2%b2%e0%b3%81/#respond Thu, 25 Apr 2024 09:58:06 +0000 https://haisandur.com/?p=34961 ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ವ್ಯಕ್ತಿಗೆ ಸಹಕರಿಸಿದ ವ್ಯಕ್ತಿಗಳಿಗೂ ಸೂಕ್ತ ಶಿಕ್ಷೆ ನೀಡುವ ಮೂಲಕ ಆಕೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ತಾಲೂಕು ವೀರಶೈವ ಲಿಂಗಾಯತ ಸಂಘದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು ಕಪ್ಪು ಪಟ್ಟಿಯನ್ನು ಧರಿಸಿ, ಸಂಘದ ಕಚೇರಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ತಮ್ಮ ಮನವಿ ಪತ್ರವನ್ನು ತಹಶೀಲ್ದಾರ್‌ ಜಿ. ಅನಿಲ್‌ಕುಮಾರ್‌ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಂಘದ […]

The post ನೇಹಾ ಹತ್ಯೆ: ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ appeared first on Hai Sandur kannada fortnightly news paper.

]]>
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ವ್ಯಕ್ತಿಗೆ ಸಹಕರಿಸಿದ ವ್ಯಕ್ತಿಗಳಿಗೂ ಸೂಕ್ತ ಶಿಕ್ಷೆ ನೀಡುವ ಮೂಲಕ ಆಕೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ತಾಲೂಕು ವೀರಶೈವ ಲಿಂಗಾಯತ ಸಂಘದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಸಂಘದ ಪದಾಧಿಕಾರಿಗಳು, ಸದಸ್ಯರು ಕಪ್ಪು ಪಟ್ಟಿಯನ್ನು ಧರಿಸಿ, ಸಂಘದ ಕಚೇರಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ತಮ್ಮ ಮನವಿ ಪತ್ರವನ್ನು ತಹಶೀಲ್ದಾರ್‌ ಜಿ. ಅನಿಲ್‌ಕುಮಾರ್‌ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಚಿತ್ರಿಕಿ ಸತೀಶಕುಮಾ‌ರ್, ನೇಹಾ ಹತ್ಯೆ ಅಮಾನವೀಯ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಇಂತಹ ದುಷ್ಕೃತ್ಯಗಳು ಇನ್ನು ಮುಂದೆ ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಸಿದರು. ಸಂಘದ ಕಾರ್ಯದರ್ಶಿಗಳಾದ ಜಿ.ವಿರೇಶ್, ಕಿನ್ನೂರೇಶ್ವರ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಇಂತಹ ಹೇಯ ಕೃತ್ಯಗಳನ್ನು ಎಸಗುವವರಿಗೆ ಮರಣದಂಡನೆ ಶಿಕ್ಷೆ ನೀಡುವಂತೆ, ರಾಜ್ಯದಲ್ಲಿಯೂ ಸೂಕ್ತ ಕಾನೂನನ್ನು ರೂಪಿಸಿ, ಇಂತಹ ದುಷ್ಕರ್ಮಿಗಳಿಗೆ ಮರಣ ದಂಡನೆ ಅಥವಾ ಶೂಟೌಟ್ ನಂತಹ ಶಿಕ್ಷೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಂಜುಳಾ, ಶಿವಲೀಲಾ ಬಿ.ಜಿ. ಮಂಜು ವೀರೇಶ್‌ ಮಾತನಾಡಿ, ನೇಹಾ ಹಿರೇಮರ್ ಅವರನ್ನು ಹತ್ಯೆಗೈದ ಆರೋಪಿಗೆ ಕಠಿಣ
ಶಿಕ್ಷೆಯಾಗಬೇಕು. ಅಪರಾಧಿಗಳಿಗೆ ಉಗ್ರ ಶಿಕ್ಷೆಯಾಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ. ಸರ್ಕಾರ ಇಂತಹ ದುಷ್ಕರ್ಮಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರೆ ಮಾತ್ರ, ಇದು ಇತರರಿಗೆ ಪಾಠವಾಗಲಿದೆ. ಇಂತಹ ದುಷ್ಕೃತ್ಯಗಳು ನಿಲ್ಲಲಿವೆ. ಸರ್ಕಾರ ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ಪಿ.ರವಿಕುಮಾರ್, ನಿರ್ದೇಶಕ ರುದ್ರಗೌಡ, ಮುಖಂಡರಾದ ಜಿ. ಏಕಾಂಬ್ರಪ್ಪ, ಜಿ.ಟಿ. ಪಂಪಾಪತಿ, ಕಿನ್ನೂರೇಶ್ವರ, ಮೇಲುಸೀಮೆ ಶಂಕ್ರಪ್ಪ, ವಿಜಯಕುಮಾ‌ರ್, ವಿಶ್ವಮೂರ್ತಿ, ಬಿ.ಜಿ. ಸಿದ್ದೇಶ್, ಗಡಂಬ್ಲಿ ಚನ್ನಬಸಪ್ಪ, ಭುವನೇಶ್‌ ಮೇಟಿ, ಅರಳಿ ಕುಮಾರಸ್ವಾಮಿ, ವಿ.ಜೆ. ಶ್ರೀಪಾದಸ್ವಾಮಿ, ಟಿ.ಎಂ. ಶಿವಕುಮಾ‌ರ್, ಎಂ.ವಿ. ಹಿರೇಮಠ, ಬಿ.ಎಂ.ಮಹಾಂತೇಶ್, ಮಲ್ಲಿಕಾರ್ಜುನ, ಎಚ್.ಎಂ.ಸುರೇಶ್, ದಕ್ಷಿಣಮೂರ್ತಿ, ಹೇಮಲತಾ, ಮಧುಮತಿ, ಗೋನಾಳ್ ನಿರ್ಮಲಾ, ಎಸ್.ಡಿ. ಪ್ರೇಮಲೀಲಾ, ನಾಗವೇಣಿ, ಪುಷ್ಪಾವತಿ, ಎಚ್.ಎಂ. ವಿಜಯಲಕ್ಷ್ಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

The post ನೇಹಾ ಹತ್ಯೆ: ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ appeared first on Hai Sandur kannada fortnightly news paper.

]]>
https://haisandur.com/2024/04/25/%e0%b2%a8%e0%b3%87%e0%b2%b9%e0%b2%be-%e0%b2%b9%e0%b2%a4%e0%b3%8d%e0%b2%af%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%97%e0%b3%86-%e0%b2%97%e0%b2%b2%e0%b3%8d%e0%b2%b2%e0%b3%81/feed/ 0
ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಸ್ಕೌಟ್ಸ್ & ಗೈಡ್ಸ್ ವಿಬಾಗದಿಂದ ಬೇಸಿಗೆ ಶಿಬಿರ https://haisandur.com/2024/04/24/%e0%b2%9c%e0%b2%bf%e0%b2%82%e0%b2%a6%e0%b2%be%e0%b2%b2%e0%b3%8d-%e0%b2%86%e0%b2%a6%e0%b2%b0%e0%b3%8d%e0%b2%b6-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b2%e0%b2%af-%e0%b2%b6/ https://haisandur.com/2024/04/24/%e0%b2%9c%e0%b2%bf%e0%b2%82%e0%b2%a6%e0%b2%be%e0%b2%b2%e0%b3%8d-%e0%b2%86%e0%b2%a6%e0%b2%b0%e0%b3%8d%e0%b2%b6-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b2%e0%b2%af-%e0%b2%b6/#respond Wed, 24 Apr 2024 08:57:50 +0000 https://haisandur.com/?p=34957 ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ದಿನಾಂಕ 22-04-2024 ಮತ್ತು 23-04-2024 ರಂದು ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಿಂದ ಶಾಲೆಯಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮವು ದ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಶಿಬಿರದಲ್ಲಿ ಮೊದಲು ಸ್ಕೌಟ್ ಲಾ, ಸ್ಕೌಟ್ ನಿಯಮಗಳು, ಬಿಪಿ 6 ವ್ಯಾಯಾಮಗಳು, ಪ್ರಾರ್ಥನೆಗೀತೆ, ಧ್ವಜಗೀತೆ, ಸ್ಕೌಟ್ ಪದ್ಧತಿಗಳು, ಸಮವಸ್ತ್ರದ ಕುರಿತು ತಿಳಿಸಿ ಕೊಡಲಾಯಿತು. ನಂತರ ಚಟುವಟಿಕೆಗಳ ಭಾಗವಾದ ಮೋಜಿನ ಆಟಗಳನ್ನು ಆಡಿಸಲಾಯಿತು.ಶಾಲೆಯ ವೈದ್ಯರಾದ ಸಂಗೀತ ರವರು ಪ್ರಾಥಮಿಕ ಚಿಕಿತ್ಸಾ ಪದ್ಧತಿಗಳನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು. ಎರಡನೆಯ ದಿನ ಮಕ್ಕಳಿಗೆ “ಪರಿಸರ […]

The post ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಸ್ಕೌಟ್ಸ್ & ಗೈಡ್ಸ್ ವಿಬಾಗದಿಂದ ಬೇಸಿಗೆ ಶಿಬಿರ appeared first on Hai Sandur kannada fortnightly news paper.

]]>
ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ದಿನಾಂಕ 22-04-2024 ಮತ್ತು 23-04-2024 ರಂದು ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಿಂದ ಶಾಲೆಯಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವು ದ್ವಜಾರೋಹಣದೊಂದಿಗೆ ಪ್ರಾರಂಭವಾಯಿತು.

ಶಿಬಿರದಲ್ಲಿ ಮೊದಲು ಸ್ಕೌಟ್ ಲಾ, ಸ್ಕೌಟ್ ನಿಯಮಗಳು, ಬಿಪಿ 6 ವ್ಯಾಯಾಮಗಳು, ಪ್ರಾರ್ಥನೆಗೀತೆ, ಧ್ವಜಗೀತೆ, ಸ್ಕೌಟ್ ಪದ್ಧತಿಗಳು, ಸಮವಸ್ತ್ರದ ಕುರಿತು ತಿಳಿಸಿ ಕೊಡಲಾಯಿತು. ನಂತರ ಚಟುವಟಿಕೆಗಳ ಭಾಗವಾದ ಮೋಜಿನ ಆಟಗಳನ್ನು ಆಡಿಸಲಾಯಿತು.ಶಾಲೆಯ ವೈದ್ಯರಾದ ಸಂಗೀತ ರವರು ಪ್ರಾಥಮಿಕ ಚಿಕಿತ್ಸಾ ಪದ್ಧತಿಗಳನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.

ಎರಡನೆಯ ದಿನ ಮಕ್ಕಳಿಗೆ “ಪರಿಸರ ನಡಿಗೆ” ಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಶಿಕ್ಷಕರು ಹಾಗೂ ವಕೀಲರಾದ ರವಿಕುಮಾರ್ ಮಕ್ಕಳಿಗೆ ಕಾನೂನಿನ ಅರಿವು ಮೂಡಿಸಿದರು. ನಂತರ ಮಕ್ಕಳು ವಿವಿಧ ಬಗೆಯ ಆಹಾರ ತಯಾರಿಕೆಯಲ್ಲಿ ತೊಡಗಿಕೊಂಡು ಬೆಂಕಿ ಸಹಿತ ಹಾಗೂ ಬೆಂಕಿ ರಹಿತವಾದ ಅಡುಗೆಗಳನ್ನು ತಯಾರಿಸಿದರು. ಕೊನೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶಾಲೆಯ ಮುಖ್ಯ ಶಿಕ್ಷಕಿಯಾದ ಭಾಗ್ಯವತಿ ಗಾಜುಲ ಹಾಗೂ ಪ್ರಾಂಶುಪಾಲರಾದ ಪ್ರಶಾಂತ್ ಮೂಲೆ ಆಗಮಿಸಿ ಮಕ್ಕಳು ತಯಾರಿಸಿದ ವಿವಿಧ ಭಕ್ಷ್ಯಗಳನ್ನು ಸವಿದು ಮಕ್ಕಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬೇಸಿಗೆ ಶಿಬಿರದಲ್ಲಿ ಸ್ಕೌಟ್ ಮುಖ್ಯಸ್ಥರಾದ ರವಿ ಎಂ, ಶ್ರೀಧರ್ ಎಂ, ಬಿ.ಮರಿಗೌಡ, ಜಿಲಾನ್,
ಗೈಡ್ಸ್ ವಿಭಾಗದ ಪದ್ಮಾವತಿ.ಪಿ, ಬಿ.ರೂಪ ರಾಯಚೂರು, ತುಳಸಿ.ಪಿ.ಬಿ, ಶ್ಯಾಮಲ, ಮತ್ತು ಬುಲ್ ಬುಲ್ಸ್ ವಿಭಾಗದ ವಾಮದೇವಪ್ಪ, ಮಂಜುನಾಥ್ ಹಾಗೂ ಫ್ಲಾಕ್ ವಿಭಾಗದಿಂದ ಸುನೀತ ಗಾಂಧಿ, ಅನುರಾಧ,ಭಾರತಿ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ರಾಷ್ಟ್ರಗೀತೆ ಹಾಡಿಸಿ, ಮಕ್ಕಳಿಗೆ ಬಿಸ್ಕೆಟ್ ಮತ್ತು ತಂಪು ಪಾನೀಯ ನೀಡುವುದರ ಮೂಲಕ ಬೇಸಿಗೆ ಶಿಬಿರಕ್ಕೆ ತೆರೆ ಎಳೆಯಲಾಯಿತು..

ಈ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಶ್ರೀಮತಿ ಮಲ್ಲೇಶ್ವರಿ ಎಸ್, ಓ,ಸಿ ಹಾಗೂ ಶ್ರೀಯುತ ಮೊಹಮ್ಮದ್ ಭಾಷಾ ಡಿ,ಓ,ಸಿ ಮತ್ತು ಶ್ರೀಯುತ ಸೋಮಪ್ಪ ಸಂಡೂರು ತಾಲೂಕಿನ ಸ್ಕೌಟ್ ಮತ್ತು ಗೈಡ್ಸ್ ವಿಭಾಗದ ಮುಖ್ಯಸ್ಥರು ಇವರಿಗೆ ಶಾಲೆ ವತಿಯಿಂದ ವಿಶೇಷ ಧನ್ಯವಾದಗಳನ್ನು ತಿಳಿಸಿ ಸನ್ಮಾನಿಸಲಾಯಿತು

The post ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಸ್ಕೌಟ್ಸ್ & ಗೈಡ್ಸ್ ವಿಬಾಗದಿಂದ ಬೇಸಿಗೆ ಶಿಬಿರ appeared first on Hai Sandur kannada fortnightly news paper.

]]>
https://haisandur.com/2024/04/24/%e0%b2%9c%e0%b2%bf%e0%b2%82%e0%b2%a6%e0%b2%be%e0%b2%b2%e0%b3%8d-%e0%b2%86%e0%b2%a6%e0%b2%b0%e0%b3%8d%e0%b2%b6-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b2%e0%b2%af-%e0%b2%b6/feed/ 0