ಮತ ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ; ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್ ಕರೆ

0
21

ಸಂಡೂರು:- ಪ್ರಜಾಪ್ರಭುತ್ವ ಮತದಾನ ಅತ್ಯಂತ ಪವಿತ್ರವಾದದ್ದು ಅದನ್ನು ಪ್ರತಿಯೊಬ್ಬರು ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್ ಕರೆ ನೀಡಿದರು.

ನಗರದ ಬಸ್ ನಿಲ್ದಾಣದ ಆವರಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ನೆರವೆರಿಸಿ ಮಾತನಾಡಿದರು. ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆ ಅಂಗವಾಗಿ ಉತ್ತಮ ಭವಿಷ್ಯಕ್ಕಾಗಿ ಮತದಾನ ನಮಗಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ಸಂಡೂರು ತಾಲೂಕಿನ ವಿವಿಧ ವಾರ್ಡ್ ಗಳಲ್ಲಿ ಅಭಿಯಾನವನ್ನು ಆಚರಿಸಿ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿ,ಗಟ್ಟಿಗೊಳಿಸಲು ಪ್ರಜೆಗಳು ಪ್ರತ್ಯಕ್ಷ ಪಾಲ್ಗೊಳ್ಳುವಿಕೆ ನಿರಂತರವಾಗಿ ಇರಬೇಕು ಎಂದರು.

ಪ್ರತಿಜ್ಞಾ ವಿಧಿ ಸ್ವೀಕಾರ :
ಕಾರ್ಯಕ್ರಮ ಅಂಗವಾಗಿ ಷಡಕ್ಷರಯ್ಯ ಎಚ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು ಇದೆ ವೇಳೆ ನಂದಿಹಳ್ಳಿ ಸ್ನಾತಕೋತ್ತರ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳಿಂದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ವಿಶೇಷತೆ :
ಸಂಡೂರು ತಾಲೂಕಿನ ಸ್ನಾತಕೋತ್ತರ ಕೇಂದ್ರ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳು ಹಾಗೂ ಎಲ್ಲಾ ಅಧಿಕಾರಿಗಳು ಬಸ್ ನಿಲ್ದಾಣದಿಂದ ಜಾತಾ ಆರಂಭಗೊಂಡು ಜೆಸ್ಕಾಂ ಕಚೇರಿ, ವಾಲ್ಮೀಕಿ ಭವನ, ತಾಲೂಕು ಪಂಚಾಯತ್, ತಹಸಿಲ್ದಾರ್ ಕಛೇರಿ ಮುಖಾಂತರ ಮತದಾರರಿಗೆ ಜಾಗೃತಿ ಮೂಡಿಸಿದರು.
ನಂತರ ವಿದ್ಯಾರ್ಥಿಗಳು ಮತದಾನದ ಜಾಗೃತಿ ಬಗ್ಗೆ ಮಾತನಾಡಿ ಬಳಿಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಮೂಲ್ಯವಾಗಿದ್ದು, ಸಂವಿಧಾನ ಬದ್ಧವಾಗಿ ಲಭಿಸಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ತಪ್ಪದೇ ಚಲಾಯಿಸಬೇಕು’ ಎಂದು ವಾಣಿಜ್ಯ ಅದ್ಯಾಯನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ರೇಖಾ ಎನ್ ಅವರು ಮಾತನಾಡಿದರು

ಮತದಾನದಲ್ಲಿ ಭಾಗವಹಿಸುವುದು ಎಲ್ಲ ಮತದಾರರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪ್ರತಿ ಮತದಾರನು ತನ್ನ ಮತದ ಮೌಲ್ಯವನ್ನು ಅರಿತು ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ಹಾಗೂ ಬಲಿಷ್ಠ ದೇಶ ಕಟ್ಟುವಂತಾಗಲಿ ಎಂಬುದೇ ಚುನಾವಣಾ ಆಯೋಗದ ಆಶಯವಾಗಿದೆ’ ಎಂದು ಸಾಗರ ರಾಠೋಡ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮಾತನಾಡಿ ನಂತರ ಎಚ್ ಅನಿಲ್ ಕುಮಾರ್ ಅವರು ಮಾತನಾಡಿ ದೇಶದ ಪ್ರಗತಿಗಾಗಿ ನಮ್ಮ ಮತದಾನ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು. ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಸೌಜನ್ಯ ಮಾತನಾಡಿ ಮತದಾನವನ್ನು ತಪ್ಪದೇ ಮಾಡಬೇಕು ದೇಶದ ಉನ್ನತಿಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದರು.ಈ ವೇಳೆ ವಾಣಿಜ್ಯ ಅದ್ಯಾಯನ ವಿಭಾಗದ ಸಂಯೋಜಕರಾದ ಡಾ.ಮುಬಾರಕ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ.ರವಿ ಬಿ. ಹಾಗೂ ಪುರಸಭೆ ಅಧಿಕಾರಿಗಳು ಹಾಗೂ ಚುನಾವಣೆ ಸಿಬ್ಬಂದಿ ವರ್ಗ ಜನಪ್ರತಿನಿಧಿಗಳು ಹಾಗೂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here