ದಾನಿಗಳು ರಕ್ತ ಕೊಡುವುದರ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ

0
13

ಸಂಡೂರು: ಏ: 29: ಕನ್ಯಾದಾನ, ರಕ್ತದಾನ ಈ ಎರಡು ದಾನಗಳು ಒಂದೇ ನಾಣ್ಯದ ಎರಡು ಮುಖಗಳು, ಕನ್ಯಾದಾನ ಮಾಡುವ ಮೂಲಕ ಇನ್ನೋಬ್ಬರ ಮನೆತನದ ವಂಶವನ್ನು ಬೆಳೆಸಿದ ಹಾಗೆ ರಕ್ತದಾನ ಸಹ ಅಷ್ಠೆ ಪ್ರಾಮುಖ್ಯತೆಯಿಂದ ಕೂಡಿದ್ದು ಬೇರೋಬ್ಬರಿಗೋಸ್ಕರ ಪ್ರಾಣ ಉಳಿಸಲು ರಕ್ತದಾನ ಮಾಡುವುದು ಸಂತೋಷದ ವಿಚಾರ ನಿಮ್ಮ ರಕ್ತಕೊಡುವುದರ ಮೂಲಕ ಜೀವ ಹಂಚಿಕೊಂಡು ನೆಮ್ಮದಿಯ ಬದುಕು ಸಾಗಿಸಿದರೆ ಅದುವೆ ಸುಕೃತ ಫಲ. ದಾನಿಗಳು ಸ್ವಯಂ ಪ್ರೇರಣೆಯಿಂದ ಆಸಕ್ತಿಯಿಂದ ರಕ್ತದಾನ ಮಾಡುವುದು ಒಳ್ಳೆಯ ಕ್ರಮ ಹರುಷದಿಂದ ಹೊರಬಂದು ರಕ್ತವನ್ನು ಇನ್ನೊಬ್ಬರಿಗೆ ದಾನವಾಗಿ ನೀಡಿದರೆ ಇನ್ನೊಬ್ಬರ ಜೀವ ಉಳಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ಅಂಕಮನಾಳ್ ಗಿರಿಜಮ್ಮನವರು ಮನದಾಳದ ಮಾತುಗಳನ್ನಾಡಿದರು.

ಅವರು ಇಂದು ಪಟ್ಟಣದ ಎಲ್.ಬಿ. ಕಾಲೋನಿಯ11ನೇ ವಾರ್ಡ ಕೃಷಿ ಇಲಾಖೆಯ ಹತ್ತಿರ ಇರುವ ಬಸವೇಶ್ವರ ಸೇವಾ ಸಮಿತಿ(ರಿ) ಅಂಗಸಂಸ್ಥೆಯಾದ ಶ್ರೀ ಸಿದ್ದರಾಮೇಶ್ವರ ಭಾರತೀಯ ಕಂಪ್ಯೂಟರ್ ತಂತ್ರಜ್ಞಾನ ಕೇಂದ್ರ ಸಂಡೂರು ಇವರ 17ನೇ ವಾರ್ಷಿಕೋತ್ಸವದ ಪ್ರಯುಕ್ತ 14ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಜಿಲ್ಲಾ ಟಾಸ್ಕ ಪೋರ್ಸ ಸಮಿತಿ ಬಳ್ಳಾರಿ, ಶ್ರೀ ಸ್ವಾಮಿ ವಿವೇಕಾನಂದ ರಕ್ತಕೇಂದ್ರ ಬಳ್ಳಾರಿ, ಶ್ರೀ ಸಿದ್ದರಾಮೇಶ್ವರ ಭಾರತೀಯ ಕಂಪ್ಯೂಟರ್ ತಂತ್ರಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉಪನ್ಯಾಸಕಿ ಪಾರ್ವತಿ ಅಂಕಮನಾಲ್ ಕೊಟ್ರೇಶಿ ಮಾತನಾಡಿ ಪುರುಷ ಮಹಿಳೆ ಎನ್ನುವ ಭೇದ ಭಾವವಿಲ್ಲದೆ 18 ರಿಂದ 60 ವರ್ಷದ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪುರುಷ ಮೂರು ತಿಂಗಳಿಗೆ ಒಮ್ಮೆ ರಕ್ತದಾನ, ಮಹಿಳೆ 4 ತಿಂಗಳಿಗೆ ಒಮ್ಮೇ ಮಾಡಬಹುದು, ದಾನಿಯ ದೇಹದ ತೂಕ 45 ಕೆ.ಜಿಗಿಂತ ಹೆಚ್ಚಿರಬೇಕು ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು ಸಿಸ್ಟೋಲಿಕ ರಕ್ತದೊತ್ತಡವು 100 ರಿಂದ 140 ಡಯಸ್ಟೋಲಿಕ್ ಒತ್ತಡವು 70 ರಿಂದ 100 ಇರುವವರು ರಕ್ತದಾನವನ್ನು ಮಾಡಬಹುದು ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಯ ಮುಖ್ಯ ಗುರುಗಳು ವ್ಯವಸ್ಥಾಪಕ ನಿರ್ದೇಶಕರು 3 ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವ ಸಿದ್ದರಾಮೆಶ್ವರ ಬಸವರಾಜಪ್ಪನವರು ಅಂಕಮನಾಳ್ ಮಾತನಾಡಿ ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ, ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿ, ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯ ಹೃದಯಘಾತವನ್ನು ಶೆ. 80 ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ. ರಕ್ತದ ಒತ್ತಡ ಇತೆರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುವುದು ಇವು ರಕ್ತದಾನ ಮಾಡುವುದರಿಂದ ದಾನಿಗಳಿಗೆ ಅಗುವ ಪ್ರಯೋಜನ ಎಂದು ತಿಳಿಸಿದರು.

ಅಕ್ಕನಬಳಗದ ಗೌರವಾಧ್ಯಕ್ಷೆ ಅಂಕಮನಾಳ್ ಶಾಂತಲಾ ಪ್ರಭುರಾಜ ಮಾತನಾಡಿ ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ ರಕ್ತದಾನ ಎನ್ನುವರು ಶಿಬಿರದ ಕಾರ್ಯಕ್ರಮವನ್ನು ಪ್ರತಿಯೊರ್ವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಂಕಮನಾಳ್ ಕೊಟ್ರೇಶ್, ಶಾಂತಲಾ ಪ್ರಭುರಾಜ್, ಅರಳಿಕುಮರಸ್ವಾಮಿ, ಬಳ್ಳಾರಿಯ ಮಂಜುನಾಥ, ರವಿ, ಸೃಜನ್, ಮನೋಜ್, ಸುವರ್ಣ ಅಂಕಮನಾಳ್ ಮಯೂರ್, ಷಣ್ಮುಖ, ಸಿದ್ದಪ್ಪ, ರುದ್ರಪ್ಪ ಶೋಭಾ ವಿಜಯಲಕ್ಷ್ಮೀ ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು, ಶಿಬಿರದಲ್ಲಿ 30 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.

LEAVE A REPLY

Please enter your comment!
Please enter your name here