ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಸ್ಕೌಟ್ಸ್ & ಗೈಡ್ಸ್ ವಿಬಾಗದಿಂದ ಬೇಸಿಗೆ ಶಿಬಿರ

0
5

ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ ದಿನಾಂಕ 22-04-2024 ಮತ್ತು 23-04-2024 ರಂದು ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಿಂದ ಶಾಲೆಯಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವು ದ್ವಜಾರೋಹಣದೊಂದಿಗೆ ಪ್ರಾರಂಭವಾಯಿತು.

ಶಿಬಿರದಲ್ಲಿ ಮೊದಲು ಸ್ಕೌಟ್ ಲಾ, ಸ್ಕೌಟ್ ನಿಯಮಗಳು, ಬಿಪಿ 6 ವ್ಯಾಯಾಮಗಳು, ಪ್ರಾರ್ಥನೆಗೀತೆ, ಧ್ವಜಗೀತೆ, ಸ್ಕೌಟ್ ಪದ್ಧತಿಗಳು, ಸಮವಸ್ತ್ರದ ಕುರಿತು ತಿಳಿಸಿ ಕೊಡಲಾಯಿತು. ನಂತರ ಚಟುವಟಿಕೆಗಳ ಭಾಗವಾದ ಮೋಜಿನ ಆಟಗಳನ್ನು ಆಡಿಸಲಾಯಿತು.ಶಾಲೆಯ ವೈದ್ಯರಾದ ಸಂಗೀತ ರವರು ಪ್ರಾಥಮಿಕ ಚಿಕಿತ್ಸಾ ಪದ್ಧತಿಗಳನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.

ಎರಡನೆಯ ದಿನ ಮಕ್ಕಳಿಗೆ “ಪರಿಸರ ನಡಿಗೆ” ಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಶಿಕ್ಷಕರು ಹಾಗೂ ವಕೀಲರಾದ ರವಿಕುಮಾರ್ ಮಕ್ಕಳಿಗೆ ಕಾನೂನಿನ ಅರಿವು ಮೂಡಿಸಿದರು. ನಂತರ ಮಕ್ಕಳು ವಿವಿಧ ಬಗೆಯ ಆಹಾರ ತಯಾರಿಕೆಯಲ್ಲಿ ತೊಡಗಿಕೊಂಡು ಬೆಂಕಿ ಸಹಿತ ಹಾಗೂ ಬೆಂಕಿ ರಹಿತವಾದ ಅಡುಗೆಗಳನ್ನು ತಯಾರಿಸಿದರು. ಕೊನೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶಾಲೆಯ ಮುಖ್ಯ ಶಿಕ್ಷಕಿಯಾದ ಭಾಗ್ಯವತಿ ಗಾಜುಲ ಹಾಗೂ ಪ್ರಾಂಶುಪಾಲರಾದ ಪ್ರಶಾಂತ್ ಮೂಲೆ ಆಗಮಿಸಿ ಮಕ್ಕಳು ತಯಾರಿಸಿದ ವಿವಿಧ ಭಕ್ಷ್ಯಗಳನ್ನು ಸವಿದು ಮಕ್ಕಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬೇಸಿಗೆ ಶಿಬಿರದಲ್ಲಿ ಸ್ಕೌಟ್ ಮುಖ್ಯಸ್ಥರಾದ ರವಿ ಎಂ, ಶ್ರೀಧರ್ ಎಂ, ಬಿ.ಮರಿಗೌಡ, ಜಿಲಾನ್,
ಗೈಡ್ಸ್ ವಿಭಾಗದ ಪದ್ಮಾವತಿ.ಪಿ, ಬಿ.ರೂಪ ರಾಯಚೂರು, ತುಳಸಿ.ಪಿ.ಬಿ, ಶ್ಯಾಮಲ, ಮತ್ತು ಬುಲ್ ಬುಲ್ಸ್ ವಿಭಾಗದ ವಾಮದೇವಪ್ಪ, ಮಂಜುನಾಥ್ ಹಾಗೂ ಫ್ಲಾಕ್ ವಿಭಾಗದಿಂದ ಸುನೀತ ಗಾಂಧಿ, ಅನುರಾಧ,ಭಾರತಿ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ರಾಷ್ಟ್ರಗೀತೆ ಹಾಡಿಸಿ, ಮಕ್ಕಳಿಗೆ ಬಿಸ್ಕೆಟ್ ಮತ್ತು ತಂಪು ಪಾನೀಯ ನೀಡುವುದರ ಮೂಲಕ ಬೇಸಿಗೆ ಶಿಬಿರಕ್ಕೆ ತೆರೆ ಎಳೆಯಲಾಯಿತು..

ಈ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಶ್ರೀಮತಿ ಮಲ್ಲೇಶ್ವರಿ ಎಸ್, ಓ,ಸಿ ಹಾಗೂ ಶ್ರೀಯುತ ಮೊಹಮ್ಮದ್ ಭಾಷಾ ಡಿ,ಓ,ಸಿ ಮತ್ತು ಶ್ರೀಯುತ ಸೋಮಪ್ಪ ಸಂಡೂರು ತಾಲೂಕಿನ ಸ್ಕೌಟ್ ಮತ್ತು ಗೈಡ್ಸ್ ವಿಭಾಗದ ಮುಖ್ಯಸ್ಥರು ಇವರಿಗೆ ಶಾಲೆ ವತಿಯಿಂದ ವಿಶೇಷ ಧನ್ಯವಾದಗಳನ್ನು ತಿಳಿಸಿ ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here