ದೇಶದ ರಕ್ಷಣೆ ಎಂದರೆ ಮೋದಿ, ಮೋದಿ ಎಂದರೇ ದೇಶವಾಗಿದೆ ಅವರನ್ನು ಮತ್ತೋಮ್ಮೆ ಪ್ರಧಾನಿ ಮಾಡೋಣ- ಜಿ.ಟಿ.ಪಂಪಾಪತಿ

0
14

ಸಂಡೂರು: ಏ:27: ಪ್ರತಿಯೊಂದು ಕುಟುಂಬಕ್ಕೂ ಆರೋಗ್ಯ ರಕ್ಷಣೆ ಮಾಡಿದಂತಹ ಮೋದಿಯವರು, ಪ್ರತಿ ಮನೆಗೆ ನೀರನ್ನು, ಅಕ್ಕಿಯನ್ನು , ಬೇಟಿ ಪಡವೋ, ಬೇಟಿ ಬಚಾವೋ ದಂತಹ ಮಹತ್ತರ ಯೋಜನೆಗಳನ್ನು ತಂದು ಮತ್ತೋಮ್ಮೆ ಮೋದಿ ಪ್ರಧಾನಿಯಾಗಲು 28 ರಂದು ಹೊಸಪೇಟೆಗೆ ಬೃಹತ್ ಬಹಿರಂಗ ವಿಜಯಸಂಕಲ್ಪ ಯಾತ್ರೆಗೆ ಅಗಮಿಸುತ್ತಿರುವುದರಿಂದ ಸ್ವಯಂ ಪ್ರೇರಿತರಾಗಿ ಸಭೆಗೆ ಹಾಜರಾಗಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಕರೆನೀಡಿದರು.

ಅವರು ಹೊಸಪೇಟೆಯಲ್ಲಿ 28 ರಂದು ಮೋದಿಯವರ ವಿಜಯಯಾತ್ರೆಯ ಬಹಿರಂಗ ಸಭೆಯ ಅಂಗವಾಗಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಭಾರತ ಇಂದು 3ನೇ ಸ್ಥಾನಕ್ಕೆ ಹೇರಿದೆ, ಮುಂದೆ ಪ್ರಥಮಸ್ಥಾನಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಅದ್ದರಿಂದ ಮೊತ್ತೋಮ್ಮೆ ಮೋದಿ ಪ್ರಧಾನಿಯಾಗಿಸುವ ಗುರಿಯನ್ನು ಹೊಂದಿದ್ದು, ಕೊಪ್ಪಳ ಮತ್ತು ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಮೋದಿಯವರ ಬಹಿರಂಗ ಸಭೆಯನ್ನು ಹೊಸಪೇಟೆಯ ಪುನೀತ್ ರಾಜಕುಮಾರ್ (ಅಪ್ಪು) ಅವರಣದಲ್ಲಿ ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಸಹ ಸ್ವಯಂ ಪ್ರೇರಿತರಾಗಿ ಭಾಗಿಯಾಗಬೇಕು, ಅಲ್ಲದೆ ಮೋದಿಯವರ ಯೋಜನೆಗಳನ್ನು ಪ್ರತಿ ಮನೆಗೆ ಮುಟ್ಟಿಸಿದ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಜಿಲ್ಲಾ ಎಸ್ಟಿ. ವಿಭಾಗದ ಮುಖಂಡ ಕೆ.ಎಸ್. ದಿವಾಕರ್ ಅವರು ಮಾತನಾಡಿ ಇಂದು ಕಾಂಗ್ರೇಸ್‍ ಅಡಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅವರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ, ಡ್ಯಾಂ ಇದ್ದರೂ ನೀರಿಲ್ಲ, ಕಾರ್ಖಾನೆಗಳಿದ್ದರೂ ಉದ್ಯೋಗವಿಲ್ಲ ಅಂತಹ ಕಾಂಗ್ರೇಸ್ ಪಕ್ಷವನ್ನು ದೂರವಿಡಬೇಕು, ಮೋದಿಯವರ ಬೃಹತ್ ಯೋಜನೆ, ವಿಶ್ವವೇ ಮೆಚ್ಚಿಕೊಂಡ ಅವರನ್ನು ಮತ್ತೋಮ್ಮೆ ಪ್ರಧಾನಿಯಾಗಿಸಲು ಅವಳಿ ಕ್ಷೇತ್ರಗಳ ಬೃಹತ್ ವಿಜಯಯಾತ್ರೆಯ ಅಂಗವಾಗಿ ಹಮ್ಮಿಕೊಂಡ ಈ ಸಭೆಯಲ್ಲಿ ಕ್ಷೇತ್ರದ ಪ್ರತಿಯೊಬ್ಬರೂ ಸಹ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ತಾಲೂಕು ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ ಅವರು ಮಾತನಾಡಿ ಬಳ್ಳಾರಿ ಮತ್ತು ಕೊಪ್ಪಳದ ಕೇಂದ್ರಸ್ಥಾನ ಹೊಸಪೇಟೆಯಾಗಿದ್ದು ಅಲ್ಲಿ ವಿಜಯಯಾತ್ರೆಗೆ ಮೋದಿಯವರು ಅಗಮಿಸುತ್ತಿದ್ದು ಸಂಡೂರು ಕ್ಷೇತ್ರದಿಂದ ಅತಿ ಹೆಚ್ಚು ಜನರು ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಬೇಕು, ಗ್ಯಾರಂಟಿಗಳನ್ನು ಮತದಾರ ತಿರಸ್ಕರಿಸಿದ್ದಾನೆ, ಅಲ್ಲದೆ ಕೇವಲ ಒಂದು ವರ್ಗವನ್ನು ಓಲೈಸುವ ಮಂತ್ರಿ ಬೇಡ ಎಂದು ಸಿದ್ದರಾಮಯ್ಯನವರನ್ನು ತಿರಸ್ಕರಿಸುವ ಮೂಲಕ ಮತ್ತೋಮ್ಮೆ ಮೋದಿಯ ಗುರುತು ಬಿಜೆಪಿಗೆ ಮತ ಹಾಕುವ ಮೂಲಕ ಗೆಲ್ಲಿಸೋಣ ಸಭೆಗೆ ಎಲ್ಲರೂ ಭಾಗಿಯಾಗೋಣ ಎಂದರು.

ಪುಷ್ಪಾ ಅವರು ಮಾತನಾಡಿ ಕ್ಷೇತ್ರವನ್ನು ಕಳೆದ 18 ವರ್ಷಗಳಿಂದ ಅಡಳಿತ ನಡೆಸಿದ ಕಾಂಗ್ರೇಸ್ ನ ತುಕರಾಂ ಅವರು ಸರ್ಕಾರಿ ಅಸ್ಪತ್ರೆಯಲ್ಲಿ ಬಾಣಂತಿಯರಿಗೆ ಸರಿಯಾದ ನೀರಿನ ವ್ಯವಸ್ಥೆಯೂ ಸಹ ಇಲ್ಲವಾಗಿದೆ, ಆಶ್ರಯ ಕಾಲೋನಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ, 5 ಗ್ಯಾರಂಟಿಗಳ ಅನುಷ್ಠಾನವೇ ಇಲ್ಲ ಅಭಿವೃದ್ದಿ ಶೂನ್ಯವಾಗಿದೆ, 100 ಹಾಸಿಗೆ ಆಸ್ಪತ್ರೆ ಹೆಸರಿಗೆ ಮಾತ್ರವಿದೆ, ಪ್ರತಿಯೊಂದಕ್ಕೂ ಬಳ್ಳಾರಿ ವಿಮ್ಸ್ ಎನ್ನುತ್ತಾರೆ, ಇಲ್ಲ ಸಂಜೀವಿನಿಗೆ ಕಳುಹಿಸುತ್ತಾರೆ ಇದು ಎಷ್ಟು ಸರಿ, ಅದ್ದರಿಂದ ಮತ್ತೋಮ್ಮೆ ಮೋದಿಗೆ ಮತ ಹಾಕಬೇಕು ದೇಶದ ಪ್ರಗತಿಗೆ ನಾಂದಿಹಡಬೇಕು ಎಂದರು.

ಸಮಾರಂಭದಲ್ಲಿ ವಿ.ಕೆ. ಬಸಪ್ಪ, ಮಹಿಳಾ ಉಪಾಧ್ಯಕ್ಷೆ ಪುಷ್ಪಾ, ಜಿಸಿಬಿ ರಾಮಕೃಷ್ಣ, ಇತರರು ಮಾತನಾಡಿದರು, ಸಭೆಯಲ್ಲಿ ತಾಲೂಕಿನ ಎಲ್ಲಾ ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು, ರಘು ನಿರೂಪಿಸಿದರು, ದರೋಜಿ ರಮೇಶ್ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಮುಖಂಡರಾದ ಪ್ರಭುಗೌಡ, ವಿಶ್ವನಾಥಗೌಡ, ಕೆ.ಎಸ್. ದಿವಾಕರ್, ಗೀತಾ ಕೊಂಚಗೇರಿ ಹರೀಶ್, ವಿಜಯಕುಮಾರ.ಕೆ. ಮಂಜುನಾಥ ದೀಪಾಗೋಡ್ಕೆ, ಯರ್ರಮ್ಮ, ಅಂತಾಪುರದ ರೈತ ಮುಖಂಡ ವಿ.ಎಸ್. ಶಂಕರ್, ದರೋಜಿ ರಮೇಶ್, ಚಿರಂಜೀವಿ ಹಲವಾರು ಗಣ್ಯರು ಇದ್ದರು.

LEAVE A REPLY

Please enter your comment!
Please enter your name here