Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಆರೋಗ್ಯ Archives - Hai Sandur kannada fortnightly news paper https://haisandur.com/category/health/ Hai Sandur News.Karnataka India Wed, 28 Jun 2023 14:27:12 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಆರೋಗ್ಯ Archives - Hai Sandur kannada fortnightly news paper https://haisandur.com/category/health/ 32 32 ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 1 ಚಮಚ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳು.! https://haisandur.com/2023/06/28/%e0%b2%96%e0%b2%be%e0%b2%b2%e0%b2%bf-%e0%b2%b9%e0%b3%8a%e0%b2%9f%e0%b3%8d%e0%b2%9f%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%a6%e0%b2%bf/ https://haisandur.com/2023/06/28/%e0%b2%96%e0%b2%be%e0%b2%b2%e0%b2%bf-%e0%b2%b9%e0%b3%8a%e0%b2%9f%e0%b3%8d%e0%b2%9f%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%a6%e0%b2%bf/#respond Wed, 28 Jun 2023 14:27:10 +0000 https://haisandur.com/?p=32678 Sesame Seeds Benefits: ನಮ್ಮಲ್ಲಿ ಬಗೆ ಬಗೆಯ ಆಹಾರ ತಯಾರಿಸಲು ಎಳ್ಳನ್ನು ಬಳಕೆ ಮಾಡುತ್ತೇವೆ. ಸಿಹಿ ಆಗಲಿ ಖಾರದ ಆಹಾರ ಪದಾರ್ಥಗಳಾಗಲಿ ಅದಕ್ಕೊಂದು ಚೂರು ಎಳ್ಳು ಹಾಕಿದರೆ ಸಾಕು ಅದರ ರುಚಿನೇ ಬೇರೆ. ಹೆಚ್ಚಾಗಿ ನಾವು ಎಳ್ಳು ಬಳಕೆ ಮಾಡುತ್ತೇವೆಯಾದರೂ ಇದರ ಆರೋಗ್ಯಕರ ಪ್ರಯೋಜನಗಳನ್ನು ಅಷ್ಟಾಗಿ ತಿಳಿದಿಲ್ಲ. ಈ ಚಿಕ್ಕ ಬೀಜ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ವಿಶ್ವದ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಈ ಚಿಕ್ಕ ಎಳ್ಳನ್ನು ಲಘುವಾಗಿ ಹುರಿದು ಆಹಾರಕ್ಕೆ ಸೇರಿಸುವುದರಿಂದ ಆಹಾರವು ತುಂಬಾ […]

The post ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 1 ಚಮಚ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳು.! appeared first on Hai Sandur kannada fortnightly news paper.

]]>
Sesame Seeds Benefits: ನಮ್ಮಲ್ಲಿ ಬಗೆ ಬಗೆಯ ಆಹಾರ ತಯಾರಿಸಲು ಎಳ್ಳನ್ನು ಬಳಕೆ ಮಾಡುತ್ತೇವೆ. ಸಿಹಿ ಆಗಲಿ ಖಾರದ ಆಹಾರ ಪದಾರ್ಥಗಳಾಗಲಿ ಅದಕ್ಕೊಂದು ಚೂರು ಎಳ್ಳು ಹಾಕಿದರೆ ಸಾಕು ಅದರ ರುಚಿನೇ ಬೇರೆ. ಹೆಚ್ಚಾಗಿ ನಾವು ಎಳ್ಳು ಬಳಕೆ ಮಾಡುತ್ತೇವೆಯಾದರೂ ಇದರ ಆರೋಗ್ಯಕರ ಪ್ರಯೋಜನಗಳನ್ನು ಅಷ್ಟಾಗಿ ತಿಳಿದಿಲ್ಲ.

ಈ ಚಿಕ್ಕ ಬೀಜ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ವಿಶ್ವದ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಈ ಚಿಕ್ಕ ಎಳ್ಳನ್ನು ಲಘುವಾಗಿ ಹುರಿದು ಆಹಾರಕ್ಕೆ ಸೇರಿಸುವುದರಿಂದ ಆಹಾರವು ತುಂಬಾ ರುಚಿಕರವಾಗಿರುತ್ತದೆ. ಜೊತೆಗೆ ಇದನ್ನು ಹಸಿಯಾಗಿಯೂ ತಿನ್ನಬಹುದು.

ಎಳ್ಳಿನ ಬೀಜಗಳ ವಿಧಗಳು:-
ಎಳ್ಳು ದೈನಂದಿನ ಅಡುಗೆಯಲ್ಲಿ ಬಳಸಲಾಗುವ ಚಿಕ್ಕ ಬೀಜವಾಗಿದೆ. ಈ ಎಳ್ಳು ಬಿಳಿ ಮತ್ತು ಕಪ್ಪು ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಎಳ್ಳು ಬೀಜಗಳನ್ನು ಸುವಾಸನೆಗಾಗಿ ಏಷ್ಯಾದಲ್ಲಿ ಹೆಚ್ಚಾಗಿ ಆಹಾರಕ್ಕೆ ಸೇರಿಸಲಾಗುತ್ತದೆ. ಹೀಗೆ ಬಳಸಲಾಗುವ ಈ ಪುಟ್ಟ ಬೀಜದ ಕಾಳಿನಲ್ಲಿ ಹಲವಾರು ಆರೋಗ್ಯಕರ ಪ್ರೆಯೋಜನಗಳಿವೆ. ಹಾಗಾದರೆ ಎಳ್ಳು ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು?

ಎಳ್ಳಿನಲ್ಲಿರುವ ಹಲವಾರು ಆರೋಗ್ಯಕರ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ.

ಕಪ್ಪು ಎಳ್ಳು ಬೀಜಗಳಿಗಿಂತ ಬಿಳಿ ಎಳ್ಳು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಆದರೆ ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ ಉತ್ತಮ ಪರಿಮಳವನ್ನು ಹೊಂದಿರುತ್ತದೆ. ಅಲ್ಲದೆ ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ 60% ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ.

ಎಳ್ಳಿನ ಎಣ್ಣೆಯು ಒಮೆಗಾ -6 ಕೊಬ್ಬಿನಾಮ್ಲಗಳು, ಫ್ಲೇವನಾಯ್ಡ್ ಫೀನಾಲಿಕ್ ಉತ್ಕರ್ಷಣ ನಿರೋಧಕಗಳು, ವಿಟಮಿನ್ಗಳು ಮತ್ತು ಆಹಾರದ ಫೈಬರ್ಗಳಂತಹ ಫೈಟೊನ್ಯೂಟ್ರಿಯಂಟ್ಗಳಲ್ಲಿ ಸಮೃದ್ಧವಾಗಿದೆ. ಹಾಗಾದರೆ ಈ ಎಳ್ಳನ್ನು ಪ್ರತಿನಿತ್ಯ ಸೇವಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ನೋಡೋಣ.

ಎಳ್ಳಿನ ಬೀಜಗಳಲ್ಲಿರುವ ಪೌಷ್ಟಿಕಾಂಶ:-
ಎಳ್ಳಿನಲ್ಲಿ ಪ್ರೋಟೀನ್, ಜಿಂಕ್ ಮತ್ತು ಐರನ್ ಹೆಚ್ಚಿದ್ದು, ಇದರಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಗಳಿದ್ದು, ಜೀವಕೋಶದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 30 ಜನರ ಮೇಲೆ ನಡೆಸಿದ ಒಂದು ಸಣ್ಣ ಅಧ್ಯಯನವು 4 ವಾರಗಳ ಕಾಲ ಪ್ರತಿದಿನ 2.5 ಗ್ರಾಂ ಕಪ್ಪು ಎಳ್ಳು ಸೇವಿಸುವುದರಿಂದ ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟವು ಕಡಿಮೆಯಾಗುತ್ತದೆ ಎಂದು ಕಂಡುಹಿಡಿದಿದೆ.

ಎಳ್ಳಿನಲ್ಲಿರುವ ಆರೋಗ್ಯಕರ ಪ್ರಯೋಜನಗಳು: –

  1. ಎಳ್ಳು ಹೆಚ್ಚು ಪ್ರೋಟೀನ್ ಹೊಂದಿದೆ
    ಎಳ್ಳು ಬೀಜಗಳು ಆಹಾರದ ಪ್ರೋಟೀನ್‌ಗಳೊಂದಿಗೆ ಉತ್ತಮ ಗುಣಮಟ್ಟದ ಅಮೈನೋ ಆಮ್ಲಗಳಿಂದ ಸಮೃದ್ಧವಾಗಿವೆ. ಆರೋಗ್ಯಕರ ಪ್ರೋಟೀನ್ ಇದರಲ್ಲಿರುವುದರಿಂದ ಪ್ರತಿದಿನ ಒಂದು ಚಮಚ ಎಳ್ಳನ್ನು ತಿನ್ನುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
  2. ಮಧುಮೇಹ ತಡೆಯುವ ಎಳ್ಳು
    ಎಳ್ಳು ಮೆಗ್ನೀಸಿಯಮ್ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಎಳ್ಳು ಅಥವಾ ಎಳ್ಳಿನ ಎಣ್ಣೆ ಮಧುಮೇಹವನ್ನು ತಡೆಯುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಅತಿಸೂಕ್ಷ್ಮ ಮಧುಮೇಹಿಗಳಲ್ಲಿ ಪ್ಲಾಸ್ಮಾ ಗ್ಲೂಕೋಸ್ ಅನ್ನು ಸುಧಾರಿಸುತ್ತದೆ.
  3. ರಕ್ತದೊತ್ತಡ ನಿವಾರಣೆ
    ಎಳ್ಳು ಮತ್ತು ಮಧುಮೇಹದ ಮೇಲೆ ನಡೆಸಿದ ಅಧ್ಯಯನದಿಂದಾಗಿ ಈ ಎಳ್ಳು ಬೀಜಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಎಳ್ಳಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮುಖ್ಯ ಪೋಷಕಾಂಶವನ್ನು ಹೊಂದಿದೆ.
  4. ಕೊಲೆಸ್ಟ್ರಾಲ್ ಮಟ್ಟ ಕಡಿಮೆ
    ಎಳ್ಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿರುವ ಫೈಟೊಸ್ಟೆರಾಲ್‌ಗಳು ಕೊಲೆಸ್ಟ್ರಾಲ್ ಉತ್ಪಾದನೆಯನ್ನು ತಡೆಯುತ್ತವೆ. ಕಪ್ಪು ಎಳ್ಳು ಬೀಜಗಳು ವಿಶೇಷವಾಗಿ ಫೈಟೊಸ್ಟೆರಾಲ್ಗಳಲ್ಲಿ ಸಮೃದ್ಧವಾಗಿವೆ. ಹಾಗಾಗಿ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಕಪ್ಪು ಎಳ್ಳು ತಿನ್ನುವುದು ತುಂಬಾ ಒಳ್ಳೆಯದು.
  5. ಜೀರ್ಣಕ್ರಿಯೆ ಶಕ್ತಿ ನೀಡುವ ಎಳ್ಳು
    ಎಳ್ಳು ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಪ್ರತಿನಿತ್ಯ ಒಂದು ಚಮಚ ಎಳ್ಳನ್ನು ತಿನ್ನುವುದರಿಂದ ಕರುಳು ಸುಗಮವಾಗುವುದು. ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುವುದು ಮತ್ತು ಕರುಳಿನಲ್ಲಿರುವ ತ್ಯಾಜ್ಯ ಪದಾರ್ಥಗಳು ಸರಿಯಾಗಿ ಹೊರಬರಲು ಸಹಾಯವಾಗುತ್ತದೆ.
  6. ಆರೋಗ್ಯಕರ ಚರ್ಮ ನಿಮ್ಮದಾಗಿಸುವ ಎಳ್ಳು
    ಎಳ್ಳು ಬೀಜಗಳಲ್ಲಿ ಸತುವು ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ ಮತ್ತು ಹಾನಿಗೊಳಗಾದ ಚರ್ಮದ ಅಂಗಾಂಶವನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ತ್ವಚೆಯು ಸುಂದರ ಮತ್ತು ಆರೋಗ್ಯಕರವಾಗಿರಬೇಕೆಂದು ನೀವು ಬಯಸಿದರೆ, ನಿಮ್ಮ ದೈನಂದಿನ ಆಹಾರದಲ್ಲಿ ಎಳ್ಳು ಅಥವಾ ಎಳ್ಳಿನ ಎಣ್ಣೆಯನ್ನು ಸೇರಿಸಿ. ಇದರಿಂದ ಚರ್ಮದ ಕ್ಯಾನ್ಸರ್ ಕಡಿಮೆಯಾಗುತ್ತದೆ.
  7. ಹೃದಯದ ಆರೋಗ್ಯ ಕಾಪಾಡುವ ಎಳ್ಳು
    ಎಳ್ಳಿನ ಎಣ್ಣೆ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಾದ ಸೆಸಮಾಲ್, ಅಪಧಮನಿಯ ನಾಳಗಳಲ್ಲಿ ಅಡಚಣೆಯನ್ನು ತಡೆಯುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
  8. ಕ್ಯಾನ್ಸರ್ ತಡೆಗಟ್ಟುವ ಎಳ್ಳು
    ಎಳ್ಳು ಬೀಜಗಳಲ್ಲಿ ಫೈಟಿಕ್ ಆಸಿಡ್, ಮೆಗ್ನೀಸಿಯಮ್ ಮತ್ತು ಫೈಟೊಸ್ಟೆರಾಲ್ಗಳು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳೊಂದಿಗೆ ಸಮೃದ್ಧವಾಗಿವೆ. ಹಾಗಾಗಿ ಇದನ್ನು ಪ್ರತಿದಿನ ಸೇವಿಸಿದರೆ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು.
  9. ಒತ್ತಡ ನಿವಾರಣೆಯ ಎಳ್ಳು
    ಎಳ್ಳು ಬೀಜಗಳಲ್ಲಿ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಮೃದ್ಧವಾಗಿವೆ. ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದು ಥಯಾಮಿನ್ ಮತ್ತು ಟ್ರಿಪ್ಟೊಫಾನ್‌ನಂತಹ ಶಾಂತಗೊಳಿಸುವ ವಿಟಮಿನ್‌ಗಳನ್ನು ಹೊಂದಿದೆ. ಇದು ಸಿರೊಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ದೈಹಿಕ ನೋವು ಮತ್ತು ಒತ್ತಡವನ್ನು ನಿವಾರಿಸುತ್ತದೆ ಮತ್ತು ರಾತ್ರಿಯ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
  10. ರಕ್ತಹೀನತೆಗೆ ರಾಮಬಾಣ
    ಬಿಳಿ ಎಳ್ಳು ಬೀಜಗಳಿಗಿಂತ ಕಪ್ಪು ಎಳ್ಳು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ತ್ವರಿತವಾಗಿ ತೊಡೆದುಹಾಕಲು ಎಳ್ಳನ್ನು ಪ್ರತಿದಿನ ಸೇವಿಸುವುದು ಉತ್ತಮ.
  11. ಡಿಎನ್ಎ ಹಾನಿ
    ಎಳ್ಳಿನಲ್ಲಿರುವ ಸೆಸಾಮೊಲ್ ಎಂಬ ವಸ್ತು ವಿಕಿರಣದಿಂದ ಉಂಟಾಗುವ ಡಿಎನ್‌ಎ ಹಾನಿಯಿಂದ ರಕ್ಷಿಸುತ್ತದೆ ಎಂದು ಅಧ್ಯಯನವೊಂದು ಕಂಡುಹಿಡಿದಿದೆ. ಆದ್ದರಿಂದ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 1 ಚಮಚ ಎಳ್ಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
  12. ಸಂಧಿವಾತ
    ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಸಂಧಿವಾತದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತವರು ನಿತ್ಯವೂ ಎಳ್ಳು ಬೆಲ್ಲ ತಿನ್ನುವುದು ಉತ್ತಮ. ಇದು ಸಂಧಿವಾತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಮೂಳೆಗಳು, ಕೀಲುಗಳು ಮತ್ತು ರಕ್ತನಾಳಗಳನ್ನು ಬಲಪಡಿಸುತ್ತದೆ.

13.ಯಕೃತ್ತಿನ ಆರೋಗ್ಯ
ಆಲ್ಕೋಹಾಲ್ ಕುಡಿಯುವ ಅಭ್ಯಾಸ ಹೊಂದಿರುವ ಜನರು ಯಕೃತ್ತನ್ನು ವೇಗವಾಗಿ ಹಾನಿಗೊಳಿಸಿಕೊಳ್ಳುತ್ತಾರೆ. ಅಂತಹವರು ದಿನಾಲೂ ಎಳ್ಳು ಬೆಲ್ಲ ತಿಂದರೆ ಮದ್ಯಪಾನದಿಂದ ಯಕೃತ್ ಗೆ ಆಗುವ ಹಾನಿ ತಡೆದು ಯಕೃತ್ ಕಾರ್ಯದ ಆರೋಗ್ಯ ಸುಧಾರಿಸುತ್ತದೆ.

  1. ಯುವಿ ಕಿರಣಗಳಿಂದ ರಕ್ಷಣೆ
    ಎಳ್ಳು ಬೀಜಗಳು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಚರ್ಮದ ಸುಕ್ಕುಗಳು ಮತ್ತು ಚರ್ಮವು ಕಪ್ಪಾಗುವುದನ್ನು ತಡೆಯುತ್ತವೆ. ಹಾಗಾಗಿ ಯೌವನದಿಂದ ಇರಲು ಬಯಸುವವರು ಪ್ರತಿದಿನ ಎಳ್ಳನ್ನು ಸೇವಿಸಬೇಕು.
  2. ಮೂಳೆ ಆರೋಗ್ಯ ಎಳ್ಳು ನಿನ್ನ ಕೈಯಲ್ಲಿ
    ಒಂದು ಹಿಡಿ ಎಳ್ಳು ಒಂದು ಲೋಟ ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಅಲ್ಲದೆ, ಎಳ್ಳಿನಲ್ಲಿರುವ ಸತುವು ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ. ಆದ್ದರಿಂದ ನೀವು ಮೂಳೆ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ, ಪ್ರತಿದಿನ ಕನಿಷ್ಠ ಒಂದು ಚಮಚ ಎಳ್ಳನ್ನು ಸೇವಿಸಿ.
  3. ಉಸಿರಾಟದ ಆರೋಗ್ಯ ಎಳ್ಳಿನಿಂದ ನಿವಾರಣೆ
    ಎಳ್ಳಿನಲ್ಲಿರುವ ಹೆಚ್ಚಿನ ಮೆಗ್ನೀಸಿಯಮ್ ಉಸಿರಾಟದ ತೊಂದರೆಗಳಾದ ಅಸ್ತಮಾ ಮತ್ತು ಇತರ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ಅಸ್ತಮಾ ಇರುವವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳ್ಳನ್ನು ಸೇವಿಸಿದರೆ ಅಸ್ತಮಾದಿಂದ ಮುಕ್ತಿ ಪಡೆಯಬಹುದು.
  4. ಕಣ್ಣಿನ ಆರೋಗ್ಯಕ್ಕೆ ಎಳ್ಳು
    ಸಾಂಪ್ರದಾಯಿಕ ಚೀನೀ ಔಷಧದ ಪ್ರಕಾರ, ಯಕೃತ್ತು ಮತ್ತು ಕಣ್ಣುಗಳು ಸಂಬಂಧಿಸಿವೆ. ಯಕೃತ್ತು ಕಣ್ಣುಗಳಿಗೆ ರಕ್ತವನ್ನು ಪೂರೈಸುವ ಮೂಲಕ ಅವುಗಳ ಆರೋಗ್ಯಕರ ಕಾರ್ಯನಿರ್ವಹಣೆಯನ್ನು ಬೆಂಬಲಿಸುತ್ತದೆ. ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಬಯಸುವವರು ಪ್ರತಿದಿನ ಕಪ್ಪು ಎಳ್ಳನ್ನು ಸೇವಿಸಬೇಕು. ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಎಳ್ಳಿನ ಎಣ್ಣೆಯ ಪ್ರಯೋಜನಗಳು:-

  1. ಬಾಯಿಯ ಆರೋಗ್ಯಕ್ಕಾಗಿ ಎಳ್ಳು ಬಳಸಿ
    ಆಯುರ್ವೇದದ ಪ್ರಕಾರ, ಎಳ್ಳು ಎಣ್ಣೆ ಬಾಯಿಯ ಆರೋಗ್ಯವನ್ನು ಸುಧಾರಿಸಲು ಶಿಫಾರಸು ಮಾಡಲಾಗುತ್ತದೆ. ಮೇಲಾಗಿ ಎಳ್ಳು ಎಣ್ಣೆ ಹಚ್ಚುವುದರಿಂದ ಹಲ್ಲಿನ ಮೇಲಿನ ಹಳದಿ ಕಲೆಗಳು ನಿವಾರಣೆಯಾಗುತ್ತದೆ, ಹಲ್ಲು ಹುಳುಕಾಗುವುದು ಕಡಿಮೆಯಾಗುತ್ತದೆ ಮತ್ತು ಬಾಯಿಯ ಆರೋಗ್ಯ ಮಾತ್ರವಲ್ಲದೆ ದೇಹದ ಒಟ್ಟಾರೆ ಆರೋಗ್ಯವೂ ಸುಧಾರಿಸುತ್ತದೆ.
  2. ಮಗುವಿನ ಆರೋಗ್ಯ
    ಎಳ್ಳಿನ ಎಣ್ಣೆಯಿಂದ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಅವರ ಬೆಳವಣಿಗೆ ಸುಧಾರಿಸುತ್ತದೆ ಮತ್ತು ಮಕ್ಕಳು ಚೆನ್ನಾಗಿ ನಿದ್ದೆ ಮಾಡುತ್ತವೆ. ಮುಖ್ಯವಾಗಿ ಡಯಾಪರ್ ರಾಶ್ ತಡೆಗಟ್ಟಲು ಇದು ಉತ್ತಮ ಬಳಕೆಯಾಗಿದೆ. ಆದ್ದರಿಂದ ನಿಮ್ಮ ಮಗುವಿಗೆ ಪ್ರತಿದಿನ ತೆಂಗಿನ ಅಥವಾ ಎಳ್ಳು ಎಣ್ಣೆಯಿಂದ ಮಸಾಜ್ ಮಾಡಿ.

3.ಆರೋಗ್ಯಕರ ಕೂದಲು
ಎಳ್ಳಿನಲ್ಲಿರುವ ಪೋಷಕಾಂಶಗಳು ನೆತ್ತಿ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಅದಕ್ಕಾಗಿ ನೀವು ಎಳ್ಳಿನ ಬೀಜಗಳಿಂದ ಪಡೆದ ತೈಲದೊಂದಿಗೆ ನಿಮ್ಮ ಕೂದಲಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಎಳ್ಳನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಇದು ಆರೋಗ್ಯಕರ ಕೂದಲನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಎಳ್ಳಿನ ಬೀಜಗಳ ಸೇವನೆಯಿಮದಾಗುವ ಅಡ್ಡ ಪರಿಣಾಮಗಳು:

  1. ಎಳ್ಳು ಬೀಜಗಳನ್ನು ಮಿತಿಯಲ್ಲಿ ಸೇವಿಸದಿದ್ದರೆ, ಅವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಾಮಾನ್ಯಕ್ಕಿಂತ ಕಡಿಮೆ ಮಾಡಲು ಕಾರಣವಾಗಬಹುದು.
  2. ಎಳ್ಳು ಬೀಜಗಳ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಅಪಾಯಕಾರಿಯಾಗಿ ಕಡಿಮೆ ಮಟ್ಟಕ್ಕೆ ಇಳಿಸಬಹುದು.
  3. ಎಳ್ಳಿನ ನಾರಿನಂಶವು ಹೊಟ್ಟೆಯಲ್ಲಿ ಪದರವನ್ನು ರಚಿಸಬಹುದು, ಇದು ಉಬ್ಬುವಿಕೆ ಮತ್ತು ನೋವನ್ನು ಉಂಟುಮಾಡಬಹುದು.

ಸುನೀತಾ.ಬಿ

The post ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 1 ಚಮಚ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳು.! appeared first on Hai Sandur kannada fortnightly news paper.

]]>
https://haisandur.com/2023/06/28/%e0%b2%96%e0%b2%be%e0%b2%b2%e0%b2%bf-%e0%b2%b9%e0%b3%8a%e0%b2%9f%e0%b3%8d%e0%b2%9f%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%a6%e0%b2%bf/feed/ 0
ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. https://haisandur.com/2023/02/08/%e0%b2%ac%e0%b3%86%e0%b2%b3%e0%b3%8d%e0%b2%b3%e0%b3%81%e0%b2%b3%e0%b3%8d%e0%b2%b3%e0%b2%bf-%e0%b2%87%e0%b2%b2%e0%b3%8d%e0%b2%b2%e0%b2%a6-%e0%b2%86%e0%b2%b9%e0%b2%be%e0%b2%b0-%e0%b2%95%e0%b2%b2/ https://haisandur.com/2023/02/08/%e0%b2%ac%e0%b3%86%e0%b2%b3%e0%b3%8d%e0%b2%b3%e0%b3%81%e0%b2%b3%e0%b3%8d%e0%b2%b3%e0%b2%bf-%e0%b2%87%e0%b2%b2%e0%b3%8d%e0%b2%b2%e0%b2%a6-%e0%b2%86%e0%b2%b9%e0%b2%be%e0%b2%b0-%e0%b2%95%e0%b2%b2/#respond Wed, 08 Feb 2023 09:42:45 +0000 https://haisandur.com/?p=31429 ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ.2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ.3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು.4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು ಮತ್ತು ಲೇಪಿಸುವುದರಿಂದ ಗಾಯ […]

The post ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. appeared first on Hai Sandur kannada fortnightly news paper.

]]>
ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ.

1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ.
2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ.
3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು.
4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು ಮತ್ತು ಲೇಪಿಸುವುದರಿಂದ ಗಾಯ ಗುಣಪಡಿಸಬಹುದು.
5) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಜ್ವರ ಗುಣವಾಗುವುದು.
6) ಬೆಳ್ಳುಳ್ಳಿ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ಸ್ವಲ್ಪ ಬೆಲ್ಲ ಹಾಕಿ ಶರಭತ್ ಮಾಡಿ ಎರಡರಿಂದ ಮೂರು ಗಂಟೆಗೆ ಒಮ್ಮೆ ಕೊಡುತ್ತಿದ್ದರೆ ಮಕ್ಕಳ ಬಿಡದೆ ಇರುವ ಕೆಮ್ಮು ಗುಣವಾಗುತ್ತದೆ.
7) ಬೆಳ್ಳುಳ್ಳಿ ಹೊಳಪನ್ನು ಸ್ವಲ್ಪ ಬೆಲ್ಲದೊಂದಿಗೆ ಅರೆದು ಗಂಟಲಿಗೆ ಹಚ್ಚುವುದರಿಂದ ಗಂಟಲುಗಳಲೆ ಗುಣವಾಗುತ್ತದೆ.
8) ಬೆಳ್ಳುಳ್ಳಿಯ ರಸಕ್ಕೆ ಸಮ ಪ್ರಮಾಣದಲ್ಲಿ ಜೇನುತುಪ್ಪ ಸೇರಿಸಿ ಹಚ್ಚುವುದರಿಂದ ಅರೆದಲೆ ಸೂಲೆ ಗುಣವಾಗುತ್ತದೆ.
9) ಬೆಳ್ಳುಳ್ಳಿಯ ರಸವನ್ನು ಬೆಚ್ಚಗೆ ಮಾಡಿ ಎರಡರಿಂದ ಮೂರು ಹನಿ ಕಿವಿಗೆ ಬಿಡುವುದರಿಂದ ಕಿವಿ ನೋವು ಗುಣವಾಗುತ್ತದೆ ಮತ್ತು ಕಿವಿಯಲ್ಲಿ ಯಾವುದೇ ಹುಳು ಸೇರಿಕೊಂಡರು ಹೊರಗೆ ಬರುತ್ತದೆ.
10) ಸ್ವಲ್ಪ ತುಪ್ಪ ಹಾಕಿ ಬೆಳ್ಳುಳ್ಳಿಯನ್ನು ಹುರಿದು ತುಪ್ಪವನ್ನು ಸೇರಿಸಿ ಅರೆದು ಒಂದು ಚಮಚ ಜೇನು ಸೇರಿಸಿ ತಿನ್ನುತ್ತಿದ್ದರೆ ಉಬ್ಬಸ ಗುಣವಾಗುತ್ತದೆ.
11) ಬೆಳ್ಳುಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಚರ್ಮರೋಗಕ್ಕೆ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.
12) ಬೆಳ್ಳುಳ್ಳಿ ರಸಕ್ಕೆ ಉಪ್ಪು ಸೇರಿಸಿ ಹಚ್ಚಿದರೆ ಚೇಳಿನ ವಿಷ ಇಳಿಯುತ್ತದೆ.
13) ಬೆಳ್ಳುಳ್ಳಿ ಎಸಳಿಗೆ ಎಳ್ಳೆಣ್ಣೆ ಸೇರಿಸಿ ಸೈಂಧವ ಲವಣ ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ವಾತ ಜ್ವರ ಗುಣವಾಗುತ್ತದೆ.
14) 20 ಗ್ರಾಂ ಬೆಳ್ಳುಳ್ಳಿ ಸಮ ಪ್ರಮಾಣದ ಶುಂಠಿ ಲಕ್ಕಿ ಸೊಪ್ಪು ಸಮ ಪ್ರಮಾಣ 8 ಪಾಲು ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ ಸೋಸಿ ಎರಡು ಹತ್ತು ಸೇವಿಸುವುದರಿಂದ ವಾತರೋಗ ಗುಣವಾಗುತ್ತದೆ.
15) ದುಷ್ಟ ಹುಣ್ಣಿನ ಮೇಲೆ ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ಹುಳು ಆಗುವುದಿಲ್ಲ.
16) ದುಷ್ಟ ಜಂತುಗಳು ಕಚ್ಚಿದಾಗ ಬೆಳ್ಳುಳ್ಳಿಯನ್ನು ಹಚ್ಚುವುದು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ವಿಷ ಇರುವುದಿಲ್ಲ.
17) ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಂಡಿ ನೋವು ಗುಣವಾಗುತ್ತದೆ.
18) ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಚಚ್ಚಿ ಕುದಿಸಿ ಕಪ್ಪಾದ ಮೇಲೆ ಬೆಳ್ಳುಳ್ಳಿಯನ್ನು ತೆಗೆದು ಎಣ್ಣೆಯನ್ನು ಸೀಸೆಯಲ್ಲಿ ಭದ್ರವಾಗಿಟ್ಟು ನೋವಿರುವ ಜಾಗದಲ್ಲಿ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
19) ಆರು ಏಳು ಎಸಳು ಬೆಳ್ಳುಳ್ಳಿಯನ್ನು ಅಕ್ಕಿಯಲ್ಲಿ ಹಾಕಿ ಅನ್ನ ಮಾಡಿ ತಿನ್ನುವುದರಿಂದ ವಾತರೋಗಗಳು ನಿವಾರಣೆಯಾಗುತ್ತದೆ ಮತ್ತು ತಡೆಯಲಾಗದ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
20) ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಾಲಿನಲ್ಲಿ ಬೇಯಿಸಿ ತುಪ್ಪದಲ್ಲಿ ಕೆಂಪಾಗಿ ಹುರಿದು ಇತರೆ ಸಾಮಗ್ರಿಗಳನ್ನು ಸೇರಿಸಿ ನಾನು ತಯಾರಿಸಿದ ಔಷಧಿ ಪಾರ್ಶ್ವ ವಾಯು ಮತ್ತು ವಾತರೋಗಕ್ಕೂ ತುಂಬಾ ಒಳ್ಳೆಯ ಔಷಧಿಯಾಗಿದೆ.
21) ಬೆಳ್ಳುಳ್ಳಿ ಮತ್ತು ಶುಂಠಿ ಪುಡಿಯನ್ನು ಶುಂಠಿ ಪೇಸ್ಟ್ ಸೇರಿಸಿ ಹಚ್ಚಿದರೆ ತಲೆನೋವು ಗುಣವಾಗುತ್ತದೆ.
22) ಚಳಿಗಾಲದಲ್ಲಿ ಹೆಚ್ಚು ಉಪಯೋಗಿಸುವುದರಿಂದ ಶಾಖ ಹೆಚ್ಚಿಸಿ ದೇಹದ ನೋವು ನಿವಾರಣೆ ಮಾಡುತ್ತದೆ.
23) ಪ್ರತಿ ದಿನ ಎರಡು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಬಿಪಿ ಹತೋಟಿಗೆ ಬರುತ್ತದೆ.

ಸಂಗ್ರಹ ವರದಿ

The post ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. appeared first on Hai Sandur kannada fortnightly news paper.

]]>
https://haisandur.com/2023/02/08/%e0%b2%ac%e0%b3%86%e0%b2%b3%e0%b3%8d%e0%b2%b3%e0%b3%81%e0%b2%b3%e0%b3%8d%e0%b2%b3%e0%b2%bf-%e0%b2%87%e0%b2%b2%e0%b3%8d%e0%b2%b2%e0%b2%a6-%e0%b2%86%e0%b2%b9%e0%b2%be%e0%b2%b0-%e0%b2%95%e0%b2%b2/feed/ 0
ಸುವರ್ಣಗಡ್ಡೆಯನ್ನು ಹೀಗೆ ಬಳಸಿ ಮೂಲವ್ಯಾಧಿ ಬೇಗನೆ ಮಾಯವಾಗುವುದು https://haisandur.com/2022/11/14/%e0%b2%b8%e0%b3%81%e0%b2%b5%e0%b2%b0%e0%b3%8d%e0%b2%a3%e0%b2%97%e0%b2%a1%e0%b3%8d%e0%b2%a1%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b9%e0%b3%80%e0%b2%97%e0%b3%86-%e0%b2%ac%e0%b2%b3/ https://haisandur.com/2022/11/14/%e0%b2%b8%e0%b3%81%e0%b2%b5%e0%b2%b0%e0%b3%8d%e0%b2%a3%e0%b2%97%e0%b2%a1%e0%b3%8d%e0%b2%a1%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b9%e0%b3%80%e0%b2%97%e0%b3%86-%e0%b2%ac%e0%b2%b3/#respond Mon, 14 Nov 2022 10:13:10 +0000 https://haisandur.com/?p=30332 ಸುವರ್ಣಗಡ್ಡೆ ಮೂಲವ್ಯಾಧಿಗೆ ಬೆಸ್ಟ್‌ ಆಹಾರವಾಗಿದೆ. ಹೀಗಾಗಿ ನಿಯಮಿತವಾಗಿ ಸುವರ್ಣಗಡ್ಡೆಯನ್ನು ಸೇವನೆ ಮಾಡುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಣ ಮಾಡಬಹುದಾಗಿದೆ. ದಿನನಿತ್ಯ ಜೀವನಶೈಲಿಯಲ್ಲಿ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಬೆಂಬಿಡದೆ ಕಾಡುತ್ತವೆ. ಅಂತಹವುಗಳಲ್ಲಿ ಮೂಲವ್ಯಾಧಿ ಕೂಡ ಒಂದು. ಮೂಲವ್ಯಾಧಿ ಒಮ್ಮೆ ಬಂದರೆ ಅದನ್ನು ನಿಯಂತ್ರಿಸಬಹುದು ಹೊರತು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ. ಕೊನೆಯ ಆಯ್ಕೆ ಎಂದರೆ ಅದು ಶಸ್ತ್ರಚಿಕಿತ್ಸೆಯೇ ಆಗಿರುತ್ತದೆ. ಹೀಗಾಗಿ ಆಹಾರದ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಮೂಲವ್ಯಾಧಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸುವರ್ಣಗಡ್ಡೆ ಅತ್ಯಂತ ಉತ್ತಮ ಆಹಾರ ಎನ್ನುತ್ತಾರೆ […]

The post ಸುವರ್ಣಗಡ್ಡೆಯನ್ನು ಹೀಗೆ ಬಳಸಿ ಮೂಲವ್ಯಾಧಿ ಬೇಗನೆ ಮಾಯವಾಗುವುದು appeared first on Hai Sandur kannada fortnightly news paper.

]]>
ಸುವರ್ಣಗಡ್ಡೆ ಮೂಲವ್ಯಾಧಿಗೆ ಬೆಸ್ಟ್‌ ಆಹಾರವಾಗಿದೆ. ಹೀಗಾಗಿ ನಿಯಮಿತವಾಗಿ ಸುವರ್ಣಗಡ್ಡೆಯನ್ನು ಸೇವನೆ ಮಾಡುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಣ ಮಾಡಬಹುದಾಗಿದೆ.

ದಿನನಿತ್ಯ ಜೀವನಶೈಲಿಯಲ್ಲಿ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಬೆಂಬಿಡದೆ ಕಾಡುತ್ತವೆ. ಅಂತಹವುಗಳಲ್ಲಿ ಮೂಲವ್ಯಾಧಿ ಕೂಡ ಒಂದು. ಮೂಲವ್ಯಾಧಿ ಒಮ್ಮೆ ಬಂದರೆ ಅದನ್ನು ನಿಯಂತ್ರಿಸಬಹುದು ಹೊರತು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ.

ಕೊನೆಯ ಆಯ್ಕೆ ಎಂದರೆ ಅದು ಶಸ್ತ್ರಚಿಕಿತ್ಸೆಯೇ ಆಗಿರುತ್ತದೆ. ಹೀಗಾಗಿ ಆಹಾರದ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

ಮೂಲವ್ಯಾಧಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸುವರ್ಣಗಡ್ಡೆ ಅತ್ಯಂತ ಉತ್ತಮ ಆಹಾರ ಎನ್ನುತ್ತಾರೆ ವೈದ್ಯರು. ಹಾಗಾದರೆ ಹೇಗೆ ಬಳಕೆ ಮಾಡಬೇಕು, ಯಾವಾಗ ಬಳಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
​ಮೂಲವ್ಯಾಧಿಯ ಲಕ್ಷಣಗಳೆಂದರೆ

ಮಲವಿಸರ್ಜನೆಯ ತೊಂದರೆ
ನೋವು, ಮಲವನ್ನು ಹಾದುಹೋಗಲು ಅಸಮರ್ಥತೆ
ಆಯಾಸ , ಕರುಳಿನ ಚಲನೆಯ ಸಮಯದಲ್ಲಿ ನೋವು ಅಥವಾ ರಕ್ತಸ್ರಾವ ಕಂಡುಬರುತ್ತದೆ.

​ಸುವರ್ಣಗಡ್ಡೆ :- ಸುವರ್ಣಗಡ್ಡೆ ಆಲೂಗೆಡ್ಡೆಯಂತೆ ಮಣ್ಣಿನಡಿಯಲ್ಲಿ ಬೆಳೆಯುತ್ತದೆ. ಒಮ್ಮೆ ತೆಗದರೂ ಅದರ ಬೇರುಗಳು ಮತ್ತೆ ಗಡ್ಡೆಯಾಗಿ ಬೆಳೆಯುತ್ತದೆ. ಈ ಗಡ್ಡೆಯ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದಕ್ಕೆ ಕಾರಣವೆಂದರೆ ಎಲ್ಲಾ ಪೋಷಕಾಂಶಗಳು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ.

ಸುವರ್ಣಗಡ್ಡೆಯಲ್ಲಿ ನಾರಿನಾಂಶ ಹಾಗೂ ಲೋಳೆಯ ಅಂಶ ಉತ್ತಮವಾಗಿರುತ್ತದೆ. ಹೀಗಾಗಿ ಕರುಳಿನ ಆರೋಗ್ಯವನ್ನು ಕಾಪಾಡಲು, ಜೀರ್ಣಕ್ರಿಯೆ ಉತ್ತಮವಾಗಲು ಹಾಗೂ ಮಲವಿಸರ್ಜನೆ ಸರಿಯಾಗಿ ಆಗಲು ಕೂಡ ಸಹಾಯ ಮಾಡುತ್ತದೆ.

​ಮೂಲವ್ಯಾಧಿಗೆ ಬೆಸ್ಟ್‌ :- ಮೂಲವ್ಯಾಧಿ ಸಮಸ್ಯೆ ಇದ್ದವರು ಅಗತ್ಯವಾಗಿ ಸುವರ್ಣಗಡ್ಡೆಯನ್ನು ತಿನ್ನಬೇಕು. ಇದರಿಂದ 2 ವಾರದೊಳಗೆ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಸುವರ್ಣ ಗಡ್ಡೆಯನ್ನು ತಿಂದ ನಂತರ ಮಜ್ಜಿಗೆ ತೆಗೆದುಕೊಳ್ಳಿ. ಉತ್ತಮ ಫಲಿತಾಂಶಗಳನ್ನು ನೋಡಲು ಕನಿಷ್ಠ 2 ವಾರಗಳವರೆಗೆ ಇದನ್ನು ಮಾಡಿ.

ಸುವರ್ಣಗಡ್ಡೆಯ ಬಳಕೆ :- ಸುವರ್ಣಗಡ್ಡೆಯನ್ನು ಹೀಗೆ ಬಳಸಿ, ಮೊದಲು ಕೈಗೆ ಸಾಸಿವೆ ಎಣ್ಣೆಯನ್ನು ಹಚ್ಚಿ. ಅದರ ನಂತರ ನಿಮ್ಮ ಕೈಗಳನ್ನು ಉಪ್ಪು ನೀರಿನಲ್ಲಿ ತೊಳೆಯಿರಿ. ನಂತರ ತರಕಾರಿ ಸಿಪ್ಪೆ ತೆಗೆಯಿರಿ. ಅದನ್ನು ಕತ್ತರಿಸಿ ಸ್ವಲ್ಪ ಸಮಯ ಕುದಿಸಿ ನಂತರ ನೀವು ಇತರ ತರಕಾರಿಗಳನ್ನು ತಯಾರಿಸುವ ವಿಧಾನವನ್ನು ಬಳಸಿ ಆದರೆ ಹೆಚ್ಚು ಮಸಾಲೆಗಳನ್ನು ಸೇರಿಸಬೇಡಿ. ಇದನ್ನು ಮಾಡುವಾಗ, ಸ್ವಲ್ಪ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಮೆಣಸು, ಕಲ್ಲು ಉಪ್ಪು ಸೇರಿಸಿ ಚೆನ್ನಾಗಿ ರೋಸ್ಟ್‌ ಮಾಡಿ ತಿನ್ನಬಹುದು. ಅಥವಾ ಪಲ್ಯ. ಸಾಂಬಾರ್‌ ರೀತಿಯಲ್ಲಿಯೂ ನೀವು ಇದನ್ನು ಬಳಕೆ ಮಾಡಬಹುದು.

ಇತರ ಮನೆಮದ್ದುಗಳೆಂದರೆ…

ನಿಮಗೆ ಬಾಯಾರಿಕೆಯಾದಾಗ ಸಾಕಷ್ಟು ನೀರು ಕುಡಿಯಿರಿ. 10 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ಕುಳಿತುಕೊಳ್ಳಿ. ಸರಿಯಾದ ಸಮಯಕ್ಕೆ ಊಟವನ್ನು ಮಾಡಿ.
ಮಲಗುವ ಮುನ್ನ ಒಂದು ಕಪ್ ಉಗುರುಬೆಚ್ಚಗಿನ ಹಾಲಿಗೆ 1 ಟೀಚಮಚ ದೇಸಿ ಹಸುವಿನ ತುಪ್ಪವನ್ನು ತೆಗೆದುಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಮೂಲವ್ಯಾಧಿ ಸಮಸ್ಯೆಯನ್ನು ನಿಯಂತ್ರಿಸಬಹುದು.

ಪವಿತ್ರಾ ಭಟ್.
ವಿಜಯಕರ್ನಾಟಕ.

The post ಸುವರ್ಣಗಡ್ಡೆಯನ್ನು ಹೀಗೆ ಬಳಸಿ ಮೂಲವ್ಯಾಧಿ ಬೇಗನೆ ಮಾಯವಾಗುವುದು appeared first on Hai Sandur kannada fortnightly news paper.

]]>
https://haisandur.com/2022/11/14/%e0%b2%b8%e0%b3%81%e0%b2%b5%e0%b2%b0%e0%b3%8d%e0%b2%a3%e0%b2%97%e0%b2%a1%e0%b3%8d%e0%b2%a1%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b9%e0%b3%80%e0%b2%97%e0%b3%86-%e0%b2%ac%e0%b2%b3/feed/ 0
ವಿಟಮಿನ್ ಬಿ12 ಅಂಶ ಹೆಚ್ಚಿರುವ ಮೊಟ್ಟೆ, ಹಾಲು, ಮೊಸರು, ಸ್ವಲ್ಪ ಜಾಸ್ತಿ ಸೇವಿಸಿ… https://haisandur.com/2022/08/20/%e0%b2%b5%e0%b2%bf%e0%b2%9f%e0%b2%ae%e0%b2%bf%e0%b2%a8%e0%b3%8d-%e0%b2%ac%e0%b2%bf12-%e0%b2%85%e0%b2%82%e0%b2%b6-%e0%b2%b9%e0%b3%86%e0%b2%9a%e0%b3%8d%e0%b2%9a%e0%b2%bf%e0%b2%b0%e0%b3%81%e0%b2%b5/ https://haisandur.com/2022/08/20/%e0%b2%b5%e0%b2%bf%e0%b2%9f%e0%b2%ae%e0%b2%bf%e0%b2%a8%e0%b3%8d-%e0%b2%ac%e0%b2%bf12-%e0%b2%85%e0%b2%82%e0%b2%b6-%e0%b2%b9%e0%b3%86%e0%b2%9a%e0%b3%8d%e0%b2%9a%e0%b2%bf%e0%b2%b0%e0%b3%81%e0%b2%b5/#respond Sat, 20 Aug 2022 11:09:28 +0000 https://haisandur.com/?p=29150 ವಿಟಮಿನ್ ಬಿ12 ನಮ್ಮ ಆರೋಗ್ಯಕ್ಕೆ ಅತ್ಯಾವಶ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಮೆದುಳಿಗೆ ಹಾನಿ ಸ್ನಾಯುಗಳು ಶಿಥಿಲಗೊಳ್ಳುವುದುದು, ನರಗಳು ಕ್ಷಮತೆ ಕಳೆದುಕೊಳ್ಳುವುದು ಹಾಗೂ ಒಟ್ಟಾರೆ ಆರೋಗ್ಯ ಬಾಧೆಗೊಳ್ಳುವ ಅಪಾಯವಿದೆ. ಉತ್ತಮ ಆರೋಗ್ಯಕ್ಕೆ ನಮಗೆ ಎಲ್ಲಾ ಪೋಷಕಾಂಶಗಳು ನಿಯಮಿತ ಪ್ರಮಾಣದಲ್ಲಿ ಅಗತ್ಯವಾಗಿವೆ. ಪ್ರೋಟೀನುಗಳು, ಖನಿಜಗಳು ಮತ್ತು ವಿಟಮಿನ್ನುಗಳು ಇವುಗಳಲ್ಲಿ ಪ್ರಮುಖವಾಗಿವೆ ಹಾಗೂ ನಿತ್ಯದ ಎಲ್ಲಾ ಕಾರ್ಯಗಳಿಗೆ ಅವಶ್ಯವಾಗಿವೆ. ಇವುಗಳಲ್ಲಿ ಒಂದಾದರೂ ಪೋಷಕಾಂಶದಲ್ಲಿ ಕೊರತೆ ಉಂಟಾದರೆ ಇದು ಗಂಭೀರ ಕಾಯಿಲೆಗೆ ಕಾರಣವಾಗಬಹುದು. ವಿಟಮಿನ್ ಬಿ12 ಇಂತಹ ಒಂದು ಅತ್ಯಂತ ಅವಶ್ಯಕ ಪೋಷಕಾಂಶವಾಗಿದೆ […]

The post ವಿಟಮಿನ್ ಬಿ12 ಅಂಶ ಹೆಚ್ಚಿರುವ ಮೊಟ್ಟೆ, ಹಾಲು, ಮೊಸರು, ಸ್ವಲ್ಪ ಜಾಸ್ತಿ ಸೇವಿಸಿ… appeared first on Hai Sandur kannada fortnightly news paper.

]]>
ವಿಟಮಿನ್ ಬಿ12 ನಮ್ಮ ಆರೋಗ್ಯಕ್ಕೆ ಅತ್ಯಾವಶ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಮೆದುಳಿಗೆ ಹಾನಿ ಸ್ನಾಯುಗಳು ಶಿಥಿಲಗೊಳ್ಳುವುದುದು, ನರಗಳು ಕ್ಷಮತೆ ಕಳೆದುಕೊಳ್ಳುವುದು ಹಾಗೂ ಒಟ್ಟಾರೆ ಆರೋಗ್ಯ ಬಾಧೆಗೊಳ್ಳುವ ಅಪಾಯವಿದೆ.

ಉತ್ತಮ ಆರೋಗ್ಯಕ್ಕೆ ನಮಗೆ ಎಲ್ಲಾ ಪೋಷಕಾಂಶಗಳು ನಿಯಮಿತ ಪ್ರಮಾಣದಲ್ಲಿ ಅಗತ್ಯವಾಗಿವೆ. ಪ್ರೋಟೀನುಗಳು, ಖನಿಜಗಳು ಮತ್ತು ವಿಟಮಿನ್ನುಗಳು ಇವುಗಳಲ್ಲಿ ಪ್ರಮುಖವಾಗಿವೆ ಹಾಗೂ ನಿತ್ಯದ ಎಲ್ಲಾ ಕಾರ್ಯಗಳಿಗೆ ಅವಶ್ಯವಾಗಿವೆ. ಇವುಗಳಲ್ಲಿ ಒಂದಾದರೂ ಪೋಷಕಾಂಶದಲ್ಲಿ ಕೊರತೆ ಉಂಟಾದರೆ ಇದು ಗಂಭೀರ ಕಾಯಿಲೆಗೆ ಕಾರಣವಾಗಬಹುದು.

ವಿಟಮಿನ್ ಬಿ12 ಇಂತಹ ಒಂದು ಅತ್ಯಂತ ಅವಶ್ಯಕ ಪೋಷಕಾಂಶವಾಗಿದೆ ಹಾಗೂ ಇದರ ಕೊರತೆಯಿಂದ ಮೆದುಳು ಮತ್ತು ನರವ್ಯವಸ್ಥೆಯ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಈ ಅವಶ್ಯಕ ಪೋಷಕಾಂಶದ ಬಗ್ಗೆ ನಾವೆಲ್ಲರೂ ಅರಿತಿರಬೇಕಾದ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ, ಬನ್ನಿ, ನೋಡೋಣ:

​ವಿಟಮಿನ್ ಬಿ12 ದೇಹಕ್ಕೆ ಏಕಾಗಿ ಇಷ್ಟು ಅವಶ್ಯಕ?

ತಜ್ಞರ ಪ್ರಕಾರ, ವಿಟಮಿನ್ ಬಿ12 ಪೋಷಕಾಂಶವನ್ನು ‘ಕೋಬಾಲಾಮೈನ್’ ಎಂದೂ ಕರೆಯಲಾಗುತ್ತದೆ. ಇದು ಮೆದುಳಿನ ಕಾರ್ಯನಿರ್ವಹಣೆಗೆ ಅತಿ ಅವಶ್ಯವಾದ ಪೋಷಕಾಂಶವಾಗಿದೆ.
ಅಲ್ಲದೇ ಕೆಂಪು ರಕ್ತಕಣಗಳ ರಚನೆಗೆ ಮತ್ತು ಡಿ ಎನ್ ಎ ನಿಯಂತ್ರಣಕ್ಕೂ ಅಗತ್ಯವಾಗಿದೆ. ವಿಟಮಿನ್ ಬಿ12 ಕೊರತೆ ಎದುರಾದರೆ ದೇಹದಲ್ಲಿ ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು.

​ವಿಟಮಿನ್ ಬಿ12 ಕೊರತೆಯಿಂದ ಎದುರಾಗುವ ಕಾಯಿಲೆಗಳು

ತಜ್ಞರ ಪ್ರಕಾರ ಉತ್ತಮ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಮಗೆ ವಿಟಮಿನ್ ಬಿ12 ಲಭಿಸುತ್ತಲೇ ಇರಬೇಕು. ಈ ಪೋಷಕಾಂಶ ಸಾಕಷ್ಟು ಪ್ರಮಾಣದಲ್ಲಿ ಲಭಿಸದೇ ಹೋದರೆ ಮೊದಲಾಗಿ ಇವರ ದೇಹದ ತೂಕ ಇಳಿಯಲು ಪ್ರಾರಂಭಿಸುತ್ತದೆ.
ಸ್ನಾಯುಗಳು ಶಿಥಿಲಗೊಳ್ಳತೊಡಗುತ್ತವೆ ಹಾಗೂ ಚರ್ಮದ ಬಣ್ಣ ಹಳದಿಯಾಗಲು ತೊಡಗುತ್ತದೆ. ವಿಟಮಿನ್ ಬಿ12 ಕೊರತೆಯಿಂದ ನರವ್ಯವಸ್ಥೆಗೆ ಹಾನಿ ಎದುರಾಗುತ್ತದೆ.
ಈ ವ್ಯಕ್ತಿಗಳು ಭ್ರಮಾಧೀನರಾಗಲು ತೊಡಗುತ್ತಾರೆ ಹಾಗೂ ಅರಿವಿಗೆ ಸಂಬಂಧಿಸಿದ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದೇ ಹೋಗುತ್ತಾರೆ. ಕೆಂಪು ರಕ್ತಕಣಗಳು ಸಾಕಷ್ಟು ಪ್ರಮಾಣದಲ್ಲಿ ಸೃಷ್ಟಿಯಾಗದೇ ಹೋಗುತ್ತವೆ.
ಈ ಬಗೆಯ ರಕ್ತಹೀನತೆಯನ್ನು ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆ ಎಂದು ಕರೆಯಲಾಗುತ್ತದೆ ( ಪರ್ನಿಶಿಯಸ್ ಅನೀಮಿಯಾ ಅಥವಾ ವಿನಾಶಕಾರಿ ರಕ್ತಹೀನತೆ).
ದೇಹದ ಪಾದ, ಹಸ್ತದ ಭಾಗಗಳಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಅನುಭವ, ಬಾಯಿಯ ಹುಣ್ಣುಗಳು, ಖಿನ್ನತೆ, ನಾಲಿಗೆ ಕೆಂಪಗಾಗಿ ಉರಿಯುವುದು (ಗ್ಲಾಸೈಟಿಸ್), ಇಲ್ಲದ ಸದ್ದುಗಳು ಕೇಳಿಸುವುದು (ಟೈನಿಟಸ್), ಹಸಿವಿಲ್ಲದಿರುವುದು, ತೂಕ ಇಳಿಕೆ, ದೃಷ್ಟಿ ಮಂಜಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಹದಿನೆಂಟು ವರ್ಷಕ್ಕೂ ಮೀರಿದ ಪ್ರತಿ ವಯಸ್ಕ ವ್ಯಕ್ತಿಗಳು ಕನಿಷ್ಟ ದಿನಕ್ಕೆ 2.4 ಮೈಕ್ರೋಗ್ರಾಂನಷ್ಟು ವಿಟಮಿನ್ ಬಿ12 ಸೇವಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ.

​ವಿಟಮಿನ್ ಬಿ12 ಮೂಲಗಳು

ವಿಟಮಿನ್ ಬಿ12 ಹಲವಾರು ಮಾಂಸಾಹಾರಗಳಲ್ಲಿ ಹೇರಳವಾಗಿ ಲಭ್ಯವಿದೆ. ಕೋಳಿ, ಕುರಿ ಮಾಂಸ, ಮೀನು ಮತ್ತು ಮೊಟ್ಟೆಗಳಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಪ್ರಾಣಿಜನ್ಯ ಆಹಾರಗಳಲ್ಲಿಯೂ ಇದು ಲಭ್ಯವಿದೆ.
ವಿಶೇಷವಾಗಿ ಮೊಟ್ಟೆಯಲ್ಲಿ ವಿಟಮಿನ್ ಬಿ2 ಮತ್ತು ವಿಟಮಿನ್ ಬಿ12 ಎರಡೂ ಇರುತ್ತವೆ. ಒಂದು ಮೊಟ್ಟೆಯ ಸೇವನೆಯಿಂದ ದೈನಂದಿನ ಅಗತ್ಯದ 46 ಶೇಖಡಾ ವಿಟಮಿನ್ ಬಿ12 ಪಡೆಯಬಹುದು.
ಆ ಪ್ರಕಾರ ದಿನಕ್ಕೆ ಎರಡು ಮೊಟ್ಟೆಗಳನ್ನು ಸೇವಿಸಿದರೆ ಉಳಿದ ಎಂಟು ಶೇಖಡಾವನ್ನು ಇತರ ಆಹಾರಗಳ ಮೂಲಕ ಪಡೆದು ಪೂರೈಸಿಕೊಳ್ಳಬಹುದು.

​ವಿಟಮಿನ್ ಬಿ12 ಇರುವ ಸಸ್ಯಜನ್ಯ ಆಹಾರಗಳು

ವಿಟಮಿನ್ ಬಿ12 ಹಲವಾರು ಸಸ್ಯಜನ್ಯ ಆಹಾರಗಳಲ್ಲಿಯೂ ಲಭ್ಯವಿದೆ. ಆದರೆ ಮುಖ್ಯವಾಗಿ ಹಾಲು, ಮೊಸರು ಮತ್ತು ಚೀಸ್ ನಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿವೆ.
ಉಳಿದಂತೆ ಬಾದಾಮಿ, ಗೋಡಂಬಿ, ಓಟ್ಸ್ ಮತ್ತು ತೆಂಗಿನ ಹಾಲಿನಲ್ಲಿಯೂ ಮಿತ ಪ್ರಮಾಣದಲ್ಲಿದೆ. ಆದ್ದರಿಂದ ವಿಟಮಿನ್ ಬಿ12 ಅನ್ನು ಪಡೆಯಲು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿತ್ಯವೂ ಸೇವಿಸುವುದು ಸಸ್ಯಾಹಾರಿ ವ್ಯಕ್ತಿಗಳಿಗೆ ಅಗತ್ಯವಾಗಿದೆ.

ಮೊಸರು ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಮೊಸರು ಸೇವನೆಯು ವಿಟಮಿನ್ ಬಿ 12 ಮಟ್ಟವನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸೋಯಾ ಪನೀರ್, ಧಾನ್ಯಗಳು, ಹಾಲು ಇವುಗಳನ್ನು ಸೇವಿಸಬಹುದು. ಇವೆಲ್ಲವೂ ವಿಟಮಿನ್ ಬಿ 12 ನ ಉತ್ತಮ ಮೂಲಗಳಾಗಿವೆ

​ಒಂದು ವೇಳೆ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಇದ್ದರೆ, ನೀವು ಈ ಕೆಳಗಿನ ಸಂಗತಿಗಳನ್ನು ಅರಿತಿರಬೇಕು

ವಿಟಮಿನ್ ಬಿ12 ಕೊರತೆ ಇರುವ ವ್ಯಕ್ತಿಗಳಿಗೆ ಮದ್ಯ ನಿಷಿದ್ಧವಾಗಿದೆ. ಒಂದು ವೇಳೆ ವ್ಯಸನಿಯಾಗಿದ್ದರೆ ಇದನ್ನು ತ್ಯಜಿಸುವ
ಪ್ರಾಮಾಣಿಕ ಪ್ರಯತ್ನವನ್ನು ತಕ್ಷಣವೇ ಪ್ರಾರಂಭಿಸಬೇಕು.
ಮದ್ಯಸೇವನೆ ಈ ಕೊರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಫೋಲಿಕ್ ಆಮ್ಲದ ಸೇವನೆ ಅಥವಾ ಈ ಅಂಶವಿರುವ ಔಷಧಿಗಳನ್ನು ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಇವುಗಳ ಪ್ರಮಾಣವನ್ನು ತಗ್ಗಿಸಬೇಕು.
ಈ ಲಕ್ಷಣಗಳಲ್ಲಿ ಯಾವೊಂದು ಕಂಡುಬಂದರೂ ತಕ್ಷಣ ವೈದ್ಯರಿಂದ ಪರೀಕ್ಷೆಗೊಳಪಟ್ಟು ಚಿಕಿತ್ಸೆಯನ್ನು ಪ್ರಾರಂಭಿಸಬೇಕು.
ಅಲಕ್ಷಿಸಿದರೆ ಇದು ಸರಿಪಡಿಸಲಾಗದಷ್ಟು ಹಾನಿ ಉಂಟು ಮಾಡಬಹುದು ಹಾಗೂ ಈ ನಿರ್ಲಕ್ಷ್ಯ ಮಾರಣಾಂತಿಕವೂ ಆಗಬಹುದು.

The post ವಿಟಮಿನ್ ಬಿ12 ಅಂಶ ಹೆಚ್ಚಿರುವ ಮೊಟ್ಟೆ, ಹಾಲು, ಮೊಸರು, ಸ್ವಲ್ಪ ಜಾಸ್ತಿ ಸೇವಿಸಿ… appeared first on Hai Sandur kannada fortnightly news paper.

]]>
https://haisandur.com/2022/08/20/%e0%b2%b5%e0%b2%bf%e0%b2%9f%e0%b2%ae%e0%b2%bf%e0%b2%a8%e0%b3%8d-%e0%b2%ac%e0%b2%bf12-%e0%b2%85%e0%b2%82%e0%b2%b6-%e0%b2%b9%e0%b3%86%e0%b2%9a%e0%b3%8d%e0%b2%9a%e0%b2%bf%e0%b2%b0%e0%b3%81%e0%b2%b5/feed/ 0
ಮೊಸರಿನ ಸೇವನೆಯಿಂದ ಯಾವೆಲ್ಲಾ ಕಾಯಿಲೆಯಿಂದ ದೂರವಿರಬಹುದು? https://haisandur.com/2021/07/09/benefits-of-curd/ https://haisandur.com/2021/07/09/benefits-of-curd/#respond Fri, 09 Jul 2021 11:36:34 +0000 https://haisandur.com/?p=17597 ಕೆಲವರಿಗೆ ಊಟದ ಜೊತೆ ಮೊಸರು ಇಲ್ಲ ಅಂದರೆ ಊಟ ಸೇರುವುದಿಲ್ಲ, ಇನ್ನು ಕೆಲವರು ಮೊಸರನ್ನು ತಮ್ಮ ಸಮೀಪ ಕೂಡಾ ಇಟ್ಟುಕೊಳ್ಳುವುದಿಲ್ಲ. ಆದರೆ ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ಖಂಡಿತವಾಗಿಯೂ ಎಲ್ಲರು ಮೊಸರು ಸೇವಿಸಲು ಆರಂಭಿಸುತ್ತೀರಿ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್-ಬಿ 6 ಮತ್ತು ವಿಟಮಿನ್-ಬಿ 12 ಮತ್ತು ರಿಬೋಫ್ಲಾವಿನ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇವುಗಳು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಿದ್ದರೆ ಪ್ರತಿ ದಿನ ಮೊಸರು ಸೇವನೆಯಿಂದ ಯಾವೆಲ್ಲಾ ಪ್ರಯೋಜನಗಳುವೆ ನೋಡೋಣ .. […]

The post ಮೊಸರಿನ ಸೇವನೆಯಿಂದ ಯಾವೆಲ್ಲಾ ಕಾಯಿಲೆಯಿಂದ ದೂರವಿರಬಹುದು? appeared first on Hai Sandur kannada fortnightly news paper.

]]>
ಕೆಲವರಿಗೆ ಊಟದ ಜೊತೆ ಮೊಸರು ಇಲ್ಲ ಅಂದರೆ ಊಟ ಸೇರುವುದಿಲ್ಲ, ಇನ್ನು ಕೆಲವರು ಮೊಸರನ್ನು ತಮ್ಮ ಸಮೀಪ ಕೂಡಾ ಇಟ್ಟುಕೊಳ್ಳುವುದಿಲ್ಲ. ಆದರೆ ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ಖಂಡಿತವಾಗಿಯೂ ಎಲ್ಲರು ಮೊಸರು ಸೇವಿಸಲು ಆರಂಭಿಸುತ್ತೀರಿ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್-ಬಿ 6 ಮತ್ತು ವಿಟಮಿನ್-ಬಿ 12 ಮತ್ತು ರಿಬೋಫ್ಲಾವಿನ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇವುಗಳು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಿದ್ದರೆ ಪ್ರತಿ ದಿನ ಮೊಸರು ಸೇವನೆಯಿಂದ ಯಾವೆಲ್ಲಾ ಪ್ರಯೋಜನಗಳುವೆ ನೋಡೋಣ ..

ಪ್ರತಿದಿನ ಮೊಸರು ತಿನ್ನುವುದರಿಂದ, ನಮಗೆ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕೆಲಸ ಮಾಡುತ್ತದೆ. ಮೊಸರು ದೇಹವನ್ನು ತಾಜಾವಾಗಿಡಲು ಸಹ ಸಹಾಯ ಮಾಡುತ್ತದೆ. ಹೃದಯ ಸಂಬಂಧಿತ ಕಾಯಿಲೆ ಇರುವವರಿಗೆ ಮೊಸರು ತಿನ್ನಲು ಸೂಚಿಸಲಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮೊಸರು ಸೇವನೆಯು ಅಂತಹ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಮೊಸರಿನ ಅದ್ಭುತ ಪ್ರಯೋಜನಗಳು :

  1. ಮೊಸರು ಹೊಟ್ಟೆಯಲ್ಲಿ ಸೋಂಕು ಬರದಂತೆ ತಡೆಯುತ್ತದೆ. ಅಲ್ಲದೆ, ಹಸಿವು ಕಡಿಮೆ ಇರುವವರಿಗೂ ಇದು ಪ್ರಯೋಜನಕಾರಿಯಾಗಿದೆ.
  2. ಮೊಸರು ಕೂದಲು, ರಕ್ತದೊತ್ತಡ, ಆಸ್ಟಿಯೊಪೊರೋಸಿಸ್ ಮತ್ತು ಮೂಳೆಗಳಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
  3. ಮೊಸರು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ನಮ್ಮ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
  4. ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ಮೊಸರನ್ನು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ.
  5. ಮೊಸರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
  6. ಮೊಸರನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಆದರೆ ನೆನಪಿರಲಿ ಶೀತ ಮತ್ತು ಕೆಮ್ಮು ಇರುವವರು ಮೊಸರು ತಿನ್ನಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು. 

The post ಮೊಸರಿನ ಸೇವನೆಯಿಂದ ಯಾವೆಲ್ಲಾ ಕಾಯಿಲೆಯಿಂದ ದೂರವಿರಬಹುದು? appeared first on Hai Sandur kannada fortnightly news paper.

]]>
https://haisandur.com/2021/07/09/benefits-of-curd/feed/ 0
ಮಕ್ಕಳಲ್ಲಿ ಇಮ್ಯೂನಿಟಿ ಪವರ್‌ಅನ್ನು ಹೆಚ್ಚಿಸುವುದು ಹೇಗೆ? https://haisandur.com/2021/06/30/immunity-power-in-children/ https://haisandur.com/2021/06/30/immunity-power-in-children/#respond Wed, 30 Jun 2021 07:45:17 +0000 https://haisandur.com/?p=17194 ವೈರಸ್‌ಗಳ ವಿರುದ್ಧ ಹೋರಾಡಲು ಬೆಳೆಯುತ್ತಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಶಕ್ತಿಯನ್ನು ಹೆಚ್ಚಿಸಲು ಇತರೆ ಮಾರ್ಗಗಳು ಇಲ್ಲಿವೆ. 2ವರ್ಷದ ಹಿಂದೆ, ಕೋವಿಡ್‌ -19 ನಂತಹ ಸಾಂಕ್ರಾಮಿಕ ರೋಗ ಸಂಭವಿಸಬಹುದು ಮತ್ತು ನಮ್ಮ ಜನ ಜೀವದ ಮೇಲೆ ಇಷ್ಟುಂದು ಪ್ರಭಾವ ಬೀರಬಹುದು ಎಂದು ಯಾರೂ ಊಹಿಸಿರಲಿಲ್ಲ. ನಮ್ಮಲ್ಲಿ ಹೆಚ್ಚಿನ ಜನರು ಈ ಕೋವಿಡ್‌ ನಿಂದ ದಿನನಿತ್ಯ ಸಮಸ್ಯೆಯಗಳನ್ನು ಎದುರಿಸುತ್ತಿದ್ದಾರೆ; ಅದುವೇ ಕೋವಿಡ್‌ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು. ಅದರ ಜೊತೆಗೆ ಹಣಕಾಸಿನ ಸವಾಲುಗಳು, […]

The post ಮಕ್ಕಳಲ್ಲಿ ಇಮ್ಯೂನಿಟಿ ಪವರ್‌ಅನ್ನು ಹೆಚ್ಚಿಸುವುದು ಹೇಗೆ? appeared first on Hai Sandur kannada fortnightly news paper.

]]>
ವೈರಸ್‌ಗಳ ವಿರುದ್ಧ ಹೋರಾಡಲು ಬೆಳೆಯುತ್ತಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಶಕ್ತಿಯನ್ನು ಹೆಚ್ಚಿಸಲು ಇತರೆ ಮಾರ್ಗಗಳು ಇಲ್ಲಿವೆ. 2ವರ್ಷದ ಹಿಂದೆ, ಕೋವಿಡ್‌ -19 ನಂತಹ ಸಾಂಕ್ರಾಮಿಕ ರೋಗ ಸಂಭವಿಸಬಹುದು ಮತ್ತು ನಮ್ಮ ಜನ ಜೀವದ ಮೇಲೆ ಇಷ್ಟುಂದು ಪ್ರಭಾವ ಬೀರಬಹುದು ಎಂದು ಯಾರೂ ಊಹಿಸಿರಲಿಲ್ಲ. ನಮ್ಮಲ್ಲಿ ಹೆಚ್ಚಿನ ಜನರು ಈ ಕೋವಿಡ್‌ ನಿಂದ ದಿನನಿತ್ಯ ಸಮಸ್ಯೆಯಗಳನ್ನು ಎದುರಿಸುತ್ತಿದ್ದಾರೆ; ಅದುವೇ ಕೋವಿಡ್‌ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು. ಅದರ ಜೊತೆಗೆ ಹಣಕಾಸಿನ ಸವಾಲುಗಳು, ಆಹಾರ , ಆಶ್ರಯ , ಉದ್ಯೋಗ , ಸಾಮಾಜಿಕ ಸಂವಹನಗಳ ಕೊರತೆಯಿಂದ ಹಾಗೂ ಇತರೆ ಸಮಸ್ಯೆಯಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗೂ ನಮ್ಮ ಜೀವನದಲ್ಲಿ ಕೆಲವು ಪ್ರಮುಖ ಅಂಶಗಳಾದ ಶಿಕ್ಷಣ, ಆಹಾರ, ಮತ್ತು ರಜಾದಿನಗಳು ಅಥವಾ ವಿವಾಹಗಳ ಕರಿತು ನಿರ್ಧಾರ ತೆಗೆದುಕೊಳ್ಳುವುದು ಸುಲಭದ ವಿಷಯವಲ್ಲ. ಭಾರತದಲ್ಲಿ ಎರಡನೇ ಆಲೆ ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದೆ. ಅದರಲ್ಲೂ ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ದೇಶದಲ್ಲಿ ಅನೇಕ ರೂಪಾಂತರಗಳೊಂದಿಗೆ, ನಾವು ನಮ್ಮ ಆರೋಗ್ಯದತ್ತ ಗಮನ ಹರಿಸಬೇಕು ಮತ್ತು ವೈರಸ್ ವಿರುದ್ಧ ಹೋರಾಡಲು ನಾವು ಯಾವಾಗಲೂ ಸರಿಯಾದ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕು.

ಈ ಸಮಯದಲ್ಲಿ ನಾವು ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಅಂತಹ ಶಿಫಾರಸು ಮಾಡಲಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೂಸ್ಟರ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: ಅವುಗಳೆಂದರೆ
a. ವಿಟಮಿನ್ ಸಿ
b. ವಿಟಮಿನ್ ಡಿ
c. ವಿಟಮಿನ್ ಎ4. ವಿಟಮಿನ್ ಇ
d. ಝಿಂಕ್ ಸಪ್ಲಿಮೆಂಟ್ಸ್
e. ಒಮೆಗಾ -3 ಫ್ಯಾಟಿ ಆ್ಯಸಿಡ್‌

ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕೆಲವು ವೈದ್ಯರು ಔಷಧಗಳು ಮತ್ತು ಝಿಂಕ್‌ನಂತಹ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು ಹಾಲು / ಪೂರಕಗಳು, ಪ್ರೋಟೀನ್ ಶೇಕ್ಸ್ ಇತ್ಯಾದಿಗಳನ್ನು ಸೇವಿಸುವುದು ಒಳ್ಳೆಯದು. ಆದರೆ ಹಾಲು / ಪೂರಕಗಳು, ಪ್ರೋಟೀನ್ ಶೇಕ್ಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುಬಹುದೇ ಎಂಬುದು ಪ್ರಶ್ನೆ, ಕೋವಿಡ್‌ -19 ವಿರುದ್ಧ ಹೋರಾಡಲು ವಿಟಮಿನ್ ಪೂರಕಗಳು ಜನರಿಗೆ ಸಹಾಯ ಮಾಡುತ್ತವೆ ಎಂಬ ಅಂಶವನ್ನು WHO (ವಿಶ್ವ ಆರೋಗ್ಯ ಸಂಸ್ಥೆ) ನಿರಾಕರಿಸಿದೆ. ಈ ಮಾತ್ರೆಗಳು ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಹೆಚ್ಚು ಜಿಂಕ್‌ ಮಾತ್ರೆಗಳನ್ನು ಸೇವಿಸುವುದರಿಂದ ನರಮಂಡಲದ ಮೇಲೆ ಹಾನಿಮಾಡುವುದು, ರಕ್ತಹೀನತೆಗೆ ಕಾರಣಹಾಗುವುದು ಹಾಗೂ ಕಾಪರ್‌ ಕೊರತೆ ಆಗುವುದು. ಹಾಗೆಯೇ ಮಕ್ಕಳು ದೀರ್ಘ ಕಾಲದವರೆಗೆ ಮಾತ್ರೆಗಳನ್ನು ಸೇವಿಸಿದದ್ದರೆ ಅವರಲ್ಲಿ ಬಾಯಿ ಹುಣ್ಣು ಆಗುವುದು ಹಾಗೂ ಸ್ನಾಯು ನೋವನ್ನು ಉಂಟುಮಾಡುತ್ತದೆ. ಮಾತ್ರೆಗಳ ಬದಲಿಗೆ ಪೋಷಕರು ನೀಡಬಹುದಾದ ಪೂರಕಗಳನ್ನು ಕೇಳಗೆ ಪಟ್ಟಿ ಮಾಡಲಾಗಿದೆ.

1. ಮನೆಯಲ್ಲಿ ಬೇಯಿಸಿದ ಊಟ,
2. ಹೆಚ್ಚಿದ ವ್ಯಾಯಾಮ (ಏರೋಬಿಕ್ಸ್, ಜಾಗಿಂಗ್, ಸೈಕ್ಲಿಂಗ್ ಅಥವಾ ಯೋಗ ಸಹಾಯ ಮಾಡಬಹುದು)
3. ಕನಿಷ್ಠ 8 ಗಂಟೆಗಳ ನಿದ್ರೆ
4. ಹೆಚ್ಚಾಗಿ ನೀರಿನ ಸೇವನೆ

ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ, ಕೊಠಡಿ / ಮನೆಯನ್ನು ಪರಿಣಾಮಕಾರಿಯಾಗಿ ಗಾಳಿ ಬರುವಂತೆ ನೋಡಿಕೊಳ್ಳಿ ಮಗುವಿಗೆ ಒಂದು ವೇಳಾಪಟ್ಟಿಯನ್ನು ಮಾಡಿ ಅನುಸರಿಸಲು ಹೇಳಿ, ನಿಮ್ಮ ಮಗುವಿಗೆ ಲಸಿಕೆ ಲಭ್ಯವಾದ ತಕ್ಷಣ ಅದನ್ನು ಪಡೆಯಿರಿ ಮತ್ತು ಆರೋಗ್ಯ ತಜ್ಞರಿಂದ ಸಲಹೆ ಪಡೆಯಿರಿ. ಝಿಂಕ್ ಹಾಗೂ ವಿಟಮಿನ್‌ ಮಾತ್ರೆಗಳ ಬದಲಿಗೆ ನೀವು ಜಿಂಕ್‌/ ವಿಟಮಿನ್ಪ್ರೋ ಟೀನ್‌ಗಳಂತಹ ಆಹಾರಗಳನ್ನು ಮಕ್ಕಳಿಗೆ ನೀಡಿ. ಝಿಂಕ್ ಆಹಾರಗಳಾದ ಬೀಜಗಳು, ಬೀನ್ಸ್, ಬಾಳೆಹಣ್ಣುಗಳು, ಸಿಂಪಿ, ಧಾನ್ಯಗಳು, ಚೀಸ್ ನಂತಹ ಡೈರಿ ಆಹಾರಗಳು ಮತ್ತು ಇನ್ನೂ ಅನೇಕ ಆಹಾರಗಳನ್ನು ನೀಡಿ ಹಾಗೂ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಹಾರವೆಂದರೆ – ದ್ರಾಕ್ಷಿಹಣ್ಣು, ಕಿತ್ತಳೆ, ಕೋಸುಗಡ್ಡೆ, ಆಲೂಗಡ್ಡೆ, ಮೆಣಸು ಮತ್ತು ಇನ್ನೂ ಅನೇಕ ಆಹಾರಗಳನ್ನು ನೀಡಿ. ಮಗುವಿಗೆ ಅಗತ್ಯವಿದ್ದಾಗ ವೈದ್ಯರು ಸ್ವತಃ ಪೂರಕಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ ಮತ್ತು ಅದನ್ನು ನಿರ್ಬಂಧಿತ ರೀತಿಯಲ್ಲಿ ತೆಗೆದುಕೊಳ್ಳಿ.

The post ಮಕ್ಕಳಲ್ಲಿ ಇಮ್ಯೂನಿಟಿ ಪವರ್‌ಅನ್ನು ಹೆಚ್ಚಿಸುವುದು ಹೇಗೆ? appeared first on Hai Sandur kannada fortnightly news paper.

]]>
https://haisandur.com/2021/06/30/immunity-power-in-children/feed/ 0
ಹಣ್ಣು ಗಳನ್ನು ಕೃತಕವಾಗಿ ಹೇಗೆ ಹಣ್ಣಾಗಿಸುತ್ತಾರೆ:ಇಲ್ಲಿದೆ ವಿವರ https://haisandur.com/2021/06/29/how-to-artificialize-fruits/ https://haisandur.com/2021/06/29/how-to-artificialize-fruits/#respond Tue, 29 Jun 2021 10:48:44 +0000 https://haisandur.com/?p=17148 ಆರೋಗ್ಯಕರ ಮತ್ತು ಸಮತೋಲಿತ ಆಹಾರ ವಿಷಯಕ್ಕೆ ಬಂದಾಗ, ತಾಜಾ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತದೆ. ಹಣ್ಣುಗಳು ದೇಹದ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ. ಆದರೆ ಈ ಹಣ್ಣುಗಳು ನೈಸರ್ಗಿಕ ರೀತಿಯಲ್ಲಿ ಹಣ್ಣಾಗದಿದ್ದರೆ ಅಷ್ಟೇ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ ಹಣ್ಣಾಗಲು ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಾರೆ. ಇದನ್ನು ಹಣ್ಣುಗಳ ಕೃತಕ ಪಕ್ವ ಗೊಳಿಸುವಿಕೆ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಗೆ ಬಳಸುವ ಹಲವು ರಾಸಾಯನಿಕ ವಸ್ತುಗಳು ಆರೋಗ್ಯಕ್ಕೆ ಮಾರಕವಾಗಿದ್ದು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ […]

The post ಹಣ್ಣು ಗಳನ್ನು ಕೃತಕವಾಗಿ ಹೇಗೆ ಹಣ್ಣಾಗಿಸುತ್ತಾರೆ:ಇಲ್ಲಿದೆ ವಿವರ appeared first on Hai Sandur kannada fortnightly news paper.

]]>
ಆರೋಗ್ಯಕರ ಮತ್ತು ಸಮತೋಲಿತ ಆಹಾರ ವಿಷಯಕ್ಕೆ ಬಂದಾಗ, ತಾಜಾ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತದೆ. ಹಣ್ಣುಗಳು ದೇಹದ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ. ಆದರೆ ಈ ಹಣ್ಣುಗಳು ನೈಸರ್ಗಿಕ ರೀತಿಯಲ್ಲಿ ಹಣ್ಣಾಗದಿದ್ದರೆ ಅಷ್ಟೇ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ ಹಣ್ಣಾಗಲು ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಾರೆ. ಇದನ್ನು ಹಣ್ಣುಗಳ ಕೃತಕ ಪಕ್ವ ಗೊಳಿಸುವಿಕೆ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಗೆ ಬಳಸುವ ಹಲವು ರಾಸಾಯನಿಕ ವಸ್ತುಗಳು ಆರೋಗ್ಯಕ್ಕೆ ಮಾರಕವಾಗಿದ್ದು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ತಿಳಿದುಬಂದಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಬೇಕಾಗುತ್ತದೆ. ಈ ಲೇಖನದಲ್ಲಿ ಇದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ.

​ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಿಸುವುದು ಹೇಗೆ?

ಈ ಪ್ರಕ್ರಿಯೆಗಾಗಿ ಎತಲಿನ್ ಮತ್ತು ಅಸಿಟಲಿನ್ ಎಂಬ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ. ಇವುಗಳು ಬಹಳ ತೊಂದರೆ ನೀಡುವ ಹೈಡ್ರೋಕಾರ್ಬನ್ ಗಳಾಗಿವೆ. ಇವು ಹಣ್ಣುಗಳ ಹಣ್ಣಾಗುವಿಕೆಯಲ್ಲಿ ಸಹಾಯಮಾಡುತ್ತವೆ ಹಾಗೂ ಹಣ್ಣುಗಳ ಬಣ್ಣವನ್ನು ಕೂಡ ಬದಲಾಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ವಸ್ತುವೆಂದರೆ ಕ್ಯಾಲ್ಸಿಯಂ ಕಾರ್ಬೈಡ್. ಇದನ್ನು ಮಸಾಲಾ ಎಂದು ಕೂಡ ಕರೆಯಲಾಗುತ್ತದೆ.

ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿರುವ ಹಣ್ಣುಗಳಂತೆಯೇ ಬಹಳ ಮೆತ್ತಗೆ ಹಾಗೂ ನೈಸರ್ಗಿಕವಾಗಿಯೇ ಹಣ್ಣಾಗಿದೆ ಎಂಬ ರೀತಿಯಲ್ಲಿ ಕಾಣಿಸುತ್ತದೆ. ಆದರೆ ನೈಸರ್ಗಿಕವಾಗಿ ಆದ ಹಣ್ಣುಗಳಿಗೂ ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳಿಗೂ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದಕ್ಕೆ ಕಾರಣ, ಕೃತಕವಾಗಿ ಹಣ್ಣು ಮಾಡಲು ಬಳಸಿರುವ ರಾಸಾಯನಿಕ ವಸ್ತುಗಳು.

ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳ ರುಚಿ ಅಷ್ಟೇನೂ ಸೊಗಸಾಗಿ ಇರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಕೃತಕವಾಗಿ ಹಣ್ಣು ಮಾಡಲು ಬಳಸುವ ರಾಸಾಯನಿಕ ವಸ್ತುಗಳು ಮೇಲ್ಭಾಗವನ್ನು ಮಾತ್ರ ಬದಲಾಯಿಸುತ್ತದೆ, ಆದರೆ ಹಣ್ಣಿನ ಒಳಗಿರುವ ಭಾಗವು ಇನ್ನೂ ಹಣ್ಣು ಆಗಿರುವುದಿಲ್ಲ, ಅದು ಕಾಯಿಯಾಗಿ ಉಳಿದಿರುತ್ತದೆ.

ಹಲವು ಅಧ್ಯಯನಗಳು ಹೇಳುವ ಪ್ರಕಾರ ಕಾರ್ಬೈಡ್ ಅತಿಯಾದ ಸೇವನೆ ಕ್ಯಾನ್ಸರ್ ಗೆ ಕಾರಣ ವಾಗಬಹುದು ಕಾರ್ಬೈಡ್ ನಲ್ಲಿ ಪಾಸ್ಪರಸ್ ಹೈಡ್ರೇಡ್ ಹಾಗೂ ಆರ್ಸೆನಿಕ್ ಅಂಶಗಳಿವೆ ಇದರಿಂದ ವಾಂತಿ ತಲೆಸುತ್ತು ಸುಸ್ತು ಎದೆಯಲ್ಲಿ ಹಾಗೂ ಹೊಟ್ಟೆಯಲ್ಲಿ ಉರಿದಂತೆ ಆಗುವುದು ಕಣ್ಣಿನಲ್ಲಿ ಉರಿದಂತಾಗುವುದು ಕಣ್ಣುಗಳ ದೃಷ್ಟಿಯನ್ನು ಕಳೆದುಕೊಳ್ಳುವುದು ಹಾಗೂ ಉಸಿರಾಟದ ಪ್ರಕ್ರಿಯೆಯ ತೊಂದರೆಯಾಗಬಹುದು.

ಕ್ಯಾಲ್ಸಿಯಂ ಕಾರ್ಬೈಡ್ ನಲ್ಲಿ ಆಲ್ಕಲೈನ್ ಅಂಶವು ಹೆಚ್ಚಾಗಿರುವುದರಿಂದ ಇದು ಹೊಟ್ಟೆಯೊಳಗಿರುವ ತೆಳುವಾದ ಪದರ ಕೂಡ ತೊಂದರೆ ಮಾಡಿ ಹೊಟ್ಟೆ ಹಾಗೂ ಕರುಳಿನ ಕೆಲಸಗಳಿಗೆ ಹಿಂಸೆ ನೀಡುತ್ತದೆ. ಅಸಿಟಲಿನ್ ಎಂಬ ಅಂಶವು ಇದರಲ್ಲಿ ಹೆಚ್ಚಾಗಿರುವುದರಿಂದ ಮೆದುಳಿನ ಕಾರ್ಯ ಚಟುವಟಿಕೆಗಳು ಕೂಡ ತೊಂದರೆ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಎಷ್ಟ್ಟೋ ವಸ್ತುಗಳನ್ನು ನೈಸರ್ಗಿಕ ರೀತಿಯಲ್ಲಿ ಬಳಸುತ್ತಿಲ್ಲ. ಹಣ್ಣಿನ ವಿಷಯಕ್ಕೆ ಬಂದರೆ ನೈಸರ್ಗಿಕವಾಗಿ ಹಣ್ಣಾದ ಹಣ್ಣು ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿದ್ದು ,ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಅವುಗಳನ್ನು ಕೃತಕವಾಗಿ ಹಣ್ಣು ಮಾಡುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಆದರೆ ಆ ಹಣ್ಣುಗಳನ್ನು ಖರೀದಿಸಿ ನಾವು ಉತ್ತಮ ಹಣ್ಣುಗಳು ಎಂದು ಭಾವಿಸಿ ಸೇವಿಸುತ್ತೇವೆ. ಆದರೆ ಒಂದು ವಿಪರ್ಯಾಸದ ವಿಷಯವೇನೆಂದರೆ ಸಾಮಾನ್ಯವಾಗಿ ರೈತರು ತಾವು ಬೆಳೆದ ಯಾವುದೇ ಹಣ್ಣುಗಳಿಗೆ ಕೃತಕವಾಗಿ ಹಣ್ಣಾಗುವ ಪದಾರ್ಥಗಳನ್ನು ಬಳಸುವುದಿಲ್ಲ.

ಹಣ್ಣುಗಳನ್ನು ಕೃತಕವಾಗಿ ಹಣ್ಣಾಗುವಂತೆ ಮಾಡುವವರು ವರ್ತಕರು.ರೈತರಿಂದ ಅತಿ ಕಡಿಮೆ ಬೆಲೆಗೆ ಹಣ್ಣುಗಳನ್ನು ಖರೀದಿಸಿ ಅವುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ, ಅವುಗಳನ್ನು ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಈ ರೀತಿ ಕೃತಕವಾಗಿ ಹಣ್ಣಾದ ಹಣ್ಣುಗಳು ಆರಂಭದಲ್ಲಿ ಯಾವುದೇ ತೊಂದರೆಗಳನ್ನು ನೀಡದಿದ್ದರೂ ಅವುಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದರೆ ಕೃತಕವಾಗಿ ಮಾಡಿದ ಹಣ್ಣು ಮತ್ತು ನೈಸರ್ಗಿಕವಾಗಿ ಹಣ್ಣಾದ ಹಣ್ಣಿನ ನಡುವೆ ಇರುವ ವ್ಯತ್ಯಾಸಗಳನ್ನು ನಾವು ಮೊದಲು ತಿಳಿದುಕೊಳ್ಳಬೇಕು.

The post ಹಣ್ಣು ಗಳನ್ನು ಕೃತಕವಾಗಿ ಹೇಗೆ ಹಣ್ಣಾಗಿಸುತ್ತಾರೆ:ಇಲ್ಲಿದೆ ವಿವರ appeared first on Hai Sandur kannada fortnightly news paper.

]]>
https://haisandur.com/2021/06/29/how-to-artificialize-fruits/feed/ 0
ಇದೊಂದು ಪುಟ್ಟ ಕಥೆ:ಮೊಸರನ್ನ ತಿನ್ನುವುದರ ಗುಟ್ಟು. https://haisandur.com/2021/06/28/short-story/ https://haisandur.com/2021/06/28/short-story/#respond Mon, 28 Jun 2021 07:53:37 +0000 https://haisandur.com/?p=17092 ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ನ್ಯಾಯ,ನೀತಿ, ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು.ದತ್ತಿ, ದಾನ- ಧರ್ಮ, ಕಲೆಗಳಿಗೆ ಪ್ರೋತ್ಸಾಹ ಕೊಡುವುದರ ಜೊತೆಗೆ ಪ್ರಜೆಗಳ ಕ್ಷೇಮಾಭ್ಯುದಯಕ್ಕೆ ಕುಂದು ಬರದಂತೆ ರಾಜ್ಯಭಾರ ನಡೆಸುತ್ತಾ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿದ್ದನು. ರಾಜ್ಯದ ಹಿತದೃಷ್ಟಿಯಿಂದ, ಕಾಲಕಾಲಕ್ಕೆ ಮಳೆ ,ಬೆಳೆ ಚೆನ್ನಾಗಿ ಆಗಲಿ, ರಾಜ್ಯ ಸುಭೀಕ್ಷವಾಗಿರಲಿ ಎಂಬ ಆಶಯದಿಂದ ಆಗೊಮ್ಮೆ ಈಗೊಮ್ಮೆ ಎಂಬಂತೆ ಅರಮನೆಯಲ್ಲಿ ಯಜ್ಞ ,ಯಾಗ, ಹೋಮ, ಹವನ, ಮಾಡಿಸುತ್ತಿದ್ದನು. ಹಾಗೆ ಈ ಸಲವೂ ಸಹ ಏರ್ಪಡಿಸಿದನು. ರಾಜ್ಯದ ಎಲ್ಲಾ ಮೂಲೆಗಳಿಂದಲೂ ಜನ ಬರತೊಡಗಿದರು . […]

The post ಇದೊಂದು ಪುಟ್ಟ ಕಥೆ:ಮೊಸರನ್ನ ತಿನ್ನುವುದರ ಗುಟ್ಟು. appeared first on Hai Sandur kannada fortnightly news paper.

]]>
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ನ್ಯಾಯ,ನೀತಿ, ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು.ದತ್ತಿ, ದಾನ- ಧರ್ಮ, ಕಲೆಗಳಿಗೆ ಪ್ರೋತ್ಸಾಹ ಕೊಡುವುದರ ಜೊತೆಗೆ ಪ್ರಜೆಗಳ ಕ್ಷೇಮಾಭ್ಯುದಯಕ್ಕೆ ಕುಂದು ಬರದಂತೆ ರಾಜ್ಯಭಾರ ನಡೆಸುತ್ತಾ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿದ್ದನು.

ರಾಜ್ಯದ ಹಿತದೃಷ್ಟಿಯಿಂದ, ಕಾಲಕಾಲಕ್ಕೆ ಮಳೆ ,ಬೆಳೆ ಚೆನ್ನಾಗಿ ಆಗಲಿ, ರಾಜ್ಯ ಸುಭೀಕ್ಷವಾಗಿರಲಿ ಎಂಬ ಆಶಯದಿಂದ ಆಗೊಮ್ಮೆ ಈಗೊಮ್ಮೆ ಎಂಬಂತೆ ಅರಮನೆಯಲ್ಲಿ ಯಜ್ಞ ,ಯಾಗ, ಹೋಮ, ಹವನ, ಮಾಡಿಸುತ್ತಿದ್ದನು. ಹಾಗೆ ಈ ಸಲವೂ ಸಹ ಏರ್ಪಡಿಸಿದನು. ರಾಜ್ಯದ ಎಲ್ಲಾ ಮೂಲೆಗಳಿಂದಲೂ ಜನ ಬರತೊಡಗಿದರು . ಯಾರಿಗೂ ಯಾವುದೇ ರೀತಿಯ ಕೊರತೆಯಾಗದಂತೆ ವ್ಯವಸ್ಥೆಯನ್ನು ಮಾಡಿಸಿದನು.ಪೂಜಾ ಕಾರ್ಯಗಳನ್ನು ನೆರವೇರಿಸಲು ಹೆಚ್ಚು ಸಂಖ್ಯೆಯಲ್ಲಿ ವಿಪ್ರೋತ್ತಮರು ಸೇರಿದ್ದರು. ಆಯಾ ದಿನದ ಹೋಮ ಹವನ ಮುಗಿದ ನಂತರ ಸ್ವಾದಿಷ್ಟವಾದ ಭೋಜನ, ಭೂರಿ ದಕ್ಷಿಣೆಗಳು ಸೇರಿದಂತೆ ಯಥೋಚಿತ ಸತ್ಕಾರವು ನಡೆಯುತ್ತಿತ್ತು.

ಪ್ರತಿದಿನ ಊಟದ ಸಮಯಕ್ಕೆ ಸ್ವಯಂ ರಾಜನೇ ಋತ್ವಿಜರುಗಳು ಕುಳಿತ ಪಂಕ್ತಿಯ ಮಧ್ಯೆ ಕೈಮುಗಿದು ನಡೆಯುತ್ತಾ , ನಿಧಾನವಾಗಿ ಊಟ ಮಾಡಿ,ಭೋಜನ ಸ್ವಾದಿಷ್ಟವಾಗಿದೆಯಾ? ಎಂದು ನಮ್ರತೆಯಿಂದ ಉಪಚರಿಸಿ ಎಲ್ಲವೂ ವ್ಯವಸ್ಥಿತವಾಗಿ ನಡೆದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದನು. ಪ್ರತಿದಿನವೂ ರಾಜನು ಊಟ ಮಾಡುತ್ತಿರುವ ಬ್ರಾಹ್ಮಣರನ್ನು ಗಮನಿಸುವಾಗ ಬೇಕಾದಷ್ಟು ಭಕ್ಷ ಭೋಜ್ಯಗಳನ್ನು ತಿಂದು ತೇಗುತ್ತಿದ್ದರೂ ಕೊನೆಯಲ್ಲಿ ಮಾತ್ರ ಎಲ್ಲಾ ಬ್ರಾಹ್ಮಣರು ಎರಡು ತುತ್ತಾದರೂ ಮೊಸರನ್ನ ತಿನ್ನದೆ ಏಳುತ್ತಿರಲಿಲ್ಲ.ರಾಜನಿಗೆ ತುಂಬಾ ಆಶ್ಚರ್ಯವಾಯಿತು.

ಒಂದೆರಡು ದಿನದ ನಂತರ ರಾಜನೇ ಖುದ್ದಾಗಿ ನಿಂತು.ಎಲೆಯ ಮೇಲೆ ಚೆಲ್ಲುವಷ್ಟು ಸುಗ್ರಾಸ ಭೋಜನವನ್ನು ಬಡಿಸಲು ತಿಳಿಸಿದನು. ಎಂದಿನಂತೆ ರಾಜನು ಬಂದು ನೋಡಿದಾಗ ಎಲೆಯಲ್ಲಿ ಸಾಕಷ್ಟು ಚೆಲ್ಲಿದ್ದರೂ,ಮೊಸರನ್ನ ಮಾತ್ರ ಇಷ್ಟಪಟ್ಟೇ ತಿನ್ನುತ್ತಿರುವುದನ್ನು ಕಂಡು ಅಲ್ಲಿದ್ದ ಬ್ರಾಹ್ಮಣರನ್ನು ಉದ್ದೇಶಿಸಿ, ಬ್ರಾಹ್ಮಣೋತ್ತಮರೇ ನೀವು ಹೊಟ್ಟೆ ಹಿಡಿಯಲಾರದಷ್ಟು ಊಟ ಮಾಡಿದ ಮೇಲೂ ಈ ಮೊಸರು ಅನ್ನ ಹೊಟ್ಟೆಗೆ ಹೇಗೆ ಹಿಡಿಯುತ್ತದೆ. ಎಂದು ಕೇಳಿದನು. ಆಗ ಅಲ್ಲಿದ್ದ ಅನುಭವಿ ಬ್ರಾಹ್ಮಣರು ರಾಜ ನೀನು ಈಗ ಹೋಗು ನಾಳೆ ನಿನಗೆ ಉತ್ತರ ಕೊಡುತ್ತೇವೆ ಎಂದರು.

ಮರುದಿನ ಮತ್ತೆ ಹೋಮ ನಡೆವ ಜಾಗದಲ್ಲಿ ಸಾಕಷ್ಟು ಜನ ಸೇರಿದ್ದಾರೆ. ಹಿರಿಯ ಪುರೋಹಿತರು ರಾಜನು ಇದ್ದಲ್ಲಿಗೆ ಹೋಗಿ “ಮಹಾರಾಜ ನೀನು ಈ ದಿನ ಹೊರಗಡೆ ನಿಂತಿರುವ ಜನಗಳ ಗುಂಪಿನಿಂದಲೇ ಸಾಮಾನ್ಯ ಜನರು ನಡೆದು ಬರುವಂತೆ ಹೋಮ ನಡೆಯುವ ಸ್ಥಳಕ್ಕೆ ಬರಬೇಕು”. ಎಂದರು.
ರಾಜನು ಆಯಿತು ಎಂದ. ಹಾಗೆ ಹೊರಗೆ ಬಂದು ನೋಡಿದರೆ ಒಂದು ಇರುವೆಯು ಹೋಗಲಾರದಷ್ಟು ಜನ ತುಂಬಿದ್ದರು.
ಎಲ್ಲಾ ಕಡೆ ನೂಕುನುಗ್ಗಲು.
ಆದರೂ ಪುರೋಹಿತರು ಹೇಳಿದ ಆದೇಶದ ಮೇಲೆ ರಾಜನು ಜನಗಳ ಗುಂಪು ಎಲ್ಲಿಂದ ಆರಂಭವಾಗುತ್ತದೆಯೋ ಆ ಜಾಗಕ್ಕೆ ಹೋಗಿಅಂತೂ ಹೇಗೋ ನುಗ್ಗಿ, ನುಸುಳಿಕೊಳ್ಳುತ್ತಾ, ಅಂತೂ ಇಂತೂ ಹೋಮ ನಡೆಯುವ ಸ್ಥಳಕ್ಕೆ ಬಂದನು.

ರಾಜನು ಬಂದಮೇಲೆ ಹೋಮಕ್ಕೆ ಪೂರ್ಣಹುತಿಯನ್ನು ಹಾಕಲಾಯಿತು. ವೇದೋಕ್ತ ಮಂತ್ರಗಳ ಘೋಷಣೆ ಮಾಡಿದರು. ರಾಜನಿಗೆ ಯಥೋಚಿತ ಆಶೀರ್ವಾದವನ್ನು ಮಾಡಿದರು. ನಂತರ ಬ್ರಾಹ್ಮಣರು “ರಾಜನ್, ನೀನು ಇಲ್ಲಿಗೆ ಜನಗಳ ಗುಂಪಿನಲ್ಲಿ ನುಗ್ಗಿ ಬಂದೆ ಅಲ್ಲವೇ” ಎಂದರು. ಹೌದು ಹಾಗೆ ಬರಬೇಕು ಎಂದಿದ್ದಕ್ಕೆ , ಬರಬೇಕಾಯಿತು ಎಂದನು. ಬ್ರಾಹ್ಮಣರು ನಗುತ್ತಾ “ರಾಜಾ ನೋಡಿದಿಯಾ? ಬರಬೇಕು ಎಂದರೆ ನೀನು ಹೇಗೆ ಬಂದೆಯೋ ಹಾಗೆ ನಮಗೆ ಎಷ್ಟೇ ಹೊಟ್ಟೆ ತುಂಬಿದ್ದರೂ ಮೊಸರು ಅನ್ನಕ್ಕೂ ಹೀಗೆ ಜಾಗ ಸಿಗುತ್ತದೆ. ಹಾಗೆ ಎರಡೇ ಎರಡು ತುತ್ತು ಮೊಸರು ಅನ್ನ ತಿಂದಮೇಲೆ ನಮ್ಮ ಊಟ ಸಂಪನ್ನವಾಗುವುದು” ಎಂದರು. ಸಾತ್ವಿಕ ಆಹಾರ ಮೊಸರನ್ನವನ್ನು ಊಟದ ಕಡೆಯಲ್ಲಿ ತಿನ್ನುವುದರಿಂದ ಹುಳಿ ತೇಗು, ತಿಂದ ಆಹಾರ ಜಾಸ್ತಿಯಾಗಿ ಉಬ್ಬಳಿಕೆ ಬರುವುದು, ಬಿಕ್ಕಳಿಕೆ, ಖಾರದ ತೇಗು, ಸಿಹಿಯ ವಾಕರಿಕೆಗಳ ತೊಂದರೆ ಬರುವುದಿಲ್ಲ. ತಿಂದ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಹೀಗೆ ರಸಗವಳದ ನಂತರ ತಾಂಬೂಲ ಸೇವನೆ ಮಾಡಿ ವಿಶ್ರಾಂತಿ ತೆಗೆದುಕೊಂಡರೆ, ಇದನ್ನು ಸಂತೃಪ್ತ, ಸಂತುಷ್ಟ, ಸಮೃದ್ಧ , ಸ್ವಾದಿಷ್ಟವಾದ ಭೋಜನ ಎನ್ನುತ್ತಾರೆ. ಇದೇ ಮೊಸರು ಅನ್ನ ತಿನ್ನುವುದರ ಗುಟ್ಟು ಎಂದು ರಾಜನಿಗೆ ತಿಳಿಯಿತು.

ಇದು ನಮ್ಮ ಅಜ್ಜಿ ಹೇಳಿದ ಕಥೆ. ಇಂಥ ತುಂಬಾ ಕಥೆಗಳನ್ನು ಕಣ್ಣು ಬಾಯಿ ಅಗಲಿಸಿಕೊಂಡು ರಾತ್ರಿ-ಹಗಲು ಕೇಳುತ್ತಿದ್ದೆವು.

ವಂದನೆಗಳೊಂದಿಗೆ,
ಬರಹ:ಆಶಾ ನಾಗಭೂಷಣ.

The post ಇದೊಂದು ಪುಟ್ಟ ಕಥೆ:ಮೊಸರನ್ನ ತಿನ್ನುವುದರ ಗುಟ್ಟು. appeared first on Hai Sandur kannada fortnightly news paper.

]]>
https://haisandur.com/2021/06/28/short-story/feed/ 0
ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತು,ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್,ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ. https://haisandur.com/2021/05/31/%e0%b2%85%e0%b2%9c%e0%b2%bf%e0%b2%a8%e0%b3%8b%e0%b2%ae%e0%b3%8b%e0%b2%9f%e0%b3%8b-%e0%b2%8e%e0%b2%82%e0%b2%ac-%e0%b2%b8%e0%b2%95%e0%b3%8d%e0%b2%95%e0%b2%b0%e0%b3%86-%e0%b2%b0%e0%b3%82%e0%b2%aa/ https://haisandur.com/2021/05/31/%e0%b2%85%e0%b2%9c%e0%b2%bf%e0%b2%a8%e0%b3%8b%e0%b2%ae%e0%b3%8b%e0%b2%9f%e0%b3%8b-%e0%b2%8e%e0%b2%82%e0%b2%ac-%e0%b2%b8%e0%b2%95%e0%b3%8d%e0%b2%95%e0%b2%b0%e0%b3%86-%e0%b2%b0%e0%b3%82%e0%b2%aa/#respond Mon, 31 May 2021 02:36:31 +0000 https://haisandur.com/?p=16276 ಈ ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತುವನ್ನು ಮುಖ್ಯವಾಗಿ ಗೋಬಿ ಮಂಚೂರಿ, ಪ್ರೈಡ್‌ರೈಸ್, ನೂಡಲ್ಸ್, ಮುಂತಾದ ಫಾಸ್ಟ್‌_ಫುಡ್ ಹೆಸರಿನ ಆಹಾರ ವಸ್ತುಗಳಿಗೆ ಉಪಯೋಗಿಸಲಾಗುತ್ತಿದೆ. ಆ ವಸ್ತುವನ್ನು ಹಾಕುವ ಕಾರಣಕ್ಕಾಗಿ ಆ ಆಹಾರಗಳು ಬಹು ರುಚಿಕರವಾಗಿರುತ್ತವೆ. ಹಾಗೆಯೇ ವೈಧ್ಯಕೀಯ ತಜ್ಞರ ಪ್ರಕಾರ ಮುಖ್ಯವಾಗಿ ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್ , ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ನನಗೆ ಅರ್ಥವಾಗದಿರುವ ವಿಚಾರವೇನೆಂದೆರೆ ಅದೇಕೆ ಆರೋಗ್ಯ ಇಲಾಖೆ ಆರೋಗ್ಯಕ್ಕೆ ಮಾರಕವಾದಈ ವಸ್ತುವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ವರದಿ ನೀಡುತ್ತಿಲ್ಲ? […]

The post ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತು,ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್,ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ. appeared first on Hai Sandur kannada fortnightly news paper.

]]>
ಈ ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತುವನ್ನು ಮುಖ್ಯವಾಗಿ ಗೋಬಿ ಮಂಚೂರಿ, ಪ್ರೈಡ್‌ರೈಸ್, ನೂಡಲ್ಸ್, ಮುಂತಾದ ಫಾಸ್ಟ್‌_ಫುಡ್ ಹೆಸರಿನ ಆಹಾರ ವಸ್ತುಗಳಿಗೆ ಉಪಯೋಗಿಸಲಾಗುತ್ತಿದೆ. ಆ ವಸ್ತುವನ್ನು ಹಾಕುವ ಕಾರಣಕ್ಕಾಗಿ ಆ ಆಹಾರಗಳು ಬಹು ರುಚಿಕರವಾಗಿರುತ್ತವೆ. ಹಾಗೆಯೇ ವೈಧ್ಯಕೀಯ ತಜ್ಞರ ಪ್ರಕಾರ ಮುಖ್ಯವಾಗಿ ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್ , ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ.

ಆದರೆ ನನಗೆ ಅರ್ಥವಾಗದಿರುವ ವಿಚಾರವೇನೆಂದೆರೆ ಅದೇಕೆ ಆರೋಗ್ಯ ಇಲಾಖೆ ಆರೋಗ್ಯಕ್ಕೆ ಮಾರಕವಾದ
ಈ ವಸ್ತುವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ವರದಿ ನೀಡುತ್ತಿಲ್ಲ?

ವರದಿ ನೀಡಿಯೂ ಸರ್ಕಾರ ನಿಷೇಧಿಸುತ್ತಿಲ್ಲವಾದರೆ ಇದರಲ್ಲಿ ಯಾರ ಹಿತಾಸಕ್ತಿ ಕಾಪಾಡಲಾಗುತ್ತಿದೆ?
ಈ ಕುರಿತು ಜನಸಾಮಾನ್ಯರು ಯೋಚಿಸಬೇಕಾಗಿದೆ, ಚಿಂತಿಸಬೇಕಾಗಿದೆ, ನಿಷೇಧಿಸುವಂತೆ ಪ್ರತಿಭಟಿಸಬೇಕಾಗಿದೆ ಅಥವಾ ಯಕಶ್ಚಿತ್ ಆ ವಸ್ತು ಹಾಕಿದ ಆಹಾರವನ್ನು ಬಹಿಷ್ಕರಿಸಬೇಕಾಗಿದೆ.

The post ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತು,ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್,ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ. appeared first on Hai Sandur kannada fortnightly news paper.

]]>
https://haisandur.com/2021/05/31/%e0%b2%85%e0%b2%9c%e0%b2%bf%e0%b2%a8%e0%b3%8b%e0%b2%ae%e0%b3%8b%e0%b2%9f%e0%b3%8b-%e0%b2%8e%e0%b2%82%e0%b2%ac-%e0%b2%b8%e0%b2%95%e0%b3%8d%e0%b2%95%e0%b2%b0%e0%b3%86-%e0%b2%b0%e0%b3%82%e0%b2%aa/feed/ 0
ಕರಿಬೇವನ್ನು,ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. https://haisandur.com/2021/05/29/%e0%b2%95%e0%b2%b0%e0%b2%bf%e0%b2%ac%e0%b3%87%e0%b2%b5%e0%b2%a8%e0%b3%8d%e0%b2%a8%e0%b3%81%e0%b2%a4%e0%b2%bf%e0%b2%a8%e0%b3%8d%e0%b2%a8%e0%b2%a6%e0%b3%86-%e0%b2%85%e0%b2%a6%e0%b2%a8%e0%b3%8d%e0%b2%a8/ https://haisandur.com/2021/05/29/%e0%b2%95%e0%b2%b0%e0%b2%bf%e0%b2%ac%e0%b3%87%e0%b2%b5%e0%b2%a8%e0%b3%8d%e0%b2%a8%e0%b3%81%e0%b2%a4%e0%b2%bf%e0%b2%a8%e0%b3%8d%e0%b2%a8%e0%b2%a6%e0%b3%86-%e0%b2%85%e0%b2%a6%e0%b2%a8%e0%b3%8d%e0%b2%a8/#respond Sat, 29 May 2021 06:47:51 +0000 https://haisandur.com/?p=16242 ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು, ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ. ಕರಿಬೇವಿನಲ್ಲಿ ನಾರಿನಂಶ, ಪ್ರೋಟಿನ್‌, ಕ್ಯಾಲ್ಸಿಯಂ, ಕ್ಯಾರೊಟೀನ್‌ ಹಾಗೂ ಹಲವಾರು ಬಗೆಯ ಅಮೈನೋ ಅಮ್ಲಗಳು ಹೇರಳವಾಗಿವೆ. ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಅನಗತ್ಯ ವಿಷ […]

The post ಕರಿಬೇವನ್ನು,ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. appeared first on Hai Sandur kannada fortnightly news paper.

]]>
ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು, ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ.

ಕರಿಬೇವಿನಲ್ಲಿ ನಾರಿನಂಶ, ಪ್ರೋಟಿನ್‌, ಕ್ಯಾಲ್ಸಿಯಂ, ಕ್ಯಾರೊಟೀನ್‌ ಹಾಗೂ ಹಲವಾರು ಬಗೆಯ ಅಮೈನೋ ಅಮ್ಲಗಳು ಹೇರಳವಾಗಿವೆ.

ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಕರಗಿಸುವಲ್ಲಿ, ತೂಕ ನಿಯಂತ್ರಣದಲ್ಲಿ ಸಹಕಾರಿ.

ಕರಿಬೇವಿನ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಕರಿಬೇವಿನಲ್ಲಿರುವ ಆಯಂಟಿ ಆಕ್ಸಿಡೆಂಟ್ಸ್‌ ದೇಹದ ಸಕ್ಕರೆ ಅಂಶವನ್ನು ನಿಯಂತ್ರಿಸಬಲ್ಲದು.

ಲಿವರ್‌ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ.

ಕರಿಬೇವಿನಲ್ಲಿರುವ ಫೋಲಿಕ್‌ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.

ಕರಿಬೇವಿನ ರಸವನ್ನು, ಬೆಲ್ಲದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಕುಡಿದರೆ ರಕ್ತಹೀನತೆ ನಿಯಂತ್ರಣಕ್ಕೆ ಬರುತ್ತದೆ.

ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣಮುಖವಾಗುತ್ತವೆ.

ಅಪೌಷ್ಟಿಕತೆಯಿಂದ ಕೂದಲು ಬಿಳಿಯಾಗುವುದನ್ನು ಕರಿಬೇವು ತಡೆಯಬಲ್ಲದು.

ಪ್ರತಿದಿನ ಬೆಳಗ್ಗೆ ಕರಿಬೇವಿನ ಎಲೆ ತಿನ್ನುವುದರಿಂದ, ಕೊಬ್ಬರಿ ಎಣ್ಣೆಯಲ್ಲಿ ಕರಿಬೇವನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಬಾಲ ನೆರೆ ತಡೆಯಬಹುದು.

ಕೂದಲು ಸೊಂಪಾಗಿ ಬೆಳೆಯಲು, ಕರಿಬೇವಿನಲ್ಲಿರುವ ಕಬ್ಬಿಣಾಂಶ ಸಹಾಯ ಮಾಡುತ್ತದೆ.

The post ಕರಿಬೇವನ್ನು,ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. appeared first on Hai Sandur kannada fortnightly news paper.

]]>
https://haisandur.com/2021/05/29/%e0%b2%95%e0%b2%b0%e0%b2%bf%e0%b2%ac%e0%b3%87%e0%b2%b5%e0%b2%a8%e0%b3%8d%e0%b2%a8%e0%b3%81%e0%b2%a4%e0%b2%bf%e0%b2%a8%e0%b3%8d%e0%b2%a8%e0%b2%a6%e0%b3%86-%e0%b2%85%e0%b2%a6%e0%b2%a8%e0%b3%8d%e0%b2%a8/feed/ 0