ಮಕ್ಕಳಲ್ಲಿ ಇಮ್ಯೂನಿಟಿ ಪವರ್‌ಅನ್ನು ಹೆಚ್ಚಿಸುವುದು ಹೇಗೆ?

0
148

ವೈರಸ್‌ಗಳ ವಿರುದ್ಧ ಹೋರಾಡಲು ಬೆಳೆಯುತ್ತಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಶಕ್ತಿಯನ್ನು ಹೆಚ್ಚಿಸಲು ಇತರೆ ಮಾರ್ಗಗಳು ಇಲ್ಲಿವೆ. 2ವರ್ಷದ ಹಿಂದೆ, ಕೋವಿಡ್‌ -19 ನಂತಹ ಸಾಂಕ್ರಾಮಿಕ ರೋಗ ಸಂಭವಿಸಬಹುದು ಮತ್ತು ನಮ್ಮ ಜನ ಜೀವದ ಮೇಲೆ ಇಷ್ಟುಂದು ಪ್ರಭಾವ ಬೀರಬಹುದು ಎಂದು ಯಾರೂ ಊಹಿಸಿರಲಿಲ್ಲ. ನಮ್ಮಲ್ಲಿ ಹೆಚ್ಚಿನ ಜನರು ಈ ಕೋವಿಡ್‌ ನಿಂದ ದಿನನಿತ್ಯ ಸಮಸ್ಯೆಯಗಳನ್ನು ಎದುರಿಸುತ್ತಿದ್ದಾರೆ; ಅದುವೇ ಕೋವಿಡ್‌ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು. ಅದರ ಜೊತೆಗೆ ಹಣಕಾಸಿನ ಸವಾಲುಗಳು, ಆಹಾರ , ಆಶ್ರಯ , ಉದ್ಯೋಗ , ಸಾಮಾಜಿಕ ಸಂವಹನಗಳ ಕೊರತೆಯಿಂದ ಹಾಗೂ ಇತರೆ ಸಮಸ್ಯೆಯಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗೂ ನಮ್ಮ ಜೀವನದಲ್ಲಿ ಕೆಲವು ಪ್ರಮುಖ ಅಂಶಗಳಾದ ಶಿಕ್ಷಣ, ಆಹಾರ, ಮತ್ತು ರಜಾದಿನಗಳು ಅಥವಾ ವಿವಾಹಗಳ ಕರಿತು ನಿರ್ಧಾರ ತೆಗೆದುಕೊಳ್ಳುವುದು ಸುಲಭದ ವಿಷಯವಲ್ಲ. ಭಾರತದಲ್ಲಿ ಎರಡನೇ ಆಲೆ ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದೆ. ಅದರಲ್ಲೂ ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ದೇಶದಲ್ಲಿ ಅನೇಕ ರೂಪಾಂತರಗಳೊಂದಿಗೆ, ನಾವು ನಮ್ಮ ಆರೋಗ್ಯದತ್ತ ಗಮನ ಹರಿಸಬೇಕು ಮತ್ತು ವೈರಸ್ ವಿರುದ್ಧ ಹೋರಾಡಲು ನಾವು ಯಾವಾಗಲೂ ಸರಿಯಾದ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕು.

ಈ ಸಮಯದಲ್ಲಿ ನಾವು ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಅಂತಹ ಶಿಫಾರಸು ಮಾಡಲಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೂಸ್ಟರ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: ಅವುಗಳೆಂದರೆ
a. ವಿಟಮಿನ್ ಸಿ
b. ವಿಟಮಿನ್ ಡಿ
c. ವಿಟಮಿನ್ ಎ4. ವಿಟಮಿನ್ ಇ
d. ಝಿಂಕ್ ಸಪ್ಲಿಮೆಂಟ್ಸ್
e. ಒಮೆಗಾ -3 ಫ್ಯಾಟಿ ಆ್ಯಸಿಡ್‌

ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕೆಲವು ವೈದ್ಯರು ಔಷಧಗಳು ಮತ್ತು ಝಿಂಕ್‌ನಂತಹ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು ಹಾಲು / ಪೂರಕಗಳು, ಪ್ರೋಟೀನ್ ಶೇಕ್ಸ್ ಇತ್ಯಾದಿಗಳನ್ನು ಸೇವಿಸುವುದು ಒಳ್ಳೆಯದು. ಆದರೆ ಹಾಲು / ಪೂರಕಗಳು, ಪ್ರೋಟೀನ್ ಶೇಕ್ಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುಬಹುದೇ ಎಂಬುದು ಪ್ರಶ್ನೆ, ಕೋವಿಡ್‌ -19 ವಿರುದ್ಧ ಹೋರಾಡಲು ವಿಟಮಿನ್ ಪೂರಕಗಳು ಜನರಿಗೆ ಸಹಾಯ ಮಾಡುತ್ತವೆ ಎಂಬ ಅಂಶವನ್ನು WHO (ವಿಶ್ವ ಆರೋಗ್ಯ ಸಂಸ್ಥೆ) ನಿರಾಕರಿಸಿದೆ. ಈ ಮಾತ್ರೆಗಳು ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಹೆಚ್ಚು ಜಿಂಕ್‌ ಮಾತ್ರೆಗಳನ್ನು ಸೇವಿಸುವುದರಿಂದ ನರಮಂಡಲದ ಮೇಲೆ ಹಾನಿಮಾಡುವುದು, ರಕ್ತಹೀನತೆಗೆ ಕಾರಣಹಾಗುವುದು ಹಾಗೂ ಕಾಪರ್‌ ಕೊರತೆ ಆಗುವುದು. ಹಾಗೆಯೇ ಮಕ್ಕಳು ದೀರ್ಘ ಕಾಲದವರೆಗೆ ಮಾತ್ರೆಗಳನ್ನು ಸೇವಿಸಿದದ್ದರೆ ಅವರಲ್ಲಿ ಬಾಯಿ ಹುಣ್ಣು ಆಗುವುದು ಹಾಗೂ ಸ್ನಾಯು ನೋವನ್ನು ಉಂಟುಮಾಡುತ್ತದೆ. ಮಾತ್ರೆಗಳ ಬದಲಿಗೆ ಪೋಷಕರು ನೀಡಬಹುದಾದ ಪೂರಕಗಳನ್ನು ಕೇಳಗೆ ಪಟ್ಟಿ ಮಾಡಲಾಗಿದೆ.

1. ಮನೆಯಲ್ಲಿ ಬೇಯಿಸಿದ ಊಟ,
2. ಹೆಚ್ಚಿದ ವ್ಯಾಯಾಮ (ಏರೋಬಿಕ್ಸ್, ಜಾಗಿಂಗ್, ಸೈಕ್ಲಿಂಗ್ ಅಥವಾ ಯೋಗ ಸಹಾಯ ಮಾಡಬಹುದು)
3. ಕನಿಷ್ಠ 8 ಗಂಟೆಗಳ ನಿದ್ರೆ
4. ಹೆಚ್ಚಾಗಿ ನೀರಿನ ಸೇವನೆ

ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ, ಕೊಠಡಿ / ಮನೆಯನ್ನು ಪರಿಣಾಮಕಾರಿಯಾಗಿ ಗಾಳಿ ಬರುವಂತೆ ನೋಡಿಕೊಳ್ಳಿ ಮಗುವಿಗೆ ಒಂದು ವೇಳಾಪಟ್ಟಿಯನ್ನು ಮಾಡಿ ಅನುಸರಿಸಲು ಹೇಳಿ, ನಿಮ್ಮ ಮಗುವಿಗೆ ಲಸಿಕೆ ಲಭ್ಯವಾದ ತಕ್ಷಣ ಅದನ್ನು ಪಡೆಯಿರಿ ಮತ್ತು ಆರೋಗ್ಯ ತಜ್ಞರಿಂದ ಸಲಹೆ ಪಡೆಯಿರಿ. ಝಿಂಕ್ ಹಾಗೂ ವಿಟಮಿನ್‌ ಮಾತ್ರೆಗಳ ಬದಲಿಗೆ ನೀವು ಜಿಂಕ್‌/ ವಿಟಮಿನ್ಪ್ರೋ ಟೀನ್‌ಗಳಂತಹ ಆಹಾರಗಳನ್ನು ಮಕ್ಕಳಿಗೆ ನೀಡಿ. ಝಿಂಕ್ ಆಹಾರಗಳಾದ ಬೀಜಗಳು, ಬೀನ್ಸ್, ಬಾಳೆಹಣ್ಣುಗಳು, ಸಿಂಪಿ, ಧಾನ್ಯಗಳು, ಚೀಸ್ ನಂತಹ ಡೈರಿ ಆಹಾರಗಳು ಮತ್ತು ಇನ್ನೂ ಅನೇಕ ಆಹಾರಗಳನ್ನು ನೀಡಿ ಹಾಗೂ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಹಾರವೆಂದರೆ – ದ್ರಾಕ್ಷಿಹಣ್ಣು, ಕಿತ್ತಳೆ, ಕೋಸುಗಡ್ಡೆ, ಆಲೂಗಡ್ಡೆ, ಮೆಣಸು ಮತ್ತು ಇನ್ನೂ ಅನೇಕ ಆಹಾರಗಳನ್ನು ನೀಡಿ. ಮಗುವಿಗೆ ಅಗತ್ಯವಿದ್ದಾಗ ವೈದ್ಯರು ಸ್ವತಃ ಪೂರಕಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ ಮತ್ತು ಅದನ್ನು ನಿರ್ಬಂಧಿತ ರೀತಿಯಲ್ಲಿ ತೆಗೆದುಕೊಳ್ಳಿ.

LEAVE A REPLY

Please enter your comment!
Please enter your name here